ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಹೌದು ...ಇದು ಅಕ್ಷರಶಃ..ನೋವಿನ ಕರಾಳಮುಖದ ಅನಾವರಣ...ಕ್ರೌರ್ಯದ ವಿರುದ್ಧದ ಹೋರಾಟ...ನೋವಿಗೆ ಪ್ರತಿನೋವು ನೀಡುವ ಹರಸಾಹಸ...ಇದೆಲ್ಲವೂ ಇಂದು ರಕ್ತ ಚರಿತೆ...ಹೌದು...ಇದು ರಕ್ತ ಸಿಕ್ತ ಬದುಕಿನ ಕಥೆ..ಅದರ ನೋಟ..ಒಳನೋಟ...


ಒಂದೊಮ್ಮೆ ಇಡೀ ಚಂಬಲ್ ಕಣಿವೆಯ ಹೆಸರನ್ನು ಜಗತ್ತಿಗೆ ತಿಳಿಯಪಡಿಸಿದ ಪೂಲನ್ ದೇವಿಯ ವ್ಯಥೆ ಕಥೆ... ಆಕೆಯ ಜೀವನ ಗಾಥೆಯತ್ತ ಮತ್ತೊಂದು ಮೆಲುಕು...ಇಣುಕು... ತನ್ನ ಹುಟ್ಟೂರಲ್ಲೇ ಮೇಲ್ವರ್ಗದವರ ದಬ್ಬಾಳಿಕೆಗೆ ಒಳಪಟ್ಟು ಸಾಮೂಹಿಕ ಅತ್ಯಾಚಾರದಿಂದ ನೊಂದು ಬೆಂದ ಜೀವದ ಜೀವನಗಾಥೆ...

ಜಾತಿಯಾವುದಾದರೇನು...ಹರಿವ ರಕ್ತದ ಬಣ್ಣ ಒಂದೇ ಅಲ್ಲವೇ...? ಮೇಲ್ಜಾತಿ ಕೆಳಜಾತಿಯವರೆಂಬ ಬೇಧವಿದ್ದರೂ ಈ ಎರಡೂ ಜಾತಿಯವರಲ್ಲೂ ಮನಸ್ಸು ಎಂಬುದೊಂದು ಇದೆ ಎಂಬುದನ್ನು ನಾವು ಒಪ್ಪಬೇಕಲ್ಲವೇ... ಎರಡೂ ಜಾತಿಗಳಲ್ಲಿ ಹುಟ್ಟಿದ ಮನುಷ್ಯರಿಗೂ ನೋವು ಎಂಬುದು ಸಮಾನ ಅಲ್ಲವೇ...?

