ಈ ಕನಸು

ಇದು ವರ್ಷದ ಕನಸು

ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com

||ಹರೇ ರಾಮ||
ರಾಜನೆಂದರೆ ರಾಜ್ಯದ ಆತ್ಮ..

ಮಂತ್ರಿಯೆಂದರೆ ರಾಜ್ಯದ ಬುದ್ಧಿ..

ಯಾವುದರ ಪರಿವೆ ಇಲ್ಲದೆಯೂ ಆತ್ಮವು ಇರಬಹುದು…ಆದರೆ ಬುದ್ಧಿಯು ಸದಾ ಎಚ್ಚರವಾಗಿರಲೇಬೇಕು…ಶರೀರದ, ಮನಸ್ಸಿನ,ಇಂದ್ರಿಯಗಳ,ಹೆಚ್ಚೇಕೆ ಬದುಕಿನ ಸಮಸ್ತ ಆಗು-ಹೋಗುಗಳನ್ನು ಗಮನಿಸುವ-ನಿಯಂತ್ರಿಸುವ ಹೊಣೆಗಾರಿಕೆ ಅದರದ್ದೇ ಅಲ್ಲವೇ..?

ಮನನವೆಂದರೆ ಅರಿಯುವುದು..


ತ್ರಾಣವೆಂದರೆ ಪೊರೆಯುವುದು…

ಮನನ-ತ್ರಾಣಗಳೆರಡೂ ಹುದುಗಿವೆ ಮಂತ್ರದಲ್ಲಿ..

ಮಂತ್ರವುಳ್ಳವನು ಮಂತ್ರಿಯೆಂದಾದಮೇಲೆ ಆತನಿಗೆ ಎರಡೇ ಮುಖ್ಯಕಾರ್ಯಗಳು..

ಅರಿಯುವುದು ಮತ್ತು ಪೊರೆಯುವುದು…

ಎಲ್ಲವನ್ನೂ ಅರಿಯುವ, ತನ್ಮೂಲಕ ಎಲ್ಲರನ್ನೂ ಪೊರೆಯುವ ಕರ್ತವ್ಯವವನದ್ದು..

ಅರಿವು ಪೊರೆಯುವಂತೆ ಮತ್ಯಾವುದು ತಾನೇ ಪೊರೆಯಲು ಸಾಧ್ಯ..?

ಆತ್ಮ- ಬುದ್ಧಿಗಳು ಎಲ್ಲರಲ್ಲಿಯೂ ಇವೆ. ಆದರೆ ಆತ್ಮ ಕೆಟ್ಟು ಕೆಟ್ಟವರಾರಿಲ್ಲ..ಬುದ್ಧಿ ಕೆಟ್ಟು ಕೆಟ್ಟವರುಂಟು..!

ಬಂಧನ -ಮೋಕ್ಷಗಳು ಬುದ್ಧಿಯಿಂದಲಾಗಿ, ಆತ್ಮದಿಂದಲಾಗಿಯಲ್ಲ..

ಒಳ್ಳೆಯವರು- ಕೆಟ್ಟವರೆನಿಸುವುದು ಒಳ್ಳೆಯ-ಕೆಟ್ಟ ಬುದ್ಧಿಗಳಿಂದಲಾಗಿ, ಆತ್ಮದಿಂದಲಾಗಿಯಲ್ಲ..

ವ್ಯಕ್ತಿಯ ಉನ್ನತಿ- ಅವನತಿಗಳಿಗೆ ಹೇಗೆ ಅವನ ಬುದ್ಧಿ ಕಾರಣವೋ ಹಾಗೆಯೇ ರಾಜ್ಯವೊಂದರ ಉನ್ನತಿ- ಅವನತಿಗಳಿಗೆ ಆ ರಾಜ್ಯದ ಮಂತ್ರಿಗಳೇ ಎದುರು ಕಾಣದ, ಆದರೆ ನೈಜವಾದ ಕಾರಣರು..

ಆದುದರಿಂದಲೇ ಇರಬೇಕು..ರಾಜನನ್ನು ೩೮ ಬಗೆಯಲ್ಲಿ ಬಣ್ಣಿಸಿದ ವಾಲ್ಮೀಕಿಗಳು ಮಂತ್ರಿಗಳನ್ನು ೫೧ ಬಗೆಯಲ್ಲಿ ಬಣ್ಣಿಸಿದರು !! ಏಕೆಂದರೆ ವ್ಯಕ್ತಿಯನ್ನು ಎಷ್ಟೇ ಬಣ್ಣಿಸಲಿ, ಕೊನೆಗೂ ಬಂದು ನಿಲ್ಲುವುದು ‘ಆತನಿಂದ ಯಾರಿಗೆ ಏನು ಲಾಭವಾಯಿತು?’ ಎಂಬಲ್ಲಿಯೇ ಅಲ್ಲವೇ..!? ಹಾಗಲ್ಲದಿದ್ದರೆ ‘ ಮಾಣಿ ಬಹಳ ಒಳ್ಳೆಯವನೇ, ಆದರೆ ತೋಟ ಮಾತ್ರ ಸಂಪೂರ್ಣ ಹಾಳು’ ‘ Operation success, but patient is dead’ ಎಂಬಂತಾದೀತು..

ಪರಿಣಾಮವೇ ಇಲ್ಲದ ಒಳ್ಳೆಯದನ್ನು ಕಟ್ಟಿಕೊಂಡು ಯಾರಿಗೇನು ?

ಚಂದನದ ಸಾರವನ್ನು ಸುಗಂಧದಲ್ಲಿ ಕಾಣುವಂತೆ, ಸಕ್ಕರೆಯ ಸಾರವನ್ನು ಸವಿಯಲ್ಲಿ ಕಾಣುವಂತೆ, ಸೂರ್ಯನ ಸಾರವನ್ನು ಬೆಳಕಲ್ಲಿ ಕಾಣುವಂತೆ, ರಾಜನ ಸಾರವನ್ನು ರಾಜ್ಯಭಾರದಲ್ಲಿ ಕಾಣಬೇಕು..! ರಾಜ್ಯಭಾರದ ಮೂರ್ತರೂಪರೇ ಮಂತ್ರಿಗಳು..ಆದುದರಿಂದಲೇ ಮಂತ್ರಿಗಳ ಬಗೆಗೆ ಇಷ್ಟೊಂದು ವಿವರಣೆ..ಮಂತ್ರಿಗಳನ್ನು ಮಾಧ್ಯಮವನ್ನಾಗಿ ಮಾಡಿಕೊಂಡು ವಾಲ್ಮೀಕಿಗಳು ವರ್ಣಿಸಿದ್ದು ದಶರಥನ ರಾಜ್ಯಭಾರವನ್ನೇ..!!

ಸವಾಲು : – ‘ ಗುರು ‘ ಏನೆಂಬುದನ್ನು ಒಂದೇ ಪದದಲ್ಲಿ ವ್ಯಾಖ್ಯಾನಿಸಿ..

ಜವಾಬು :- ‘ ಶಿಷ್ಯ ‘

ಏಕೆಂದರೆ ಗುರುವಿನ ಗುರುತು- ಗುರುತ್ವಗಳು ಶಿಷ್ಯನಲ್ಲಿಯಲ್ಲವೇ ಪ್ರಕಟವಾಗುವುದು – ಅಳೆಯಲ್ಪಡುವುದು ..? ಹಾಗೆಯೇ ರಾಜನನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ನೋಡಬೇಕಾದುದು ರಾಜ್ಯವನ್ನು, ಗಮನಿಸಬೇಕಾದುದು ‘ ರಾಜ್ಯಭಾರ ‘ ವನ್ನು..!!

ದಶರಥನು ದೇಶವೆಂಬ ದೇಹದ ಹೃದಯವಾಗಿದ್ದರೆ, ಮಿದುಳಾಗಿದ್ದರು ಆತನ ಮಂತ್ರಿಗಳು..

ಮಿದುಳಿಗೆ ಅರಿವೇ ಅಲ್ಲವೇ ಮುಖ್ಯ ಕಾರ್ಯ..?

ಬುದ್ಧಿಗೆ ಅರಿವೇ ಸಿದ್ಧಿ, ಮರೆವು ವಿಪತ್ತಿ..!!

ದಶರಥನ ಮಂತ್ರಿಗಳು ಎಲ್ಲದರಲ್ಲಿಯೂ ಬಲ್ಲಿದರಾಗಿದ್ದರೆಂಬುದನ್ನು ( ಬಲ್ಲ + ಇದ = ಬಲ್ಲಿದ ) ಬಣ್ಣಿಸುವ ಋಷಿಪದಗಳನ್ನು ಒಮ್ಮೆ ಅವಲೋಕಿಸಿ..

* || ಪ್ರಕೃತ್ಯಾ ಸಂಪದನ್ವಿತಾಃ || ವಿದ್ಯಾವಿನೀತಾ ಃ ||

ಭೂಮಿಯಲ್ಲಿ ನೈಸರ್ಗಿಕವಾಗಿ ನೀರಿದ್ದರೆ, ಬಾವಿ ತೋಡಿದಾಗ ಅದು ಸರ್ವಜನೋಪಯೋಗಿಯಾಗಿ ಪ್ರಕಟಗೊಳ್ಳುತ್ತದೆ..ವ್ಯಕ್ತಿಯಲ್ಲಿ ನೈಸರ್ಗಿಕವಾಗಿ ಸಾಮರ್ಥ್ಯವಿದ್ದರೆ, ಸರಿಯಾದ ಶಿಕ್ಷಣ ನೀಡಿದಾಗ ಅದು ವಿಕಸಿತಗೊಂಡು, ವ್ಯಕ್ತಿಗೂ, ಸಮಾಜಕ್ಕೂ ಹಿತವಾಗುವಂತೆ ಪ್ರಕಟಗೊಳ್ಳುತ್ತದೆ.. ಸಾಮರ್ಥ್ಯವಿಲ್ಲದವನಿಗೆ ಶಿಕ್ಷಣ ನೀಡುವುದು ನೀರಿಲ್ಲದಲ್ಲಿ ಬಾವಿ ತೋಡಿದಂತೆಯೇ ಸರಿ..! ಸಾಮರ್ಥ್ಯವಿರುವವನಿಗೆ ಸರಿಯಾದ ಶಿಕ್ಷಣ ದೊರೆಯದಿದ್ದರೆ, ಭೂಮಿಯಲ್ಲಿ ನೀರಿದ್ದರೂ ಮೇಲೆತ್ತುವ ಮನುಷ್ಯಪ್ರಯತ್ನವಿಲ್ಲದಾಗ ಅದು ವ್ಯರ್ಥವಾಗಿ ಹೋಗುವಂತೆಯೇ ಸರಿ….!

ರಾಜ್ಯರಕ್ಷಣೆಗೆ ಬೇಕಾದ ಜ್ಞಾನ – ಗುಣಸಂಪತ್ತನ್ನು ನೈಸರ್ಗಿಕವಾಗಿಯೇ ಹೊಂದಿರುವ ವ್ಯಕ್ತಿತ್ವಗಳನ್ನು ಅಯೋಧ್ಯೆಯ ಅರಮನೆಯು ಗುರುತಿಸಿತ್ತು.. ಅವರಿಗೆ ಸಮುಚಿತವಾದ ಶಿಕ್ಷಣವನ್ನು ನೀಡಿ, ಮಂತ್ರಿಪದದಲ್ಲಿ ಪ್ರತಿಷ್ಠಾಪಿಸಿತ್ತು..

ಶ್ರೇಷ್ಠವಾದ ಆಡಳಿತವೆಂದರೆ ಯೋಗ್ಯ ವ್ಯಕ್ತಿಗಳನ್ನು ಗುರುತಿಸಿ, ಅವರಿಗೆ ಯೋಗ್ಯವಾದ ಶಿಕ್ಷಣ- ಉಪಕರಣಗಳನ್ನು ನೀಡಿ, ಯೋಗ್ಯವಾದ ಪದವಿಯಲ್ಲಿ ನೆಲೆಗೊಳಿಸುವುದೇ ಅಲ್ಲವೇ..?
(ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಅಮೃತ ವಚನಾಮೃತಕ್ಕಾಗಿ ಹರೇ ರಾಮ.ಇನ್ ವೆಬ್ ಸೈಟ್ ಲಾಗ್ ಇನ್ ಮಾಡಿರಿ. -ಸಂ.)

ಮುಂದೆ ಓದಿ

ವಿಶೇಷ ವರದಿ
ಕಾರ್ಮಿಕರ ಕೊರತೆಯಿಂದ ಬೇಸತ್ತು ಭತ್ತದ ಕೃಷಿಯಿಂದ ವಿಮುಖರಾದ ರೈತರಿಗೆ ಖುಷಿ ಕೊಡುವ ಸುದ್ದಿಯಿದು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನಡಾ ಗ್ರಾಮಪಂಚಾಯಿತಿಯ ಒಳಬೈಲಿನ ಅಜಿತ್ ಕುಮಾರ್ ಆರಿಗರ ಮನೆಯಿರುವುದು ಇತಿಹಾಸ ಪ್ರಸಿದ್ದ ಜಮಲಾಬಾದ್ ಕೋಟೆಯ ಬುಡದಲ್ಲಿ.ಕೃಷಿಯೇ ಇವರ ಕು ಟುಂಬ ದ ಮೂಲ ಆಧಾರ; ಆದರೆ ಇತ್ತೀ ಚೆಗೆ ಕೃಷಿ ಕಾರ್ಮಿ ಕರ ಕೊರತೆ ಯಿಂದಾ ಗಿ ಭತ್ತದ ಕೃಷಿ ಯನ್ನೇ ನಿಲ್ಲಿ ಸಿದ ಆರಿಗ ಅವರು ಬೆಳ್ತಂ ಗಡಿಯ ಜಿಲ್ಲಾ ಕೃಷಿ ತರ ಬೇತಿ ಕೇಂದ್ರದ ಪ್ರೋತ್ಸಾಹ ದಿಂದಾಗಿ ಇದೀಗ ಮತ್ತೆ ಭತ್ತದ ಕೃಷಿ ಮಾಡಿ ಯಶಸ್ಸು ಸಾಧಿಸಿ ದ್ದಾರೆ. ಶೇಕಡ 80 ರಷ್ಟು ಯಾಂತ್ರೀಕೃತ ಕೃಷಿಯ ಪ್ರಯೋ ಜನ ಪಡೆದಿ ರುವ ಇವರು 2.5 ಎಕರೆ ವ್ಯಾಪ್ತಿ ಯಲ್ಲಿ ಬೀಜೋತ್ಪಾ ದನಾ ಕೇಂದ್ರ ದಿಂದ ನೀಡಿದ ಜಯ ಮತ್ತು ರಾಶಿ ಭತ್ತ ಬೆಳೆ ದಿದ್ದಾರೆ.



ಇದರಿಂದ 50 ದಿನ ಗಳ ಕಾಲ 25 ಜನರು ಮಾಡ ಬೇಕಾದ ಕೃಷಿ ಕೆಲಸ ಒಂದು ದಿನ ದಲ್ಲಾ ಗಿದೆ. ಕೃಷಿ ತರ ಬೇತಿ ಕೇಂದ್ರ ನೀಡಿದ ನಾಟಿ ಯಂತ್ರ ದಿಂದ 6 ಲೀಟರ್ ಡಿಸಿಲ್ ಬಳಸಿ 2 ಜನ ಕಾರ್ಮಿ ಕರ ನೆರವಿ ನಿಂದ ತನ್ನ ಹೊಲ ದಲ್ಲಿ ಭತ್ತದ ಕೃಷಿ ಮಾಡಿ ದ್ದಾರೆ. ಜಿಲ್ಲಾ ಕೃಷಿ ತರ ಬೇತಿ ಕೇಂದ್ರ ರೈತ ರಿಗೆ ನೆರವು ನೀಡು ತ್ತಿದ್ದು ನಬಾರ್ಡ್ ಸಹ ಇಲ್ಲಿನ ರೈತ ರಿಗೆ ಉಚಿತ ಮಾಹಿತಿ, ತರ ಬೇತಿ ಯೋಜನೆ ಯು ಹಮ್ಮಿಕೊಳ್ಳಲು ಮುಂದೆ ಬಂದಿದೆ ಎಂದು ಆರಿಗರು ಹೇಳುತ್ತಾರೆ. ವೈಜ್ಞಾನಿಕತೆಯ ನೆರವು ಹಾಗೂ ಉತ್ತಮ ತರಬೇತಿಯೊಂದಿಗೆ ಭತ್ತದ ಕೃಷಿಯಲ್ಲಿ ಯಶಸ್ವಿಯಾಗಬಹುದು. ಕೃಷಿ ಕಾರ್ಮಿಕರ ಕೊರತೆಯಿಂದ ಭತ್ತದ ಗದ್ದೆ ನಾಶವಾಗಿ ಅಡಿಕೆ ಕೃಷಿಯತ್ತ ಒಲವು ಮೂಡಿತು, ಈಗ ರಬ್ಬರ ಕೃಷಿಯ ಸರದಿ. ಜಮಲಾಬಾದ್ ಕೋಟೆಯ ಮೇಲೆ ನಿಂತು ನೋಡಿದರೆ ರಬ್ಬರ್ ಕೃಷಿಯ ವ್ಯಾಪಕತೆ ಅರಿವು ಕಾಣುತ್ತದೆ. ಬೆಳ್ತಂ ಗಡಿ ಜಿಲ್ಲಾ ಕೃಷಿ ತರ ಬೇತಿ ಕೇಂದ್ರದ ಉಪ ನಿರ್ದೇ ಶಕ ರಾದ ಜಿ.ಟಿ ಪುತ್ತ ಅವರ ಮಾರ್ಗ ದರ್ಶನ ದಿಂದ ಭತ್ತದ ಕೃಷಿ ಯತ್ತ ಬೆಳ್ತಂ ಗಡಿ, ಬಂಟ್ವಾ ಳದ ರೈತರು ಮುಖ ಮಾಡಿ ದ್ದಾರೆ. ಒಟ್ಟು ಹನ್ನೆ ರಡು ಎಕರೆ ಪ್ರದೇಶದಲ್ಲಿ ನೇಂದ್ರ ಬಾಳೆ, ತೆಂಗು, ರಬ್ಬರ್, ಕಂಗಿನ ಗಿಡಗಳಿವೆ. ತರಕಾರಿಯಲ್ಲಿ ಹೆಚ್ಚಿನ ಲಾಭವಿದೆ ಎನ್ನುವ ಆರಿಗರು ಹಸುಗಳನ್ನು ಹೈನುಗಾರಿಕೆಗಿಂತ ಮುಖ್ಯವಾಗಿ ಗೊಬ್ಬರಕ್ಕೆ ಬಳಸಬಹುದಾಗಿದೆ. ಎರಡು ಹಸುಗಳು ದಿನಕ್ಕೆ 12 ಲೀಟರ್ ಹಾಲು ನೀಡುತ್ತಿದೆ. ತರಕಾರಿ ಬೆಳೆದರೆ ನೇರವಾಗಿ ಅದಕ್ಕೆ ಮಾರುಕಟ್ಟೆಯನ್ನು ರೈತರು ಹುಡುಕಿಕೊಂಡರೆ ಉತ್ತಮ ಆದಾಯ ಎಂದರು. ತೊಂಡೆಕಾಯಿ, ಬದನೆ, ಕುಂಬಳ, ಸೌತೆ, ಅಲಸಂಡೆಯ ಜೊತೆಗೆ ಭತ್ತ ಇಲ್ಲದ ಸಂದರ್ಭದಲ್ಲಿ ಉದ್ದು, ಎಳ್ಳು, ಸೆಣಬು ಬಿತ್ತನೆಯಿಂದ ಲಾಭವಿದೆ ಎನ್ನುತ್ತಾರೆ ಅರಿಗರು. ಇಂತಹ ಕೃಷಿಯಿಂದ ವೈಭವೋಪೇತ ಜೀವನ ಸಾಧ್ಯವಿಲ್ಲದಿದ್ದರೂ, ನೆಮ್ಮದಿಯ ಜೀವನಕ್ಕೆ ಮೋಸವಿಲ್ಲ ಎಂಬುದು ಅರಿಗರ ವಾದ.

ಮುಂದೆ ಓದಿ

ಹನ್ನೊಂದನೆ ಕಂತು

ದೃಶ್ಯ ಮಾಧ್ಯಮದ ನೆನಪಿನ ಸವಾರಿ...

ಹಮ್ ತುಂ ಪೇ ಮರ್ತೈ ಹೈ

ಕನ್ನಡದಲ್ಲೊಂದು ಗಾದೆಯಿದೆ, `ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು'. ಮನೆ ಕಟ್ಟುವುದು ಸುಲಭದ ಕೆಲಸ ಅಲ್ಲ. ಲಕ್ಷಗಟ್ಟಲೆ ಖರ್ಚು ಮಾಡಿಯೂ ಸುಸೂತ್ರವಾಗಿ ಒಂದುಮನೆಯನ್ನು ಕಟ್ಟಲು ಸಾಧ್ಯವಿಲ್ಲ. ಮನೆಗೆ ಬೇಕಾದ ಮೆಟೀರಿಯಲ್ಗಳ ಖರ್ಚು, ಲೇಬರ್ ಖರ್ಚು, ನೀರಿನ ಖರ್ಚು ಹೀಗೆ ಖರ್ಚುಗಳ ಪಟ್ಟಿ ಉದ್ದಕ್ಕೂ ಸಾಗುತ್ತದೆ. ಆಗ ಮನೆ ಕಟ್ಟಿಸಲು ಇಳಿದ ಯಜಮಾನ ಅರೆ ಜೀವವಾಗಿರುತ್ತಾನೆ. ಸರಿ ಮನೆ ಕಟ್ಟಲು ಸಾಮರ್ಥ್ಯವಿದ್ದವರಿಗೂ ತೊಂದರೆ ತಪ್ಪಿದ್ದಲ್ಲ. ಆರ್ಥಿಕ ಅಡಚಣೆ. ಅದಕ್ಕಾಗಿ ಬ್ಯಾಂಕು, ಫೈನಾನ್ಸ್ ಕಂಪನಿಗಳಿಗೆ ಅಲೆದಾಟ. ಅಲ್ಲಿ ಲೋನ್ ತೆಗೆದುಕೊಳ್ಳಲು ಸಾವಿರ ಶರತ್ತುಗಳು. ಅವುಗಳನ್ನೆಲ್ಲಾ ರೆಡಿಮಾಡಿ ಮನೆ ಕಟ್ಟುವಾಗ `ಅಬ್ಬಾ, ಇಷ್ಟು ಕಷ್ಟ ಪಟ್ಟು ಮನೆ ಬೇಕಾ?' ಅನಿಸದಿರುವುದಿಲ್ಲ.


ಆದರೆ ಅದೇ ಒಬ್ಬ ಚಿತ್ರಕಾರ ತನ್ನ ಕುಂಚದಿಂದ ತನ್ನ ಕುಶಲತೆಯಿಂದ ಸುಂದರವಾದ ಮನೆಯನ್ನು ಕ್ಷಣದಲ್ಲಿಯೇ ರಚಿಸಬಲ್ಲ. ಕುಂಚದಲ್ಲಿ ಬಣ್ಣವನ್ನು ಅದ್ದಿ ಸಲೀಸಾಗಿ ಮನೆಯನೇಕೆ ಅರಮನೆಯನ್ನೇ ರಚಿಸಬಲ್ಲ. ಹಾಗೆಯೇ ಸಿನಿಮಾ ಮಂದಿ ಕೂಡ. ನಿಜ ಜೀವನದಲ್ಲಿ ಅವರ ಕೈಯಲ್ಲಿ ಚಿಕ್ಕಾಸು ಇಲ್ಲದಿದ್ದರು ಅವರು ಸಿನಿಮಾಗಳಲ್ಲಿ ಶ್ರೀಮಂತರ ಪಾತ್ರ ಮಾಡುತ್ತಾ ವೀಕ್ಷಕರ ಮನಸ್ಸನ್ನು ಅಪಹರಿಸುತ್ತಾರೆ. ಅಲ್ಲಿ ಅವರಿಗೆ ಬಂಗಲೆಯಿರುತ್ತದೆ. ಮನೆಗೊಂದು ದೊಡ್ಡ ಕಾರು, ಇಂಗ್ಲೀಷ್ ನಾಯಿ, ಮನೆಯೊಳಗೆ ಓಡಾಡಲು ಪವರ್ ಶೂಸ್ ಗಳು... ಹೀಗೆ ಅಸಂಗತಗಳೆಲ್ಲಾ ಅವರಿಗಿರುತ್ತದೆ.

ಇಂತಹ ಮನೆ ಅಥವಾ ಬಂಗ್ಲೆಯನ್ನು ನಿರ್ಮಿಸಲು ಅವರಿಗೆ ಕೋಟಿಗಟ್ಟಲೆ ಹಣ ಬೇಡವಾದರೂ ಸ್ವಲ್ಪ ಖರ್ಚು ಮಾಡಿ ದೊಡ್ಡ ದೊಡ್ಡ ಬಂಗಲೆಗಳನ್ನೇ ನಿರ್ಮಿಸಿಕೊಳ್ಳುತ್ತಾರೆ. ಆದರೆ ಅವೆಲ್ಲವೂ ತಾತ್ಕಾಲಿಕ ಮಾತ್ರ. ಅವೆಲ್ಲ ಅವರ ವಾಸಕ್ಕಾಗಿ ಅಲ್ಲ, ಕೇವಲ ಚಿತ್ರೀಕರಣ ನಡೆಸುವುದಕ್ಕಾಗಿ. ಇದಕ್ಕೊಂದು ವರದಾನ ಪ್ಲಾಸ್ಟರ್ ಆಫ್ ಪ್ಯಾರೀಸ್ ಅನ್ನುವ ಮೆಟೀರಿಯಲ್. ಇದರಿಂದ ತಾತ್ಕಾಲಿಕವಾಗಿ ಗಟ್ಟಿಮುಟ್ಟಲ್ಲದಿದ್ದರೂ ಮನೆಯಂತಹ ಮನೆಯನ್ನು ಅಥವಾ ಬಂಗಲೆಯಂತಹ ಬಂಗಲೆಯನ್ನು ನಿರ್ಮಿಸಬಹುದು.

ಇತ್ತೀಚೆಗೆ ಈ ಪ್ಲಾಸ್ಟರ್ ಆಫ್ ಪ್ಯಾರಿಸ್ನ ಅಗತ್ಯ ಎಲ್ಲಿಯವರೆಗೆಂದರೆ ಅದನ್ನು ನಾಟಕದ ಸೆಟ್ಟಿಂಗ್ಗಳಿಗೆ, ಮದುವೆ ಮಂಟಪ ನಿರ್ಮಿಸುವುದಕ್ಕೆ ಮತ್ತು ಮನೆಯ ಇಂಟೀರಿಯರ್ ಡೆಕೊರೇಷನ್ಗಳಿಗೂ ಉಪಯೋಗಿಸುವುದಕ್ಕೆ ಸಹಾಯವಾಗುತ್ತಿದೆ. ಅವುಗಳೆಲ್ಲಾ ಸುಣ್ಣ ಬಣ್ಣ ಹಚ್ಚಿಕೊಂಡು ಆಕರ್ಷಕವಾಗಿಯೂ, ಸುಂದರವಾಗಿಯೂ ಕಂಗೊಳಿಸುತ್ತವೆ. ಯಾವ ನೈಜ ಮನೆಯಾಗಲಿ ಬಂಗಲೆಯಾಗೂ ಕಡಿಮೆಯಿಲ್ಲದಂತೆ ಸಮೃದ್ಧವಾಗಿ ಕಾಣುತ್ತವೆ.

ಇದೇ ರೀತಿಯ ನೈಜ್ಯತೆಯನ್ನು ಬಿಂಬಿಸುವ ಪಾರ್ಕುಗಳು, ಪ್ರಾಣಿ ಪಕ್ಷಿಗಳ ಪ್ರತಿಬಿಂಬದ ಉದ್ಯಾನಗಳು, ಚಿತ್ರ ವಿಚಿತ್ರ ಶಿಲ್ಪಾಕೃತಿಗಳು ಕೂಡ ಜನಪ್ರಿಯವಾಗುತ್ತಿವೆ. ಕೇವಲ ಮಣ್ಣಿನಿಂದ ಮತ್ತು ಕಲ್ಲಿನಿಂದಲ್ಲದೆ ಇಂತಹ ತಾತ್ಕಾಲಿಕ ಸಿಮೆಂಟುಗಳಿಂದ ತಯಾರಿಸಲಾದ ಸುಂದರ ಶಿಲ್ಪ ಕಾವ್ಯಗಳು ಅರಳಿ ಜನಮಾನಸವನ್ನು ಗೆಲ್ಲುತ್ತಿರುವುದು ಇತ್ತೀಚಿನ ಬೆಳವಣಿಗೆ. ಜುರಾಸಿಕ್ ಪಾರ್ಕು, ನ್ಯಾಷನಲ್ ಪಾರ್ಕುಗಳಂತಹ ಮಾದರಿ ಮತ್ತು ಕೃತಕ ಉದ್ಯಾನಗಳು ಹುಟ್ಟಿಕೊಳ್ಳುತ್ತಿವೆ. ಇದೇ ವರ್ಗಕ್ಕೆ ಸೇರುವ ಇನ್ನೊಂದು ವ್ಯವಸ್ಥೆಯೆಂದರೆ ಫ್ಯಾಂಟಸಿ ಪಾರ್ಕು, ವಾಟರ್ ಪಾರ್ಕುಗಳು. ಇಲ್ಲಿ ಎಲ್ಲವೂ ಕೃತಕವಾದರೆ ನೋಡುವವರಿಗೆ ಇಲ್ಲಿ ಕಣ್ಣಿಗೆ ಮಾತ್ರವಲ್ಲ ಮನಸ್ಸಿಗೂ ಹಬ್ಬ. ವರ್ಷಕ್ಕೊಮ್ಮೆಯೋ, ಇಲ್ಲ ಎರಡು ಬಾರಿಯೋ ಇಲ್ಲಿಗೆ ಬಂದು ಸಾವಿರಗಟ್ಟಲೆ ಸುರಿದು ಸುಖ ಪಡುವುದು ಬೇರೆಯ ವಿಷಯ. ಎಲ್ಲೂ ಇಲ್ಲದ, ಎಂದೂ ಸಿಗದ ರಿಲ್ಯಾಕ್ಸ್ ಕೊಂಚ ಯಾಂತ್ರಿಕ ಬದುಕಿಗೆ ಅಗತ್ಯವಿದೆ. ಅದಕ್ಕಾಗಿ ಎಲ್ಲವೂ ಈಗ ಇಂತಹ ಸುಂದರ ಸುಳಿಯೊಳಗೆ ನಿರ್ಮಾಣವಾಗುತ್ತವೆ.


ಕಣ್ಣಿದ್ದರೂ ಪರಾಂಬರಿಸಿ ನೋಡಬೇಕು ಅನ್ನುವುದು ಇನ್ನೊಂದು ಗಾದೆ ಮಾತು. ಇಂತಹ ಕೃತಕ ಸೆಟ್ಟಿಂಗ್ ಗಳು ಕೆಲವೊಮ್ಮೆ ಅಪಾಯವನ್ನು ತಂದೊಡ್ಡಬಲ್ಲವು. ಫ್ಯಾಂಟಸಿ ಪಾರ್ಕುಗಳಲ್ಲಿ ದುರಂತಗಳು ನಡೆದದ್ದೂ ಇದೆ. ಮನುಷ್ಯ ಎಷ್ಟು ತಾಂತ್ರಿಕವಾಗಿ ಮುಂದುವರಿಯುತ್ತಾನೋ ಅಷ್ಟೇ ಅಪಾಯದ ತೂಗಂಚಿನ ಕತ್ತಿಯ ಕೆಳಗಿರುವ ಬಲಿಪಶುವಿನ ಹಾಗೆ ಇರುತ್ತಾನೆ. ಇದನ್ನೆಲ್ಲಾ ಯಾಕೆ ಹೇಳಬೇಕಿದೆಯೆಂದರೆ ಇಂತಹ ರಿಸ್ಕ್ಗಳನ್ನು ಬಳಸಿಕೊಂಡು ದೊಡ್ಡ ದೊಡ್ಡ ಚಿತ್ರಗಳು ಚಿತ್ರೀಕರಣವಾಗುತ್ತವೆ. ಇವುಗಳು ದುರಂತವನ್ನೂ ಆಹ್ವಾನಿಸುತ್ತವೆ. ಉದಾಹರಣೆಗೆ `ದ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್'ನ ಒಳಾಂಗಣದ ಚಿತ್ರೀಕರಣದಲ್ಲಿ ಬೆಂಕಿ ಕಾಣಿಸಿಕೊಂಡು ದುರಂತ ಸಂಭವಿಸಿತ್ತು. ಹಾಗೆಯೇ ಥ್ರಿಲ್ಲರ್ ಮಂಜು ಸಾಹಸದ ಲಾಕಪ್ ಡೆತ್ ಚಿತ್ರೀಕರಣದಲ್ಲಿಯೂ ಅಫಘಾತಗಳು ಸಂಭವಿಸಿದ್ದವು. ಹಾಗೆಯೇ ಇಂತಹ ಕೃತಕ ಬಂಗಲೆಯೆ ಸೆಟ್ಟಿಂಗ್ ಒಂದನ್ನು ಮಣಿಪಾಲದ ಸುಂದರ ತಾಣ ಎಂಡ್ ಪಾಯಿಂಟ್ನಲ್ಲಿಯೂ ನಿರ್ಮಿಸಿ ಹಿಂದಿಯ ಅದ್ದೂರಿ ಸಿನಿಮಾ `ಹಮ್ ತುಂ ಪೇ ಮರ್ತೈ ಹೈ' ಚಿತ್ರೀಕರಣಗೊಂಡಿತ್ತು. ಇದರ ರೂವಾರಿ ಚೀತಾ ಯಜ್ಞೇಶ್ ಶೆಟ್ಟಿಯವರು.

ಮಣಿಪಾಲದ ಎಂಡ್ ಪಾಯಿಂಟ್ನ ಸುಂದರ ಹಸಿರು ಹುಲ್ಲುಹಾಸಿನ ಪ್ರದೇಶದ ನಡುವೆ ಅದ್ದೂರಿಯಾಗಿ ನಿರ್ಮಿಸಲಾಗಿದ್ದ ಭವ್ಯ ಬಂಗಲೆ `ಪರಂಪರಾ' ಮತ್ತು `ಮುಕ್ತಾಂಗಣ್' ನ ಸೆಟ್ಟಿಂಗ್ ಅನ್ನು ಈ ಚಿತ್ರದ ಚಿತ್ರೀಕರಣಕ್ಕಾಗಿ ನಿರ್ಮಿಸಲಾಗಿತ್ತು. ಹಿನ್ನಲೆಯಲ್ಲಿ ಪರಿಶುದ್ಧವಾಗಿ ಹರಿಯುವ ಸ್ವರ್ಣಾ ನದಿಯ ದೃಶ್ಯ ನಯನ ಮನೋಹರವಾಗಿ ಕಾಣಿಸುತ್ತಿತ್ತು.

ನಾನಾಗ ಸಿ.ಎ. ಕಲಿಯುತ್ತಿದ್ದ ವರ್ಷ. ಮಣಿಪಾಲದಲ್ಲಿ ನಿರ್ಮಿಸಲಾದ ಚಿತ್ರೀಕರಣದ ಆ ಕೃತಕ ಮನೆಯನ್ನು ಶೂಟಿಂಗ್ ಮುಗಿದ ಬಳಿಕವೂ ಪ್ರೇಕ್ಷಕರಿಗಾಗಿ ತೆರವುಗೊಳಿಸಲಾಗಿತ್ತು. ಅದರ ಭವ್ಯತೆಯನ್ನು ನೋಡಿಯೇ ನಿಬ್ಬೆರಗಾಗಿದ್ದೆ. ಅಷ್ಟೊಂದು ಅಚ್ಚುಕಟ್ಟುತನವಿತ್ತು. ಅದನ್ನು ನೋಡುತ್ತಿದ್ದರೆ ಅದೊಂದು ಸಿನಿಮಾಕ್ಕಾಗಿ ನಿರ್ಮಿಸಿದ ಸೆಟ್ಟ್ ನಂತೆ ಕಾಣುತ್ತಿರಲಿಲ್ಲ. ಬದಲಾಗಿ ಎರಡು ಭವ್ಯ ಅರಮನೆಗಳಂತೆ ಕಾಣುತ್ತಿದ್ದವು.

ಈ ಚಿತ್ರದ ಮುಖ್ಯ ಪಾತ್ರದಲ್ಲಿ ತುಂಬು ಗಲ್ಲದ ಸದಾ ನಗುಮುಖದ ಹೀರೋ ಗೋವಿಂದ ಅಭಿನಯಿಸಿದ್ದರೆ ಅವನ ಪ್ರೇಮಿಕೆಯಾಗಿ ರಂಗೀಲಾ ಖ್ಯಾತಿಯ ಉರ್ಮಿಳಾ ಮಾಂತೋಡ್ಕರ್ ಅಭಿನಯವಿತ್ತು. ಜೊತೆಗೆ ನಿರ್ಮಲ್ ಪಾಂಡೆ, ಪರೇಶ್ ರಾವಲ್, ಜಾನಿ ಲಿವರ್, ಹಿಮಾನಿ ಶಿವಪುರಿ, ಗುಲ್ಷನ್ ಗ್ರೋವರ್ ಮತ್ತು ಡಿಂಪಲ್ ಕಪಾಡಿಯ ಮುಖ್ಯ ಪಾತ್ರಗಳಲ್ಲಿದ್ದರು.

ಈ ಚಿತ್ರದ ಭಾವೋನ್ಮಾದದ ಟೈಟಲ್ ಸಾಂಗ್ `ಹಮ್ ತುಂ ಪೇ ಮರ್ತೈ ಹೈ' ಬಹಳ ಜನಪ್ರಿಯವಾದ ಹಾಡಾಗಿತ್ತು. ಎರಡು ಮನೆತನಗಳ ರಾಗದ್ವೇಷಗಳ ಕಥೆಯಿರುವ ಈ ಚಿತ್ರ 1992 ರಲ್ಲಿ ಬಿಡುಗಡೆ ಕಂಡಿತ್ತು.



ಅನು ಬೆಳ್ಳೆ

ಮುಂದೆ ಓದಿ
3:26 PM

ಗೆಳತಿ...

Posted by ekanasu

ಸಾಹಿತ್ಯ
"ನಿನಗೇನು ಗೊತ್ತು ಗೆಳತಿ,
ಆಸೆ- ನಿರೀಕ್ಷೆಗಳ ಹೊರೆ ಹೊತ್ತ
ಹೃದಯದ ಸಂಕಟ!?
ಬಿಟ್ಟು ಬಿಡು ಆಸೆಯ,
ಸುಟ್ಟು ಬಿಡು ನಿರೀಕ್ಷೆಯ
ಅನ್ನುತ್ತೀಯಲ್ಲ! ಅವೇನು
ಎಂಜಲೆಲೆ

ಸಾವಿತ್ರಿ ವಿ ಎಚ್

ಮುಂದೆ ಓದಿ

ಸಾಹಿತ್ಯ

ಮನಸ್ಸೆಂಬ ಹುತ್ತದಲಿ
ಆಸೆಗಳ ಹಾವು
ಘಳಿಗೆಗೊಂದು ಬಣ್ಣ
ಯಾರಿಗೂ ಕಾಣದು ಅಣ್ಣ
ಆಸೆಗಳ ಮೊಡಕೆ ಒಡೆಯಿತು
ಒಂದೊಂದಾಗಿ ಆಚೆ ಹಾರಿತು
ಬೆಳಿಗ್ಗೆ ತಪಸ್ವಿ, ರಾತ್ರಿ ಕಾಮಿ
ರಾತ್ರಿ ಜ್ಞಾನಿ, ಬೆಳಿಗ್ಗೆ ಅಜ್ಞಾನಿ
ಸುಮ್ಮನಿರಲೂ ಬಿಡುತ್ತಿಲ್ಲ ಯೋಚನೆ


ಒಳ್ಳೆಯ ಕೆಟ್ಟ ಪರಿಕಲ್ಪನೆ
ಗಾಳಿಯಲ್ಲಿ ಯೋಚನೆಗಳು ಹಾರುತ್ತಿರಬೇಕು
ನನ್ನ ಮನಸ್ಸು ಸ್ಪರ್ಶತಂತಾಗಿರಬೇಕು
ಸ್ವರ್ಗದ ಆಸೆ ಕೆಲವೊಮ್ಮೆ
ಹಣದ ಆಸೆ ಕೆಲವೊಮ್ಮೆ
ಸಾವಿನ ಭಯ ಕೆಲವೊಮ್ಮೆ
ವಿಶ್ವ ಜಯಿಸುವ ಛಲ ಕೆಲವೊಮ್ಮೆ
ಕಾಲದ ಬಿರುಗಾಳಿಗೆ ಸಿಲುಕಿ
ಲೋಲಕವಾಗಿದೆ ಬದುಕು
ಭಾವನೆಗಳ ಕೋಟೆಯಲಿ
ಕಲ್ಪನೆಗಳ ಕಹಳೆ
ಯೋಚಿಸಲು ಖರ್ಚಿಲ್ಲ
ಯೋಚನೆಗಳಿಗೆ ಸಾವಿಲ್ಲ

- ಜಬೀವುಲ್ಲಾ ಖಾನ್

ಮುಂದೆ ಓದಿ

ರಾಜ್ಯ -ರಾಷ್ಟ್ರ
ಕನ್ನಡದ ಕಂಪು ಬೀರುವ ಈ ಕನಸು...
ಈ ಕನಸು ಬಹಳ ಚೆನ್ನಾಗಿ ಮೂಡಿಬಂದಿದೆ. ರಾಜಕೀಯ ವಿಶ್ಲೇಷಣೆಯಿಂದ ಕಥೆಗಳ ತನಕ, ಕಲೆಯ ಕುರಿತ ವಿಶ್ಲೇಷಣೆಯಿಂದ ಹೊಸ ಸುದ್ದಿಯ ತನಕ ಎಲ್ಲವೂ ಈ ಕನಸಿನಲ್ಲಿದೆ. ಬಹುಶಃ ಈ ಕಾರಣದಿಂದಾಗಿಯೇ ಈ ಕನಸು.ಕಾಂ ಎಲ್ಲಾ ವರ್ಗದ ಓದುಗರಿಗೆ ತಲುಪಿದ್ದು ಮಾತ್ರವಲ್ಲದೆ ಜನಪ್ರಿಯವಾಗಿದ್ದು ಎಂದರೆ ತಪ್ಪಾಗಲಾರದು. ಈ ಕನಸನ್ನು ಸಂಪೂರ್ಣ ಓದಿದಾಗ ಕನ್ನಡದ ಕಂಪು ಸವಿದಂತಾಗುತ್ತದೆ. ಪ್ರತೀ ಭಾಷೆಗೂ ಅದರದ್ದೇ ಆದ ಕಂಪಿದೆ. ಆ ಕಂಪನ್ನು ಭಾಷೆ ಬಳಸಿದವರೆಲ್ಲ ನೀಡುವುದಿಲ್ಲ. ಆದರೆ ಈ ಕನಸು ನೀಡುತ್ತಿದೆ. ಹೀಗಂದಮಾತ್ರಕ್ಕೆ ಸಾಹಿತ್ಯದ ಶ್ರೇಷ್ಠತೆ ಬಲ್ಲವರಿಗೆ ಮಾತ್ರ ಈ ಕನಸು ಅರ್ಥವಾಗುತ್ತದೆ ಎಂದಲ್ಲ.


