ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಈ ಪ್ರಶ್ನೆ ಶಿಕ್ಷಣ ಸಚಿವರಿಗೆ ಕೇಳಬೇಕಾ? ಸರ್ಕಾರಿ ಶಾಲಾ ಶಿಕ್ಷಕರಿಗೆ ಕೇಳಬೇಕಾ? ಖಾಸಗಿ ಶಾಲಾ ಶಿಕ್ಷಕರಿಗೆ ಕೇಳಬೇಕಾ? ಈ ಪ್ರಶ್ನೆಯು ಕೇಳಬೇಕಾದ್ದು, ಮೊದಲು ಪಾಲಕರನ್ನು/ಪೋಷಕರನ್ನು. ಏಕೆಂದರೆ, ತಮ್ಮ ಮಕ್ಕಳನ್ನು ಯಾವ ಶಾಲೆಗೆ ಕಳುಹಿಸಬೇಕೆನ್ನುವುದು, ಅವರೇ ನಿರ್ಧಾರ ಮಾಡುವವರಲ್ಲವೇ. ಇತ್ತಿಚಿನ ದಿನಗಳಲ್ಲಿ ಸರಕಾರಿ ಶಾಲೆಗಳು ಮುಚ್ಚುತ್ತಿರುವ ಕುರಿತು ಹಲವಾರು ಲೇಖನಗಳು ಪ್ರಕಟವಾಗಿವೆ. ಆದರೆ, ಏಕೆ ಮುಚ್ಚುತ್ತಿವೆ ಎಂಬ ಪ್ರಶ್ನೆ ಯಾರ ತಲೆಯಲ್ಲಿ ಇಲ್ಲ ಅನಿಸುತ್ತೆ. ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದರಿಂದ, ಇಂಥಹ ಪರಿಸ್ಥಿತಿ ಉದ್ಭವವಾಗಿರುವುದು ನಿಜ.


ಸರಕಾರದ ಪರವಾಗಿ ಹೇಳುತ್ತಿಲ್ಲ. ಆದರೆ, ಸರಕಾರಿ ಶಾಲೆಗಳೆಂದರೆ, ಪಾಲಕರು ಏಕೆ ದೂರವಾಗುತ್ತಿದ್ದಾರೆ. ಸರಕಾರಿ ಶಾಲಾ ಶಿಕ್ಷಕರ ಬೋಧನೆಯಲ್ಲಿ ಕೊರತೆಯೇ? ಎಂಬ ಪ್ರಶ್ನೆ ಸಹಜವಾಗಿ ಬರುತ್ತದೆ. ಸರಕಾರಿ ಶಾಲೆಗಳು ಹೆಸರಿಗೆ ಮಾತ್ರವೆಂಬ ಭಾವನೆಯಲ್ಲಿ ಮುಳುಗಿದ್ದಾರೆ. ಖಾಸಗಿ ಶಾಲೆಗಳತ್ತ ಪಾಲಕರು ಏಕೆ ವಾಲುತ್ತಿದ್ದಾರೆ ಎಂಬುದು ತಿಳಿಯಬೇಕಾಗಿದೆ. ಇದಕ್ಕೆ ಸರಕಾರವೇ ಕಾರಣ ಹುಡುಕಬೇಕಾಗಿದೆ.

