ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಈ ಕನಸು ಅವಾರ್ಡ್
ಚಿತ್ರಗೀತೆಗಳೆಂದರೆ ಎಲ್ಲರಿಗೂ ಪ್ರೀತಿಯೇ. ಒಬ್ಬ ಅನಕ್ಷರಸ್ಥನೂ ಕೂಡಾ ಚಿತ್ರಗೀತೆಯ ಸಾಹಿತ್ಯವನ್ನು ಬಲ್ಲವನಾಗಿರುತ್ತಾನೆ. ಅವನೂ ಸಹ ಹಾಡುಗಳನ್ನು ಆಸ್ವಾದಿಸುತ್ತಿರುತ್ತಾನೆ. ಅಂದೊಂದು ಕಾಲವಿತ್ತು ರೇಡಿಯೋದಲ್ಲಿ ಚಿತ್ರಗೀತೆಗಳನ್ನು ಕೇಳಿ ಆನಂದಿಸುವ ಕಾಲ,ಗ್ರಾಮಾಫೋನ್ ಒಂದಷ್ಟು ಮನೆಗಳಲ್ಲಿದ್ದರೆ ಟೇಪ್ ರೆಕಾರ್ಡ್ ಇನ್ನೂ ಬಂದಿರದ ಕಾಲ. ಆಗಲೇ ಕನ್ನಡ ಚಿತ್ರಗೀತೆಗಳು ಹೆಸರು ಮಾಡಿದ್ದವು. ಇನ್ನು ಈಗಿನ ವಿಷಯಕ್ಕೆ ಬಂದರೆ ಎಲ್ಲರ ಕಿವಿಗಳಲ್ಲೂ ಹೆಡ್ಸೆಟ್. ಅದಕ್ಕೆ ತಕ್ಕಂತೆ ಎಫ್.ಎಂ ಗಳು.

ಕನ್ನಡ ನಾಡು ನುಡಿಗೆ ಕನ್ನಡ ಚಿತ್ರರಂಗದ ಕೊಡುಗೆ ಅಪಾರ. ಕನ್ನಡದ ಮೊದಲ ಚಲನಚಿತ್ರ ಸತಿ ಸುಲೋಚನದಿಂದ ಹಿಡಿದು ಇಂದಿನವರೆಗೂ ಅನೇಕ ರೀತಿಯಲ್ಲಿ ಕನ್ನಡ ಭಾಷೆ ಉಳಿವಿಗಾಗಿ ಶ್ರಮಿಸುತ್ತಿದೆ. ಚಿತ್ರಗೀತೆಗಳು, ಸಂಭಾಷಣೆ, ಸಾಹಿತ್ಯ, ಸಂಗೀತ ಹೀಗೆ ಅನೇಕ ರೀತಿಯಲ್ಲಿ ಸಾಧನೆ ಮಾಡುತ್ತಿದೆ. ಇಂದು ನಮ್ಮ ಚಿತ್ರರಂಗ 75ನೇ ವರ್ಷದ ಅಮೃತ ಮಹೋತ್ಸವವನ್ನು ಆಚರಿಸಿಕೊಂಡಿದೆ.

ಇಂದು ಕನ್ನಡ ಸಾಹಿತ್ಯದ ಹಾಡುಗಳು ಕೇಳುಗನ ಕಿವಿಗೆ ಇಂಪು ನೀಡುತ್ತಿವೆ. "ಸುಮ್ಮನೇ ಯಾಕೇ ಬಂದೇ ಮಿಂಚಂತೆ ಬೆನ್ನ ಹಿಂದೆ" ಇಂತಹ ಅನೇಕ ರೀತಿಯ ಹಾಡುಗಳು ಕನ್ನಡ ಚಿತ್ರಗಳಲ್ಲಿ ಇಂದಿಗೂ ಕಾಣುತ್ತಿರುವುದು ವಿಶೇಷ. ಜಯಂತ್ ಕಾಯ್ಕಿಣಿ, ಕೆ.ಕಲ್ಯಾಣ್ ಹೀಗೆ ಅನೇಕ ಯುವ ಬರಹಗಾರರು ಜನರ ಅಭಿರುಚಿಗೆ ತಕ್ಕಂತೆ ಗೀತೆಗಳನ್ನು ರಚನೆ ಮಾಡುತ್ತಿದ್ದಾರೆ. ಅನೇಕ ಚಿತ್ರಗಳು ಕೇವಲ ಹಾಡಿನಿಂದಲೇ ಸೂಪರ್ ಹಿಟ್ ಆಗುತ್ತಿವೆ. "ಪರವಶನಾದೆನು ಅರಿಯುವ ಮುನ್ನವೇ, ಪರಿಚಿತನಾಗಲಿ ಹೇಗೇ ಪ್ರಣಯಕು ಮುನ್ನವೇ?" ಹೇಗೇ ಅನೇಕ ಹಾಡುಗಳು ಚಿತ್ರರಸಿಕರನ್ನು ರಂಜಿಸುತ್ತಿವೆ.

