ಈ ಕನಸು

ಇದು ವರ್ಷದ ಕನಸು

ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com

ರಾಜ್ಯ - ರಾಷ್ಟ್ರ


ಉಜಿರೆ: ಈ ಕನಸು.ಕಾಂ 3ನೇ ವರುಷಕ್ಕೆ ಕಾಲಿಟ್ಟಿದ್ದು ವಾರ್ಷಿಕ ಪ್ರಶಸ್ತಿಯೊಂದನ್ನು ಈ ಕನಸು.ಕಾಂ ಪ್ರಾರಂಭಿಸಿದೆ ಎಂದು ಸಂಪಾದಕ ಹರೀಶ್ ಕೆ.ಆದೂರು ತಿಳಿಸಿದ್ದಾರೆ. ಯುವಜನತೆ,ವಿದ್ಯಾರ್ಥಿಗಳಲ್ಲಿ ಪತ್ರಿಕಾರಂಗದ ಬಗ್ಗೆ ಆಸಕ್ತಿ ಬೆಳೆಸುವ ಸದುದ್ದೇಶದಿಂದ ಈ ಕನಸು ವಿದ್ಯಾರ್ಥಿ ವಾರ್ಷಿಕ ಪ್ರಶಸ್ತಿ ಪ್ರಾರಂಭಗೊಂಡಿದೆ. ವಿದ್ಯಾರ್ಥಿಗಳಿಗಾಗಿ ಈ ಪ್ರಶಸ್ತಿಯನ್ನು ಪ್ರಾರಂಭಿಸಲಾಗಿದೆ ಎಂದವರು ತಿಳಿಸಿದ್ದಾರೆ. ನಿರಂತರ ವೈವಿಧ್ಯಮಯ ಲೇಖನ ,ಬರಹಗಳನ್ನು ಬರೆಯುವ ಮೂಲಕ ಪ್ರಶಸ್ತಿ ಗೆಲ್ಲಬಹುದಾಗಿದೆ.

ಮುಂದೆ ಓದಿ
9:38 PM

ವರ್ಷಾಚರಣೆ...

Posted by ekanasu

ರಾಜ್ಯ - ರಾಷ್ಟ್ರ
ಈ ಕನಸು.ಕಾಂ.ವರ್ಷಾಚರಣೆ ಸಂಭ್ರಮ ಉಜಿರೆ ಶ್ರೀ.ಧ.ಮಂ.ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ ಸೋಮವಾರ ನಡೆಯಿತು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರೊ.ಭಾಸ್ಕರ ಹೆಗಡೆ, ಈ ಕನಸು.ಕಾಂ ಸಂಪಾದಕ ಹರೀಶ್ ಆದೂರು ಉಪಸ್ಥಿತರಿದ್ದರು.

ಮುಂದೆ ಓದಿ
10:41 PM

ಒಂದು ಹಿನ್ನೋಟ...

Posted by ekanasu

ಆತ್ಮೀಯ ಅಭಿಮಾನಿ ಓದುಗ ಮಿತ್ರರೇ...
ಮೊತ್ತ ಮೊದಲನೆಯದಾಗಿ ನಿಮಗೆ ಕೃತಜ್ಞತೆಗಳು.
ಈ ಕನಸು.ಕಾಂ ಇಂದಿಗೆ ಎರಡು ವರುಷಗಳನ್ನು ಪೂರೈಸಿ ಮೂರನೇ ವರುಷಕ್ಕೆ ಕಾಲಿಡುತ್ತಿದೆ. ಇದಕ್ಕೆ ಮೊತ್ತ ಮೊದಲ ಕಾರಣೀಕರ್ತರು ಓದುಗ ಮಿತ್ರರು!.ಅದಕ್ಕಾಗಿ ಮೊತ್ತ ಮೊದಲ ಕೃತಜ್ಞತೆಗಳು, ನಮನಗಳು ನಿಮಗೆ ಸಲ್ಲಬೇಕಾಗಿದೆ!
"ಈ ಕನಸು.ಕಾಂ" ಇದು ನಿಮ್ಮಿಂದ ಸಾಧ್ಯವೇ? ಎಷ್ಟುದಿನ ನೀವು ನಡೆಸುತ್ತೀರಿ...? ಇದೆಲ್ಲಾ ಆಗುವ ಹೋಗುವ ಕೆಲಸವಲ್ಲ...ಹೀಗೆ ಹತ್ತು ಹಲವು ಋಣಾತ್ಮಕ ಮಾತುಗಳು ಈ ಕನಸಿನ ಆರಂಭದ ದಿನಗಳಲ್ಲಿ ಕೇಳಿಬಂದಿದ್ದವು. ಅನೇಕ ಮಂದಿ ದೂರದಲ್ಲಿ ನಿಂತು ಗೊಳ್ಳೆಂದು ನಕ್ಕರು. ಇವರಿಗೆ ಹುಚ್ಚು ಎಂದು ಹೇಳಿದರು... ಹೌದು. ನಮಗೆ ಹುಚ್ಚು...ಆ ಹುಚ್ಚಿದ್ದದಿಂದಲೇ ಇಂದು ಈ ಕನಸು ಯಶಸ್ವಿಯಾಗಿ 2ವರುಷ ಪೂರೈಸಿ ಮೂರನೇ ವರುಷಕ್ಕೆ ಹೆಮ್ಮೆಯಿಂದ ಕಾಲಿಡುತ್ತಿದೆ!



