ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ತೋಟ ಗದ್ದೆಗಳಲ್ಲಿ ಅಡಗಿರುವ ಎಂತಹುದೇ ಹಾವು ಅದಾಗಿರಲಿ, ಎಷ್ಟೇ ವಿಷಕಾರಿಯಾಗಿರಲಿ, ಆಹಾರವನ್ನರಸುತ್ತ ಆಗಮಿಸಿ ಇತರರ ಭಯಕ್ಕೆ ಕಾರಣವಾಗುವಂತಹ ಅಂತಹ ಹಾವುಗಳನ್ನು ಸರಳ ವಿದಾನವೊಂದರ ಮೂಲಕ ಬೀಳ್ಕೊಡಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ ಯಲ್ಲಾಪುರ ತಾಲೂಕಿನ ತಟಗಾರ್ ಗ್ರಾಮದ ರವೀಂದ್ರ ಭಟ್ಟ ಕಣ್ಣಿಮನೆ. ಯಾವದೇ ಹಿಂಸೆ ನೀಡಿದೆ ಎಂಥ: ವಿಷಕಾರಿ ಹಾವನ್ನಾದರೂ ಸರಳ ಉಪಾಯದ ಮೂಲಕ ಯಾವದೇ ಅಪಾಯವಿಲ್ಲದೇ ಹಿಡಿಯಬಹುದು. ಕೇವಲ ಒಂದು ಪಿ.ವಿ.ಸಿ ಪೈಪ್ ಹಾಗೂ ಕೋಳಿಮೊಟ್ಟೆಯೊಂದನ್ನು ಬಳಸಿ ಹಾವನ್ನು ಸೆರೆಹಿಡಿಯಬಹುದು ಎಂಬುದು ಅವರ ಚಿಂತನೆ. ಇದುವರೆಗೆ 30ಕ್ಕೂ ಅಧಿಕ ಹಾವೂಗಳನ್ನು ಈ ತಂತ್ರದಿಂದ ಹಿಡಿದು ನಾಡಿನಿಂದ ಕಾಡಿನ ದಿಕ್ಕು ತೋರಿಸಿದ ಕೀರ್ತಿಯೂ ಇವರಿಗಿದೆ.ಹೀಗಿದೆ ವಿಧಾನ

5ಅಡಿ ಉದ್ದದ ಹಾವು ಅದಾಗಿದ್ದರೆ 7ಅಡಿ ಉದ್ದದ ಪಿ.ವಿ.ಸಿ ಪೈಪ್ ಹಾಗೂ ಒಂದು ಕೊಳಿಮೊಟ್ಟೆಯಿದ್ದರೆ ಸಾಕು. ಪೈಪ್ನ ಒಂದು ಭಾಗದಲ್ಲಿ ಕೋಳಿಮೊಟ್ಟೆಯನಿಡಬೇಕು. ಸ್ವಲ್ಪ ಗಟ್ಟಿಯಾಗಿ ಮುಚ್ಚಳವನ್ನು ಮುಚ್ಚಿಟ್ಟು ಇನ್ನೊಂದು ತುದಿಯನ್ನು ಸ್ವಲ್ಪ ಎತ್ತರ ಜಾಗದಲ್ಲಿ ಅಂದರೆ ಗೋಣಿಚೀಲ ಅಥವಾ ಇವರೆ ತಯಾರಿಸಿರುವ ಸ್ಟಾಂಡ್ಒಂದನ್ನು ಬಳಸಬಹುದು. ಪೈಪ್ ಅತ್ತಿತ್ತ ಹೊರಳಾಡದಂತೆ ಎಚ್ಚರ ವಹಿಸಬೇಕು. ಪೈಪ್ನ ಗಾತ್ರ ಸುಲಬವಾಗಿ ಹಾವು ಒಳಹೊಕ್ಕುವಂತಿರಬೇಕು. ಇಲ್ಲಿಗೆ ನಮ್ಮ ಕೆಲಸ ಮುಗಿಯಿತು. ಕೆಲವೇ ಘಂಟೆಗಳಲ್ಲಿ ನಿಮಗೆ ತೊಂದರೆ ನೀಡುತ್ತಿದ್ದ ಹಾವು ಬೋನಿನಲ್ಲಿರುತ್ತದೆ. ಆಹಾರಕ್ಕಾಗಿ ಮೊಟ್ಟೆಯ ವಾಸನೆಯನ್ನು ಗ್ರಹಿಸಿ ಆಗಮಿಸುವ ಉರಗ ಮೊಟ್ಟೆಯನ್ನು ಜೀರ್ಣಿಸುವದರಳಗಾಗಿ ನಿಮ್ಮ ತಕ್ಕೆಯಲ್ಲಿರುತ್ತದೆ. ನಾಗರ ಹಾಗೂ ಇತರೆ ಬಲು ವಿಷಕಾರಿ ಹಾವುಗಳಿಂದ ರಕ್ಷಣೆ ಪಡೆಯಲು ಇದೊಂದು ಸುಲಬ ಉಪಾಯ. ಹಾವುಗಳೆಂದರೆ ಭಯಪಡುವವರು ಈ ಸುಲಭ ತಂತ್ರವನ್ನು ಉಪಯೋಗಿಸಿ ಅಪಾಯದಿಂದ ಪಾರಾಗಬಹುದು.