ಮುಖಪುಟ ವಿನ್ಯಾಸ, ಪ್ರತಿಯೊಂದು ಬರಹಗಳ ಜೊತೆ ಜೊತೆಗೆ ನೀಡುವ ಪೂರಕ ಚಿತ್ರಗಳು, ಅವುಗಳ ವಿನ್ಯಾಸಗಳು, ಸುದ್ದಿಯ ಪರಿಕಲ್ಪನೆ ಇವೆಲ್ಲವೂ ಜನಸಾಮಾನ್ಯರಿಂದ ತೊಡಗಿ ಬುದ್ಧಿಜೀವಿಯ ತನಕ ಎಲ್ಲರಿಗೂ ತಲುಪುವಂತಾಗಿದೆ.
ಇಷ್ಟೆಲ್ಲ ಮಾಡಿದ ಈ ಕನಸಿನ ರೂವಾರಿ, ಸಂಪಾದಕ ಹರೀಶ್ ಆದೂರು ಪತ್ರಿಕೋದ್ಯಮದಲ್ಲಿ ಹಲವು ದಶಕಗಳನ್ನು ಕಳೆದಿರಬಹುದೆಂಬ ಭಾವನೆ ನನ್ನದಾಗಿತ್ತು. ಆದರೆ ಅವರು ಹುಟ್ಟಿಯೇ ಇನ್ನೂ ಮೂರು ದಶಕಗಳು ಆಗಿಲ್ಲ ಎಂಬುದನ್ನು ಅರಿತು ಅಚ್ಚರಿಗೊಂಡೆ...!ನನ್ನ ಮಗನ ವಯಸ್ಸಿನವರು ಹರೀಶ್. ಬಹಳ ಚಿಕ್ಕ ವಯಸ್ಸಿನಲ್ಲೇ ಉತ್ತಮ ಸಾಧನೆ ಮೆರೆದಿದ್ದಾರೆ. ಈ ಕನಸು.ಕಾಂ, ಅದರ ಸಂಪಾದಕ ಹರೀಶ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬ ಮುಕ್ತ ಹಾರೈಕೆ ನಮ್ಮದು.
- ತಾರಾ ಭಟ್, ಹೊನ್ನಾವರ

ಮುಂದೆ ಓದಿ

ರಾಜ್ಯ - ರಾಷ್ಟ್ರ
ನಾಡೋಡಿ
ಕುದುರೆಮುಖದ ಪ್ರಮುಖ ಆಕರ್ಷಣೆಗಳಲ್ಲಿ ಲಕ್ಯಾ ಡ್ಯಾಮ್ ಕೂಡಾ ಒಂದು. ಸುಮಾರು 350 ಹೆಕ್ಟೇರ್ ಪ್ರದೇಶದಲ್ಲಿ ಈ ಡ್ಯಾಮ್ ವಿಸ್ತರಿಸಿಕೊಂಡಿದೆ. ಅದಿರು ಸಂಸ್ಕರಣೆಗೆ ಉಪಯೋಗಿಸಲ್ಪಟ್ಟ ಹೆಚ್ಚುವರಿ ನೀರನ್ನು ಈ ಡ್ಯಾಮ್ನಲ್ಲಿ ಸಂಗ್ರಹಿಸಲಾಗುತ್ತಿತ್ತು. ಈ ನೀರಿನೊಂದಿಗೆ ಬಂದ ಕಬ್ಬಿಣದ ಅದಿರು, ಮಣ್ಣು ಇದೀಗ ಡ್ಯಾಮ್ ತುಂಬೆಲ್ಲಾ ಹರಿವಿಕೊಂಡಿದೆ. ಈ ಮಣ್ಣಿನಲ್ಲಿ ಶೇ.20ರಷ್ಟು ಪ್ರಮಾಣದಲ್ಲಿ ಕಬ್ಬಿಣದ ಅದಿರು ಉಳಿದುಕೊಂಡಿದೆ ಎಂಬುದು ಮಹತ್ವದ ಅಂಶ. ಕುದುರೆಮುಖ ಐರನ್ ಓರ್ ಕಂಪೆನಿ ಲಿ.ಸಂಸ್ಥೆ ಇದೀಗ ಈ ಡ್ಯಾಮಿನಲ್ಲಿರುವ ಸಿಲ್ಟ್/ಮಣ್ಣಿನತ್ತ ವಕ್ರ ದೃಷ್ಟಿನೆಟ್ಟಿದೆ. ಆ ಮಣ್ಣನ್ನು ಕೊಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದೆ.


ಕೋಟಿ ಕೋಟಿ ಕೊಳೆಯುತ್ತಿದೆ...

ಹೌದು...ಕೆ.ಐ.ಒ.ಸಿ.ಎಲ್ ನ ಕೇಂದ್ರೀಯ ಉಗ್ರಾಣದಲ್ಲಿ ಇದೀಗ ಕೋಟಿ ಕೋಟಿಯ ಯಂತ್ರೋಪಕರಣಗಳು ಕೊಳೆಯುತ್ತಿವೆ. ಕಳೆದ 35ವರುಷಗಳ ಸುಧೀರ್ಘ ಅವಧಿಯಲ್ಲಿ ಗಣಿಗಾರಿಕೆಗಾಗಿ ಉಪಯೋಗಿಸಲ್ಪಡುತ್ತಿದ್ದ ಬೃಹತ್ ಬುಲ್ಡೋಜರ್ಗಳು, ಟಿಪ್ಪರ್ಗಳು, ಎಸ್ಕಲೇಟರ್ಸ್,ಲಾರಿ,ಇತರೆವಾಹನಗಳು, ಸೇರಿದಂತೆ ಅಪಾರ ಪ್ರಮಾಣದ ಯಂತ್ರೋಪಕರಣಗಳು ಇದೀಗ ಕೇಂದ್ರೀಯ ಉಗ್ರಾಣ, ಗಣಿಗಾರಿಕಾ ಪ್ರದೇಶಗಳ ಹೊರವಲಯದಲ್ಲಿ ಬಿಸಿಲು ಮಳೆಗೆ ಜರ್ಝರಿತವಾಗುತ್ತಿದೆ.
ಇದನ್ನು ಮಾರಾಟಮಾಡುವ ಬಗ್ಗೆ ಚಿಂತನೆ ನಡೆಸಲಾಗಿದ್ದು ಕೆ.ಐ.ಒ.ಸಿ.ಎಲ್ ಕಂಪೆನಿ ಗ್ಲೋಬಲ್ ಟೆಂಡರ್ ಆಹ್ವಾನಿಸಿದೆ. ಕೋಟಿ ಕೋಟಿಮೊತ್ತದ ಯಂತ್ರೋಪಕರಣಗಳು ಈಗ ಸುಸ್ಥಿತಿಯಲ್ಲಿವೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಬೃಹತ್ ಯಂತ್ರೋಪಕರಣಗಳಿಗೆ ಇದೀಗ ಬೇಡಿಕೆಯಿಲ್ಲ. ಆಸ್ಟ್ರೇಲಿಯಾದಲ್ಲಿ ಒಂದಷ್ಟು ಬೇಡಿಕೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಜನಸಂಖ್ಯೆಯಲ್ಲಿ ಇಳಿಮುಖ:
ಕುದುರೆಮುಖದಲ್ಲಿ ಗಣಿಗಾರಿಕೆ ನಡೆಯುತ್ತಿದ್ದ ವೇಳೆ ಹನ್ನೊಂದೂವರೆ ಸಾವಿರದಷ್ಟು ಜನಸಂಖ್ಯೆ ಈ ಪ್ರದೇಶದಲ್ಲಿತ್ತು. ಆದರೆ ಗಣಿಗಾರಿಕೆ ನಿಲ್ಲಿಸಿದ ನಂತರ ಈ ಜನಸಂಖ್ಯೆಯಲ್ಲಿ ತೀವ್ರ ಇಳಿಮುಖವಾಗಿದೆ. ಈಗ ಇಲ್ಲಿ ಕಾರ್ಯಾಚರಿಸುವ ಶಾಲೆ, ಇತರ ಇಲಾಖೆಗಳು, ಕಾರ್ಮಿಕರು ಸೇರಿದಂತೆ ಒಟ್ಟಾರೆ ನಾಲ್ಕುಸಾವಿರ ಜನಸಂಖ್ಯೆಯಷ್ಟೇ ಉಳಿದುಕೊಂಡಿದೆ. ಕುದುರೆಮುಖ ಕಬ್ಬಿಣದ ಅದಿರು ಕಂಪೆನಿಯಲ್ಲಿ ಸುಮಾರು 400ರಷ್ಟು ಮಂದಿ ಕಾರ್ಮಿಕರು ಉಳಿದುಕೊಂಡಿದ್ದಾರೆ. ಅಲ್ಲಿನ ಕಚೇರಿ ನಿರ್ವಹಣೆ, ಪರಿಕರಗಳ ಸಂರಕ್ಷಣೆಯ ಹೊಣೆ ಇದೀಗ ಈ ಕಾರ್ಮಿಕರ ಮೇಲಿದೆ.

ಮುಂದೆ ಓದಿ

35ವರುಷಗಳ ಮಹಾಸಮರ!

ವಿಶೇಷ ವರದಿ : ಹರೀಶ್ ಕೆ.ಆದೂರು
ಕುದುರೆಮುಖ: ಪಶ್ಚಿಮಘಟ್ಟದ ಅತ್ಯಂತ ರಮ್ಯತಾಣ ಕುದುರೆಮುಖ.ಗಣಿಗಾರಿಕೆ ಆರಂಭಗೊಂಡು ನಾಲ್ಕುದಶಕಗಳು ಕಡೆದಿವೆ. ಇದೀಗ ಯಂತ್ರಗಳ ಕರ್ಕಶ ಧ್ವನಿ ಮರೆಯಾಗಿದೆ. ನಿಶ್ಯಬ್ಧಘಟ್ಟಪ್ರದೇಶದ ನೆತ್ತಿಒಡೆದ ಬೃಹತ್ ಯಂತ್ರೋಪಕರಣಗಳ ವಿಕಾರ ಧ್ವನಿಗೆ ಬೆದರಿ ಕಾಲ್ಕಿತ್ತ ಪ್ರಾಣಿ ಪ್ರಬೇಧಗಳು ಮತ್ತೆ ಮೆಲ್ಲನೆ ಈ ಪ್ರದೇಶದತ್ತ ಹೆಜ್ಜೆಹಾಕತೊಡಗಿವೆ. ಇದೀಗ ಈ ಭಾಗದಲ್ಲಿ ವನ್ಯಪ್ರಾಣಿಗಳ ಸಂಚಾರ ಪ್ರಾರಂಭಗೊಂಡಿವೆ. ಚಿರತೆ, ಕಾಡುಕೋಣ, ಹುಲಿ, ಸಿಂಗಳೀಕ, ಜಿಂಕೆ ಮೊದಲಾದ ವನ್ಯಪ್ರಾಣಿಗಳು, ವೈವಿಧ್ಯಮಯ ಪಕ್ಷಿಗಳು ಗಣಿಗಾರಿಕೆ ನಡೆಸಿದ ಪ್ರದೇಶದಲ್ಲಿ ಸಂಚರಿಸತೊಡಗಿವೆ. ಒಟ್ಟಿನಲ್ಲಿ ಗಣಿಗಾರಿಕೆ ನಡೆದ ಪ್ರದೇಶದ ಹಳೆರೂಪ ಮರಳಿಪಡೆಯುವತವಕದಲ್ಲಿದೆ .


ಗಣಿಗಾರಿಕಾ ಪ್ರದೇಶದ ನೈಜ ಚಿತ್ರಣ ತಿಳಿಯುವ ಸಲುವಾಗಿ ಈ ಕನಸು ತಂಡ ಆ ಪ್ರದೇಶಕ್ಕೆ ತೆರಳಿತ್ತು. ಅದಾಗ ಸಿಂಗಳೀಕ ಛಂಗನೆ ನೆಗೆದು ನಮ್ಮ ವಾಹನದ ಎದುರಿನಲ್ಲೇ ಓಡಿಹೋಯಿತು. ಉದ್ದ ಕೊಕ್ಕಿನ ವಿಶೇಷ ಪಕ್ಷಿಯೊಂದು ಹಾರಿ ಹೋಯಿತು. ದೂರದಲ್ಲಿ ಹಕ್ಕಿಗಳ ಕಲರವ...ಪ್ರಾಣಿಗಳ ಧ್ವನಿ ಕೇಳಿಬರುತ್ತಿತ್ತು. ಅಂತೂ ಮರಳಿ ಅದೇ ನೈಜತೆಯನ್ನು ಪಶ್ಚಿಮಘಟ್ಟ ಪಡೆಯುತ್ತಿದೆಯಲ್ಲ ಎಂಬ ಸಣ್ಣ ಸಂತಸ ನಮಗಾಯಿತು...
ಸಂಸೆ ಗ್ರಾಮ, ಮಲ್ಲೇಶ್ವರ ಹ್ಯಾಮ್ಲೆಟ್ಗೆ ಸೇರ್ಪಡೆಗೊಳ್ಳುವ ಕುದುರೆ ಮುಖ ಪರಿಸರದಲ್ಲಿ ಗಣಿಗಾರಿಕೆ. ಪ್ರಕೃತಿಯೊಂದಿಗೆ 35ವರುಷಗಳ ಮಹಾಸಮರ!.ಹೌದು...1969ರಲ್ಲಿ ಕುದುರೆಮುಖದಲ್ಲಿ ಗಣಿಗಾರಿಕೆಗೆ ಅವಕಾಶವಾಗಿತ್ತು. ಅದು 30ವರುಷಗಳ ಸುಧೀರ್ಘಕಾಲ ಈ ಪರಿಸರದ ಗರ್ಭಸೀಳಿ ಗಣಿಗಾರಿಕೆ ನಡೆಸಲು ಅವಕಾಶ ಕಲ್ಪಿಸಲಾಗಿತ್ತು. 3,500 ಹೆಕ್ಟೇರ್ ಭೂಮಿಯಲ್ಲಿ ಎರ್ರಾಬಿರ್ರಿಯಾಗಿ ಗಣಿಗಾರಿಕೆ ನಡೆಸಲಾಗಿದೆ. 1999ರಲ್ಲಿ ಈ ಲೀಸ್ ಅವಧಿ ಪೂರ್ತಿಗೊಂಡಿತು. ಆದರೆ ವರ್ಷಂಪ್ರತಿ ಲೀಸ್ ನವೀಕರಣಗೊಳಿಸಿ 2005ರ ತನಕ ಮತ್ತೆ ಗಣಿಗಾರಿಕೆ ನಡೆಸಲಾಯಿತು. ಆದರೆ ಪರಿಸರಾಸಕ್ತರ ತೀವ್ರ ವಿರೋಧದಿಂದಾಗಿ 2005 ಡಿಸೆಂಬರ್ ಅಂತ್ಯಕ್ಕೆ ಗಣಿಗಾರಿಕೆಯನ್ನು ಪೂರ್ತಿಯಾಗಿ ನಿಲ್ಲಿಸಲಾಯಿತು. ಗಣಿಗಾರಿಕೆ ನಡೆಸಿದ ಪ್ರದೇಶವನ್ನು ಮೊದಲಿನಂತೆಯೇ ಏರಿಳಿತಗಳ ಮಾದರಿಯಲ್ಲಿ ಪುನರ್ ನಿರ್ಮಾಣ ಮಾಡಬೇಕೆಂಬ ಶರತ್ತು ಕೆ.ಐ.ಒ.ಸಿ.ಎಲ್ ಕಂಪೆನಿಗೆ ಇದೆಯಾದರೂ ಇದಕ್ಕಿನ್ನೂ ಮುಹೂರ್ತ ಕೂಡಿಬಂದಿಲ್ಲ.
1969ರಿಂದ ಕುದುರೆ ಮುಖದ ಗರ್ಭಸೀಳಿರುವ ಬೃಹತ್ ಯಂತ್ರೋಪಕರಗಣಗಳು ಇಡೀ ಭೂಮಿಯ ಅಂದವನ್ನು ಕೆಡಿಸಿ ಪುಡಿಗಟ್ಟಿಬಿಟ್ಟಿವೆ. ಭೂಮಿ ಅತ್ಯಾಚರಾದಿಂದ ನಲುಗಿಹೋಗಿದೆ. ಈ ಭೂ ಭಾಗದಲ್ಲಿ ಹಸಿರು ನಾಶವಾಗಿದೆ. ಹುಡುಕಿದರೆ ಒಂದು ಸಣ್ಣ ಹುಲ್ಲೂ ಚಿಗುರದಂತಹ ಸ್ಥಿತಿ ನಿರ್ಮಾಣವಾಗಿತ್ತು.ಇಡೀ ಗಣಿಗಾರಿಕಾ ಪ್ರದೇಶದಲ್ಲಿ ಭೂಮಿ ಹೊತ್ತಿಉರಿದಂತೆ ಭಾಸವಾಗುತ್ತಿದೆ. ಹಸಿರು ತೋರಣದ ನಡುವೆ ಕೆಂಪು ಕೆಂಪಾದ ಬೋರಲು ಗುಡ್ಡಗಳು ... 2005ರ ವರ್ಷಾಂತ್ಯಕ್ಕೆ ಈ ಭಾಗದಲ್ಲಿ ಗಣಿಗಾರಿಕೆ ಪೂರ್ತಿಯಾಗಿ ನಿಂತಿತ್ತು. ನಂತರ ಈ ಭಾಗದಲ್ಲಿ ಹಸಿರು ಮೊದಲಿನಂತೆ ಬೆಳಸಬೇಕೆಂಬ ಕಲ್ಪನೆ. ಅದಕ್ಕಾಗಿ ಕುದುರೆಮುಖ ವಲಯ ಅರಣ್ಯ ಇಲಾಖೆಯ ವತಿಯಿಂದ 10 ಎಕ್ಕರೆ ಪ್ರದೇಶದಲ್ಲಿ ಈ ವರ್ಷ ಹುಲ್ಲುಬೀಜಗಳನ್ನು ಬಿತ್ತಿ ಹುಲ್ಲುಬೆಳೆಸಲಾಗಿದೆ. ಮುಂದೆ 50 ಹೆಕ್ಟೇರ್ ಗಣಿಗಾರಿಕಾ ಪ್ರದೇಶದಲ್ಲಿ ಹುಲ್ಲುಬೆಳೆಸುವ ಬಗ್ಗೆ ಚಿಂತಿಸಲಾಗಿದ್ದು ಮೇ ಅಂತ್ಯದೊಳಗೆ ಹುಲ್ಲಿನ ಬೀಜಗಳ ಬಿತ್ತನೆ ಕಾರ್ಯ ನಡೆಸಲಾಗುವುದೆಂದು ಅರಣ್ಯಾಧಿಕಾರಿಗಳಾದ ಎಸ್.ವಿ.ಕಂಬಳಿ ತಿಳಿಸಿದ್ದಾರೆ.

ಮುಂದೆ ಓದಿ

ಪ್ರತ್ಯಕ್ಷ ವರದಿ: ಹರೀಶ್ ಕೆ.ಆದೂರು.

ಅಲ್ಲಿ ಮೌನವೇ ಮಾತಾಡುತ್ತಿತ್ತು. ಎಲ್ಲರ ಕಣ್ಣಂಚಿನಲ್ಲೂ ಹನಿ ನೀರು ಜಿನುಗುತ್ತಿತ್ತು..." ಪ್ಲೀಸ್ ಇದು ನಿಮ್ಮ ಉಸಿರು...ಸ್ವಲ್ಪ ನಿಲ್ಲಿ..." ಎಂಬಂತಹ ರೋಧನದ ಈ ಮಾತು ಅಲ್ಲಿನ ವಿಕಾರ ನಿಸರ್ಗದಿಂದ ಕೇಳಿಬರುತ್ತಿದ್ದವು...ಹೌದು...ಇಂದು ಸಮೃದ್ಧವಾದಂತಹ ಪಶ್ಚಿಮ ಘಟ್ಟ ನಾಶವಾಗುತ್ತಿದೆ. ಕುದುರೆ ಮುಖ ತನ್ನ ಮುಖಾರವಿಂದವನ್ನೇ ಕಳೆದುಕೊಂಡು ಕಳೆಗುಂದಿದೆ. ಇಡೀ ಕುದುರೆಮುಖದಲ್ಲಿ ಸೂತಕದ ಛಾಯೆ ಇನ್ನೂ ಇದೆ. ಗಣಿಗಾರಿಕೆಯಿಂದ ಉಂಟಾಗಿದ್ದ ಪ್ರಕೃತಿ ನಾಶಕ್ಕೆ ಇಡೀ ಭೂಮಿ ಇಂದು ಪರಿತಪಿಸುತ್ತಿದೆ. ಮನುಷ್ಯರನ್ನು ನೋಡಿದ ಕೂಡಲೇ ಇಡೀ ಬೆಟ್ಟ ಬೆಚ್ಚಿಬೀಳುವಂತೆ ಭಾಸವಾಗುತ್ತಿದೆ...! ಅಷ್ಟರ ಮಟ್ಟಿಗೆ ಕುದುರೆಮುಖದಲ್ಲಿ ಪ್ರಕೃತಿಯ ಮೇಲೆ ಅತ್ಯಾಚಾರವಾಗಿದೆ. ಪ್ರಕೃತಿಯ ಗರ್ಭಸೀಳಿ ಗಣಿಗಾರಿಕೆ ನಡೆಸಲಾಗಿದೆ.



ಕುದುರೆಮುಖದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸಲಾಗಿತ್ತು.2006ರಿಂದೀಚೆಗೆ ಅದಿರು ಗಣಿಗಾರಿಕೆಗೆ ತೀವ್ರ ವಿರೋಧ ಉಂಟಾದ ಹಿನ್ನಲೆಯಲ್ಲಿ ಗಣಿಗಾರಿಕೆಗೆ ನಿಷೇಧ ಹೇರಲಾಗಿತ್ತು. ಅದಾಗಲೇ ಸ್ವಚ್ಛ ಕುದುರೆಮುಖ ತನ್ನ ಗರ್ಭವನ್ನು ಸೀಳಿ ಕಳಾಹೀನವಾಗಿ ಬೋರಲಾಗಿಬಿಟ್ಟಿತ್ತು.
ಅಲ್ಲಿ ಕಣ್ಣುಹಾಯಿಸಿದಷ್ಟು ಉದ್ದಗಲಕ್ಕೂ ಒಂದೊಮ್ಮೆ ಕೇವಲ ಹಸಿರು ಹಸಿರಾದ ಗಿರಿರಾಶಿಗಳಿದ್ದವು. ಸ್ವಚ್ಚಂಧವಾಗಿ ವಿಹರಿಸುತ್ತಿದ್ದ ಸಸ್ಯರಾಶಿಯಿದ್ದಿತು. ಆದರೆ ಇಂದು ಅವುಗಳೆಲ್ಲಾ ಇದ್ದವೆಂಬುದನ್ನು ತೋರುವ ಕುರುಹುಗಳು ಕಂಡುಬರುತ್ತವೆ. ಒಂದೊಮ್ಮೆ ಅತ್ಯಂತ ವೈಭವದಿಂದ ವಿಜಯನಗರ ಸಾಮ್ರಾಜ್ಯ ಮೆರೆಯುತ್ತಿತ್ತೆಂಬುದನ್ನು ಸಾರಿಹೇಳುವ ಹಾಳು ಹಂಪೆಯಂತೆ ಇಂದು ಕುದುರೆಮುಖದ ಗರ್ಭಸೀಳಿದ ಗಣಿಗಾರಿಕೆಯ ಕುರುಹುಗಳು ಭಾಸವಾಗುತ್ತಿವೆ.

ಈ ಗಣಿಗಾರಿಕೆಯ ಕರಿನೆರಳು ಕೇವಲ ಕುದುರೆಮುಖಕ್ಕಷ್ಟೇ ಸೀಮಿತವಾಗಿಲ್ಲ. ಇಡೀ ಪಶ್ಚಿಮ ಘಟ್ಟಕ್ಕೆ ಗಣಿಗಾರಿಕೆ, ಕಿರುಜಲವಿದ್ಯುತ್ ಯೋಜನೆ ಹಾಗೂ ಅಣೆಕಟ್ಟುಗಳ ನಿರ್ಮಾಣ ಹೀಗೆ ಹಲವು ವಿಘ್ನಗಳು ನಿರಂತರವಾಗಿ ಕಾಡುತ್ತಾ ಬಂದಿವೆ. ಪ್ರಸ್ತುತ ಕಾಡುತ್ತಿವೆ. ಒಂದೊಮ್ಮೆ ಪರಿಸರ ಹೋರಾಟಗಾರರ ಧ್ವನಿಯಿಂದಲೋ, ನೈಜ ಪರಿಸರಾಸಕ್ತರ ಕಾಳಜಿಯಿಂದಲೂ ಕುದುರೆಮುಖದ ನಿಸರ್ಗ ರಮ್ಯತಾಣದಲ್ಲಿ ನಡೆಯುತ್ತಿರುವ ಗಣಿಗಾರಿಕೆಗೆ ಅಲ್ಪವಿರಾಮ ಘೋಷಿಸಲಾಗಿದೆಯಾದರೂ ಮುಂದೊಂದು ದಿನ ಮತ್ತೆ ಆ ಪ್ರದೇಶದಲ್ಲಿ ಗಣಿಗಾರಿಕೆ ನಡೆದೇ ನಡೆಯಲಿದೆ ಎಂಬ ಹೆದರಿಕೆ ಇನ್ನೂ ಮಾಸಿಲ್ಲ.
ಪಶ್ಚಿಮ ಘಟ್ಟ ಎಂಬ ಅನಘ್ರ್ಯ ಸಂಪತ್ತು
ಪಶ್ಚಿಮ ಘಟ್ಟ ಎಂಬುದು ಅನಘ್ರ್ಯ ಸಂಪತ್ತು. ಉತ್ತರದ ಗುಜರಾಥ್ ರಾಜ್ಯದಿಂದ ತಮಿಳುನಾಡಿನ ದಕ್ಷಿಣದ ತುದಿ ಕನ್ಯಾಕುಮಾರಿಯ ತನಕ 1600 ಕಿಲೋಮೀಟರ್ ಉದ್ದದ ಘಟ್ಟ ಪ್ರದೇಶ ಇದಾಗಿದೆ. ಅತ್ಯಂತ ರಮ್ಯವಾದಂತಹ ದೃಶ್ಯಾವಳಿಗಳಿಗೆ ಇದೊಂದು ಸಾಕ್ಷಿಯಾಗಿದೆ. ಅಸಂಖ್ಯ ವನ್ಯಸಂಪತ್ತು, ಔಷಧೀಯ ಸಸ್ಯಸಂಪತ್ತು, ವೈವಿಧ್ಯಮಯ ಪ್ರಾಣಿ, ಪಕ್ಷಿ ಪ್ರಬೇಧಗಳನ್ನು ತನ್ನಲ್ಲಿ ಹುದುಗಿಸಿಕೊಂಡಿರುವ ಈ ಪಶ್ಚಿಮ ಘಟ್ಟಕ್ಕೆ ಕಳೆದ ಹತ್ತು ಹಲವು ವರುಷಗಳಿಂದ "ಕ್ರೂರ"ದೃಷ್ಠಿಯ ಕಾಟ ಪ್ರಾರಂಭಗೊಂಡಿದೆ.
ಪಶ್ಚಿಮ ಘಟ್ಟ ಹಲವು ನದೀಗಳಿಗೆ ಮೂಲವಾಗಿದೆ. ತನ್ನೊಡಲಲ್ಲಿ ಸಂಗ್ರಹಿಸಿಟ್ಟ ನೀರನ್ನು ಇಡೀ ಜೀವರಾಶಿಗೆ ನಿಸ್ವಾರ್ಥವಾಗಿ ಧಾರೆ ಎರೆಯುವ ಮೂಲಕ ಅಸಂಖ್ಯ ಜೀವರಾಶಿಯ ಜೀವನದಿಯಾಗಿಯೂ ಇದು ಗುರುತಿಸಲ್ಪಟ್ಟಿದೆ.
ಆದರೆ ಈ ಬೆಟ್ಟಗಳಲ್ಲಿರುವ ಖಜಿನ ನಿಕ್ಷೇಪಗಳು ಇಂದು "ವಾಣಿಜ್ಯ" ದೃಷ್ಠಿಗೆ ಬಲಿಯಾಗುತ್ತಿವೆ. ಇಲ್ಲಿನ ನೀರಸೆಲೆಳಗಳು "ವಿದ್ಯುತ್ ಉತ್ಪಾದನೆ"ಯ ಹೆಸರಿನಲ್ಲಿ ಉದ್ಯಮಿಗಳ ಕಬಂಧ ಬಾಹುಗಳಲ್ಲಿ ಸಿಲುಕಿ ನಲುಗುತ್ತಿವೆ. ರಕ್ಷಿತಾರಣ್ಯ ಎಂಬ ಹಣೆಪಟ್ಟಿಹೊಂದಿರುವ ಕಾಡುಗಳು ಮರಗಳ್ಳರ ಪಾಲಾಗುತ್ತಿದೆ. ನಿರಂತರವಾಗಿ ಪಶ್ಚಿಮ ಘಟ್ಟದ ಮೇಲೆ ಒಂದಿಲ್ಲೊಂದು ರೀತಿಯ ಅತ್ಯಾಚಾರಗಳು ನಡೆಯುತ್ತಿವೆ.

ಹೋರಾಟ
ಪಶ್ಚಿಮ ಘಟ್ಟ ಉಳಿಸಿ ಎಂಬ ಕೂಗು ಇಂದು ನಿನ್ನೆಯದಲ್ಲ. 20ವರುಷಗಳ ಹಿಂದೆಯೇ ಪರಿಸರಾಸಕ್ತ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಪಶ್ಚಿಮ ಘಟ್ಟ ಉಳಿಸುವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ತದನಂತರ ಸ್ವಲ್ಪ ಮಟ್ಟಿಗೆ ತೀವ್ರತೆ ಕಳೆದುಕೊಂಡ ಈ ಅಭಿಯಾನ 2009ರಲ್ಲಿ ಗೋವಾದಲ್ಲಿ ಊರ್ಜಿತಗೊಂಡಿತು.
2010ರ ಫೆಬ್ರವರಿಯಲ್ಲಿ ತಮಿಳುನಾಡಿನ ಕೋಟಗಿರಿಯಲ್ಲಿ ಪಶ್ಚಿಮ ಘಟ್ಟ ಉಳಿಸುವ ನಿಟ್ಟಿನಲ್ಲಿ ಸಭೆಯೊಂದನ್ನು ನಡೆಸಲಾಯಿತು.ಈ ಸಭೆಯಲ್ಲಿ ಭಾರತ ಸರಕಾರದ ಪರಿಸರ ಮಂತ್ರಿಯಾಗಿದ್ದ ಜಯರಾಮ್ ರಮೇಶ ಪಶ್ಚಿಮಘಟ್ಟ ಉಳಿಸುವ ಮಹತ್ತರವಾದ ನಿರ್ಣಯವೊಂದನ್ನು ಘೋಷಿಸಿದರು. ಇದಾದ ನಂತರ ಕೆಲವೇ ವಾರಗಳಲ್ಲಿ ಪ್ರೊ.ಮಾಧವ ಗಾಡ್ಗೀಳ್ ನೇತೃತ್ವದಲ್ಲಿ ಪಶ್ಚಿಮ ಘಟ್ಟದ ಪರಿಸರ ತಜ್ಞರ ತಂಡ "ವೆಸ್ಟರ್ನ್ ಘಾಟ್ ಇಕಾಲಜೀ ಎಕ್ಸ್ ಪರ್ಟ್ಸ್ ಪ್ಯಾನೆಲ್" ಅಸ್ತಿತ್ವಕ್ಕೆ ಬಂತು.ಪ್ರೊ.ಗಾಡ್ಗೀಳ್ ತಂಡದ ವರದಿ 2011ಕ್ಕೆ ಪಶ್ಚಿಮಘಟ್ಟದ ಕುರಿತಾದ ಅಧ್ಯಯನಾತ್ಮಕ ವರದಿಯನ್ನು ಸರಕಾರಕ್ಕೆ ಸಲ್ಲಿಸಲಿದೆ.

ಐದುರಾಜ್ಯಗಳ ಪರಿಸರಾಸಕ್ತರ ಒಗ್ಗೂಡುವಿಕೆ
ಮಿಜಾರು ಶೋಭಾವನದಲ್ಲಿ ಕಳೆದ ಎರಡುದಿನಗಳಿಂದ ಪಶ್ಚಿಮಘಟ್ಟ ಉಳಿಸಿ ಹೋರಾಟದ ಒಂದು ಪುಟ್ಟ ಕಾರ್ಯಕ್ರಮ ನಡೆಯುತ್ತಿದೆ.ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಶಿವಮೊಗ್ಗದ ಪರಿಸರ ಅಧ್ಯಯನ ಕೇಂದ್ರದ ಜನಾರ್ಧನ ಹಾಗೂ ಉಡುಪಿತಾಲೂಕು ಪರಿಸರಾಸಕ್ತರ ಒಕ್ಕೂಟದ ಡಾ.ಅಶೋಕ್ ಕುಂದಾಪುರ ನೇತೃತ್ವದಲ್ಲಿ ಈ ಅಭಿಯಾನ ನಡೆಸಲಾಗುತ್ತಿದೆ. ಗೋವಾ,ಕೇರಳ, ಕರ್ನಾಟಕ,ತಮಿಳ್ನಾಡು ಮೊದಲಾದ ಪ್ರದೇಶಗಳಿಂದ ಸುಮಾರು 180ಮಂದಿ ಪರಿಸರಾಸಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಗುಂಪು ಚರ್ಚೆಗಳ ಮೂಲಕ ಪಶ್ಚಿಮಘಟ್ಟ ಉಳಿಸುವ ಹಲವು ಯೋಚನೆಗಳನ್ನು ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ. ಪರ್ಯಾಯ ಶಕ್ತಿ ವರ್ಧನೆಗಳ ಬಗ್ಗೆ ಉತ್ತಮ ಮಾಹಿತಿಗಳು ಹೊರಹೊಮ್ಮಿವೆ.

30ವರುಷಗಳ ಮಹಾಸಮರ!
ಸಂಸೆ ವಿಲೇಜ್, ಮಲ್ಲೇಶ್ವರ ಹ್ಯಾಮ್ಲೆಟ್ಗೆ ಸೇರ್ಪಡೆಗೊಳ್ಳುವ ಕುದುರೆ ಮುಖ ಪರಿಸರದಲ್ಲಿ ಗಣಿಗಾರಿಕೆ. ಪ್ರಕೃತಿಯೊಂದಿಗೆ 30ವರುಷಗಳ ಮಹಾಸಮರ!.ಹೌದು...1969ರಲ್ಲಿ ಕುದುರೆಮುಖದಲ್ಲಿ ಗಣಿಗಾರಿಕೆಗೆ ಅವಕಾಶವಾಗಿತ್ತು. ಅದು 30ವರುಷಗಳ ಸುಧೀರ್ಘಕಾಲ ಈ ಪರಿಸರದ ಗರ್ಭಸೀಳಿ ಗಣಿಗಾರಿಕೆ ನಡೆಸಲು ಅವಕಾಶ ಕಲ್ಪಿಸಲಾಗಿತ್ತು. 3,500 ಹೆಕ್ಟೇರ್ ಭೂಮಿಯಲ್ಲಿ ಎರ್ರಾಬಿರ್ರಿಯಾಗಿ ಗಣಿಗಾರಿಕೆ ನಡೆಸಲಾಗಿದೆ. 1999ರಲ್ಲಿ ಈ ಲೀಸ್ ಅವಧಿ ಪೂರ್ತಿಗೊಂಡಿತು. ಆದರೆ ವರ್ಷಂಪ್ರತಿ ಲೀಸ್ ನವೀಕರಣಗೊಳಿಸಿ 2005ರ ತನಕ ಮತ್ತೆ ಗಣಿಗಾರಿಕೆ ನಡೆಯತೊಡಗಿತು. ಆದರೆ ಪರಿಸರಾಸಕ್ತರ ತೀವ್ರ ವಿರೋಧದಿಂದಾಗಿ 2005 ಡಿಸೆಂಬರ್ ಅಂತ್ಯಕ್ಕೆ ಗಣಿಗಾರಿಕೆಯನ್ನು ಪೂರ್ತಿಯಾಗಿ ನಿಲ್ಲಿಸಲಾಯಿತು.

ಹಸುರೀಕರಣ
1969ರಿಂದ ಕುದುರೆ ಮುಖದ ಗರ್ಭಸೀಳಿರುವ ಬೃಹತ್ ಯಂತ್ರೋಪಕರಗಣಗಳು ಇಡೀ ಭೂಮಿಯ ಅಂದವನ್ನು ಕೆಡಿಸಿ ಪುಡಿಗಟ್ಟಿಬಿಟ್ಟಿವೆ. ಭೂಮಿ ಅತ್ಯಾಚರಾದಿಂದ ನಲುಗಿಹೋಗಿದೆ. ಈ ಭೂ ಭಾಗದಲ್ಲಿ ಹಸಿರು ನಾಶವಾಗಿದೆ. ಹುಡುಕಿದರೆ ಒಂದು ಸಣ್ಣ ಹುಲ್ಲೂ ಚಿಗುರದಂತಹ ಸ್ಥಿತಿ ನಿರ್ಮಾಣವಾಗಿತ್ತು. ಪ್ರಕೃತಿ ತೀವ್ರ ಹದಗೆಟ್ಟಿತ್ತು. 2005ರ ವರ್ಷಾಂತ್ಯಕ್ಕೆ ಈ ಭಾಗದಲ್ಲಿ ಗಣಿಗಾರಿಕೆ ಪೂರ್ತಿಯಾಗಿ ನಿಂತಿತ್ತು. ನಂತರ ಈ ಭಾಗದಲ್ಲಿ ಹಸಿರು ಮೊದಲಿನಂತೆ ಬೆಳಸಬೇಕೆಂಬ ಕಲ್ಪನೆ. ಅದಕ್ಕಾಗಿ 10 ಎಕ್ಕರೆ ಪ್ರದೇಶದಲ್ಲಿ ಈಗಾಗಲೇ ಹುಲ್ಲುಬೀಜಗಳನ್ನು ಬಿತ್ತಿ ಹುಲ್ಲುಬೆಳೆಸಲಾಗಿದೆ. ಮುಂದೆ 50 ಹೆಕ್ಟೇರ್ ಗಣಿಗಾರಿಕಾ ಪ್ರದೇಶದಲ್ಲಿ ಹುಲ್ಲುಬೆಳೆಸುವ ಬಗ್ಗೆ ಚಿಂತಿಸಲಾಗಿದ್ದು ಮೇ ಅಂತ್ಯದೊಳಗೆ ಹುಲ್ಲಿನ ಬೀಜಗಳ ಬಿತ್ತನೆ ಕಾರ್ಯ ನಡೆಸಲಾಗುವುದೆಂದು ಅರಣ್ಯಾಧಿಕಾರಿಗಳಾದ ಎಸ್.ವಿ.ಕಂಬಳಿ ತಿಳಿಸಿದ್ದಾರೆ.

ಪ್ರಾಣಿಗಳ ಓಡಾಟ
ಗಣಿಗಾರಿಕೆ ಆರಂಭಗೊಂಡು ನಾಲ್ಕುದಶಕಗಳು ಕಡೆದಿವೆ. ಇದೀಗ ಯಂತ್ರಗಳ ಕರ್ಕಶ ಧ್ವನಿ ಮರೆಯಾಗಿದೆ. ಮತ್ತೆ ಈ ಭಾಗದಲ್ಲಿ ವನ್ಯಪ್ರಾಣಿಗಳ ಸಂಚಾರ ಪ್ರಾರಂಭಗೊಂಡಿವೆ. ಚಿರತೆ, ಕಾಡುಕೋಣ, ಹುಲಿ, ಸಿಂಗಳೀಕ, ಜಿಂಕೆ ಮೊದಲಾದ ವನ್ಯಪ್ರಾಣಿಗಳು, ವೈವಿಧ್ಯಮಯ ಪಕ್ಷಿಗಳು ಈ ಪ್ರದೇಶದಲ್ಲಿ ಸಂಚರಿಸತೊಡಗಿವೆ. ಒಟ್ಟಿನಲ್ಲಿ ಗಣಿಗಾರಿಕೆ ನಡೆದ ಪ್ರದೇಶ ಮತ್ತೆ ಹಸಿರಿನಿಂದ ಕಂಗೊಳಿಸುವಂತಾಗುತ್ತಿದೆ. ಮರಳಿ ಕುದುರೆಮುಖ ಆ ಕಳೆ ಪಡೆದುಕೊಳ್ಳುವಂತಾಗುತ್ತಿದೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ

'ಈ ಕನಸು' - ವರ್ಷದ ಕನಸು , ಎರಡನೇ ವರ್ಷ ಪೂರೈಸುವ ಹೊಸ್ತಿಲಲ್ಲಿದೆ , ಅಭಿನಂದನೆಗಳು. ಇದರಲ್ಲಿರುವ ಎಲ್ಲಾ ಲೇಖನಗಳು , ಆರೋಗ್ಯ ವಿಷಯಗಳು ಮುಂತಾದ ವಿಚಾರಗಳು ಉತ್ತಮ ರೀತಿಯಲ್ಲಿ ಮೂಡಿಬರುತ್ತಿದೆ. 'ಈ ಕನಸು' ಯುವ ಬರಹಗಾರರಿಗೆ ಉತ್ತಮ ಪ್ರೋತ್ಸಾಹ ನೀಡುತ್ತಿದೆ. ಇದಕ್ಕೆ ಕಾರಣರಾದ ಹರೀಶ್ ಆದೂರು ಮತ್ತು ಇತರ ಸಿಬ್ಬಂದಿ ವರ್ಗಕ್ಕೆ ಧನ್ಯವಾದಗಳು. ಹೊಸ ಅಂಕಣವೊಂದು ಬಂದಿದೆ ನೋಡಿ ತುಂಬಾ ಸಂತೋಷವಾಯಿತು. ಇನ್ನು ಮುಂದೆಯೂ ಉತ್ತಮ ರೀತಿಯಲ್ಲಿ , ಹೊಸತನದಿಂದ ಮೂಡಿ ಬರಲಿ ಎಂದು ಆಶಿಸುತ್ತೇನೆ. ನಿಮ್ಮ ಕನಸು ಇನ್ನು ಮುಂದೆಯೂ ನನಸಾಗಲಿ ಎಂದು ಹಾರೈಸುತ್ತೇನೆ. ಮಗದೊಮ್ಮೆ ಮೂರನೇ ವರ್ಷದ ಹೊಸ್ತಿಲಲಿರುವ ಈ ಕನಸಿಗೆ ಶುಭಾಶಯಗಳು ...
- ಹರ್ಷನಾಶ್ರೀ ಎಚ್.ಜೈನ್

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಕಾಯಿದೆ 2007 ರ ಪ್ರಕಾರ ಇನ್ನು ನೋಂದಣಿಗೆ ಮುಂದಾಗದ 26 ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ಶೀಘ್ರ ಮುಚ್ಚುವಂತೆ ಆದೇಶ ನೀಡಬೇಕೆಂದು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಪರಿಶೀಲನಾ ಜಿಲ್ಲಾ ಸಮಿತಿ ಅಧ್ಯಕ್ಷರು ಹಾಗೂ ದಕ್ಷಿಣಕನ್ನಡ ಜಿಲಾಧಿಕಾರಿ ಸುಬೋಧ್ ಯಾದವ್ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಓ.ರಂಗಪ್ಪ ಅವರಿಗೆ ಸೂಚಿಸಿದ್ದಾರೆ.