ಈ ಕನಸು.ಕಾಂ ಒಂದು ಪುಟ್ಟ ಬಾಲೆ. ಆರ್ಥಿಕ ಸದೃಢತೆಯನ್ನು ಹೊಂದಿಲ್ಲ. ಯಾವುದೇ ದೊಡ್ಡ ಸಂಸ್ಥೆಯ ಬೆಂಬದಿಂದ ಬದುಕುತ್ತಿಲ್ಲ.ಇದೇನಿದ್ದರೂ ಬರಹಗಾರರಿಗೆ ಒಂದು ಮುಕ್ತ ವೇದಿಕೆ ಆಗಬೇಕೆಂಬ ಉದ್ದೇಶಹೊಂದಿ ಕಾರ್ಯಾಚರಿಸುತ್ತಿದೆ. ಮಾಧ್ಯಮ ರಂಗ ಪ್ರಸಕ್ತ ದಿನಗಳಲ್ಲಿ ಉದ್ಯಮವಾಗಿ ಬದಲಾಗುತ್ತಿದ್ದಂತೆ ಮಾಧ್ಯಮ ಕೇವಲ ವಾಣಿಜ್ಯ ಸರಕಾಗಿ ಓದುಗರಿಗೆ "ನಾವು ಕೊಟ್ಟದ್ದನ್ನು ನೀವು ಓದಿ/ಕೇಳಿ/ವೀಕ್ಷಿಸಿ" ಎಂಬಂತೆ ಬದಲಾಗಿದೆ. ಮಾಧ್ಯಮ ರಂಗದ ನೈತಿಕತೆ ಮಾಯವಾಗಿದೆ. ಗಟ್ಟಿದನಿ ಅಡಗಿಹೋಗಿದೆ. ಮಾಧ್ಯಮ ರಂಗದಲ್ಲಿ (ಈಗಿನ ಪತ್ರಿಕೋದ್ಯಮದಲ್ಲಿ!)ಕಾರ್ಯನಿರ್ವಹಿಸುವ ಮಂದಿ ಇಂದು "ಕೈ ಚಾಚಿ" ಅಪವಿತ್ರರಾಗುತ್ತಿದ್ದಾರೆ.(ಇದು ಎಲ್ಲರಿಗು ಅನ್ವಯವಾಗುವುದಿಲ್ಲ. ಅನೇಕ ಮಾಧ್ಯಮ ಮಿತ್ರರು ಇನ್ನೂ ಮಡಿವಂತಿಕೆ ಉಳಿಸಿಕೊಂಡಿದ್ದಾರೆ ಎಂಬುದು ಗಮನಾರ್ಹ.). ವೇದಿಕೆಯೇರಿ ಭಾಷಣ ಬಿಗಿಯುವುದು, ತಮ್ಮ ತಮ್ಮ ಅಂಕಣದಲ್ಲಿ ದೊಡ್ಡ ದೊಡ್ಡ ಹೇಳಿಕೆಗಳನ್ನು ನೀಡಿ ತಾವು ಸಾಚಾ ಎಂಬ ಫೋಸ್ ನೀಡುತ್ತಾ ಸಮಾಜದೆದುರು ಹೀರೋಗಳಾದರೆ ಒಳಗೊಳಗೇ ಹುಳುಕುಗಳನ್ನು ಹೊಂದಿ ಮತ್ತೊಂದೆಡೆ ಸಮಾಜದಲ್ಲೇ ಅಪಹಾಸ್ಯಕ್ಕೀಡಾಗುತ್ತಿರುವ ಇಂದಿನ ಮಾಧ್ಯಮ/ಮಾಧ್ಯಮ ಮಂದಿಯ ಸ್ಥಿತಿಗತಿಗಳು ಮರುಕ ಹುಟ್ಟಿಸುತ್ತದೆ.

ಆದರೆ ಈ ಕನಸು.ಕಾಂ ಇಂತಹ ಮಾಧ್ಯಮಗಳಿಗಿಂತ ಭಿನ್ನವಾಗಿದೆ ಎಂದು ಎದೆತಟ್ಟಿ ಹೇಳಿಕೊಳ್ಳುತ್ತಿದೆ. ಯಾವುದೇ ರೀತಿಯ ವಾಣಿಜ್ಯ ದೃಷ್ಟಿಕೋನವನ್ನು ಹೊಂದಿರದೆ ಕೇವಲ ಬರಹಗಾರರಿಗೆ ಒಂದು ವೇದಿಕೆಯಾಗಬೇಕು, ಸತ್ಯ,ನಿಷ್ಠ ಸುದ್ದಿ/ಲೇಖನ/ವಿಮರ್ಶೆ ಓದುಗರಿಗೆ ದೊರಕಬೇಕು , ಪತ್ರಿಕಾ ರಂಗದ ಪಾವಿತ್ರ್ಯತೆಯನ್ನು ಉಳಿಸಿ ಬೆಳೆಸಬೇಕು ಎಂಬ ಧ್ಯೇಯೋದ್ದೇಶದೊಂದಿಗೆ ಈ ಕನಸು.ಕಾಂ ಕಾರ್ಯೋನ್ಮುಖವಾಗಿದೆ. ಇದರಲ್ಲಿ ಕಳೆದೆರಡು ವರುಷಗಳಲ್ಲಿ ಸಫಲತೆಯನ್ನೂ ಕಂಡಿದೆ.

