ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ಅವಾರ್ಡ್

ಡಾ.ವಿಕ್ರಮ್ ವಿಸಾಜಿ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನವರು. 1976ರಲ್ಲಿ ಜನಿಸಿದ ಇವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಭಾಲ್ಕಿಯ ಸತ್ಯನಿಕೇತನ ಪ್ರೌಢ ಶಾಲೆಯಲ್ಲಿ ಪಡೆದು, ನಂತರ ಚನ್ನಬಸವೇಶ್ವರ ಕಾಲೇಜಿನಲ್ಲಿ ಪಿ.ಯು.ಸಿ. ಹಾಗೂ ಪದವಿ, ನಂತರ ಸ್ನಾತ್ತಕೋತ್ತರ ಪದವಿ ಹಾಗೂ ಪಿ.ಎಚ್ .ಡಿ (ಡಾಕ್ಟರೇಟ್) ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮುಗಿಸಿದರು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ವೈಶಿಷ್ಟ್ಯತೆಗಳಿಂದ ಗುರುತಿಸಿಕೊಂಡಿದ್ದಾರೆ. ಅಧ್ಯಯನ, ಅಧ್ಯಾಪನ ಎರಡರಲ್ಲೂ ಅನುಭವ ಸಂಪಾದಿಸಿರುವ ವಿಸಾಜಿಯವರು ಸರಳ ಸ್ವಭಾವದ ವ್ಯಕ್ತಿತ್ವ ಹೊಂದಿದವರು. ಉತ್ತಮ ಭಾಷಣಕಾರರು. ಪ್ರಸ್ತುತ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಗುಲಬರ್ಗಾದಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ, ಎಂ.ಎ ಕನ್ನಡ ಹಾಗೂ ಪಿ.ಎಚ್.ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ನೀವೇಕೆ ಕತ್ತಲ ಕಡೆ, ತಮಾಷಾ, ಗೂಡು ಕಟ್ಟುವ ಚಿತ್ರ, ಇವು ಇವರ ಕವನ ಸಂಕಲನಗಳಾಗಿವೆ. ಹುಚ್ಚು ದಾಳಿಂಬೆ ಗಿಡ ಇವರ ಗ್ರೀಕ್ ಕವಿತೆಗಳ ಅನುವಾದ. ಬೆಳಗಿನ ಮುಖ ಇವರ ವಿಮರ್ಶಾ ಕೃತಿ. ನಾದಗಳು ನುಡಿಯಾಗಲಿ ಇವರ ಸಂಶೋಧನಾ, ಕಂಬಾರರ ನಾಟಕಗಳು ಇವರ ಸಂಪಾದನೆ ಕೃತಿಯಾಗಿದೆ.

ಬೆಂಗಳೂರಿನ ಕ್ರೈಸ್ಟ ಕಾಲೇಜು ವತಿಯಿಂದ ದ.ರಾ.ಬೇಂದ್ರೆ ಕಾವ್ಯಸ್ಪರ್ಧೆಯಲ್ಲಿ 6ಸಲ ಬಹುಮಾನ ಪಡೆದಿದ್ದಾರೆ. ಧಾರವಾಡದ ಜೆಸಸ್ ಕಾಲೇಜು ವತಿಯಿಂದ ಕವಿತೆಗಾಗಿ ಬಹುಮಾನ. ಚಂಪಾರವರ ಸಂಕ್ರಮಣ ಪತ್ರಿಕೆ ವತಿಯಿಂದ ಸಂಕ್ರಮಣ ಕಾವ್ಯಸ್ಪರ್ಧೆಯಲ್ಲಿ ಬಹುಮಾನ. ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಎರಡು ಸಲ ಪುರಸ್ಕಾರ ಪಡೆದಿದ್ದಾರೆ. ಕೋಲ್ಕತ್ತಾದ ಭಾರತೀಯ ಭಾಷಾ ಪರಿಷತ್ತು ವತಿಯಿಂದ ಯುವ ಲೇಖಕ ಪ್ರಶಸ್ತಿ. ಪ್ರಥಮ ಬಾರಿಗೆ ನೂತನವಾಗಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪ್ರಕಟಿಸಿರುವ 'ಶ್ರೀವಿಜಯ' ಪ್ರಶಸ್ತಿಗೆ ಭಾಜನರಾಗಿದ್ದಾರೆ. ಯುವಲೇಖಕರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ನಲವತ್ತು ವರ್ಷದ ಒಳಗಿನವರಿಗೆ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಈ 'ಶ್ರೀವಿಜಯ' ಪ್ರಶಸ್ತಿಯನ್ನು ವಿತರಣೆ ಮಾಡಲಾಗುತ್ತದೆ. ಅದರ ಜೊತೆಗೆ 1,11,111 ರೂ ನಗದು ಬಹುಮಾನವನ್ನು ಪ್ರೋತ್ಸಾಹ ಧನವನ್ನಾಗಿ ನೀಡಲಾಗುತ್ತಿದೆ. ಡಿಸೆಂಬರ್ (2011) ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯುವ ಸಮಾರಂಭವೊಂದರಲ್ಲಿ ಪ್ರಶಸ್ತಿಯನ್ನು ಪಡೆಯಲಿದ್ದಾರೆ..