ಅವರು ಇಂದು ತಮ್ಮ ಕಚೇರಿಯಲ್ಲಿ ಈ ಸಂಬಂಧ ನಡೆದ ಪ್ರಗತಿ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
2010 ರ ಅಕ್ಟೋಬರ್ 24,ಖಾಸಗಿ ವೈದ್ಯಕೀಯ ಸಂಸ್ಥೆಗಳು ನೊಂದಾಯಿಸಿಕೊಳ್ಳಲು ಅಂತಿಮ ದಿನವಾಗಿತ್ತು. ಆದರೆ ಜಿಲ್ಲೆಯಲ್ಲಿ ಇನ್ನೂ 26 ಖಾಸಗಿ ವೈದ್ಯಕೀಯ ಸಂಸ್ಥೆಗಳು ನೋಂದಣಿಗೆ ಅರ್ಜಿ ಸಲ್ಲಿಸಿರುವುದಿಲ್ಲವೆಂಬುದು ಪರಿಶೀಲನೆಯಿಂದ ಕಂಡು ಬಂದಿದೆ. ಇದರಲ್ಲಿ ಮಂಗಳೂರು ತಾಲೂಕಿನಲ್ಲಿ 02,ಬಂಟ್ವಾಳದಲ್ಲಿ 14, ಪುತ್ತೂರು ತಾಲ್ಲೂಕಿನಲ್ಲಿ 9ಹಾಗೂ ಸುಳ್ಯ ತಾಲ್ಲೂಕಿನಲ್ಲಿ 1 ಸಂಸ್ಥೆಗಳು ಸೇರಿವೆ.
ನೋಂದಣಿಗೆ ನೀಡಲಾಗಿದ್ದ ಕಾಲಾವಧಿಯಲ್ಲಿ ಅರ್ಜಿ ಸಲ್ಲಿಸಿದ್ದ ಕೆಲವು ನ್ಯೂನತೆಗಳನ್ನು ಹೊಂದಿರುವ ಮಂಗಳೂರು ತಾಲ್ಲೂಕಿನ 123, ಬಂಟ್ವಾಳ ತಾಲ್ಲೂಕಿನ 15, ಪುತ್ತೂರು ತಾಲ್ಲೂಕಿನ 6 ,ಸುಳ್ಯ ತಾಲ್ಲೂಕಿನ 17 ಹಾಗೂ ಬೆಳ್ತಂಗಡಿ ತಾಲ್ಲೂಕಿನ 25 ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು.
22010ರ ಅಕ್ಟೋಬರ್ 24, ರ ನಂತರ ಅರ್ಜಿ ಸಲ್ಲಿಸುವ /ಸಲ್ಲಿಸಿರುವ ಯಾವುದೇ ಹಳೇ ಸಂಸ್ಥೆಗಳನ್ನು ಪುರಸ್ಕರಿಸದೆ ತಿರಸ್ಕರಿಸಬೇಕೆಂದು ಎಲ್ಲಾ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಮುಂದೆ ಓದಿ

ಪ್ರಾದೇಶಿಕ ಸುದ್ದಿ
ಮಂಗಳೂರು: ಜನಸಂಖ್ಯಾ ಸ್ಫೋಟದಿಂದ ಭೂಮಿ ವಿರಳವಾಗಿದೆ; ತ್ಯಾಜ್ಯ ಜಾಸ್ತಿಯಾಗಿದೆ. ಅಭಿವೃದ್ಧಿ ಹಾಗೂ ಸ್ವಚ್ಛತೆಗೆ ಘನತ್ಯಾಜ್ಯ ವಿಲೇವಾರಿ ಇಂದು ದೊಡ್ಡ ಸವಾಲಾಗಿದ್ದು ಅವರವರ ಕಸವನ್ನು ಅವರವರೇ ಶುಚಿಮಾಡಬೇಕು; ನಮ್ಮ ಸುತ್ತಲಿನ ಪರಿಸರ ಮನೆಯಂತೆ ಸ್ವಚ್ಛವಾಗಿರಬೇಕು ಎಂಬ ಜವಾಬ್ದಾರಿ ಪ್ರತಿಯೊಬ್ಬರಲ್ಲೂ ಮೂಡಿದರೆ ಮಾತ್ರ ತ್ಯಾಜ್ಯ ವಿಲೇವಾರಿ ಸಾಧ್ಯ ಎಂದು ಮೂಡಬಿದ್ರೆ ಶಾಸಕರಾದ ಅಭಯಚಂದ್ರ ಜೈನ್ ಹೇಳಿದರು.




ಅವರಿಂದು ವಾರ್ತಾ ಇಲಾಖೆ ಮಂಗ ಳೂರು, ವಿಜಯ ಕಾಲೇಜು ಮೂಲ್ಕಿ ಮತ್ತು ಮೂಲ್ಕಿ ಸುತ್ತ ಮುತ್ತಲ ಶಾಲೆಯ ಎನ್ ಎಸ್ ಎಸ್ ಮತ್ತು ಎನ್ ಸಿಸಿ ಘಟಕ ಗಳ ಸಂ ಯುಕ್ತ ಆಶ್ರಯ ದಲ್ಲಿ ಮುಲ್ಕಿ ವಿಜಯಾ ಕಾಲೇಜಿ ನಲ್ಲಿ ಏರ್ಪಡಿ ಸಲಾದ ಘನ ತ್ಯಾಜ್ಯ ವಿಲೇ ವಾರಿ ವಿಷಯದ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಎಳೆಯ ವಯಸ್ಸಿನಿಂದಲೇ ಪರಿಸರ, ಸ್ವಚ್ಛತೆಯ ಬಗ್ಗೆ ಮಕ್ಕಳು ಅರಿತರೆ ಅನುಷ್ಠಾನ ಸುಲಭ ಮಾತ್ರವಲ್ಲದೆ ಹೆತ್ತವರನ್ನು ಈ ಸಂಬಂಧ ಪ್ರೇರಿಪಿಸಲು ಸಾಧ್ಯ ಎಂದ ಅವರು ನುಡಿದರು. ಮುಲ್ಕಿ ನಗರಪಂಚಾಯಿತಿ ಈ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯನಿರ್ವಹಿಸಬೇಕೆಂದು ಅಭಯಚಂದ್ರ ಜೈನ್ ಹೇಳಿದರು.ಮುಖ್ಯ ಅತಿಥಿ ಗಳಾ ಗಿದ್ದ ಮಣಿ ಪಾಲ ಮೀಡಿಯಾ ನೆಟ್ ವಕ್ರ್ ನ ಸಹ ಉಪಾ ಧ್ಯಕ್ಷ ಕೆ. ಆನಂದ್ ಅವರು ಮಾತ ನಾಡಿ, ಕಸ ದಿಂದ ರಸ ಉತ್ಪಾ ದನೆ ಮಾಡಿದ ಹಲವು ಮಾದರಿ ಗಳು ಇಂದು ನಮ್ಮ ಮುಂ ದಿದ್ದು, ಇಂತಹ ಮಾದರಿ ಗಳ ಬಗ್ಗೆ ಅರಿವು ಪಡೆದು ಕೊಂಡು ಅನುಷ್ಠಾ ನಕ್ಕೆ ತರ ಬೇಕು. ಅರಿವು ಮೂಡಿಸು ವಲ್ಲಿ ನಮ್ಮ ವಿದ್ಯಾರ್ಥಿ ಗಳೇ ರಾಯ ಭಾರಿ ಗಳಾಗ ಬೇಕೆಂದರು.
ಇನ್ನೋರ್ವ ಅತಿಥಿಗಳಾದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಸರ್ವೋತ್ತಮ ಅಂಚನ್, ರಾಜ್ಯದ ಎಲ್ಲ ವಿದ್ಯಾರ್ಥಿಗಳು ಮುಲ್ಕಿಯ ವಿಜಯಾ ಕಾಲೇಜಿನಲ್ಲಿದ್ದು, ಸ್ವಚ್ಛತೆ ಹಾಗೂ ಘನತ್ಯಾಜ್ಯ ವಿಲೇವಾರಿ ಪಾಠ ರಾಜ್ಯಮಟ್ಟಕ್ಕೆ ತಲುಪಿದೆ ಎಂದರು.
ಅಧ್ಯಕ್ಷೀಯ ಭಾಷಣ ಮಾಡಿದ ವಿಜಯಾ ಕಾಲೇಜಿನ ಪ್ರೊ. ಎಸ್ ಅರವಿಂದ ಜೋಷಿ ಅವರು ಕಸ ನಿರ್ವಹಣೆಗಿಂತ ಕಸ ಉತ್ಪಾದನೆ ಕಡಿಮೆ ಮಾಡುವ ಬಗ್ಗೆ ಚಿಂತಿಸಲು ಇದು ಸೂಕ್ತ ಕಾಲ ಎಂದರು. ಪ್ಲಾಸ್ಟಿಕ್ ನಿಷೇಧ ಮಾಡುವ ಬಗ್ಗೆಯೂ ಚಿಂತಿಸುವ ಸಂದರ್ಭ ಇದು ಎಂದರು.
ವಿಚಾರಸಂಕಿರಣದಲ್ಲಿ ಉಪನ್ಯಾಸ ನೀಡಿದ ಮಹಾನಗರಪಾಲಿಕೆ ಸಹಾಯಕ ಆರೋಗ್ಯಾಧಿಕಾರಿಗಳಾದ ರಘುನಾಥ ಯು ಅವರು, ಹಸಿಕಸ, ಒಣ ಕಸ, ಅಪಾಯಕಾರಿ ಕಸಗಳನ್ನು ವಿಂಗಡಿಸುವ ಹಾಗೂ ಆರೋಗ್ಯಕ್ಕೆ ಹಾನಿಯುಂಟು ಮಾಡುವ ರೋಗಾಣುಗಳು ಉತ್ಪನ್ನ ಸ್ಥಳಗಳ ಬಗ್ಗೆ, ಭೂಮಿಯಲ್ಲಿ ಪ್ಲಾಸ್ಟಿಕ್ ನಿಂದಾಗಿರುವ ಹಾನಿಯ ಬಗ್ಗೆ ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ಸವಿವರ ಮಾಹಿತಿ ನೀಡಿದರು. ವಾರ್ತಾಧಿಕಾರಿ ರೋಹಿಣಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ವಿಜಯ ಕಾಲೇಜಿನ ಅಧ್ಯಕ್ಷರಾದ ಡಾ.ಎಂ ಎ ಆರ್ ಕುಡ್ವ, ಎನ್ ಸಿ ಸಿ ಅಧಿಕಾರಿ ಎಚ್.ಜಿ.ನಾಗರಾಜ ನಾಯಕ್ ಉಪಸ್ಥಿತರಿದ್ದರು.ಪ್ರೊ. ಹಯವದನ ಉಪಾಧ್ಯಾಯ ವಂದಿಸಿದರು. ಉಪನ್ಯಾಸಕಿ ಅರುಣ ಕಾರ್ಯಕ್ರಮ ನಿರೂಪಿಸಿದರು.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮೂಡಬಿದಿರೆ: ಪಶ್ಚಿಮ ಘಟ್ಟದ ಉಳಿವಿಕೆಗಾಗಿ ಪ್ರತಿಯೊಬ್ಬರೂ ಕಠಿಬದ್ಧರಾಗಬೇಕಾಗಿದೆ. ಪ್ರಚಲಿತ ವಿದ್ಯಮಾನಗಳ ಬಗೆಗೆ ಚಿಂತನೆ ಮಾಡುವುದು ಸ್ತುತ್ಯಾರ್ಹ ಎಂದು ವೆಸ್ಟರ್ನ್ ಘಾಟ್ ಟಾಸ್ಕ್ ಫೋರ್ಸ್ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದ್ದಾರೆ. ಮೂಡಬಿದಿರೆ ಮಿಜಾರು ಶೋಭಾವನದಲ್ಲಿ 3 ದಿನಗಳ ಕಾಲ ನಡೆಯಲಿರುವ ಪಶ್ಚಿಮ ಘಟ್ಟ ಉಳಿಸಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಇಂದು ಗಣಿಗಾರಿಕೆಗಿಂತಲೂ ಮರಳು ಮಾಫಿಯಾ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದವರು ಹೇಳಿದರು. ಪಶ್ಚಿಮ ಘಟ್ಟ ಉಳಿವಿಕೆಗೆ ಸಂಘಟಿತ ಹೋರಾಟ ಅಗತ್ಯ ಎಂದರು.

ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ,ಅಪ್ಪಿಕೋ ಚಳವಳಿ ನೇತಾರಾ ಪಾಂಡುರಂಗ ಹೆಗ್ಡೆ, ಪರಿಸರ ಅಧ್ಯಯನ ಕೇಂದ್ರದ ಜನಾರ್ಧನ, ಉಡುಪಿ ತಾಲೂಕು ಪರಿಸರಾಸಕ್ತರ ಒಕ್ಕೂಟದ ಡಾ.ಅಶೋಕ್ ಕುಂದಾಪುರ ಉಪಸ್ಥಿತರಿದ್ದರು.
ಚಿತ್ರ: ರಾಜೇಶ್

ಮುಂದೆ ಓದಿ

ವಿಶೇಷ ವರದಿ
ಬಂದ್ ವೇಳೆ ನಡೆದ ಅಹಿತಕರ ಘಟನೆ ; ಯುವಕನ ಬದುಕೆಲ್ಲಾ ಯಾತನೆ
ಶ್ರೀಪತಿ ಹೆಗಡೆ ಹಕ್ಲಾಡಿ

ಪ್ರಿಯ ಈ ಕನಸು ಅಭಿಮಾನಿ ಓದುಗರೇ... ಈ ಕನಸು.ಕಾಂಗೆ ಎರಡು ವರುಷ ತುಂಬುವ ಹರುಷ ನಿಮಗೆ ಗೊತ್ತೇ ಇದೆ. ಆದರೆ... ಈ ಎರಡು ವರುಷಗಳ ಕಾಲ ಈ ಕನಸು ಅನೇಕಾನೇಕ ಅಶಕ್ತರ ಬಾಳಿಗೆ ಬೆಂಬಲ ನೀಡಿದೆ. ಧ್ವನಿಯಾಗಿದೆ ಎಂದರೆ ತಪ್ಪಾಗಲಾರದು. ಈ ಕನಸಿನಲ್ಲಿ ಸಹಾಯ ಹಸ್ತ ಚಾಚಿ ಬೆಂಬಲ ಯಾಚಿಸಿದವರೆಲ್ಲರಿಗೂ ಈ ಕನಸಿನ ಓದುಗರು ಒಂದಲ್ಲಾ ಒಂದು ರೀತಿಯಲ್ಲಿ ಸಹಾಯ ನೀಡುತ್ತಾ ಬಂದಿದ್ದಾರೆ...ಅದಕ್ಕಾಗಿ ಈ ಕನಸು ತಂಡದ ಪರವಾಗಿ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ಈ ಕನಸು ಯಾವತ್ತೂ ಸ್ವಂತಕ್ಕೋಸ್ಕರ ಒಂದೇ ಒಂದು ಪೈಸೆಯನ್ನೂ ಓದುಗರಿಂದ ಯಾಚಿಸಿಲ್ಲ. ಇದೀಗ ಮತ್ತೆ ಸಮಾಜಕ್ಕಾಗಿ ಸಮಾಜದಲ್ಲಿರೋ ಅಶಕ್ತರೋರ್ವರಿಗೆ ಬೆಂಬಲ ನೀಡುವ ಸಲುವಾಗಿ ನಿಮ್ಮ ಮುಂದೆ ಪ್ರೀತಿಯಿಂದ ಸಹಾಯ ಯಾಚಿಸುತ್ತಿದ್ದೇವೆ. ಈ ವರದಿಗೆ ಸ್ಪಂದಿಸಿ ನೀವು ಸಹಕಾರ ನೀಡುತ್ತೀರಿ ಎಂಬ ಪ್ರೀತಿ ವಿಶ್ವಾಸ ನಮ್ಮದು...
ಪ್ರೀತಿಯಿಂದ...
ಟೀಂ ಈ ಕನಸು.


ನಾಡಾ : ಬಂದ್ ವೇಳೆ ಜೀವ ಉಳಿಸಿಕೊಳ್ಳಲು ಕಟ್ಟದಿಂದ ಜಿಗಿದ ಯುವಕನ ಯಾತನಾಮಯ ಬದುಕಿನ ಕಥೆಯಿದು! ಕಳೆದ ಹತ್ತು ವರ್ಷದಿಂದ ಈ ಯುವಕ ನೆಮ್ಮದಿಯಿಂದ ಕಣ್ಣುಮುಚ್ಚಿ ನಿದ್ರಿಸಿಲ್ಲ!
ಕಟ್ಟದಿಂದ ಜಿಗಿದಿದ್ದಷ್ಟೇ ಯುವಕನಿಗೆ ಗೊತ್ತೆ. ಮತ್ತೆ ಎಚ್ಚರವಾದಾಗ ಆಸ್ಪತ್ರೆ ಬೆಡ್ ಮೇಲೆ. ಇಡೀ ಕುಟುಂಬದ ಭರಹೊತ್ತ ಯುವಕ ಅಚಾನಕ್ಕಾಗಿ ಹಾಸಿಗೆ ಸೇರಿದರೆ ಏನೆಲ್ಲಾ ಆಗುತ್ತದೋ ಅದೆಲ್ಲವನ್ನೂ ಕುಟುಂಬ ಕಂಡಿದೆ. ಕುಟಂಬದ ಕಷ್ಟ ಕೋಟಲೆ ನೆನಸಿಕೊಂಡರೆ ಹೃದಯ ಬಾಯಿಗೆ ಬರುತ್ತದೆ.
ಯಾರು ಈ ಯುವಕ : ಒಂದು ರಾತ್ರಿ ಯಕ್ಷಗಾನವನ್ನೋ, ನಾಟಕವನ್ನೋ ನೋಡಿ ನಿದ್ದೆ ಬಿಟ್ಟ ವ್ಯಕ್ತಿ ಸುಧಾರಿಸಿಕೊಳ್ಳಲು ಮತ್ತೆರಡು ದಿನ ಬೇಕಾಗುತ್ತದೆ ಎಂಥಾಹದ್ದರಲ್ಲಿ ಕಳೆದ ಹತ್ತು ವರ್ಷದಿಂದ ನಿದ್ದೆ ಮಾಡದ ಈ ವ್ಯಕ್ತಿ ಸ್ಥಿತಿ ಹೇಗಿರಬೇಡ ಹೇಳಿ.
ಕುಂದಾಪುರ ತಾಲೂಕ್ ನಾಡ ಗ್ರಾಮ ನಿವಾಸಿ ಗುರುರಾಜ ಮೋಗವೀರ (27) ಕಳೆದ ಹತ್ತು ವರ್ಷಗದಿಂದ ನಿದ್ದೆಯಿಲ್ಲದ ರಾತ್ರಿ ಕಳೆದಿದ್ದಾರೆ. ಅವರಿಗೆ ಹಾಸಿಗೆಗೆ ಬೆನ್ನು ಕೊಟ್ಟು ಮಲಗಿಲು ಆಗುತ್ತಿಲ್ಲ ಎಂದರೆ ನಂಬುತ್ತೀರಾ? ಅದರೂ ನಂಬಲೇ ಬೇಕಾಗಿದೆ. ಇದಕ್ಕೆ ಕಾರಣ ಬೆನ್ನು ಹುರಿ ಸಮಸ್ಯೆ. ಹಗಲಿರುಳೆನ್ನದೆ ಸದಾ ಗುರುರಾಜ್ ಅವರಿಗೆ ಬೆನ್ನು ಹುರಿ ಸುಡುವ ಬೇಗೆ. ಇವರಿಗೆ ಮಲಗಿ ನಿದ್ರಿಸಲಾಗುತ್ತಿಲ್ಲ. ದೈಹಿಕ ಶ್ರಮದ ಕೆಲಸ ಮಾಡಲು ಆಗೋದಿಲ್ಲ. ಬೆನ್ನುಹುರಿ ಸಮಸ್ಯೆ ಇವರ ಮತ್ತು ಕುಟುಂಬದ ನೆಮ್ಮದಿಯನ್ನೇ ಕಿತ್ತುಕೊಂಡಿದೆ.
ಗುರುರಾಜ್ ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್. ಕಳೆದ ಹತ್ತು ವರ್ಷದ ಹಿಂದೆ ಗದಗದಲ್ಲಿ ನಡೆದ ಬಂದ್ ಸಂದರ್ಭ ಗುರುರಾಜ್ ಬೆನ್ನಟ್ಟಿಕೊಂಡು ಬಂದ ಹಲ್ಲೆಕೋರರಿಂದ ಜೀವ ಉಳಿಸಿಕೊಳ್ಳಲು ನಿಂತಿದ್ದ ಕಟ್ಟಡದ ಮಹಡಿಯಿಂದ ಕೆಳಗೆ ಜಿಗಿದರು. ಜಿಗಿದಿದ್ದೇ ಅಷ್ಟೇ ಗುರುರಾಜ್ ಗೆ ಗೊತ್ತು. ಮತ್ತೆ ಶುರುವಾಗಿದ್ದು ಆಸ್ಪತ್ರೆ ಮನೆ ಅಲೆದಾಟ.
ಕಟ್ಟದಿಂದ ಜಿಗಿದು ಬೆನ್ನುಹುರಿ ಘಾಸಿ ಮಾಡಿಕೊಂಡ ಗುರುರಾಜ್ ಅವರು ತಂದೆಯನ್ನು ಸಣ್ಣ ಪ್ರಾಯದಲ್ಲಿಯೇ ಕಳೆದುಕೊಂಡಿದ್ದಾರೆ. ತಾಯಿ, ತಮ್ಮ ಮತ್ತು ಸಹೋದರಿಯರ ಇವರ ಪುಟ್ಟ ಕುಟುಂಬಕ್ಕೆ ಗುರುರಾಜ್ ದಿಕ್ಕುದಿಶೆ. ಸಣ್ಣ ವಯಸ್ಸಲ್ಲೇ ಗುರುರಾಜ್ ಬೇರೆ ಬೇರೆ ಊರುಗಳಿಗೆ ದುಡಿಮೆಗಾಗಿ ಹೋಗುತ್ತಿದ್ದರು. ಕಳೆದ ಹತ್ತು ವರ್ಷದಿಂದ ಇವರು ಮನೆಯಲ್ಲೇ ಕಾಲಹಾಕಬೇಕಾಗಿದೆ.
ಪರಿಹಾರವಿದೆ : ಬೆನ್ನುಹುರಿ ಘಾಸಿಗೆ ಪರಿಹಾರವಿದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಹಣಕಾಸಿನ ಮುಗ್ಗಟ್ಟಿನಿಂದ ಆಗಿರಲಿಲ್ಲ. ಕೂತಲ್ಲಿ ಕೂರಲು ಬಿಡದ, ನಿಂತಲ್ಲಿ ನಿಲ್ಲಲು ಬಿಡದ ಸುಡುವ ಬೆನ್ನು ನೋವಿನ ಜೊತೆಯೇ ಇಲೆಕ್ಟ್ರಿಷಿಯನ್ ಕೆಲಸ ಸ್ವಂತ ಊರಿನಲ್ಲಿ ಸಾಧ್ಯವಾದಷ್ಟು ಮಾಡುತ್ತಾ ತನ್ನ ಮತ್ತು ಮನೆ ಮಂದಿಯ ಹೊಟ್ಟೆ ಹೊರೆಯುತ್ತಿರೋದು ಇವರ ಮತ್ತೊಂದು ಮುಖ.
ಬೆನ್ನುಹುರಿಗೆ ಸರಿಯಾದ ಚಿಕಿತ್ಸೆ ಮಾಡಿಸಿಕೊಳ್ಳದಿದ್ದರೆ ಗುರುರಾಜ್ ಕಾಲು ಕಳೆದುಕೊಳ್ಳುವ ಸಾಧ್ಯತೆ! ಇದೆ. ನೋವು ಸಹಿಸಲಾಗದೆ ನ.4, 2008ರಲ್ಲಿ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಬೆನ್ನಿನ ತಪಾಸಣೆಗೆ ಒಳಗಾಗಿದ್ದರೆ. ಇವರನ್ನು ಪರೀಕ್ಷಿಸಿದ ಡಾ.ಅಜಿತ್ ಮಹಾಲೆ ಅವರು ತಕ್ಷಣ ಬೆನ್ನು ಹುರಿಯ ಶಸ್ತ್ರಚಿಕಿತ್ಸೆ ಮಾಡಿಸಿ, ಕ್ಲಿಪ್ ಅಳವಡಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಮಣಿಪಾಲ್ ಆಸ್ಪತ್ರೆಗೆ ತೆರಳುವ ಮೊದಲು ಕೋಟೇಶ್ವರ ಆಚಾರ್ಯ ಆಸ್ಪತ್ರೆಯ ವೈದ್ಯ ಡಾ.ವಿವೇಕ್ ಹಾಗೂ ಕುಂದಾಪುರ ಚಿನ್ಮಯಿ ಆಸ್ಪತ್ರೆ ಡಾ.ದಿನೇಶ್ ಶೆಟ್ಟಿ ಅವರ ಬಳಿಯೂ ಗುರುರಾಜ್ ಬೆನ್ನುಹುರಿ ತಪಾಸಣೆ ಮಾಡಿಸಿಕೊಂಡಿದ್ದಾರೆ. ವಿಷಾದದ ಸಂಗತಿಯೆಂದರೆ ಬೆನ್ನು ಹುರಿ ಶಸ್ತ್ರಚಿಕಿತ್ಸೆಯನ್ನು ಮುಂದೂಡಿದಷ್ಟೂ ಗುರುರಾಜ್ ಎರಡೂ ಕಾಲುಗಳಗೆ ಅಪಾಯವಿದೆ. ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳದಿದ್ದರೆ ಶಾಶ್ವತವಾಗಿ ಕಾಲು ಕಳೆದುಕೊಳ್ಳವ ಅಪಾಯವಿದೆ.
ಗುರುರಾಜ್ ಅವರಿಗೆ ಹತ್ತು ನಿಮಿಷ ನಿಂತು ಮಾತನಾಡಲಿಕ್ಕೂ ಆಗೋದಿಲ್ಲ. ಊರಿನ ನಾಟಕಗಳಲ್ಲಿ ಭಗವಹಿಸಿ ಪಾತ್ರ ಮಾಡುವ ಮೂಲಕ ತನ್ನ ನೋವನ್ನು ಮರೆಯುವ ಪ್ರಯತ್ನ ಮಾಡುತ್ತಿದ್ದಾರೆ. ಗುರುರಾಜ್ ಅವರ ಬೆನ್ನುಹುರಿ ಶಸ್ತ್ರ ಚಿಕಿತ್ಸೆಗೆ ಹತ್ತಾರು ಕೈಗಳ ಸಹಕಾರ ಬೇಕು. ಇದರಿಂದ ಗುರುರಾಜ್ ಮತ್ತು ಅವರ ಕುಟುಂಬ ಬದುಕುತ್ತಿದೆ. ಒಟ್ಟು 1.20ಲಕ್ಷ ರೂ ಬೇಕಾಗುತ್ತದ.
ಮೋಬೈಲ್ ಸಂಖ್ಯೆ 9844410909 ಸಂಪರ್ಕಿಸಿ ಗುರುರಾಜ್ ಜೊತೆ ಮಾತನಾಡಬಹುದು. ನಿಮ್ಮ ನೆರವನ್ನು ಗುರುರಾಜ್ ಅವರ ನಾಡ ವಿಜಯಾ ಬ್ಯಾಂಕ್ ಉಳಿತಾಯ ಖಾತೆ 115401010013033ಗೆ ಕಳುಹಿಸಬಹುದು.
ವಿಳಾಸ :ಗುರುರಾಜ ವೊಗವೀರ, ದಿ.ಗೋವಿಂದ ವೊಗವೀರ, ಕುಶ್ಣೀ ಕೃಪಾ, ಜನತಾ ಕಾಲನಿ,ನಾಡ ಅಂಚೆ, ಪಿನ್:576230, ಕುಂದಾಪುರ ತಾಲೂಕು.

ಮುಂದೆ ಓದಿ
9:50 PM

ಅತ್ತೆ- ಸೊಸೆ

Posted by ekanasu

ಸಾಹಿತ್ಯ

ಒಂದೇ ಮನೆ ಎರಡು ಒಲೆ
ಮನಃ ಶಾಂತಿಯಾಯಿತು ಕೊಲೆ
ಇತ್ತ ತುತ್ತು ಅತ್ತ ಮುತ್ತು
ಬಿಡಿಸಲಾಗದ ಒಗಟು
ಮುರಿಯಲಾರದ ನಂಟು
ಹಗಲು ರಾತ್ರಿ ಜಗಳ
ತಾಳಲಾರೆ ಕಿರುಕುಳ



ಸಾಯವ ಹಾಗಿಲ್ಲ
ಬದುಕುವ ಹಾಗಿಲ್ಲ
ದಾರಿಯೇ ತೋಚುತ್ತಿಲ್ಲ
ನಿಸ್ವಾರ್ಥಿ ತಂದೆ
ಏನೂ ತಿಳಿಯದ ತಮ್ಮ
ನಿಸ್ಸಹಾಯಕ ತಂಗಿ
ಮುಗ್ಧ ಕರುಳಿನ ಕುಡಿ
ದುಃಖದ ಮಡು, ಮೋಡಗಳ ಅಳು
ಸ್ವರ್ಗದಂಥ ಮನೆ ನರಕವಾಯಿತು
ಕನಸುಗಳೆಲ್ಲ ನುಚ್ಚುನೂರಾಯಿತು
ದಾರಿ ತೋರದೆ ನ್ಯಾಯ ಕಾಣದೆ
ಕೊರಗುತಿದೆ ಮನಸು
ವಿಧಿಯ ಬರಹವೋ
ಅವಳ ಬರಹವೋ ಕಾಣೆನು

ಪೋಷಕರ ವಯಸ್ಸು ಆಕೆಗಾಯಿತು
ಆಗ ಪೋಷಕರ ಸ್ಥಾನ ಅರ್ಥವಾಯಿತು
ಪಶ್ಚಾತ್ತಾಪ ಕಾಡಿತು
ಕಾಲ ಮೀರಿತ್ತು.

- ಝಬೀವುಲ್ಲಾ ಖಾನ್

ಮುಂದೆ ಓದಿ

ಪ್ರಾದೇಶಿಕ ಸುದ್ದಿ
ಬಂಟ್ವಾಳ ತಾಲೂಕಿನ ಮೇರಮಜಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಕ್ಕಳಪಾದೆಯ ಶೌಚಾಲಯರಹಿತ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಾದ ನೇಮ ಪೂಜಾರಿ ಮತ್ತು ಆನಂದ ಪೂಜಾರಿ ಇವರ ಮನೆಗಳಿಗೆ ಶೌಚಾಲಯ ನಿರ್ಮಾಣಕ್ಕೆ ಶ್ರಮದಾನದ ಮೂಲಕ ಗುಂಡಿಗಳನ್ನು ನಿರ್ಮಿಸಿ ಸಂಪೂರ್ಣ ಸ್ವಚ್ಛತೆಯ ಬಗ್ಗೆ ಜನ ಜಾಗೃತಿ ಮೂಡಿಸುವುದರ ಮೂಲಕ ಈ ವರ್ಷದ ಗಣರಾಜ್ಯೋತ್ಸವ ದಿನಾಚರಣೆಯನ್ನು ವಿಶಿಷ್ಠ ರೀತಿಯಲ್ಲಿ ಆಚರಿಸಲಾಯಿತು.


ಬಂಟ್ವಾಳ ತಾಲೂಕು ಸುಗ್ರಾಮ ಗ್ರಾಮ ಪಂಚಾಯತ್ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘ, ಮೇರಮಜಲು ಗ್ರಾಮ ಪಂಚಾಯತ್, ಅಪ್ನಾದೇಶ್ ಸ್ವಯಂ ಸೇವಕ ಬಳಗ ಹಾಗೂ ಜನಶಿಕ್ಷಣ ಟ್ರಸ್ಟ್ನ ಸಹಭಾಗಿತ್ವದಲ್ಲಿ ಸ್ವಚ್ಛತಾ ಶ್ರಮದಾನ ಮತ್ತು ಮನೆಮನೆಗೆಗ ಸ್ವಚ್ಛತಾ ಸಂದೇಶ ಸಾರುವುದರ ಮೂಲಕ ನಡೆದ ಈ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಓಂಬುಡ್ಸ್ಮನ್, ಗ್ರಾಮ ಪಂಚಾಯತ್ ಅಧ್ಯಕ್ಷರು, ಪಿ.ಡಿ.ಒ ಮತ್ತು ಸದಸ್ಯರು, ಸುಗ್ರಾಮ ಒಕ್ಕೂಟದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು, ಜನಶಿಕ್ಷಣ ಟ್ರಸ್ಟ್ನ ನಿರ್ದೇಶಕರು ಮತ್ತು ಸಂಯೋಜಕರು, ರೋಶನಿ ನಿಲಯ, ಸೈಂಟ್ ಅಲೋಶಿಯಸ್, ಎಸ್.ಡಿ.ಎಂ ಸಮಾಜ ಕಾರ್ಯ ಕಾಲೇಜುಗಳ ವಿದ್ಯಾರ್ಥಿ ಪ್ರತಿನಿಧಿಗಳು ಶ್ರಮದಾನ ಶಿಬಿರದಲ್ಲಿ ಭಾಗವಹಿಸಿದರು. ಬಂಟ್ವಾಳ ಸುಗ್ರಾಮ ಸಂಘದ ಅಧ್ಯಕ್ಷೆ ವೃಂದಾ ಶಿಬಿರವನ್ನು ಸಂಯೋಜಿಸಿದರು.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಈ ಕನಸು ಬಳಗಕ್ಕೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಜೊತೆಗೆ 'ಈ ಕನಸು' ಮೂರನೇ ವರ್ಷದ ಹೊಸ್ತಿಲಿನಲ್ಲಿ ನಿಂತಿರುವುದನ್ನು ನೋಡಿದರೆ ಖುಷಿಯಾಗುತ್ತಿದೆ. ನಾನು ಈ ಕನಸಿಗೆ ಹೊಸ ಅಭಿಮಾನಿ ಓದುಗಳು. ಇಲ್ಲಿ ಈಗಾಗಲೇ ನಾನು ಬರೆದ ಕೆಲವು ಲೇಖನಗಳು ಪ್ರಕಟವಾಗಿವೆ. ಈ ಕನಸಿನಲ್ಲಿ ನನ್ನಂತಹ ಯುವ ಪೀಳಿಗೆಯ ಬರವಣಿಗೆಯ ಕನಸು ನನಸಾಗುತ್ತಿರುವದರಿಂದ ಬಹಳ ಖುಷಿಯಾಗಿದೆ. ಈ ಪತ್ರಿಕೆ ಹೀಗೆಯೇ ಸಮೃದ್ಧವಾಗಿ ಬೆಳೆದು ನಿಲ್ಲಲಿ ಅಂತ ಹೃತ್ಪೂರ್ವಕವಾಗಿ ಹಾರೈಸುವೆ.

ವಂದನೆಗಳೊಂದಿಗೆ
ಸಾವಿತ್ರಿ

ಮುಂದೆ ಓದಿ
10:24 PM

ವಾಹನ ಹಸ್ತಾಂತರ

Posted by ekanasu

ಪ್ರಾದೇಶಿಕ ಸುದ್ದಿ
ಮಂಗಳೂರು:ಮಂಗಳೂರು ಪೋಲಿಸ್ ಕಮಿಷನರೇಟ್ ಗೆ ರಾಜ್ಯ ಸರ್ಕಾರ ನೀಡಿದ ನೂತನ ವಾಹನ ಗಳ ಹಸ್ತಾಂತರ ಕಾರ್ಯಕ್ರಮ ಮಂಗಳೂರಿನಲ್ಲಿ ಇಂದು ನಡೆಯಿತು.ಜಲ್ಲಾ ಉಸ್ತುವರಿ ಸಚಿವ ರಾದ ಕೃಷ್ಣ ಜೆ, ಪಾಲೇಮಾರ್ ಅವರು 10 ಶವರ್ಲೆ ಕಾರು ಗಳು ಮತ್ತು 40 ದ್ವಿಚಕ್ರ ವಾಹನ ಗಳನ್ನು ಪೋಲಿಸ್ ಇಲಾಖೆಗೆ ಹಸ್ತಾಂತರಿಸಿ ದರು.ವಿಧಾನ ಸಭಾ ಉಪಾಧ್ಯ ಕ್ಷರಾದ ಎನ್.ಯೋಗಿಶ್ ಭಟ್,ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ಕರಾ ವಳೀ ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ,ಪೋಲಿಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್,ಜಿಲ್ಲಾ ಎಸ್ಪಿ ಡಾ.ಸುಬ್ರಹ್ಮ ಣ್ಯೇಶ್ವರ ರಾವ್,ಮತ್ತಿ ತರ ಗಣ್ಯರು ಸಮಾ ರಂಭ ದಲ್ಲಿ ಪಾಲ್ಗೊಂಡಿದ್ದರು.

ಮುಂದೆ ಓದಿ

ಪ್ರಾದೇಶಿಕ ಸುದ್ದಿ
ಮಂಗಳೂರು:ಕರ್ನಾಟಕ ರಾಜ್ಯ ವಿದ್ಯುತ್ ನಲ್ಲಿ ಸ್ವಾವಲಂಬನೆ ಸಾಧಿಸಬೇಕೆಂಬುದು ಪ್ರಮುಖ ಉದ್ದೇಶ,ಇದನ್ನು ಮುಂದಿನ ಎರಡೂವರೆ ವರ್ಷದೊಳಗೆ ರಾಜ್ಯವಿದ್ಯುತ್ ಸ್ವಾವಲಂಬಿಮಾಡುತ್ತೇವೆ ಎಂದು ರಾಜ್ಯ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ವತಿಯಿಂದ ಮಂಗಳೂರು ನಗರದಲ್ಲಿ ಗುಣಮಟ್ಟದ ವಿದ್ಯುತ್ ಸರಬರಾಜಿಗಾಗಿ 33/ 11ಕೆವಿ ಕುದ್ರೋಳಿ ಮತ್ತು ನಂದಿಗುಡ್ಡ ವಿದ್ಯುತ್ ಉಪಕೇಂದ್ರಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಬಳ್ಳಾರಿ ಮತ್ತು ಉಡುಪಿ ಯಲ್ಲಿ 2012 ರ ಮೇ ಒಳಗೆ ಉಷ್ಣ ವಿದ್ಯುತ್ ಸ್ಥಾವರ ದ 2ನೇ ಘಟಕ ಪೂರ್ಣ ಗೊಳಿಸ ಲಾಗು ವುದು.ಉಷ್ಣ ಸ್ಥಾವರ ದ 2 ನೇ ಘಟಕ ಆರಂಭಿ ಸುವು ದರಿಂದ ಬಹು ತೇಕ ವಿದ್ಯುತ್ ಸಮಸ್ಯೆ ಪರಿಹಾರ ಸಾಧ್ಯ ವಿದೆ. ಜನತೆಗೆ ಗುಣಮಟ್ಟದ ವಿದ್ಯುತ್ ನೀಡಬೇಕೆಂಬುದು ಸರಕಾರದ ಧ್ಯೇಯ. ತಾನು ಇಂಧನ ಖಾತೆಯ ಅಧಿಕಾರ ವಹಿಸಿಕೊಂಡ ಬಳಿಕ ಕಳೆದ ಒಂದು ತಿಂಗಳಿನಿಂದ ಎಂಟು ಘಟಕಗಳಲ್ಲಿ 1,500 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಪ್ರತಿ ಘಟಕದಲ್ಲಿ 600 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಬೇಕೆಂಬುದು ಉದ್ದೇಶ. ಆದರೆ ಸದ್ಯ 500 ರಿಂದ 550 ಮೆ.ವ್ಯಾ. ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಈಗಾಗಲೇ ಮಂಗಳೂರಿನಲ್ಲಿದ್ದ ಮೂರು ಕೇಂದ್ರಗಳನ್ನು ವಿಸ್ತರಿಸಿ 7 ಕೇಂದ್ರಗಳನ್ನಾಗಿ ಮಾಡಲಾಗಿದೆ.ಮಂಗಳೂರಿನ ಬಿಜೈನಲ್ಲೂ ವಿದ್ಯುತ್ ಸ್ಟೇಶನ್ ಸ್ಥಾಪಿಸಲು ಒತ್ತು ನೀಡಲಾಗಿದೆ ಎಂದರು.
ಸಮಸ್ಯೆ ಪರಿಹಾ ರಕ್ಕಾಗಿ ವಿಶೇಷ ವಾಹನ:
ವಿದ್ಯುತ್ ಸಮಸ್ಯೆ ನೀಗಿ ಸಲು ದಿನದ 24 ಗಂಟೆ ಸೇವೆ ನಿರ್ವಹಿ ಸಲಿ ರುವ 58 ಗ್ರಾಹಕ ಸ್ನೇಹಿ ವಾಹನ ಗಳನ್ನು ಬೆಂಗ ಳೂರಿ ನಲ್ಲಿ ಈಗಾಗಲೇ ಸಾರ್ವಜನಿಕ ಸೇವೆಗೆ ಬಿಡುಗಡೆ ಮಾಡಲಾಗಿದೆ. ಈ ವ್ಯವಸ್ಥೆಯನ್ನು ರಾಜ್ಯದ ಗ್ರಾಮೀಣ ಭಾಗಕ್ಕೂ ವಿಸ್ತರಿಸಲಾಗುವುದು. ವಾಹನದಲ್ಲಿ ಒಬ್ಬ ಇಂಜಿನಿಯರ್ ಮತ್ತು 4 ಮಂದಿ ತಾಂತ್ರಿಕ ತಜ್ಞರು ಕಾರ್ಯನಿರ್ವಹಿಸುತಿದ್ದು, ಜನ ತಮ್ಮ ಊರಿನಲ್ಲಿ ವಿದ್ಯುತ್ ಅಡಚಣೆ ಉಂಟಾದಾಗ ಈ ವಿಶೇಷ ವಾಹನದ ಮೊರೆ ಹೋಗಿ ಸಹಾಯ ಪಡೆದುಕೊಳ್ಳಬಹುದು. ಹಳ್ಳಿಯ ಜನತೆಗೆ ಈ ವಾಹನ ಹೆಚ್ಚು ಉಪಯಕ್ತವಾಗಲಿದೆ ಎಂದ ಅವರು ರಾಜ್ಯದಲ್ಲಿನ ವಿದ್ಯುತ್ ಕೇಂದ್ರಗಳಲ್ಲಿನ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಮುಂದಿನ 10 ವರ್ಷಗಳಿಗೆ ಬೇಕಾಗುವಷ್ಟು ವಿದ್ಯುತ್ ಸಂಗ್ರಹದತ್ತ ಗಮನಹರಿಸಲಾಗಿದೆ ಎಂದು ಹೇಳಿದರು. ಸಮಾ ರಂಭ ದಲ್ಲಿ ಮುಖ್ಯ ಅತಿಥಿ ಯಾಗಿದ್ದ ಪಾ ಲ್ಗೊಂಡು ಮಾತ ನಾಡಿದ ಜಿಲ್ಲಾ ಉಸ್ತು ವಾರಿ ಸಚಿವ ಜೆ.ಕೃಷ್ಣ ಪಾಲೆ ಮಾರ್ ಅವರು ರಾಜ್ಯ ಸರ ಕಾರ ಮೂಲ ಭೂತ ಸೌಕರ್ಯ ಗಳಾದ ನೀರು, ರಸ್ತೆ ಮತ್ತು ನಿ ರಂತರ ಗುಣ ಮಟ್ಟದ ವಿದ್ಯುತ್ ಪೂರೈ ಕೆಗೆ ಒತ್ತು ನೀಡಿದೆ ಮತ್ತು ಮೆಸ್ಕಾಂ ಉತ್ತಮ ವಾಗಿ ಕೆಲಸ ನಿರ್ವಹಿ ಸುತ್ತಿದೆ ಎಂದು ಶ್ಲಾಘಿ ಸಿದರು. ವಿಧಾನ ಸಭೆಯ ಉಪ ಸಭಾ ಧ್ಯಕ್ಷ ಎನ್.ಯೋಗೀಶ್ ಭಟ್,ಶಾಸಕ ಯು.ಟಿ.ಖಾದರ್,ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಮಂಗಳೂರು ಮೇಯರ್ ರಜನಿ ದುಗ್ಗಣ್ಣ, ಉಪ ಮೇಯರ್ ರಾಜೇಂದ್ರ ಕುಮಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು. ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಸುಮಂತ್ ಅವರು ಅಥಿತಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಂದೆ ಓದಿ

ವಿಶೇಷ ವರದಿ
ಅವಳಿ ಜಿಲ್ಲೆಯಲ್ಲಿ ನಡೆಯುತ್ತಿದೆ ಜೂಜು
ಶ್ರೀಪತಿ ಹೆಗಡೆ ಹಕ್ಲಾಡಿ
ಉಡುಪಿ : ರಂಗಸ್ಥಳದಲ್ಲಿ ಕಲಾವಿದರ ಗಿರಕಿ... ಹೊರಗಡೆ ಗರಗರ ಮಂಡ್ಲದ ಗುಂಡಿನ ಗಿರಕಿ... ಜೋರು! ಸೂರ್ಯ, ಚಂದ್ರ ಖಾಲೀ ಖಾಲಿ. ಎಕ್ಕ, ಕಾಳವರಕ್ಕೆ ಬಾರೀ ನೋಡಿ. ಒಂದಕ್ಕೆ ಎಪ್ಪತ್ತು ದುಡ್ಡು ಹಾಕಿ ಎನ್ನೋ ಕೂಗು ಕಲಾವಿದರ ಅಬ್ಬರಕ್ಕಿಂತಲೂ ಮಿಗಿಲು. ಯಕ್ಷಗಾನ ಆಟಕ್ಕೆ ಗರಗರ ಮಂಡ್ಲ ಶನಿಯಾಗಿ ಕಾಡುತ್ತದೆ. ಯಕ್ಷಗಾನ ಎಲ್ಲಿ ನಡೆದರೂ ಅಲ್ಲಿ ಗರಗರ ಮಂಡ್ಲದ ಸದ್ದಿರುತ್ತದೆ. ಪೇಟೆ, ಪಟ್ಟಣ, ಹಳ್ಳಿ ಪಳ್ಳಿ ಎಲ್ಲೇ ಆಟ ನಡೆದರೂ ಗರಗರ ಮಂಡ್ಲ ಹಾಜರ್. ನೇಮ, ಉತ್ಸವ, ಜಾತ್ರೆ, ಕೋಲಾದಲ್ಲೂ ಗರಗರ ಮಂಡ್ಲದ್ದೇ ಕಾರುಬಾರ್.



