ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಸಾರ್ ಇಟ್ಸ್ ಬೋರಿಂಗ್ ...ಅಂತಾಕ್ಷರಿ ಆಡೋಣ ಎಂದು ವಿದ್ಯಾರ್ಥಿಗಳೆಲ್ಲಾ ಫೋರ್ಸ್ ಮಾಡಿದಾಗ ಆಲ್ಡ್ರಿನ್ (ಆಲ್ದು )ನ ಮುಖ ನೋಡಿದೆ ...ಸರಿ ಎಂದು ಸನ್ನೆ ಮಾಡಿದ ... ಮಾತಾ ಅಮೃತಾನಂದಮಯಿ ಅಮ್ಮನ ಆಶ್ರಮ ತಲುಪಲು ಇನ್ನೂ 2 ಗಂಟೆ ಸಮಯ ಇದ್ದುದರಿಂದ ಬಸ್ಸಿನಲ್ಲಿ ನಮ್ಮ ಅಂತಾಕ್ಷರಿ ಆಟ ಸಮಯ ಕಳೆಯಲು ಸೂಕ್ತ ಅನಿಸಿತು .ಕನ್ನಡ ,ಹಿಂದಿ ,ಮಲಯಾಳಂ ಹಾಡುಗಳ ಮಿಶ್ರಣದೊಂದಿಗೆ ಆಟ ಮುಂದುವರಿದಿತ್ತು ..ಕನ್ನಡದ ವಿದ್ಯಾರ್ಥಿಗಳು ,ನಾನು ,ಆಲ್ದು ಒಂದು ತಂಡವಾದರೆ...ಕೇರಳ ದ ವಿದ್ಯಾರ್ಥಿಗಳು ಇನ್ನೊಂದು ತಂಡದಲ್ಲಿ ...ನಡುವೆ ಯಾವ ಹಾಡೂ ನೆನಪಾಗದಾಗ ನಾನೇ ಆಶು ಕವನವನ್ನು ಇನ್ಯಾವುದೋ ರಾಗದಲ್ಲಿ ಹಾಡುತಿದ್ದರೆ ಕನ್ನಡದ ವಿದ್ಯಾರ್ಥಿಗಳು ಒಳಗೊಳಗೇ ನಗುತಿದ್ದರು ...ನಮಗೆ "ಅ" ಅಕ್ಷರ ಬಂತು ...ಅ..ಅ..ಅರೆ ಯಾವುದಾದರೂ ಹಾಡು ಹಾಡಿ ಎಂದೆ..ಎಲ್ಲರೂ ಅ ...ಅ,,ಅ...ಎನ್ನುತಿದ್ದರು ....ಇನ್ನೊಂದು ತಂಡದವರು ಟಿಕ್ ಟಿಕ್ ಒನ್ ...ಟಿಕ್ ಟಿಕ್ ಟು ....ಟಿಕ್ ಟಿಕ್ ತ್ರೀ...ಅನ್ನುತಿರುವಾಗಲೇ ನಮ್ಮ ವಿದ್ಯಾರ್ಥಿನೀ ಒಮ್ಮೆಲೇ "ಅರಳುವ ಹೂವುಗಳೇ ಆಲಿಸಿರೀ..ಬಾಳೊಂದು ಹೋರಾಟ ಬಣ್ಣಿಸಿರಿ..."ಎಂದು ಸುಶ್ರಾವ್ಯವಾಗಿ ಹಾಡಲು ಆರಂಭಿಸಿದಾಗ ನಮ್ಮ ತಂಡದ ಎಲ್ಲರೂ ಹೋ ...ಹೋ...ಎಂದು ಖುಷಿಯಂದ ಕೂಗುತಿದ್ದರೆ ,ನಾನು ಮಾತ್ರ ಸ್ಥಬ್ಧನಾಗಿ ,ಏನೋ ನೆನಪಾಗಿ ..ಮೂಕನಾದೆ !!...ಆಲ್ದು ಬೆನ್ನಿಗೆ ಬಡಿದು "ಲೋ ಏನಾಯ್ತು !!!?" ಅಂದಾಗ ..."ಎಲ್ಲಿ ?...ಹಾ !!..ಏನಿಲ್ಲ " ಎಂದೆ ...ಕಿಟಕಿಯಿಂದ ಹೊರ ನೋಡಿದರೆ ಕೊನೆ ಕಾಣದ ಸಮುದ್ರ ಕಾಣಿಸಿತು ..ಅಷ್ಟರಲ್ಲಿಯೇ ಡ್ರೈವರ್ ಬಸ್ಸಿಗೆ ಬ್ರೇಕ್ ಹಾಕಿದ ..

ನಮ್ಮನ್ನು ಆಶ್ರಮಕ್ಕೆ ಕರೆ ತಂದ ಅಭಿರಾಮಿ ಅಮ್ಮ (ಬ್ರಹ್ಮಚಾರಿಣಿ )"ನಾವು ಆಶ್ರಮ ತಲುಪಿದ್ದೇವೆ ,ಎಲ್ಲರೂ ರೂಮಿಗೆ ಹೋಗಿ ಫ್ರೆಶ್ ಆಗಿ ಬನ್ನಿ ,45 ನಿಮಿಷ ವಿರಾಮ ,ನಂತರ ಅಮ್ಮನ ಭೇಟಿ ಎಂದರು ...
ಎಲ್ಲರು ಬಸ್ಸಿನಿಂದಿಳಿದು ರೂಮಿನತ್ತ ನಡೆಯುತಿದ್ದರೆ ,ನಾನು "ಆಲ್ದು 10 ನಿಮಿಷ ,ಸಮುದ್ರದತ್ತ ಹೋಗಿ ಬರುತ್ತೇನೆ "ಎಂದು ಅವನ ಪ್ರತಿಕ್ರಿಯೆಗೂ ಕಾಯದೆ ಹೆಜ್ಜೆ ಹಾಕಿದೆ ..

