ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:43 PM

ಅಸ್ಪೃಶ್ಯರು

Posted by ekanasu

ವೈದೇಹೀ ಕಾದಂಬರಿ

ಕಳೆದ ಸಂಚಿಕೆಯಿಂದ...

ವಾಸ್ತೇವ ಎಂದೂ ಹಾಗೆ ಮಾಡಲಿಕ್ಕಿಲ್ಲ, ನಾನು ಭಾಸ್ಕರನ ಮನೆಗೆ ಕಾಲಿಡುವುದೂ ಇಲ್ಲ. ನಂಗವ ಮಗನೂ ಅಲ್ಲ' - ಅವರ ಸ್ವರ ನಡುಗುತ್ತ ಕರಗುತ್ತ ಹೋಯಿತು. ಸುತ್ತ ನಿರಿಗೆಗಟ್ಟಿ ಬಾವಿಗಿಳಿದಿದ್ದ ಬಿಳಿಹೂವಿನ ತೆಳು ಪರೆಯ ಕಣ್ಣಿಂದ ಒಂದು ಹುಂಡು ಕಣ್ಣೀರು ಕುಡಿಯಲ್ಲಿ ಬಂದು ಕಳಕಿತು.
`ಆಗದು ಎಂದ ಕೂಡಲೆ ಮನಸ್ಸಿಗೆ ಬಂದದ್ದನ್ನೆಲ್ಲ ಹೇಳುವುದಾ ನೀವು ? ನಿಮ್ಮದು ಅತಿರೇಕವಾಯಿತು ' - ಎಂದಳು ಸರೋಜ

ರತ್ನನಿಗೆ ಸರೋಜ ಹಾಗೆ ಪಾರ್ತಕ್ಕನಿಗೆ ತಲೆ ಹೆಟ್ಟಿ ಹೇಳಿದಂಎ ಹೇಳಿದ್ದು ಸರಿಕಾಣಲಿಲ್ಲ. ಇವಳ ಪ್ರಾಯ ಎಷ್ಟು , ಅವರದೆಷ್ಟು. ನಾಲಗೆ ಸ್ವಲ್ಪ ಹಿಂದಿದ್ದರೇ ಒಳ್ಳೆಯದು. ಕೊರಾತಿಯನ್ನು ಮದುವೆಯಾದರೆ ಯಾರು ಸಹಿಸುತ್ತಾರೆ ? ಬೇರೆ ಯಾವ ಜಾತಿಯವರನ್ನು ಬೇಕಾದರೂ ಮದುವೆಯಾಗಲಿ ಆದರೆ ಎಲ್ಲ ಬಿಟ್ಟು ಕೊರಾತಿಯನ್ನ ! ತನ್ನ ರವಿ ಹಾಗೆ ಮಾಡಿದರೆ ತಾನೂ, ಈ ಕಾಲದಲ್ಲಿ ಬೆಳೆದವಳೂ ಖಂಡಿತಾ ಒಪ್ಪಲಿಕ್ಕಿಲ್ಲ. ಸರೋಜನಿಗೇನು, ಇನ್ನೂ ಮದುವೆಯಾಗಲಿಲ್ಲ, ಮಕ್ಕಳಿಲ್ಲ. ಕಷ್ಟದ ಬಿಸಿ ಗೊತ್ತಾಗುವುದಿಲ್ಲ ಎಂದುಕೊಂಡಳು.