ಪೊಲೀಸರು ಎದುರುಗಿದ್ದರೂ ಗರಗರ ಮಂಡ್ಲ ಡೋಂಟ್ ಕೇರ್! ಗರಗರ ಮಂಡ್ಲದ ಮಾಲಿಕ ರಾತ್ರಿ ಬೆಳಗಾಗೋದ್ರೊಳಗೆ ಕಿಸೆ ತುಂಬಿಸಿಕೊಳ್ಳುತ್ತಾನೆ. ಆಟದ ವೀಕ್ಷಕ ಆಟವನ್ನೂ ನೋಡದೆ ಬಕ್ಕಣ ಖಾಲಿ ಮಾಡಿಕೊಂಡು ಹ್ಯಾಪ್ ಮೋರೆ ಹಾಕಿಕೊಂಡು ಮನಗೆ ತೆರಳೋದು ಮಾಮೂಲಿ. ಇಷ್ಟೆಲ್ಲಾ ಗರಗರ ಮಂಡ್ಲ, ಮೂರೆಲೆ, ಅಂದರ್ ಬಾಹರ್ ನಡೆಯುತ್ತಿದ್ದರೂ, ಜಿಲ್ಲಾ ಪೊಲೀಸ್ ವರಿಷ್ಟ ಜಿಲ್ಲೆಯಲ್ಲಿ ಅಪಸೌವ್ಯ ನಡೆಯುತ್ತಿಲ್ಲ ಎಂಬ ಪ್ರಮಾಣ ಪತ್ರ ಕೊಡುತ್ತೀರೋದು ನಾಗರಿಕರಿಗೆ ಅಚ್ಚರಿ ಸಂಗತಿ.
ಗರಗರ ಹೆಸರು ಬಂತು ಹೇಗೆ : ಕೋಳಿ ಅಂಕ ಜೂಜಾಟದ ಕೇಂದ್ರವಾಗಿ ಬದಲಾಗುತ್ತಿದೆ. ಅವಳಿ ಜಿಲ್ಲೆಯ ವಸತಿ ಕೇಂದ್ರಗಳಲ್ಲಿ ಇಸ್ಪೀಟ್ ಹಂಗಿಲ್ಲದೆ ನಡೆಯುತ್ತಿದೆ. ರೂಮ್ನಲ್ಲಿ ರಮ್ಮಿ ಮೂರೆಲೆ ಆಟ ನಡೆದರೆ ಬಯಲಲ್ಲಿ ಕೂತು ಗರಗರ ಮಂಡ್ಲೆಕ್ಕೆ ಜನ ದುಡ್ಡು ಸುರಿಯುತ್ತಿದ್ದಾರೆ. ಹಣ ಹಾಕೋರ ಶಕ್ತಿ ಮೇಲೆ ಗರಗರ ಮಂಡ್ಲಕ್ಕೆ ದುಡ್ಡಿ ಬೀಳುತ್ತಿದೆ. ಇಲ್ಲಿ ದೊಡ್ಡು ಕಟ್ಟಿದವ ಕೋಡಂಗಿ ಜೂಜು ನಡೆಸೋರು ವೀರಭದ್ರ ಆಗುತ್ತಾರೆ.
ಬೆಡ್ ಸೀಟ್ ಆಕಾರದ ಒಂದು ಪ್ಲಾಸ್ಟಿಕ್ ಹಾಳಿಯಲ್ಲಿ ಸೂರ್ಯ, ಚಂದ್ರ, ಕಾಳಾವರ ಆಟೀನ್ ಎಕ್ಕ, ಡೈಮಂಡ್, ರಾಜಾ, ರಾಣಿ ಮುಂತಾದ ಚಿಹ್ನೆ ಇರುತ್ತದೆ. ಗರಗರ ಮಂಡ್ಲ ನಡೆಸೋರು ಚಿತ್ರ ವಿರುವ ಚಾಪೆ ಮುಂದೆ ಸ್ಥಾಪನೆ ಆಗುತ್ತಾನೆ. ಕೈಯಲ್ಲಿ ತಗಡಿನದ್ದೋ ಪ್ಲಾಸ್ಟಿಕ್ನದ್ದೋ ಸಣ್ಣ ಕರಡಿಗೆ ಇರುತ್ತದೆ. ಕರಡಿಗೆ ಒಳಗೆ ಪ್ಲಾಸ್ಟಿಕ್ ಹಾಳೆಯ ಮೇಲೆ ಇರುವ ಚಿತ್ರದ ನಕಲಿರುವ ಸಣ್ಣದೊಂದು ಗುಂಡಿರುತ್ತದೆ.
ಗರಗರ ಮಂಡ್ಲ ನಡೆಸೋನು ಗುಂಡನ್ನ ಕರಡಿಗೆ ಒಳಕ್ಕೆ ಹಾಕಿ ಅದರ ಮೇಲೆ ಕೈಮುಚ್ಚಿಕೊಂಡು ಛೂ ಮಂತ್ರಕಳಿ ಎನ್ನೋಹಾಗೆ ಗುಂಡನ್ನ ಗರಗರ ತಿರುಗಿಸುತ್ತಾನೆ. ಹೀಗೆ ತಿರುಗಿಸುವಾಗ ಗಿರಾಕಿ ಸೆಳೆಯಲು ದೊಡ್ಡದಾಗಿ ಆಟೀನ್ ಎಕ್ಕ ರಾಜಾ ರಾಣಿ ಖಲೀ ಖಾಲೀ ಅಂತ ಅರಚುತ್ತಾನೆ ಹೀಗೆ ಅರಚುತ್ತಾ ಕೈಯಲ್ಲಿ ತಿರುಗಿಸುತ್ತರುವ ಗುಂಡನ್ನು ಕರಡಿಗೆ ಸಮೀತ ಸೋಯ್ ದಬಕ್ ಎನ್ನೋ ಹಾಗಿ ಚಿತ್ರವಿರುವ ಪಟದ ಮಧ್ಯ ವೊಗಚಿ ಹಾಕುತ್ತಾನೆ. ಹಣ ಕಟ್ಟೋದು ಮುಗಿದ ನಂತರ ಕೌಚಿ ಹಾಕಿದ ಕರಡಿಗೆ ತೆರೆಯುತ್ತಾನೆ.ಗುಂಡಿನ ಮೇಲ್ಗಡೆ ಬಂದ ಚಿತ್ರಕ್ಕೆ ಹಣ ಬುರುತ್ತದೆ. ಒಂದು ರೂ. ಕಟ್ಟಿದರೆ ಗರಗರ ಮಂಡ್ಲ ಓನರ್ 70 ರೂ. ಕೊಡುತ್ತಾನೆ. ಆಸೆ ಯಾರನ್ನು ಬಿಟ್ಟದೆ. ಹಾಗಾಗಿ ಜನ ಸುಲಬದಲ್ಲಿ ಹಣ ಸಿಗುತ್ತೆ ಅಂತ ಮುಗಿಬಿದ್ದು ಹಣ ಕಟ್ಟುತ್ತಾರೆ. ಕ್ಷಣಾರ್ಧದಲ್ಲಿ ಹಣ ಕಾಲಿ. ಹೀಗೆ ಅಂಡೆಯೊಳಗೆ ಗುಂಡು ಹಾಕಿ ಗರಗರ ತಿರುಗಿಸೋದ್ರಿಂದ ಗರಗರ ಮಂಡ್ಲ ಅನ್ನೋ ಹೆಸರು ಬಂದಿದೆ.
ಗರಗರ ಮಂಡ್ಲದ ಚಾಪೆಯಲ್ಲಿ ವಿವಿಧ ರೀತಿಯ ಸುಮಾರು ಎಂಟು ಚಿತ್ರಗಳಿರುತ್ತದೆ. ಹಣ ಬರೋದು ಒಂದೇ ಚಿತ್ರಕ್ಕೆ ಉಳಿದ ಚಿತ್ರಕ್ಕೆ ಕಟ್ಟಿದ ಹಣ ಗರಗರ ಮಂಡ್ಲದಾತನಿಗೆ.
ಅವಳಿ ಜಿಲ್ಲೆಯಲ್ಲಿ 33 ಯಕ್ಷಗಾನ ಮೇಳ : ಮಂಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ ಟೆಂಟ್ ಮತ್ತು ಬಯಲಾಟ ಸೇರಿ ಮುವತ್ತೂರು ಯಕ್ಷಗಾನ ಮೇಳವಿದೆ. ಬಯಲಾಟಕ್ಕೆ ಕಡಿಮೆಯೆಂದೂ ಹದಿನೈದು ಸಾವಿರ ರೂ. ಖರ್ಚು ತಗಲುತ್ತದೆ. ಟೆಂಟ್ ಆಟಕ್ಕೆ 30 ಸಾವಿರ ರೂ. ಬೀಳುತ್ತದೆ. ಎಲ್ಲಾ ಮೇಳಗಳ ಸರಿಸುಮಾರು ಲೆಕ್ಕತೆಗೆದರೂ ಅವಳಿ ಜಿಲ್ಲೆಯಲ್ಲಿ ಪ್ರತಿ ರಾತ್ರಿ ಯಕ್ಷಗಾನಕ್ಕಾಗಿ 6.6 ಲಕ್ಷ ರೂ. ವಿನಿಯೋಗಿಸಲಾಗುತ್ತಿದೆ. ಹಾಗೆ ಆರು ನೂರಕ್ಕೂ ಮಿಕ್ಕ ಕಲಾವಿದರು ಮತ್ತು ಆಳು,ಕಾಳಿಗೆ ಯಕ್ಷಗಾನ ಅನ್ನ ನೀಡುತ್ತಿದೆ. ಸಾಂಸ್ಕೃತಿಕ ಸಂಪತ್ ಭರಿತ ಯಕ್ಷಗಾನಕ್ಕೆ ಗರಗರ ಮಂಡ್ಲ ಎಂಬ ಅನಿಷ್ಟ ಬಗಲುಗಾಣವಾಗುತ್ತಿದೆ.
ದಕ್ಷಿಣ ಕನ್ನಡದಲ್ಲಿ ಯಕ್ಷಗಾನಕ್ಕೆ ಗರಗರ ಮಂಡ್ಲದ ಕಾಟವಾದರೆ ಉತ್ತರ ಕನ್ನಡದಲ್ಲಿ ಇಸ್ಪೀಟ್ ಆಟ ಶಾಪವಾಗಿ ಕಾಡುತ್ತಿದೆ. ಟೆಂಟ್ ಒಳಗೆ ಇರುವ ಜನರಿಗಿಂತ ಹೆಚ್ಚಾಗಿ ಟೆಂಟ್ ಪಕ್ಕದ ಮೂರೆಲೆ ಆಟದಲ್ಲಿ ಜನರಿರುತ್ತಾರೆ. ರಾತ್ರಿ ಟೆಂಟ್ ಖಾಲಿಯಾದರೆ ಬೆಳಿಗ್ಗೆ ಟೆಂಟ್ ಫುಲ್! ಇಸ್ಪೀಟ್ ಆಟ ಮುಗಿಸಿಕೊಂಡು ರೆಸ್ಟ್ ತಗೆದುಕೊಳ್ಳಲು ಕಿಲಾಡಿಗಳು ಟೆಂಟ್ ಕುರ್ಚಿ ಆಶ್ರಯಿಸುತ್ತಾರೆ. 12 ಗಂಟೆ ನಂತರ ಟೆಂಟ್ ಆಟ ಫ್ರೀ.
ಮಂಗಳೂರು ಉಡುಪಿ ಜಿಲ್ಲೆಯಲ್ಲಿ ಸುಮಾರು ಯಕ್ಷಗಾನ ಮೇಳದಷ್ಟೇ ಗರಗರ ಮಂಡ್ಲ ಕ್ಯಾಂಪ್ ಇದೆ. ಒಬ್ಬರ ಅಡಿಯಲ್ಲಿ ನಾಲೈದು ನಾಲ್ಕೈದು ಗರಗರ ಮಂಡ್ಲದ ಪಟದ ಹಾಳೆಯಿರುತ್ತದೆ. ಹಾಳೆ ಮಡಿಚಿ ಕಂಕಲಲ್ಲಿಟ್ಟುಕೊಂಡು ಕರಡಿಗೆ ಮತ್ತು ಗುಂಡು ಪ್ಯಾಂಟ್ ಕಿಸೆಗೆ ತುರುಕಿ ಹೊರಟರಾಯಿತಿ. ಇದಕ್ಕೆ ಲಕ್ಷಾಂತರದ ಬಂಡವಾಳವೂ ಬೇಡ. ಕಡಿಮೆ ಬಂಡವಾಳದಲ್ಲಿ ಹೆಚ್ಚು ದುಡ್ಡು ಮಾಡೋ ದಂದೆಯಿದ್ದರೆ ಅದು ಗರಗರ ಮಂಡ್ಲ!
ಜೂಜಾಟದ್ದೇ ಕಾರುಬಾರು : ಜೂಜು ಎನ್ನೋದು ಮಾಮೂಲಾಗಿ ಹೋಗಿದೆ. ಜೂಟದ ಪರಿಕೂಡಾ ಥರಹೇವಾರಿ. ಓಸಿ ಯಿಂದ ಹಿಡಿದು ಕೋಳಿ ಅಂಕದವರೆಗೆ, ಗರಗರ ಮಂಡ್ಲಿದಿಂದ ಆರಂಭವಾಗಿ ಅಂದರ್ ಬಾಹರ್ ವರಗೆ ಜೂಜು ಅಬಾಧಿತ.
ಮೇಲ್ಸ್ತ್ ರ ಜನರು ಜೂಜಾಟಕ್ಕೆ ವಸತಿ ಗೃಹ ಆಶ್ರಯಿಸಿದರೆ, ಕೂಲಿ ನಾಲಿ ಮಾಡೋರು ಮತ್ತು ಮಧ್ಯಮ ವರ್ಗದವರಿಗೆ ಓಸಿ, ಗರಗರ ಮಂಡ್ಲಕ್ಕೆ ದುಡ್ಡು ಹಾಕುತ್ತಿದ್ದಾರೆ. ಮೂರೆಲೆ ಅಂದರ್ ಬಾಹರ್ಗೆ ಗೋಣಿ ಚೀದಲ್ಲಿ ದುಡ್ಡು ಬೇಕಾಗುತ್ತದೆ. ಸಾವಿರ ರೂ.ವರಗೆ ರಮ್ಮಿ ಆಟದ ಪಾಯಂಟ್ ಇರುತ್ತದೆ. ಕೋಳಿ ಅಂಕದ ಬೆಟ್ ಕೂಡ ಸಾವಿರ ರೂ.ಲೆಕ್ಕಚಾರದಲ್ಲಿ ನಡೆಯುತ್ತದೆ. ಪೊಲೀಸರು ಆಗೊಮ್ಮೆ, ಈಗೊಮ್ಮೆ ರೈಡ್ ಮಾಡಿ ಮತ್ತೆ ಸುಮ್ಮನಾಗೋದ್ರಿಂದ ಜಚಜಚ ನಿರಂತರ. ಇದರಿಂದ ಜೂಜುಗಾರರ ಕುಟುಂಬ ಕಣ್ಣಿರಲ್ಲಿ ಕೈತೊಳೆಯುತ್ತಿದೆ. ಪೊಲೀಸ್ ಜೂಜಾಟಕ್ಕೆ ಕಡಿವಾಣ ಹಾಕದಿದ್ದರೆ ಹತ್ತಾರು ಕುಟುಂಬ ಬೀದಿಗೆ ಬರಲಿದೆ. ಅದಲ್ಲದೆ ಬಟ್ಟಂಬಯಲಲ್ಲಿ ಜೂಜು ನಡೆಯುತ್ತಿದ್ದರೂ, ಅದನ್ನ ತಡೆಯೋಕೆ ಆಗೋಲ್ಲ ಅನ್ನೊದು ಚಿದಂಬರ ರಹಸ್ಯ. ಬೀಡಾ ಅಂಗಡಿ ಹಾಡಿ ಮಗ್ಗಲು ಆಟದ ಗೆರ ಜೂಜಾಟದ ತಾಳವಾಗಿ ಬದಲಾಗುತ್ತಿರೋದು ಚಿಂತೆಯ ಸಂಗತಿ

ಮುಂದೆ ಓದಿ

ಆರೋಗ್ಯ
ಭಾಗ - 1
ಮಾನವ ಜೀವನದ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕರ ಸಾಧನೆಗೂ ಆಧಾರಭೂತವಾದುದು ಈ ಶರೀರ. ಯೋಗಾಸಕ್ತನಾದವನು ಚಿತ್ತವೃತ್ತಿ ನಿರೋಧದ ಮೂಲಕ ಸರ್ವ ಸಂಯಮದ ಮೂಲಕ ಮಾನಸಿಕ, ಬೌದ್ಧಿಕ ಹಾಗೂ ಶಾರೀರಿಕ ಬಲಗಳನ್ನು ವೃದ್ಧಿಸಿಕೊಂಡು ಸದ್ಗತಿ ಪಡೆಯುತ್ತಾನೆ. ಈ ದೃಷ್ಟಿಯಿಂದ ನೋಡಿದಾಗ ಯೋಗಕ್ಕೂ, ಆರೋಗ್ಯಕ್ಕೂ ಇರುವ ಹತ್ತಿರದ ಸಂಬಂಧ ಸ್ಪಷ್ಟವಾಗಿ ಗೋಚರಿಸುತ್ತದೆ.




ಅನೇಕ ಶತಮಾನಗಳ ಅನುಭವದಿಂದ ದೇಹದ ಪ್ರತಿಯೊಂದು ಅಂಗಕ್ಕೂ, ಮಾಂಸಖಂಡಗಳಿಗೂ, ನರಗಳಿಗೂ, ಗ್ರಂಥಿಗಳಿಗೂ ವ್ಯಾಯಾಮ ಸಿಗುವಂತೆ ಆಸನಗಳನ್ನು ನಿಯೋಜಿಸಲಾಗಿದೆ. ಅವು ಒಳ್ಳೆಯ ದೇಹವನ್ನು ಬೆಳೆಸುತ್ತದೆ. ಆಸನಗಳನ್ನು ಮಾಡುವುದರಿಂದ ಕೇವಲ ಆರೋಗ್ಯವಾಗಿ ಇರುವಿಕೆಯನ್ನು ಮಾತ್ರ ಸಾಧಕನು ಗಳಿಸುವುದಿಲ್ಲ ಅದೂ ಹಣ ಕೊಟ್ಟು ಪಡೆಯುವ ವಸ್ತುವೂ ಅಲ್ಲ. ಕಷ್ಟದ ದಿನನಿತ್ಯದ ಸಾಧನೆಯಿಂದ ಮಾತ್ರ ಗಳಿಸಬಹುದಾದ ಆಸ್ತಿ ಅದು. ದೇಹ, ಮನಸ್ಸು ಮತ್ತು ಆತ್ಮಗಳ ಸಾಮರಸ್ಯದ ಅವಸ್ಥೆ ದೈಹಿಕ, ಮಾನಸಿಕ ಶಾಂತಿ, ನೆಮ್ಮದಿಗಳ ಅರಿವುಗಳನ್ನು ಪಡೆಯುವುದೇ ನಿಜವಾದ ಆರೋಗ್ಯ.


(ಯೋಗ ಎನ್ನುವ ಪದ ಸಂಸ್ಕೃತ ಮೂಲಧಾತುವಾದ ಯುಜ್ ಎನ್ನುವುದರಿಂದ ಬಂದಿದ್ದು. ಅದು ಬಂಧಿಸು, ಕೂಡಿಸು, ಚಿತ್ತವನ್ನು ನಿರ್ದೇಶಿಸಿ ಕೇಂದ್ರೀಕರಿಸು ಎನ್ನುವ ಆಜ್ಞೆಗಳನ್ನು ಕೊಡುತ್ತದೆ. ಗೀತೆಯಲ್ಲಿ ತಿಳಿಸಿದಂತೆ ಶರೀರದ, ಮನಸ್ಸಿನ ಮತ್ತು ಆತ್ಮದ ಸರ್ವ ಶಕ್ತಿಗಳನ್ನು ಭಗವಂತನೊಡನೆ ಸಂಯೋಜಿಸುವುದು ಯೋಗ. ಪತಂಜಲಿ ಋಷಿಗಳ 196 ಸೂತ್ರಗಳ 2ನೇ ಸೂತ್ರದಲ್ಲಿ ಯೋಗ: ಚಿತ್ತ ವೃತ್ತಿ ನಿರೋಧ : ಅಂದರೆ ಚಿತ್ತದ ವೃತ್ತಿಗಳನ್ನು (ಬಯಕೆಗಳನ್ನು) ಸಂಪೂರ್ಣ ತಡೆ ಹಿಡಿದ ಸರ್ವದಾ ವಿರೋಧಿಸಿ, ನಿಲ್ಲಿಸಿ ಏಕಾಗ್ರತೆ ಸಾಧಿಸುವುದೇ ಯೋಗವೆನಿಸುವುದು). ಪ್ರಾಚೀನಮುನಿ ಪತಂಜಲಿಯ ಪ್ರಕಾರ ಯೋಗದಲ್ಲಿ ಅಷ್ಟಾಂಗಗಳಿವೆ. ಅವು : 1. ಯಮ, 2. ನಿಯಮ, 3. ಯೋಗಾಸನ, 4. ಪ್ರಾಣಾಯಾಮ, 5. ಪ್ರತ್ಯಾಹಾರ 6. ಧಾರಣ 7. ಧ್ಯಾನ ಮತ್ತು 8. ಸಮಾಧಿ ಎಂಬುದಾಗಿ 8 ಅಂಗಗಳಾಗಿ ವಿಂಗಡಿಸಬಹುದು. ಇದೇ ಕಾರಣದಿಂದ ಇದನ್ನು ಅಷ್ಟಾಂಗ ಯೋಗವೆಂದು ಕರೆಯುವರು. ಈ ಅಷ್ಟಾಂಗ ಯೋಗದ 3ನೇ ಮೆಟ್ಟಲೇ ಯೋಗಾಸನ. ಮನುಷ್ಯನಿಗೆ ಗಾಳಿ, ಬೆಳಕು, ನೀರು ಎಷ್ಟು ಪ್ರಾಮುಖ್ಯವೋ ಯೋಗವೂ ಕೂಡಾ ಅಷ್ಟೇ ಅನಿವಾರ್ಯ. ಇದು ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿ ಒಬ್ಬ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತದೆ. (ಇಂದಿನ ನಾಗರಿಕತೆಯ ಯುಗದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಯೋಗ ಸಾಧನೆಯ ಅವಶ್ಯಕತೆ ಹೆಚ್ಚಿದೆ. ನಾವು ಉಪಯೋಗಿಸುವ ಆಹಾರ, ಪಾನೀಯ, ಉಸಿರಾಡುವ ಗಾಳಿ ಎಲ್ಲವೂ ಮಾಲಿನ್ಯಗೊಂಡಿದ್ದು. ಪ್ರತಿಯೊಬ್ಬರು ರೋಗ ರುಜಿನಗಳಿಂದ ಬಳಲುವಂತಾಗಿದೆ. ಇವುಗಳಿಂದ ಸಾಧ್ಯವಿರುವಷ್ಟು ವಿಮುಕ್ತರಾಗಿ ಉತ್ತಮ ರೀತಿಯ ಆರೋಗ್ಯವಂತರಾಗಿ, ದೀರ್ಘಾಯುಗಳಾಗಿ ಬದುಕಿ ಬಾಳಲು ಯೋಗಾಭ್ಯಾಸ ನಿರಂತರ ಅಗತ್ಯ.

ಯೋಗಾಸನವು ಮನುಷ್ಯನ ಶರೀರದ ರಚನಾ ಶಾಸ್ತ್ರದ ಸಂಪೂರ್ಣ ಜ್ಞಾನದ ವೈಜ್ಞಾನಿಕ ಆಧಾರದ ಮೇಲೆ ನಿಂತಿದೆ. ಯೋಗಾಸನವೆಂಬುದು ಜಗತ್ತಿಗೆ ಒಂದು ಭಾರತದ ದೊಡ್ಡ ಕೊಡುಗೆ ಆಗಿದೆ. ಯೋಗಾಭ್ಯಾಸದಿಂದ ಜೀರ್ಣಾಂಗಗಳ ಶಕ್ತಿ ವೃದ್ಧಿಗೊಳ್ಳುತ್ತದೆ ಮತ್ತು ಮನುಷ್ಯನ ಆರೋಗ್ಯವನ್ನು ಕಾಪಾಡುತ್ತದೆ. ಇದರಿಂದ ಹಲವಾರು ರೋಗಗಳನ್ನು ತಡೆಗಟ್ಟಬಹುದು. ಶರೀರ ಸ್ವಾಸ್ಥ್ಯವನ್ನೂ ಕೊಡುವ ಕೆಲವು ಯೋಗಾಸನಗಳನ್ನಾದರೂ ನಮ್ಮ ನಿತ್ಯ ಜೀವನದಲ್ಲಿ ಆಚರಣೆಯಲ್ಲಿಟ್ಟುಕೊಳ್ಳುವುದು ಎಲ್ಲರಿಗೂ ಕ್ಷೇಮ. ಯೋಗಾಭ್ಯಾಸವನ್ನು ಗುರುವಿನ ಮಾರ್ಗದರ್ಶನವಿಲ್ಲದೆ ಕಲಿಯಬಾರದು. ಯೋಗಾಭ್ಯಾಸವೆಂದರೆ ಶುಷ್ಕ ಅಂಗ ಸಾಧನೆಯಲ್ಲ. ಎಲ್ಲ ಧರ್ಮಕ್ಕೂ ದೇಹವೇ ಮೂಲಸಾಧನ. ದೇಹವನ್ನು ಮೊದಲು ಹಿಡಿತಕ್ಕೆ ತಂದುಕೊಳ್ಳಬೇಕು. ಭಾರತೀಯ ಯೋಗ ಅದಕ್ಕೊಂದು ಸಾಧನ. ಅದು ಶರೀರವನ್ನು ಕಾಂತಿಗೊಳಿಸುತ್ತದೆ. ಯೌವನ ಹರಿಸುತ್ತದೆ. ಲವಲವಿಕೆ ತುಂಬುತ್ತದೆ. ಪಾಶ್ಚಾತ್ಯರೂ ಈಗೀಗ ಈ ಯೋಗದ ಬೆನ್ನು ಹತ್ತಿದ್ದಾರೆ. ಯೋಗ ಔಷಧಕ್ಕೊಂದು ಪರ್ಯಾಯ ರಾಮಬಾಣ. ಮಾನವದ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗಾಭ್ಯಾಸವೇ ಅತ್ಯುತ್ತಮ ರಾಜಮಾರ್ಗ. ಯೋಗಾಭ್ಯಾಸವು ಬೌದ್ಧಿಕವಾಗಿ ಮೆದುಳನ್ನು ಆರೋಗ್ಯದಲ್ಲಿಟ್ಟು ಸಮಸ್ತವಾಗಿ ಶಕ್ತಿಯುತವಾಗಿ ಮಾಡಿ ಔಷಧಿಗಳಿಂದ ಗುಣಪಡಿಸಲಾಗದ ರೋಗದಿಂದ ಮುಕ್ತ ಪಡೆಯುವುದು ಸಾಧ್ಯ. ಯೋಗಾಸನಗಳು ಕೇವಲ ದೈಹಿಕ ವ್ಯಾಯಾಮಗಳಾಗದೆ, ಅವು ನಿಲುವುಗಳು ಆಗಿವೆ. ಶುಭ್ರವಾದ ಸ್ಥಳ, ಒಂದು ಜಮಖಾನೆ ಮತ್ತು ಮನಸ್ಸಿನ ದೃಢತೆ ಬೇಕಾಗಿರುತ್ತದೆ. ಇತರ ದೈಹಿಕ ವ್ಯಾಯಾಮಗಳಿಗೆ ವಿಸ್ತಾರವಾದ ಸ್ಥಳಗಳೂ ಹೆಚ್ಚಿನ ಖರ್ಚಿನ, ಸಾಧನ ಸಾಮಾಗ್ರಿಗಳೂ ಜನರೂ ಬೇಕು. ಆದರೆ ಆಸನಗಳನ್ನು ಒಂಟಿಯಾಗಿಯೇ ಮಾಡಬಹುದು. ದೇಹಕ್ಕೆ ಬೇಕಾದ ಭಾರ ಪ್ರತಿಭಾರಗಳನ್ನು ಅಂಗಗಲೇ ಒದಗಿಸುತ್ತವೆ. ಅವುಗಳನ್ನು ಬೆಳೆಸಿಕೊಂಡಲ್ಲಿ ಅವಶ್ಯಕವಾದ ಕ್ಷಿಪ್ರತಾ ಸಮತಾ, ಸಹಿಷ್ಣುತಾ ಮತ್ತು ಹೆಚ್ಚಿನ ಶಕ್ತಿಗಳು ಬರುತ್ತವೆ.
ಇಡಿಯ ಮಾನವ ಜನಾಂಗಕ್ಕೆ : ನಿಜವಾದ ಕೊಡುಗೆಯಾಗಬಲ್ಲ: ಭಾರತೀಯ ಸಂಸ್ಕೃತಿಯ ಮುಖ್ಯಾಂಶಗಳಲ್ಲಿ : ಯೋಗ ಎಂಬುವುದು ಗಣ್ಯ ಸ್ಥಾನವನ್ನು ಪಡೆಯುತ್ತದೆ. ಮಾನವನ ಸರ್ವತೋಮುಖವಾದ ಆರೋಗ್ಯದ ದೃಷ್ಟಿಯಿಂದ ಯೋಗಾಸನಗಳು ಎಂತಹ ಪವಾಡ ಸದೃಶ ಪರಿಣಾಮವನ್ನು ಉಂಟು ಮಾಡುತ್ತವೆ ಎಂಬುವುದನ್ನು ಅನುಭವದಿಂದ ಸಿದ್ಧಿ ಮಾಡಿಕೊಂಡ ಅನೇಕ ವಿದೇಶೀ ಜಿಜ್ಞಾಸುಗಳು ಸಹ ಈಚೆಗೆ ಯೋಗದ ಕುರಿತು ಸಾಕಷ್ಟು ಸಾಧನೆ ಪ್ರಜಾರಾದಿಗಳನ್ನು ಕೈಗೊಂಡಿದ್ದಾರೆ. ಪೂರ್ವಕಾಲದ ಬೆಳೆಯಿಸಿಕೊಳ್ಳುವ ಮನೋವೃತ್ತಿಯು ಕ್ರಮೇಣ ಕಡಿಮೆಯಾಗುತ್ತಾ ಸಮಾಧಾನವಾಗುತ್ತದೆ. ಯೋಗ ನಮ್ಮ ದೇಶದ ಒಂದು ಪುರಾತನ ವಿದ್ಯೆ, ಕಲೆ, ವಿಜ್ಞಾನ ಹಾಗೂ ಸಂಸ್ಕೃತಿ. ಯೋಗವೆಂಬುದು ಅನಾದಿ ಕಾಲದಿಂದ ಪ್ರಯೋಜನ ಪ್ರಮಾಣವಾದರಿಂದ ಕೂಡಿ ಸೂತ್ರಬದ್ಧವಾಗಿ ನಮಗೆ ಉಳಿದು ಬಂದ ವಿಜ್ಞಾನ ಶಾಸ್ತ್ರ, ಸಾವಿರಾರು ವರ್ಷಗಳ ಹಿಂದೆ ಗ್ರಥಿತವಾದ ಈ ಶಾಸ್ತ್ರವು ಮಾನವನ ಪರಿಪೂರ್ಣತೆಗೆ ಸಾಧಕವಾದ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ವಿಷಯಗಳನ್ನು ವ್ಯಕ್ತಿಯ ಏಳಿಗೆಯನ್ನು ಗಳಿಸಿಕೊಡುವಂತಹದು. ಯೋಗದ ಬಗೆಗೆ ಬರೆದ ಪ್ರಾಚೀನ ಮುನಿ ಎಂದರೆ ಪತಂಜಲಿ ಎಂದೇ ಹೇಳಬೇಕು. ಕ್ರಿಸ್ತಪೂರ್ವ 500 ವರ್ಷಗಳ ಹಿಂದೆ ಮಹರ್ಷಿ ಪತಂಜಲಿ ಬರೆದ ಪತಂಜಲಿ ಯೋಗ ಸೂತ್ರ. ಯೋಗ ಶಾಸ್ತ್ರದಲ್ಲೇ ಒಂದು ಮೈಲಿಗಲ್ಲು. ಯೋಗದಲ್ಲಿಯೂ ಹಲವು ವಿಧಗಳಿವೆ. ರಾಜಯೋಗ, ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ ಹೀಗೆ ಹೆಸರಿಸಬಹುದು. ಆದರೆ ಎಲ್ಲದರ ಉದ್ದೇಶ ಮತ್ತು ಗುರಿ ಒಂದೇ ಆಗಿದೆ. ಈಚೆಗೆ ಪಶ್ಚಿಮ ರಾಷ್ಟ್ರಗಳಲ್ಲಿ ವಿಮಾನ ಚಾಲಕರಂಥ ತಂತ್ರಜ್ಞರು, ಹಿರಿಯ ಜವಾಬ್ದಾರಿಗಳನ್ನು ನಿರ್ವಹಿಸುವ ಉದ್ಯಮಾಧಿಕಾರಿಗಳು ಕೂಡಾ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗದ ಮೊರೆ ಹೋಗುತ್ತಾರೆ. ಇತ್ತೀಚೆಗೆ ವ್ಯೋಮ ಯಾತ್ರೆ ಮಾಡಿದ ಭೌತದ ಗಗನಯಾನಿ ರಾಕೇಶ ಶರ್ಮಾ ಬಾಹ್ಯಾಕಾಶದಲ್ಲಿ ತಲೆದೋರುವ ಶಾರೀರಿಕ, ಮಾನಸಿಕ ವೈಪರೀತ್ಯಗಳ ಸಂದರ್ಭದಲ್ಲಿ ಯೋಗಾಸನಗಳ ಪ್ರಯೋಗ ನಡೆಸಿದ್ದು ವಿಶ್ವದ ಗಮನ ಸೆಳೆದದ್ದು ನಾವೆಲ್ಲರೂ ತಿಳಿದ ವಿಚಾರ.
ಸಾಮಾನ್ಯವಾಗಿ ನಾನಾ ಒತ್ತಡಗಳಿಂದ ನಿದ್ರೆ ಬಾರದೆ ವಿಶ್ರಾಂತಿ ಸಿಗದಿರುವ ವ್ಯಕ್ತಿಗಳಿಗೆ ಅಡ್ಡ ಪರಿಣಾಮದ ಮಾತ್ರೆಗಳಿಲ್ಲದೆ ನೈಜ ವಿಶ್ರಾಂತಿ ನೀಡಬಲ್ಲ ಸಾಧನವಾಗಿದೆ ಯೋಗಾಭ್ಯಾಸ. ಒಬ್ಬ ವ್ಯಕ್ತಿಯ ದೇಹದ ಕಾರ್ಯ ನಿರ್ವಹಣೆಯ ಮೇಲೆ ಮತ್ತು ರೋಗ ರುಜಿನಗಳನ್ನು ನಿವಾರಿಸುವುದರ ಮೇಲೆ ನಿಶ್ಚಿತ ಅಂಗಚಲನೆಗಳು ಮತ್ತು ಆಸನಗಳು ಫಲಪದ್ರ ರೀತಿಯಲ್ಲಿ ಪರಿಣಾಮಕಾರಿಯಾಗಬಲ್ಲವು ಎಂಬುದನ್ನು ವಿಜ್ಞಾನಿಗಳು ಪ್ರಯೋಗಾಲಯಗಳಲ್ಲಿ ವೈಜ್ಞಾನಿಕ ಶಿಸ್ತಿನಿಂದ ಅಧ್ಯಯನ ಮಾಡಿ ಯೋಗದಿಂದ ಸಾಕಷ್ಟು ಪ್ರಯೋಜನವಿದೆಯೆಂದು ತರ್ಕಬದ್ಧ ತೀರ್ಮಾನಕ್ಕೆ ಬಂದಿದ್ದಾರೆ. ಅದು ಮೂಲಭೂತ ದೈಹಿಕ ಕಾರ್ಯಾಚರಣೆಗಳನ್ನೇ ಸುಧಾರಿಸಬಲ್ಲದೆಂದು ಕಂಡುಕೊಂಡಿದ್ದಾರೆ. ಬಹುಪಾಲು ಜನರಿಗೆ ಇದು ಎಳೆಯ ಯುವಕರಿಗೆ ಮಾತ್ರ ಸೀಮಿತವಾದ ಕ್ರಿಯೆ ಎಂಬ ತಪ್ಪು ಭಾವನೆ ಇದೆ. ಆದರೆ ಅದು ನಿಜವಲ್ಲ. ಅದು ದೇಹ ದಂಡನೆಯೂ ಅಲ್ಲ. ಎಲ್ಲಾ ವಯಸ್ಸಿನವರಿಗೂ ಉಡುಗಿಹೋದ ಶಕ್ತಿಯ ಪುನರ್ಸ್ಥಾಪನೆಗೆ ಯೋಗಾಭ್ಯಾಸ ಬೇಕು. ಇದರ ಪ್ರಯೋಜನ ಅಪರಿಮಿತ. ಆಫೀಸಿನಲ್ಲಿ ದೇಹ ದಣಿಕೆಯಿಲ್ಲದೆ ಫ್ಯಾನ್ ಗಾಳಿಯ ಅಡಿಯಲ್ಲಿ ಅಥವಾ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತುಕೊಳ್ಳುವ ಉದ್ಯಮಪತಿಗಳಿಗೆ ದೇಹಕ್ಕೆ ಅಗತ್ಯವೆನಿಸುವ ವ್ಯಾಯಾಮ ಸಿಗುವುದಿಲ್ಲ. ಕೆಲಸ ಹಾಗೂ ವ್ಯಾಯಾಮ ಇವೆರಡನ್ನೂ ಹಲವಾರು ಮಂದಿ ಒಂದೇ ಎಂದು ತಿಳಿದಿದ್ದಾರೆ. ಆದರೆ ವಸ್ತು ಸ್ಥಿತಿ ಹಾಗಲ್ಲ. ದೇಹದಲ್ಲಿ ಆರೋಗ್ಯದ ಕಳೆ, ಚೈತನ್ಯದ ನೆಲೆ ಇರಬೇಕಾದಲ್ಲಿ ಎಲ್ಲಾ ಅಂಗಗಳಿಗೆ ಸರ್ವತೋಮುಖವಾದ ಕೆಲಸ ಸಿಗಬೇಕು. ವ್ಯವಸ್ಥಿತ ಚಲನೆಗೆ ದೇಹಕ್ಕೆ ದಣಿವು ಆಗಬೇಕು. ಉತ್ತಮ ಸಮತೂಕದ ಆಹಾರ ಪೋಷಣಾಂಶಗಳು, ಗಾಢನಿದ್ರೆ ಹಾಗೂ ಶುಭ್ರಗಾಳಿ ಇವಿಷ್ಟು ದೇಹದ ಆರೋಗ್ಯಕ್ಕೆ ಅಷ್ಟೇ ಅಗತ್ಯ ಯೋಗಾಭ್ಯಾಸ ಕೂಡ.
ಯೋಗದಲ್ಲಿ ಪ್ರತಿಯೊಂದು ಆಸನದಲ್ಲೂ ಮೂರು ಮುಖ್ಯಾಂಶಗಳುಂಟು.
1. ದೈಹಿಕ ಚಲನೆ, 2. ಮಾನಸಿಕ ನಿಯಂತ್ರಣ ವಿಧಾನ ಮತ್ತು. 3. ಶ್ವಾಸಕೋಶದ ನಿರ್ದಿಷ್ಟ ಹತೋಟಿ ಯೋಗಾಭ್ಯಾಸವನ್ನು ಇಂಥವರು, ಇಷ್ಟೇ ವಯಸ್ಸಿನವರು, ದೈವಭಕ್ತರು, ಸ್ತ್ರೀ ಯಾ ಪುರುಷರು ಕೈಗೊಳ್ಳಬೇಕಲೆಂಬ ಪ್ರತಿಬಂಧಕ ನಿಯಮವಿದೆಯೆಂದು ಬಹುಜನರಲ್ಲಿ ತಪ್ಪು ಭಾವನೆಯಿದೆ. ಇದು ಸರಿಯಲ್ಲ. ಸ್ತ್ರೀ ಪುರುಷರು ಯಾರೇ ಆಗಿರಲಿ ಯಾವ ಹಂತದಲ್ಲಾದರೂ ಸೂಕ್ತ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಕೈಗೊಂಡು ತಮ್ಮ ಆರೋಗ್ಯ, ಮಾನಸಿಕ ಸ್ಥಿತಿಗತಿಗಳನ್ನು ಉತ್ತಮಪಡಿಸಿಕೊಳ್ಳಬಹುದು. ತನ್ಮೂಲಕ ನರಮಂಡಲ ವ್ಯವಸ್ಥೆ, ರಕ್ತಚಲನೆ, ಇವೆಲ್ಲ ಸಂಪನ್ನವಾಗಿ ಶುದ್ಧವಾಗಿ ಆರೋಗ್ಯವಾಗಿ ಇರುವಂತೆ ನೋಡಿಕೊಳ್ಳಬಹುದು. ಯೋಗಾಭ್ಯಾಸ ಒಂದು ಸಾಮಾನ್ಯ ಆರೋಗ್ಯ ವ್ಯವಸ್ಥೆ.
ಪಾಶ್ಚಾತ್ಯರು ಈಗೀಗ ಯೋಗದ ಪ್ರಯೋಜನಗಳನ್ನು ಅರಿತುಕೊಂಡು ಅದರ ಬೆನ್ನು ಹತ್ತಿದ್ದಾರೆ. ಯೋಗದ ಕುರಿತು ವೈಜ್ಞಾನಿಕ ವಿಚಾರಗಳನ್ನು ನಮಗೆ ಕೊಡುತ್ತಾ ಸಮರ್ಥನೆಗಳನ್ನು ನೀಡುತ್ತಿದ್ದಾರೆ. ಆದರೆ ಹಿತ್ತಲ ಗಿಡ ಮದ್ದಲ್ಲ ಎಂದು ಭಾವಿಸದೆ ನಮ್ಮ ಪೂರ್ವಿಕರು ಬಿಟ್ಟುಹೋದ ಈ ಯೋಗ ಸಂಪತ್ತನ್ನು ನಮ್ಮ ಯುವ ಜನಾಂಗ ಬೆಳೆಸಿ ಉಳಿಸಿಕೊಳ್ಳಬೇಕಾಗಿದೆ. ಈ ದಿಸೆಯಲ್ಲಿ ಪ್ರತೀ ನಗರ, ಗ್ರಾಮಗಳಲ್ಲಿ ಯೋಗದ ತರಬೇತಿ ಕೇಂದ್ರಗಳನ್ನು ತೆರೆದು ಈ ಮೂಲಕ ನಮ್ಮ ಸಮಾಜದಲ್ಲಿ ಜಾಗೃತಿಯನ್ನುಂಟು ಮಾಡಬೇಕಾಗಿದೆ. ಪ್ರತೀ ನಗರಕ್ಕೊಂದು ಯೋಗ ಕೇಂದ್ರವನ್ನು ತೆರೆಯಲು ಸರಕಾರವು ಪ್ರಯತ್ನ ಮಾಡಬೇಕಾಗಿದೆ. ಪ್ರತೀ ಶಾಲೆ, ಕಾಲೇಜುಗಳಲ್ಲಿ ಯೋಗಾಸನ ಶಿಕ್ಷಣವನ್ನು ಪಾಠೇತರ ಚಟುವಟಿಕೆಗಳಲ್ಲಿ ಸೇರಿಸಿಕೊಂಡು ನಮ್ಮ ದೇಶದ ಈ ಒಂದು ಅನಘ್ರ್ಯ ಸಂಪತ್ತನ್ನು ಉಳಿಸಿಕೊಂಡು ಬೆಳೆಸಬೇಕೆಂದು ಬಯಸುವುದು ಸೂಕ್ತವಾದೀತು. ಇಲ್ಲವಾದಲ್ಲಿ ನಮ್ಮೀ ದೇಶದ ವಿದ್ಯೆಯನ್ನು ಕಲಿಯಲು ನಮ್ಮ ಮುಂದಿನ ಪೀಳಿಗೆ ಪಾಶ್ಚಿಮಾತ್ಯ ದೇಶಗಳಿಗೆ ಪ್ರಯತ್ನ ಪೂರ್ವಕ ಹೋಗಬೇಕಾದೀತು. ಸ್ವಿಟ್ಜರ್ಲ್ ಲ್ಯಾಂಡ್ ದೇಶವಂತೂ ಯೋಗದ ಅಂತರಾಷ್ಟ್ರೀಯ ಕೇಂದ್ರವಾಗಿ ಬೆಳೆಯುತ್ತಿದೆ. ಒಟ್ಟಿನಲ್ಲಿ ನಾವು ಈಗ ಜಾಗೃತರಾಗದಿದ್ದಲ್ಲಿ ಮುಂಬರಬಹುದಾದ ದುರಂತಕ್ಕೆ ನಾವೇ ಹೊಣೆಗಾರರಲ್ಲವೇ?
'ಯೋಗರತ್ನ' ಗೋಪಾಲಕೃಷ್ಣ ದೇಲಂಪಾಡಿ
ಲೇಖಕರು ನಿವೃತ್ತ ಸೀನಿಯರಹೆಲ್ತ್ಇನ್ಸ್ಪೆಕ್ಟರ್. ಮುಂದೆ ನಿರಂತರವಾಗಿ ಈ ಕನಸಿನಲ್ಲಿ ಆರೋಗ್ಯ ಅಂಕಣದ ಮೂಲಕ ಯೋಗದ ಬಗ್ಗೆ ಮಾಹಿತಿ ನೀಡಲಿದ್ದಾರೆ. ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರ ಪರಿಚಯ ಮುಂದಿನ ಕಂತಿನಲ್ಲಿ ಮೂಡಿಬರಲಿದೆ. - ಸಂ.

