ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ವೇಣೂರು: ಸುಂದರ ಕರಾವಳಿಯ ಹಚ್ಚ ಹಸಿರ ಐಸಿರಿಯ ನಡುವೆ ರಮ್ಯ ಪ್ರಕೃತಿ ತಾಣವಾದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಒಂದು ಐತಿಹಾಸಿಕ ನಗರಿ. ಪುಟ್ಟ ಪಟ್ಟಣ. ಆದರೆ ಜಗತ್ತಿಗೆ ಅಹಿಂಸೆ, ತ್ಯಾಗದ ಮನೋಭಾವವನ್ನು ಪಸರಿಸಿದ ತ್ಯಾಗಿ ವಿರಾಟ್ ವಿರಾಗಿ ಬಾಹುಬಲಿ ನೆಲೆನಿಂತ ಊರು. ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮದ ಫಲ್ಗುಣೀ ನದೀ ತೀರದಲ್ಲಿ ಉತ್ತರಾಭಿಮುಖವಾಗಿ ನಿಂತಿರುವ 35 ಅಡಿಗಳೆತ್ತರದ ಏಕಶಿಲಾ ಬಾಹುಬಲಿ ಮೂರ್ತಿಗೆ ಹೊಸ ವರುಷದಲ್ಲಿ ಮಜ್ಜನದ ಭಾಗ್ಯ. ಇದಕ್ಕೆ ಸುಂದರ ಊರು ಸಿದ್ಧಗೊಳ್ಳುತ್ತಿದೆ. ಗೊಮ್ಮಟ ನೆಲೆನಿಂತ ವೇಣೂರಿನತ್ತ ಈಕನಸು ತಂಡದ ಪಯಣ...

ತುಳುನಾಡಿನ ರಾಜ ಮನೆತನಗಳಲ್ಲಿ ಮಹತ್ವದ ಸ್ಥಾನ ಪಡೆದಿರುವ ವೇಣೂರಿನ ಅಜಿಲ ವಂಶದ ನಾಲ್ಕನೇ ವೀರ ತಿಮ್ಮಣ್ಣಾಜಿಲ ಅರಸರು ವೇಣೂರಿನ ಭಗವಾನ್ ಬಾಹುಬಲಿ ಮೂರ್ತಿಯನ್ನು 1604ರಲ್ಲಿ ಪ್ರತಿಷ್ಠಾಪಿಸಿದರು ಎಂಬುದು ಐತಿಹ್ಯ.

ಈ ಪುಟ್ಟ ನದೀ ತಟದ ಊರಿನಲ್ಲಿ ಒಟ್ಟು ಏಳು ಜಿನ ಬಸದಿಗಳಿವೆ. ಶ್ರೀ ಮಹಾಲಿಂಗೇಶ್ವರ ದೇಗುಲವೂ ನೆಲೆನಿಂತಿದೆ. ಬಾಹುಬಲಿ ಮೂರ್ತಿ ಪ್ರತಿಷ್ಠಾಪಿಸಿದ ಅಜಿಲ ವಂಶದ ಇಂದಿನ ಅರಸರಾದ ತಿಮ್ಮಣ್ಣಾರಸ ಡಾ.ಪದ್ಮಪ್ರಸಾದ್ ಅಜಿಲರು ಈ ಕ್ಷೇತ್ರದ ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಕ್ರಿಯ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ.ಲೋಕ ಕಲ್ಯಾಣಾರ್ಥವಾಗಿ ಹಾಗೂ ಇಂದಿನ ಜನ ಸಮುದಾಯದಲ್ಲಿ ಧಾರ್ಮಿಕ ಪ್ರವೃತ್ತಿಯನ್ನು ಮೈಗೂಢಿಸುವುದು ಹಾಗೂ ಸಂರಕ್ಷಿಸುವ ಕಾರ್ಯದಲ್ಲಿ ಈ ಮಹಾಮಜ್ಜನ ನಡೆಸಲಾಗುತ್ತಿದೆ. 2000ನೇ ಇಸವಿಯಲ್ಲಿ 42ವರುಷಗಳ ನಂತರ ಮಹಾ ಮಜ್ಜನ ನಡೆದಿದ್ದು ಇದೀಗ 21ನೇ ಶತಮಾನದ ಎರಡನೇ ಮಹಾಮಜ್ಜನ ಇದೇ ಜನವರಿ 28ರಿಂದ ಫೆಬ್ರವರಿ 5ರ ತನಕ ಸಂಪನ್ನಗೊಳ್ಳಲಿದೆ.ಒಟ್ಟು 9 ದಿನಗಳ ಕಾಲ ನಡೆಯುವ ಈ ಮಹಾ ಉತ್ಸವದಲ್ಲಿ ಆರಂಭದ 8 ದಿನಗಳ ಕಾರ್ಯವನ್ನು ಸಮಾಜದ ಗಣ್ಯರೂ ಹಾಗೂ 9ನೇ ದಿನದ ಕಾರ್ಯಕ್ರಮವನ್ನು ಸಮಸ್ತ ಸದ್ಧರ್ಮ ಸಮಾಜ ಬಾಂಧವರು ನಡೆಸಿಕೊಡಲಿದ್ದಾರೆ.