ಕಲ್ಯಾಣ ಕರ್ನಾಟಕದ ಗಡಿನಾಡು ಪ್ರದೇಶದ ಯುವ ಪ್ರತಿಭೆ, ಅತಿ ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಕೀರ್ತಿ ಇವರದು. ಈ ಭಾಗದಲ್ಲಿ ಹಲವಾರು ಜನ ಯುವ ಸಾಹಿತಿಗಳದ್ದಾರೆ. ಸರಕಾರ ಅಂಥವರನ್ನು ಗುರುತಿಸಿ ಪ್ರೋತ್ಸಾಹಿಸಬೇಕಾಗಿದೆ. ಆ ಯುವ ಲೇಖಕರಿಗೆ, ಈ ಯುವ ಸಾಹಿತಿಗಳು ಮಾದರಿ. ಇವರು ನಮ್ಮ ಜೊತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

'ಶ್ರೀ ವಿಜಯ' ಪ್ರಶಸ್ತಿ ಲಭಿಸಿರುವ ನಿಮಗೆ ಏನನಿಸುತ್ತದೆ?

ಯುವ ಲೇಖಕರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಈ ಪ್ರಶಸ್ತಿ ದೊರೆತಿದೆ ಎಂದು ನನ್ನ ಅಭಿಪ್ರಾಯ. ಇನ್ನೂ ಹೆಚ್ಚಿನ ಬರವಣಿಗೆಗೆ ಇದು ಸೂಚನೆಯಾಗಿದೆ. ಜವಾಬ್ದಾರಿ ಹೆಚ್ಚಾಗಿದೆ, ನಿರೀಕ್ಷೆಗಳು ಜಾಸ್ತಿಯಾಗಿವೆ. ಸಾಹಿತ್ಯ ಪರಿಷತ್ತು ಇಟ್ಟಿರುವ ಭರವಸೆ ನಾವು ಪ್ರೀತಿಯಿಂದ, ಶ್ರದ್ಧೆಯಿಂದ ಬರವಣಿಗೆಯಲ್ಲಿ ತೊಡಗಿ ಕೊಳ್ಳಬೇಕಾಗಿದೆ ಎಂದು ತಿಳಿದಿದ್ದೇನೆ.

ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯಿಕ ವಲಯದಲ್ಲಿ ಅಗಾಧವಾದ ಸಾಧನೆ ಮಾಡಲು ಹೇಗೆ ಸಾಧ್ಯವಾಯಿತು?

