ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:55 AM

ಓ ಮನಸೇ...

Posted by ekanasu

ಸಾಹಿತ್ಯ

ಅಳುಕದರು, ಓ ಕೋಮಲ ಮನಸೇ
ದು:ಖ ನೋವುಗಳ ನೀ ದೂರ ಸರಿಸೇ
ಪ್ರೀತಿ ಪ್ರೇಮವ ಸವಿ ಜೇನಲಿ ಬೆರೆಸೇ
ಈ ಬಾಳಿಗೆ ನೀ ರಸದೌತಣ ಬಡಿಸೇ||ಯಾರಿಹರಿಲ್ಲಿ ನಿನಗೆ ಸರಿಸಾಟಿ
ಸಹಸ್ರ ಜನರಲಿ ನಿತ್ಯ ನಿನ್ನ ಭೇಟಿ
ಅಚ್ಚರಿ ತಂದಿದೆ ನಿನ್ನ ವೇಗದ ಧಾಟಿ
ನಿನ ಬಯಕೆಗಳೋ ಶತಶತಕೋಟಿ||

ನಿನ್ನಾಸೆಗಳಾಗದಿರಲಿ ಎಂದಿಗೂ ಅತಿ
ಮೀರದಿರೆಂದಿಗೂ ಸಮಯದ ಮಿತಿ
ಎಂದಿಗೂ ಬಿಡದಿರು ಸದ್ಗುಣ ನೀತಿ
ಪರರ ಮನದಲ್ಲಾಗು ನೀ ಮರೆಯದ ಅತಿಥಿ||

ಸದ್ಭಾವನೆಗಳ ಬಿತ್ತಿ ನೀ ಬೆಳಸು
ದುರ್ನಡೆತೆಗಳ ಒತ್ತಿ ನೀ ಅಳಿಸು
ಕುಣಿನಲಿದು ಸಂತಸದಿ ದೇಹವನರಳಿಸು
ನಿರ್ಮಲವಾಗಿ ಮೋಕ್ಷವನು ತೋರಿಸು||

ನೀನಿಲ್ಲದೇ ಇಲ್ಲಿ ಮಾರ್ಗವಿದೆಯೇನು
ಮಾರ್ಗವಿಲ್ಲದೇ ಪಯಣವಿಹುದೇನು
ಪಯಣವಿಲ್ಲದೇ ಗುರಿಯಿರುವುದೇನು
ಗುರಿಯೇ ಇರದ ಬಾಳಿರುವುದೇನು||

ಆ ನೀಲ ಗಗನದ ಭಾಸ್ಕರನಂತೆ
ಬೆಳದಿಂಗಳೊಡೆಯ ಶಶಾಂಕನಂತೆ
ಉಕ್ಕಿ ಹರಿವ ಸಪ್ತ ಸಾಗರಗಳಂತೆ
ಅಮರವಾಗು ನೀ ಮಿನುಗಿ ಧೃವತಾರೆಯಂತೆ|| ಓ||

- ಧರ್ಮೇಂದ್ರ ಬಿ.ಜಿ.

0 comments:

Post a Comment