ಬಾಹುಬಲಿ ಬೆಟ್ಟದಲ್ಲಿ ಈಗಾಗಲೇ ಮಹಾ ಮಜ್ಜನಕ್ಕೆ ಪೂರ್ವಭಾವೀ ತಯಾರಿಗಳು ಪ್ರಗತಿಯಲ್ಲಿದೆ. ಬೆಟ್ಟದ ಸುತ್ತಲೂ ಇರುವ ಪಾಗಾರದ ಸಂರಕ್ಷಣೆ ಹಾಗೂ ನವೀಕರಣ ಕಾರ್ಯ ಪ್ರಗತಿಯಲ್ಲಿದೆ. ಬಾಹುಬಲಿ ವಿಗ್ರಹದ ಬಲ ಪಾರ್ಶ್ವದಲ್ಲಿ ಬೃಹತ್ ವೇದಿಕೆ ನಿರ್ಮಾಣಕ್ಕೆ ನೆಲ ಸಮತಟ್ಟುಗೊಳಿಸುವ ಕಾರ್ಯ ನಡೆಯುತ್ತಿದೆ. ಸುಮಾರು ಒಂದು ಎಕ್ಕರೆ ಪ್ರದೇಶದಲ್ಲಿ ಬೃಹತ್ ಚಪ್ಪರ ನಿರ್ಮಾಣಗೊಳ್ಳಿದೆ.
ವೇಣೂರಿನ ಮಹಾಲಿಂಗೇಶ್ವರ ಕ್ಷೇತ್ರದ ಬಳಿಯಲ್ಲಿ ವಸ್ತು ಪ್ರದರ್ಶನ ಮಂಟಪ , ನದೀ ಸನಿಹ ಊಟದ ಚಪ್ಪರ ವ್ಯವಸ್ಥೆ ನಡೆಯಲಿದೆ.

ಮುನಿಸಂಘ ಆಗಮನ
ಮಹಾ ಮಜ್ಜನ ನಾಡಿನ ಎಲ್ಲಾ ದಿಗಂಬರ ಸಾಧು ಸಂತರ ಜೈನ ಮಠದ ಪೂಜ್ಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಪರಂಪರಾಗತ ವಿಧಿ ವಿಧಾನಗಳಿಗನುಸಾರವಾಗಿ ನಡೆಯಲಿದೆ.

ವೇಣೂರಿನ ಮಹಾ ಮಜ್ಜನಕ್ಕೆ ಶ್ರವಣಬೆಳಗುಳದ 10ಮಂದಿ ಮುನಿಗಳನ್ನೊಳಗೊಂಡ ಮುನಿಸಂಘವೊಂದು ಈಗಾಗಲೇ ಯಾತ್ರೆ ಕೈಗೊಂಡಿದೆ.ಹುಬ್ಬಳ್ಳಿಯ ವರೂರಿನಿಂದಲೂ ಮುನಿಸಂಘ ಈ ಕ್ಷೇತ್ರದತ್ತ ಆಗಮಿಸಲಿದ್ದಾರೆ.

- ಟೀಂ ಈ ಕನಸು.

0 comments:

Post a Comment