ಕೊಂದೇ ಬಿಟ್ಟಳು...!
ಹೌದು...ಅದೇ ನೆತ್ತರ ಸವಾರಿಗೆ ಮೊದಲ ಹೆಜ್ಜೆ...ಕೊಂದೇ ಬಿಟ್ಟಳು... ತನ್ನ ಮೇಲೆ ಅತ್ಯಾಚಾರ ಗೈದ ಪ್ರತಿಯೊಬ್ಬರನ್ನೂ ಕೊಂದು ಹಗೆ ತೀರಿಸಿಯೇ ಬಿಟ್ಟಳು... 22ಜನರ ಪಾಲಿಗೆ ಆಕೆಯ ಮೃತ್ಯದೇವತೆಯಾಗಿಬಿಟ್ಟಳು... ಅಷ್ಟೇ ಅಲ್ಲದೆ ಚಂಬಲ್ ಕಣಿವೆಯ ಏಕೈಕ ರಾಣಿಯಾಗಿ ಗುರುತಿಸಲ್ಪಟ್ಟಳು...ಮೆರೆದಳು...ಜನತೆ, ಸರಕಾರಕ್ಕೆ ಎಲ್ಲರಿಗೂ ಗಡಗಡ ನಡುಗುವಂತೆ ಬೆಳೆದೇ ಬಿಟ್ಟಳು... ಆಕೆಯೇ ಚಂಬಲ್ ರಾಣಿ ಪೂಲನ್ ದೇವಿ!ಚಂಬಲ್ ರಾಣಿಯ ಕಥೆ ಇಲ್ಲಿಗೇ ಮುಗಿದು ಹೋಗುವುದಿಲ್ಲ... ರಾಜಕೀಯ ಪ್ರವೇಶಿಸಿದಳು. ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದಳು.ಅಲ್ಲೂ ತನ್ನ ಪ್ರಭಾವ ತೋರಿಸಿಯೇ ಬಿಟ್ಟಳು... ಆದರೆ ವಿಧಿ ಲೀಲೆ ಬೇರೆಯೇ ಆಗಿತ್ತು. ಅದು ಜುಲೈ 25... 2001. ಜವರಾಯ ಪೂಲನ್ ರಾಣಿಗಾಗಿ ಕಾದು ಕುಳಿತಿದ್ದ. ನವದೆಹಲಿಯ ತನ್ನ ಮನೆಯ ಗೇಟ್ ಬಳಿಯೇ ಈಕೆಯ ಹತ್ಯೆ ನಡೆಯಿತು. ಶೇರ್ ಸಿಂಗ್ ರಾಣಾ , ಧೀರಜ್ ರಾಣಾ ಹಾಗೂ ರಣಭೀರ್ ಈಕೆಯ ಹತ್ಯೆಗೆ ರೂವಾರಿಗಳಾಗಿದ್ದರು. ಅಲ್ಲಿಗೆ ಚಂಬಲ್ ಕಣಿವೆಯ ರಕ್ತ ಸಿಕ್ತ ಬದುಕಿನ ಒಂದು ಅಧ್ಯಾಯ ಮುಗಿದಿತ್ತು... ಹತ್ಯೆಯ ರೂವಾರಿ ಶೇರ್ ಸಿಂಗ್ ರಾಣಾ ಡೆಹರಾಡೂನ್ ಪೋಲೀಸರೆದುರು ತಪ್ಪೊಪ್ಪಿಕೊಂಡು ಶರಣಾಗಿದ್ದ...ಆದರೆ ಪೂಲನ್ ಹತ್ಯೆಯ ಹಿಂದಿನ ರಹಸ್ಯ ರಹಸ್ಯವಾಗಿಯೇ ಉಳಿಯಿತು... ಅದೇ ಚಿದಂಬರ ರಹಸ್ಯ...

ಅಂದು ಹೇಗಿದ್ದಳು...?ಪೂಲನ್ ಎಂಬಾಕೆ ಹುಟ್ಟಿದ್ದು ಕೆಳಜಾತಿಯ ಅನಕ್ಷರಸ್ಥ ಕುಟುಂಬದಲ್ಲಿ . 11ನೇ ವಯಸ್ಸಿನಲ್ಲೇ ಈಕೆಯನ್ನು ಈಕೆಯ ಅಪ್ಪ ಮಾರಾಟ ಮಾಡಿದ.ಅಲ್ಲಿಂದಲೇ ಈ ಹೆಣ್ಣುಮಗಳ ಅಸಹಾಯಕತೆ ಪ್ರಾರಂಭವಾಯಿತು...ಆದರೆ ಈ ಮಾರಾಟವನ್ನು "ಮದುವೆ" ಎಂದೇ ಹೇಳಲಾಗಿದ್ದು ಮಾತ್ರ ವಿಶೇಷ. ಆದರೆ ಅಲ್ಲಿ ಪ್ರೀತಿ, ಮಮತೆಯ ಮಾತುಗಳಿರಲಿಲ್ಲ... ಕೇವಲ ದಬ್ಬಾಳಿಕೆ...ನೋವು...ಹಿಂಸಾಚಾರ...ಇದರಿಂದ ಮನನೊಂದ ಪೂಲನ್ ಮತ್ತೆ ತವರಿನತ್ತ ಹೆಜ್ಜೆ ಹಾಕಿದಳು...ಆದರೆ ಆ ಹೆಜ್ಜೆ ಹಸಿರು ಹಾಸಿನ ಮೇಲಣ ನಡುಗೆಯಾಗಿರಲಿಲ್ಲ... ಅದು ಕಲ್ಲು ಮುಳ್ಳಿನ ಹಾದಿ...ನೋವು ಅಸಹಾರದ ಹಾದಿಯಾಗಿತ್ತು...


