ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಹೌದು..ಇದು ನಿಗೂಢ ಶಕ್ತಿಯ ಕ್ಷೇತ್ರವೊಂದರ ಕಥೆ...ಇದು ಹಲವು ರೋಗಗಳಿಗೆ ರಾಮಭಾಣ...ನಂಬಿದವನಿಗೆ ಎಂದೆಂದಿಗೂ ಅಲ್ಲಿ ಸಮಸ್ಯೆ ಪರಿಹಾರ ಇದ್ದೇ ಇದೆ... ಭಕ್ತಿ, ಶ್ರದ್ಧೆ, ನಂಬಿಕೆ, ಇದು ಮಾತ್ರ ಇಲ್ಲಿ ಫಲಿಸತಕ್ಕಂತಹುದು...ಈ ನಿಷ್ಕಲ್ಮಶ ಮನಸ್ಸಿನ ಭಕ್ತಿಪೂರ್ವಕ ಪ್ರಾರ್ಥನೆ ಅದ್ಭುತ ಶಕ್ತಿಯೊಡಗೂಡಿ ಸಮಸ್ಯೆಗೆ ಸೂಕ್ತ ಪರಿಹಾರ ಕರುಣಿಸುತ್ತದೆ...ಈ ಅದ್ಭುತ ಶಕ್ತಿಯ ಕ್ಷೇತ್ರದ ಪರಿಚಯವನ್ನು ಈ ಕನಸು.ಕಾಂ ವಿಶೇಷ ಪ್ರತಿನಿಧಿ ಸೌಮ್ಯ ಕುಗ್ವೆ ನಡೆಸಿದ್ದಾರೆ...


"ನಮ: ಶಾಂತಾಯ ದಿವ್ಯಾಯ ಸತ್ಯಧರ್ಮ ಸ್ವರೂಪಿಣಿ
ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋ ನಮ:"

ಶಾಂತ ದಿವ್ಯಮೂರ್ತಿಯೂ,ಸತ್ಯ-ಹಿಂದೂ ಧರ್ಮ ಸ್ವರೂಪಿಯೂ ಸೇವೆ-ಭಕ್ತಿಯಿಂದ ಪ್ರಸನ್ನಗೊಳ್ಳುವಂತಹ ಮಹಾಮಹಿಮನೂ ಆದ ಸದ್ಗುರು ಶ್ರೀಧರ ಮಹಾಸ್ವಾಮಿಗಳಿಗೆ ವಂದನೆ...

ಈ ದಿವ್ಯ ತೇಜಸ್ಸುಳ್ಳ ಪವಾಡ ಪುರುಷರೂ ಆದ ಸದ್ಗುರು ನೆಲೆಸಿರುವ ಸ್ಥಳ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಪುಟ್ಟ ಹಳ್ಳಿ ಶ್ರೀ ಕ್ಷೇತ್ರ ವರದಪುರ.

ಮಲೆನಾಡಿನ ಶಾಂತ ಸುಂದರ ಹಸಿರು ಬೆಟ್ಟಗಳ ನಡುವೊಂದು ಪುಟ್ಟ ಆಶ್ರಮ-ಶ್ರೀದರ ಆಶ್ರಮ. ದೈವಾವತಾರವೆಂದೇ ಭಕ್ತರಿಂದ ಕರೆಯಲ್ಪಡುವ ಸದ್ಗುರುವಿನ ಮಹಿಮೆ ದೇಶ ವಿದೇಶಗಳೆಲ್ಲೆಡೆ ಪ್ರಸಿದ್ಧಿ.ಮಹಾರಾಷ್ಟ್ರದ ಸಜ್ಜನಗಡದಲ್ಲಿ ಜನಿಸಿದ ಶ್ರೀ ದತ್ತಾತ್ರೇಯ ಸ್ವರೂಪಿಯಾದ ಗುರು ಶ್ರೀಧರರು ಹಿಂದೂ ಧರ್ಮ ಜಾಗೃತಿಗಾಗಿ ,ಭಕ್ತರ ರಕ್ಷಣೆಗಾಗಿ ವರದ ಹಳ್ಳಿಯನ್ನು ಧಾರ್ಮಿಕ -ವೈದಿಕ ಚಟುವಟಿಕೆಯ ಕೇಂದ್ರವಾಗಿಸಿದರು.ಶ್ರೀ ಗುರುಗಳ ಮುಕ್ತಿಯ ನಂತರವೂ ಕೂಡ ಈ ಕಾರ್ಯಗಳು ಅನೂಚಾನವಾಗಿ ಮುಂದುವರೆದಿರುವುದು ಗಮನೀಯವಾಗಿದೆ.


