ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

(ಕನಸಲ್ಲೆ ಅರಳಿ ಕನಸಲ್ಲೆ ಮರೆಯಾದ ಪ್ರೇಮಿಗೊಂದು ಪ್ರೇಮ ಪತ್ರ)

ನಿನ್ನ ಹೆಸರೇನು? ನೀ ಹಾಡುವ ಹಾಡಿಗೆ ಮರುಳಾಗಿ ನಿನ್ನ ಕಂಗೊಳಿಸುವ ರೂಪದ ಹೆಸರು ದೀಪ ಯಾಕಾಗಿರಬಾರದು? ಎಂದು ಒಂದು ದಿನ ಸಮಾರಂಭದಿ ಊಹಿಸಿದ್ದೆ ಹಾಡು ಮುಗಿದ ಮೇಲೆ ನಿರೂಪಕರು ಪ್ರಾರ್ಥನೆ ಮಾಡಿದ ದೀಪಾಳಿಗೆ ಅಭಿನಂದನೆಗಳು ಅಂದರು ನಾನು ಊಹಿಸಿದ್ದು ನಿಜವಾಯಿತಲ್ಲ ಅದು ಹೇಗೆ ಸಾದ್ಯ ಎಂದು ಮನಕ್ಕೆ ಚಿಂತೆ ಪ್ರಾರಂಭವಾಯಿತು. ಯಾಕೊ ಏನೊ ಅವತ್ತು ನೋಡಿದ ನಿನ್ನ ರೂಪದ ದೀಪ ಮನದಿ ಸಣ್ಣನೆ ಹೊತ್ತಿತು... ದಿನಾ ನಿನ್ನ ಬರುವಿಕೆಗೆ ನನ್ನ ಕಣ್ಣುಗಳು ಕಾಯತೊಡಗಿದವು, ಹೀಗೆ ದಿನ ಕಳೆದು ನಾನು ಪ್ರತಿ ದಿನವು ನಿನಗೆದುರಾದೆ ನಿನ್ನ ತುಟಿ ಬಿಚ್ಚಿದ ಸಣ್ಣನೆ ನಗು ನನ್ನ ಮನದಿ ಸಣ್ಣನೆ ಬೆಳಗತೊಡಗಿತು... ಹೀಗೆ ಪ್ರಾರಂಭವಾದ ಸ್ನೇಹ ಹಾಗೆ ಬೆಳೆಯತೊಡಗಿತು ಮುಂದೊದು ದಿನ ನಿನ್ನ ಹಾಡಿನ ಪ್ರಾಕ್ಟೀಸ್ ಮಾಡುವ ಸಂದರ್ಭದಿ ನಿನಗೆ ಸಹಾಯಕನಾಗುವ ಸಂದರ್ಭ ಒದಗಿ ಬಂದಾಗ ನನಗೆ ಏನೋ ಒಂಥರ ಆನಂದ ರೋಮಾಂಚನವಾಯಿತು.ಹೀಗೆ ನನ್ನ ಸ್ನೇಹ ಗಾಢವಾಯಿತು ಹೀಗೆ ಬೆಳೆದ ಸ್ನೇಹದ ಸಮಯದಲ್ಲಿ ಯಾವುದೊ ಹಾಡುವ ಸ್ಪರ್ಧೆಗೆ ನೀನು ಹಾಕುವ ಅರ್ಜಿಗೆ ಫೊಟೊ ಹಚ್ಚಿಕೊಡತೀರಾ ಪ್ಲೀಸ್ ಅಂದಾಗ ನನ್ನ ಮನದಲ್ಲಿ ಪುಳಕವಾಯಿತು ಅವತ್ತು ನನಗಾದ ಸಂತೋಷಕ್ಕೆ ಪಾರವೆಯಿಲ್ಲದಂತಾಯಿತು, ಅವತ್ತು ಫೊಟೋ ಹಚ್ಚತೀನಿ ಅಂತ ತಗೊಂಡು ಆ ಫೊಟೋದ ಮೇಲೆ ನಿನ್ನ ಕಣ್ಣು, ಮೂಗು, ತುಟಿ, ಕೆನ್ನೆಯೆಲ್ಲಾ ಸ್ಪರ್ಶಿಸಿ ನಿನ್ನನ್ನೆ ಸ್ಪರ್ಶಿಸಿದಷ್ಟು ಪುಳಕಿತನಾಗಿ ಕನಸಿಗೆ ಜಾರಿಬಿಟ್ಟೆ...

ಆಗ ನೀನು ಹಚ್ಚಿದಿಯಾ ಅಂದು ನನ್ನ ಭುಜ ಮುಟ್ಟಿದಾಗ ನಿನ್ನ ಮಲ್ಲಿಗೆಯ ಮೃದು ಹಸ್ತ ನನ್ನ ಭಜದ ಮೇಲೆ ತಾಗಿ ನನಗೆ ಕಚಗುಳಿಯಾಗಿ ಏನೋ ಪುಳಕವಾಯಿತು. ಬಯಸದೆ ಬಂದ ಭಾಗ್ಯ ದೀಪ ಪ್ರಕಾಶಿಸುತಿದೆಯೆನೋ ಎಂಬ ಭ್ರಾಂತಿಯಾಯಿತು, ಧಿಡೀರನೆ ಕೈ ತೆಗೆದು ಮುಗಿತಾ ಅಂದಿ ಆಗ ನಾನು ಕನಸಿನ ಲೋಕದಿಂದ ನನಸಿನ ಲೋಕಕ್ಕೆ ಬಂದು ಇನ್ನೇನು ಹಚ್ಚಿದೆ ಅಂದು ಹಚ್ಚಿ ನಿನಗೆ ಹಿಂತಿರುಗಿಸುವಾಗ ಆಗಲೂ ಕೂಡ ನಿನ್ನ ಕೈ ಬೆರಳ ಸ್ಪರ್ಶಕೆ ಮತ್ತೆ ನಿನ್ನ ಪ್ರೀತಿಯಲಿ ಮಳುಗಿಬಿಟ್ಟೆ.