ರವಿಯ ನುಡಿಯಂತೆ...
ಒಮ್ಮೆ ತೋಟದಲ್ಲಿ ಗಿಡಗಳಗೆ ನೀರುಣಿಸಲೆಂದು ಬಳಸಿರುವ ಪೈಪ್ನೊಳಗೆ ಮಿನಿ ನಾಗರವೊಂದು ನುಸುಳಿದ್ದೆ ಇವರ ಈ ಸಂಶೋಧನೆಗೆ ಪ್ರೇರಣೆಯಂತೆ! ಬೋನಿನೊಳಗೆ ಬಿದ್ದ ಹಾವನ್ನು ಯಾವದಾದರೂ ನೀರಿನೋಳಗೆ ಬಿಡುವದು ಸೂಕ್ತ ಎಂಬುದು ಇವರ ವಾದ. ನೀರಿನೊಳಗೆ ಬಿಡುವದರಿಂದ ಹಾವಿಗೂ ಪೆಟ್ಟಾಗದು, ನಮಗೂ ಯಾವದೇ ಅಪಾಯವಿಲ್ಲ. ಇಲ್ಲವಾದಲ್ಲಿ ದಟ್ಟ ಕಾನನದಲ್ಲಿಯೂ ಹಾವನ್ನು ಬಿಡಬಹುದು. ಹಾವಿನೊಂದಿಗೆ ಹುಡುಗಾಟ ಸಲ್ಲದು ಎಂಬ ಎಚ್ಚರಿಕೆಯನ್ನು ಇವರು ನೀಡುತ್ತಾರೆ. ರೈತರು ಇಲಿಯ ಕಾಟದಿಂದ ಮುಕ್ತಿ ಪಡೆಯಲೂ ಇದೇ ವಿದಾನದಲ್ಲಿ ಕೊಂಚ ಬದಲಾವಣೆಯೊಂದಿಗೆ ಪ್ರಯತ್ನಿಸಬಹುದು ಎನ್ನುತ್ತಾರೆ ರವಿ ಕಣ್ಣಿ.

