ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:00 PM

ತೀರ್ಥಸ್ನಾನ

Posted by ekanasu

ಪ್ರಾದೇಶಿಕ ಸುದ್ದಿ
ಮೂಲ್ಕಿ: ಪವಿತ್ರ ಎಳ್ಳಮವಾಸ್ಯೆ ಅಂಗವಾಗಿ ಹೆಜಮಾಡಿ ಅಮವಾಸ್ಯೆ ಕರಿಯ ಬಳಿ ಸಾವಿರಾರು ಭಕ್ತಾಧಿಗಳು ಸಮುದ್ರ ಸ್ನಾನ ಗೈದರು.ಮುಂಜಾವ 3 ಗಂಟೆಯಿಂದಯೆ ಸಾವಿರಾರು ಭಕ್ತರು ವಿವಿಧ ಆಗಮಿಸಿ ಮುಂಜಾನೆಯ ಚಳಿಯಲ್ಲಿ ಸಮುದ್ರ ಸ್ನಾನ ಗೈಯ್ಯುತ್ತಿರುವ ದೃಶ್ಯ ಕಂಡು ಬಂದಿತ್ತು. ಕಾರ್ಕಳ , ಬಜಗೋಳಿ, ಶಿರ್ವ, ಬೆಳ್ಮಣ್ಣು, ಮುದರಂಗಡಿ , ಇನ್ನಾ, ಪಲಿಮಾರು, ಮೂಡಬಿದರೆ, ಕಿನ್ನಿಗೋಳಿ, ಮೂಲ್ಕಿ ಕಡೆಗಳಿಂದ ಸಹಸ್ರಾರು ಭಕ್ತಾಧಿಗಳು ಸಮುದ್ರ ಸ್ನಾನಕ್ಕಾಗಿ ಆಗಮಿಸಿದ್ದರು.

ಪಿಂಡ ಪ್ರದಾನ , ತಿಲಹವನ : ಅಮವಾಸ್ಯೆ ದಿನಗಳಲ್ಲಿ ಸಮುದ್ರ ತೀರದಲ್ಲಿ ಸ್ವರ್ಗಸ್ಥ ಪಿತೃಗಳಿಗೆ ಮೋಕ್ಷ ಪ್ರಾಪ್ತಿಗಾಗಿ ಪಿಂಡ ಪ್ರದಾನ , ತಿಲಹವನ ನಡೆಸುವ ಕಾರ್ಯವು ಅಲ್ಲಲ್ಲಿ ಕಂಡು ಬಂದಿತ್ತು. ಸಂಜೆ ವರೆಗೂ ಸಮುದ್ರ ಸ್ನಾನ ಮುಂದುವರಿದಿತ್ತು.

ಚಿತ್ರ - ವರದಿ: ಭಾಗ್ಯವಾನ್ ಮುಲ್ಕಿ

0 comments:

Post a Comment