ಹೀಗೆ ನನ್ನ ಮನದಾಳದಿ ಪ್ರೀತಿ ಶುರುವಾಗತೊಡಗಿತು. ಆಗ ನನಗೆ ದಿನಾ ನಿನ್ನದೆ ನೆನಪು ನೆರಳಾಗಿ ಕಾಡತೊಡಗಿತು. ಒಂದು ದಿನ ನೀನು ಕಾಲೇಜಿಗೆ ಯಾರೊ ಒಬ್ಬ ಅಪರಿಚಿತನೊಂದಿಗೆ ಬಂದು ನಿನ್ನ ಸ್ನೇಹಿತಿಯರಿಗೆಲ್ಲ ಪರಿಚಯಿಸುತಿದ್ದಾಗ ನನಗೆ ಒಂದು ರೀತಿಯ ಅನುಮಾನ ಶುರುವಾಯಿತು, ಯಾರಿರಬಹುದು ಅಂಥಾ ಇಬ್ಬರು ನನ್ನ ಬಳಿ ಬಂದು ಇವನು ನನ್ನ ಅತ್ತೆ ಮಗ ಶಿವಪ್ರಕಾಶ ಇವನು ನಾನು ಚಿಕ್ಕಂದಿನಿಂದಲೆ ಸ್ನೇಹಿತರು ಮುಂದೆ ನನ್ನ ವಿದ್ಯಭ್ಯಾಸ ಮುಗಿದ ಮೇಲೆ ಇವರ ಜೊತೆಗೆ ನನ್ನ ಮದುವೆ ಅಂದು ಬಿಟ್ಟೆ.

ಕನಸು ಕಾಣುವ ಕಣ್ಣಲ್ಲಿ ಕಣ್ಣೀರ ಹನಿಯೊಂದು ತಕ್ಷಣ ಜಾರಿ ಬಿತ್ತು... ಕನವರಿಸಿದೆ, ತಡಕಾಡಿದೆ, ಮನದಿ ನೆನಪ ನೆನ ನೆನಸಿ ಜಲ ಜಲ ಕಣ್ಣೀರ ಸುರಿಸಿ ಒಂದು ವಿಚಾರಕೆ ಬಂದು ಬಿಟ್ಟೆ. ನನ್ನ ಪ್ರೀತಿಯ ಮಾತು ಯಾರಿಗೂ ಹೇಳದೆ ಇದ್ದದ್ದೆ ಒಳ್ಳೆಯದಾಯಿತು ಒಂದು ವೇಳೆ ನನ್ನ ಪ್ರೀತಿ ಹೇಳಿ ಅವಳು ನಿರಾಕರಿಸಿದ್ದರೆ ನನ್ನ ಸ್ನೇಹ ಕೂಡ ಹಾಳಾಗುತ್ತಿತ್ತಲ್ಲ ಎಂದು ಮನದಲ್ಲಿ ಮರುಗಿದೆ. ಮನದಲ್ಲಿ ಮೊಗ್ಗಾಗಿ ಅರಳಿದ ಪ್ರೇಮ ಬಾಡುವುದು ಬೇಡ ಅದನ್ನ ಸ್ನೇಹದ ಹೂವಾಗಿ ಬೆಳೆಸೋಣ ಎಂದು ಅವಳ ಭಾವಿ ಜಿವನಕ್ಕೆ ಶುಭ ಕೋರಿ ಅಲ್ಲಿಂದ ಬಂದು ಬಿಟ್ಟೆ.

ಈಗ ನಮ್ಮ ವಿದ್ಯಭ್ಯಾಸ ಮುಗಿದು ದೂರವಾಗಿದೀವಿ.. ಆದರೆ ನೆನಪುಗಳು ಮಾತ್ರ ಎಂದೂ ದೂರವಾಗಲ್ಲ. ನಿನ್ನ ಪ್ರೀತಿಯ ನೆನಪು ನನ್ನ ಮನದಿ ಸದಾ ಹಚ್ಚ ಹಸಿರಾಗಿದೆ. ನೀ ನನಗೆ ಸಿಗದೆ ಹೋದರು ಪರವಾಗಿಲ್ಲ ನಿನ್ನ ಸ್ನೇಹವಾದರು ನನಗೆ ಸಿಕ್ಕಿತಲ್ಲ ಅದಕ್ಕೆ ನನಗೆ ತುಂಬಾ ಖುಷಿಯಿದೆ ಗೆಳತಿ... ನಿನ್ನ ನೆನಪಿಗಾಗಿ ನನ್ನ ಮಗಳಿಗೂ ಕೂಡ ನಿನ್ನ ಒಪ್ಪಿಗೆ ಕೇಳದೆ ನಿನ್ನ ಹೆಸರಿಟ್ಟಿದ್ದೇನೆ ದಯವಿಟ್ಟು ಕ್ಷಮೆಯಿರಲಿ...

ಇಂತಿ ಕಣ್ಣೀರಹನಿ ಜಾರಿಸಿಕೊಂಡವ


- ಪ್ರಬಿ
ರಾಯಚೂರ ಜಿಲ್ಲೆ

3 comments:

Amaresh Nayak said...

Very nice Article
your very greatful. Friend is need Friendship indeed.
Amaresh Nayak Jaalahalli.

Mallikarjun D Apachand said...

nice feelings yaar... article is very nice...

from,
Mallu Kusnoor, Gulbarga

Anonymous said...

nimma prem patra bavanatmkavagide. Rashmi

Post a Comment