ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆತ್ಮೀಯ ಈ ಕನಸು ಅಭಿಮಾನಿ ಓದುಗರೇ... ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀಮಹಾಸ್ವಾಮಿಗಳವರ ಲೇಖನಾಮೃತ "ಭಕ್ತಿಸಿಂಚನ"ದಲ್ಲಿ ಪ್ರತಿದಿನ (ಇಂದಿನಿಂದ )ಈ ಕನಸು.ಕಾಂ ನಲ್ಲಿ ಮೂಡಿಬರಲಿದೆ. ಮಠದ ಶಿಷ್ಯವರ್ಗ, ಶ್ರೀ ಗುರುಗಳ ಶಿಷ್ಯವೃಂದ ಇದನ್ನು ಅಭಿಮಾನದಿಂದ ಓದಿ... ಶ್ರೀಗಳ ಕೃಪೆಗೆ ಪಾತ್ರರಾಗಿ. - ಸಂ.

ಸೋಮು ನಮ್ಮ ನಿಮ್ಮಂತೆ ಸಾಧಾರಣ ಮನುಷ್ಯ!. ಆದರೆ, ಅವನಿಗೆ ರಾಜನ ಶಯ್ಯಾಗಾರದಲ್ಲಿ ಕೆಲಸ. ಸಾಮಾನ್ಯ ಜನರ ಕಲ್ಪನೆಗೂ ಮೀರಿದ ಶೃಂಗಾರದ ವೈಭವವನ್ನು ನೋಡಿದಾಗೆಲ್ಲಾ... ಸೋಮುವಿನ ಮನಸ್ಸಿನಲ್ಲಿ ಆಸೆ ಅಸೂಯೆಗಳ ಅಲೆಗಳು ಏಳುತ್ತಿದ್ದವು..!!
ರಾಜನ ಮೃದು ಮೃದು ಸುಪ್ಪತ್ತಿಗೆಯನ್ನು ಕಂಡಾಗೆಲ್ಲಾ ಜೀವನದಲ್ಲಿ ಒಮ್ಮೆಯಾದರೂ ಅದರ ಸೌಖ್ಯವನ್ನು ಅನುಭವಿಸಬೇಕೆನ್ನು ಆಸೆಯಾದರೆ...! ಸುಪ್ಪತ್ತಿಗೆಯಲ್ಲಿ ರಾಜ ಪವಡಿಸುವುದನ್ನು ಕಂಡಾಗೆಲ್ಲಾ ಅವನು ಅನುಭವಿಸುತ್ತಿರುವ ಸೌಖ್ಯವೆನ್ನೆಣಿಸಿ ಅಸೂಯೆ ಉಂಟಾಗುತ್ತಿತ್ತು.ದಿನೇ ದಿನೇ ಸೋಮುವಿನ ಮನಸ್ಸಿನಲ್ಲಿ ಹೇಗಾದರೂ ರಾಜನ ಕಣ್ಣು ತಪ್ಪಿಸಿ ಒಮ್ಮೆಯಾದರೂ ರಾಜಶಯ್ಯೆಯಲ್ಲಿ ಪವಡಿಸುವ ಆಸೆ ಪ್ರಬಲವಾಗತೊಡಗಿತು!
ಆದರೆ ರಾಜನೆಲ್ಲಿಯಾದರೂ ನೋಡಿದರೆ ಪ್ರಾಣಕ್ಕೇ ಸಂಚಕಾರ ಬಂದೀತೆಂಬ ಭಯ..!!ಹೀಗೆ ಆಸೆ - ಭಯಗಳ ಸಮರದಲ್ಲಿ ಆಸೆಯೇ ಗೆದ್ದ ಒಂದು ದಿನ...
ಸೋಮು ಯಾರಿಗೂ ಗೊತ್ತಾಗದಂತೆ ಕೊಂಚಹೊತ್ತು ರಾಜನ ಹಂಸತೂಲಿಕಾತಲ್ಪದಲ್ಲಿ ಪವಡಿಸಿದ...!!!

ಇಂಥ ತಪ್ಪುಗಳು ಮಾದಕ ವಸ್ತುಗಳಂತೆ... !
ಒಮ್ಮೆ ಮಾಡಿದರೆ ಮತ್ತೆ ಮತ್ತೆ ಮಾಡುವಂತಾಗುತ್ತದೆ..

ಸೋಮುವಿಗೆ ಆಗಾಗ ರಾಜನ ಶಯ್ಯೆಯಲ್ಲಿ ಕದ್ದು ಮಲಗುವುದು ಅಭ್ಯಾಸವಾಗಿ ಹೋಯಿತು..!!
ತಪ್ಪು ಮಾಡಲು ಮುಹೂರ್ತಗಳಿರುವಂತೆ
ಸಿಕ್ಕಿ ಬೀಳಲು ಕೂಡಾ ಮುಹೂರ್ತಗಳಿರುತ್ತವೆ...!

ಒಂದು ದಿನ ಅನಿರೀಕ್ಷಿತವಾಗಿ ತನ್ನ ಶಯ್ಯಾಗಾರವನ್ನು ಪ್ರವೇಶಿಸಿದ ರಾಜ,
ಹಂಸತೂಲಿಕಾತಲ್ಪದಲ್ಲಿ ಸೋಮು ಮಲಗಿರುವುದ್ನನು ಕಂಡು ಚಕಿತಗೊಂಡ...
ಸೇವಕನ ಮನದ ಭಾವವೇನೆಂಬುದು ದೊರೆಗೆ ಅರ್ಥವಾಗಿಹೋಯಿತು..!!
ಅತ್ತ, ಸ್ವಪ್ನಲೋಕದಲ್ಲಿ ಸುಖಿಸುತ್ತಿದ್ದ ಸೋಮು ಕಣ್ಬಿಟ್ಟರೆ... ಎದುರಿಗೆ ದೊರೆ..!!
ಮುಂದೇನಾಗಬಹುದೆಂದು ಊಹಿಸುತ್ತಿದ್ದಂತೆಯೇ ಸೋಮುವಿನ ನಾಲಗೆಯ ಪಸೆಯಾರಿತು... ಮೈ ನಡುಗಿತು...ಮುಖ ಬಿಳುಚಿತು...ಹೃದಯ ನಿಂತಿತು?!!!
ಆದರೆ ಮುಂದಿನ ಕ್ಷಣದಲ್ಲಿ ಅತ್ಯಾಶ್ಚರ್ಯವೇ ಕಾದಿತ್ತು...!!

(ನಾಳೆಗೆ...)

0 comments:

Post a Comment