ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

ಪ್ರೀತಿಯೆಂಬ ಗೂಡು ಕಟ್ಟಿ ಹಾರಿ ಹೋದ ಹಕ್ಕಿ ನೀನು ,

ಬಾನಿನಲ್ಲಿ ಚುಕ್ಕಿಯಾಗಿ ನಗುತ ನಿಂತೆಯಾ ...!!!?

ಪ್ರೀತಿ ಗೂಡ ಸುಡುಗಾಡು ಮಾಡಿ ,

ಬಳಳುತಿರುವ ನನ್ನ ಕೂಗ ನೀನು ಕೇಳೆಯಾ ...?ಪ್ರೇಮ ಜ್ಯೋತಿ ಬೆಳಗಿಯಂದು ..ಕತ್ತಲಾಗಿಸಿ ಎನ್ನ ಹೃದಯವ ,

ಬಿರುಗಾಳಿಯಾಗಿಯಿಂದು ದೂರ ಹೋದೆಯಾ ...?

ಪ್ರೇಮ ಧಾರೆಯ ಎರೆದು ನೀನು ....ಬಂಜರಾಗಿಸಿ ಬಾಳ ದಾರಿಯ ,

ಮರೆಯಾಗಿ ಅವಿತೆಯಾ ....?

ಪ್ರೇಮ ಕಾವ್ಯಕೆ ದನಿಯಾಗಿ ನೀನು ,ಕೂಡಿ ಹಾಡಿ

ತಾಳ ತಪ್ಪಿಸಿ ....ರಾಗ ಮರೆತೆಯಾ ....?

ಪ್ರೇಮ ನಾಟ್ಯಕೆ ಹೆಜ್ಜೆಯೊಂದಿಗೆ ಹೆಜ್ಜೆ ಹಾಕಿ ,

ಲಯವ ತಪ್ಪಿಸಿ ನೀನು ..

ಗೆಜ್ಜೆ ಸದ್ದು ಮರೆತು ಬಿಟ್ಟೆಯಾ ...?

ಧೀರೇಂದ್ರ ..( ಧೀರು)

0 comments:

Post a Comment