ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:32 PM

ಮೌನವೇಕೆ...?

Posted by ekanasu

ಈ ಕನಸು ಅವಾರ್ಡ್

ನಾನು ಪ್ರಥಮ ವರ್ಷ ಪತ್ರಿಕೋದ್ಯಮ ವಿಭಾಗಕ್ಕೆ ಪಾದಾರ್ಪಣೆ ಮಾಡಿದಾಗ ನಮ್ಮ ವಿಭಾಗದಲ್ಲಿ, ವಿದ್ಯಾರ್ಥಿನಿಯರ ಕೊರತೆ ಇತ್ತು. ನಾವು ಒಟ್ಟು ಇಪ್ಪತ್ತಾರು ಜನ ವಿದ್ಯಾರ್ಥಿಗಳು. ಅದರಲ್ಲಿ ಇಬ್ಬರು ಮಾತ್ರ ವಿದ್ಯಾರ್ಥಿನಿಯರು. ಅವರಲ್ಲಿ ಒಬ್ಬಳಿಗೆ ಪ್ರಥಮ ಸೆಮಿಸ್ಟರ್ ಮುಗಿದ ತಕ್ಷಣವೇ ಮದುವೆಯಾಗಿ ದೂರದ ಆಪ್ರೀಕಾ ದೇಶಕ್ಕೆ ಹೋದಳು. ನಮ್ಮ ವಿಭಾಗದಲ್ಲಿ ಉಳಿದವಳು ನಮ್ಮ ಪ್ರೀತಿಯ ಅಕ್ಕ-"ಸುಧಾರಾಣಿ" ಇವಳಿಗೆ ನಾವು ಕೆಲವು ಸಲ "ಮೌನದರಾಣಿ" ಎಂದು ಕರೆಯುತ್ತಿದ್ದುದುಂಟು.ಹುಡಿಗಿಯರಿಲ್ಲದ ಕ್ಲಾಸ್ ರೂಂಗೆ ಬರಲು ನಮ್ಮ ಗೆಳೆಯರು ಹಿಂಜರಿಯುತಿದ್ದರು. ಅದ್ಯಾಕೋ ಗೊತ್ತಿಲ್ಲ ಅದರಲ್ಲಿ ನನ್ನ ಕೆಲವು ಗೆಳೆಯರು ಬೇರೆ ವಿಭಾಗಕ್ಕೆ ಹೋಗಲು ಪ್ರಾರಂಭಿಸಿದರು. ಹೀಗೆ ಅಲ್ಲಿಯ ವಿದ್ಯಾರ್ಥಿನಿಯರ ಜೊತೆ ಸಲುಗೆಯಿಂದ ಮಾತನಾಡಲು ಶುರುಮಾಡಿದರು. ಎಷ್ಟೋಸಲ ನಾನು ನನ್ನ ಗೆಳೆಯರು ಒಟ್ಟಾಗಿ ಚರ್ಚಿಸಿ ನಮ್ಮ ವಿಭಾಗಕ್ಕೆ ಮುಂದಿನ ವರ್ಷದಿಂದ ವಿದ್ಯಾರ್ಥಿನಿಯರನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರವೇಶ ನೀಡುವಂತೆ ಕೋರಿ ನಮ್ಮ ವಿಭಾಗದ ಮುಖ್ಯಸ್ಥರಲ್ಲಿ ಮನವಿ ಮಾಡಿಕೊಂಡೆವು.

ನಮ್ಮ ಮಾತುಗಳನ್ನು ಕೇಳಿದ ಉಪನ್ಯಾಸಕರು ನಗುತ್ತಿದ್ದರು. ಅವರ ನಗು ನಮಗೆ ಕೆಲವು ಸಲ ಕೋಪ ತರಿಸಿದೆ.ಗೆಳೆಯರೆ ಹೀಗೆ ಒಂದು ವರ್ಷ ನಾನು ನನ್ನ ಗೆಳೆಯರು ಸೋದರಿಯರಿಲ್ಲದೆ ಅನಾಥರಾಗಿ ಉಳಿದೆವು

ನಮಗಿದ್ದ ಸೋದರಿಯರ ಸಮಸ್ಯೆಯನ್ನು ಗಮನಿಸಿದ ಭಗವಂತ ಈ ವರ್ಷ ಐದು ಜನ ವಿದ್ಯಾರ್ಥಿನಿಯರನ್ನು ನಮ್ಮ ವಿಭಾಗಕ್ಕೆ ಬರುವಂತೆ ಪ್ರೇರೇಪಿಸಿದ್ದಾನೆ! ,ಇವರ ಆಗಮನದಿಂದ ನಮ್ಮ ವಿಭಾಗ ಈಗ ವಿದ್ಯಾರ್ಥಿನಿಯರಿಂದ ಶ್ರೀಮಂತವಾಗಿದೆ,ಸೋದರಿಯರ ಆಗಮನದಿಂದ ಪುಳಕಗೊಂಡ ನಾನು ನನ್ನ ಗೆಳೆಯರು ಆನಂದದಿಂದ ಅವರ ಜೊತೆ ಮಾತನಾಡಿಸಬೇಕು ನಗಬೇಕು ಎಂದು ಅಂದುಕೊಂಡೆವು! ಆದರೆ ನನ್ನ ಸೋದರಿಯರು ಅದಕ್ಕೆ ಸ್ಪಂದಿಸಲಿಲ್ಲ...


ನಾವು ಕ್ಲಾಸ್ ರೂಂನಿಂದ ಹೊರಗಡೆ ಬಂದರೆ ಸಾಕು ತಲೆಕೆಳ ಹಾಕಿ ಮೌನವಾಗಿ ಕುಳಿತುಕೊಳ್ಳುತ್ತಾರೆ. ಕೆಲವು ಸಲ ಹಿರಿಯ ವಿದ್ಯಾರ್ಥಿಗಳೆನ್ನದೆ ನಮ್ಮ ಮುಂದೆ ಗುರುಗಳ ಎದರು ಮೊಬೈಲ್ನಲ್ಲಿ ಮಾತನಾಡುತ್ತಾರೆ. ನಾವು ವರ್ತನೆ ನೋಡಿ ಹಾಗೆ ಮುಂದೆ ಸಾಗುತ್ತೇವೆ. ನಮ್ಮ ವಿಭಾಗ ಅರಂಭವಾಗಿ ಕೆಲವು ತಿಂಗಳಾದರು ಪ್ರಥಮ ವರ್ಷದ ವಿದ್ಯಾರ್ಥಿನಿಯರ ಹೆಸರು ನಮಗೆ ಇನ್ನೂ ತಿಳಿಯದಂತಾಗಿದೆ.ನಮ್ಮಪಾಡಿಗೆ ನಾವು ಅವರಪಾಡಿಗೆ ಅವರು ಮೌನಕ್ಕೆ ಶರಣಾಗಿದ್ದೇವೆ.
-ತೋಟೇಂದ್ರ,ಎಸ್,ಮಾಕಲ್.
-ಪತ್ರಿಕೊದ್ಯಮ ವಿಭಾಗ.ಗುಲ್ಬರ್ಗಾ ,ವಿ,ವಿ ಗುಲ್ಬರ್ಗಾ

0 comments:

Post a Comment