ಯಾವುದೇ ರೀತಿಯಲ್ಲೂ ಜಾಹೀರಾತುಗಳ ವಾಸನೆಯಿಲ್ಲದೆ; ಪಕ್ಷ, ಜಾತಿ, ಧರ್ಮ, ಪಂಥಗಳ ಓಲೈಕೆಯಿಲ್ಲದೆ ಸುದ್ದಿ/ವಿಶೇಷ ವರದಿ/ಲೇಖನ/ ವಿಮರ್ಶೆ/ವೈವಿಧ್ಯ/ಛಾಯಾಚಿತ್ರ/ಸಾಹಿತ್ಯ ಹೀಗೆ ಹತ್ತು ಹಲವು ಭಿನ್ನ ವಿಭಿನ್ನ ಕ್ಷೇತ್ರಗಳ ಮೂಲಕ ಓದುಗರಿಗೆ ನಿರಂತರ ವಿಚಾರಗಳನ್ನು ನೀಡುತ್ತಾ ತನ್ನ ವ್ಯಾಪ್ತಿಯಲ್ಲಿ ಉತ್ತಮ ಕಾರ್ಯನಿರ್ವಹಣೆಯನ್ನು ಮಾಡಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ.

ಹತ್ತು ಹಲವು ಬರಹಗಾರರನ್ನು ಬೆಳೆಸಿದೆ. ಸುಪ್ತ ಸಾಮರ್ಥ್ಯಗಳನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡುವಲ್ಲಿ ಈ ಕನಸು ಯಶಸ್ವಿಯಾಗಿದೆ. ಅಶಕ್ತರಿಗೆ ಆಸರೆಯಾಗುವಲ್ಲಿ ತನ್ನದೇ ಪ್ರಯತ್ನ ನಡೆಸಿದೆ. ಉದಯೋನ್ಮುಖ ಬರಹಗಾರರ ಬರಹಗಳಿಗೆ ಅವಕಾಶ ನೀಡಿದೆ.ಇದೆಲ್ಲವೂ ದೊಡ್ಡ ಸಾಧನೆಯಲ್ಲ. ಬದಲಾಗಿ ಈ ಕನಸಿಗೆ ಇವೆಲ್ಲವೂ ತೃಪ್ತಿ ನೀಡಿದ ಕಾರ್ಯಗಳು.

ಕನ್ನಡದ ಮೊದಲ ಪತ್ರಿಕೆ ಆರಂಭಗೊಂಡ ಮಂಗಳೂರಿನಲ್ಲಿಯೇ ಮಂಗಳೂರಿನ ಮೊದಲ ಕನ್ನಡ ಅಂತರ್ಜಾಲ ಪತ್ರಿಕೆಯಾಗಿ "ಈ ಕನಸು.ಕಾಂ"ಮೂಡಿಬಂದಿದೆ ಎಂಬುದು ಹೆಮ್ಮೆ ತಂದ ವಿಷಯ.
ಆರಂಭದಲ್ಲಿ ಅಂಕಣ ನೀಡಿ ಸಹಕರಿಸಿದ ಹಿರಿಯರನೇಕರ ಸಹಕಾರ ಎಂದೆಂದಿಗೂ ಮರೆಯುವಂತಿಲ್ಲ. ಒಂದಷ್ಟುಕಾಲ ಜೊತೆಗಿದ್ದ ಮಿತ್ರರನ್ನೂ ಮರೆಯುವಂತಿಲ್ಲ. ಮೆರೆದಂತಹ ನೆನಪು ನೀಡಿಹೋದ ಅನೇಕರ ನೆನಪುಗಳು ಈ ಕನಸಿನಲ್ಲಿ ಮಾಸುವುದೂ ಇಲ್ಲ. ಇಷ್ಟೆಲ್ಲಾ ಆಗಿದ್ದರೂ ಈ ಕನಸು ಇಂದಿಗೂ ಆ ನಿರಂತರತೆಯನ್ನು ಕಾಯ್ದುಕೊಂಡಿದೆ. ಹೊಸ ಪ್ರಯೋಗಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಾ ಯಶ ಪಡೆದಿದೆ.
ಹತ್ತು ಹಲವು ವಿಶೇಷ ವರದಿಗಳ ಮೂಲಕ ಓದುಗರ ಮನಗೆದ್ದಿದೆ. ನೇರ ವರದಿಗಳನ್ನು ಕನ್ನಡ ವೆಬ್ ಮಾಧ್ಯಮದಲ್ಲಿ ಮಾಡುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಿದೆ. ಹಲವು ಹೊಸ ವಿಚಾರಗಳಿಗೆ ಈ ಕನಸು ವೇದಿಕೆಯಾಗಿದೆ. ನೂರಾರು ಸುದ್ದಿಗಳನ್ನು ಮೊದಲು ವರದಿಮಾಡುವ ಮೂಲಕ " ಈಕನಸು.ಕಾಂ" ಇತರ ಮಾಧ್ಯಮಗಳಿಗಿಂತ ಭಿನ್ನ ಎಂಬುದನ್ನು ಹಲವು ಬಾರಿ ಸಾಬೀತು ಪಡಿಸಿದೆ.ಹೆಜ್ಜೆ ಹೆಜ್ಜೆಗೆ ಸವಾಲುಗಳನ್ನು ಎದುರಿಸಿ, ಏಳು ಬೀಳುಗಳ ಮಧ್ಯೆ, ಮುಳ್ಳ ಹಾದಿ ತುಳಿದು ಈ ಕನಸು.ಕಾಂ ಎರಡು ವರುಷಗಳನ್ನು ಪೂರೈಸಿದೆ.

ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪೂರ್ಣಾನುಗ್ರಹ ಈ ಕನಸು.ಕಾಂ ಮೇಲಿದೆ ಎಂಬುದು ಸಂತಸದ ವಿಷಯ.
ಬಜಪೆಯ ದೀಪ್ ಕಿರಣ್ ಈ ಕನಸಿನ ತಾಂತ್ರಿಕ ಸಲಹೆಯಲ್ಲಿ ಕೈಜೋಡಿಸಿದ್ದಾರೆ. ಅನೇಕ ಮಂದಿ ಹೊಸ ಅಂಕಣಗಾರರು ನಿರಂತರ ಈ ಕನಸಿಗೆ ಬರಹಗಳನ್ನು ನೀಡುತ್ತಾ ಪ್ರೋತ್ಸಾಹಿಸುತ್ತಿದ್ದಾರೆ. ಒಂದಷ್ಟು ಹಿರಿ ಕಿರಿಯ ಲೇಖಕರ ಬರಹಗಳು ಈ ಕನಸಿನಲ್ಲಿ ಈ ತನಕ ಮೂಡಿಬಂದಿದೆ. ಮುಂದೆಯೂ ವೈವಿಧ್ಯಮಯ ಲೇಖನ, ಹೊಸ ವಿಚಾರಗಳು ಮೂಡಿಬರಲಿದೆ. ಆರೋಗ್ಯ,ಶಿಕ್ಷಣ, ಸಾಹಿತ್ಯ, ವೈವಿಧ್ಯ, ವಿಶೇಷ ವರದಿಗಳು ನಿರಂತರವಾಗಿ ಇನ್ನಷ್ಟು ಓದುಗರ ಮನತಲುಪಲಿದೆ.

ಬರಹಕೊಡುತ್ತೇನೆಂದು ಆಶ್ವಾಸನೆ ನೀಡಿದ ; ನಂತರ ಮರೆತ ಅನೇಕ ಮಿತ್ರರು ಈಗ ನೆನಪಿಗೆ ಬರುತ್ತಾರೆ. ಕೇವಲ ಒಂದು ಮಿಂಚಂತೆಗೆ ಪ್ರತಿಕ್ರಿಯಿಸಿ ಬರಹಗಳ ರಾಶಿಯನ್ನೇ ಕಳುಹಿಸಿದ ಆತ್ಮೀಯ ಮಿತ್ರರು ಸದಾ ನೆನಪಿನಲ್ಲಿದ್ದಾರೆ. ಪ್ರತ್ಯಕ್ಷ , ಪರೋಕ್ಷವಾಗಿ ಸಹಕರಿಸಿದ ಎಲ್ಲ ಓದುಗ ಅಭಿಮಾನಿಗಳಿಗೂ ಈ ಕನಸು ಋಣಿಯಾಗಿದೆ.

ತಾಂತ್ರಿಕ ಸಮಸ್ಯೆಗಳು ಈ ಕನಸಿನಲ್ಲಿ ಕಾಣಿಸಿಕೊಂಡಾಗ ಓದುಗರು ಮನ್ನಿಸಿದ್ದಾರೆ. ಮುಂದೆಯೂ ಓದುಗ ಮಿತ್ರರ, ಬರಹಗಾರರ ಪ್ರೋತ್ಸಾಹ ಬೆಂಬಲ ಇನ್ನೂ ಹೆಚ್ಚಿನ ರೀತಿಯಲ್ಲಿ ಈ ಕನಸಿನ ಮೇಲಿರಲಿ ಎಂಬ ಆಶಯ ನಮ್ಮದು.
ಪ್ರೀತಿಯಿಂದ ಹೆಜ್ಜೆ ಹಾಕೋಣ...ವರ್ಷದ ಕನಸನ್ನು ಮುನ್ನಡೆಸೋಣ....ಜೊತೆಯಾಗಿ ಸಾಗೋಣ ನಾವು ನೀವು...ಎಲ್ಲರೂ...
ಶುಭವಾಗಲಿ...

ಟೀಂ ಈ ಕನಸು ಜೊತೆ ಸಂಪಾದಕ.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಹಿರಿಯ ಲೇಖಕಿ ವೈದೇಹಿಯವರು ಈ ಕನಸಿಗೆ ಬರೆಯುತ್ತಾರೆ. ಈ ಕನಸನ್ನು ಮೆಚ್ಚಿ ಮುಕ್ತವಾಗಿ ನಾಲ್ಕುಮಾತುಗಳನ್ನು ಈಗಾಗಲೇ ಆಡಿದ್ದಾರೆ.ಅತ್ಯಂತ ಸರಳ ವ್ಯಕ್ತಿತ್ವದ ವೈದೇಹಿಯವರು ಆಳ್ವಾಸ್ ನುಡಿಸಿರಿ 2010ರ ಸರ್ವಾಧ್ಯಕ್ಷರಾಗಿ ಸಾಹಿತ್ಯ ಪ್ರೇಮಿಗಳ ಮನಗೆದ್ದಿರುವುದು ಸತ್ಯ. ನಿರಂತರ ಸಾಹಿತ್ಯ ಕೃಷಿಯ ಮೂಲಕ ಮನೆಮಾತಾಗಿದ್ದಾರೆ.ವೈದೇಹಿಯವರ ಪ್ರೀತಿ, ವಾತ್ಸಲ್ಯ ಮರೆಯುವಂತಹುದಲ್ಲ.ಅದು ಅನುಭವಿಸಿದವರಿಗಷ್ಟೇ ಗೊತ್ತು. ಇದೀಗ ಈ ಕನಸಿನಲ್ಲಿ ವೈದೇಹಿಯವರ ಬರಹ ಮೂಡಿಬರಲಿದೆ. ನಿರೀಕ್ಷಿಸಿರಿ...
-ಟೀಂ ಈ ಕನಸು.



