ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮಂಗಳೂರು :ಕ್ಯಾಂಪ್ಕೋ ಇದೀಗ ವಿದ್ಯುತ್ ವ್ಯವಸ್ಥೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವತ್ತ ಮುನ್ನಡಿಯಿಟ್ಟಿದೆ.ಬೆಳಗಾವಿಯ ಚಿಕ್ಕೋಡಿಯಲ್ಲಿರುವ ನೇಜ್ ಗ್ರಾಮದಲ್ಲಿ ಕ್ಯಾಂಪ್ಕೋ ಸಂಸ್ಥೆ 0.85 ಮೆ.ವ್ಯಾಟ್ಸ್ ಸಾಮರ್ಥ್ಯದ ಎರಡು ಪವನ ಯಂತ್ರಗಳನ್ನು ಸ್ಥಾಪಿಸಿದೆ. ಇದರ ವೆಚ್ಚ 10.36ಕೋಟಿ ರುಪಾಯಿಗಳು. 2009ರಲ್ಲಿ ಬಳ್ಳಾರಿಯ ಹೂವಿನ ಹಡಗಲಿ ಎಂಬಲ್ಲಿ ಪವನ ಯಂತ್ರವನ್ನು ಕ್ಯಾಂಪ್ಕೋ ಸ್ಥಾಪಿಸಿತ್ತು. ಈ ಯಂತ್ರಗಳಿಂದ ಉತ್ಪಾದನೆಗೊಳ್ಳುವ ವಿದ್ಯುತ್ ಮೂಲಕ ಚಾಕೋಲೇಟ್ ಕಂಪೆನಿಗೆ ಅಗತ್ಯವಿರುವ ವಿದ್ಯುತ್ ನ ಶೇ.90ರಷ್ಟು ಭಾಗವನ್ನು ಕ್ಯಾಂಪ್ಕೋ ಸಂಸ್ಥೆ ತನ್ನ ಘಟಕದ ಮೂಲಕವೇ ಪಡೆದುಕೊಳ್ಳುತ್ತಿದೆ.ಕ್ಯಾಂಪ್ಕೋ 2010-11ನೇ ಸಾಲಿನಲ್ಲಿ 12.86 ಕೋ.ರೂ. ನಿವ್ವಳ ಲಾಭ ಗಳಿಸಿದೆ. ಸಂಸ್ಥೆ ತನ್ನ ಸದಸ್ಯರಿಗೆ ಶೇ. 14 ಡಿವಿಡೆಂಡ್‌ ಘೋಷಿಸಿದೆ. ಸಂಸ್ಥೆಗೆ ಅಡಿಕೆ ಮಾರಾಟ ಮಾಡಿದ ಸದಸ್ಯರಿಗೆ ಕಿಲೋ ಒಂದರ 1 ರೂಪಾಯಿಯಂತೆ ಪ್ರೋತ್ಸಾಹ ಧನವನ್ನು ಕೂಡ ಘೋಷಿಸಿದೆ. 692 ಕೋ. ರೂ. ವ್ಯವಹಾರ ನಡೆಸಿದ್ದು ಕ್ಯಾಂಪ್ಕೋದ ಇಲ್ಲಿಯವರೆಗಿನ ಸಾಧನೆಗಳನ್ನು ಮೀರಿಸಿದೆ ಎಂದವರು ವಿವರಿಸಿದರು. 2011-12 ಸಾಲಿನ 6 ತಿಂಗಳುಗಳಲ್ಲಿ ಕ್ಯಾಂಪ್ಕೋ ಒಟ್ಟು ವ್ಯವಹಾರವು 499 ಕೋ.ರೂ. ತಲುಪಿದೆ. ವಿಷನ್‌ 2015 ಕ್ಕೆ ನಿಗದಿಪಡಿಸಿದ 1000 ಕೋ. ರೂ. ವ್ಯವಹಾರವನ್ನು ಎರಡು ವರ್ಷದ ಮೊದಲೇ 2011-12 ನೇ ಸಾಲಿನಲ್ಲೆ ಗುರಿ ತಲುಪುವ ನಿರೀಕ್ಷೆ ಇದೆ.

0 comments:

Post a Comment