ಮನೆಯಲ್ಲಿ ಒಳ್ಳೆಯ ವಾತಾವರಣ, ನಮ್ಮ ತಂದೆಯವರು ಕನ್ನಡ ಅಧ್ಯಾಪಕರಾಗಿದ್ದರು. ಕನ್ನಡ ಸಾಹಿತ್ಯ, ವಚನ ಸಾಹಿತ್ಯ, ಕಥೆ, ಕವನದ ಅನೇಕ ಪುಸ್ತಕಗಳು ಮನೆಯಲ್ಲಿದ್ದವು. ಸಾಹಿತ್ಯ ಕಾರ್ಯಕ್ರಮ (ನಾಟಕ, ಗೋಷ್ಠಿ, ಸಂಗೀತ ಸಭೆ) ಗಳಲ್ಲಿ ನಾನು ತಂದೆಯವರ ಜೊತೆ ಭಾಗಿಯಾಗುತ್ತಿದ್ದೆ. ಹೀಗಾಗಿ ಚಿಕ್ಕ ವಯಸ್ಸಿನಲ್ಲೇ ಆಸಕ್ತಿ ಬೆಳೆಯ ತೊಡಗಿತು. ಅನೇಕ ಲೇಖಕರ (ಹಾ.ಮಾ.ನಾಯಕ, ಎಲ್.ಎಸ್.ಶೇಷಗಿರಿರಾವ್, ಚಂದ್ರಶೇಖರ್ ಪಾಟೀಲ್, ರೆಹಮತ್ ತರೀಕೆರೆ, ಅಮರೇಶ ನುಗಡೋಣಿ) ಜೊತೆ ಸಂಪರ್ಕ, ಸಂವಹನ ಬೆಳೆಯಿತು. ಅವರ ಮಾರ್ಗದರ್ಶನ, ಪ್ರೀತಿ, ಒಡನಾಟ, ಅವರ ಮಾತುಗಳು ನನಗೆ ಬರೆಯಲು ಪ್ರೇರಣೆಯಾಯಿತು.

ಬರಹಗಾರರಲ್ಲಿ ಪ್ರಥಮ ತೊಂದರೆ ಇರುತ್ತದೆ. ಅದನ್ನು ಅವರು ನಿವಾರಿಸಿಕೊಳ್ಳುವದು ಹೇಗೆ?
ವೈವಿಧ್ಯಮಯವಾದ ಓದು ಬರಹಗಾರರನ್ನು ಸೂಕ್ಷ್ಮನನ್ನಾಗಿ ಮಾಡುತ್ತದೆ. ಕನ್ನಡ ಸಾಹಿತ್ಯ, ಮರಾಠಿ ಸಾಹಿತ್ಯ, ತೆಲುಗು ಸಾಹಿತ್ಯ, ಬಂಗಾಳಿ ಸಾಹಿತ್ಯ ಅನುವಾದದಲ್ಲಾದರೂ ಸರಿ, ಫ್ರೆಂಚ್ ಶೈಲಿ, ಅಮೇರಿಕನ್ ಶೈಲಿ ಓದಿ ತಿಳಿದುಕೊಂಡರೆ ಓದಿನ ಕ್ರಮ ಅರಿತು ಯಾವ ಬರವಣಿಗೆಯೊಳಗೆ ಜೀವಂತಿಕೆ ಇದೆ, ಯಾವ ಬರವಣಿಗೆಯೊಳಗೆ ಜೀವಂತಿಕೆ ಇಲ್ಲ ಎನ್ನುವದು ತಿಳಿದು, ಓದುವ ದೃಷ್ಟಿಕೋನದಿಂದ ಬರವಣಿಗೆಯ ಪ್ರಥಮ ತೊಂದರೆ ನಿವಾರಿಸಬಹುದು. ನಮ್ಮ ಬರವಣಿಗೆಯ ಸಮಸ್ಯೆಗಳನ್ನು ಮೀರಿ ನಮ್ಮ ಸೃಜನಶೀಲತೆ ಕಾಪಾಡಿಕೊಳ್ಳಬೇಕು.

ಇತ್ತೀಚಿನ ಸಾಹಿತ್ಯದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಕನ್ನಡದಲ್ಲಿ ಒಂದು ನಿಲುವು, ಘಟ್ಟ ಅನ್ನೋದು ಇಲ್ಲ. ಹಲವಾರು ಸಾಹಿತಿಗಳು, ಅನೇಕ ಲೇಖಕರು ಸೂಕ್ಷ್ಮವಾಗಿ ಬರೆಯುತ್ತಿದ್ದಾರೆ. ಸೂಕ್ಷ್ಮತೆ ಎನ್ನುವದು ಸಾಹಿತ್ಯದಲ್ಲಿ ಅತಿ ಮುಖ್ಯ. ಒಂದು ಗುಂಪಿನ ಮೂಲಕ ಸಾಹಿತ್ಯ ರಚನೆಯಾದರೆ ಅದು ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತದೆ. ಚರ್ಚೆ ಗೊಳಪಡುತ್ತದೆ. ಆದರೆ ಒಬ್ಬ ವ್ಯಕ್ತಿಯ ಬರವಣಿಗೆಯ ಪರಿಶ್ರಮವೂ ಚಚರ್ೆಯಾಗುತ್ತದೆ. ಆದರೆ ಅದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. (ಹರೀಶ ರಾಜ, ಸುಮಂಗಲ, ಚಿದಾನಂದರ ಅನುವಾದಗಳು, ವಸುಧೇಂದ್ರರ ಪ್ರಬಂಧಗಳು, ಎ.ಎಂ.ಮಂಜುನಾಥ, ಎಂ.ಆರ್.ಭಾಗವತಿ, ಅಣಕೂರ ಬೆಟಗೇರಿ) ಹಲವಾರು ಸಾಹಿತಿಗಳಿದ್ದಾರೆ. ಸಾತ್ವಿಕತೆ, ದಾರ್ಶನಿಕತೆ ಅದು ಎಂಥಹ ರೂಪ ಪಡೆದುಕೊಳ್ಲುತ್ತಿದೆ ಎನ್ನುವಂಥಹದ್ದು. ಉತ್ತಮವಾದ ವಸ್ತು ವಿಷಯವನ್ನು ಇತ್ತೀಚಿನ ಸಾಹಿತ್ಯ ಒಳಗೊಂಡಿರಬೇಕು.