Dear Harish,

Opened ekanasu.com and found it very lively. You are covering many a lot subjects and people, news, photos. I liked the creative eye behind all the columns. Very happy.


Hope u all the best.

congratulations,

Vaidehi

ಮುಂದೆ ಓದಿ
9:57 PM

ಶುಭಾಶೀರ್ವಾದ

Posted by ekanasu

ರಾಜ್ಯ - ರಾಷ್ಟ್ರ

ಪ್ರೀತಿಯ ಹರೀಶಾ,
ಸದಾ ಸರ್ವದಾ ನಿನ್ನೊಂದಿಗೆ - ಈ ಕನಸಿನೊಂದಿಗೆ ಇದ್ದೇ ಇರುವೆವು. ಮುಂದೆ ಸಾಗಲಿ ಈ ಕನಸಿನ ತೇರು. ವಿಜಯೀ ಭವ... ಒಳಿತಾಗಲಿ.

ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು
ಶ್ರೀ ರಾಮಚಂದ್ರಾಪುರ ಮಠ
ಹೊಸನಗರ

ಮುಂದೆ ಓದಿ
12:03 AM

ದೂರು ಸ್ವೀಕರಿಸಿ...

Posted by ekanasu

ಪ್ರಾದೇಶಿಕ ಸುದ್ದಿ
ಮಂಗಳೂರು: ಕುಡುಕ ಗಂಡನ ಕಿರುಕುಳ,ಕಾಮುಕ ಗಂಡಸರ ದೌರ್ಜನ್ಯ,ವರದಕ್ಷಿಣೆ ಜಗಳ ಇತ್ಯಾದಿಗಳಿಂದ ನೊಂದ ಮಹಿಳೆ ಪರಿಹಾರಕ್ಕಾಗಿ ನ್ಯಾಯ ಬೇಡಿ ದೂರು ನೀಡಲು ಬಂದಾಗ ಅಂತಹವರ ದೂರುಗಳನ್ನು ಸಮಚಿತ್ತದಿಂದ ಆಲಿಸಿ ಸ್ವೀಕರಿಸುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಮಂಜುಳಾ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ದ.ಕ.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಮಹಿಳೆಯರಿಗೆ ಹೇಗೆ ರಕ್ಷಣೆ ನೀಡಲಾಗುತ್ತಿದೆ ಎಂಬ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು,ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಮಾತನಾಡುತ್ತಿದ್ದರು.