ಮುಂದೆ ಓದಿ

ವಿಚಾರ
ವಿಧಾನ ಮಂಡಲದಲ್ಲಿ ಅಧಿವೇಶನ ನಡೆಯುತ್ತಿದೆ. ಪ್ರತಿಪಕ್ಷಗಳ ಅಬ್ಬರ, ಅರಚಾಟಗಳು, ಆಡಳಿತ ಪಕ್ಷಗಳ ನಿಸ್ಸಹಾಯಕತೆಗಳೆಡೆಯಲ್ಲಿ ಸಮಯ ಪೋಲಾಗುತ್ತಿದೆ. ನೋಟಿಫೈ, ಡಿನೋಟಿಫೈಗಳ ಸಂಗತಿ ಚರ್ಚೆಗಳಿಲ್ಲದೆ ಕಳೆದುಹೋಗುತ್ತಿದೆ. ಯಾವುದೋ ಸರಕಾರಗಳ ಕಾಲದ ಭೂಹಗರಣಗಳು ಇಂದೆಂದಿನದ್ದೋ ಸೈಟುಗಳೆಡೆಯಲ್ಲಿ ತಳುಕು ಹಾಕಿಕೊಂಡು ಸದನದ ಅಬ್ಬರ ಜಾಸ್ತಿಯಾಗುತ್ತಿದೆ. ತನ್ನ ಪಾಡಿಗೆ ಎಲ್ಲೋ ಮೂಲೆಯಲ್ಲಿ ಬಿದ್ದುಕೊಂಡಿರುತ್ತಿದ್ದ ಜಮೀನಿಗೆ ಕೋಟಿಗಳ ಬೆಲೆ ಬಂದು ಬಿಟ್ಟಿದೆ. ಒಂದು ತುಂಡು ನೆಲ ಕರ್ನಾಟಕದಲ್ಲಿ ಮನೆಮಾತಾಗಿ ಬಿಟ್ಟಿದೆ. ಜನಪ್ರತಿನಿಧಿಗಳ ಸಂಬಂಧಿಕರಾರೋ ಕಾಯ್ದೆಯ ಸುಖವನ್ನು ಅನುಭವಿಸುತ್ತಿದ್ದಾರೆ. ಇದು ರಾಜಧಾನಿಯ ಕತೆ.



ತುಂಡು ಭೂಮಿಯೊಂದು ಬೃಹತ್ ಬ್ರಹ್ಮಾಂಡದಂತೆ ವಿಧಾನಮಂಡಲದಲ್ಲಿ ಚರ್ಚೆಯಾಗಿ ನೆಲದ ಮಹತ್ವವನ್ನು ಸಾರಿ ಹೇಳಿದಂತಿದೆ. ರಾತ್ರೋರಾತ್ರಿ ನೋಟಿಫೈ ಆಗಿದ್ದ ಭೂಮಿ ಬೆಳಗಾಗುವುದರೊಳಗೆ ಡಿನೋಟಿಫೈ ಆಗಿ ಯಾರದ್ದೋ ಕೈ ಸೇರಿಕೊಂಡ ಕತೆ ರಾಜಧಾನಿಯದ್ದಾದರೆ ಅಲ್ಲಿಂದ ದೂರದ ಕರಾವಳಿಯಲ್ಲಿ ನಡೆದದ್ದೇ ಬೇರೊಂದು ಕತೆ. ಅದು ವಿಧಾನಮಂಡಲದಲ್ಲಿ ಚರ್ಚೆಯಾಗಲಿಲ್ಲ. ಆಗುವುದೂ ಇಲ್ಲ. ಏಕೆಂದರೆ ಕರಾವಳಿಯ ಸದ್ಯದ ಚರ್ಚೆಯು ಭೂಮಿಗೆ ಆ ಯೋಗವಿಲ್ಲ. ಆ ಭೂಮಿ ರಾತ್ರೋರಾತ್ರಿ ನೋಟಿಫೈ ಆಗಿಬಿಡುತ್ತದೆ . ಹಾಗಾಗಿ ಅದೊಂದು ಭಿನ್ನ ಕತೆ.
ಅದು ರಾಜಧಾನಿಯ ಭೂಮಿಯಂತೆ ತುಂಡು ಭೂಮಿಯ ಕತೆಯಲ್ಲ. ಹಚ್ಚಹಸುರಿನ, ನಳನಳಿಸುತ್ತಿದ್ದ ಎಕರೆಗಟ್ಟಲೆ ಭೂಮಿಯ ಕತೆ. ಕಳೆದುಹೋದ ಸಾವಿರಾರು ಎಕರೆ ಭೂಮಿಯ ಕತೆ. ಇನ್ನೂ ಕಳೆದುಕೊಳ್ಳಲು ಸರತಿಯಲ್ಲಿರುವ ವ್ಯಥೆ. ವಿಧಾನಮಂಡಲದಲ್ಲಿ ಚರ್ಚೆತ ವಿಷಯ. ಆಡಂಬರದ ಬದುಕಿನ ಭೂಮಿಯದ್ದಾದರೆ ಈ ಭೂಮಿ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಕತೆ. ರಾಜಧಾನಿಯ ಭೂಮಿ ಉಳ್ಳವರಿಗಾಗಿಯಾದರೆ ಕರಾವಳಿಯ ಭೂಮಿ ಇಲ್ಲದವರದ್ದು. ಅದು ಖಚಿತ.
ಮಂಗಳೂರು ವಿಶೇಷ ಆರ್ಥಿಕ ವಲಯ ಎಂದರೆ ಹಾಗೆಯೆ. ಅದಕ್ಕೆ ಎದುರು ಬಂದವರನ್ನು ಅದು ಸಹಿಸುವುದಿಲ್ಲ. ಹಾಗಾಗಿ ಅದರ ಬಗ್ಗೆ ಮಾತಾಡಬಲ್ಲ ಧೈರ್ಯ ಇಲ್ಲಿನ ಪ್ರಜ್ಞಾವಂತರಿಗೂ ಸಾಕಾಗುವುದಿಲ್ಲ. ಹೀಗೆ ವರ್ತಿಸುತ್ತಲೇ ಅದು 1800 ಚಿಲ್ಲರೆ ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತು. ಅದರ ಮುಂದುವರಿದ ಭಾಗವೆಂಬಂತೆ 2035 ಎಕರೆಯ ಮೇಲೂ ಕಣ್ಣಿಟ್ಟು ಅದರ ಕಬಳಿಕೆಯ ಪ್ರಯತ್ನ ಮಾಡುತ್ತಿದೆ.
ಮೊದಲ ಹಂತದ ಅನಾಹುತಗಳನ್ನು ಕಂಡ ಜನನಾಯಕರು ಎರಡನೆ ಹಂತಕ್ಕೆ ಆಸ್ಪದವಿಲ್ಲ ಎಂದು ಹೇಳಿಕೆ ಕೊಟ್ಟರಷ್ಟೇ ಹೊರತು ಅಧಿಕೃತ ಸೂಚನೆ ಹೊರಬರಲಿಲ್ಲ. ಹಾಗಾಗಿ ಗೊಂದಲಗಳನ್ನು ಹುಟ್ಟಿಸುತ್ತಾ, ಭಯವನ್ನು ನಿರ್ಮಿಸುತ್ತಾ ತನ್ನ ಕೆಲಸ ತಾನು ಮಾಡುತ್ತಿದೆ. ವಿಧಾನಮಂಡಲದ ತುಂಡು ನೆಲದ ಬಗೆಗಿನ ಚರ್ಚೆಗಳೆಡೆಯಲ್ಲಿ ರೈತರ ಭೂಮಿಯ ಸಂಗತಿ ಚರ್ಚೆಗೆ ಆಸ್ಪದವಿಲ್ಲದೆ ಹೋಗುತ್ತಿದೆ. ಇವಿಷ್ಟು ಕರಾವಳಿಯ ರೈತನ ಭೂಮಿಯ ಕತೆ. ಈಗ ಮುಂದುವರೆದಿರುವುದು ಅದರ ಎರಡನೆ ಭಾಗ.
ಮಂಗಳೂರು ತಾಲೂಕು ಪೆರ್ಮುದೆ ಎಂಬ ಗ್ರಾಮದ ಒಂದು ಭಾಗ ಕುಡುಬಿ ಪದವು. ಬುಡಕಟ್ಟು ವರ್ಗದ ಕುಡುಬಿ ಜನಾಂಗದ ಈ ಗ್ರಾಮ ಹಸಿರಿನ ನೆಲ. ಭತ್ತ, ತರಕಾರಿ ಬೆಳೆಯುತ್ತಾ ತಮ್ಮ ಪಾಡಿಗೆ ತಾವಿರುತ್ತಿದ್ದ ಈ ಕುಡುಬಿಗಳು ಶ್ರಮಜೀವಿಗಳು. ವಿಶೇಷ ಆರ್ಥಿಕ ವಲಯ ಪ್ರದೇಶದ ಅಂಚಿನಲ್ಲಿರುವ ಇವರಿಗೆ ಅದರಿಂದಾಗುವ ಪ್ರಯೋಜನವೇನೂ ಇರಲಿಲ್ಲ. ತಮ್ಮ ತರಕಾರಿಗಳನ್ನು ಮಾರುತ್ತಾ ಸಮೃದ್ಧಿಯ ಜೀವನ ನಡೆಸುತ್ತಿದ್ದ ಇವರಿಗೆ ಕೊನೆಗೆ ಮುಳುವಾಗಿದ್ದು ಅದೇ ಭೂಮಿ. ಒಂದು ದಿನ ಸೂರ್ಯಾಸ್ತದ ಅನಂತರ ಬಂದ ಸೂಟುಧಾರಿಗಳು ಹೆಬ್ಬೆಟ್ಟು ಒತ್ತಿಸಿಕೊಂಡು ಹೋಗುವಾಗಲೂ ಇವರಿಗೆ ಏನೊಂದೂ ಗೊತ್ತಿರಲಿಲ್ಲ. ಮರುದಿನ ಸರ್ವೆ ನಡೆಸುವ ಹೊತ್ತಿಗೆ ಎಲ್ಲವೂ ಸ್ಪಷ್ಟವಾಗಿ ಹೋಗಿತ್ತು. ಮುಂದೆ ನಡೆದಿದ್ದೆಲ್ಲಾ ಒಂಥರಾ ರಕ್ತ ಚರಿತ್ರೆಯೇ. ಬೆಳೆದು ನಿಂತಿದ್ದ ಭತ್ತ, ತರಕಾರಿಗಳ ಮೇಲೆ ಯಂತ್ರಗಳು ಮಣ್ಣು ಸುರಿದವು. ಬಾವಿ, ಬಾವಿಯೊಳಗಿನ ಮೋಟಾರುಗಳು ಮುಚ್ಚಿಹೋದವು. 15 ಚಿಲ್ಲರೆ ಎಕರೆ ಪ್ರದೇಶ ಸಪಾಟು ಮೈದಾನವಾಯಿತು. ಕುಡುಬಿಗಳ ಮನೆಯ ಮುಂದಿನ ದೃಶ್ಯ ಬದಲಾಗಿ ಹೋಗಿತ್ತು. ಅಲ್ಲಿ ನಡೆದ ಇನ್ನೂ ಒಂದು ವಿಚಿತ್ರ ವೆಂದರೆ ಮೊದಲ ಹಂತದ ಭೂ ಸ್ವಾಧೀನದಲ್ಲಿ ನೆಲ ಕಳೆದುಕೊಂಡ ಕರಾವಳಿಯ ಗುತ್ತಿನ ಮನೆಗಳ ಕುಟುಂಬಗಳಿಗೆ ಕುಡುಬಿಗಳ ಜಾಗದಲ್ಲಿ ಪುನರ್ವಸತಿ ಕಲ್ಪಿಸಲಾಯಿತು. ನೋಡನೋಡುತ್ತಲೇ ಕುಡುಬಿಗಳ ಭೂಮಿಯಲ್ಲಿ ಹೊಸ ಬಡಾವಣೆಯೊಂದು ಎದ್ದು ನಿಂತಿತು. ತುಳುವರ ಗುತ್ತಿನ ಮನೆ ಕಾಂಕ್ರೀಟ್ ಬಂಗಲೆಗಳಾದವು. ಗುತ್ತಿನ ಮನೆಗಳ ದೇವರು, ದೈವಸ್ಥಾನಗಳಿಗೂ ಪುನರ್ವಸತಿ ಕಲ್ಪಿಸಲಾಯಿತು. ಇಡೀ 15 ಎಕರೆ ತುಂಬಾ ದೇವರಿಗೂ ದೈವಗಳಿಗೂ ಮನೆಗಳು ಎದ್ದವು. ಸಂಸ್ಕೃತಿಯ ಪ್ರತೀಕವಾದ, ಸೊಗಡಿನ ಸಂಕೇತವಾದ ಗುತ್ತು ಮತ್ತು ಅದರ ದೇವರು ಸರತಿಯಲ್ಲಿ ಪ್ರತಿಷ್ಠಾಪಿಸಲ್ಪಟ್ಟವು. ಅದುರೆದುರಿನಲ್ಲೇ ಭೂಮಿ ಕಳೆದುಕೊಂಡ ಕುಡುಬಿಗಳ ಮನೆಗಳು ನಿಂತವು. ಒಂದೆಡೆ ದೇವರನ್ನು ತಮ್ಮೊಟ್ಟಿಗೆ ಕಾಸ್ಮೋಪಾಲಿಟೀಕರಣಗೊಳಿಸಿದ ಶ್ರೀಮಂತರು. ಇನ್ನೊಂದೆಡೆ ಅನ್ನಕ್ಕಾಗಿ ಹೋರಾಟ ಮಾಡುವ ಕುಡುಬಿಗಳು! ಇದು ವಿಚಿತ್ರವಾದರೂ ಸತ್ಯ. ಇದೆಲ್ಲಾ ಬುದ್ಧಿವಂತರ ಜಿಲ್ಲೆ ಎಂದು ಕರೆದುಕೊಳ್ಳುವ, ಒಂದು ಕಾಲದಲ್ಲಿ ಹೋರಾಟಗಳ ತವರು ಮನೆಯಾಗಿದ್ದ ದಕ್ಷಿಣ ಕನ್ನಡದಲ್ಲಿ ನಡೆದಿದೆ. ಇಂದಿಗೂ ನಡೆಯುತ್ತಿದೆ. ಹೀಗೆ ದೇವರಿಗೆ ಕ್ವಾಟ್ರಸ್ ಕಟ್ಟಿಸಿ ಕುಡುಬಿಗಳನ್ನು ಬೀದಿಗೆ ತಂದು 1800 ಎಕರೆಗಳ ಮೊದಲ ಹಂತದ ಭೂಸ್ವಾಧೀನ ಕಾರ್ಯ ಮುಗಿಯಿತು. ಕಾಂಕ್ರೀಟ್ ನಾಗಬನಗಳಲ್ಲಿ ಬ್ರಹ್ಮಕಲಶಗಳು ನಡೆದವು. ಅದರೆಡೆಯಲ್ಲಿ ಉಳಿದವರು ಬೆರಳೆಣಿಕೆಯ ಕುಡುಬಿಗಳು. ಕೆಲವರು ಊರು ಬಿಟ್ಟರು. ಕೂಲಿಗೆ ಹೋದರು. ಕಳೆದ ವಾರದವರೆಗೂ ಅವರು ಕೂಲಿನಾಲಿ ಮಾಡಿಕೊಂಡು, ಇದ್ದ ತುಂಡು ನೆಲದಲ್ಲಿ ಬಸಳೆ, ಕುಂಬಳ, ತೊಂಡೆ ಬೆಳೆದುಕೊಂಡು ಬದುಕಿದ್ದರು. ಇದೀಗ ಹೊಸ ವರಸೆಯಿಂದ ಈ ಅಲ್ಪಸ್ವಲ್ಪ ನೆಮ್ಮದಿಗೂ ಸಂಚಕಾರ ಬಂದಿದೆ. ಏಕೆಂದರೆ ಈಗ ಕುಡುಬಿಗಳ ಕೈಯಲ್ಲಿ ಉಳಿದಿರುವ 4.3 ಎಕರೆ ಭೂಮಿಯಲ್ಲಿ ಮೊದಲು ನಡೆದಂತೆ ಕತ್ತಲಾದ ಅನಂತರ ಪತ್ರ ವ್ಯವಹಾರ, ಬೆದರಿಸುವಿಕೆ, ಜೆಸಿಬಿಗಳ ಸದ್ದುಗಳು ಕೇಳಿ ಬರುತ್ತಿವೆ. ರಾಯಲ್ ಕುಳಗಳಿರುವ ಬೀದಿಯ ಎದುರೇ ಕಪ್ಪುಕಪ್ಪಾದ ಕುಡುಬಿಗಳು ಅನಿಷ್ಟವಲ್ಲವೇ ಎಂಬುದು ಜೆಸಿಬಿ ಇಟ್ಟುಕೊಂಡವರ ಹುನ್ನಾರ ಇರಬಹುದು.ಕಾರಣ ಏನೇ ಇದ್ದರೂ ಆರ್ಥಿಕ ವಲಯದ ಅಧಿಕಾರಿಗಳು ಇದು ಮೊದಲನೆ ದರ್ಜೆಗಾಗಿ ನೋಟಿಫೈ ಆದ ಭೂಮಿ ಎನ್ನುತ್ತಿದ್ದಾರೆ. ಎಂದೋ ಮುಗಿದುಹೋದ ಭೂಸ್ವಾಧೀನವನ್ನು ಮತ್ತೆ ಕೆದಕುವ ಪ್ರಯತ್ನ ನಡೆದಿದೆ. ಕುಡುಬಿಗಳನ್ನು ಸಂಪೂರ್ಣ ಖಾಲಿ ಮಾಡಲು ಹುನ್ನಾರ ನಡೆಯುತ್ತಿದೆ. ಕುಡುಬಿಗಳ ರೋದನಕ್ಕೆ ಪೇಜಾವರ ಸ್ವಾಮಿಗಳ ಪ್ರವೇಶವಾಯಿತು. ಅನಂತರ `ನಾವು ರಸ್ತೆ ಕಾಮಗಾರಿ ಮಾಡುತ್ತಿದ್ದೇವೆ' ಎಂದು ಜಿಲ್ಲಾಡಳಿತ ಹೇಳಿತು. ಎಂಥಾ ವಿಪರ್ಯಾಸ. ಕಾಂಕ್ರೀಟ್ ನಾಗಬನಗಳಿಗೆ, ಕುಡುಬಿಗಳ ಬಸಳೆಗೆ ಮಣ್ಣು ಹಾಕಿ ರಾಜಮಾರ್ಗದ ನಿರ್ಮಾಣ. ಇದೆಷ್ಟು ಸರಿ? ಅನಂತರ ಕಾನೂನುಬದ್ಧವಾಗಿಯೇ ಇದನ್ನು ಮಾಡುತ್ತಿದ್ದೇವೆ ಎಂಬ ಮಾತಾಡುತ್ತಿದ್ದಾರೆ. ಏನು ಕಾನೂನುಬದ್ಧವಾಗಿದೆ ಎಂದರೆ ಇನ್ನೂ ವಿಚಿತ್ರಗಳು ತೆರೆದುಕೊಳ್ಳುತ್ತವೆ. ಕುಡುಬಿಗಳೆಂಬ ಅಕ್ಷರಜ್ಞಾನವಿಲ್ಲದವರಿಗೆ ಇಂಗ್ಲಿಷಿನಲ್ಲಿ ಪ್ರಿಂಟೌಟು ತೆಗೆದ, ಮೊಹರಿನ ಲಕೋಟೆಗಳು ರವಾನೆಯಾಗುತ್ತವೆ. ಅದನ್ನು ರೂಪಿಸುವ ವೆಲ್ಪ್ರನೌನ್ಸ್ಡ್ ಇಂಗ್ಲಿಷ್ ಬಲ್ಲವರು ಕುಡುಬಿಗಳೊಡನೆ ವ್ಯವಹರಿಸುತ್ತಿದ್ದಾರೆ. ಕನ್ನಡವೇ ಸರಿಯಾಗಿ ಬರದ ಈ ಕುಡುಬಿಗಳೊಂದಿಗೆ ಎಂ.ಎಸ್.ಇ.ಝಡ್ ವ್ಯವಹರಿಸಿದ್ದು ಹೀಗೆ. ಒಂದು ಹೆಬ್ಬೆಟ್ಟು ಒತ್ತಿಸಿಕೊಳ್ಳುವುದು ಇವರಿಂದೇನೂ ಕಷ್ಟವಲ್ಲ. ವಾಸ್ತವವಾಗಿ ಇದು ನೋಟಿಫೈ ಆದ ಭೂಮಿಯೇ ಅಲ್ಲ. ಆದರೆ ಇದೀಗ ಅದನ್ನು ಮೊದಲ ಹಂತದ ನೋಟಿಫೈ ಆದ ಭೂಮಿ ಎಂದು ಹೇಳುತ್ತಿದೆ. ಅಡಿಗಡಿಗೆ ಗೊಂದಲ, ಸಾಮಾನ್ಯರಿಗೆ , ಹೋರಾಟಗಾರರಿಗೆ ಸುಲಭವಾಗಿ ಅರ್ಥವಾಗದ ಹಾಗೆ ಕಡತಗಳನ್ನು ಸೃಷ್ಟಿಸುತ್ತಿದೆ. ಅಷ್ಟಕ್ಕೂ ರಸ್ತೆ ಮಾಡಲು 4 ಎಕರೆ ಭೂಮಿ ಏಕೆ ಎಂಬುದೇ ಅರ್ಥವಾಗುತ್ತಿಲ್ಲ. ಇಂದು ಕುಡುಬಿ ಪದವಿಗೆ ತೆರಳಿದರೆ ಎಂಥವರಿಗೂ ಪರಿಸ್ಥಿತಿಯ ಮರ್ಮವೇನು ಎಂಬುದು ಅರಿವಾಗುತ್ತದೆ. `ಬಲಾತ್ಕಾರದ ಭೂ ಸ್ವಾಧೀನತೆ ಸಲ್ಲದು' ಎಂಬ ಕೇಂದ್ರ ಮತ್ತು ರಾಜ್ಯ ಸರಕಾರಗಳ ಆದೇಶದ ಉಲ್ಲಂಘನೆ ಇಲ್ಲಿ ಸ್ಪಷ್ಟವಾಗಿ ಆಗಿದೆ. ಕುಡುಬಿಗಳ ಜಾಗವನ್ನು ಕಿತ್ತು ಪುನರ್ವಸತಿ ಕಲ್ಪಿಸುವುದಾದರೆ ಕುಡುಬಿಗಳಿಗೆ ವಸತಿಯ ಹಕ್ಕಿಲ್ಲವೇ? ಅದು ಕಾನೂನು ಬಾಹಿರವಲ್ಲವೇ? ಹಣ ನೀಡಬಹುದು. ಆದರೆ ಕೃಷಿಯೊಂದನ್ನು ಬಿಟ್ಟು ಬೇರೇನನ್ನೂ ತಿಳಿಯದ ಕುಡುಬಿಗಳು ಮಾಡುವುದೇನು? ಹೋಗುವುದೆಲ್ಲಿಗೆ? ಇಂದು ಕುಡುಬಿ ಪದವು ರಸ್ತೆಯಲ್ಲಿ ಸಾಗಿದರೆ ಬಲಗಡೆಗೆ ಕಾಣುವುದು ವಿಚಿತ್ರ ಬಡಾವಣೆ. ಎಡಗಡೆಯಲ್ಲಿ ಕುಡುಬಿಗಳ ಪುಟ್ಟ ಮನೆಗಳು. ಒಂಥರಾ ವಿಷಣ್ಣತೆಯನ್ನುಂಟು ಮಾಡುತ್ತವೆ. ಹೊಸ ಬಡಾವಣೆಯಲ್ಲಿ ಒತ್ತೊತ್ತಾಗಿ ಕಲ್ಪಿಸಿಕೊಟ್ಟ ದೇಗುಲಗಳಲ್ಲಿ ದೇವರಿರುವನೋ ಅಥವಾ ಕುಡುಬಿಗಳ ರೋದನದಲ್ಲಿರುವವನೋ ಎಂಬ ವೇದನೆಯೋ ಸಂವೇದನೆಯೋ ಏನೋ ಒಂದು ಹಾದು ಹೋಗುತ್ತದೆ. ಫ್ಯಾಂಟಸಿ ಪ್ರಪಂಚದೊಳಗೆ ಹೊಕ್ಕ ಅನುಭವವಾಗುತ್ತದೆ.
ಮಂಗಳೂರು ವಿಶೇಷ ಆರ್ಥಿಕ ವಲಯದ ಇಂಥ ಅಟಾಟೋಪಗಳು ಕೇವಲ ಕರಾವಳಿಗೆ ಸೀಮಿತ ಎಂದುಕೊಳ್ಳುವ ಹಾಗೂ ಇಲ್ಲ. ಇದರ ಯಶಸ್ಸು ಹಲವು ಕೃಷಿ ಭೂಮಿಯನ್ನು ಬಲಿತೆಗೆದುಕೊಳ್ಳಲು ಕಾಯುತ್ತಿದೆ ಮತ್ತು ಇಂದು ನಡೆಯುತ್ತಿರುವ ರಕ್ಕಸತನಗಳು ನಾವು ಕಂಡಷ್ಟೇ ಅಲ್ಲ ಕೂಡ. ಏಕೆಂದರೆ ಅದರ ಬಾಹುಗಳು ಆಳವಾಗಿಯೂ, ವಿಶಾಲವಾಗಿಯೂ ವ್ಯಾಪಿಸಿವೆ. ಅದು ಹಲವರ ಬಾಯನ್ನು ಮುಚ್ಚಿಸಿದೆ. ಕೆಲವರು ಮಾತಾಡಲು ಹೆದರುತ್ತಿದ್ದಾರೆ. ಹಲವರು ಸಾತ್ವಿಕತೆಯ ಮೊರೆ ಹೋಗಿದ್ದಾರೆ. ಇನ್ನು ಕೆಲವರು ಮುಖವಾಡ ಹೊದ್ದುಕೊಂಡಿದ್ದಾರೆ. ಕೃಷಿಯ ಉತ್ತುಂಗ, ವೈಭವದ ಬಗ್ಗೆ ಮಾತಾಡುತ್ತಲೇ ಪರಿಸ್ಥಿತಿಗೆ ಬಲಿಯಾಗಿ ಮಾರಾಟವಾಗಿ ಹೋದವರಿದ್ದಾರೆ. ಪತ್ರಿಕಾ ಪ್ರಪಂಚ, ಜಾಹೀರಾತು ಜಗತ್ತು, ಎನ್ಜಿಓಗಳು , ಉದ್ಯೋಗಗಳು ಒಬ್ಬೊಬ್ಬರಾಗಿ ಎಂ.ಎಸ್.ಇ.ಝಡ್ ನತ್ತ ವಾಲಿಕೊಳ್ಳುತ್ತಿದ್ದಾರೆ. ಅದರ ಅಮಾನುಷತೆಯನ್ನು ಹೊರಗೆಳೆಯುವ ಪತ್ರಕರ್ತರಿಗೆ ಒತ್ತಡಗಳು ಸಾಮಾನ್ಯವಾಗುತ್ತಿವೆ. ಇದೆಲ್ಲಾ ಯಾಕಾಗಿ ಆಗುತ್ತಿದೆ? ಅದೂ ಕರಾವಳಿಯಂಥ ಪ್ರದೇಶದಲ್ಲಿ? ಒಂದು ಸಮಯದಲ್ಲಿ ಇಡೀ ಪರಿಸರ ಚಳವಳಿಯ ಕೇಂದ್ರಬಿಂದುವಾಗಿದ್ದ ಕರಾವಳಿ ಕರ್ನಾಟಕದಲ್ಲಿ ಪರಿಸರಕ್ಕೇ ಮಾರಕವಾಗುವ ಯೋಜನೆಗಳಿಗೆ ಏಕೆ ಇಂದು ವಿರೋಧ ವ್ಯಕ್ತವಾಗುತ್ತಿಲ್ಲ? ಪಶ್ಚಿಮ ಘಟ್ಟವನ್ನೇ ಉಳಿಸಿ ಎಂದು ಪಾದಯಾತ್ರೆ ಮಾಡಿದವರೀಗ ಹಿಂದೆ ನಿಂತು ಬಿಟ್ಟಿದ್ದಾರೆ. ಮಂಗಳೂರಿನಲ್ಲಿ ಕೆಂಟುಕಿ ಪ್ರೈಡ್ ಚಿಕನ್ ಆರಂಭಗೊಂಡಿದೆ, ಕಂಟಕಪ್ರಾಯ ಎಂ.ಎಸ್.ಇ.ಝಡ್ ಆಟಾಟೋಪ ಹೆಚ್ಚುತ್ತಿದೆ. ಜನ ಭಯದಿಂದಲೂ ಭಕ್ತಿಯಿಂದಲೂ ಅರ್ಚಿಸುವ ಕಲ್ಲುರ್ಟಿ, ಪಂಜುರ್ಲಿ, ರಾಜನ್ ದೈವ, ಕೊಡಮಣಿತ್ತಾಯ, ಪಿಲಿಚಾಮುಂಡಿಗಳಿಗೆ ಮಾಲ್ನಂಥ ಮನೆಗಳ ನಿರ್ಮಾಣವಾಗಿವೆ. ಇದೆಲ್ಲಾ ಕರಾವಳಿಗೆ ಸಾಧುವೇ? ವಿರೋಧಿಸಲು ಕಾರಣಗಳಿಲ್ಲವೇ? ಕುಡುಬಿಗಳ ಒಕ್ಕಲೆಬ್ಬಿಸುವಿಕೆ ಮೂಲಸಂಸ್ಕೃತಿಯ ನಾಶವಲ್ಲವೇ? ರಾಷ್ಟ್ರಸಂತ ಗುರೂಜಿ ಗೋಳವಲಕರರು ಅಂದೇ ``ನಮ್ಮ ಹೋರಾಟ ಕೇವಲ ಸ್ವಾತಂತ್ರ್ಯಕ್ಕಷ್ಟೇ ಸೀಮಿತವಾಗಬಾರದು. ತಮ್ಮ ನಾಗರಿಕತೆಯ ಹೇರಿಕೆಯ ವಿರುದ್ಧ , ಸಂಸ್ಕೃತಿಯ ರಕ್ಷಣೆಗಾಗಿ ಹೋರಾಟ ಮುಂದುವರಿಯಬೇಕು ಅಂದಿದ್ದರು. ಆದರೆ ಇಪ್ಪತ್ತುನೂರಾ ಹನ್ನೊಂದಾದರೂ ಮೂಲಸಂಸ್ಕೃತಿಯ ನಾಶದ ವಿರುದ್ಧ ಸಾರ್ವತ್ರಿಕ ಹೋರಾಟಕ್ಕೆ ಇನ್ನೂ ತೀವ್ರತೆ ಜನರಲ್ಲಿ ಬರಲಿಲ್ಲ. ತಮಗೆ ಬೇಕಾದಾಗ ಡಿನೋಟಿಫೈ ಮಾಡಿಕೊಳ್ಳುವ ಆಡಳಿತ ಕುಡುಬಿಗಳಂತಹ ತಳಮಟ್ಟದ ಜನರಿಗೆ ಡಿನೋಟಿಫೈ ಮಾಡಲು ಇನ್ನೂ ಮನಸ್ಸು ಮಾಡಿಲ್ಲ. ನಾವು ಒಂದಂತೂ ನೆನಪಿನಲ್ಲಿಟ್ಟು
ಕೊಳ್ಳಬೇಕು. ಮೂಲ ಸಂಸ್ಕೃತಿಯ ಕಾಳಜಿ ಮತ್ತು ಎಂ.ಎಸ್.ಇ.ಝಡ್ ಪ್ರೇಮ ಒಟ್ಟೊಟ್ಟಿಗೇ ಇರಲು ಸಾಧ್ಯವಿಲ್ಲ.
ನಾವಿನ್ನೂ ಹಳೇ ಹಿಸ್ಟ್ರೀಯ ಗುಂಗಿನಲ್ಲೇ ಇದ್ದೇವೆ ಎಂದು ಅನಿಸುತ್ತದೆ. ವಾಸ್ಕೋಡಗಾಮ ಸಮುದ್ರಮಾರ್ಗದ ಮೂಲಕ ಭಾರತಕ್ಕೆ ಕಾಲಿರಿಸಿದ್ದು, ಜಾಮೊರಿನ್ ದೊರೆ ಆತನಿಗೆ ಭೂಮಿ ಕೊಟ್ಟಿದ್ದು, ಮೆಣಸು, ಏಲಕ್ಕಿ ಯುರೋಪಿಗೆ ರಫ್ತು ಆಗಿದ್ದು, ಅನಂತರ ಒಬ್ಬರಾದ ಮೇಲೊಬ್ಬರು ಐರೋಪ್ಯರು ಬಂದಿದ್ದು, ಈಸ್ಟ್ಇಂಡಿಯಾ ಸ್ಥಾಪನೆಯಾಗಿದ್ದು , ಬ್ರಿಟಿಷರು ಆಳಿದ್ದು, ಡೌಲ್ಹೌಸಿ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂದಿದ್ದು, ವೆಲ್ಲೆಸ್ಲಿ ಸಹಾಯಕ ಸೈನ್ಯಪದ್ಧತಿ ವಿಧಿಸಿದ್ದು, ಗಾಂಧೀಜೀ ಊಟ ಬಿಟ್ಟಿದ್ದು, ಮುಂದೆ ಎಲ್ಲಾ ಸರಿಹೋಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ವಸಾಹತು ವ್ಯವಸ್ಥೆ ಕೊನೆಗೊಂಡಿತು ಎಂದು ಪಠ್ಯದ ಕಥೆಯನ್ನೇ ನಂಬಿಕೊಂಡಿದ್ದೇವೆ. ಆದರೆ ನವ ವಸಾಹತು ವ್ಯವಸ್ಥೆ ಬಗಲಲ್ಲೇ ಕೂತಿದೆ. ಆದರೆ ಹೋರಾಡಬೇಕೆನಿಸುತ್ತಿಲ್ಲ ಏಕೆಂದರೆ ಅಲ್ಲಿ ಅಧಿವೇಶನ ನಡೆಯುತ್ತಿದೆ.
- ಸಂತೋಷ್ ತಮ್ಮಯ್ಯ
(ಲೇಖಕರು ಅಸೀಮಾ ಕನ್ನಡ ಮಾಸಿಕದ ಸಂಪಾದಕರು. ಜನಪರ ಕಾಳಜಿ ಹೊಂದಿದ ಸರಳ ವ್ಯಕ್ತಿ.)

ಮುಂದೆ ಓದಿ

ರಾಜ್ಯ -ರಾಷ್ಟ್ರ
ಈ ಕನಸು ಓದುಗರಿಗೆ 3ರ ಸಂಭ್ರಮದಲ್ಲಿರುವ ಈ ಕನಸಿನಿಂದ ಒಂದು ಶುಭ ಸುದ್ದಿ.ಯೋಗ ಮಾನವನ ಸ್ವಸ್ಥ ಜೀವನಕ್ಕೊಂದು ಸೋಪಾನ. ಈ ಯೋಗ, ಯೋಗದಿಂದಾಗುವ ಲಾಭಗಳು, ಆರೋಗ್ಯ ಭಾಗ್ಯದಲ್ಲಿ ಯೋಗದ ಪ್ರಾಮುಖ್ಯತೆಗಳ ಕುರಿತಾದ ವಿಶೇಷ ಆರೋಗ್ಯ ಅಂಕಣವೊಂದು ಈ ಕನಸಿನಲ್ಲಿ ಪ್ರಾರಂಭಗೊಳ್ಳಲಿದೆ. ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಸಚಿತ್ರ ಮಾಹಿತಿಯನ್ನು ಈ ಕನಸಿನ ಮೂಲಕ ಸಮಸ್ತ ಜನಕ್ಕೆ ತಿಳಿಯಪಡಿಸುವ ಮಹತ್ಕಾರ್ಯವನ್ನು ಮಾಡಲಿದ್ದಾರೆ. ನಿರೀಕ್ಷಿಸಿರಿ...

ಮುಂದೆ ಓದಿ
9:35 PM

ಸಂತಾಪ

Posted by ekanasu

ರಾಜ್ಯ - ರಾಷ್ಟ್ರ
ಮಂಗಳೂರು:ಭಾರತ ರತ್ನ ಪಂಡಿತ್ ಭೀಮಸೇನ್ ಜೋಷಿಯವರ ನಿಧನವು ಸಂಗೀತ ಸಾರಸ್ವತ ಲೋಕದ ಎಲ್ಲಾ ಶೋತೃಗಳಿಗೆ ಅತೀವವಾದ ದು:ಖವನ್ನುಂಟುಮಾಡಿದೆ.ವಿಶ್ವ ಮಾನ್ಯರಾದ ಪಂಡಿತ್ ಭೀಮಸೇನ ಜೋಷಿಯವರು ದಾಸ ಸಾಹಿತ್ಯದ ಅನೇಕ ಸಂಗೀತ ಪ್ರಾಕಾರಗಳನ್ನು ತನ್ನ ಅದ್ಬುತ ಕಂಠಸಿರಿಯಿಂದ ವಿಶ್ವದೆಲ್ಲೆಡೆ ಪಸರಿಸಿದ್ದಾರೆ. ಮಂಗಳೂರು ಮತ್ತು ದಿವಂಗತ ಜೋಷಿಯವರಿಗೆ ಇದ್ದ ಆತ್ಮೀಯ ನಂಟು ಇಲ್ಲಿನ ಕಲಾರಾಧಕರಿಗೆ ಸ್ಮರಣೀಯವಾಗಿದ್ದು, ತೀವ್ರ ಆಘಾತವನ್ನುಂಟುಮಾಡಿದೆ.ಇವರ ನಿಧನಕ್ಕೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೇಮಾರ್ ತೀವೃ ಸಂತಾಪ ವ್ಯಕ್ತ ಪಡಿಸಿದ್ದಾರೆ.
ಜಿಲ್ಲಾಡಳಿತ ಮತ್ತು ಸಾಹಿತ್ಯ ಪರಿಷತ್ ಸಂತಾಪ ಸಭೆ:
ಮಂಗಳೂರಿನ ಕರಾವಳಿ ಉತ್ಸವ ಸಾಂಸ್ಕೃತಿಕ ವೇದಿಕೆ ಭಾರ್ಗವ ಮಂಟಪದಲ್ಲಿ ನಾಳೆ (25-1-2011)ಸಂಜೆ 5.30 ಗಂಟೆಗೆ ದ.ಕ.ಜಿಲ್ಲಾಡಳಿತ ಮತ್ತು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಭಾರತರತ್ನ ಪಂಡಿತ್ ಭೀಮಸೇನ ಜೋಷಿ ನಿಧನದ ಶೃದ್ದಾಂಜಲಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.

ಮುಂದೆ ಓದಿ

ಗರ್ಭಿಣಿಯರಿಗೆ ಬಿಸಿ ಬೇಳೆ ಬಾತ್.. ಮಕ್ಕಳಿಗೆ ಕೇಸರಿ ಬಾತ್!

