ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಬೆಂಗಳೂರು: ಛೀ...ಈ ಮಾಧ್ಯಮಗಳಿಗೆ ನಿಜಕ್ಕೂ ಮಾನ , ಮರ್ಯಾದೆ ಯಾವುದೂ ಇಲ್ವೇ... ಹೋಗಿ ಹೋಗಿ ಬಾಲಿವುಡ್ ನಟಿ ಐಶ್ವರ್ಯಾ ರೈ ಗರ್ಭವತಿಯಾದ ಸುದ್ದಿಯನ್ನೇ ಇಡೀ ಭ್ರಹ್ಮಾಂಡದಲ್ಲೇ ಯಾವತ್ತೂ ನಡೆಯದ ಕೌತುಕ ಎಂಬಂತೆ ಸುದ್ದಿ ಮಾಡಹೊರಟಿವೆಯಲ್ಲಾ...ಈ ಮಾಧ್ಯಮಗ ವೈಖರಿಯನ್ನು ಏನನ್ನಬೇಕು. ಇದೀಗ ಆಕೆಯ ಹೆರಿಗೆಯ ವಿಷಯ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಹೊರಟಿದೆ. ಇದಕ್ಕೆ ಐಶ್ವರ್ಯ ಅವರ ಮನೆಯವರಿಂದ ಕಂಡೀಷನ್ ಮೇಲೆ ಕಂಡೀಷನ್ ಹೇರಿಕೆಯಾಗುತ್ತಿದೆ. ಮಾಧ್ಯಮಗಳು ಈ ಸುದ್ದಿಯನ್ನು ಭಿತ್ತರಿಸಬಾರದು. ಮಾಧ್ಯಮಗಳಿಗೆ ಸುದ್ದಿಗೋಷ್ಟಿ ಮೂಲಕ ಬಿಡುಗಡೆಮಾಡಿದ ಫೋಟೋವನ್ನಷ್ಟೇ ಪ್ರಕಟಿಸಬೇಕು, ಮಾಧ್ಯಮಗಳು ಈ ವಿಚಾರದಲ್ಲಿ ಜ್ಯೋತಿಷಿಗಳ ಜೊತೆ ಚರ್ಚಿಸಬಾರದು. ಥೋ...ಇನ್ನೇನೇನೋ...11/11/11ಕ್ಕೆ ಐಶ್ವರ್ಯಾ ರೈ ಮಗುವಿಗೆ ಜನ್ಮನೀಡಲಿದ್ದಾಳೆ ಎಂಬ ಸುದ್ದಿ ಈಗಾಗಲೇ ಮಾಧ್ಯಮಗಳಲ್ಲಿ ದೊಡ್ಡ ದೊಡ್ಡ ಹೆಡ್ಡಿಂಗ್ ಗಳಲ್ಲಿ ಭಿತ್ತರವಾಗುತ್ತಿವೆ. ಮುದ್ರಣ ಮಾಧ್ಯಮಗಳು ಒಂದಷ್ಟು ಹೈಲೈಟ್ ಮಾಡಿದರೆ ಈಗಾಗಲೇ ಟಿ.ವಿ ಮಾಧ್ಯಮಗಳು ಬ್ರೇಕಿಂಗ್, ಪ್ಲಾಶ್, ಬಿಗ್ ಸ್ಟೋರಿ, ಆ ಸ್ಟೋರಿ ಈ ಸ್ಟೋರಿ ಎಂದೆಲ್ಲಾ ಏನೇನೋ ಕಸರತ್ತು ಮಾಡಿ ಭಿತ್ತರಿಸಲಾರಂಭಿಸಿವೆ. ಇನ್ನೇನು ಆಕೆಯ ಹೆರಿಗೆಯಾಗಲಿರುವ ಆಸ್ಪತ್ರೆಯತ್ತ ಈ ಮಾಧ್ಯಮಗಳ ಕಣ್ಣು ನೆಟ್ಟಿವೆ.

ಐಶ್ವರ್ಯ ರೈ ಸಿನೆಮಾಗಳಲ್ಲಿ ಹೆಸರು ಮಾಡಿರಬಹುದು. ಅಥವಾ ಆಕೆ ದೊಡ್ಡ ನಟಿಯೂ ಆಗಿರಬಹುದು. ಅದಕ್ಕೆ ಮನ್ನಣೆ ಕೊಡಬೇಕು.ಆದರೆ ಆಕೆಗೆ ಮಗುವಾಗುತ್ತಿದೆ ಎಂಬುದನ್ನು ಮಾಧ್ಯಮಗಳು ಅಷ್ಟೊಂದು ವೈಭವೀಕರಣ ಮಾಡುವುದು ಸರಿಯಲ್ಲ. ತಾಮುಂದು ನಾ ಮುಂದು ಎಂಬಂತೆ ಪ್ರಸಾರ ನೀಡುವುದು ನಿಜಕ್ಕೂ ಅಸಹ್ಯ ಹುಟ್ಟಿಸುವಂತದ್ದು.

ಸಮಾಜದಲ್ಲಿ ಸಾಕಷ್ಟು ವಿಷಯಗಳಿವೆ. ಅವೆಲ್ಲಾ ಇಂದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿಲ್ಲ. ಸಮಾಜದಲ್ಲಿ ಉತ್ತಮ ಕಾರ್ಯ ಮಾಡುವ ಅದೆಷ್ಟೋ ವ್ಯಕ್ತಿಗಳಿದ್ದಾರೆ; ಕಾರ್ಯಕ್ರಮಗಳಿವೆ.ಅವ್ಯಾವುದೂ ಇಂದು ಮಾಧ್ಯಮಗಳಲ್ಲಿ ಬ್ರೇಕಿಂಗ್ ಆಗೋದೇ ಇಲ್ಲ. ಆದರೆ ಐಶ್ ಗೆ ಮಗುವಂತೆ ಎಂಬುದು ಇಂದು ದೊಡ್ಡ ದೊಡ್ಡ ಅಕ್ಷರಗಳಲ್ಲಿ ಸುದ್ದಿಯಾಗುತ್ತಿವೆ. ಮಾಧ್ಯಮಗಳ ಈ ಧೋರಣೆಗಳನ್ನು ಯಾವ ರೀತಿ ತೆಗಳಿದರೂ ಕಡಿಮೆಯೇ...

2 comments:

suresh said...

ಕೇವಲ ಟಿ.ಆರ್.ಪಿ ಗಾಗಿ ಸಣ್ಣ ವಿಷಯಗಳನ್ನು ದೊಡ್ಡದು ಮಾಡುತ್ತಾರೆ.ನಿಜವಾದ ಸಮಾಜ ಕಳಕಳಿ ಇದ್ದವರು ಈ ರೀತಿ ಮಾಡುವುದಿಲ್ಲ.

Anonymous said...

I SUPPORT THE VIEW OF THE AUTHOUR

Post a Comment