ಕನ್ನಡದಲ್ಲಿ ಇಂದು ಅನೇಕ ಡಬ್ಬಿಂಗ್ ಚಿತ್ರಗಳು ಬರುತ್ತಿವೆ ಎಂಬ ಅಭಿಪ್ರಾಯವೂ ಇದೆ. ಕನ್ನಡಿಗರಿಗೆ ಕನ್ನಡದಲ್ಲೇ ಮನೋರಂಜನೆ ಪಡೆದುಕೊಳ್ಳೋ ಹಕ್ಕಿಲ್ಲವಾ? ಈ ಹಕ್ಕನ್ನು ನಿರಾಕರಿಸೊದು ಕನ್ನಡ ಪರಾನಾ? ಕನ್ನಡಿಗರು ಕನ್ನಡ ನಾಡಲ್ಲೇ ಬೇರೆ ಭಾಷಾ ಚಿತ್ರಗಳನ್ನು ನೋಡಬೇಕಾ? ಇದು ಕನ್ನಡಪರಾನಾ? ಕರ್ನಾಟಕದ ಟಾಕಿಸುಗಳಲ್ಲಿ ಪರಭಾಷಾ ಚಿತ್ರಗಳು ಓಡಬೇಕಾ? ಇದು ಕನ್ನಡ ಪರಾನಾ? ಹೇಗೇ ಅನೇಕ ಪ್ರಶ್ನೆಗಳನ್ನು ಚಿಂತಕರು ಮುಂದಿಡುತ್ತಿದ್ದಾರೆ. ಏನೇ ಆಗಲಿ ಕನ್ನಡ ಚಿತ್ರರಂಗ ಇಂದು ಸ್ವಲ್ಪ ಮಟ್ಟಿಗಾದರೂ ಉತ್ತಮ ಸ್ಥಿತಿಯಲ್ಲಿದೆ ಎಂದರೆ ಅದು ತಪ್ಪಾಗುವುದಿಲ್ಲ.

ಡಬ್ಬಿಂಗ್ ಚಿತ್ರಗಳಾದರೇನಂತೆ ಹಾಡುಗಳು ಕನ್ನಡದ್ದೇ ಅನ್ನೊದು ಕೆಲವರ ಅಭಿಪ್ರಾಯ. ಇನ್ನೂ ಕೆಲವರಂತೂ ಕನ್ನಡದ ಹಾಡುಗಳೇ ಚಿತ್ರಕ್ಕೆ ಆಧಾರ ಅಂತ ಹೇಳ್ತಾರೆ. ಇದನ್ನು ಸ್ವಲ್ಪ ಮಟ್ಟಿಗೆ ಸರಿ ಅಂತ ಹೇಳಬಹುದು. ಏನೇ ಆಗಲಿ ಕನ್ನಡ ಚಿತ್ರಗಳು ಕನ್ನಡ ಉಳಿವಿಗೆ ಭಾಷೆಯ ಅಭಿವೃದ್ದಿಗೆ ತಕ್ಕ ಮಟ್ಟಿಗೆ ಪ್ರಯತ್ನಿಸುತ್ತಿವೆ. ಕನ್ನಡ ಕರ್ನಾಟಕದ ಹೆಸರಲ್ಲಿ ಅನೇಕ ನಾಡುನುಡಿಗೆ ಸಂಬಂಧಿಸಿದ ವಿಷಯಗಳು ಚಲನಚಿತ್ರ ರೂಪದಲ್ಲಿ ಮೂಡುತ್ತಿವೆ. ಏನೇ ಆದರೂ ಸ್ಯಾಂಡಲ್ವುಡ್ ಗಂಧದಗುಡಿಯೇ ಸರಿ.


ದರ್ಶನ್ ಬಿ.ಎಂ,
ಪತ್ರಿಕೋದ್ಯಮ ವಿದ್ಯಾರ್ಥಿ, ಆಳ್ವಾಸ್ ಕಾಲೇಜು,
ಮೂಡುಬಿದಿರೆ.

4 comments:

Unknown said...

hi darshan iam totendra s makal nimma artical tumba chennagi publish agide this is my phone noumber 9885456417 plz send me your phone noumber

Anonymous said...

good article.......nijawagalu kannada chitrageetegala modiye bere...
Sowmya Sagara

Anonymous said...

thanks for comments...
keep reading..

Anonymous said...

okay.. my Number 9164461193

Post a Comment