ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಸಭಾಭವನ ಪ್ರವೆಶಿದವನೇ ಪರಿಚಯದ ಮುಖಗಳು ಕಾಣದೆ ಕೊನೆಯ ಸೀಟಿನಲ್ಲಿ ಕುಳಿತು ಕಾರ್ಯಕ್ರಮ ನೋಡುತಿದ್ದೆ ,...ಸ್ವಲ್ಪ ಸಮಯದ ನಂತರ ಒಬ್ಬರು ಬಂದು ಧೀರಜ್? ಎಂದರು...ನಗುತ್ತ ಹಾ ...ಧೀರೇಂದ್ರ ಅಂದೆ.....ಬನ್ನಿ ಸರ್ ಮುಂದೆ ಕೂರುವ ಎಂದು ಎದುರಿನ ಸೀಟಿನಲ್ಲಿ ಕುಳ್ಳಿರಿಸಿದರು...ನಾನು ಒಂದು ಸಂಸ್ಥೆಯ ಕಾರ್ಯಕ್ರಮಕ್ಕೆ ತೀರ್ಪುಗಾರನಾಗಿ ಆಹ್ವಾನದ ಮೇರೆಗೆ ಹೋಗಿದ್ದೆ...ಆತ್ಮೀಯವಾಗಿ ಮಾತನಾಡಿಸಿದ ಅವರು ಇನ್ನೊಬ್ಬರಿಗೆ ಪರಿಚಯ ಮಾಡಿಕೊಟ್ಟು ಹೋದರು ...ನೋಡುವಾಗಲೇ ಈ ಮನುಷ್ಯ ಗಡಿಬಿಡಿಯಲ್ಲಿ ಇದ್ದಂತೆ ಕಾಣುತಿತ್ತು ,ಅವಸರದಿಂದಲೇ ನನ್ನ biodata ಬರೆದುಕೊಂಡು ಹೋದರು ....ಮಕ್ಕಳ ಕಾರ್ಯಕ್ರಮ ನೋಡುತ್ತಾ ನನ್ನ ಬಾಲ್ಯವನ್ನು ಯೋಚಿಸುತ್ತ ಸುಮ್ಮನೆ ಮನಸಿನಲ್ಲೇ ನಕ್ಕಿದ್ದೆ ...ಮುಂದಿನ ಕಾರ್ಯಕ್ರಮಕ್ಕೆ ನಾನು ಹಾಗು ಇತರ ಇಬ್ಬರು ತೀರ್ಪುಗಾರರು ,ನನಗೆ ಇನ್ನೊಂದು ನಾಮಕರಣ ಮಾಡಿ ವೇದಿಕೆಗೆ ಕರೆದು ಹೂ ಕೊಟ್ಟು ಸ್ವಾಗತಿಸಿದರು ,ನನ್ನ ಹೆಸರು ಧೀರೇಂದ್ರ ಎಂದು ಇನ್ನೊಮ್ಮೆ ಅವರಿಗೆ ಹೇಳಿ ಕೆಳಗೆ ಬಂದೆ....ಸರಿಯಾಗಿ 2 .45 ಕ್ಕೆ ಸ್ಪರ್ದೆ ಆರಂಭವಾಯಿತು ,ಒಟ್ಟು 3 ಸ್ಪರ್ದೆಗಳಿಗೆ ನಾವು 3 ಜನ ತೀರ್ಪುಗಾರರಾಗಿದ್ದೆವು ..ಮಕ್ಕಳ ಪ್ರತಿಭೆಯನ್ನು ನೋಡುತ್ತಾ ಕಷ್ಟ ಪಟ್ಟು ಮಾರ್ಕ್ಸ್ ಹಾಕುತಿದ್ದೆ ,ಮೊದಲ ಸ್ಪರ್ದೆ ಮುಗಿಯುವಾಗ ಸಮಯ 4.15 ..ವಿಶ್ರಾಂತಿ ನೀಡದೆ ಇನ್ನೊಂದು ಸ್ಪರ್ದೆಯನ್ನು ಆರಂಬಿಸುವರಿದ್ದ ಆಯೋಜಕರಲ್ಲಿ 2 ನಿಮಿಷ ಎಂದು ಹೊರಗೆ ಹೋಗಿ ವಾಪಾಸ್ ಬಂದೆ ...2 ನೆ ಸ್ಪರ್ದೆ ಆರಂಭವಾಯಿತು ,ಗಂಟೆ 5 .30 ಆದರೂ ಒಂದು ಲೋಟ ಟೀ ಕೂಡ ಕೊಡದೆ ಹೋದಾಗ ,ಆಯೋಜಕರ ಪರಿಚಯವ ಇರುವ ನನ್ನ ಆಂಟಿಗೆ sms ಕಳಿಸಿ ಟೀ ಬೇಕು ಎಂದೆ...15 ನಿಮಿಷ ಬಿಟ್ಟು ಸಣ್ಣ ಪ್ಲಾಸ್ಟಿಕ್ ಲೋಟದಲ್ಲಿ ತಣ್ಣನೆಯ ಟೀ ಬಂತು.!!!.....