ಪಾಲಕರಿಗೆ ಇದು ತಿಳಿಯದೇನೋ? ಸರಕಾರಿ ಶಾಲಾ ಶಿಕ್ಷರಿಗೂ ಮತ್ತು ಖಾಸಗಿ ಶಾಲಾ ಶಿಕ್ಷರಿಗೂ ಇರುವ ವ್ಯತ್ಯಾಸ. ಒಬ್ಬ ವ್ಯಕ್ತಿ ಸರಕಾರಿ ಶಾಲಾ ಶಿಕ್ಷಕ ಹುದ್ದೆ ಪಡೆಯಬೇಕಾದರೆ, ಎಷ್ಟೆಲ್ಲಾ ಕಷ್ಟ ಪಟ್ಟಿರಬಹುದೆಂದು ಪಾಲಕರು ಗಮನಿಸಬೇಕು. ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಅತಿ ಹೆಚ್ಚು ಅಂಕ ಪಡೆದು ಆಯ್ಕೆಯಾಗಿರುತ್ತಾರೆ. ಅವರ ಬೋಧನೆಯಲ್ಲಿ ಕೊರೆತೆಯೇ? ಖಾಸಗಿ ಶಾಲಾ ಶಿಕ್ಷಕ ಸ್ಪರ್ಥಾತ್ಮಕ ಪರೀಕ್ಷೆಯಲ್ಲಿ ಸಫಲರಾಗದೆ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಹುಡುಕುತ್ತಾ ಅಲೆದಾಡುತ್ತಾರೆ.

ಹಲವು ಖಾಸಗಿ ಶಿಕ್ಷಣ ಸಂಸ್ಥೆಯವರು ಸರಕಾರಿ ನೇಮಕಾತಿ ಪರೀಕ್ಷೆಯಲ್ಲಿ ತೇರ್ಗಡೆಯಾಗದ ಆಕಾಂಕ್ಷಿಗಳನ್ನು ಭರ್ತಿಮಾಡಿಕೊಂಡು, ಕೆಲವೇ ವರ್ಷಗಳಲ್ಲಿ ಪಾಲಕರನ್ನು ತಮ್ಮ ಶಾಲೆಗಳತ್ತ ಗಮನ ಹರಿಸುವಂತೆ ಮಾಡುತ್ತಾರೆ. ಇದಕ್ಕೆ ಕಾರಣ, ಅಲ್ಲಿಯ ಬೋಧನೆಯಾ? ಅಥವಾ ಆಡಳಿತ ವ್ಯವಸ್ಥೆಯ ನಿಯಮಗಳಾ? ಸರಕಾರಿ ಶಾಲಾ ಶಿಕ್ಷಕರು ನಿಯಮಗಳನ್ನು ಗಾಳಿಗೆ ತೂರುತ್ತಾರಂತೆ ಹೇಳುತ್ತಿಲ್ಲ. ಆದರೆ, ಪಾಲಕರನ್ನು ಸರಕಾರಿ ಶಾಲೆಗಳತ್ತ ಗಮನ ಹರಿಸುವಂತೆ ಮಾಡುವಲ್ಲಿ ಸರಕಾರಿ ಶಾಲಾ ಶಿಕ್ಷರು ವಿಫವಾಗುತ್ತಿರುವುದು ಸ್ಪಷ್ಟವಾಗಿ ತಿಳಿದು ಬರುತ್ತದೆ.

ಖಾಸಗಿ ಶಾಲಾ ಶಿಕ್ಷಕನು ಸರಕಾರಿ ಶಿಕ್ಷಕನಾಗಿ ನೇಮಕಗೊಂಡಾಗ, ಅದೇ ಬೋಧನೆ ಮಾಡುತ್ತಾನಲ್ಲವೇ? ಖಾಸಗಿ ಸಂಸ್ಥೆಯಲ್ಲಿ ಅವನಿಗೆ ಭಯವಿರುತ್ತದೆ. ಏನಾದರೂ ತಪ್ಪಾದರೆ ಕೆಲಸ ಕಳೆದುಕೊಳ್ಳಬೇಕಾಗುತ್ತೆ ಎಂಬ ಭಯ. ಆದರೆ, ಸರಕಾರಿ ಹುದ್ದೆಯಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂಬ ಬಾವನೆ. ಸರಕಾರಿ ಶಿಕ್ಷಕರಿಗೆ ಕೇಳಿದರೆ, ಮಕ್ಕಳನ್ನು ದಂಡಿಸಿದರೆ, ಪಾಲಕರು ಬಂದು ರಂಪಾಟ ಮಾಡುತ್ತಾರೆ. ಪೋಲಿಸು-ಕೇಸು ಎಂದು ಜಗಳವಾಡುತ್ತಾರೆ ಎಂಬ ದೂರು. ಪಾಲಕರು ಸಹ ಶಿಕ್ಷಕರ ಮೇಲೆ, ಪಾಠ ಚೆನ್ನಾಗಿ ಮಾಡುವುದಿಲ್ಲ, ನಮ್ಮ ಹೆಣ್ಣು ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ ಎಂದು ದೂರುತ್ತಾರೆ. ಒಟ್ಟಿನಲ್ಲಿ ಶಿಕ್ಷಕ-ಪಾಲಕರ ನಡುವೆ ಮಕ್ಕಳು-ಸರಕಾರ ಮೂಕ ಪ್ರೇಕ್ಷಕರಂತೆ ನೋಡಬೇಕಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೊಟಿಯಲ್ಲಿ ಸರಕಾರಿ ಶಾಲೆಗಳು ಮುಂಚುವಂತಾಗಿವೆ. ಸರಕಾರ ಎರಡು ಸಾವಿರಕ್ಕೂ ಹೆಚ್ಚು ಶಾಲೆಗಳು ಮುಚ್ಚಲು ಆದೇಶ ಸಹ ಹೊರಡಿಸಿದೆ.