ಶ್ರೀಕ್ಷೇತ್ರದಲ್ಲಿ ಇಂದು ಭಕ್ತರಿಂದ ನಿರ್ಮಿಸಲ್ಪಟ್ಟ ಶ್ರೀಧರ ಸ್ವಾಮಿಗಳ ಸಮಾಧಿಯಿದೆ.ಶ್ರೀ ಗುರು ದತ್ತಾತ್ರೇಯ ಸ್ವರೂಪಿಯಾದ ಶ್ರೀಧರ ಸ್ವಾಮಿಗಳ ಪಾದುಕಾ ಪೂಜೆ ನಡೆಯುತ್ತದೆ.ಪೂಜೆಯ ನಂತರ ನಡೆಯುವ ಭಜನಾ ಸೇವೆ ಸ್ವಾಮಿ ಶ್ರೀಧರರ ಮಹಿಮೆಯನ್ನು ಸಾರುತ್ತದೆ.

ಆಶ್ರಮದ ಸುತ್ತಲಿನ ಪರಿಸರ ಯಾವುದೇ ಕಲ್ಮಷವಿಲ್ಲದೆ ಪರಿಶುಧ್ಧವಾಗಿದೆ.ಶುಧ್ದ ಗಾಳಿ,ವರದಾ ನದಿಯ ನೀರು,ಗ್ರಾಮ ದೇವತೆ ದುರ್ಗಾಂಬ ಅಮ್ಮನವರ ಸನ್ನಿಧಿ,ಹಸಿರು ಬೆಟ್ಟಗಳಿಂದ ಸುತ್ತುವರಿದ ಆಶ್ರಮವು ಪ್ರವಾಸಕ್ಕೂ ಹೇಳಿ ಮಾಡಿಸಿದ ಜಾಗ.ನಗರದ ಗೌಜುಗದ್ದಲದಿಂದ ಬೇಸತ್ತ ಜನಕ್ಕೆ ಆಶ್ರಮವು ಧಾರ್ಮಿಕತೆಯ ಅಲೌಕಿಕ ಸ್ಪರ್ಶದೊಂದಿಗೆ ನೆಮ್ಮದಿಯ ಅನುಭೂತಿಯನ್ನೂ ನೀಡುತ್ತದೆ.ವರದಾಶ್ರಮದಲ್ಲಿ ಉತ್ತಮ ಗೋ ಶಾಲೆಯನ್ನೂ ಹೊಂದಿದೆ.ಪ್ರತಿನಿತ್ಯ ಬರುವ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯಿದೆ.


ಇಲ್ಲಿ ಗೋ ಮುಖದಿಂದ ಹೊರ ಹೊಮ್ಮುವ ತೀರ್ಥ ಜಲ ಆಶ್ರಮದ ಮತ್ತೊಂದು ವಿಶೇಷ.ಒಮ್ಮೆ ತುಂಬಿಟ್ಟರೆ ಎಷ್ಟೇ ವರ್ಷವಾದರೂ ಹಾಳಾಗದೇ ಉಳಿಯುವುದು ಈ ಜಲದ ವಿಶೇಷತೆ.ಹಾಗೆಯೇ ಇಲ್ಲಿನ ಜನರ ನಂಬಿಕೆಯಂತೆ ಈ ತೀರ್ಥ ಅನೇಕ ಚರ್ಮವ್ಯಾಧಿ ನಿವಾರಕ.ಹಾಗಾಗಿ ಭಕ್ತ ವೃಂದ ಆಶ್ರಮಕ್ಕೆ ಕಾಲಿಟ್ಟೊಡನೆ ತೀರ್ಥ ಸ್ನಾನದತ್ತ ದಾಪುಗಾಲಿಡುತ್ತದೆ.ಈ ರೀತಿಯಾಗಿ ಇಲ್ಲಿನ ಪರಿಶುಧ್ದಜಲ ತನ್ನ ಔಷದೀಯ ಗುಣಗಳೊಂದಿಗೆ ವ್ಯಾಧಿನಿವಾರಕ ,ಮಕ್ಕಳ ಭಯ ನಿವಾರಕವಾಗಿಯೂ ಪ್ರಸಿದ್ದಿ ಪಡೆದಿದೆ.

ಶ್ರೀ ಕ್ಷೇತ್ರ ವರದಪುರ ಭಕ್ತರ ಪಾಲಿಗೊಂದು ವರ.ಕೇವಲ ಭಕ್ತಿ-ಸೇವೆಯನ್ನು ಮಾತ್ರ ಆಶಿಸುವ ಆಶ್ರಮದಲ್ಲಿ ಇಂದಿಗೂ ಶ್ರೀಧರ ಸ್ವಾಮಿಗಳ ಆತ್ಮಸುಳಿದಾಡುತ್ತಿರುವರೆಂಬ ನಂಬುಗೆಯೇ ವರದಪುರವನ್ನು ಚೈತನ್ಯಮಯವಾಗಿಸಿದೆ

1 comments:

Anonymous said...

nijakku achhariya vishaya.
ee reetiya kshetragalu namma naduve halavive.
nijakku vismayakaari.
olleya varadi.


regards,
Shreyanka S Ranade.

Post a Comment