2 ನೆ ಸ್ಪರ್ದೆ ಮುಗಿಯುವಾಗ 6 .50 ..ಹೊಟ್ಟೆ ತಾಳ ಹಾಕುತಿತ್ತು ...ಒಬ್ಬ ತೀರ್ಪುಗಾರರು ಲೇಟ್ ಆಯಿತು ಹೇಳಿ ಹೊರಟೆ ಬಿಟ್ಟರು ..ಅಷ್ಟರಲ್ಲಿಯೇ ಸಂಸ್ಥೆಯ ಅಧ್ಯಕ್ಷರು ಬಂದು ಸಮಯ ತುಂಬ ಆಯಿತು 3 ನೆ ಸ್ಪರ್ದೆ ಬೇಗ ಆರಂಭಿಸೋಣ ಎಂದರು ...ನಾನು ಸರ್ 8 .25 ಕ್ಕೆ ನಮ್ಮೂರಿಗೆ ಲಾಸ್ಟ್ ಬಸ್ ಎಂದಾಗ ,ಅರೆ ನಿಮ್ಮನ್ನು ನಾವು ಕಾರಿನಲ್ಲಿ ಡ್ರಾಪ್ ಮಾಡ್ತೇವೆ ಅಂದಾಗ ಒಪ್ಪಿದೆ ,ಸರ್ 10 ನಿಮಿಷ ಟೈಮ್ ಕೊಡಿ ಹೊರಗೆ ಹೋಗಿ ಏನಾದರು ತಿಂದು ಬರ್ತೇನೆ ,ಬಹಳ ಹಸಿವಾಗ್ತಿದೆ ಎಂದಾಗ ..ಅಯ್ಯೋ ಬೇಡ ಬೇಡ ನಾನೇ ತಿಂಡಿ ಕಳಿಸ್ತೇನೆ ನೀವು ಕೂತ್ಕೊಳ್ಳಿ ಎಂದು ನನ್ನನ್ನು ಹೇಳಿ ಮೂರನೆಯ ಸ್ಪರ್ದೆ ಆರಂಬಿಸಿಯೇ ಬಿಟ್ರು ,ತಿಂಡಿಗಾಗಿ ಕಾಯುತ್ತ ಮಕ್ಕಳ ಪ್ರತಿಬೆಯನ್ನು ನೋಡುತ್ತಾ ತೀರ್ಪು ನೀಡುತ್ತ ಹೋದೆ ,8 ಗಂಟೆಗೆ ಕಾರ್ಯಕ್ರಮ ಮುಗಿದ ತಕ್ಷಣ ವೇದಿಕೆಗೆ ಕರೆದು ನೆನಪಿನ ಕಾಣಿಕೆ ನೀಡುವಾಗ ಮನಸಿನಲ್ಲಿಯೇ "ಇದಕಿಂತ ತಿಂಡಿ ನೀಡಿದ್ರೆ ಸಾಕಿತ್ತು" ಎಂದು ಕೊಂಡೆ ..

ಕೆಳಗೆ ಬಂದು 10 ನಿಮಿಷ ಕಾದರೂ ಯಾರೂ ವಿಚಾರಿಸದಿದ್ದಾಗ ಮೆಲ್ಲನೆ ಎದ್ದು ಹೊರಗೆ ಬಂದು ಬರುತ್ತಿರುವ ಆಟೋ ಹತ್ತಿ ಬೇಗ ಬಸ್ ಸ್ಟ್ಯಾಂಡ್ ಗೆ ಬಿಡಿ,ಲಾಸ್ಟ್ ಬಸ್ ಮಿಸ್ಸಾಗುತ್ತೆ ಎಂದಾಕ್ಷಣ ಆಟೋ ಡ್ರೈವರ್ ಫಾಸ್ಟ್ ಆಗಿ ಗಾಡಿ ಓಡಿಸುತ್ತಾ ಬಸ್ ಸ್ಟ್ಯಾಂಡ್ ತಲುಪಿದಾಗ ಬಸ್ ಮೆಲ್ಲನೆ ಹೊರಗೆ ಹೋಗುತಿತ್ತು ,ಹಣ ನೀಡಲು purse ತೆಗೆಯ ಬೇಕೆಂದಾಗ ಸರ್ ದುಡ್ಡು ಬೇಡ ಓಡಿ ಹೋಗಿ ಬಸ್ ಹಿಡೀರಿ,ಮಿಸ್ ಆದ್ರೆ ಬೇರೆ ಬಸ್ಸಿಲ್ಲ ಎಂದ .....ಓಡಿ ಹೋಗಿ ಬಸ್ ಹತ್ತಿ ,ಫೂಟ್ ಬೋರ್ಡ್ ನಲ್ಲಿ ತಿರುಗಿ ನಿಂತು ಕೈ ಬೀಸಿ ಡ್ರೈವರ್ ಗೆ ಥ್ಯಾಂಕ್ಸ್ ಎಂದೆ ....ಖಾಲಿ ಹೂ,ತಣ್ಣನೆಯ ಟೀ ,ಸಣ್ಣ ನೆನಪಿನ ಕಾಣಿಕೆಯನ್ನು ನೀಡಿ ,ಹಸಿವಾಗುತ್ತಿದೆ ತಿಂದು ಬರ್ತೇನೆ ಎಂದರೂ ಬಿಡದೆ ,ತಿಂಡಿಯನ್ನೂ ನೀಡದೆ ,ಕಾರ್ಯಕ್ರಮದ ನಂತರ ಮಾತನಾಡಿಸುವ ಸೌಜನ್ಯವನ್ನೂ ತೋರದ ಆ ಕೋಟು ಧರಿಸಿದ ದೊಡ್ಡ ಮನುಷ್ಯರಿಗಿಂತ ,ಈ ಆಟೋ ಡ್ರೈವರ್ ದೊಡ್ಡವರಂತೆ ಕಂಡರು ಹಾಗೂ ಅವರ ಮೇಲೆ ಗೌರವ ಮೂಡಿತ್ತು .....ಆ ಅಪರಿಚಿತ ಡ್ರೈವರ್ ಗೆ ದೊಡ್ಡ ಸಲಾಂ ...

- ಧೀರೇಂದ್ರ ಜೈನ್

0 comments:

Post a Comment