ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮೂಡಬಿದರೆ: ಆಳ್ವಾಸ್ ಎಜುಕೇಶನ್ ಫೌಂಡೇಶನ್ ಆಶ್ರಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ "ಆಳ್ವಾಸ್ ವಿರಾಸತ್" ಜನವರಿ 5ರಿಂದ 8ರ ತನಕ ಮಿಜಾರು ಶೋಭಾವನದಲ್ಲಿ ನಡೆಯಲಿದೆ.20ನೇ ವರುಷದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಇದಾಗಿದ್ದು, ಅತ್ಯಂತ ವೈವಿಧ್ಯಮಯವಾದ ಬೃಹತ್ ವೇದಿಕೆಯಲ್ಲಿ ಈ ಉತ್ಸವ ನಾಲ್ಕುದಿನಗಳ ಕಾಲ ಮೂಡಿಬರಲಿದೆ. ಎಂದು ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ತಿಳಿಸಿದ್ದಾರೆ.ಉದ್ಘಾಟನೆಗೆ ಡಿ.ವಿ.

ಜನವರಿ 5ರಂದು ಸಂಜೆ 5.45ಕ್ಕೆ ಅತಿಥಿಗಳ ಮೆರವಣಿಗೆ ನಡೆಯಲಿದ್ದು ಸಂಜೆ 6ಕ್ಕೆ ಸರಿಯಾಗಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧಮಾ೯ಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ನಿಟ್ಟೆ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಎನ್ ವಿನಯ ಹೆಗ್ಡೆ, ಎ.ಜೆ ಸಮೂಹ ಸಂಸ್ಥೆಗಳ ಆಡಳಿತ ನಿದೇ೯ಶಕ ಎ.ಜೆ ಶೆಟ್ಟಿ, ಉದ್ಯಮಿ ಶಶಿಕಿರಣ್ ಶೆಟ್ಟಿ, ಶಾಸಕ ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾಣೀ೯ಕ್, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಕೆನರಾ ಬ್ಯಾಂಕ್ ಉಪ ಮಹಾ ಪ್ರಬಂಧಕ ದಾಸಯ್ಯ, ಕನಾ೯ಟಕ ಬ್ಯಾಂಕ್ ವ್ಯವಸ್ಥಾಪಕ ನಿದೇ೯ಶಕ ಪಿ. ಜಯರಾಮ ಭಟ್, ನಾಡೋಜ ಡಾ.ಜಿ ಶಂಕರ್, ಗೋಲ್ಡ್ ಫಿಂಚ್ ಆಡಳಿತ ನಿದೇ೯ಶಕ ಕೆ. ಪ್ರಕಾಶ ಶೆಟ್ಟಿ, ಉದ್ಯಮಿ ಎನ್. ಬಾಲಕೃಷ್ಣ, ಕೆ.ಎಲ್.ಎನ್ ಇಂಜಿನಿಯರಿಂಗ್ ಪ್ರೈ.ಲಿ ಬೆಂಗಳೂರು ಇದರ ಪ್ರಸನ್ನ ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಆಳ್ವಾಸ್ ವಿರಾಸತ್ 2012ರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವೂ ನಡೆಯಲಿದೆ.


ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಜನವರಿ 5ರಂದು ಸಂಜೆ 7.15 ರಿಂದ 8.45ರ ತನಕ ವಿದ್ವಾನ್ ಗಣೇಶ್ -ಕುಮರೇಶ್ ಸಹೋದರರು ಚೆನ್ನೈ, ಅವರಿಂದ ಅಪೂರ್ವ ವಯೋಲಿನ್ ಕಾರ್ಯಕ್ರಮ ನಡೆಯಲಿದೆ. 8.45ರಿಂದ 10ರ ತನಕ ಪಂಜಾಬಿನ ರೋಮಾಂಚಕ ಭಾಂಗ್ರಾ ಮತ್ತು ಜಾನಪದ ನೃತ್ಯಗಳು ನಡೆಯಲಿವೆ. ಜ.6 ಶುಕ್ರವಾರ ಸಂಜೆ 6ರಿಂದ 8ರ ತನಕ ಶಿವ ದಿ ಮ್ಯೂಸಿಕಲ್ ಥಂಡರ್ ಕಾರ್ಯಕ್ರಮ ಶಿವ ಫ್ಯೂಶನ್ ಗ್ರೂಪ್ ಚೆನ್ನೈ ಇವರಿಂದ ಪ್ರಸ್ತುತಗೊಳ್ಳಲಿದೆ. ದ್ವಿತೀಯ ಕಾರ್ಯಕ್ರಮದಲ್ಲಿ ಕೌಲಾಲಂಪುರದ ರಾಮ್ ಲಿ ಇಬ್ರಾಹಿಂ ಮತ್ತು ತಂಡದವರಿಂದ ಸ್ಪೆಲ್ ಬೌಂಡ್ -ಒಡಿಸ್ಸಿ ಸಮೂಹ ನೃತ್ಯ ಕಾರ್ಯಕ್ರಮ ನಡೆಯಲಿವೆ.

