ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

(ಇದು ನನ್ನ ನೈಜ ಪ್ರೇಮ ಕಥೆ)

ನನ್ನ ಪ್ರೀತಿಯ ಹುಡುಗಿಯ ಹೃದಯವನ್ನು ಗೆಲ್ಲುವ ಸಲುವಾಗಿ ನಾನು ಓದಲು ಪ್ರಾರಂಭಿಸಿದವನು. ಅವಳೇನಾದರು ನನ್ನ ಹೃದಯದಲ್ಲಿ ಬರದೇ ಹೋಗಿದ್ದರೆ ನಾನು ಇಂದು ಪತ್ರಿಕೋದ್ಯಮ ವಿದ್ಯಾರ್ಥಿ ಆಗುತ್ತಿರಲಿಲ್ಲ. ಸ್ನೇಹಿತರೆ ನಾನಂತೂ ಅಷ್ಟೆನೂ ಓದಿನಲ್ಲಿ ಜಾಣನಲ್ಲ ಅಲ್ಪ ಸ್ವಲ್ಪ ಓದಲು ಬರೆಯಲು ಮಾತ್ರ ನನಗೆ ಬರುತಿತ್ತು, ಸುಮ್ಮನೆ ತಂದೆ ತಾಯಿ ಹೊಡೆಯುತ್ತಾರಂತೆ ಶಾಲೆಗೆ ಹೋಗುತ್ತದ್ದೆ ವಿನ: ನಾನು ಓದಿ ಒಬ್ಬ ಒಳ್ಳೆಯ ವ್ಯಕ್ತಿಯಾಗುವ ಕನಸಂತೂ ನಾನು ಕಂಡವನಲ್ಲ ಯಾವದೋ ಒಂದು ಕುಟಿಲ ತಂತ್ರ ಉಪಯೋಗಿಸಿ ಕಾಪಿ....(ನಕಲು) ಮಾಡಿ ನಾನು ಎಸ್. ಎಸ್. ಎಲ್. ಸಿ ಉತ್ತಿರ್ಣ ನಾದೆ .ನಂತರ ಕಾಟಾಚಾರಕ್ಕೆ ಎಲ್ಲರೂ ಕಾಲೇಜಿಗೆ ಹೋಗುತ್ತಾರೆ ಎಂದು ನಾನು ಕಾಲೇಜಿಗೆ ಹೋಗುತಿದ್ದೆ.ಕೇವಲ ನೂರೈವತ್ತು ರೂ. ಕೊಟ್ಟು ಯಾದಗಿರಿಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನನ್ನ ಹೆಸರು ನೊಂದಾಯಿಸಿದೆ ಕಾಲೇಜಿಗೆ ಪ್ರವೇಶ ಪಡೆದುಕೊಂಡೆ .ಯಾದಗಿರಿ ನಮ್ಮೂರಿನಿಂದ 19 ಕಿ.ಮೀ ದೂರದ ಜಿಲ್ಲಾ ಕೇಂದ್ರವಾಗಿತ್ತು,