ಹಿತವಾದ ಗಾಳಿ ಬೀಸುತಿತ್ತು ,ತಟದಲ್ಲಿ ಬಂಡೆಕಲ್ಲಿನ ಮೇಲೆ ಕುಳಿತು ಸಿಗರೆಟ್ ಹಚ್ಚಿದ್ದಾಗ ಹಿತವೆನಿಸಿತು ...ಹೌದು !!!"ಅರಳುವ ಹೂವುಗಳೇ " ಹಾಡು ನನ್ನನ್ನು 5 ವರ್ಷ ಹಿಂದಕ್ಕೆ ಕರೆದೊಯ್ದಿತ್ತು ..ಆ ಹಾಡೆಂದರೆ ನನಗೆ ಬಹಳ ಇಷ್ಟ ....ಆಕೆಗೂ !!!...ದಿನ ಫೋನಿನಲ್ಲಿ ಮಾತನಾಡಿ ಕೊನೆಯಲ್ಲಿ ನನಗಾಗಿ ಈ ಹಾಡನ್ನು ಪ್ರೀತಿಯಿಂದ ಹಾಡುತಿದ್ದಳು....
ಅವಳು ಮತ್ತೆ ನೆನಪಾದಳು ....ಆಡಿದ ಮಾತುಗಳು ..ನಗು ...ಪ್ರೀತಿ ..ಎಲ್ಲವೂ ನೆನಪಾಗಿ ಭಾರ ಎನಿಸಿತು ಹೃದಯ ...ಇನ್ನೊಂದು ಧಂ ಎಳೆದೆ ...ಹಾ...!

ಆ ದಿನ ಬೆಂಗಳೂರಿನಲ್ಲಿ ನನ್ನ ಚೇಂಬರ್ ಗೆ ಬಂದು ಮದುವೆಯ ಆಮಂತ್ರಣ ನೀಡಿ .ಅತ್ತು ಬಿಗಿದಪ್ಪಿದಾಗ ..."ಹುಚ್ಚಿ ..ಅಳಬೇಡ ...ನನಗಾಗಿ ನಮ್ಮ ಹಾಡು ಹಾಡ್ತೀಯಾ ? " ಅಂದಾಗಲೂ ಅಳುತ್ತಲೇ ಹಾಡಿದ್ದಳು...ಸಿಗರೆಟ್ ನ ಕೊನೆ ಬೆರಳಿಗೆ ತಾಗಿ ಬಿಸಿಯಾದಾಗ ,ಎಸೆದು ...ಎದ್ದು ಸಮುದ್ರದ ತೀರಕ್ಕೆ ಬಂದು ನಿಂತೆ ...ಅಲೆಗಳು ಕಾಲಿಗೆ ಬಡಿಯುತಿದ್ದವು ...ಕೊನೆಯೇ ಕಾಣದ ಸಮುದ್ರವನ್ನು ದಿಟ್ಟಿಸಿದೆ ...ಕಣ್ಣ ಹನಿಯೊಂದು ಜಾರಿ ಸಮುದ್ರದಲ್ಲಿ ಸೇರಿ ಮರೆಯಾಯಿತು ....

ಈ ಅಲೆಗಳಂತೆ ಏಳು ಬೀಳು ನಮ್ಮ ಬಾಳು .....ಕಣ್ಣ ಹನಿ ಸಮುದ್ರದ ನೀರಿನೊಂದಿಗೆ ಸೇರಿ ಮರೆಯಾದಂತೆ ,ಎಲ್ಲರೊಂದಿಗೆ ಬೆರೆತು ನನ್ನ ನೋವೂ ಮರೆಯಾಗಲಿ ...ಬಾಳೆಂಬ ಹೋರಾಟ ದಲ್ಲಿ ಎಲ್ಲವನ್ನು ಮರೆತು ಮುನ್ನಡೆಯುತ್ತೇನೆ ..."ಇರುಳಿನ ಹಿಂದೆ ಬೆಳಕುಂಟು " ..ಎಲ್ಲ ನೋವುಗಳನ್ನು ಮರೆತು ಕತ್ತಲಿಂದ ಬೆಳಕಿನಡೆಗೆ ನಡೆಯೋಣ ಅಂದುಕೊಂಡೆ ..ಆ ಹಾಡು ಎಂದಿಗೂ ನನಗೆ ಸ್ಪೂರ್ತಿ ,ಹಾಗು ಆಕೆ ಕೂಡ .....
ಫೋನ್ ರಿಂಗಣಿಸಿತು ..."ಲೋ ಲೋಫರ್ ...ಬೇಗ ಬಾರೋ "ಎಂದು ಆಲ್ದು ಎಂದಾಗ ..."ಬಂದೇ" ಎಂದೆ ...

ಧೀರೇಂದ್ರ ಜೈನ್

0 comments:

Post a Comment