ಜನವರಿ 7ರಂದು ಗ್ರಾಮಿ ಅವಾಡ್೯ ಪುರಸ್ಕೃತ ಪಂಡಿತ್ ವಿಶ್ವಮೋಹನ ಭಟ್ ಅವರ ಮೋಹನ ವೀಣಾ ಮತ್ತು ಸುರಮಣಿ ಪಂಡಿತ್ ಪ್ರವೀಣ್ ಗೋಡ್ಕಿಂಡಿ ಕೊಳಲು, ಸುಭೆನ್ ಚಟಜಿ೯ ತಬಲಾ, ಸುಮಿತ್ ರಾಮಚಂದ್ರನ್ ಎಲೆಕ್ಟ್ರಿಕ್ ಗಿಟಾರ್, ಸಂಬಿತ್ ಚಟಜಿ೯ ಜಾಝ್ ಡ್ರಮ್ಸ್ ನಡೆಯಲಿದೆ. ದ್ವಿತೀಯ ಕಾರ್ಯಕ್ರಮದಲ್ಲಿ ಅದಿತಿ ಮಂಗಲ್ ದಾಸ್ ಬಳಗದಿಂದ ಕಥಕ್ ನೃತ್ಯ ಸಂಗಮ ನಡೆಯಲಿದೆ.ಕೊನೆಯ ದಿನದ ಮೊದಲ ಕಾರ್ಯಕ್ರಮವಾಗಿ ಚೆನ್ನೈ ಮಹೇಶ್ ವಿನಾಯಕ್ ರಾಮ್ ಮತ್ತು ಬಳಗದವರಿಂದ ವಿಶೇಷ ಫ್ಯೂಶನ್ ಸಂಗೀತದ ಸಮ್ಮಿಲನ ಮೋಕ್ಷ ಕಾರ್ಯಕ್ರಮ ನಡೆಯಲಿದೆ. ದ್ವಿತೀಯ ಕಾರ್ಯಕ್ರಮವಾಗಿ 7.30ರಿಂದ 9.30 ರಘು ದೀಕ್ಷಿತ್ ಮತ್ತು ಎಂ.ಡಿ ಪಲ್ಲವಿ ಬಳಗದವರಿಂದ ಮಧುರ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಸಮಯಕ್ಕೆ ಸರಿಯಾಗಿ ಕಾರ್ಯಕ್ರಮವು ಪ್ರಾರಂಭಗೊಳ್ಳಲಿದೆ. ಆಳ್ವಾಸ್ ವಿರಾಸತ್ ನಡೆಯುವ ಪ್ರತಿದಿನ ರಾಷ್ಟ್ರೀಯ ಪ್ರತಿಭಾ ಸ್ಪಧೆ೯ " ಇಂಡಿಯಾಸ್ ಗೋಟ್ ಟ್ಯಾಲೆಂಟ್ನಲ್ಲಿ ಫೈನಲ್ ಪ್ರವೇಶ ಪಡೆದ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಅವರ ವಿಸ್ಮಯ ಜಾದು ಪ್ರದರ್ಶನ ಮತ್ತು ಆಳ್ವಾಸ್ ವಿದ್ಯಾಥಿ೯ಗಳಿಂದ ವರ್ಣರಂಜಿತ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ.

0 comments:

Post a Comment