ಸಾಹಿತ್ಯ ಹಾಗೂ ವಿಮರ್ಶೆ ನಡುವಿನ ಸಂಬಂಧದ ಬಗ್ಗೆ ಏನು ಹೇಳುತ್ತೀರಿ?
ಸಾಹಿತ್ಯ ಬದುಕನ್ನು, ಸಮಾಜವನ್ನು ಸೃಜನಶೀಲವಾಗಿ ಗ್ರಹಿಸುವಂತಹ ಒಂದು ಕ್ರಮ. ಬದುಕಿನ ಚಲನೆಯ ಸಂಬಂಧ ಇದರಲ್ಲಿದೆ. ಸಮಾಜದ ಒಟ್ಟಾರೆ ಒಂದು ಸ್ಥಿತಿಯನ್ನು ಆಳವಾಗಿ, ಸೂಕ್ಷ್ಮವಾಗಿ ಗ್ರಹಿಸುವಂತಹ ಒಂದು ಅವಕಾಶ ಸಾಹಿತ್ಯದಲ್ಲಿದೆ. ಹೀಗೆ ರಚನೆಯಾದ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವದಕ್ಕೆ. ವಿಶ್ಲೇಷಣೆಗೆ ಈ ವಿಮರ್ಶೆ ಅಗತ್ಯ. ಯಾವ ದೃಷ್ಟಿಕೋನದಿಂದ ಓದಿದರೆ ಏನೇನು ಅರ್ಥಗಳು ಬರುತ್ತವೆ ಎನ್ನುವಂಥಹದ್ದು. ವಿಮರ್ಶೆ ಇಂದು ಬರವಣಿಗೆಯನ್ನು ತೂಕ ಮಾಡುತ್ತದೆ. ಓದಿನ ಸಾಧ್ಯತೆಗಳನ್ನು ತೋರಿಸುತ್ತದೆ. ವಿಮರ್ಶೆ ಬರೆಯುವದು ತಪ್ಪಲ್ಲ. ಸಾಹಿತ್ಯ ತಪ್ಪು ಅಂತಾನು ಹೇಳಬಾರದು. ಒಂದು ಕೃತಿಯ ಮಿತಿಗಳಿಂದ ಹೊಸ ಬರಹಗಾರರು ಏನು ಕಲಿಯಬಹುದು, ಸಾಧನೆಗೆ ಏನು ಮಾಡಬಹುದು. ಇದನ್ನು ಹೇಳುವ ಕೆಲಸ ವಿಮರ್ಶೆ ಮಾಡುತ್ತದೆ.

