ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಸಂದರ್ಶನ ಮಾಡುವದೆಂದರೆ ಅದು ಸಾಮಾನ್ಯ ಮಾತಲ್ಲ. ಒಬ್ಬ ವ್ಯಕ್ತಿಯ ಬಗ್ಗೆ ಕೂಲಂಕಷವಾಗಿ ತಿಳಿದುಕೊಂಡು, ಪ್ರಸಿದ್ಧಿ ಹೊಂದಿದ ಆತನ ಜೀವನದ ಅನುಭವಗಳ ಬಗ್ಗೆ, ವ್ಯಕ್ತಿತ್ವದ ಬಗ್ಗೆ, ಜೀವನದ ಆಗು-ಹೋಗುಗಳ ಬಗ್ಗೆ, ಅವರ ಜೊತೆ ಮುಖಾ-ಮುಖಿಯಾಗಿ ಸಮಾಲೋಚಿಸಿ ವ್ಯಕ್ತಿಯ ವ್ಯಕ್ತಿತ್ವಕ್ಕೆ ಬರವಣಿಗೆಯ ಮೂಲಕ ಒಂದು ಮೆರುಗು ನೀಡಿ ಅವರ ಜೀವನದಲ್ಲಾಗಿರುವ ಬದಲಾವಣೆ, ಬೆಳವಣಿಗೆಗಳ ಬಗ್ಗೆ ಓದುಗರಿಗೆ ದರ್ಶನ ಮಾಡಿಸುವುದು ಒಂದು ಸುಲಭದ ಮಾತಲ್ಲ...ಸಂದರ್ಶನ ಎಂಬುದು ಒಂದು ಕಲೆ.ನಮ್ಮ ಗುರುಗಳಾದ ಸುಭಾಷ ಬಣಗಾರ್ ಪ್ರಕಟಿಸಿರುವ ಶೈಕ್ಷಣಿಕ ವಿಷಯಗಳ ಪ್ರಶ್ನೋತ್ತರ ಸರಮಾಲೆಯ ಈ ಸಂಭಾಷಣೆ ಪುಸ್ತಕ ನನ್ನ ಮೇಲೆ ಪ್ರಭಾವ ಬೀರಿತು. ಸಂದರ್ಶನ ಮಾಡಲು ನನಗೆ ಅಭಿಲಾಷೆ ಮೂಡುವಂತೆ ಇದು ಪ್ರೇರಣೆಯಾಯಿತು. ಯಾರಾದರೊಬ್ಬರನ್ನು ಸಂದರ್ಶಿಸಬೇಕೆಂದು ನನ್ನ ಮನಸ್ಸಿನ ಅಂತರಾಳದಲ್ಲಿ ಆಸೆ ಚಿಗುರೊಡೆಯ ತೊಡಗಿತು.

ಆದರೆ ಯಾರನ್ನು ಆಯ್ಕೆ ಮಾಡುವದು? ಪ್ರಸಿದ್ಧ ವ್ಯಕ್ತಿಗಳನ್ನು ಹೇಗೆ ಸಂದರ್ಶಿಸಬೇಕು? ಯಾವ ಪ್ರಶ್ನೆಗಳನ್ನು ಕೇಳಬೇಕು? ಎನ್ನುವ ಆತಂಕ, ಭಯ ಮನಸ್ಸಿನಲ್ಲಿ ಮೂಡಿತು. ಆಗ ನನಗೆ ಒಂದು ಆಲೋಚನೆ ಹೊಳೆಯಿತು. ನಾನು ಆಯ್ಕೆ ಮಾಡಿಕೊಂಡದ್ದು ಬೆರೆ ಯಾರನ್ನೂ ಅಲ್ಲ, ಬಹುಮುಖ ವ್ಯಕ್ತಿತ್ವದ, ಸರಳ ಸ್ವಭಾವದ ಪತ್ರಕರ್ತ, ಬಯಲು ಗ್ರಂಥಾಲಯದ ಸಂಸ್ಥಾಪಕ, ಕರ್ನಾಟಕ ಸೇವಾ ಸಿರಿ ಪ್ರಶಸ್ತಿ ಪುರಸ್ಕೃತ ಸುಭಾಷ ಬಣಗಾರ್ ಅವರನ್ನು.