ಶ್ರೀಪತಿ ಹೆಗಡೆ ಹಕ್ಲಾಡಿ
ಉಡುಪಿ : ಅಂಗನಾಡಿ ಗಿಫ್ಟ್! ಮಕ್ಕಳಿಗೆ ಕೇರಿಬಾತ್,ಗರ್ಭಿಣಿ ಸ್ತ್ರೀಯರಿಗೆ ಬಿಸಿ ಬೇಳೆ ಬಾತ್ ರಾಜ್ಯಾದ್ಯಂತ ಜಾರಿಗೆ ಬಂದ ಹೊಸ ಆಹಾರ ಪದ್ದತಿ. ಇದು ರಾಜ್ಯ ಸರಕಾರದ ಎಫೆಕ್ಟ್! ಉಪ್ಪ್ಪಿಟ್ಟು ಅದೂ ಇದೂ ಅಂತ ಮಕ್ಕಳಿಗೆ ಆಹಾರ ನೀಡುತ್ತಿದ್ದ ಅಂಗನವಾಡಿ ಮೆನು ಬದಲಾಗಿದೆ. ವಾರದಲ್ಲಿ ವಿವಿಧ ಶುಚಿರುಚಿಯ ತಿನಿಸು ಮಕ್ಕಳಿಗೆ ಮತ್ತು ಗರ್ಭಿಣಿ ಹಾಗೂ ಬಾಣಂತಿಯರಿಗೆ ಲಭ್ಯ. ಘಮಘಮ ಕೇಸರಿಬಾತ್, ಬಿಸಿಬೇಳೆ ಬಾತ್ ಹೀಗೆ ಅಂಗನವಾಡಿ ಆಹಾರ ಪದ್ದತಿಗೆ ಬದಲಾವಣೆಯ ಚಾಲನೆ ಸಿಕ್ಕಿದೆ. ವೊಳೆಕ ಬರಿಸಿದ ಹೆಸರು ಕಾಳು, ಚಿತ್ರಾನ್ನಾ, ಮಕ್ಕಳಿಗೆ ಕಾರ್ನ್ ಪಾಪ್ ಮಧ್ಯಾಹ್ನ ಬಿಸಿಬೇಳೆ ಬಾತ್, ಕಲ್ಲರ್ ಕಲ್ಲರ್ ಕೇಸರಿ ಬಾತ್ ಹೊಸಾ ಮೆನು ವೊಟ್ಟೆ, ಹಾಲು ಬಾಳೆಹಣ್ಣು ನೀಡುತ್ತಿದ್ದ ಸರಕಾರ ಮಕ್ಕಳ ಟೇಸ್ಟ್ ಬದಲಾಯಿಸುವ ಮೂಲಕ ಸತ್ವ ಭರಿತ ಆಹಾರ ನೀಡಲು ಮುಂದಾಗಿರೋದು ಒಳ್ಳೆಯ ಬೆಳವಣಿಗೆ.



ಆರು ತಿಂಗಳಿಂದ ಮೂರು ವರ್ಷದ ವರೆಗಿನ ಮಕ್ಕಳಿಗೆ ವಾರದಲ್ಲಿ ಆರು ದಿನ ಶಕ್ತಿಯುತ ಆಹಾರ ಸೇವೆನೆಗೆ ಒತ್ತು ನೀಡಲಾಗಿದೆ.
ಇನ್ನು ಗರ್ಭಿಣಿ ಮತ್ತು ಬಾಣಂತಿಯರಿಗೆ ವಾರದಲ್ಲಿ ಎರಡು ದಿನ ಕೇಸರಿಬಾತ್, ಮತ್ತೆರಡು ದಿನ ಬಿಸಿ ಬೇಳೆ ಬಾತ್ ತಯಾರಿ ಸಮಾಗ್ರಿ ಮನೆಗೆ ರವಾನೆಯಾಗಲಿದೆ. ಮನೆಯಲ್ಲಿ ತಮ್ಮಷ್ಟದ ಹಾಗೆ ತಯಾರಿಸಿಕೊಂಡು ಮೆಲ್ಲಬಹುದು.
ಮಕ್ಕಳಿಗೆ ಕೊಡುವ ಬಿಸಿ ಬೇಳೆ ಬಾತ್ನಲ್ಲಿ ನಲವತ್ತು ಗ್ರಾಮ್ ತೂಕದಲ್ಲಿ ಇಪ್ಪತ್ಮೂರು ಗ್ರಾಮ್ ಅಕ್ಕಿ, ನಾಲ್ಕು ಗ್ರಾಮ್ ತೊಗರಿ ಬೇಳೆ, ಹದಿಮೂರು ಗ್ರಾಮ್ ಮೈಕ್ರೋನ್ಯೂಟ್ರಿಯೆಂಟ್ಸ್ ಮಸಾಲ ಇರುತ್ತದೆ. ಇಪ್ಪತ್ತೈ ಗ್ರಾಮ್ ನ್ಯೂಟ್ರಿಕಾರ್ನ್ ಪಾಪ್ ಮತ್ತಿಷ್ಟು ನ್ಯೂಟ್ರಿ ಕೇಸರಿಬಾತ್ ಮಿಕ್ಸ್ ಸೇರಿಕೊಂಡಿದೆ.
ಗಭರ್ಿಣಿ ಮತ್ತು ಇನ್ನಿತರೆ ಸ್ತ್ರೀಯರಿಗೆ ಕೊಡಲಾಗುತ್ತಿರುವ ನೂರು ಗ್ರಾಮ್ ಬಿಸಿ ಬೇಳೆ ಬಾತ್ನಲ್ಲಿ ಐವತ್ತೊಂಬತ್ತು ಗ್ರಾಮ್ ಅಕ್ಕಿ, ಹತ್ತು ಗ್ರಾಮ ತೊಗರಿ ಬೇಳೆ, ಮುವತ್ತೊಂದು ಗ್ರಾಮ್ ಮೈಕ್ರೋನ್ಯೂಟ್ರಿಯೆಂಟ್ಸ್ ಮಸಾಲಾ ಮಿಕ್ಸ್ ಇರುತ್ತದೆ. ನ್ಯೂಟ್ರಿ ಕೇಸರಿಬಾತ್ ಮಿಕ್ಸ್ ನೂರು ಗ್ರಾಮ್. ಅಂಗನವಾಡಿ ಆಹಾರ ಫಲಾನುಭವಿಗಳಿಗೆ ಬಾಯಲ್ಲಿ ನೀರು ಬಂತ ಸ್ವಲ್ಪ ತಡೆಯಿರಿ.
ಈ ವ್ಯವಸ್ಥೆ ಎಲ್ಲಾ ಅಂಗನವಾಡಿಗೂ ಸಿಕ್ಕಿಲ್ಲ. ಪ್ರಯೋಗಿಕವಾಗಿ ಪ್ರತಿ ತಾಲೂಕ್ ಐದು ಅಂಗನವಾಡಿಯಲ್ಲಿ ಈ ವಿನೂತನ ಪಟ್ಟತಿ ಜಾರಿಗೆ ಬಂದಿದೆ. ಇದರ ಸಾಧಕ ಬಾಧಕದ ನಂತರ ರಾಜ್ಯವ್ಯಾಪಿ ವಿಸ್ತಾರಗೊಳ್ಳಲಿದೆ.
ಈ ಹೊಸ ಪದ್ದತಿ ಜಾರಿಗೆ ತರಲು ರಾಜ್ಯ ಅಂಗನವಾಡಿ ಕೇಂದ್ರಗಳ ಮೂಲಕ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮೂಲಕ ವಿತರಿಸುವ ಆಹಾರವನ್ನು ಬದಲಾಯಿಸುವ ಕುರಿತು ಬೆಂಗಳೂರಿನಲ್ಲಿ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ಬದಲಾವಣೆಗೆ ಬರಲಾಗಿದೆ. ಆಹಾರ ಪದ್ದತಿಯ ಮೆನು ಬದಲಾಗಿ ಅದರ ಪ್ರಯೋಜನ ಕೆಲ ಅಂಗನವಾಡಿ ಕೇಂದ್ರಗಳಿಗೆ ಸಿಕ್ಕಿದೆ. ಮಕ್ಕಳು ಖಷ್ ಮಕ್ಕಳ ತಾಯಿ ಮತ್ತು ಗರ್ಭಿಣಿಯರೂ ಸಕತ್ ಖಷೀ
ಮಕ್ಕಳು ಮತ್ತು ಗರ್ಭಿಣಿಯರಿಗೆ ಹಾಗೂ ಬಾಣಂತಿಯರ ಹೊಸ ಆಹಾರ ಪಟ್ಟತಿ ಹೊಟ್ಟೆಗೆ ಒಗ್ಗುತ್ತಾ, ಟೇಸ್ಟಿದೆಯಾ ಎನ್ನೋಬಗ್ಗೆ ಅಂಗನವಾಡಿ ಮೇಲ್ವಿಚಾರಕಿಯರು ವಿಚಾರಿಸಬೇಕಾಗುತ್ತದೆ. ಮೇಲ್ವಿಚಾರಕಿಯರು ಕಲೆ ಹಾಕಿದ ಮಾಹಿತಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಕಳುಹಿಸಬೇಕು. ಇಲ್ಲಿ ಕಲೆ ಹಾಕಲಾದ ಮಾಹಿತಿ ಆಧಾರದಲ್ಲಿ ಸಾಧಕ ಬಾಧಕ ಚಚರ್ಿಸಿ ಈ ಯೋಜನೆ ರಾಜ್ಯದ್ಯಂತ ಜಾರಿಗೆ ತರಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು. ಬಿಸಿ ಬೇಳೆ ಬಾತ್, ಕೇಸರಿಬಾತ್ ಎಲ್ಲರಿಗೂ ಸಿಗಲಿ ಅನ್ನೋದು ಎಲ್ಲರ ಆಶಯ.
ಮೆನೂ ಹೋಗಿದೆ :
ವಾರ ಬೆಳಿಗ್ಗೆ ಮಧ್ಯಾಹ್ನ
ಸೋಮವಾರ ಶಕ್ತಿಯುತ ಆಹಾರ ಬಿಸಿ ಬೇಳೆ ಬಾತ್
ಮಂಗಳವಾರ ಕಾರ್ನ್ ಪಾಪ್ ಕೇಸರಿಬಾತ್
ಬುಧವಾರ ಶಕ್ತಿಯುತ ಆಹಾರ ಬಿಸಿ ಬೇಳೆ ಬಾತ್
ಗುರುವಾರ ಕಾನರ್್ಪಾಪ್ ಕೇಸರಿಬಾತ್
ಶುಕ್ರವಾರ ಶಕ್ತಿಯುತ ಆಹಾರ ಬಿಸಿ ಬೇಳೆ ಬಾತ್
ಶನಿವಾರ ಕಾರ್ನ್ ಪಾಪ್ ಕೇಸರಿಬಾತ್

ಮುಂದೆ ಓದಿ

ರಾಜ್ಯ - ರಾಷ್ಟ್ರ
ಹಾಯ್ ಹರೀಶಣ್ಣ... ಬಹು ತಡವಾಗಿ ಬರೆಯುತ್ತಿರುವೆ. ಇದರ ಜತೆಗೆ ಒಂದು ಹೊಸ ಕತೆ ಇಟ್ಟಿದ್ದೇನೆ. ನೋಡಿ. ಓಕೆ ಆದರೆ ಪ್ರಕಟಿಸಿ.
ಸಂಕಲ್ಪ ಶಕ್ತಿಯಿದ್ದರೆ ಅಪೂರ್ವವಾದುದನ್ನು ಸಾಧ್ಯವಾಗಿಸಬಹುದು ಎಂಬುದಕ್ಕೆ ನಿಮ್ಮ ಈ ಕನಸು ಸಾಕ್ಷಿಯಾಗಿದೆ. ಕನಸಿನಲ್ಲಿ ಪ್ರಕಟಗೊಳ್ಳುವ ವೈವಿಧ್ಯಮಯ ಗುಣಮಟ್ಟದ ಬರಹಗಳು, ಭಾವನೆಗಳನ್ನು ಉದ್ದೀಪಿಸುವ ಆದ್ರ ಬರವಣಿಗೆಗಳು, ದೇಶ ವಿದೇಶಗಳ ಜತೆಗೆ ಪ್ರಾದೇಶಿಕ ಸುದ್ದಿಗಳು ಇಷ್ಟವಾಗುತ್ತೆ. ಹೊಸ ಯುವ ಬರಹಗಾರರು ಹೆಚ್ಚು ಉತ್ಸಾಹದಿಂದ ಬರೆಯುತ್ತಿರುವುದು ನಿಮ್ಮ ಸಾಧನೆಯೂ ಹೌದು. ಭವಿಷ್ಯದ ಬಗೆಗೆ ಆಶಾದಾಯಕ ಬೆಳವಣಿಗೆಯೂ ಹೌದು. ಕನಸಿಗೆ ಸದಾ ಶುಭಾಶಯದ ಪ್ರೀತಿ ಇದ್ದೇ ಇದೆ.
* ಧನಂಜಯ ಕುಂಬ್ಳೆ

ಮುಂದೆ ಓದಿ

ದೃಶ್ಯ ಮಾಧ್ಯಮದ ನೆನಪಿನ ಸವಾರಿ...
ಹತ್ತನೆ ಕಂತು
ಗುಂಡನ ಮದುವೆ
ಉಂಡಾಡಿ ಗುಂಡ; ಮನೆ ಮನೆಗೆ ಹೋದ
ಹತ್ತು ಲಾಡು ತಿಂದ; ಹೊಟ್ಟೆ ನೋವೆಂದ
ಅಮ್ಮ ಬೆಣ್ಣೆಕೊಟ್ಟಳು; ಇನ್ನಿಷ್ಟೆಂದ
ಅಪ್ಪ ದೊಣ್ಣೆ ತಂದನು
ಕೈ ಕಟ್ಟ್ ಬಾಯ್ಮುಚ್ಚ್



ಈ ಶಿಶು ಗೀತೆಯನ್ನು ನಾವು ಸಣ್ಣವರಿದ್ದಾಗ ನಮ್ಮ ಲೆಕ್ಕದ ಮೇಷ್ಟ್ರು ಯಾವಾಗಲೂ ಹೇಳಿ ನಗಿಸೋರು. ಹೀಗೆ ಗುಂಡನ ಬಗ್ಗೆ ಅದೆಷ್ಟೋ ಕಟ್ಟು ಕಥೆಗಳು, ಅವನ ಮುಗ್ಧತೆಯ ಘಟನೆಗಳನ್ನು ಆವಾಗಾವಾಗ ನಾವು ಕೇಳುತ್ತಿದ್ದೆವು. ಯಾರೀತ ಗುಂಡ? ಅವನು ನಮ್ಮ ಹಾಗೆ ಮನುಷ್ಯನೆ? ಮನುಷ್ಯನಾಗಿದ್ದರೆ ಅವನು ಸಣ್ಣ ಹುಡುಗನೆ? ಮುಗ್ಧನೆ? ಬುದ್ಧಿಯಿಲ್ಲದವನೆ? ಹೀಗೆ ನಮಗೆಲ್ಲ ಗುಂಡನ ಬಗ್ಗೆ ಕುತೂಹಲ.

ಸಾಮಾನ್ಯವಾಗಿ ದೇಹ ತೂಕ ದಪ್ಪವಾಗಿದ್ದವರೆ, ನೋಡಲು ಮುದ್ದಾಗಿದ್ದರೆ ನಾವು ಅಂತಹವರನ್ನು ಗುಂಡ ಅಂತ ಕರೆಯುವುದು ವಾಡಿಕೆ. ಇದು ಕೆಲವರಿಗೆ ಇಷ್ಟವಿರುವುದಿಲ್ಲ. ಅವರು ಮುನಿಸಿಕೊಂಡೋ ಇಲ್ಲ ಕೋಪಗೊಂಡೋ ಮಾತು ಕೂಡ ಬಿಡುತ್ತಾರೆ. ಆದರೆ ಗುಂಡು ಗುಂಡಗೆ ಮುದ್ದು ಮುದ್ದಾಗಿದ್ದರೆ ನಾವು ಗುಂಡ ಅಂತ ಪ್ರೀತಿಯಿಂದ ಕರೆಯುತ್ತೇವೆ. ಅದು ಅವರಿಗೆ ಇಷ್ಟವಾಗಲಿ ಅಥವಾ ಬಿಡಲಿ.

ನಾನು ಸಣ್ಣವನಿದ್ದಾಗ ಒಬ್ಬ ಹುಡುಗ ನನ್ನ ವಯಸ್ಸಿಗಿಂತ ಸ್ವಲ್ಪ ಸಣ್ಣವನಿರಬಹುದು. ಅವನು ನೋಡಲು ಗುಂಡು ಗುಂಡಾದ ಹುಡುಗನಾಗಿದ್ದ. ಅವನನ್ನು ಮನೆಯವರು ಪ್ರೀತಿಯಿಂದ ಗುಂಡ ಅಂತ ಕರೆಯುತ್ತಿದ್ದರು. ನಾವೂ ಕೂಡ ಹಾಗೆ ಕರೆಯುತ್ತಿದ್ದೆವು. ಅವನಿಗೆ ಐದು ಜನ ಅಕ್ಕಂದಿರು. ಹುಡುಗ ಕೊನೆಯವನಾಗಿದ್ದರಿಂದ ಅವನ ತಂದೆಗೆ ಅವನ ಮೇಲೆ ಪ್ರೀತಿ ಜಾಸ್ತಿ. ಅವನು ಪೇಟೆಗೆ ಹೋದರೆ ಅವನಿಗೇನಾದರೂ ತಿಂಡಿ ತಂದು ಕೊಡೋರು. ಅವನ ಅಕ್ಕಂದಿರು ಅವನಿಗೆ ತರುವ ತಿಂಡಿಯನ್ನು ನೋಡಿ ಮೆಲ್ಲಗೆ ಅವನ ಹತ್ತಿರ ಬಂದು ಅವನ ಮುದ್ದು ಕೆನ್ನೆಗಳನ್ನು ಹಿಂಡಿ, ತಿಂಡಿಯನ್ನು ಉಪಾಯದಿಂದ ತೆಗೆದುಕೊಳ್ಳುತ್ತಿದ್ದರು.

ಒಮ್ಮೆ ಅವನ ತಂದೆ ಹೊಟೇಲ್ನಿಂದ ಕಡ್ಲೆ ಮತ್ತು ಅವಲಕ್ಕಿಯನ್ನು ತಂದು ಅವನ ಕೈಗಿತ್ತರು. ಅವನು ಅದನ್ನು ತೆಗೆದುಕೊಂಡು ಒಂದು ಕಡೆ ಮೂಲೆಗೆ ಕುಳಿತು ತಿನ್ನುವುದಕ್ಕೆ ಶುರು ಮಾಡಿದ. ಆ ಸಮಯಕ್ಕೆ ಸರಿಯಾಗಿ ಕರೆಂಟ್ ಹೋಯಿತು. ಅವನ ಅಕ್ಕಂದಿರಲ್ಲೊಬ್ಬಳು ಮೆಲ್ಲನೆ ಅವನ ಹತ್ತಿರ ಹೋಗಿ ಅವನ ಕೈಯಲ್ಲಿದ್ದ ತಿಂಡಿಯ ಪೊಟ್ಟಣವನ್ನು ತೆಗೆದುಕೊಂಡು ಒಂದಷ್ಟು ಕಡಲೆ ಕಾಳುಗಳನ್ನು ಬಾಯಿಗೆ ಹಾಕೊಂಡಿದ್ದಳಷ್ಟೆ ದೊಡ್ಡ ಕೂಗು ಕೇಳಿತು. ಅಷ್ಟರಲ್ಲಿ ಗುಂಡನ ಅಮ್ಮ ಚಿಮಣಿ ದೀಪ ತಂದು ನೋಡಿದರೆ ಕತ್ತಲೆಯಲ್ಲಿ ತಿಂಡಿಯ ಪೊಟ್ಟಣಕ್ಕೆ ಕೈ ಹಾಕಿ ಕಡಲೆ ತೆಗೆದ ಅವನ ಅಕ್ಕನ ಕೈಯನ್ನು ಗುಂಡ ಸರಿಯಾಗಿ ಕಚ್ಚಿದ್ದ. ಅವಳು ನೋವು ತಡೆಯಲಾರದೆ ಕಿರುಚಿದ್ದಳು.

ಇಂತಹ ಗುಂಡಂದಿರ ಅದೆಷ್ಟೋ ಕಥೆಗಳು ನಮಗೆ ಸಿಗುತ್ತವೆ. ಆದರೆ ಇಲ್ಲಿರುವ ಗುಂಡ, ಹೆಚ್ಚಿನ ಸಿನಿಮಾಗಳಲ್ಲಿ ತಮ್ಮ ವಿಚಿತ್ರ ಅಭಿನಯದಿಂದ ನಕ್ಕು ನಗಿಸುವ ನವರಸನಾಯಕ ಜಗ್ಗೇಶ್. ಅವರು ಅಭಿನಯಿಸಿದ ಚಿತ್ರ `ಗುಂಡನ ಮದುವೆ' ನಮ್ಮೂರಿನ ಸುತ್ತಮುತ್ತೆಲ್ಲ ಚಿತ್ರೀಕರಣವಾಗಿತ್ತು.

ಕನ್ನಡ ನಾಡಿನ ಸುಂದರ ಹಸಿರನು ಎಂದಿಗೂ ಬೆಳೆಸುವ ನಾವು
ಶ್ರೀಗಂಧದ ನಾಡಿನ ಹೆಮ್ಮೆಯ ಹೆಸರನು ಎಂದಿಗೂ ಉಳಿಸುವ ನಾವು.

ಹಾಡಿನ ದೃಶ್ಯಗಳಲ್ಲಿ ಬರುವ ಮುಂದಿನ ಸಾಲುಗಳು `ಧಾನ್ಯ ಲಕ್ಷ್ಮೀಯ ಗಿಡಗಳ ಬೆಳೆದರೆ ಅನ್ನದ ಕೊರತೆಯು ಇಲ್ಲ'. ಚರಣದಲ್ಲಿ ಸುಂದರವಾದ ಹಸಿರು ಭತ್ತದ ಪೈರಿನ ದೃಶ್ಯಗಳು ಕಾಣಿಸುತ್ತವೆ. ಅವೆಲ್ಲಾ ಕುರ್ಕಾಲು ಗ್ರಾಮದ ಕುಂಜಾರುಗಿರಿಯ ಬಳಿ ಚಿತ್ರೀಕರಿಸಿದ ದೃಶ್ಯಗಳು.

ಈ ಚಿತ್ರದಲ್ಲಿ ಗುಂಡನಿಗೊಂದು ಮದುವೆ ಮಾಡಬೇಕೆನ್ನುವ ಉದ್ದೇಶ ಅವನ ತಂದೆ ತಾಯಿಗಳಿಗೆ. ಆದರೆ ಅವನು ಸಸಿಗಳನ್ನು ಮಾರಾಟಮಾಡುತ್ತಾ ಹಸಿರೇ ಉಸಿರು ಅನ್ನುವ ಅಲೆಮಾರಿ. ಹೇಗೂ ಅವನಿಗೆ ನಾಯಕಿ ರಾಗಿಣಿಯ ಪರಿಚಯವಾಗುತ್ತದೆ. ಅವಳ ಮೇಲೆ ಪ್ರೇಮಾಂಕುರವಾಗಿ ಅವಳನ್ನು ಮದುವೆಯಾಗುವ ನಿರ್ಧಾರಕ್ಕೆ ಬರುತ್ತಾನೆ. ಹೀಗೆ ಕಥೆ ಮುಂದುವರಿಯುತ್ತಾ ಗುಂಡ ಪ್ರೇಕ್ಷಕನನ್ನು ನಗೆಗಡಲಿಗೆ ತಳ್ಳುತ್ತಾನೆ. ಈ ಚಿತ್ರ ಜಗ್ಗೇಶ್ ಅವರಿಗೆ ಹೆಸರು ಕೂಡ ತಂದುಕೊಟ್ಟಿತ್ತು. ಮಸಾಲೆ ಚಿತ್ರಗಳ ಸಾಲಿಗೆ ಸೇರುವ ಚಿತ್ರವಾದರೂ ಕೊಂಚ ಗಂಭೀರ ಚಿತ್ರಗಳಿಂದ ವಿಭಿನ್ನವಾಗಿರುವ ಸಿನಿಮಾವಾಗಿರುವುದರಿಂದ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಎರಡು ಮಾತಿಲ್ಲ.

ದಕ್ಷಿಣಕನ್ನಡದ ಮತ್ತು ಉಡುಪಿಯ ಸುತ್ತಮುತ್ತ ಗದ್ದೆ ನಾಟಿ ಮಾಡಿದರೆ ಮುಗಿಯಿತು. ಮಳೆಯ ಮೇಳಕ್ಕೆ ನಾಟಿ ಮಾಡಿದ ಭತ್ತದ ಪೈರುಗಳು ಸೊಫಾಗಿ ಬೆಳೆದು ಹಸಿರು ಹೊನ್ನು ಭೂಮಿಯಲ್ಲಿ ನಳನಳಿಸುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಅಂತಹ ಹಸಿರು ಸಮೃದ್ಧಿಯ ನೋಟ ಗುಂಡನ ಮದುವೆ ಚಿತ್ರದುದ್ದಕ್ಕೂ ಕಾಣಸಿಗುತ್ತದೆ.

ಉಡುಪಿಯ ಸುತ್ತ ಮುತ್ತ ಚಿತ್ರೀಕರಣವಾದ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನವರಸ ನಾಯಕ ಜಗ್ಗೇಶ್, ರಾಗಿಣಿ, ವಿನಯಾಪ್ರಸಾದ್, ಮುಖ್ಯಮಂತ್ರಿ ಚಂದ್ರು, ಕುಣಿಗಲ್, ಲೋಕೇಶ್ ಅಭಿನಯಿಸಿದ್ದಾರೆ. ಈ ಚಿತ್ರದ ಸಂಗೀತ ವಿ ಮನೋಹರ್ ಅವರದ್ದು.
- ಅನು ಬೆಳ್ಳೆ.

ಮುಂದೆ ಓದಿ
7:23 PM

ಪುಸ್ತಕ ಬಿಡುಗಡೆ

Posted by ekanasu

ಪ್ರಾದೇಶಿಕ ಸುದ್ದಿ
ಹಾಸನ: ಕೃಷಿ ಮಾಧ್ಯಮ ಕೇಂದ್ರದ ಹೊಸ ಪುಸ್ತಕ 'ಸುಸ್ಥಿರ ಕೃಷಿ-ಸ್ವಾವಲಂಬಿ ಬದುಕು: ಕರೇಗೌಡ ದಂಪತಿಯ ಸೂತ್ರ' ಹಾಸನ ಸಮೀಪದ ಪುಣ್ಯಭೂಮಿ ಸಂಸ್ಥೆಯಲ್ಲಿ ಆಯೋಜಿಸಲಾಗಿರುವ 'ಜೈವಿಕ ಮೇಳ'ದಲ್ಲಿ (ಜನವರಿ 30 ಹಾಗೂ 31ರಂದು) ಬಿಡುಗಡೆಯಾಗಲಿದೆ. ಕಾಮ್ ಫೆಲೋ ಪೂರ್ಣಿಮಾ ತೀರ್ಥಮಲ್ಲೇಶ್ ಅವರು ಬರೆದಿರುವ ಈ ಪುಸ್ತಕ ಸಕಲೇಶಪುರ ತಾಲೂಕಿನ ಕೊಂತನಮನೆಯ ಕರೇಗೌಡ-ಯಶೋದ ದಂಪತಿಯ ಪರಿಸರಸ್ನೇಹಿ ಒಕ್ಕಲುತನದ ಮೇಲೆ ಬೆಳಕುಚೆಲ್ಲುತ್ತದೆ. ಕಳೆದ ಒಂದೂವರೆ ದಶಕದಿಂದ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಪರಿಸರಸ್ನೇಹಿ ಒಕ್ಕಲುತನ ಮಾಡುತ್ತಿರುವ ಈ ದಂಪತಿ ಸುಸ್ಥಿರ ಕೃಷಿ-ಸ್ವಾವಲಂಬಿ ಬದುಕನ್ನು ತಮ್ಮದೇ ರೀತಿಯಲ್ಲಿ ರೂಪಿಸಿಕೊಂಡವರು. ಆಹಾರ ಭದ್ರತೆಗೆ ಭತ್ತ-ತರಕಾರಿಗಳು, ಆರ್ಥಿಕ ಮುನ್ನಡೆಗೆ ಕಾಫಿ-ಏಲಕ್ಕಿ ವಾಣಿಜ್ಯ ಬೆಳೆಗಳು, ಇವುಗಳ ನಡುವೆ ಸ್ವಂತ ದುಡಿಮೆ ಇವರ ವ್ಯವಸಾಯ
ಬದುಕನ್ನು ನೆಮ್ಮದಿಯ ಹಾದಿಯಲ್ಲಿ ಮುನ್ನಡೆಸುತ್ತಿವೆ. ಇದು ರಾಸಾಯನಿಕರಹಿತ ಕೃಷಿಕ್ಷೇತ್ರದಲ್ಲಿನ ಮೌನಸಾಧಕರ ಅನುಭವಗಳಿಗೆ ಕನ್ನಡಿ ಹಿಡಿಯುವ ಕೇಂದ್ರದ ಪ್ರಯತ್ನದಲ್ಲಿ ಐದನೇ ಪುಸ್ತಕ.
ವರದಿ: ಅನಿತಾ ಪೈಲೂರು.

ಮುಂದೆ ಓದಿ

ವೈವಿಧ್ಯ
ನಾಲಗೆ ಜೊತೆ ಹಸುವಿನ ಆಟ ನೋಡೋರಿಗೆ ಖಷಿಯೂಟ!
ಶ್ರೀಪತಿ ಹೆಗಡೆ ಹಕ್ಲಾಡಿ
ಉಡುಪಿ : ಹಸುವಿಗೆ ಯಾರೇನು ಜಾದು ಕಲಿಸಿದ್ದಲ್ಲ! ಆದರೂ ಜರ್ಸಿ ಕ್ರಾಸ್ ಹಸು ಜಾದು ಮಾಡುತ್ತದೆ. ಬಾಯಿಂದ ಮಾರುದ್ದ ನಾಲಗೆ ಹೊರಹಾಕುತ್ತದೆ. ಹಾಕಿದಷ್ಟೇ ವೇಗವಾಗಿ ಸರಕ್ ಅಂತ ಮತ್ತೆ ಬಾಯೊಳಗೆ ಎಳೆದುಕೊಳ್ಳುತ್ತೆ.



ಹಸುವಿಗೆ ಬೇಜಾರು ಅನ್ನೋದಿಲ್ಲ. ಮಂಡೆ ಮೇಲಕ್ಕೆತ್ತಿ ಆಕಾಶಕ್ಕೆ ಮುಖಮಾಡಿ ಮೇಲ್ದವಡೆಗೆ ಒಂದು ಸಲ ಪಠಾರ್ ಅಂತ ಬಡಿದುಕೊಂಡು, ಸಟ್ ಅಂತ ಒಳಕ್ಕೆ ಎಳದೆಕೊಳ್ಳುತ್ತದೆ. ಮತ್ತೆ ನಾಲಗೆ ಹೊರಹಾಕಿ ಕೆಳದವಡೆಗೊಂದು ಪಟಾರ್ ಆಂತ ಬಾರಿಸಿಕೊಂಡು ಹಾವು ಹುತ್ತ ಸೇರಿದ ಹಾಗೆ ಬಾಯೊಳಗೆ ನಾಲಿಗೆ ಎಳೆದುಕೊಳ್ಳುತ್ತೆ. ಒಳಗೆಳದ ನಾಲಗೆ ಪುನಃ ಹೊರತಂದು ಮೂಗಿನ ಹೊಳ್ಳೆಯೊಳಗೆ ತೂರಿಸಿ ತಲೆ ಆಡಿಸುವ ಪರಿಗೆ ಮಾರುಹೋಗದವರಾರು? ಹಸುವಿನ ಈ ಹುಚ್ಚಾಟಕ್ಕೆ ನಾಲಿಗೆ ಮಾರುದ್ದವಾಗಿದೆ. ಹಸು ಸುಮಾರು ಒಂದೂವರೆ ಅಡಿಯಷ್ಟು ನಾಲಗೆ ಹೊರಕ್ಕೆ ತರುತ್ತದೆ.

ಮಾಮೂಲಿ ಹಸುಗಳ ನಾಲಗೆ ಮೂಗಿನ ಹೊಳ್ಳೆ ಸಾಪ್ ಮಾಡೋಕೆ ಮತ್ತು ಬಾಯಿ ಒರಸಿಕೊಳ್ಳೊವಷ್ಟಕ್ಕೆ ಸೀಮಿತವಾಗಿರುತ್ತದೆ. ಒಮ್ಮೆಮ್ಮೆ ಕುತ್ತಿಗೆ ಮಡಿಚಿ ಮೈಕೆರದುಕೊಳ್ಳೋಕು ಅಸು ನಾಲಗೆ ಬಳಸೋದು ಉಂಟು. ಆದರೂ ಈ ಪಾಟಿ ನಾಲಗೆ ಉದ್ದಕ್ಕೆ ತರೋದಿಲ್ಲ.
ಕೆಚ್ಚಲಿಗೆ ಬಾಯಿ ಹಾಕಿ ಹಾಲು ಸೀಬುವ ಕರುವನ್ನು ಮುದ್ದು ಮಾಡೋಕೆ ಹಸು ನಾಲಗೆ ಬಳಸುತ್ತದೆ. ಬೇರೆ ಹಸುಗಳನ್ನು ಪ್ರೀಸಿಸೋ ಬಾಷೆ ಹಸುವಿಗೆ ನಾಲಗೆ. ಸಾಕಿದ ದಣಿ ಕೆನ್ನಸವರಲೂ ಹಸು ನಾಲಗೆ ಚಾಚುತ್ತದೆ. ಆದರೆ ನಾಲಗೆ ಜೊತೆ ಅಸು ಆಟವಾಡಿದ ಬಗ್ಗೆ ಎಲ್ಲೂ ಉಲ್ಲೇಖವಿಲ್ಲ. ಲಿಮ್ಕಾ ರೆಕಾರ್ಡ್ ಗೆ ಅವಕಾಶವಿದೆಯಾ ಗೊತ್ತಿಲ್ಲ.

ಇದು ಕೆಂಪಿ ಹಸುವಿನ ಸ್ಟೋರಿ : ಬೈಂದೂರು ಪಡುಕೋಣೆ ಭಟ್ರತೋಟ ಅಸೋಡರ್ಮನೆ ಹಸುವಿನ ತವರು. ಕುಂದಾಪುರ ತಾಲೂಕ್ ಕಚೇರಿಯಲ್ಲಿ ಕೆಲಸದಲ್ಲಿರುವ ಎ. ಮಂಜುನಾಥ ಹೆಬ್ಬಾರ್ ಹಸುವಿನ `ಮಾಲಿಕರು' ಮನೆಯೊಡತಿ ಪದ್ಮಿನಿ ಹೆಬ್ಬಾರ್ ಅವರಿಗೆ ಹಸು ಮುದ್ದಿನಿ `ಕೆಂಪಿ' ಮಗ ರಾಘವೆಂದ್ರ ಹೆಬ್ಬಾರ್ ಮತ್ತು ಸೊಸೆ ಮನಸ್ಸಿ ಆರ್. ಹೆಬ್ಬಾರ್ ಅವರಿಗೆ ಕೆಂಪಿ ಅಚ್ಚುಮೆಚ್ಚಿನ ಗೆಳತಿ. ಇವರ ಕುಂಟುಂಬಕ್ಕೆ ಕಂಪಿಯದ್ದೇ ಹಾಲು. ಕಂಪಿ ಸಾಧೂ ಅಂದ್ರೆ ಸಾಧು.
ಕೆಂಪಿ ಹಸು ಮೂರು ಮಕ್ಕಳ ತಾಯಿ. ಮತ್ತೊಂದಕ್ಕೆ ಜನ್ಮ ನೀಡಲು ಕೆಂಪಿ ತಯಾರು ನಡೆಸುತ್ತಿದ್ದಾಳೆ. ಸುಮಾರ್ ಏಳು ವರ್ಷದ ಕೆಂಪಿ ಹಸುವನಿಹೊಟ್ಟೆಯಡಿ ಮಂಜುನಾಥ್ ಹೆಬ್ಬಾರ್ ವೊಮ್ಮಕ್ಕಳಾದ ಶ್ರೀರಾಮ್ ಶ್ರೀಕಲಾ ತೂರಿ ಹೊರ ಬರುತ್ತಾರೆ. ಕೆಂಪಿ ಕುಯ್ಕ್ ಪಯ್ಕ್ ಅನ್ನೋದಿಲ್ಲ. ಕಾಲೆತ್ತು ರಝಾಡಿಸೋದು ಇಲ್ಲಾ. ಯಾರೂ ಚೆಂಬು ಹಿಡಿದು ಹಾಲಿಂಡಲೂ ಕೆಂಪಿ ತಕರಾರು ಮಾಡೋದಿಲ್ಲ. ಮುಂದೆ ಬಂದರೆ ಹಾಯಿದ ಹಿಂದೆ ಬಂದರೆ ಒದೆಯದ ಪುಣ್ಯಕೋಟಿ ಕೆಂಪಿ.
ಮಂಜುನಾಥ ಹೆಬ್ಬಾರ್ ಅವರ ಮನೆಗೆ ಬರೋರಿಗೆ ಹಸು ಚೋದಿಗದ ಸಂಗತಿ. ಹಸು ನಾಲಿಗೆ ಜೊತೆ ಆಟಾ ಆಡೋದು ಗೊತ್ತಿಲ್ಲದವರೂ ಅಯ್ಯೊ ಅಸುವಿಗೆ ಹಸಿವೆ ಆಯ್ತೇ ಹುಲ್ಲು ಹಾಕೀನಿ ಅಂತ ಆರ್ಡರ್ ಮಾಡುತ್ತಾರೆ. ಇನ್ನು ಕೆಲವರು ಹಲ್ಲು ಹಾಕಲು ಮುಂದಾಗಿದ್ದು ಇದೆ. ಅತಿಥಿಗಳ ಕಂಗಾಲು ಕಂಡು ಮನೆಯವರು ಮುಸಿಮುಸಿ ನಕ್ಕಿದ್ದೂ ಇದೆ. ಅಲ್ಲಾ ಮಾರಾಯ್ರೆ ಹಸು ಹೊಟ್ಟೆಗಾಗಿ ನಾಲಗೆ ಹರ ಹಾಕ್ತಿಲ್ಲೆ. ಅದಕ್ಕೆ ನಾಲಿಗೆ ಜೊತೆ ಆಟ ಆಡೋದು ಚಟವೇ ಅಂತ ಮನೆಯವರು ಸಮಜಾಯಸಿ ನೀಡುತ್ತಾರೆ. ಆದರೆ ಹಸುವಿನ ನಾಲಗೆ ಹೊರಚಾಚೋ ಬಗೆಯಿದೆಯಲ್ಲಾ ಅದು ಕೌತುಕ. ಯಾಕೆ ಹಸುವಿಗೆ ನಾಲಿಗೆ ಹೊರಹಾಕೋ ಚಟ ಅಂಟಿಕೊಂಡಿತೋ ಭಗವಂತನೇ ಬಲ್ಲ.
ಹಸು ನಿಂತಾಗ ಮಾತ್ರ ಕ್ಷಣಕ್ಕೊಂದು ಸಲದಂತೆ ನಾಲಿಗೆ ಒಳಕ್ಕೆ ಹೊರಕ್ಕೆ, ಮೇಲೆ ಕೆಳಗೆ ಮೂಗಿನೊಳಕ್ಕೆ ಹಾಗೆ ಬಾಯಿ ಸುತ್ತಾ ಗಿರಗರನ ಗಿರಕಿ ಹೊಡಿಸುತ್ತದೆ. ಈ ಪ್ರಕ್ರಿಯೆ ಸ್ಲೋ ಮೋಷನ್ನಲ್ಲಿ ನಡೆಯೋದಿಲ್ಲ. ಸೂಪರ್ ಫಾಸ್ಟ್! ಹಾಗಂತ ಹಸು ಮಲಿಗಿಕೊಂಡರೆ ನಾಲಿಗೆ ಸರ್ಕಸ್ ಬಂದ್!
ವೈದ್ಯರು ಏನು ಹೇಳುತ್ತಾರೆ ಕೇಳಿ : ನಾಲಿಗೆ ಒಟ್ಟಿಗೆ ಆಟ ಆಡುವ ಹಸುವಿನ ಬಗ್ಗೆ ಪಶುವೈದ್ಯರು ಕೊಡೋ ಕಾರಣ ಬೇರೆ. ಸ್ಥಳೀಯ ಪಶುವೈದ್ಯ ಪ್ರಕಾರ ಈ ರೀತಿ ಹುಚ್ಚಾಟದ ಹಸುವನ್ನು ಕಂಡಿದ್ದೆ ಇಲ್ಲ ಎನ್ನುತ್ತಾರೆ. ಹಾಗೆ ಕೆಂಪಿ ಹಸುವಿನ ನಾಲಗೆ ಕೂಡಾ ಮಾಮೂಲಿ ಹಸುವಿನ ನಾಲಗೆಯ ದುಪ್ಪಟ್ಟು ಉದ್ದವಿದೆ ಎನ್ನುತ್ತಾರೆ.
ಹಸು ತಿಂದ ಅಹಾರವನ್ನು ಜೀರ್ಣಸಿಕೊಳ್ಳಲು ಮೆಲಕು ಹಾಕುತ್ತವೆ. ಆದರೆ ಅವು ಗಪ್ಚುಪ್ಪ ಆಗಿ ನಡೆಯುತ್ತದೆ. ಆದರೆ ಕೆಂಪಿ ಹಸು ನಾಲಗೆ ಹೊರಹಾಕುವ ಮೂಲಕ ಮೆಲಕು ಹಾಕುತ್ತದೆ. ನಿರಂತರ ನಾಲಗೆ ಹೊರಕ್ಕೆ ಎಳೆದುಕೊಳ್ಳೊದ್ರಿಂದ ನಾಲಗೆ ಕೂಡಾ ಉದ್ದವಾಗಿದೆ. ಇದರಿಂದ ಹಸುವಿಗೆ ಏನೂ ತೊಂದರೆಯಿಲ್ಲ.
ಆರೋಗ್ಯ ದೃಷ್ಟಿಯಲ್ಲಿ ಕೆಂಪಿ ಹಸು ದಿವಿನಾಗಿದೆ. ಬೇರೆಲ್ಲಾ ಹಸುಗಳು ತಿಂದನ್ನು ಶಬ್ದವಿಲ್ಲದೆ ಅರಗಿಸಿಕೊಂಡರೆ, ಕೆಂಪಿ ಹಸು ನಾಲಗೆ ಹೊರಹಾಕಿ ಅರಗಿಸಿಕೊಳ್ಳುತ್ತದೆ. ಹಸುವಿನ ವಿನೂತನ ಪ್ರಕ್ರಿಯೆ ಹೆಬ್ಬಾರ್ ಮನಗೆ ಬರುವ ಅಥಿತಿಗಳಿಗೆ ಮನೋರಂಜನೆ ಸರಕು!

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮಂಗಳೂರು: " ಸೇವ್ ವೆಸ್ಟರ್ನ್ ಘಾಟ್ - 2011" ಪಶ್ಚಿಮಘಟ್ಟ ಉಳಿಸಿ ಅಭಿಯಾನ ಜ.28ರಿಂದ 30ರ ತನಕ ಮೂಡಬಿದಿರೆ ಸಮೀಪದ ಮಿಜಾರು ಶೋಭಾವನದಲ್ಲಿ ನಡೆಯಲಿದೆ. ಜ.29ರಂದು ಬೆಳಗ್ಗೆ 9ರಿಂದ 10.30ರ ತನಕ ಉದ್ಘಾಟನಾ ಸಮಾರಂಭ ನಡೆಯಲಿದೆ. ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಉದ್ಘಾಟಿಸಲಿದ್ದಾರೆ.ಪಶ್ಚಿಮಘಟ್ಟ ಟಾಸ್ಕ್ ಫೋರ್ಸ್ ಅಧ್ಯಕ್ಷ ಅನಂತ ಹೆಗಡೆ ಅಸೀಸರ,ಆಳ್ವಾಸ್ ಎಜುಕೇಷನ್ ಫೌಂಡೇಷನ್ ಮೂಡಬಿದಿರೆ ಇದರ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಉದ್ಘಾಟಿಸಲಿದ್ದಾರೆ.

ಮುಂದೆ ಓದಿ
10:09 PM

ಮನದ ತಳಮಳ

Posted by ekanasu

ಸಾಹಿತ್ಯ
ಚಿಗುರು ಬಳ್ಳಿಗೆ ಮಾಮರವು ಆಸರೆ
ಆದರೆ...
ಮಾಮರವನ್ನೇ ಕಡಿದರೆ...ಯಾರಿಹರು ಅದಕೆ
ಆಸರೆ...?



ಅಳುವ ಕಂದನಿಗೆ ಅಮ್ಮನ ಪ್ರೀತಿಯ ಆಸರೆ
ಆದರೆ...
ಆ ಅಮ್ಮನ ಬೇನೆಗೆ ಯಾರಿಹರು
ಆಸರೆ...
ನನ್ನೆದೆಯ ಭಾವನೆಗೆ ಗೆಳೆತನವೇ
ಆಸರೆ...
ಆದರೆ ಆ ಗೆಳೆತನಕೆ ಎಲ್ಲಿದೆಯಾಸರೆ
ಓ ಜಗವೇ..
ಮಾಡದಿರು ಎನ್ನ ಒಂಟಿ...
ಎಲ್ಲ ಇದ್ದರೂ ಯಾರೂ ಇಲ್ಲದ ಒಂಟಿತನವ
ತರದಿರು ಎನಗೆ...