ಸಾಗಿಬಂದ ದಾರಿ...
ಹಳ್ಳಿಯೆಂದರೆ ಮೂಗು ಮುರಿಯುತ್ತಲಿದ್ದ ಹಳ್ಳಿಯಿಂದ ನಗರ ಸೇರಿದ ಯುವಕರಿಗೆ ಮಾದರಿಯಾಗಿರುವ ರವಿ ಡಿಪ್ಲೋಮಾ ಪದವಿಧರರಾಗಿದ್ದು ಹೊಸ ಸಂಶೋಧನೆಗಳ ಹರಿಕಾರ. ನ್ಯಾಶನಲ್ ಇನೋವೇಶನ್ ಫೌಂಡೇಶನ್ ಅವರಿಂದ ತಳಮಟ್ಟದ ಸಂಶೋಧಕ ಎಂಬ ಪ್ರಶಂಸೆಗೂ ಇವರು ಪಾತ್ರರಾಗಿದ್ದಾರೆ. ಹಾವು ಹಿಡಿಯುವ ತಂತ್ರದಂತೆ ರೈತನಿಗೆ ಅನೂಕುಲವಾಗುವ ನಿಟ್ಟಿನಲ್ಲಿ ಇಲಿ ಹಿಡಿಯುವ ತಂತ್ರದ ಪರಿಕಲ್ಪನೆಯನ್ನು ನೀಡಿದ್ದಾರೆ. ವೆನಿಲಾ ಪಂಚ್ ಹಾಗೂ ಅಡಿಕೆ ಪಂಚ್ ಎಂಬ ಇವರ ಹೊಸ ಆವಿಷ್ಕಾರ ಕಳ್ಳ ಕಾಕರರಿಂದ ರೈತರನ್ನು ಕಾಪಾಡುವ ಕೀಲಿ ಕೈ ಎಂದೆ ಹೇಳಬಹುದು. ಧಾರವಾಡದಲ್ಲಿ 2009-10ರಲ್ಲಿ ನಡೆದ ಕೃಷಿಮೆಳದಲ್ಲಿ ಇವರ ಇತರೆ ಸಂಶೋದನೆಗಳು ಪ್ರಶಂಸೆಯ ಕೇಂದ್ರಬಿಂದುಗಳಾಗಿದ್ದವು. ಡಿಪ್ಲೋಮಾ ಪದವಿದರರಾಗಿರುವ ಇವರು ಕೃಷಿ ಸಂಶೋದನೆಯತ್ತ ಆಸಕ್ತಿ ತೋರಿ ಸುಲಭ ಹಾಗೂ ಸರಳ ವಿದಾನಗಳ ಮೂಲಕ ನೂತನ ಸಂಶೋಧನೆಗಳತ್ತ ದಾಪುಗಾಲು ಹಾಕುತ್ತಿದ್ದಾರೆ. ಇವರ ಸಂಪರ್ಕಕ್ಕಾಗಿ 9845875161ಗೆ ಕರೆಮಾಡಿ ಇತರೆ ಹೆಚ್ಚಿನ ಮಾಹಿತಿ ಪಡೆಯಬಹುದು.

-ಅಚ್ಯುತಕುಮಾರ, ಯಲ್ಲಾಪುರ

3 comments:

Govinda Nelyaru said...

ಇದನ್ನು ಇತ್ತೀಚೆಗೆ ಶ್ರಿ ನಾಗೇಶ ಹೆಗಡೆಯವರು ಅಪರಂಜಿಯಲ್ಲಿ ಬರೆದಿದ್ದಾರೆ. ಬಹಳ ಹಿಂದೆ ಅಡಿಕೆ ಪತ್ರಿಕೆಯಲ್ಲಿ ಬಿಟಿ ನಾರಾಯಣ ಭಟ್ ಈ ವಿಧಾನ ಬಗೆಗೆ ಅನುಭವ ಸಮೇತ ಬರೆದದ್ದು ಓದಿದ ನೆನಪು.

Anonymous said...

ಮೊಟ್ಟೆ ಒಡೆದು ಇಡಬೇಕೆ?

Anonymous said...

ಮೊಟ್ಟೆ ಒಡೆದು ಇಡಬೇಕೆ?

Post a Comment