ಜಿಲ್ಲೆಯಲ್ಲಿ ನಿರಾಶ್ರಿತ ಮಹಿಳೆಯರು ಹಾಗೂ ಗಂಡ ಅಥವಾ ಕುಟುಂಬದವರ ದೌರ್ಜನ್ಯಕ್ಕೊಳಗಾಗಿ ಆಶ್ರಯ ಬೇಡಿ ಬಂದವರಿಗೆ ತಾತ್ಕಾಲಿಕ ವಸತಿ ಸೌಕರ್ಯಕ್ಕೆ ಇದ್ದದ್ದೊಂದು ಸ್ವೀಕಾರ ಕೇಂದ್ರ ಬಂದ್ ಆಗಿರುವುದರಿಂದ ತುಂಬಾ ತೊಂದರೆಯಾಗಿರುವ ಬಗ್ಗೆ,ಸಾಂತ್ವನ ಮಹಿಳಾ ಸಹಾಯವಾಣಿ ಹಾಗೂ ಮಹಿಳಾ ಪುನರ್ ವಸತಿ ಕೇಂದ್ರದ ಕಾರ್ಯಕರ್ತರು ಹಾಗೂ ಮಹಿಳಾ ಪೊಲೀಸ್ ಠಾಣಾಧಿಕಾರಿ ಮಹಿಳಾ ಆಯೋಗದ ಅಧ್ಯಕ್ಷರ ಗಮನಕ್ಕೆ ತಂದರು.ದಿಕ್ಕು ದೆಸೆಯಿಲ್ಲದ ಹಿರಿಯರ ಅಂಕೆ ಇಲ್ಲದೆ, ಕಪಟ ಪ್ರೇಮದ ಬಲೆಗೆ ಬಿದ್ದು ಮದುವೆ ಆಗಿರುವ ಪ್ರೇಮ ವಿವಾಹಗಳು,ವರದಕ್ಷಿಣೆ ದಾಹ, ಸಂಶಯ ಪಿಶಾಚಿಗಳಿಂದಾಗಿ 1-2 ವರ್ಷಗಳಲ್ಲೇ ಮುರಿದು ಬೀಳುತ್ತವೆ.ಇಂತಹ ಹೆಣ್ಣು ಮಕ್ಕಳ ಬಾಳು ಅಕ್ಷರಶ: ನರಕ ಸದೃಶವಾಗಿದೆ ಎಂದು ತಮ್ಮ ಆತಂಕ ತೋರ್ಪಡಿಸಿದ ಮಹಿಳಾ ಆಯೋಗದ ಅಧ್ಯಕ್ಷರು ಮೈಸೂರಿನ ಊಟಿ ರಸ್ತೆಯಲ್ಲಿರುವ ಶಕ್ತಿ ಕೇಂದ್ರ ಮಹಿಳಾ ಪುನರ್ ವಸತಿ ಕೇಂದ್ರದ ಮಾದರಿಯಲ್ಲಿ ಮಂಗಳೂರು ಸೇರಿದಂತೆ ರಾಜ್ಯದ ಇತರೆಡೆಗಳಲ್ಲಿ ತೆರೆಯಲು ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.ಇಂದು ನೊಂದು ಬೆಂದ ಮಹಿಳೆಯರು ಪೊಲೀಸ್ ಠಾಣೆಗೆ ಬಂದಾಗ ಪೊಲೀಸರು ಮಹಿಳಾ ಸ್ನೇಹಿಗಳಾಗಿ ಅವರ ದುಖ: ದುಮ್ಮಾನಗಳನ್ನು ಆಲಿಸಬೇಕೆಂದು ಮನವಿ ಮಾಡಿದರು.ತಾವು ಮಹಿಳಾ ಆಯೋಗದ ಅಧ್ಯಕ್ಷರಾದ ಮೇಲೆ ಒಂದೂವರೆ ತಿಂಗಳಲ್ಲಿ 238 ಪ್ರಕರಣಗಳು ದಾಖಲಾಗಿವೆ.ಮಹಿಳೆಯರ ಅಜ್ಞಾನ ಇನ್ನಿತರೆ ಕಾರಣಗಳಿಂದ ಶೇಕಡಾ 60ಕ್ಕೂ ಹೆಚ್ಚು ದೌರ್ಜನ್ಯ ಪ್ರಕರಣಗಳು ಬೆಳಕು ಕಾಣುತ್ತಿಲ್ಲ.ಪ್ರತೀದಿನ ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸುವ ಜೊತೆಗೆ ವಾರದಲ್ಲಿ ಯಾವುದಾದರೊಂದು ನಿರ್ದೀಷ್ಠ ದಿನವನ್ನು ವಿಶೇಷವಾಗಿ ಮಹಿಳೆಯರ ಅಹವಾಲು ಸ್ವೀಕಾರಕ್ಕೆ ಮೀಸಲಿಡುವಂತೆ ಅರಕ್ಷಕರಲ್ಲಿ ಮನವಿ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಜನರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಅತ್ಯಂತ ಸುಶಿಕ್ಷಿತರು ಸಂಸ್ಕೃತಿವಂತರು ಆದರೆ ಪ್ರಯಾಣಿಕರ ಬಸ್ಸುಗಳಲ್ಲಿ ಮಹಿಳೆಗೆ ಮೀಸಲಿಟ್ಟ ಆಸಗಳಲ್ಲಿ ಮಹಿಳೆಯರು ನಿಂತಿದ್ದರೂ ಸ್ಥಳ ಬಿಡದೆ ಕೂರುವುದು ಸಂಸ್ಕೃತಿಗೆ ಅಪಚಾರವೆಸಗಿದಂತೆಯೇ ಸರಿ ಎಂದು ಅಧ್ಯಕ್ಷರು ತಿಳಿಸಿದ್ದಾರೆ. ಇನ್ನು ಮುಂದಾದರೂ ಮಹಿಳೆಯರಿಗೆ ಮೀಸಲಿರುವ ಜಾಗದಲ್ಲಿ ಪುರುಷ ಸಹ ಪ್ರಯಾಣಿಕರು ಅವರ ಆಸನಗಳನ್ನು ಬಿಟ್ಟುಕೊಡಬೇಕೆಂದು ತಿಳಿಸಿದ್ದಾರೆ.

ಮುಂದೆ ಓದಿ

ಶೂಟಿಂಗ್...! ಶೂಟಿಂಗ್...!! - 15

ದೃಶ್ಯ ಮಾಧ್ಯಮದ ನೆನಪಿನ ಸವಾರಿ...


ಚಿತ್ರರಂಗದಲ್ಲಿ ಕಮರ್ಷಿಯಲ್ ಮತ್ತು ಕಲಾತ್ಮಕಚಿತ್ರಗಳೆನ್ನುವ ಪ್ರತ್ಯೇಕತೆಯಿರಬಾರದೆನ್ನುವುದು ಇಡೀ ವಿಶ್ವ ಸಿನಿಮಾರಂಗದ ದನಿ. ಈ ತರಹದ ವಿಂಗಡಣೆ ಒಟ್ಟು ಸಿನಿಮಾದ ಆಶಯವನ್ನು ದೂರವಿಟ್ಟು, ಒಂದರತ್ತ ಒಲವು ಇನ್ನೊಂದರತ್ತ ತಿರಸ್ಕಾರವನ್ನು ಹುಟ್ಟಿಸಬಲ್ಲದೆನ್ನುವುದು ಇದರ ಹಿಂದಿನ ಸತ್ಯವಾಗಿರಬಹುದು. ಕಲಾತ್ಮಕ ಚಿತ್ರಗಳು ಪ್ರೇಕ್ಷರತ್ತ ಮುಖಾಮುಖಿಯಾಗುವುದು ಒಂದು ರೀತಿಯಲ್ಲಿ ವಿರಳ. ಎಲ್ಲೋ ಒಂದು ಎರಡು ಚಿತ್ರಗಳು ಮಹಾ ಹರ್ಡಲ್ಸ್ಗಳನ್ನು ದಾಟಿ ಚಿತ್ರಮಂದಿರಕ್ಕೆ ಬಂದವೆಂದರೆ ಅದೇ ಒಂದು ದೊಡ್ಡ ಸಂತೋಷ. ಇಲ್ಲಿಯ ಹರ್ಡಲ್ಸ್ ಅಥವಾ ತೊಡಕುಗಳು ಏನು ಅನ್ನುವುದನ್ನು ಮೊದಲು ನೋಡಬೇಕಿದೆ.