ಮತ್ತೆ ಬೇಸತ್ತ ಪೂಲನ್ ಗಂಡನ ಮನೆಯತ್ತ ಚಿತ್ತ ನೆಟ್ಟಳು.ಆದರೆ ಅಲ್ಲೂ ಆಕೆಗೆ ಮತ್ತದೇ ನೋವು... ಅದಾಗ ಪೂಲನ್ ಗೆ 20ರ ಹರೆಯ... ಅದಾಗಲೇ ನೋವು ಬೇಸರದ ಮನಸ್ಸಿನಿಂದ ದಿನದೂಡುತ್ತಿದ್ದ ಪೂಲನ್ ಜೀವನದಲ್ಲಿ ಮತ್ತೊಂದು ಹೊಡೆತ...ಆಕೆಯನ್ನು ಡಕಾಯಿತನೊಬ್ಬ ಅಪಹರಿಸಿದ...

ಚಂಬಲ್ ಕಣಿವೆಯಲ್ಲಿ ಚಿಗುರಿದ ಕನಸು...
ಹೊಡೆತ ಬಡಿತ...ನೋವು..ಧಳ್ಳುರಿಯ ನಡುವೆ 9ವರುಷಗಳನ್ನು ಕಳೆದಿದ್ದ ಪೂಲನ್ ಗೆ ಉತ್ತರ ಪ್ರದೇಶದ ಚೆಂಬಲ್ ಕಣಿವೆಯಲ್ಲಿ ಮೊಟ್ಟ ಮೊದಲ ಬಾರಿಗೆ ನಗುವೊಂದು ಕಂಡಳು... ಅಲ್ಲಿ ಆಕೆಯ ಕನಸು ಚಿಗುರೊಡೆಯಲಾರಂಭಿಸಿತು. ಅಲ್ಲಿ ಆಕೆ ಚೆಂಬಲ್ ಕಣಿವೆಯ ಗ್ಯಾಂಗ್ ಲೀಡರ್ ನ ಧರ್ಮಪತ್ನಿ ಎಂಬ ಸ್ಥಾನವನ್ನಲಂಕರಿಸಿಕೊಂಡಳು. ಚೆಂಬಲ್ ಕಣಿವೆ ಆಕೆಗೆ ಹಲವು ಪಾಠ ಕಲಿಸಿದವು.ಅವೆಲ್ಲವೂ ಆಕೆಯ ಜೀವನದ ಪ್ರಮುಖ ಘಟ್ಟಗಳಾಗಿ ಗುರುತಿಸಲ್ಪಟ್ಟವು...ಕಣಿವೆಯ ದುರ್ಗಮ ಸ್ಥಿತಿಯಲ್ಲೂ ನೋವಿನಲ್ಲೂ ನಲಿವು ಕಾಣತೊಡಗಿದಳು...ಆದರೆ ಆಕೆಯ ನಲಿವಿಗೆ ಮತ್ತೊಂದು ಹೊಡೆತ... ವಿಕ್ರಂ ಮಲ್ಲಾ ...ಅಂದರೆ ಪೂಲನ್ ದೇವಿಯ ಎರಡನೇ ಗಂಡ ಕೊಲೆಯಾಗಿ ಹೋದ... ನೋವು ರೋಧನ ಮುಗಿಲು ಮುಟ್ಟಿತು...ಪೂಲನ್ ಗುಡಿಸಲೊಂದರಲ್ಲಿ ಬಂಧಿಯಾದಳು...ಅಲ್ಲೂ ಆಕೆಗೆ ಮತ್ತದೇ ಅತ್ಯಾಚಾರ...ಜೀವನದಲ್ಲಿ ರೋಸಿ ಹೋಗಿದ್ದ ಪೂಲನ್ ಗುಡಿಸಲಿನಿಂದ ತಪ್ಪಿಸಿಕೊಂಡು ಮತ್ತೊಂದು ಡಕಾಯಿತ ಗುಂಪಿಗೆ ಸಿಕ್ಕಿಹಾಕಿಕೊಂಡಳು. ಅಕ್ಷರಶಃ ಡಕಾಯಿತ ವೃತ್ತಿಯಲ್ಲಿ ತನ್ನನ್ನು ತೊಡಗಿಸಿಕೊಂಡದ್ದು ಆಗಿಂದಲೇ...ಅಲ್ಲಿಂದ ಆಕೆಯ ರಕ್ತಸಿಕ್ತ ಬದುಕಿನ ಅಧ್ಯಾಯದ ಪುಟಗಳು ತೆರೆಯಲಾರಂಭಿಸಿದವು... ಹೇಗಿದ್ದ ಪೂಲನ್ ಹೇಗಾಗಿ ಹೋದಳು...ಸೇಡಿಗೆ ಸೇಡು...ಧ್ವೇಷಕ್ಕೆ ಧ್ವೇಷ... ಇದು ಪೂಲನ್ ನ ಮಂತ್ರವಾಯಿತು...ಮೊದಲ ಗಂಡನಿಗೆ ಒಂದು ಗತಿತೋರಿದಳು...ಶೋಷಿತರ ಪಾಲಿಗೆ ಆಶಾಕಿರಣವಾದಳು... ತನ್ಮೂಲಕ ಶೋಷಿತರ ಪಾಲಿಗೆ ರಾಣಿಯಾಗಿ ಮೆರೆದಳು... ಸಹಸ್ರಾರು ಮಂದಿ ಪೂಲನ್ ಅಭಿಮಾನಿಗಳಾಗಿ ಗುರುತಿಸ್ಪಟ್ಟರು...ಆದರೆ ಆಕೆಯ ಚಿತ್ತ ಬೇರೆಯೇ ಚಿಂತೆಯಲ್ಲಿ ಮುಳುಗಿತ್ತು.
ಅದು ಫೆಬ್ರವರಿ ತಿಂಗಳ 12ನೇ ತಾರೀಕು. 1983ನೇ ಇಸವಿ... ಸಹಸ್ರಾರು ಮಂದಿ ಅಭಿಮಾನಿಗಳು ನೆರೆದಿದ್ದರು...ಪೂಲನ್ ಶರಾಣಾಗಿದ್ದಳು... ಹನ್ನೊಂದು ವರುಷಗಳ ಕಾಲ ಸೆರೆವಾಸ ಅನುಭವಿಸಿದಳು... 1994ರಲ್ಲಿ ಬಿಡುಗಡೆಯಾದ ಪೂಲನ್ ತದನಂತರ ಬೌದ್ಧ ಧರ್ಮದ ಅನುಯಾಯಿಯಾದಳು.ಮತ್ತೆ ಸಂಸಾರದ ಬಗ್ಗೆ ಚಿಂತಿಸಿ ಮರುಮದುವೆ ಮಾಡಿಕೊಂಡು ಸುಂದರ ಸಂಸಾರ ಪ್ರಾರಂಭಿಸಿದಳು. ಏಕಲವ್ಯ ಮಂಚ್ ಪ್ರಾರಂಭಿಸಿದ ಪೂಲನ್ ಜನಪ್ರತಿನಿಧಿಯಾಗಿ ಆಯ್ಕೆಯಾದಳು.