ನನ್ನ ತಾಯಿ ನನ್ನ ಮೇಲೆ ಬಹಳ ಪ್ರೀತಿ ಉಳ್ಳವಳು. ಅಪ್ಪನಿಗೆ ಗೊತ್ತಾಗದಂತೆ ನನಗೆ ದಿನಾಲು 30 ರೂ. ಕೊಡುತಿದ್ದಳು. ನಾನು ನಸುಕಿನ ಆರು ಗಂಟೆಗೆ ಎದ್ದು ಸ್ನಾನ ಮುಗಿಸಿ ತಿಂಡಿ ತಿಂದು ಬಸ್ಸು ಹತ್ತಿ ಕಾಲೇಜಿಗೆ ಹೋಗುತ್ತಿದ್ದೆ.ಒಂದು ದಿನ ನಮ್ಮ ಪದವಿ ಕಾಲೇಜಿನ ಕಾರಿಡಾರ್ನಲ್ಲಿ ಗುಲಾಬಿ ಗಲ್ಲದ ಚೆಲುವೆ ನನ್ನ ಕಡೆ ನೋಡುತ್ತಾ ಮುಗುಳ್ನಗುತ್ತಿದ್ದಳು, ಯಾಕೆ ಅಂತ ಅವಳಿಗೆ ನಾನು ಕೇಳಲಿಲ್ಲ ಸುಮ್ಮನೆ ತಲೆ ಬಾಗಿಸಿ ಮುಂದೆ ಹೋದೆ ಮರುದಿನ ಮತ್ತೆ ಪ್ರತ್ಯಕ್ಷಳಾದಳು ನನಗೆ ನೋಡಿದ ತಕ್ಷಣವೆ ಬಾಯಿಯಲ್ಲಿ ಬೆರಳಿಟ್ಟು ಉಗುರು ಕಡಿಯಲು ಶುರುಮಾಡಿದಳು ಕೆಲವೊಮ್ಮೆ ನನ್ನ ಕಡೆ ತಿರುಗಿ ನಗತ್ತಿದ್ದಳು ಹೀಗೆ ದಿನಾಲೂ ನಗುವುದನ್ನು ಅವಳು ಅಭ್ಯಾಸ ಮಾಡಿಕೊಂಡಳು ಇವಳ ವರ್ತನೆ ನನ್ನ ಆತ್ಮೀಯ ಸ್ನೇಹಿತ ಮಾದೇವನ ಮುಂದೆ ಹೇಳಿದಾಗ ಗೆಳೆಯ ನನಗೆ ಹೇಳಿದ ಒಂದು ಹುಡುಗಿ ನಿನಗೆ ನಗಬೇಕಾದರೆ ನಿನ್ನ ಮೇಲಿನ ಪ್ರೀತಿ ಇದ್ದರೆ ಮಾತ್ರ ನಗಲು ಸಾಧ್ಯ ಎಂದು ಹೇಳಿದ.

ನಾನು ಎಂದಿಗೂ ಸಹ ಅವಳಿಗೆ ಮಾತನಾಡಿಸುವ ಧೈರ್ಯ ಮಾಡಲಿಲ್ಲ, ಮಾತುಕತೆ ಇಲ್ಲದೆ ನಮ್ಮಿಬ್ಬರ ನಡುವೆ ಪ್ರೇಮರೋಗ ಶುರುವಾಯ್ತು. ನಾನು ಅವಳಿಗಾಗಿ ನನ್ನ ಹೃದಯದಲ್ಲಿ ಒಂದು ಪುಟ್ಟ ಜಾಗ ಮೀಸಲಿಟ್ಟಿದ್ದೆ. ದಿನಾಲೂ ಅವಳದೇ ನೆನಪು ಆ ಚೆಲುವೆಯನ್ನು ನೋಡುವ ಸಲುವಾಗಿಯೇ ನಾನು ಕಾಲೇಜಿಗೆ ಹೋಗುತ್ತಿದ್ದೆ. ಒಂದು ದಿನ ಹುಣ್ಣಿಮೆಯ ಚಂದಿರನನ್ನು ನೋಡುತ್ತಾ ನಮ್ಮ ಮನೆಯ ಮಾಳಿಗೆಯ ಮೇಲೆ ಮಲಗಿಕೊಂಡಾಗ ಆ ಹುಣ್ಣಿಮೆಯ ಚಂದ್ರನಲ್ಲಿಯೂ ಅವಳದೇ ಪ್ರತಿಬಿಂಬ ಕಾಣುತ್ತಿತ್ತು, ಆ ಚೆಲುವೆಗೆ ನಾನು ಪ್ರೀತಿ ಮಾಡುವ ವಿಷಯ ಯಾವ ರೀತಿ ಹೇಳಬೇಕು ಎಂದು ಯೋಚಿಸುತ್ತ ಮಲಗಿದಾಗ ಒಂದು ಉಪಾಯ ಹೊಳೆಯಿತು, ಅವಳನ್ನು ಪಡೆಯಬೆಕಾದರೆ ನಾನು ಓದಿ ದೊಡ್ಡ ವ್ಯಕ್ತಿ ಆದರೆ ಮಾತ್ರ ಅವಳನ್ನು ನಾನು ಪಡೆಯಲು ಸಾಧ್ಯ ಎಂದು ನನಗೆ ಗೊತ್ತಾಯಿತು ಅಂದೆ ನಾನು ತೀರ್ಮಾನಿಸಿದೆ.

