ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಭಾರತ ಸಂಸ್ಕೃತಿಯನ್ನು ವಿದೇಶಿಯರು ಅನುಕರಣೆ ಮಾಡುತ್ತಿದ್ದರೆ, ನಮ್ಮ ಭಾರತಿಯರು ವಿದೇಶೀ ಸಂಸ್ಕೃತಿಗೆ ಮಾರುಹೋಗುತ್ತಿದ್ದಾರೆ.
ಯುವ ಶಕ್ತಿ ಹೊಂದಿರುವ ದೇಶ ನಮ್ಮದು. ದುರಂತವೆಂದರೆ ಈ ಯುವಶಕ್ತಿ ಇಂದು ನಮ್ಮ ಸಂಸ್ಕೃತಿಯನ್ನು ಮರೆತು ಪಾಶ್ಚಾತ್ಯ ಸಂಸ್ಕೃತಿಯ ದಾಸರಾಗುತ್ತಿದ್ದಾರೆ. ರಾಜ-ಮಹಾರಾಜರ ಕಾಲದಲ್ಲಿ ನಲಂದಾ ಮತ್ತು ಮದರಸಾ ಎಂಬ ವಿಶ್ವವಿದ್ಯಾಲಯದಲ್ಲಿ ವಿಶ್ವದ ನಾನಾದೇಶದ ಜನರು ಬಂದು ಕಲಿಯುತ್ತಿದ್ದರು. ಅದರಲ್ಲಿ ನಲಂದಾ ವಿಶ್ವವಿದ್ಯಾಲಯದಲ್ಲಿ ಸುಮಾರು ಹತ್ತು ಸಾವಿರ ವಿಧ್ಯಾರ್ಥಿಗಳು ದೇಶ-ವಿದೇಶದಿಂದ ಬಂದು ವಿದ್ಯಾಭ್ಯಾಸ ಕೈಗೊಳ್ಳುತ್ತಿದ್ದರು.ಆದರೆ ಇಂದಿನ ನಮ್ಮ ಭಾರತದ ಯುವಕರು ಮನಸ್ಸಿನಲ್ಲಿ ವಿದೇಶಿ ಯುನಿವರ್ಸಿಟಿಗಳಲ್ಲಿ ಕಲಿತರೆ ಮಾತ್ರ ಮಾನ್ಯತೆ, ಉದ್ಯೋಗ ಎಂಬ ಮನೋಭಾವ ಬೇರೂರಿ ಹೋಗಿದೆ. ಭಾರತದಲ್ಲಿ ಬೆಳೆದು ಕಲಿತು ವಿದೇಶದಲ್ಲಿ ಸೇವೆ ನೀಡುವ ಪ್ರವೃತ್ತಿ ಇಂದಿನ ಭಾರತೀಯ ಯುವ ಮನಸ್ಸುಗಳದ್ದು ಎಂದರೆ ಎಂತಹ ಶೋಚನೀಯ!

ವಿದೇಶಿಯರು ನಮ್ಮ ಭಾರತದಲ್ಲಿ ಬಂಡವಾಳ ಹೂಡಲು ಹಾತೊರೆಯುತ್ತಿದ್ದಾರೆ, ನಮ್ಮವರು ವಿದೇಶೀ ನೆಲದಲ್ಲಿ ಬಂಡವಾಳ ಹೂಡುತ್ತಿದ್ದಾರೆ.
ನಮ್ಮ ದೇಶದ ಸಂಸ್ಕೃತಿಯನ್ನು ಬೆಳೆಸಲು ಅನುಕರಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಏಕೆಂದರೆ ನಮ್ಮ ಸಂಸ್ಕೃತಿಯ ಬಗ್ಗೆ ನಮ್ಮವರಿಗಿರುವ ಕೀಳರಿಮೆ. ಅತಿ ಉನ್ನತವಾದ ನಮ್ಮ ಸಂಸ್ಕೃತಿಯನ್ನು ನಾವಿಂದು ಮೆಟ್ಟಿ ನಿಲ್ಲುತ್ತಿರುವುದು ವಿಷಾಧನೀಯ.

ಕೇವಲ ಹೆಚ್ಚು ಸಂಬಳ ಸಿಗುತ್ತದೆ ಎಂಬ ಕಾರಣದಿಂದ ನಮ್ಮ ದೇಶವನ್ನು ಬಿಟ್ಟು ವಿದೇಶಗಳತ್ತ ಆಕರ್ಷಿತರಾಗುತ್ತಿರುವುದು ಸಾಮಾನ್ಯವಾಗಿದೆ . ಆಮೇರಿಕಾದಲ್ಲಿ 30 ಪ್ರತಿಶತ ಡಾಕ್ಟರಗಳು, ಇಂಜಿನಿಯರಗಳು ಭಾರತಿಯರಾಗಿದ್ದಾರೆ. ಅವರು ಕಲಿತ್ತಿದ್ದು ಇಲ್ಲಿ ಅದರೆ ಇಲ್ಲಿನ ಜನರ ಸೇವೆ ಮಾಡಬೇಕೆಂಬ ಮನೋಭಾವ ದುರದೃಷ್ಟವಶಾತ್ ಬೆಳೆಯುತ್ತಿಲ್ಲ . ಇವತ್ತಿನ ದಿನಗಳಲ್ಲಿ ಹಣಗಳಿಸುವುದೇ ಒಂದು ಪಾಮುಖ್ಯವಾಗಿಟ್ಟುಕೋಂಡು ಕೆಲಸ ಮಾಡುತ್ತಿದ್ದಾರೆ. ಮಕ್ಕಳ ಮನಸ್ಸಿನಲ್ಲಿ ದೇಶಪ್ರೇಮ ದೇಶಭಕ್ತಿ ಬೆಳೆಸುವ ಮಹತ್ತರ ಜವಾಬ್ದಾರಿ ಹೆತ್ತವರದ್ದು ಹಾಗೂ ಶಿಕ್ಷಕರದ್ದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯನೂ ಚಿಂತಿಸಲಿ.ದೇಶದ ಸಂಪತ್ತು ದೇಶದಲ್ಲೇ ವಿನಿಯೋಗವಾಗಲಿ.

ಮಂಜುನಾಥ.ವಿ.ಸ್ವಾಮಿ
ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗ
ಗುಲಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ

3 comments:

shivu said...

congrates, manjunath v swamy...........

andanukaraniyalli baratiyaru....
tumba sogasagi lekhanavannu barediddiri.
deshad yuvakarigagi uttam margadarshn. egaladaru baratad sampanmulagalannu balasikondu abiruddi patadatta sagona.
jai bharath....

From,
Shivraj.v.marchatal
FUTERE JOURNALIST
Raichur

Amaresh Nayak said...

Mr.Manjunath.V.Swamy Your Article is Fine,
Keep it up.
Amaresh Nayak
Journalism & Mass Communication.
GUG.

Mallikarjun D Apachand said...

Very nice Article yaaar...

Post a Comment