ಮೊದಲನೆಯದಾಗಿ ಈ ಕಲಾತ್ಮಕ ಚಿತ್ರಗಳು ನಿರ್ದೇಶಕನ ಕೈಯಿಂದ ಮುಕ್ತಿ ಪಡೆದು ನಿರ್ಮಾಪಕನ ಕೈ ಸೇರುತ್ತವೆ. ಇಲ್ಲಿ ನಿರ್ದೇಶಕನಿಗೆ ಇರುವ ಜವಾಬ್ದಾರಿಯೆಂದರೆ ಒಮ್ಮೆ ಚಿತ್ರ ಮುಗಿಸಿ ಅದು ಸೆನ್ಸಾರನ್ನು ಪ್ರವೇಶಿಸಿದರೆ ಆನಂತರ ಆ ಚಿತ್ರದ ಹಕ್ಕು ನಿರ್ಮಾಪಕನಿಗೆ ಸೇರುವಂತದ್ದು. ನಿರ್ಮಾಪಕ ಅದನ್ನು ಡಿಸ್ಟ್ರಿಬ್ಯೂಟರ್ಸ್ ಗೆ ಮಾರಾಟ ಮಾಡಿದರೆ ಅದು ಮುಂದೆ ಚಿತ್ರ ಮಂದಿರದ ಮಾಲೀಕನ ಬೇಡಿಕೆಗೆ ಕಾದಿರುತ್ತದೆ. ಚಿತ್ರಮಂದಿರದ ಮಾಲೀಕ ಅಂದರೆ ಎಕ್ಸ್ಬಿಟರ್ ಆ ಚಿತ್ರಕ್ಕೆ ಕನಿಷ್ಟ ಪಕ್ಷ ತುಂಬಿದ ಗೃಹಗಳಿಂದ ಇಪ್ಪತ್ತೆಂಟು ದಿನಗಳ ಡಿಮಾಂಡ್ ಇರುತ್ತದೆಯೆ? ಎಂದು ವಿಮರ್ಶಿಸಿ ಅಂತಹ ಚಿತ್ರಗಳನ್ನು ಮಾತ್ರ ಪ್ರದರ್ಶನಕ್ಕೆ ತರಿಸಿಕೊಳ್ಳುತ್ತಾನೆ. ಆಗ ನಾವೇನು ಕಲಾತ್ಮಕ ಚಿತ್ರಗಳೆಂದು ಪರಿಗಣಿಸುತ್ತೇವೆಯೋ ಅವುಗಳು ನಿರ್ಮಾಪಕನ ಬಳಿಯೋ ಇಲ್ಲ ಡಿಸ್ಟ್ರಿಬ್ಯೂಟರ್ಸ್ ಬಳಿಯೋ ಅನಾಥವಾಗಿ ಬಿದ್ದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಇಲ್ಲಿ ಅಂತಹ ಕಲಾತ್ಮಕ ಚಿತ್ರಗಳು ಪ್ರೇಕ್ಷಕರನ್ನು ತಲುಪುವುದಿಲ್ಲವೆನ್ನುತ್ತಾ ಆ ಅಪವಾದವನ್ನು ನಿರ್ದೇಶಕನ ಮೇಲೆ ಹೊರಿಸುತ್ತೇವೆ. ಇದು ತಪ್ಪು. ನಮ್ಮಂತಹ ಪ್ರೇಕ್ಷಕರು ಎಕ್ಸಿಬಿಟರನ್ನು ಅಪ್ರೋಚ್ ಆಗಿ ಇಂತಹ ಚಿತ್ರ ತರಿಸಿ ಅಂದರೆ ಅಂತಹ ಅವಕಾಶವನ್ನು ಚಿತ್ರ ಮಂದಿರದ ಮಾಲೀಕ ಮಾಡಿಕೊಡಬಹುದೇನೋ? ಆದರೆ ಅಂತಹ ಪ್ರಯತ್ನವನ್ನು ಯಾರು ಮಾಡುತ್ತಾರೆ?