ಇಬ್ಬರೂ ಮಾತನಾಡದೆ ಮೂರು ವರ್ಷಗಳ ಕಾಲ ಪದವಿಯನ್ನು ಅಧ್ಯಯನ ಮಾಡಿ ಹೆಚ್ಚಿನ ಅಂಕ ಗಳಿಸಿ ಇಬ್ಬರ( ಬಿ.ಎ)ಪದವಿಯನ್ನು ಮುಗಿಸಿದೆವು. ನನಗೆ ಪತ್ರಕರ್ತನಾಗುವ ಆಸೆ ಅವಳಿಗೆ ವಕೀಲಳಾಗುವ ಆಸೆ ನನ್ನ ಇಚ್ಛೆಯಂತೆ ನಾನು ಗುಲಬರ್ಗಾ .ವಿ.ವಿ ಯಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರವೇಶ ಪಡೆದುಕೊಂಡೆ ಅವಳು ಎಸ್. ಎಸ್. ಎಲ್ ಕಾನೂನು ಮಹಾವಿದ್ಯಾಲಯದಲ್ಲಿ ಪ್ರವೇಶ ಪಡೆದುಕೊಂಡಿದ್ದಾಳೆ, ಪ್ರೀತಿಯ ಸ್ನೇಹಿತರೆ ಇಲ್ಲಿಯವರೆಗೂ ನಾನು ನನ್ನ ಪ್ರೀತಿಯ ಗೆಳತಿಯ ಜೊತೆ ಒಂದು ದಿನವೂ ಮಾತನಾಡಿಲ್ಲ ಯಾಕೆ ಗೊತ್ತಾ? ನಾನು ಒಂದಲ್ಲ ಒಂದು ದಿನ ಒಳ್ಳೆಯ ಪತ್ರಕರ್ತನಾಗುವ ತನಕ ನಾನು ಅವಳ ಜೊತೆ ಮಾತನಡುವದಿಲ್ಲ ಎಂದು ನಾನು ತೀರ್ಮಾನಿಸದ್ದೇನೆ. ಓ....ನನ್ನ ನಲ್ಲೆ... ನೀ ಎಲ್ಲೇ... ಇದ್ದರೂ ನಾನು ನಿನಗಾಗಿ ಕಾಯುವೆ, ಈ ನನ್ನ ಓದಿಗೆ ನೀನೆ ಕಾರಣ ನನಗೇನಾದರೂ ಪ್ರಶಂಸೆಗಳು ಬಂದರೂ ಅದಕ್ಕೆ ಕಾರಣ ನೀನೆ ಕಣೆ...


ತೋಟೇಂದ್ರ ಎಸ್.ಮಾಕಲ

4 comments:

shivu said...

ninage sprutiyada a ninna rani mundondu dina siguttale all the best....

shivraj.v marchatal
futere journalist
raichur

Harisha - ಹರೀಶ said...

:-)

pushpabishek said...

nim preeti sucsess aagali. nimma aa chalakke hands of.

Anonymous said...

ninna kanasu nanasagali endu haraisuttene.

Rajkumar M dannur
central university gulbarga

Post a Comment