ಗಡಿಭಾಗದಲ್ಲಿ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಬೇಕಾದರೆ ಅದಕ್ಕೆ ನಿಮ್ಮ ಸಲಹೆಗಳೆನು?
ಪ್ರಥಮವಾಗಿ ಕನ್ನಡ ಮಾಧ್ಯಮ ಶಾಲೆಗಳು ಕ್ರಿಯಾಶೀಲವಾಗಿರಬೆಕು. ಜನರು ಕನ್ನಡ ಮಾಧ್ಯಮ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವ ವಾತಾವರಣ ನಿರ್ಮಾಣವಾಗಬೇಕು. ಬಹಳಷ್ಟು ಶಾಲೆಗಳು ಸಮಸ್ಯೆಗಳಿಂದ ಕೂಡಿವೆ. ಸರಕಾರಿ ಶಾಲೆಗಳು, ಮಾಧ್ಯಮ ಶಾಲೆಗಳು ಮೊದಲಿನಂತೆ ಈಗಿಲ್ಲ. ಬಹಳ ಅಸ್ತವ್ಯಸ್ಥಗೊಂಡಿವೆ. ಕನ್ನಡಕ್ಕೆ ಸಂಬಂಧಪಟ್ಟ ಚಟುವಟಿಕೆಗಳನ್ನು ನಡೆಸುವದು. ಕನ್ನಡ ಭಾಷೆ ಬೆಳೆಸಲು ಅನುಕೂಲಗಳನ್ನು ಸೃಷ್ಟಿ ಮಾಡಬೆಕು. ಅಕಾಡೆಮಿಗಳು, ಪ್ರಾಧಿಕಾರಗಳು ಸ್ವಲ್ಪ ಇತ್ತ ಕಡೆ ಗಮನ ಹರಿಸುವಂತಾಗಬೇಕು.

ಸೆಮಿಸ್ಟರ್ ಪದ್ದತಿ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆಯಾ?
ಈ ಪದ್ದತಿಯಿಂದ ಸ್ವಲ್ಪ ಒತ್ತಡ ಜಾಸ್ತಿಯಾದಂತಿದೆ. ದೀರ್ಘವಾದ ಓದು, ವಿದ್ಯಾರ್ಥಿಗಳ ಮನನಕ್ಕೆ ತೊಂದರೆಯಾಗಿದೆ. ಉತ್ತಮ ಅಂಕ ಗಳಿಸಲು ಇದು ಸದಾವಕಾಶ. ಆದರೆ ಬರೀ ಅಂಕ ಗಳಿಸುವದಕ್ಕೆ ಸೀಮಿತವಾಗಿ, ಕಲಿಕೆಯ ಸುಖವನ್ನು ಗೆಳೆಯರ ಜೊತೆ ಹಂಚಿಕೊಳ್ಳಲು ಕಾಲಾವಕಾಶ ಇಲ್ಲದಂತಾಗಿದೆ. ವಿದ್ಯಾರ್ಥಿಗಳು ಆಳವಾಗಿ ಓದುವದಕ್ಕೆ, ಚಿಂತನೆಗೆ, ಆಲೋಚನೆಗೆ ಅನುಕೂಲವಾಗುವ ವ್ಯವಸ್ಥೆಯಾಗಬೆಕು. ಒಂದು ದೃಷ್ಟಿಕೋನ ಬೆಳೆಸಿಕೊಂಡು ಓದಿನ ವ್ಯಾಪ್ತಿ, ಓದಿನ ಕ್ರಮ, ಪಠ್ಯದ ಹೊರತು ಜ್ಞಾನಗಳಿಕೆಗೆ ದೀರ್ಘ ಓದು ಬೇಕಾಗುತ್ತದೆ.

ಗುಣಮಟ್ಟ ಶಿಕ್ಷಣಕ್ಕೆ ನಿಮ್ಮ ಸಲಹೆಗಳೇನು?
ಸಿಲೆಬಸ್ ಚನ್ನಾಗಿರಬೇಕು, ಪಾಠ, ಪ್ರವಚನಗಳು ಸುಸೂತ್ರವಾಗಿ ನಡೆಯುತ್ತಿರಬೇಕು. ಸೂಕ್ಷ್ಮಜ್ಞರು ಬೇಕು. ಕಾಳಜಿ ಇರುವಂತಹ ಶಿಕ್ಷಕರು ಅಗತ್ಯ. ವಿದ್ಯಾರ್ಥಿಗಳೊಂದಿಗೆ ಒಳ್ಳೆಯ ಒಡನಾಟ ಹೊಂದಿರಬೇಕು. ವಿದ್ಯಾರ್ಥಿಗಳು ಶಿಕ್ಷಕರ ಜೊತೆ ಚರ್ಚಿಸುತ್ತಿರಬೇಕು. ಕಲಿಕೆ ನಿರಂತರವಾಗಿರಬೇಕು. ಉತ್ತಮ ವಾತಾವರಣ, ಗ್ರಂಥಾಲಯವೂ ಅವಶ್ಯಕ. ಶಿಕ್ಷಕರು ಚಟುವಟಿಕೆಯಿಂದ ಕ್ರಿಯಾಶೀಲರಾಗಿರಬೇಕು. ವಿಚಾರ ಸಂಕಿರಣಗಳು, ಚರ್ಚಾ ಸ್ಪರ್ಧೆ ಗಳು, ಕ್ರಿಯಾಶೀಲ ಬರವಣಿಗೆ ಇವೆಲ್ಲಾ ಇದ್ದರೆ ಶಿಕ್ಷಣ ಸುಧಾರಿಸುತ್ತದೆ.