ನಮ್ಮ ದೇಶದ ಮಹಾತ್ಮ ಗಾಂಧಿ, ಸರ್ ಎಂ. ವಿಶ್ವೇಶ್ವರಯ್ಯ, ಸ್ವಾಮಿ ವಿವೇಕಾನಂದ ಮತ್ತು ಇತರ ಮಹಾನ್ ವ್ಯಕ್ತಿಗಳು ಇದೇ ಸರಕಾರಿ ಶಾಲೆಗಳಲ್ಲಿ ಓದಿದ್ದಾರೆ ಎಂದು ನಾವು ನೆನಪಿಸಿಕೊಳ್ಳುತ್ತಿರಬೇಕು. ಸರಕಾರಿ ಶಾಲೆಗಳನ್ನೂ ಕಡೆಗಣಿಸಬಾರದು.
ಸರಕಾರಿ-ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೊಟಿಯಲ್ಲಿ ಭ್ರಷ್ಟಾಚಾರ ಇಣುಕು ಹಾಕುತ್ತಿದೆ ಎಂದರೆ ಆಶ್ಚರ್ಯವಿಲ್ಲ.


ಸರಕಾರ ಇದರ ಬಗ್ಗೆ ಗಂಭೀರವಾಗಿ ಯೋಚನೆ ಮಾಡಬೇಕು. ಖಾಸಗಿ ಶಿಕ್ಷಣ ಸಂಸ್ಥೆಯ ಮತ್ತು ಸರಕಾರಿ ಶಿಕ್ಷಣದ ಗುಣಮಟ್ಟವನ್ನು ಪರಿಶೀಲಿಸಬೇಕಾಗಿದೆ. ಇನ್ನೂ ಪಾಲಕರು ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಕರು ಇದ್ದಾರೆಂಬುದನ್ನು ಮರೆಯುವಂತಿಲ್ಲ.ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಕೋಟಿಗಟ್ಟಲೆ ಹಣ ವ್ಯಯ ಮಾಡುತ್ತಿದೆ. ಅದರ ಸದುಪಯೋಗ ಪಡೆಯಬೇಕಾಗಿದೆ. ಇದರಲ್ಲಿ ಅವರು ಪರಿಣಿತರು, ಇವರು ಪರಿಣಿತರಲ್ಲ ಎಂದು ತುಲನೆ ಮಾಡುವುದು ಸರಿಯಲ್ಲ.

- ಮಲ್ಲಿಕಾರ್ಜುನ ಕುಸನೂರ,
ಪತ್ರಿಕೋದ್ಯಮ ವಿಭಾಗ,
ಗುಲಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ

3 comments:

Amaresh Nayak said...

Dear friend,
Your Article is very super, This is awareness for ferents & Government. all the best, once again congrates
Amaresh Nayak Jalahalli.

ashok said...

frined super article

ashok said...

frined super article

Post a Comment