- ಶಾಲಿನಿ ಎಸ್. ರಾವ್.

ಮುಂದೆ ಓದಿ

ಪ್ರಾದಢಶಿಕ ಸುದ್ದಿ
ಮೂಡಬಿದಿರೆ: ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ ಗುರೂಜಿ ಫೆ.16ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಅಂದು ಸಂಜೆ 6ರಿಂದ 8.30ರ ತನಕ ಮಂಗಳ ಸಂಧ್ಯಾ ಎಂಬ ವಿಶೇಷ ಕಾರ್ಯಕ್ರಮವನ್ನು ಅವರು ನಡೆಸಿಕೊಡಲಿದ್ದಾರೆ. ಸತ್ಸಂಗ, ಧ್ಯಾನ ಹಾಗೂ ಜ್ಞಾನವನ್ನೊಳಗೊಂಡ ಮಂಗಳ ಸಂಧ್ಯಾ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಮಿಕ್ಕಿದ ರವಿಶಂಕರ ಗುರೂಜಿ ಭಕ್ತವೃಂದ ಪಾಲ್ಗೊಳ್ಳಲಿದ್ದಾರೆ ಎಂದು ಮಂಗಳ ಸಂಧ್ಯಾ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.



ಶ್ರೀ ರವಿಶಂಕರ ಗುರೂಜಿ ಹತ್ತು ವರುಷಗಳ ಹಿಂದೆ ಅಂದರೆ 2000ದ ಸಂದರ್ಭದಲ್ಲಿ ಮಂಗಳೂರಿಗೆ ಆಗಮಿಸಿ ಸತ್ಸಂಗ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಆ ಸಂದರ್ಭದಲ್ಲಿ ಸುಮಾರು 30ಸಾವಿರದಷ್ಟು ಭಕ್ತವೃಂಧ ಭಾಗವಹಿಸಿದ್ದರು.
ನೆರೆಯ ಕಾಸರಗೋಡು ಜಿಲ್ಲೆಯಿಂದ ಶ್ರೀ ರವಿಶಂಕರ ಗುರೂಜಿ ಮಂಗಳೂರಿಗೆ ಆಗಮಿಸಲಿದ್ದಾರೆ. ಮಂಗಳೂರಿನಲ್ಲಿ ಮಂಗಳಸಂಧ್ಯಾ ಕಾರ್ಯಕ್ರಮ ನಡೆಸಿ ಬಳಿವ ಜಿಲ್ಲೆಯ ವಿವಿದೆಡೆಗಳಲ್ಲಿ ಖಾಸಗೀ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮಂಗಳೂರು ವಿಭಾಗವು ಒಟ್ಟು ಆರು ಜಿಲ್ಲೆಗಳನ್ನೊಳಗೊಂಡಿದೆ. ದ.ಕ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳನ್ನೊಳಗೊಂಡಿದ್ದು ಈಗಾಗಲೇ 30ಸಾವಿರಕ್ಕೂ ಅಧಿಕ ಮಂದಿ ಸುದರ್ಶನ ಕ್ರಿಯೆ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇವರೆಲ್ಲರೂ ಮಂಗಳ ಸಂಧ್ಯಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಳೆದ 30 ವರುಷಗಳ ಹಿಂದೆ ಸ್ಥಾಪನೆಗೊಂಡ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಇದೀಗ 150 ದೇಶಗಳಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿದೆ. ಇತ್ತೀಚೆಗಷ್ಟೇ ಚೈನಾ ದೇಶದಲ್ಲೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶಾಖೆ ಪ್ರಾರಂಭಗೊಂಡಿತ್ತು.
ಸುಸಜ್ಜಿತ ವ್ಯವಸ್ಥೆ : ಶ್ರೀ ರವಿಶಂಕರ ಗುರೂಜಿ ಮಂಗಳೂರು ಭೇಟಿ ಸಂದರ್ಭದಲ್ಲಿ ಯಾವುದೇ ರೀತಿಯ ಗೊಂದಲಗಳು ಉಂಟಾಗದಂತೆ ಸಂಪೂರ್ಣ ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ಈ ಕಾರ್ಯಕ್ರಮದಲ್ಲಿ ಗುರೂಜಿ ಅವರ ಮಂಗಳ ಸಂಧ್ಯಾ ಕಾರ್ಯಕ್ರಮ ವೀಕ್ಷಣೆಗೆ ಅನುಕೂಲವಾಗುವಂತೆ ಅಲ್ಲಲ್ಲಿ ಸಿ.ಸಿ.ಟಿ.ವಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಲಾಗುತ್ತದೆ.

ಮುಂದೆ ಓದಿ
6:54 AM

ಅರೆ ವಿಧವೆಯರು...!

Posted by ekanasu

ಸಿನೆಮಾ
ಆತ ಬದುಕಿದ್ದರೆ ಆತನ ಮುಖವನ್ನೊಮ್ಮೆ ತೋರಿಸಿ...ಸತ್ತಿದ್ದರೆ ಆತನ ಸಮಾಧಿಯೆಲ್ಲಿದೆಯೆಂದಾದರೂ ಹೇಳಿ. ಕೊನೇಪಕ್ಷ ಆತನ ಸಮಾಧಿಯ ಮೇಲೆ ಮಲಗಿ ಎರಡು ಹನಿ ಕಣ್ಣೀರನ್ನಾದರೂ ಹಾಕುತ್ತೇನೆ. ಕತ್ತಲು ಕೋಣೆಯೊಂದರಲ್ಲಿ ಕುಳಿತು ಕ್ಯಾಮರಾಕ್ಕೆ ಮುಖಮಾಡಿ ಆಕೆ ತನ್ನ ಕಣ್ಣೀರ ಕಥೆಯನ್ನು ಹೇಳುತ್ತಿದ್ದರೆ ವೀಕ್ಷಕನ ಕಣ್ಣಾಲಿಗಳು ತುಂಬಿ ಬರುತ್ತವೆ. ಅಸ್ಪಷ್ಟವಾಗಿ ಗೋಚರಿಸುತ್ತಿರುವ ಆಕೆಯ ಹತಾಶ ಮುಖವನ್ನೊಮ್ಮೆ ಸರಿಯಾಗಿ ನೋಡಬೇಕೆಂಬ ಹಂಬಲ ಉಂಟಾಗುತ್ತದೆ. ಹೌದು! ಇದು ಭೂಲೋಕದ ಸ್ವರ್ಗವೆನಿಸಿಕೊಂಡಿರುವ ಕಾಶ್ಮೀರದ ಸುಂದರ ಕಣಿವೆಯಲ್ಲಿ ಜೀವಿಸುತ್ತಿರುವ ಸಾವಿರಾರು ಅರೆ ವಿಧವೆಯರ ನರಕಸದೃಶ್ಯ ಕಥೆ. ಸದಾ ಕೋಮುಗಲಭೆ ಹಾಗೂ ಭಯೋತಾದ್ಪಕ ಕೃತ್ಯಗಳಿಂದ ತತ್ತರಿಸುತ್ತಿರುವ ಕಾಶ್ಮೀರದಲ್ಲಿ ಇಂದು ಸಾಮಾನ್ಯ ಜನತೆ ನೆಮ್ಮದಿಯ ಬದುಕು ಕಾಣಲು ಹವಣಿಸುತ್ತಿದೆ.



'ರಕ್ಷಕನೇ ಭಕ್ಷಕನಾದ' ಎಂಬ ನಾನ್ನುಡಿಯಂತೇ ಇಲ್ಲಿನ ಪೊಲೀಸ್ ಹಾಗೂ ಸಶಸ್ತ್ರ ಪಡೆಗಳೇ ಜನಸಾಮಾನ್ಯರ ನೆಮ್ಮದಿಯನ್ನು ಕಸಿಯುತ್ತಿರುವುದು ವಿಷಾದನೀಯ. ತಮಗೆ ನೀಡಿರುವ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸಶಸ್ತ್ರ ಪಡೆಗಳು ಸಂಶಯದ ನೆಲೆಯಲ್ಲಿ ಅಮಾಯಕ ವ್ಯಕ್ತಿಗಳನ್ನು ಎಲ್ಲೆಂದರಲ್ಲಿ ಬಂಧಿಸುತ್ತಿದ್ದಾರೆ. ಬಂಧಿತ ವ್ಯಕ್ತಿ ವಿಚಾರಣೆಯ ಮೇರೆಗೆ ವರುಷಗಳ ಕಾಲ ಸೆರೆಮನೆಯಲ್ಲಿರಬೇಕಾಗುತ್ತದೆ. ಆತನ ಬಂಧನದ ವಿಚಾರವನ್ನು ಕುಟುಂಬದವರಿಗೆ ತಿಳಿಸುವ ಕನಿಷ್ಟ ಸೌಜನ್ಯವೂ ಈ ಪಡೆಗಳಿಗಿಲ್ಲ. ವಿಚಾರಣೆಯ ಅವಧಿಯಲ್ಲಿ ವ್ಯಕ್ತಿ ಮೃತಪಟ್ಟರೆ ಆತನ ಸಾವಿನ ಬಗ್ಗೆಯೂ ಕುಟುಂಬದವರಿಗೆ ಮಾಹಿತಿಯಿರುವುದಿಲ್ಲ. ಇಂತಹ ಮರೆಯಾದ ಪುರುಷರ ಮಡದಿಯರನ್ನು ಅರೆವಿಧವೆಯರೆಂದು ಘೋಷಿಸಲಾಗುತ್ತದೆ. ಮರೆಯಾದ ವ್ಯಕ್ತಿಯ ಮಡದಿ ಪತಿ ಬದುಕಿರುವನೇ?...ಇಲ್ಲವೇ..? ಎಂಬ ಗೊಂದಲದಲ್ಲಿ ಅರೆ ವಿಧವೆಯಾಗಿ ಬದುಕಬೇಕಾಗುತ್ತದೆ. ತನ್ನ ಉಳಿದ ಜೀವನನ್ನು ಆಕೆ ಆತನ ಹುಡುಕಾಟದಲ್ಲಿ ಕಳೆಯಬೇಕಾಗುತ್ತದೆ. ಈ ಹುಡುಕಾಟ ಆಕೆಯ ಉಸಿರು ನಿಲ್ಲುವವವರೆಗೂ ನಿರಂತರವಾಗಿ ಸಾಗುತ್ತದೆ. ಇದೇ ಲೆಬುಲ್ ನಿಸಾ ನಿರ್ದೇಶನದ ' ಕಾಶ್ಮೀರ್ಸ್ ಹಾಫ್ ವಿಡೋಸ್" ಸಾಕ್ಷ್ಯ ಚಿತ್ರದ ಕಥಾವಸ್ತು.

ಲೆಬುಲ್ ನಿಸಾ ವೃತ್ತಿಯಲ್ಲಿ ಲಾಯರ್. ಮಾನವ ಹಕ್ಕುಗಳಲ್ಲಿ ವಿಶೇಷ ಪರಿಣತಿಯನ್ನು ಹೊಂದಿರುವವರು. ಅವರು ಕಾಶ್ಮೀರೀ ಸಮಾಜ ಹಾಗೂ ಸರಕಾರ ಅಲ್ಲಿರುವ ಅರೆವಿಧವೆಯರ ಕುರಿತಾಗಿ ತಾಳಿರುವ ನಿರ್ಲಕ್ಷ್ಯ ಭಾವದಿಂದ ಬೇಸತ್ತು ಆ ಸಮಸ್ಯೆಯನ್ನು ಇಡೀ ಪ್ರಪಂಚಕ್ಕೆ ತಿಳಿಸಬೇಕೆಂಬ ಹಂಬಲದಿಂದ 2010 ರಲ್ಲಿ ' ಕಾಶ್ಮೀರ್ಸ್ ಹಾಫ್ ವಿಡೋಸ್" ಎಂಬ ಸಾಕ್ಷ್ಯ ಚಿತ್ರವನ್ನು ನಿರ್ದೇಶಿದರು. ವಕೀಲೀ ವೃತ್ತಿಯಲ್ಲಿರುವ ಇವರು ಫಿಲ್ಮ ಮೇಕಿಂಗ್ನಲ್ಲಿ ವಿಶೇಷ ಪರಿಣತಿಯನ್ನೇನು ಹೊಂದಿಲ್ಲ. ಇವರು ನಿರ್ದೇಶಿಸಿರುವ ಆರು ನಿಮಿಷಗಳ ಸಾಕ್ಷ್ಯಚಿತ್ರ ಹಲವಾರು ತಾಂತ್ರಿಕ ದೋಷಗಳನ್ನೊಳಗೊಂಡಿದ್ದರೂ ಅದರ ಕಥಾವಸ್ತು ಮಾತ್ರಾ ಪರಿಣಾಮಕಾರಿಯಾಗಿದೆ. ಹಲವಾರು ಅರೆವಿಧವೆಯರ ಕಥೆಯನ್ನು ಜತೆಯಾಗಿ ಪೋಣಿಸಿ ನಮ್ಮ ಮುಂದಿಡುವ ಸಾಕ್ಷ್ಯಚಿತ್ರ ಅಪರಿಚಿತ ಪ್ರಪಂಚವೊಂದಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಮಾತ್ರವಲ್ಲ...ಕಲ್ಪನೆಗೂ ನಿಲುಕದ ವಾಸ್ತವವನ್ನು ಪರಿಚಯಿಸುತ್ತದೆ.

ಸಶಸ್ತ್ರ ಪಡೆಗಳು ನಡೆಸಿದ ಸ್ಪೋಟವೊಂದರಿಂದ ಪ್ರಾರಂಭವಾಗುವ ಚಿತ್ರಕಥೆ ಬಳಿಕ ಶಮಿಮಾ ಎಂಬ ಪಾತ್ರದೆಡೆ ಹೊರಳುತ್ತದೆ. ಶಮಿಮಾ ಎರಡು ಮಕ್ಕಳ ತಾಯಿ. ಆಕೆಯ ಪತಿಯನ್ನು ಕಾಶ್ಮೀರದ ಸಶಸ್ತ್ರ ಪಡೆ ಜನವರಿ22, 2000ರಂದು ಬಲವಂತವಾಗಿ ಮನೆಯಿಂದ ಕರೆದೊಯ್ದಿತ್ತು. ಬಳಿಕ ಶಮೀಮಾ ಆತನ ಕುರಿತು ಅಧಿಕಾರಿಗಳಲ್ಲಿ ವಿಚಾರಿಸಿದಾಗೆಲ್ಲಾ "ಗೊತ್ತಿಲ್ಲ" ವೆಂಬ ಉತ್ತರದ ವಿನಾ ಬೇರೇನು ಸಿಕ್ಕಿಲ್ಲ. ಕುಟುಂಬಕ್ಕಿದ್ದ ಏಕೈಕ ಆಧಾರ ಆಕೆಯ ಪತಿ. ಆತ ಕಾಣೆಯಾದ ಬಳಿಕ ಮಕ್ಕಳ ವಿದ್ಯಾಭ್ಯಾಸ, ಕುಟುಂಬದ ನಿರ್ವಹಣೆಗಾಗಿ ಆಕೆ ಕೂಲಿ ಕೆಲಸವನ್ನು ಅವಲಂಬಿಸಿದ್ದಾಳೆ. ಆತ ಸತ್ತಿರಬಹುದೇ...? ಎಂಬ ಪ್ರಶ್ನೆ ಆಕೆಯನ್ನು ಆಗಾಗ್ಗೆ ಕಾಡುತ್ತದೆ. ಆದರೂ ಬದುಕಿರಬಹುದೆಂಬ ಆಶಾವಾದದಲ್ಲಿ ಆಕೆ ದಿನ ದೂಡುತ್ತಿದ್ದಾಳೆ.

ಪತಿ ನಾಪತ್ತೆಯಾದ ಪ್ರಕರಣದಲ್ಲಿ ಆತನ ಮೃತ ದೇಹ ದೊರಕದಿದ್ದರೆ ಮುಂದಿನ ಏಳು ವರುಷಗಳವರೆಗೆ ಪತ್ನಿ ಆತನ ಆಸ್ತಿಯಲ್ಲಿ ಹಕ್ಕು ಚಲಾಯಿಸುವಂತಿಲ್ಲ. ಏಳು ವರುಷಗಳೊಳಗೆ ಆತ ಮರಳಿ ಬಾರದಿದ್ದರೆ ಆತನನ್ನು ಮೃತನೆಂದು ಘೋಷಿಸಿ ಆತನ ಆಸ್ತಿಯನ್ನು ಪತ್ನಿಗೆ ನೀಡಲಾಗುತ್ತದೆ. ಇದು ಕಾಶ್ಮೀರದ ಸರಕಾರ ಅರೆವಿಧವೆಯರಿಗಾಗಿ ಮಾಡಿರುವ ಹೊಸ ಕಾನೂನು. ಸಾವಿರಾರು ಅರೆವಿಧವೆಯರು ಈ ಕಾನೂನಿಂದ ಇಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪತಿಯನ್ನು ಕಳೆದುಕೊಂಡು ದುಖಃತಪ್ತ ಜೀವನ ಸಾಗಿಸುತ್ತಿರುವ ಅರೆವಿಧವೆಯರ ಬಗ್ಗೆ ಸರಕಾರ ತಾಳಿರುವ ಈ ಕರುಡು ನೀತಿಯನ್ನು ಚಿತ್ರದೆಲ್ಲೆಡೆ ಟೀಕಿಸಲಾಗಿದೆ.
ನಾಪತ್ತೆಯಾದ ತಮ್ಮ ಪತಿಯ ಭಾವಚಿತ್ರದೊಂದಿಗೆ ಕಾಶ್ಮೀರದ ರಸ್ತೆಗಳಲ್ಲಿ ಮಳೆ ಬಿಸಿಲೆನ್ನದೆ ಹುಡುಕಾಟ ನಡೆಸುವ ಅರೆವಿಧವೆಯರು ಚಿತ್ರದೆಲ್ಲೆಡೆ ಸಾಮಾನ್ಯವಾಗಿ ಕಾಣ ಸಿಗುತ್ತಾರೆ. ಪ್ರತೀ ಮುಂಜಾನೆ ಆತ ಇಂದು ಸಿಗುವನೆಂಬ ಆಶಾವಾದದೊಂದಿಗೆ ಬೀದಿಗಿಳಿಯುವ ಅವರು ಸಂಜೆಯಾಗುತ್ತಲೇ ಹತಾಶರಾಗಿ ಮನೆಗೆ ಮರಳುತ್ತಾರೆ. ಆದರೂ ಮರುಮುಂಜಾನೆ ಸಿಗುವನೆಂಬ ಆಶಾಭಾವ ಮತ್ತೆ ಅವರಲ್ಲಿ ಚಿಗುರೊಡೆದಿರುತ್ತದೆ. ಅರೆವಿಧವೆಯರೆಲ್ಲಾ ಸೇರಿಕೊಂಡು ಇಂದು ಕಾಶ್ಮೀರದಲ್ಲಿ ತಮ್ಮದೇ ದ ಸಂಘಟನೆಯೊಂದನ್ನು ಸ್ಥಾಪಿಸಿದ್ದಾರೆ. ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ತಮ್ಮ ಹಕ್ಕುಗಳಿಗಾಗಿ ಅವರು ಹೋರಾಡುತ್ತಿದ್ದಾರೆ. ಕಾಶ್ಮೀರ್ಸ್ ಹಾಫ್ ವಿಡೋಸ್ ಜಗತ್ತಿಗೆ ಅವರ ಈ ಹೋರಾಟದ ಬದುಕಿನ ಕಿರು ಪರಿಚಯವನ್ನು ಮಾಡಿಕೊಡುತ್ತಿದೆ.

ಚಿತ್ರದ ಹಿನ್ನೆಲೆ ಸಂಗೀತ ಹಾಗೂ ಕ್ಯಾಮರಾ ವರ್ಕ್ ಅಷ್ಟೇನೂ ಉತ್ತಮವಾಗಿಲ್ಲ. ಆದರೂ ಅದು ಪರಿಚಯಿಸಿಕೊಡುವ ವಾಸ್ತವದ ಗಂಭೀರತೆ ಚಿತ್ರದ ಉಳಿದೆಲ್ಲಾ ಲೊಪದೋಷಗಳನ್ನು ಮರೆಮಾಚುತ್ತದೆ. ಈಗಾಗಲೇ ಹಲವಾರು ಸಿನಿಮಾ ಅಂರ್ತಜಾಲ ತಾಣಗಳಲ್ಲಿ ತೆರೆಕಂಡಿರುವ ಕಾಶ್ಮೀರ್ಸ್ ಹಾಫ್ ವಿಡೋಸ್ ಹೆಚ್ಚೇನು ಪ್ರಚಾರ ಗಿಟ್ಟಿಸದ ಸಾಕ್ಷ್ಯಚಿತ್ರ. ಮಾನವ ಹಕ್ಕುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಚಿತ್ರ ಮಾಡಿದೆ ವಿನಃ ಮಾರಾಟಕ್ಕಲ್ಲ. ಜನ ಚಿತ್ರವನ್ನು ನೋಡಿ ಸಮಸ್ಯೆಯನ್ನು ಅರ್ಧೈಸಿಕೊಂಡರೆ ನಾವು ಪಟ್ಟ ಶ್ರಮಕ್ಕೊಂದು ಬೆಲೆ ಸಿಕ್ಕಹಾಗಾಗುತ್ತದೆ ಎನ್ನುತ್ತಾರೆ ಲೆಬುಲ್ ನಿಸಾ

ಅಕ್ಷತಾ ಭಟ್ .ಸಿ.ಎಚ್.

ಮುಂದೆ ಓದಿ
6:24 AM

ಅಭಿನಂದನೆ

Posted by ekanasu

ರಾಜ್ಯ - ರಾಷ್ಟ್ರ
ಬೆಂಗಳೂರಿನಲ್ಲಿನ ಯಕ್ಷಗಾನ ಅಭಿಮಾನಿಗಳು ಸೇರಿ ಒಂದು ಸರಳ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವನ್ನು ದಿನಾಂಕ ೨೩ ಜನವರಿ ೨೦೧೧ ರಂದು ಅಯೋಜಿಸಿದ್ದೇವೆ. ಬೆಂಗಳೂರಿನಲ್ಲಿ ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತರ ಕಾರ್ಯಕ್ರಮ ತೀರಾ ಅಪರೂಪವೆನ್ನಿಸುವಂತಹ ಈ ಸನ್ನಿವೇಶದಲ್ಲಿ ಹಾಗು ಶ್ರೀ ಬಲಿಪ್ಪರಿಗೆ ಈ ವರುಷದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ ಅಂಗವಾಗಿ ಬಲಿಪ ಭಾಗವತರಿಗೆ ಅಭಿನಂದನೆ ಹಾಗು ಯಕ್ಷಗಾನ ತಾಳಮದ್ದಲೆ "ತಾಮ್ರಧ್ವಜ ಕಾಳಗ" ವನ್ನು ಸಂಯೋಜನೆ ಮಾಡಲಾಗಿದೆ.





ಮುಂದೆ ಓದಿ

ರಾಜ್ಯ - ರಾಷ್ಟ್ರ
ಕನ್ನಡದ ಹೆಮ್ಮೆ ಈ ಕನಸು...
ವೆಬ್ ಸೈಟ್ ಅಂದರೆ ಇಂಗ್ಲಿಷ್ ವೆಬ್ ಸೈಟ್ ಎಂದೇ ಜನ ತಿಳಿದಿರುವಾಗ ಕನ್ನಡದ ವೆಬ್ ಸೈಟ್ ಈ ಕನಸು.ಕಾಂ ಇಂಗ್ಲಿಷ್ ವೆಬ್ ಸೈಟ್ ಗಳಿಗೆ ಯಾವ ರೀತಿಯಲ್ಲೂ ಕಡಿಮೆ ಇಲ್ಲದಂತೆ ಬೆಳೆದು ನಿಂತಿದೆ. ಮೂಡಿಬರುತ್ತಿದೆ. ಒಳ್ಳೆಯದನ್ನು ಕೊಟ್ಟರೆ ಜನ ಅಂತರ್ಜಾಲದಲ್ಲೂ ಕನ್ನಡ ಓದುತ್ತಾರೆ ಎಂಬುದನ್ನು ಈ ಕನಸು ಅತ್ಯಂತ ಸ್ಪಷ್ಟವಾಗಿ ನಿರೂಪಿಸಿದೆ. ಪ್ರಕಟಿಸುವ ಲೇಖನಗಳಿರಲಿ, ನೀಡುವ ಚಿತ್ರಗಳಿರಲಿ ಯಾವುದೇ ವಿಭಾಗಗಳಲ್ಲಿರಲಿ ಈ ಕನಸು ಆಂಗ್ಲಭಾಷಾ ವೆಬ್ ಸೈಟ್ ಗಳಿಗೇನೂ ಕಡಿಮೆಯಿಲ್ಲ ಎಂಬಂತೆ ಸದೃಢವಾಗಿದೆ. ಇನ್ನಷ್ಟು ಈ ಕನಸುಗಳು ಕನ್ನಡ ಭಾಷೆಯಲ್ಲಿ ಮೂಡಿಬರಲಿ.ಶುಭವಾಗಲಿ.
- ಟಿ.ಜಿ.ಹೆಗಡೆ, ಮಾಗೋಡು.

ಮುಂದೆ ಓದಿ

ವೈವಿಧ್ಯ
ಮೊನ್ನೆ ರೆಂಜೆ ಹೂವಿನ ಮರ ಬದುಕು ಕಳೆದುಕೊಂಡಿತ್ತು. ನೀನು ಕೋಲ್ಮಿಂಚಿನಂತೆ ನೆನಪಲ್ಲಿ ಹಾದುಹೋದೆ... ಸುಮಾರು ಎಂಟು ವರುಷಗಳ ಹಿಂದೆ ನೀನು ಆ ರೆಂಜೆ ಹೂವನ್ನೆಲ್ಲ ಹೆಕ್ಕಿ ತಂದು ನನ್ನ ಅಂಗಿಗೆ ಹಾಕಿದ್ದೆ. ಅದನ್ನು ಹೇಗೆ ಮುಡಿದುಕೊಳ್ಳೋದು ಅಂತ ಗೊತ್ತಾದಾಗ ಈ ಕಾಡ ಹೂವು ನಂಗ್ಯಾಕೆ ಅಂದಿದ್ದೆ. ನೋಡು ಆಕಾಶದಲ್ಲಿ ಮಿನುಗೋ ನಕ್ಷತ್ರ ಕೂಡ ಒಂದು ದಿನ ಕಾಲಿಗೆ ನೋವು ಕೊಡೋ ಉಲ್ಕೆಯೇ ಎಂದು ಆ ಎಲ್ಲಾ ರೆಂಜೆ ಹೂವನ್ನು ತುಂಬಾ ತಾಳ್ಮೆಯಿಂದ ಪೋಣಿಸಿ ನನ್ನ ಹೆರಳ ಮುಡಿಗಿಟ್ಟಿದ್ದೆ. ಅಂದು ಹುಟ್ಟಿಕೊಂಡ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ.
ಹುಡುಗರು ಹೀಗೂ ಇರುತ್ತಾರಾ... ನಂತರ ಅದೇ ಕಾಯಕವಾಯ್ತು... ರೆಂಜೆ ಹೂವು ವರುಷವಿಡೀ ಇರಬಾರದಾ ಅಂತ ಅನ್ನಿಸೋವಷ್ಟು ರೆಂಜೆ ಮರ ನೆನಪಾಗೋಯ್ತು. ಹೌದು ಆ ರೆಂಜೆ ಮರದ ಹೂವೇ ನನ್ನ ಬಾಲ್ಯದ ನೆನಪುಗಳನ್ನೆಲ್ಲಾ ಸಿಹಿಯಾಗಿಸಿದ್ದು.



ಗಂಡುಬೀರಿ ಹುಡುಗಿ ಎಂಬ ಬಿರುದಿನೊಂದಿಗೆ ನನಗೆ ಊರು ಸುತ್ತೋಕೆ ಜೊತೆಗಾರನಾದೆ... ಮರ ಹತ್ತೋಕೆ ಕೋತಿಯಾದೆ. ಯಾವತ್ತೂ ನಿನ್ನ ಜೊತೆ ಜಗಳ ಆಡಿಲ್ಲ, ಮಾತು ಬಿಟ್ಟಿಲ್ಲ, ನೆನಪಾದಾಗ ಅದೇ ರೆಂಜೆಮರದ ನೆರಳಲ್ಲಿ ಕಲ್ಲಾಟ ಆಡುತ್ತಿದ್ದೆವು... ಈಗಲೂ ಊರಿಗೆ ಹೋದಾಗ ಆ ಹೂವ ಮುಡಿದುಕೊಂಡು ನಿನ್ನ ನೆನಪಲ್ಲಿ ದಿನ ಕಳೆಯಬೇಕೆಂಬ ಆಸೆ. ಆದರೆ ಮುಳ್ಳಲ್ಲಿ ಅರಳೋ ಗುಲಾಬಿಯ ಎದುರು ರೆಂಜೆ ಹೂವು ನಕ್ಷತ್ರವಾಗಿ ಕಾಣಲೇ ಇಲ್ಲ ನನಗೆ.
ಆದರೆ ಇಂದಿಗೂ ನನಗೆ ಒಂದು ಕಪ್ ಐಸ್ಕ್ರೀಮಿಗಿಂತ ಒಂದು ಮೊಳ ಮಲ್ಲಿಗೆಯೇ ಜೀವ. ಆ ಹೂವ ಪ್ರೀತಿಯಲ್ಲಿ ಜೀವನ ಪ್ರೀತಿಯನ್ನು ಕಲಿಸಿಕೊಟ್ಟ ನಿನ್ನನ್ನು ಇಂದು ನಾನು ಬಣ್ಣಗಳ ಕುಂಚದಲ್ಲಿ ಹುಡುಕಬೇಕಾಗಿದೆ. ಅಮ್ಮ ಯಾವತ್ತೂ ಅವನ ಜೊತೆ ಏನೂಂತ ಮಾತಾಡ್ತೀಯ ಅಂತಾ ಪ್ರಶ್ನಿಸಲೇ ಇಲ್ಲ. ನಿನ್ನ ಜೊತೆ ಮಾತನಾಡಬಾರದೆಂದು ಅಣ್ಣ ಲಕ್ಷ್ಮಣರೇಖೆಯನ್ನು ಹಾಕಲಿಲ್ಲ. ಆದರೆ ನಮಗೆ ನಾವೇ ದೂರವಾದೆವು... ರೆಂಜೆ ಮರದಲ್ಲಿ ಹೂವು ಅರಳೋದೇ ಇಲ್ವೇನೋ ಅನ್ನೋಷ್ಟರಮಟ್ಟಿಗೆ ದೂರವಾದೆವು. ಆ ಮರ ಬದುಕ ಕಳೆದುಕೊಂಡಾಗ ಏನೂ ಅನ್ನಿಸಲೇ ಇಲ್ವಾ ಬಿಡು ನನಗೂ ಏನೂ ಅನಿಸಲೇ ಇಲ್ಲಾ... ಮರ ಸತ್ತುಹೋಯಿತು ಅಷ್ಟೇ....!
ಬಹುಷಃ ನಿನ್ನ ಮನದಲ್ಲಿರೋ ಹೂವಿನ ಪ್ರೀತಿಯಂತಹ ಆ ನೆನಪು, ನನ್ನ ಮನಸ್ಸಿನಲ್ಲಿರೋ ಮರದ ನೆರಳಿನಂತಿರುವ ನೆನಹು... ಕಾಲನ ಕೈಯಲ್ಲಿ ಮಾತ್ರ ಸಾಯೋಕೆ ಸಾಧ್ಯವೇನೋ... ಬಣ್ಣಗಳ ಜೊತೆ ಆಟವಾಡೋ ನೀನು ಬಿಡಿಸುವ ಹುಡುಗಿಯ ಮುಖದ ಕಣ್ಣುಗಳಾಗೋ ಆಸೆ ನನಗೆ. ನಾನು ಬರೆಯೋ ಲೇಖನದ ಪ್ರೀತಿಯ ಹುಡುಗ ಆಗೋ ಬಯಕೆ ನಿನಗೆ... ಆದರೆ ಆ ರೆಂಜೆ ಹೂವು ಅರಳೋಕೆ ಕೇಳ್ತಾನೇ ಇಲ್ಲಾ...


ದೀಷ್ಮಾ ಡಿ.ಶೆಟ್ಟಿ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಬೆಂಗಳೂರು: ಅಮೆರಿಕ ಮೂಲದ ಎನ್ ಬಿಸಿ ಟಿವಿ ಭಾರತೀಯ ಸಂಸ್ಕೃತಿ ಆಚರಣೆಗಳನ್ನು ಅವಹೇಳನಮಾಡುವ ಕಾರ್ಯಕ್ಕೆ ಮುಂದಾಗಿದೆ. ತಕ್ಷಣ ಅಮೆರಿಕಾ ತನ್ನ ಕೆಟ್ಟ ಚಾಳಿಯನ್ನು ನಿಲ್ಲಿಸಬೇಕಾಗಿದೆ. ಹಾಗೂ ಭಾರತೀಯ ಭಾವನೆಗಳಿಗೆ ಧಕ್ಕೆ ತರುವ ಕಾರ್ಯಕ್ಕೆ ಕ್ಷಮೆಕೇಳಬೇಕಾಗಿದೆ.
ಅಮೆರಿಕಾ ಮೂಲಕ ಎನ್.ಬಿ.ಸಿ ಎಂಬ ಟಿ.ವಿ ಚ್ಯಾನೆಲ್ ನಲ್ಲಿ ಶನಿವಾರ ನಡೆಸುವ ಸಾಟರಡೇ ನೈಟ್ ಲೈವ್ ಎಂಬ ರಿಯಾಲಿಟಿ ಶೋ The Wrath of Ganesh ಕಾರ್ಯಕ್ರಮದಲ್ಲಿ ಈ ಅವಹೇಳನಾಕಾರಿ ಪ್ರಸಂಗಗಳು ಪ್ರಸಾರಕಾಣುತ್ತಿದೆ. ಸೆಕ್ಸ್, ಲೈಂಗಿಕತೆಗೆ ಸಂಬಂಧಿಸಿದ ಮಾಹಿತಿ ನೀಡುವುದೇ ಈ ಕಾರ್ಯಕ್ರಮದ ಪ್ರಮುಖ ಉದ್ದೇಶ. ಹಾಸ್ಯ ನಟ ಹಾಗೂ ಗೊಲ್ಡನ್ ಗ್ಲೋಬ್ ಪ್ರಶಸ್ತಿ ವಿಜೇತ ಜಿಮ್ ಕ್ಯಾರಿ ಮತ್ತು ಕೆನನ್ ಥಾಮ್ಸನ್ ನಡೆಸಿಕೊಡುತ್ತಾರೆ.

ಮುಂದೆ ಓದಿ
9:47 AM

ಇಸ್ರೋ ನೆರವು

Posted by ekanasu

ರಾಜ್ಯ - ರಾಷ್ಟ್ರ
ತಿರುವನಂತಪುರ: ಶ್ರೀ ಕ್ಷೇತ್ರ ಶಬರಿಮಲೆಯಲ್ಲಿ ಕಾಲ್ತುಳಿತಕ್ಕೆ ಒಳಗಾಗಿ 102ಮಂದಿ ಸಾವಿಗೆ ಕಾರಣವಾದ ಘಟನೆಯ ತನಿಖೆಯೂ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವ ಸದುದ್ದೇಶದಿಂದ ಉಪಗ್ರಹದಿಂದ ತೆಗೆಯಲಾದ ಶಬರಿಮಲೆಯ ಸಂಪೂರ್ಣ ಚಿತ್ರಗಳನ್ನು ಕೇರಳ ಸರಕಾರಕ್ಕೆ ನೀಡಲು ಇಸ್ರೋ ಸಂಸ್ಥೆ ಉತ್ಸುಕತೆ ತೋರಿದೆ. 3ಆಯಾಮದ ಈ ಚಿತ್ರಗಳು ಶಬರಿಮಲೆಯಲ್ಲಿ ಸೂಕ್ತ ಮೂಲಸೌಲಭ್ಯ ಕಲ್ಪಿಸಲು ಸಹಕಾರಿಯಾಗಲಿದೆ ಎಂದು ಇಸ್ರೋ ತಿಳಿಸಿದೆ.

ಮುಂದೆ ಓದಿ

ಪ್ರಾದೇಶಿಕ ಸುದ್ದಿ
ಮಂಗಳೂರು: ಮಂಗಳೂರನ್ನು ಕೇಂದ್ರವಾಗಿರಿಸಿಕೊಂಡಿರುವ ಭಾರತೀಯ ಕಲೆಗಳ ತರಬೇತಿ ಕೇಂದ್ರ ರಂಗಭಾರತಿ ಕೊಡಮಾಡುವ 2011ರ ಪನ್ನಾಭ ಪುರಸ್ಕಾರಕ್ಕೆ ಉಡುಪಿಯ ಉಪಾಧ್ಯಾಯ ದಂಪತಿಗಳು ಆಯ್ಕೆಯಾಗಿದ್ದು ಇಂದು ಸಂಜೆ 7ಗಂಟೆಗೆ ಉಳಿಯೂರಿನಲ್ಲಿರುವ ಉಪಾಧ್ಯಾಯರ ಮನೆಯಲ್ಲಿ ಪುರಸ್ಕಾರ ಸಮಾರಂಭ ನಡೆಯಲಿದೆ. ಸಾಂಸ್ಕೃತಿಕ ಸಂಶೋಧನೆ ಮತ್ತು ತುಳು ಭಾಷೆಗೆ ಸಲ್ಲಿಸಿರುವ ಅಪೂರ್ವ ಸಾಧನೆಗೆ ಡಾ.ಉಳಿಯಾರು ಪದ್ಮನಾಭ ಉಪಾಧ್ಯಾಯ ಮತ್ತು ಡಾ.ಸುಶೀಲಾ ಪದ್ಮನಾಭ ಉಪಾಧ್ಯಾಯ ದಂಪತಿಗಳು ಈ ಬಾರಿಯ ಪ್ರಶಸ್ತಿ ಪುರಸ್ಕೃತರು. ಪನ್ನಾಭಾರವರ ಪುಣ್ಯತಿಥಿ ಜ.17ರಂದು. ಅದೇ ದಿನ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.ಕರಾವಳಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಸ್.ಗಣೇಶ್ ರಾವ್, ಡಾ.ಎಂ.ಮೋಹನ ಆಳ್ವ, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಹರೀಶ್ ಕೆ.ಆದೂರು, ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಮುಂದೆ ಓದಿ

ಲೇಖನ ಮಾಲೆ :9

ದೃಶ್ಯ ಮಾಧ್ಯಮದ ನೆನಪಿನ ಸವಾರಿ...

ಕಡಲ ಮಕ್ಕಳ ಸಾಂತ್ವನದ `ಸಾಗರದೀಪ'

ಕಡಲು ಯಾರಿಗೂ ಕಾಯುವುದಿಲ್ಲ. ಆದರೆ ಕಡಲನ್ನೇ ಕಾಯುತ್ತಾ ಬದುಕುವ ಅದೆಷ್ಟೋ ಕುಟುಂಬಗಳನ್ನು ನಾವು ಕಣ್ಣಾರೆ ಕಾಣುತ್ತೇವೆ. ಕಡಲ ಅಲೆಗಳ ಅಬ್ಬರಕ್ಕೆ ಹೆದರಿದರೆ ಅವರಿಗೆ ಬದುಕಿಲ್ಲ. ಒಂದು ಮುಂಜಾನೆ ದೋಣಿ ಹಿಡಿದು ಮೀನು ಹಿಡಿಯಲು ಹೊರಟರೆಂದರೆ ಕಡಲಿನ ಅಲೆಗಳ ಜೊತೆಗೆ ಹೋರಾಟ ನಡೆಸುತ್ತಾ ಮೀನು ಹಿಡಿದು ಹಿಂತಿರುಗಿ ಬರುವುದು ಸೂರ್ಯ ಸಮುದ್ರಕ್ಕೆ ಬಿದ್ದ ಬಳಿಕವೆ.ಕಡಲಿಗೊಂದು ಗುಣವಿದೆ. ಸೂರ್ಯನ ಶಾಖಕ್ಕೆ ಪಕ್ಕನೆ ಬಿಸಿಯಾಗಿ ತಣಿಯುವುದಕ್ಕೆ ಅರ್ಧದಿನಗಳಷ್ಟು ಕಾಲ ಬೇಕಾಗುತ್ತದೆ. ಅದಕ್ಕಾಗಿಯೆ `ಕರಾವಳಿಯ ಬಿಸಿಲು ಮತ್ತು ಕಾದ ಬಾಣಲೆ ಒಂದೇ' ಅನ್ನುವ ಗಾದೆ ಮಾತಿದೆ. ಹಾಗೆ ನೀರು ಬಿಸಿಯಾದಾಗ ಕಡಲಿನಲ್ಲಿ ದೋಣಿಯ ಪ್ರಯಾಣ ಮತ್ತು ನಡು ನೆತ್ತಿಯ ಮೇಲೆ ಸುಡುವ ಸೂರ್ಯ. ಅದು ನಮ್ಮ ಊಹೆಗೂ ನಿಲುಕದ ಕರಾಳ ಬದುಕು. ಆದರೆ ಕಡಲಿನ ಮಕ್ಕಳಿಗೆ ಅದೆಲ್ಲಾ ಗೌಣ. ಅವರದ್ದೇನಿದ್ದರೂ ವೃತ್ತಿಯನ್ನು ನಿಯತ್ತಾಗಿ ಪಾಲಿಸುವ ಕಡಲಿಗೂ ಬೆದರದ ಧೈರ್ಯವಂತರು.


ದೋಣಿ ತುಂಬಾ ಮೀನು ತಂದು ಅದನ್ನು ದಡಕ್ಕೆ ಒಪ್ಪಿಸಿದ ಮೇಲೆಯೇ ಅವರು ಮುಂದಿನ ಕೆಲಸಕ್ಕೆ ಅಣಿಯಾಗುವುದು.ಒಮ್ಮೆ ಕಾಪು ಬೀಚ್ ನಲ್ಲಿ ಕುಳಿತು ಸುಮ್ಮನೆ ಸಮುದ್ರದ ಅಲೆಗಳ ಆಟವನ್ನು ನೋಡುತ್ತಿದ್ದಂತೆ ದಂಡೆಯಲ್ಲಿ ಹೆಂಗಸರ ಗುಂಪೊಂದು ಕುಳಿತು ಹರಟುತ್ತಿತ್ತು. ಆಮೇಲೆ ಅವರ ಮಾತುಕತೆಯಿಂದ ಅವರೆಲ್ಲಾ ದೋಣಿಯನ್ನು ನಿರೀಕ್ಷಿಸುತ್ತಾ ಕುಳಿತಿರುವವರೆಂದು ತಿಳಿಯಿತು. ದೋಣಿಯಲ್ಲಿ ಕುಳಿತು ಅವರ ಪ್ರಯಾಣ ಎಲ್ಲಿಗಪ್ಪಾ? ಅನ್ನುವ ಆಶ್ಚರ್ಯ ನನಗೆ. ನಾನು ಎದ್ದು ಅವರತ್ತ ನಡೆದೆ. ಕುತೂಹಲದಿಂದ ಕೇಳಿದೆ. `ನೀವು ಎಲ್ಲಿಗೆ ಹೋಗುವವರು?' ಅಂದೆ. ಅವರು ವಿಚಿತ್ರವಾಗಿ ನನ್ನ ನೋಡುತ್ತಾ ನಕ್ಕರು. ನಾನು ಸುಮ್ಮನಾದೆ. ಮತ್ತೆ ಅವರ ಪಕ್ಕದಲ್ಲಿಯೆ ಬುಟ್ಟಿಗಳು ಕಂಡವು. ಮತ್ತೇ ನಾನು ಅವರ ಮುಂದೆಯೇ ಬರುತ್ತಲೇ ಅವರು, `ನಿಮ್ಮದು ಯಾವೂರಾಯಿತು?' ಅಂದರು. `ನಮ್ಮದು ಇಲ್ಲಿಯ ಶಿರ್ವದ ಪಕ್ಕದಲ್ಲಿ ಪಡುಬೆಳ್ಳೆಂತ ಇದೆ, ಅಲ್ಲಿ' ಅಂದೆ. ಅವರಲ್ಲೊಬ್ಬಳು ನನ್ನನ್ನು ಗುರುತಿಸಿದಂತೆ, `ಅಯ್ಯೋ! ನೀವು ಭಟ್ರ ಮಗ ಅಲ್ವಾ?' ಅಂದ್ರೆ ನನಗೆ ಆಶ್ಚರ್ಯವಾಯಿತು. ಅವಳಿಗೆ ನನ್ನ ಪರಿಚಯ ಹೇಗೆ? ಎಂದು ಆಲೋಚಿಸುತ್ತಿರುವಾಗ ತಟ್ಟನೆ ನೆನಪಾಯಿತು.