ತನ್ನ 44ನೇ ವರುಷದಲ್ಲಿ ಆಕೆ ಹಂತಕರಿಂದ ಹತ್ಯೆಯಾಗಿ ಹೋದಳು... ಏನೇ ಆದರೂ ಪೂಲನ್ ದಿಟ್ಟೆ ಎಂಬುದನ್ನು ಸಾಧಿಸಿದ್ದಳು. ಒಂದು ಸಮಯದಲ್ಲಿ ಇಡೀ ಸರಕಾರವನ್ನು ನಡುಗಿಸಿದ್ದ ಆಕೆ...ಸರಕಾರದತ್ತ ಮುಖಮಾಡಿದ್ದಳು...ಆಕೆ ಜೀವನ ಕಥನವನ್ನೇ ವಸ್ತುವನ್ನಾಗಿಸಿಕೊಂಡು ಚಲನಚಿತ್ರಗಳು ಬಂದವು. ಹಲವಾರು ಬರಹಗಳು , ಲೇಖನಗಳು ಹೊರಬಂದವು...ಆದರೆ ಆಕೆಯ ಹತ್ಯೆ ಮಾತ್ರ ಒಂದು ರಹಸ್ಯವಾಗಿಯೇ ಉಳಿದುಕೊಂಡಿತು...ಪೂಲನ್ ಇಂದಿಲ್ಲ...ಆಕೆಯ ನೆನಪು ಸಹ ಇಂದು ಜನತೆಯಿಂದ ಮರೆಯಾಗುತ್ತಿದೆ...!

- ನಾಡೋಡಿ.

4 comments:

dheeru said...

good one...

Anonymous said...

the social evils made her docoit...what is the punishment given to the social evils...they are left unpunished....

vijaykarnataka said...

Chennagide... Nanu serial irabahudeno andukondidde.. ok good..

Amaresh Nayak said...

Aakeya raktasikta kate nammalli naduka huttisitu, idu duranta kate. bhayanaka.
from,
Amaresh Nayak Jalahalli

Post a Comment