`ಸರೋಜ , ಪಾರ್ತಕ್ಕ ಹೇಳುವುದು ಅತಿರೇಕವೆಂತದು ? ನೀನೇ ಆಲೋಚನೆ ಮಾಡು. ನಾಳೆ ನಿನ್ನ ಒಬ್ಬ ಮಗ ಕೊರಾತಿಯನ್ನು - ಎಲ್ಲಕ್ಕಿಂತಲೂ ನೀಚ, ನೀಚದಲ್ಲಿ ನೀಚ ಜಾತಿಯ ಹುಡುಗಿಯನ್ನು - ಮದುವೆಯಾಗಿ ಬಂದರೆ ನೀನು ಮನೆ ಹೊಗ್ಗಿಸಿಕೊಳ್ಳುತ್ತಿಯಾ ? ಹೋಗಲಿ. ನೀನೇ ಒಬ್ಬ ಕೊರಗನನ್ನು ಮದುವೆಯಾಗಲು ತಯಾರಿದ್ದಿಯಾ ? '

`ಅದನ್ನೆಲ್ಲ ಈಗ ಹೇಗೆ ಹೇಳುವುದು...? ಅಂತಹ ಸಂದರ್ಭ ಬಂದರೆ ತಿಳಿದೀತು. ಈಗ ನಾನು ಹೌದು ಎಂದರೂ ಇಲ್ಲ ಎಂದರೂ ಬೆಲೆಯಿಲ್ಲ. ಆದರೆ ರತ್ನಕ್ಕ , ಭಾಸ್ಕರಣ್ಣ ನನ್ನ ನಿನ್ನಂತಹ ಮನಸ್ಸಿನವನಲ್ಲ. ಅವ ಯೋಚಿಸುವ ರೀತಿಯೇ ಬೇರೆ.ಶೂದ್ರರಿಗಾಗಿ ಕೆಲಸ ಮಾಡುವವರು ಬೇಕಷ್ಟು ಜನ ಇದ್ದಾರೆ.ಆದರೆ ಅದನ್ನೇ ಇಷ್ಟು ಸೀರಿಯಸ್ಸಾಗಿ ತೆಗೆದುಕೊಂಡು ಅಲ್ಲಿನದೇ ಒಬ್ಬ ಹುಡುಗಿಯನ್ನು ಮದುವೆಯಾಗಿ ಅವಳ ಬದುಕಿನಲ್ಲಿ ಬೆಎಯುವ ಧೈರ್ಯ ಯಾರು ಮಾಡಿದ್ದಾರೆ?...ಭಾಸ್ಕರಣ್ಣ ಮದುವೆಯೇ ಬೇಡ ಎನ್ನುತ್ತಿದ್ದವ ಕುಮುದಿನಿ ಅತ್ತಿಗೆಯನ್ನು ಯಾಖೆ ಮದುವೆಯಾದ ಗೊತ್ತುಂ ನಿಂಗೆ ?

ಒಂದು ದಿನ ಶೀನಣ್ಣನ ಹತ್ತಿರ ಹೇಳಿದನಂತೆ. ``ನಾನೇನೂ ಅವರ ಉದ್ಧಾರಕ್ಕೆ ಆಗಲಿಲ್ಲ. ತೀರಾ ಕೆಳಮಟ್ಟದವರೆಂತ ಹೇಳುವ ಅವರಲ್ಲಿ ನಾನು ಬರೆಯಬೇಕು ಎಂಬ ಆಸೆಯಿಂದ ಆದೆ. ನಾನು ಅವರಂತೆಯೇ ಅವರು ನನ್ನಂತೆಯೇ ಎಂಬುದು ನನಗೂ ತಿಳಿಯಬೇಕು ಅಂತ ಆದೆ " - ಎಂದನಂತೆ.
ಆದರೆ ಪಾಪ ಅವಳ ಕಡೆಯವರೂ ಅವರಿಬ್ಬರನ್ನೂ ಮನೆಯೊಳಗೆ ಸೇರಿಸುವುದಿಲ್ಲವಂತೆ. ತನ್ನ ಊರಿಗೆ ಹೋಗದೆಯೇ ಬಹಳ ಕಾಲವಾಯಿತು ಅತ್ತಿಗೆ.'

ಮುಂದುವರಿಯುತ್ತದೆ...

- ವೈದೇಹಿ.

0 comments:

Post a Comment