ಅವಳು ನಮ್ಮೂರಿಗೆ ಮೀನು ಮಾರಲು ಬರುವ ಹೆಂಗಸು. ಮನೆ ಮನೆಗೆ ಬುಟ್ಟಿಯಲ್ಲಿ ಮೀನು ಹಿಡಿದುಕೊಂಡು ಬರುವವಳು. ನಾವು ಬ್ರಾಹ್ಮಣರೆಂದು ತಿಳಿಯದೆ ನಮ್ಮ ಮನೆಯ ಎದುರು ಬುಟ್ಟಿ ಇಳಿಸಿ, `ಬೇಕಾ?' ಅಂದ್ರೆ ನಮಗೆಲ್ಲಾ ಆಶ್ಚರ್ಯ. ಕೊನೆಗೆ ಪಕ್ಕದ ಮನೆಯ ಪುರುಷರ ಮನೆಯ ಹೆಂಗಸು ಬಂದು, `ಎಂತ ಮಾರಾಯ್ತಿ, ನಿನಗೆ ಅಷ್ಟು ಗೊತ್ತಾಗುವುದಿಲ್ವಾ? ಒಟ್ಟು ನಿನ್ನತ್ರ ಮೀನು ಇದ್ದದ್ದು ಖಾಲಿಯಾಗಬೇಕೂಂತ ನೀನು ಆ ರೀತಿ ಸಿಕ್ಕ ಸಿಕ್ಕ ಮನೆಗೆಲ್ಲಾ ಹೋಗುವುದಾ?' ಅಂತ ಗದರಿದಾಗ ಆ ಹೆಂಗಸು, `ಅಯ್ಯೋ ದೇವಾ! ತಪ್ಪಾಯ್ತು. ನನಗೆ ಗೊತ್ತೇ ಇರ್ಲಿಲ್ಲ' ಅಂತ ಕ್ಷಮಾಪಣೆ ಕೇಳುವಾಗ ನಾವೆಲ್ಲಾ ಹಿಡಿಯಂತಾಗಿದ್ದೆವು. ಕೊನೆಗೆ ನಮ್ಮಮ್ಮ, `ಗೊತ್ತಿಲ್ದೆ ಕೇಳಿದ್ರಿ. ಅದಕ್ಕೇನು?' ಅಂದು ಅವಳಿಗೆ ಸಮಾಧಾನವಾಗುವಂತೆ ಹೇಳಿದರು. ಆ ಹೆಂಗಸು ನನ್ನನ್ನು ಗುರುತು ಹಿಡಿದಿದ್ದು ನನಗೆ ತಿಳಿಯಿತು.

ನಾನು ಆ ಹೆಂಗಸಿಗೆ, `ಹೌದು, ನಾನು ಭಟ್ರ ಮಗ' ಅಂದೆ. ಮತ್ತೆ ನಾನೇ, `ನೀವೇನು ಇಲ್ಲಿ ಕುಳಿತಿರುವಿರಿ' ಅಂದೆ. `ದೋಣಿಗಳು ಕಡಲಿಗೆ ಇಳಿದಿವೆ. ಇನ್ನೊಂದರ್ಧಗಂಟೆಯಲ್ಲಿ ಹಿಂತಿರುಗುತ್ತವೆ. ಇಲ್ಲಿ ಮೀನುಗಳನ್ನು ಏಲಂ ಹಾಕ್ತಾರೆ. ಅದನ್ನು ನಾವು ಖರೀದಿಸಿ. ಮನೆ ಮನೆಗೆ ಹೊತ್ತುಕೊಂಡು ಹೋಗಿ ಮಾರ್ತೇವೆ' ಅಂದಳು. ಅವರ ಆ ಪರಿಶ್ರಮ, ಅವಿರತ ದುಡಿತ, ಮನೆ ಮನೆಗೆ ಹೋಗಿ ಮೀನು ಮಾರುವ ಕೆಲಸ ನೆನೆಯುತ್ತಲೆ ಅನುಕಂಪ ಮೂಡಿತು. ಕೊನೆಗೆ ನಾನು ಆ ಹೆಂಗಸಿಗೆ ಹೇಳಿ ಮತ್ತೆ ದೂರಕ್ಕೆ ಕುಳಿತೆ.


ಅವರು ನಿರೀಕ್ಷಿಸುವಂತೆಯೇ ಅಲೆಗಳ ಅಬ್ಬರದ ನಡುವೆ ದೋಣಿ ಏರಿ ಇಳಿಯುತ್ತಾ ಬರುತ್ತಿರುವಾಗ ಅವರೆಲ್ಲಾ ಎದ್ದು ನಿಂತರು. ಆಗ ಉಬ್ಬರದ ಸಮಯ. ಅಲೆಗಳನ್ನು ದಾಟಿ ಬರುವುದಕ್ಕೆ ದೋಣಿ ಹರ ಸಾಹಸ ಪಡುತ್ತಿತ್ತು. ನಾನು ಆ ದೈತ್ಯ ಅಲೆಗಳನ್ನು ಬೆರಗಿನಿಂದ ನೋಡುತ್ತಾ ಕುಳಿತಿದ್ದೆ. ಎಷ್ಟೇ ಪ್ರಯತ್ನ ಪಟ್ಟರೂ ದೋಣಿ ಅಲೆಗಳನ್ನು ದಾಟಿ ಬರುವುದು ಕಷ್ಟವೆನಿಸಿತು. ದೋಣಿಯೊಳಗಿದ್ದವರೆಲ್ಲಾ ಎಷ್ಟೇ ಬಲ ಉಪಯೋಗಿಸಿ ಹುಟ್ಟು ಹಾಕಿದರೂ ಅಲೆ ಎತ್ತರಕ್ಕೆ ಏರಿ ಆ ದೋಣಿಯನ್ನು ಮತ್ತೆ ಕಡಲಿನತ್ತ ದೂಡುತ್ತಿತ್ತು. ಅಷ್ಟರಲ್ಲಾಗಲೆ ಆ ಹೆಂಗಸರೆಲ್ಲಾ ಅಲೆಗಳು ಮುತ್ತಿಕ್ಕುವ ದಂಡೆಯವರೆಗೂ ಬಂದು ದೋಣಿಯಲ್ಲಿದ್ದವರಿಗೆ ಉತ್ತೇಜನ ಕೊಡುವಂತೆ ಬೊಬ್ಬಿಡುತ್ತಿದ್ದರು. ಆದರೂ ದೋಣಿ ಪ್ರಕೃತಿಯ ಕೋಪಕ್ಕೆ ತುತ್ತಾದಂತೆ ಅಲೆಗಳ ಹೊಡೆತಕ್ಕೆ ಸಿಕ್ಕು ಕವಚಿ ಬಿತ್ತು. ದಡದಲ್ಲಿದ್ದ ಮಹಿಳೆಯರ ಆರ್ತನಾದಕ್ಕೆ ಬೆದರಿ ಎದ್ದು ನಿಂತು ಬೆದೆ ಹಿಡಿದವರಂತೆ ನೋಡುತ್ತಿದ್ದೆ. ದೋಣಿಯಲ್ಲಿದ್ದವರೆಲ್ಲಾ ಮುಳುಗಿದರೇನೋ? ನನ್ನ ಕಣ್ಣೆದುರಿಗೆ ಇಂತಹ ದುರ್ಘಟನೆ ನಡೆಯಬೇಕೆ ಎಂದು ಹೆದರುತ್ತಲೇ ಇದ್ದ ನನಗೆ ದೋಣಿಯಲ್ಲಿದ್ದವರೆಲ್ಲಾ ದೋಣಿಯನ್ನ ಗಟ್ಟಿಯಾಗಿ ಹಿಡಿದುಕೊಂಡು ದಡದತ್ತ ಬರುತ್ತಿರುವುದು ಕಂಡು ಸಮಾಧಾನವಾದರೂ ಕೊನೆ ಪಕ್ಷ ಒಬ್ಬನಾದರೂ ನೀರಲ್ಲಿ ಮುಳುಗಿದರೇನೋ ಅಂದುಕೊಂಡು ಹೆಂಗಸರತ್ತ ನಡೆದೆ. ಮೆಲ್ಲನೆ, `ಏನೂ ಆಗಿಲ್ಲ ತಾನೆ?' ಎಂದು ಅನುಮಾನಿಸುತ್ತಾ ಕೇಳಿದೆ. ಆ ಹೆಂಗಸರ ಅಳು ನಿಂತಿರಲಿಲ್ಲ. ನನ್ನ ಪರಿಚಿತ ಹೆಂಗಸು, `ಎಂತ, ಏನೂ ಆಗ್ಲಿಲ್ಲ. ದೋಣಿ ಕವಚಿ ಬಿದ್ರೆ ಕಷ್ಟ ಪಟ್ಟು ಹಿಡಿದ ಮೀನುಗಳು ನೀರಿಗೆ ಬೀಳ್ತಾವಲ್ಲ. ನಮ್ಮ ಹೊಟ್ಟೆಗೆ ಕಲ್ಲು ಬಿದ್ದ ಹಾಗಲ್ವಾ?' ಅಂತ ಕಣ್ಣೀರು ಒರೆಸಿಕೊಂಡಳು. ಅವರ ಆ ಪರಿಶ್ರಮದ ಹಿಂದಿರುವ ಅಳಲು ನನ್ನೆದೆಯನ್ನು ತಟ್ಟಿತು. ನಿಧಾನವಾಗಿ ಹೆಜ್ಜೆ ಹಾಕುತ್ತಾ ರಸ್ತೆಯತ್ತ ನಡೆದೆ.

ಇಂತಹುದೇ ಸನ್ನಿವೇಶವೊಂದು ಟಿ.ಎಸ್. ನಾಗಾಭರಣ ನಿರ್ದೇಶನದ, ಮಾಜಿ ಮುಖ್ಯ ಮಂತ್ರಿ ಎಂ. ವೀರಪ್ಪ ಮೊಯ್ಲಿಯವರ ಕಥೆಯನ್ನು ಆಧರಿಸಿದ ಚಿತ್ರ `ಸಾಗರದೀಪ' ದಲ್ಲಿದೆ. ಅಲ್ಲಿ ಬಿರುಗಾಳಿಗೆ ತುತ್ತಾದ ಸಣ್ಣ ವಿಕಲಾಂಗ ಹುಡುಗನನ್ನು ಚಿತ್ರದ ನಾಯಕ (ರಾಘವೇಂದ್ರ ರಾಜ್ಕುಮಾರ್) ರಕ್ಷಿಸಿ ದೋಣಿಯಲ್ಲಿ ಕರೆತರುವ ದೃಶ್ಯ. ಈ ಚಿತ್ರದ ಚಿತ್ರೀಕರಣವೆಲ್ಲಾ ನಡೆದಿರುವುದು ದಕ್ಷಿಣದ ಬೇಕಲ ಕೋಟೆಯಿಂದ ಉತ್ತರದ ಮಲ್ಪೆಯವರೆಗಿನ ಪಶ್ಚಿಮದ ಕರಾವಳಿಯಲ್ಲಿ.

ನಾಯಕ ಕಾನೂನು ಓದಿ ಹದಿಹರೆಯದ ಕನಸು ಕಾಣುವ ಯುವಕನಂತೆ ದೂರದ ಬೆಂಗಳೂರಿಗೆ ಹೋಗಿ ಅಲ್ಲಿ ಲಾ ಪ್ರಾಕ್ಟೀಸ್ ಮಾಡುವ ಮನಸ್ಸಿನವನು. ಆದರೆ ಅವನು ಊರಿಗೆ ಬಂದಾಗ ಅಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದು ಊರಿನ ಶ್ರೀಮಂತನೊಬ್ಬನ ಮಗಳ ಮಾತಿಗೆ ಅಬ್ಬರದ ಅಲೆಗಳ ನಡುವೆಯೂ ಮೀನು ಶಿಕಾರಿ ಮಾಡಿಕೊಂಡು ಬರುತ್ತಾನೆ. ಮಾತುಕತೆಯಾದಂತೆ ಆ ಮೀನು ನಾಯಕನಿಗೆ ಸೇರಬೇಕಾಗಿರುತ್ತದೆ. ಆದರೆ ಅದನ್ನು ಬಿಟ್ಟುಕೊಡಲು ಮನಸಿಲ್ಲದ ಹುಡುಗಿಯ ತಂದೆ ಅವನ ಜೊತೆಗೆ ವೈರತ್ವ ಬೆಳೆಸಿಕೊಳ್ಳುತ್ತಾನೆ. ಮುಂದೆ ನಾಯಕ ಮದುವೆಯಾಗಬೇಕೆಂದಿರುವ ಹುಡುಗಿಯ ತಂದೆ ಗುರಿಕಾರನನ್ನು ಸಾಯಿಸಿ ಮುಂದಿನ ಗುರಿಕಾರ ತಾನೆ ಎಂದು ಬೀಗಿಕೊಳ್ಳುತ್ತಿರುತ್ತಾನೆ. ಆದರೆ ನಾಯಕ ಬೆಂಗಳೂರಿನ ತನ್ನ ಕನಸನ್ನು ಪಕ್ಕಕ್ಕಿಟ್ಟು ತನ್ನ ಜನರಿಗಾಗುವ ಅನ್ಯಾಯವನ್ನು ಮೆಟ್ಟಿ ನಿಲ್ಲುವುದೇ ತಾನು ಮಾಡಬೇಕಾಗಿರುವ ಕರ್ತವ್ಯವೆಂದು ತಿಳಿದುಕೊಳ್ಳುತ್ತಾನೆ. ಹೀಗೆ ಮುಂದುವರಿಯುತ್ತದೆ `ಸಾಗರ ದೀಪ' ದ ಕಥೆ. ಕಡಲಿನ ನ್ಯಾಯ ದೊಡ್ಡ ಮೀನು ಸಣ್ಣ ಮೀನನ್ನು ತಿಂದೇ ಬದುಕೋದು. ಆದರೆ ಇಲ್ಲಿ ಅದು ಅಸಾಧ್ಯವಾಗುತ್ತದೆ. ಹೆಗಲಿನ ಮೇಲೆ ಶನಿ ಕೂತಾಗ ಮನುಷ್ಯನ ಬುದ್ಧಿ ಮಂಕಾಗುತ್ತದೆಯೆನ್ನುವಂತೆ ಸರ್ವಾಧಿಕಾರ ಸ್ಥಾಪಿಸಲು ಹೊರಟವನ ಸೊಕ್ಕು ಮುರಿಯುತ್ತದೆ.

ಸಾಗರದೀಪ ಕೇವಲ ಮನೋರಂಜನಾತ್ಮಕ ಸಿನೆಮಾ ಮಾತ್ರವಲ್ಲ, ಇಲ್ಲಿ ಕನ್ನಡದ ಕರಾವಳಿಯ ಶ್ರೀಮಂತಿಕೆ, ಮೊಗವೀರ ಜನಾಂಗದ ರೀತಿ, ರಿವಾಜುಗಳು, ಭೂತದ ದರ್ಶನ, ಭೂತಾರಾಧನೆ, ಕೋಲ, ನೇಮ, ಕರಾವಳಿಯ ಗಂಡು ಮೆಟ್ಟಿನ ಕಲೆ ಯಕ್ಷಗಾನ, ಬಲೆ ತುಂಬಾ ಭಾಗ್ಯ ತುಂಬೆಂದು ಪ್ರಾರ್ಧಿಸುವ ಗಂಗಾಪೂಜೆ ಮುಂತಾದವುಗಳನ್ನು ಕಾಣಬಹುದು. ಹಾಗೆಯೇ ಸಿನಿಮಾದುದ್ದಕ್ಕೂ ತುಳು ಭಾಷೆಯ ಬಳಕೆಯಾಗಿರುವುದು ಸಿನಿಮಾ ನಮ್ಮೂರಿನದ್ದೇ ಅನ್ನುವಷ್ಟು ಆತ್ಮೀಯವಾಗಿ ಬಿಡುತ್ತದೆ.

ಈ ಚಿತ್ರದಲ್ಲಿ ರಾಘವೇಂದ್ರ ರಾಜ್ಕುಮಾರ್, ಸುಪ್ರಿಯಾ, ಶ್ರೀಭಾರತಿ, ವಜ್ರಮುನಿ, ಶ್ರೀನಾಥ್, ಬಾಲರಾಜ್, ಗಿರಿಜಾ ಲೋಕೇಶ್ ಪ್ರಧಾನ ಭೂಮಿಕೆಯಲ್ಲಿದ್ದಾರೆ. ಸುರತ್ಕಲ್ ಲೈಟ್ ಹೌಸ್, ಬೇಕಲಕೋಟೆ, ಸೈಂಟ್ ಮೇರಿಸ್ ದ್ವೀಪಗಳ ಸೊಬಗು ಸಿನಿಮಾದುದ್ದಕ್ಕೂ ಮುದಗೊಳಿಸುತ್ತದೆ.

- ಅನು ಬೆಳ್ಳೆ.

ಮುಂದೆ ಓದಿ
12:45 PM

ಪ್ರಶಸ್ತಿ ಪ್ರದಾನ

Posted by ekanasu

ರಾಜ್ಯ - ರಾಷ್ಟ್ರ

ಆಳ್ವಾಸ್ ವಿರಾಸತ್ ಅಂಗವಾಗಿ 16ದಿನಗಳ ಕಾಲ ನಡೆದ ಆಳ್ವಾಸ್ ವರ್ಣವಿರಾಸತ್, ಆಳ್ವಾಸ್ ಚಿತ್ರವಿರಾಸತ್ ಸಮಾರೋಪ ಸಮಾರಂಭ ರವಿವಾರ ಮಿಜಾರಿನಲ್ಲಿ ನಡೆಯಿತು. ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಅನಂತ ಕೃಷ್ಣ, ಮೂಡಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು, ಡಾ.ಎಂ.ಮೋಹನ ಆಳ್ವ ಉಪಸ್ಥಿತರಿದ್ದರು. ಕಾರ್ಕಳದ ಕಲಾವಿದ ಪ್ರಸ್ತುತ ಮುಂಬೈನಲ್ಲಿರುವ ವಾಸುದೇವ ಕಾಮತ್ ಅವರಿಗೆ ಈ ಬಾರಿಯ ವರ್ಣ ವಿರಾಸತ್ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಸಂದರ್ಭದಲ್ಲಿ ಪ್ರದಾನಿಸಿ ಗೌರವಿಸಲಾಯಿತು.
ಚಿತ್ರ: ಹರೀಶ್ ಕೆ.ಆದೂರು.

ಮುಂದೆ ಓದಿ

ರಾಜ್ಯ - ರಾಷ್ಟ್ರ


ಪೂರ್ವ ಮತ್ತು ಪಶ್ಚಿಮ ಶಾಸ್ತ್ರೀಯ ಸಂಗೀತ ಸಂಗಮ ಆಳ್ವಾಸ್ ವಿರಾಸತ್ 5ನೇ ದಿನ ನಡೆಯಿತು.

ಚಿತ್ರ:ಅಭಿಲಾಷ್ ಪಿ.ಎಸ್/ಯಶೋಧರ ಬಂಗೇರ

ಮುಂದೆ ಓದಿ

ರಾಜ್ಯ - ರಾಷ್ಟ್ರ
ಚಳಿ ಚಳಿ ತಾಳೆನು ಈ ಚಳಿಯಾ...ಹೌದು...ಇದೀಗ ಚಳಿಯ ಸಮಯ. ಇದು ರಾಜಧಾನಿ ದೆಹಲಿಯಲ್ಲಿ ಅಬ್ಬರದ ಚಳಿ... ದೇಶ ವಿದೇಶದಿಂದ ದೆಹಲಿಗೆ ಆಗಮಿಸಿದ ಮಂದಿ ಚಳಿಯಲ್ಲಿ ತತ್ತರಿಸುತ್ತಿದ್ದಾರೆ. ಚಳಿ ಈ ಬಾರಿ ತೀವ್ರಗೊಂಡಿದೆ. ಚಳಿಯಿಂದ ರಕ್ಷಿಸುವ ಹರ ಸಾಹಸವನ್ನು ಇಲ್ಲಿರುವ ಮಂದಿ ಮಾಡುತ್ತಿದ್ದಾರೆ.




ಚಳಿ ಕರಾವಳಿಯನ್ನೂ ಬಿಟ್ಟಿಲ್ಲ. ಕಳೆದ ವರುಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಚಳಿಯಿದೆ. ಮುಂಜಾನೆ ಇಬ್ಬನಿಯ ಮುತ್ತಿನ ತೋರಣ ಕಾಣಸಿಗುತ್ತದೆ. ಹವಾಮಾನದಲ್ಲಿ ತೀವ್ರ ಬದಲಾವಣೆ ಉಂಟಾಗಿದ್ದು ಕರಾವಳಿಯ ಜನ ಶೀತ, ಜ್ವರದಿಂದ ಬಳಲುತ್ತಿದ್ದಾರೆ.


ವಿಜಯ ಕರ್ನಾಟಕ ಮಂಗಳೂರು ಆವೃತ್ತಿಯ ಛಾಯಾಗ್ರಾಹಕ ಸುಧಾಕರ್ ಎರ್ಮಾಳ್ ದೆಹಲಿಗೆ ಭೇಟಿನೀಡಿದ ಸಂದರ್ಭದಲ್ಲಿ ಚಳಿಯ ಹಾವಳಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿರುವ ದೆಹಲಿಯಲ್ಲಿರುವ ಪ್ರವಾಸಿಗರ ನೋಟವನ್ನು ಸೆರೆಹಿಡಿದು ಈ ಕನಸಿಗಾಗಿ ನೀಡಿದ್ದಾರೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಬೆಂಗಳೂರು: ಖ್ಯಾತ ಹಿಂದೂ ಸ್ಥಾನಿ ಗಾಯಕ ಭಾರತ ರತ್ನ ಪಂಡಿತ್ ಭೀಮ್ ಸೇನ್ ಜೋಶಿ ಅವರ ದೇಹಸ್ಥಿತಿ ಗಂಭೀರವಾಗಿದೆ.ಇದರಿಂದಾಗಿ ಅವರ ಕುಟುಂಬಸ್ಥರು, ಅಭಿಮಾನಿಗಳು ತೀವ್ರ ಆತಂಕ ಅನುಭವಿಸುತ್ತಿದ್ದಾರೆ. ಇದೀಗ ಪುಣೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಪೆಯುತ್ತಿದ್ದು ಅವರನ್ನು ತೀವ್ರನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ. ಭೀಮ್ ಸೇನ್ ಜೋಶಿ ಅವರಿಗೀಗ 88ವರುಷ ವಯಸ್ಸು.ಉಸಿರಾಟದ ತೀವ್ರ ತೊಂದರೆಯಿಂದ ಜೋಶಿ ಬಳಲುತ್ತಿದ್ದಾರೆ. ಕಳೆದ 5ವರುಷಗಳಿಂದ ಭೀಮ್ ಸೇನ್ ಜೋಶಿಯವರು ಅನಾರೋಗ್ಯದಿಂದ ಬಳಲುತ್ತಿದ್ದರು.2009ರಲ್ಲಿ ಭಾರತ ರತ್ನ ಘೋಷಣೆಯಾದಾಗ ಪ್ರಶಸ್ತಿ ಸ್ವೀಕರಿಸಲು ಜೋಶಿ ತೆರಳಲಿಲ್ಲ.ಬದಲಾಗಿ ಅವರಿಗೆ ಅವರ ನಿವಾಸದಲ್ಲಿಯೇ ಪ್ರಶಸ್ತಿನೀಡಿ ಗೌರವಿಸಲಾಗಿತ್ತು.

ಮುಂದೆ ಓದಿ

ರಾಜ್ಯ - ರಾಷ್ಟ್ರ

ವಿರಾಸತ್ ನ ದ್ವಿತೀಯ ಕಲಾಪ್ರಕಾರವಾಗಿ ಕೋಲ್ಕತ್ತಾದ ಅಶಿಮ್ಬಂಧು ಭಟ್ಟಾಚಾರ್ಯ ಮತ್ತು ಬಳಗದವರಿಂದ `ಕಥಕ್ ರಂಗ್ ' ಎಂಬ ವೈಶಿಷ್ಟ್ಯಪೂರ್ಣ ಕಲಾ ಪ್ರದರ್ಶನ ಮೂಡಿಬಂತು. ತದನಂತರ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಮೊತ್ತ ಮೊದಲ ಬಾರಿಗೆ "ವಿರಾಸತ್ ರಾಷ್ಟ್ರೀಯ ವೇದಿಕೆಯಲ್ಲಿ" ಕಲಾಪ್ರದರ್ಶನ ನೀಡುವ ಮೂಲಕ ಕಲಾಸಕ್ತರ ಮನಗೆಲ್ಲುವಲ್ಲಿ ಯಶಸ್ವಿಯಾದರು.
ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ "ನೃತ್ಯ ವೈವಿಧ್ಯ " ಇತರ ರಾಷ್ಟ್ರೀಯಮಟ್ಟದ ಕಲಾವಿದರ ಬಾಯಿಯಲ್ಲೂ ಶಹಬ್ಬಾಸ್ ಗಿರಿ ಪಡೆಯುವಲ್ಲಿ ಯಶಸ್ವಿಯಾಯಿತು.



ಕಲಾಮಂಡಲ ಲತಾ ನಿರ್ದೇಶನದ ಮೋಹಿನಿಯಾಟಂ ಕಲಾ ಪ್ರದರ್ಶನವನ್ನು ಸಂಸ್ಥೆಯ 20 ವಿದ್ಯಾರ್ಥಿಗಳು ಬೃಹತ್ ವೇದಿಕೆಯಲ್ಲಿ ಅಪೂರ್ವರೀತಿಯಲ್ಲಿ ಪ್ರಸ್ತುತ ಪಡಿಸಿದರು.
ಧನಶ್ರೀ ರಾಗ, ಆದಿ ತಾಳದ ಮೂಲಕ ಈ ಕಲಾ ಪ್ರಕಾರ ಮೂಡಿಬಂತು. ಹತ್ತು ನಿಮಿಷಗಳ ಕಾಲ ಸೇರಿದ್ದ ಜನಸ್ತೋಮವನ್ನು ಉಸಿರು ಬಿಗಿಹಿಡಿಯುವಂತೆ ಮಾಡುವಲ್ಲಿ ಈ ನೃತ್ಯಪ್ರದರ್ಶನ ಯಶಸ್ವಿಯಾಯಿತು.
"ನವಗ್ರಹ" ಎಂಬ ವಿಭಿನ್ನ ಪ್ರಯೋಗವೊಂದನ್ನು 9ಮಂದಿ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ದೀಪಕ್ ಪುತ್ತೂರು ನಿರ್ದೇಶಿಸಿರುವ ಈ ಕಲಾ ಪ್ರಕಾರ 21ನಿಮಿಗಳ ಕಾಲ ಪ್ರದರ್ಶನಕಂಡಿತು. ನವಗ್ರಹಗಳ ಸುತ್ತ ಹೆಣೆಯಲ್ಪಟ್ಟ ವಿನೂತನವಾದ ಪ್ರಯೋಗವೊಂದು ರಾಷ್ಟ್ರೀಯ ವೇದಿಕೆಯ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಯಿತು.
17ಮಂದಿ ವಿದ್ಯಾರ್ಥಿನಿಯರು ಪ್ರದರ್ಶಿಸಿದ ವೀರಗಾಸೆ ನೃತ್ಯ ಅಪಾರ ಮನ್ನಣೆಗೆ ಪಾತ್ರವಾಯಿತು. ಮಣಿಪುರದ 9ಮಂದಿ ಕಲಾವಿದರು ಫೂಂಗ್ ಚೋಳಮ್ ಎಂಬ ದೋಲ್ ಚಲೋ ನೃತ್ಯ ಪ್ರದರ್ಶಿಸಿದರು. ಗಿರಕಿ ಹೊಡೆಯುತ್ತಾ ಡೋಲನಲ್ಲಿ ತಾಳ ಹಾಕುತ್ತಾ ನೃತ್ಯ ಪ್ರದರ್ಶಿಸುವ ರೀತಿ ಅಚ್ಚರಿಮೂಡಿಸಿತು.


ಈ ಬಾರಿಯ ವಿರಾಸತ್ ನಲ್ಲಿ ಭಾವೈಕ್ಯತೆಯ ಸಂಗಮವಾಗಿದೆ. ಕ್ರೈಸ್ತ ಸಮುದಾಯದಲ್ಲಿ ಜನಿಸಿದ ಅಮೋಘ ಕಲಾ ಸೇವೆಯನ್ನು ಮೆರೆದ ಅಪೂರ್ವ ಕಲಾವಿದ ಪದ್ಮಭೂಷಣ ಡಾ.ಕೆ.ಜೆ ಯೇಸುದಾಸ್ ಅವರಿಗೆ ಆಳ್ವಾಸ್ ವಿರಾಸತ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ನಡೆಸಲಾಯಿತು.
ದ್ವಿತೀಯ ದಿನದಂದು ಮುಸಲ್ಮಾನ್ ಸಮುದಾಯದ ಪದ್ಮವಿಭೂಷಣ ಉಸ್ತಾದ್ ಅಮ್ಜದ್ ಆಲಿಖಾನ್, ಅಮಾನ್ ಆಲಿ ಖಾನ್ ಹಾಗೂ ಅಯಾನ್ ಆಲಿ ಖಾನ್ ಅವರಿಂದ ಅಪೂವ್ ಸರೋದ್ ತಿಗಲ್ ಬಂದಿಯೂ ನಡೆಯಿತು.
ತೃತೀಯ ದಿನದಂದು ಪಂಡಿತ್ ಜಯತೀರ್ಥ ಮೇವುಂಡಿ , ವಿದ್ವಾನ್ ಅಭಿಷೇಕ್ ರಘುರಾಮ್ ಅವರ ಜುಗಲ್ ಬಂದಿಯೂ ನಡೆಯಿತು. ಇದನ್ನವಲೋಕಿಸಿದರೆ ಹಿಂದೂ , ಮುಸಲ್ಮಾನ್, ಹಾಗೂ ಕ್ರೈಸ್ತ ಈ ಮೂರು ಧಮರ್ೀಯರಿಗೆ ಇಲ್ಲಿ ವಿಶೇಷ ಪ್ರಾಧಾನ್ಯತೆ ನೀಡಿರುವುದು ಕಂಡುಬರುತ್ತದೆ.
ಉತ್ತಮ ಪ್ರೇಕ್ಷಕವರ್ಗವೊಂದರ ಸೃಷ್ಠಿ ಆಳ್ವಾಸ್ ವಿರಾಸತ್ ಮೂಲಕ ನಡೆದಿರುವುದು ಹರ್ಷ ತಂದಿದೆ ಎನ್ನುತ್ತಾರೆ ವಿರಾಸತ್ ರೂವಾರಿ ಡಾ.ಎಂ.ಮೋಹನ ಆಳ್ವ.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಮೂಡಬಿದಿರೆ, ಶೋಭಾವನ : ಗೋಧೂಳಿಯ ಸಮಯ... ನೇಸರ ಪಶ್ಚಿಮದಲ್ಲಿ ಕಣ್ಣಾಮುಚ್ಚಾಲೆಯಾಟವಾಡುತ್ತಿದ್ದ... ಹಕ್ಕಿಗಳು ಸಾಲುಗಟ್ಟಿ ಬಾನಂಗಳದಲ್ಲಿ ಸಾಗುತ್ತಿದ್ದವು... ಮೋಡಗಳು ವರ್ಣಬದಲಾಯಿಸಿದ್ದವು... ಜೀರುಂಡೆಗಳು ಮೆಲ್ಲ ಮೆಲ್ಲದೆ ಝೇಂಕರಿಸಲಾರಂಭಿಸಿದ್ದವು... ಶೋಭಾವನದ ತುಂಬೆಲ್ಲಾ ತುಂಬಿರುವ ಎರಡು ಸಹಸ್ರಕ್ಕೂ ಮಿಕ್ಕಿದ ಔಷಧೀಯ ಸಸ್ಯಗಳ ನಡು ನಡುವೆ ಸಾಗಿಬಂದ ತಂಗಾಳಿ ಮಿಜಾರಿನ ತುತ್ತತುದಿಯಲ್ಲಿ ಸೇರಿದ್ದ 13ಸಾವಿರಕ್ಕೂ ಮಿಕ್ಕಿದ ಕಲಾಸಕ್ತರ ಮೈ ಮನಕ್ಕೆ ಮುದ ನೀಡುತ್ತಿದ್ದವು...




ಅದಾಗಲೇ ಬೃಹತ್ ವೇದಿಕೆಯ ಮೇಲೆ ಅಲಂಕರಿಸಿದ್ದ ಪಂಡಿತ್ ತರುಣ್ ಭಟ್ಟಾಚಾರ್ಯ, ಪಂಡಿತ್ ಪ್ರವೀಣ್ ಗೋಡ್ಕಿಂಡಿ , ಪಂಡಿತ್ ವಿಕ್ರಮ್ ಘೋಷ್ ಕಲಾವಿದರ ಕೈಗಳು ಸಂತೂರ್, ಬಾನ್ಸುರಿ ಹಾಗೂ ತಬ್ಲಾದ ಮೇಲೆಲ್ಲಾ ಹರಿದಾಡುತ್ತಿದ್ದವು...! ಅಮೋಘ ಸ್ವರ ಸಂಗೀತಗಳ ಸುಮಧುರ ನಾದಗಳು ಆ ಪರಿಕರಗಳಿಂದ ಹೊರಸೂಸಲಾರಂಭಿಸಿದವು... ವ್ಹಾವ್... ಸೇರಿದ್ದ ಕಲಾಸಕ್ತರೂ ಮೈಮರೆತರು...ತಲೆದೂಗಿದರು... ಕುಳಿತಲ್ಲೇ ಅವರ ಕೈಗಳು ತಾಳಹಾಕಲಾರಂಭಿಸಿದವು... ಆ ರೀತಿಯಲ್ಲಿ ಅಪೂರ್ವ ಜುಗಲ್ ಬಂದಿಗೆ ಆಳ್ವಾಸ್ ವಿರಾಸತ್ನ ನಾಲ್ಕನೇ ದಿನ ಕಾರ್ಯಕ್ರಮ ಸಾಕ್ಷಿಯಾಗುವಂತಾಯಿತು.
ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ಮಿಜಾರಿನ ಶೋಭಾವನದಲ್ಲಿ ನಡೆಯುತ್ತಿರುವ 19ನೆಯ ವರುಷದ " ಆಳ್ವಾಸ್ ವಿರಾಸತ್ 2011"ರ ನಾಲ್ಕನೇ ದಿನದ ಮೊದಲ ಕಾರ್ಯಕ್ರಮ ಅಪೂರ್ವ " ಜುಗಲ್ ಬಂದಿ" ಹೆಸರೇ ಸೂಚಿಸುವಂತೆ "ಅಪೂರ್ವ" ಎಂದೆನಿಸಿತು. ಖ್ಯಾತ ಕಲಾವಿದರ ಅನುಭವದ ಕಲಾ ಪ್ರಕಾರಗಳ ಪ್ರದರ್ಶನ ಬೆರಗುಹುಟ್ಟಿಸಿದವು. ಎರಡು ಗಂಟೆಗಳ ಕಾಲ ಖ್ಯಾತ ಕಲಾವಿದರು ಸಂತೂರ್, ಬಾನ್ಸುರಿ, ತಬ್ಲಾಗಳ ಮೂಲಕ ಕಲಾಪ್ರತಿಭೆಯನ್ನು ಸಾದರಪಡಿಸಿದರು. ಕಲಾಸಕ್ತರು ಹಂತ ಹಂತದಲ್ಲೂ ಚಪ್ಪಾಳೆಯ ಮೂಲಕ ತಮ್ಮ ಪ್ರೋತ್ಸಾಹವನ್ನು ವ್ಯಕ್ತಪಡಿಸಿದರು.

ಮುಂದೆ ಓದಿ

ರಾಜ್ಯ - ರಾಷ್ಟ್ರ
ನಿಮ್ಮ ಹೊರ ಮೈ ಬಣ್ಣ
ಸೂರೆಗೊಂಡಿತು ಕಣ್ಣ...
ನಿಮ್ಮ ಕನಸಿನ 'ನೋಟ...'
ಬಲು ವಿಶಿಷ್ಟ
ಸಾರುತಿಹ ವಿದ್ಯೆ
ಬಹು ವೈವಿದ್ಯ...
ನೀಡುತಿದೆ ನಿತ್ಯ ಸಂತಸ
ನಿಮ್ಮ ಸಾಹಿತ್ಯ...
e kanasaಲ್ಲ ಅಣ್ಣ
ಇದು e nanasu..
- ಜ್ಞಾನ ಮೂರ್ತಿ. ಬಿ.ಆರ್.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಶಬರಿಮಲೆ : ಶ್ರೀ ಕ್ಷೇತ್ರ ಶಬರಿಮಲೆ ಅಯ್ಯಪ್ಪ ಕ್ಷೇತ್ರದಲ್ಲಿ ಇಂದು ಮಕರ ಜ್ಯೋತಿ.ದೇಶ ವಿದೇಶಗಳಿಂದ ಆಗಮಿಸಿದ ಸಹಸ್ರಾರು ಸಂಖ್ಯೆಯ ಅಯ್ಯಪ್ಪ ಭಕ್ತರು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.ಇರುಮುಡಿ ಕಟ್ಟಿನೊಂದಿಗೆ ಕ್ಷೇತ್ರದ ದರ್ಶನಕ್ಕೆ ಪ್ರವಾಹೋಪಾದಿಯಲ್ಲಿ ಭಕ್ತ ಜನಸಾಗರವೇ ಶ್ರೀ ಕ್ಷೇತ್ರದತ್ತ ಹರಿದುಬರುತ್ತಿದೆ. ಕಳೆದ ಎರಡು ತಿಂಗಳುಗಳಿಂದ ಶ್ರೀ ಕ್ಷೇತ್ರಕ್ಕೆ ವೃತಾಧಾರಿ ಭಕ್ತಾಧಿಗಳು ಆಗಮಿಸುತ್ತಿದ್ದಾರೆ. ಒಟ್ಟಾರೆಯಾಗಿ ಕಳೆದೆರಡುತಿಂಗಳುಗಳಿಂದ ಈ ಕ್ಷೇತ್ರಕ್ಕೆ ಆಗಮಿಸಿದ ಭಕ್ತರ ಸಂಖ್ಯೆ ಐದಾರು ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ.




ವೃಶ್ಚಿಕಾ ತಿಂಗಳ ಮೊದಲ ಭಾಗದಲ್ಲಿ ಶಬರಿಮಲೆ ಅಯ್ಯಪ್ಪ ಕ್ಷೇತ್ರಕ್ಕೆ ಭಕ್ತಾಧಿಗಳ ಯಾತ್ರೆ ಆರಂಭವಾದರೆ ಮಕರ ತಿಂಗಳ ಮೊದಲ ವಾರ ಈ ಯಾತ್ರೆ ಮುಕ್ತಾಯಗೊಳ್ಳುವುದು ವಾಡಿಕೆ. ಶ್ರೀ ಕ್ಷೇತ್ರದಲ್ಲಿ ದೇವರಿಗೆ ಪೂಜೆ ಆಗುತ್ತಿದ್ದಂತೆ 3ಬಾರಿ ಅದೃಶ್ಯ ಶಕ್ತಿಯೊಂದು ದೂರದ ಬೆಟ್ಟದಲ್ಲಿ ಗೋಚರವಾಗುತ್ತದೆ. ಜ್ಯೋತಿಯ ರೂಪದಲ್ಲಿ ಭಕ್ತಾಧಿಗಳಿಗೆ ಇದು ದರ್ಶನ ನೀಡುತ್ತದೆ. ಸೇರಿದ್ದ ಲಕ್ಷಾಂತರ ಭಕ್ತರು ಏಕ ಕಂಠದಲ್ಲಿ ಸ್ವಾಮಿಯೇ ಶರಣಮಯ್ಯಪ್ಪ ಎಂಬ ಘೋಷವಾಕ್ಯವನ್ನು ಮೊಳಗಿಸುತ್ತಾರೆ. ಕಾನನ ಗರ್ಭದ ತನಕವೂ ಈ ದೇವರ ನಾಮ ಸ್ಮರಣೆ ಮೊಳಗುತ್ತದೆ. ಅದೊಂದು ರೋಮಾಂಚನ ಕ್ಷಣ ಎಂಬಂತೆ ಭಾಸವಾಗುತ್ತದೆ.

ಶಬರಿಮಲೆ ಕ್ಷೇತ್ರವು ಸಮುದ್ರ ಮಟ್ಟದಿಂದ 914 ಮೀಟರ್ ಎತ್ತರದಲ್ಲಿದ್ದು ಗಿರಿಯ ಮೇಲೆ ಅತ್ಯಂತ ರಮ್ಯಸ್ವರೂಪದಲ್ಲಿ ನಿರ್ಮಾಣಗೊಂಡಿದೆ.ಪಂಪೆಯಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿ ಈ ಕ್ಷೇತ್ರವಿದೆ. ಇದೀಗ ಭಕ್ತ ಜನ ಸಾಗರ ಈ ಭಾಗದಲ್ಲಿ ಕಾಣತೊಡಗಿದ್ದಾರೆ.



ಶ್ರೀಕ್ಷೇತ್ರಕ್ಕೆ ಸಾಗಲು ಭಕ್ತಾಧಿಗಳು ಕೆಲವೊಂದು ಕಟ್ಟುಕಟ್ಟಲೆಗಳನ್ನು ವೃತಾಚರಣೆಗಳನ್ನು ಅನುಸರಿಸುತ್ತಾರೆ. 41ದಿನಗಳ ವೃತ, ಕಾಲ್ನಡಿಗೆಯಲ್ಲಿ ಸಾಗುವ ಸಂಪ್ರದಾಯ , ಹಲವಾರು ಕ್ಷೇತ್ರ ದರ್ಶನದ ನಂತರ ಶ್ರೀ ಅಯ್ಯಪ್ಪ ದರ್ಶನ, ಹದಿನೆಂಟು ಮೆಟ್ಟಲೇರಿ , ಮಾಲಾಧಾರಿಯಾಗಿ ಕ್ಷೇತ್ರ ದರ್ಶನ ಗೈಯುವುದು ಇದೆಲ್ಲವೂ ಒಂದು ವಿಶಿಷ್ಠ ಆಚರಣೆಯಾಗಿದೆ. ಪ್ರತೀ ವರುಷವೂ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈ ಬಾರಿ ಹೆಚ್ಚುವರಿ ಬಸ್ಸು, ರೈಲು ಸೇವೆಯನ್ನು ಅಳವಡಿಸಲಾಗಿದೆ. ಯಾತ್ರಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಕೈಗೊಳ್ಳಲಾಗಿದೆ.
ಭಕ್ತಾಧಿಗಳು ಜ್ಯೋತಿಯ ದರ್ಶನಗೈದು ಮರಳುತ್ತಾರೆ.

ಮುಂದೆ ಓದಿ
| | |Home