ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮೂಡಬಿದಿರೆ:ದುಷ್ಟರಿಗೆ ಲೋಕಾಯುಕ್ತ ಸದಾ ಸಿಂಹಸ್ವಪ್ನ...ಅದು ಮತ್ತೊಮ್ಮೆ ಸಾಬೀತಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಪುರಸಭೆಯಲ್ಲಿ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎ.ವಿ.ಗಣೇಶ್ ಇದೀಗ ಲಂಚ ಪ್ರಕರಣದಲ್ಲಿ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿದ್ದಾರೆ. ಘಟನೆ ಶುಕ್ರವಾರ ನಡೆದಿದೆ. ಈ ಲಂಚಕೋರ ಅಧಿಕಾರಿ ಕೊನೆಗೂ ಸಿಕ್ಕಿಬಿದ್ದನಲ್ಲಾ ಎಂಬ ಖುಷಿ ಮೂಡಬಿದಿರೆ ವ್ಯಾಪ್ತಿಯ ಜನತೆಯದ್ದು. ಕೊನೆಗೂ ಲಂಚಕೋರ ಪುರಸಭಾ ಮುಖ್ಯಾಧಿಕಾರಿ ಲೋಕಾಯುಕ್ತರ ಅತಿಥಿಯಾಗಿದ್ದಾನೆ.


ಮೂಡಬಿದಿರೆ ಪುರಸಭೆಯಲ್ಲಿ ಅದೆಷ್ಟೋ ಮಂದಿ ಮುಖ್ಯಾಧಿಕಾರಿಗಳು ಕರ್ತವ್ಯನಿರ್ವಹಿಸಿದ್ದಾರೆ.ಆದರೆ ಈತನಷ್ಟು ಲಂಚಪಡೆಯುವ ಮುಖ್ಯಾಧಿಕಾರಿ ಈ ಹಿಂದೆಂದೂ ಬಂದಿರಲಿಲ್ಲ. ಕುಳಿತರೂ ಲಂಚ, ನಿಂತರೂ ಲಂಚ, ಸರ್ವಂ ಲಂಚಮಯಂ ಎಂಬಂತೆ ಈ ಅಸಾಮಿ ಹಣಪಿಶಾಚಿಯಾಗಿ ಜನತೆಗೆ ಕಾಡತೊಡಗಿದ್ದ.ರವಿಪೂಜಾರಿ ಎಂಬ ಕಾಂಟ್ರೇಕ್ಟರ್ ಒಬ್ಬರಿಂದ 30ಸಾವಿರ ರುಪಾಯಿ ಲಂಚಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ದಾಳಿ ನಡೆಸಲಾಯಿತು. ಲೋಕಾಯುಕ್ತ ಎಸ್ಪಿ ಜಗಮಯ್ಯ , ಡಿವೈಎಸ್ಪಿ ವರ್ಣೇಕರ್ ಈ ದಾಳಿಯ ನೇತೃತ್ವ ವಹಿಸಿದ್ದರು.

0 comments:

Post a Comment