ಅವರು ಒಬ್ಬ ಉತ್ತಮ ಸಂದರ್ಶಕರು. ಪ್ರತಿಭಾವಂತರನ್ನು ಹುಡುಕಿಕೊಂಡು ಹೋಗಿ, ಅಂಥವರ ಜೀವನದ ಸಾಧನೆಗಳ ಬಗ್ಗೆ ಚರ್ಚಿಸಿ, ಶಿಕ್ಷಣ ಕ್ಷೇತ್ರದಲ್ಲಿ ಅವರು ಮಾಡಿರುವ ಕಾರ್ಯಗಳ ಒಂದು ಸ್ತೂಲ ಮಾಹಿತಿಯನ್ನು ನೀಡುವದರೊಂದಿಗೆ ಸಮಾಜದಲ್ಲಿ ಅವರನ್ನು ಗುರುತಿಸುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ನಾನು ಅವರನ್ನು ಸಂದರ್ಶಿಸಿ ಪ್ರಶ್ನೆ ಕೆಳುವಾಗ ಒಂದು ರೀತಿಯ ಹೊಸ ಹೊಸ ಅನುಭವಗಳಾದವು.


ನಾನು ಸಂದರ್ಶಿಸಿದ ವ್ಯಕ್ತಿಯ ಬಗ್ಗೆ ಆನ್ಲೈನ್ ಪತ್ರಿಕೆಯಾದ ಈ-ಕನಸು ಪತ್ರಿಕೆಯಲ್ಲಿ ಕ್ಲಿಕ್ ಆಯಿತು ಬಯಲು ಗ್ರಂಥಾಲಯ ಎಂಬ ಸಂದರ್ಶನಾಧಾರಿತ ಲೇಖನ ಪ್ರಕಟಣೆಗೊಂಡಿತು. ಆಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಏಕೆಂದರೆ ಇದು ನನ್ನ ಜೀವನದಲ್ಲಿ ನಾನು ಮಾಡಿದ ಮೊದಲ ಸಂದರ್ಶನ. ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ತಿಳಿದುಕೊಂಡು ಅವರ ಸಂಪೂರ್ಣ ವಿವರದ ಮಾಹಿತಿಯನ್ನು ಓದುಗರಿಗೆ ನೀಡುವದೆಂದರೆ ಎನೋ ಒಂದು ತರಹ ಉಲ್ಲಾಸ. ಸಮಾಜದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇತರ ಕೆಲಸ ಕಾರ್ಯಗಳಲ್ಲಿ ತೊಡಗುವದರೆಂದರೆ ಸುಮ್ಮನೆ ಅಲ್ಲ.

ಈ ಪ್ರಶ್ನಾರ್ಥಕ ಚಿಹ್ನೆ ಕುಡುಗೋಲು ಇದ್ದಂತೆ. ಹೊಲದಲ್ಲಿ ಬೆಳೆದಿರುವ ಕಸವನ್ನು ಕಿತ್ತು ಹಾಕುತ್ತದೆ. ಅದೇ ರೀತಿ ವ್ಯಕ್ತಿಯ ಮನಸ್ಸಿನ ಅಂತರಾಳದಲ್ಲಿ ಹುದುಗಿರುವ ಶಕ್ತಿಯನ್ನು ಈ ಪ್ರಶ್ನೆಗಳೆಂಬ ಆಯುಧದಿಂದ ಪರಿಚಯಿಸಬಹುದಾಗಿದೆ, ಅವರ ವ್ಯಕ್ತಿತ್ವ ವಿಕಸನಕ್ಕೆ ಇದು ಪೂರಕ. ಬದುಕಿನ ಅಗೋಚರ ಮುಖವನ್ನು ಓದುಗರಿಗೆ ದೊರಕಿಸಿ ಕೊಡುವ ಕಲೆಯೇ ಈ ಸಂದರ್ಶನ. ವ್ಯಕ್ತಿಯ ವ್ಯಕ್ತಿತ್ವದ ಆಂತರಿಕ ಹಾಗು ಬಹಿರಂಗ ಸಂಘರ್ಷದ ಅನಾವರಣ. ಲೋಕಾನುಭವ ಹಾಗು ವಿವಿಧ ನೆಲೆಗಳಿಂದ ರೂಡಿಸಿಕೊಂಡ ಜ್ಞಾನದ ಮೂಲಕ ರೂಪಗೊಂಡ ಪ್ರಶ್ನೆಗಳ ಸರಮಾಲೆಯೇ ಯಶಸ್ವಿ ಸಂದರ್ಶನಕ್ಕೆ ಆಧಾರ.