ಅಮರೇಶ ನಾಯಕ ಜಾಲಹಳ್ಳಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಗುಲಬರ್ಗಾ ವಿಶ್ವವಿದ್ಯಾಲಯ ಗುಲಬರ್ಗಾ

8 comments:

shivu said...

congrates, Amaresh nayak....

elemareya kayiyante sahittedalli sadane madiriva Dr.vikram visaji yavarige thumba danhyvadgalu.
innu hechinaritiyalli sahittevannu belesali endu haryasuttene..

yuva patrakartrad nivu kuda visaji yavara jivan sadeneyannu bahala varna ranjitavagi barediruviri nimagu mattomme thanks................

manjunath said...

cangrates , amresh nayak

best of luck for ur future
ur writing a articles in ekanasu i read a article all of of urs ur a good writer

MANJUNATH.V.SWAMY

Sardar Rayappa said...

Mr.Amaresh Nayak
Nimm Article uttamavagide & Baravanige saily tumba channagide. neevu heege barita iri.
Saradara Rayappa.H
Gulbarga.

balappa said...

Amaresh Nayak Your Interwiew Article Very Super. try again & again. writting is very well. All the best.
from,
Balappa.M.Kuppi
Tq.Shorapur Dist.Yadagiri
journalism & Mass Communication.
GUG.

Mallikarjun D Apachand said...

very nice article, keep it up Amaresh Nayak. i know Vikram sir. I am happy to read your article, which you have done. best of luck future.U more write article this type. because, this is good infrmation. First Karnataka "Vijashree" award got Vikram Sir. If u dint write a article. I cant know about this award. Thank u and E-kanasu Editor sir, for this Inormation.

From,
Mallikarjun D Apachand,
At: Kusnoor,
Gulbarga 585 106

Anonymous said...

ಗೆಳೆಯ ಅಮರೇಶ ನಿನು ಸಂದರಶನ್ ತುಂಬಾ ಚನ್ನಾಗಿ ಮಾಡಿದಿಯಾ ಬರುವ ಮುಂದಿನ ದಿನಗಳಲ್ಲಿ ಮಾನ್ಯ ಡಾ,ನಲ್ಲೂರ ಪ್ರಸಾದರನ್ನು ಸಂದರಶನ ಮಾಡುವ ಬಾಗ್ಯ ನಿನಗೆ ಸಿಗಲೆಂದು ಶುಭಕೋರುತ್ತೇನೆ

ಧನ್ಯವಾದಗಳೊಂದಿಗೆ

Anonymous said...

ಗೆಳೆಯ ಅಮರೇಶ ನಿನು ಸಂದರಶನ್ ತುಂಬಾ ಚನ್ನಾಗಿ ಮಾಡಿದಿಯಾ ಬರುವ ಮುಂದಿನ ದಿನಗಳಲ್ಲಿ ಮಾನ್ಯ ಡಾ,ನಲ್ಲೂರ ಪ್ರಸಾದರನ್ನು ಸಂದರಶನ ಮಾಡುವ ಬಾಗ್ಯ ನಿನಗೆ ಸಿಗಲೆಂದು ಶುಭಕೋರುತ್ತೇನೆ

ಧನ್ಯವಾದಗಳೊಂದಿಗೆ

Unknown said...

hi amaresh nanu ninu tumba atmiya geleyaru nanu ninna artical nodi nanna geleya yestu chanagi baritanalla endu nnage ananadavagide naxt time idakintalu chanagiruvanta artical baribeku yekandre ninu baritiya ennuva nambige nannamelide amareshnayak.
totendra
ma journalisam
gulbarga

Post a Comment