ವ್ಯಕ್ತಿಯಲ್ಲಿ ಹುದುಗಿರುವ ಭಾವ, ಆಶಯ, ಕೌಶಲ್ಯಗಳನ್ನು ಹೊರ ತೆಗೆದು ಓರೆಗೆ ಹಚ್ಚಿದಂತೆ. ಬರವಣಿಗೆ ಮೂಲಕ ಬಿಂಬಿಸುವದು ಸಂದರ್ಶನದ ತಿರುಳು. ಇದೊಂದು ರೀತಿ ಸವಾಲು ಕೂಡ ಹೌದು, ವ್ಯಕ್ತಿಯ ಭಾವನೆ ಹಾಗು ವ್ಯಕ್ತಿತ್ವಕ್ಕೆ ಧಕ್ಕೆ ಬರದಂತೆ ವ್ಯಕ್ತಿಗತ ಭಾವ ಪ್ರದರ್ಶಿತವಾಗದಂತೆ ಯಥಾವತ್ತಾಗಿ, ಯಥೋಚಿತ ಅಂಶಗಳನ್ನು ತೆರೆದಿಡುವದೇ ಸಂದರ್ಶನ. ವ್ಯಕ್ತಿಯ ಗುಣಲಕ್ಷಣ, ಸಾಮಥ್ರ್ಯ, ಅರ್ಹತೆಗಳನ್ನು ಅಳೆಯಲೆಂದು ಅವರೊಂದಿಗೆ ಮುಖಾ-ಮುಖಿ ಮಾತನಾಡುವದು.

ಯಾವುದಾದರೊಂದು ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿರುವ, ಯಶಸ್ಸು ಗಳಿಸಿರುವ, ಪ್ರಶಸ್ತಿ-ಪುರಸ್ಕಾರಗಳಿಗೆ ಪಾತ್ರವಾಗಿರುವ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳುವ ಉತ್ಸಾಹ ಹಾಗು ಕುತೂಹಲ ಎಲ್ಲ ಓದುಗರಲ್ಲಿ ಇರುತ್ತದೆ. ಈ ವ್ಯಕ್ತಿಗಳು ಬೆಳೆದು ಬಂದ ರೀತಿ, ಅವರು ಅನುಭವಿಸಿದ ಕಷ್ಟ-ಸುಖ, ಅವರಿಗೆ ದೊರಕಿದ ಪ್ರೇರಣೆ, ಅವರ ಹವ್ಯಾಸಗಳು, ಅವರನ್ನು ಕಾಡಿದ ಸಮಸ್ಯೆಗಳು, ಅವರಿಗೆ ದೊರಕಿದ ಮಾರ್ಗದರ್ಶನ. ಇವುಗಳ ಬಗ್ಗೆ ಮಾಹಿತಿ ಪಡೆಯಲು ಓದುಗರು ಕಾತುರರಾಗಿರುತ್ತಾರೆ. ಇವೆಲ್ಲವೂ ಮತ್ತೊಬ್ಬರಿಗೆ ಸಹಾಯಕವಾಗುವದಾದರೆ ಅದೊಂದು ಉತ್ತಮ ಲೇಖನಕ್ಕೆ ಸಾಮಾಗ್ರಿ ಆಗಬಹುದು. ಈ ಪ್ರಮುಖ ವ್ಯಕ್ತಿಗಳನ್ನು ಬೇಟಿ ಮಾಡಿ ಸಂದರ್ಶನ ನಡೆಸಿದರೆ ಬರಹಗಾರರ ಕುಶಲತೆಗೂ ಒಂದು ಅಭಿವ್ಯಕ್ತಿ ದೊರೆಯಬಹುದು.

ಅಮರೇಶ ನಾಯಕ ಜಾಲಹಳ್ಳಿ
ಪ್ರತಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಗುಲಬರ್ಗಾ ವಿಶ್ವವಿದ್ಯಾಲಯ ಗುಲಬರ್ಗಾ

4 comments:

Unknown said...

hi brother
totendra s makal

Sardar Rayappa said...

Sandarshana Ondu Kale, Article tumba channagide,vyaktiya vyaktitva vikasanakke idu naandi. Barahagararige Vedike odagisiruvadakke nimage dayavadagalu. dear Amaresh Nayak heege bareyutiri,
Saradar Rayappa.
Gulbarga.

Amaresh Nayak said...

Thank you editor sir,
my Articles was pulished your e-kanasu.com website. This is fist stage of writting. so I am very happy. I will try writting Articles.
From Amaresh Nayak Jalahalli.

sandarshana ondu kale said...

The interview an art this is very meaningful wrting, and how to interview in a particular personality and what are the major point are taken should be included, i have to use this, thank Amaresh nayak and also publish the ekanasu, thak you one and all.

Post a Comment