ಆದರೆ ಇತ್ತೀಚೆಗೆ ಇನ್ನೊಂದು ಪ್ರಕಾರ ಬೆಳೆಯುತ್ತಿದೆ. ಅದುವೇ ಕಲಾತ್ಮಕ ಚಿತ್ರಗಳ ಪ್ರದರ್ಶನ. ಶಾಲೆ, ಕಾಲೇಜು, ಸಂಘ ಸಂಸ್ಥೆಗಳ ಮೂಲಕ ಒಳ್ಳೆಯ ಚಿತ್ರಗಳನ್ನು ಪ್ರದರ್ಶಿಸಿ, ಅವುಗಳ ಬಗ್ಗೆ ನಿರ್ದೇಶಕರು ಅಥವಾ ಸೋರ್ಸ್ ಪರ್ಸನ್ ಜೊತೆಗೆ ನೇರ ಸಂವಾದ ಕಾರ್ಯಕ್ರಮ. ಆ ತರಹ ನನಗೆ ಇತ್ತೀಚೆಗೆ ಲಬಿಸಿದ ಒಂದು ಒಳ್ಳೆಯ ಅವಕಾಶ ಕಥೆಗಾರ ಅಮರೇಶ ನುಗಡೋಣಿ ಅವರ ಜೊತೆಗೆ ಮಾತನಾಡುವ ಅವಕಾಶ. ಅವರ ಪ್ರಸಿದ್ಧ ಕಥೆ `ಸವಾರಿ' ಆದರಿಸಿ `ಕನಸೆಂಬೊ ಕುದುರೆಯೇರಿ' ಚಿತ್ರವನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ನಿರ್ದೇಶಿಸಿದ್ದಾರೆ. ಅಮರೇಶ ನುಗಡೋಣಿಯವರ ಜೊತೆಗೆ ಆ ಕಥೆ ಮತ್ತು ಚಿತ್ರದ ಬಗ್ಗೆ ಚರ್ಚಿಸಿದ್ದ ನನಗೆ ಒಂದು ತಿಂಗಳ ಅಂತರದಲ್ಲಿ ಗಿರೀಶ್ ಕಾಸರವಳ್ಳಿಯವರ ಆ ಚಿತ್ರವನ್ನು ಸ್ವತ: ನಿರ್ದೇಶಕನ ಜೊತೆಗೆ ನೋಡಿ ಆ ಸಂವಾದದಲ್ಲಿ ಭಾಗವಹಿಸುವ ಅವಕಾಶ ದೊರಕಿದ್ದು ನನ್ನ ಭಾಗ್ಯ ಅಂತ ತಿಳಿಯುತ್ತೇನೆ. ಅಮರೇಶ ನುಗಡೋಣಿಯವರ `ಸವಾರಿ' ಮೂಲ ಕಥೆಗೂ ಕಾಸರವಳ್ಳಿಯವರ `ಕನಸೆಂಬೊ ಕುದುರೆಯೇರಿ' ಕಥೆಗೂ ಸ್ವಲ್ಪ ವ್ಯತ್ಯಾಸವಿದ್ದರೂ ಮೂಲ ಕಥೆಗೆ ಎಲ್ಲೂ ನೋವಾಗದ ರೀತಿಯಲ್ಲಿ ಮತ್ತು ಆ ಕಥೆಯ ಒಟ್ಟು ಆಶಯವನ್ನು ಹೊಸತನದಲ್ಲಿ ಕಟ್ಟಿಕೊಟ್ಟಿರುವ ಕಾಸರವಳ್ಳಿಯವರು ಈ ತರಹದ ಬದಲಾವಣೆ ನಿರ್ದೇಶಕನ ಸೃಜನಶೀಲತೆಯೇ ಅಥವಾ ಸಂಕ್ಷಿಪ್ತತತೆಯೇ ಅನ್ನುವ ಜಿಜ್ಞಾಸೆಗೆ ಬೀಳುತ್ತಾರೆ. ಅವರ ಚಿತ್ರಗಳನ್ನು ನೋಡಿದವರಿಗೆ ಇದೊಂದು ಸೃಜನಶೀಲತೆಯೆನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ.

ಇಲ್ಲಿಯ ಕಥೆ ನಡೆಯುವುದು ಕೆಲವೇ ಗಂಟೆಗಳಲ್ಲಿ. ಆದರೆ ಕಥೆಯನ್ನು ಬರೆದಿರುವ ಲೇಖಕ ಈ ಸಣ್ಣ ಸಮಯದ ನಡುವೆ ಎಷ್ಟೆಲ್ಲಾ ವಿಷಯಗಳನ್ನು ತರುತ್ತಾನೆನ್ನುವುದು ಓದುಗನಿಗೆ ಬೆರಗು. ಮತ್ತು ಈ ಕಥೆಯಲ್ಲಿ ಬಳಕೆಯಾಗಿರುವ ತಂತ್ರ ಕನಸು. ನಾವು ಇದನ್ನು ಪ್ಲ್ಯಾಶ್ಬ್ಯಾಕ್ ಅನ್ನುವುದಕ್ಕಿಂತ ಒಂದು ವಾಸ್ತವದ ಘಟನೆ ಮತ್ತೊಂದು ಕನಸಿನಲ್ಲಿ ನಡೆಯುವ ಘಟನೆ ಎಂದು ವಿಶ್ಲೇಷಿಸಿದರೆ ಉತ್ತಮ. ಯಾಕಂದರೆ ಕಲಾತ್ಮಕ ಚಿತ್ರಗಳನ್ನು ನೋಡುವ ದೃಷ್ಟಿ ಕೋನ ಬೇರೆಯದಾಗಿರಬೇಕೆನ್ನುವುದು ನನ್ನ ಅನುಭವ. ಇಲ್ಲಿಯೂ ನಾಲ್ಕು ಕನಸುಗಳು ಮತ್ತು ಕಥೆ ಹೀಗೆ ವ್ಯವಸ್ಥಿತ ರೀತಿಯಲ್ಲಿ ಒಂದು ಹೊಸ ಪ್ರಯೋಗದ ಮೂಲಕ ಈ ಚಿತ್ರ ಸಾಗುತ್ತದೆ. ಒಂದು ಬೈರನ ಕನಸು; ರುದ್ರವ್ವನ ಕನಸು; ಮತ್ತೊಮ್ಮೆ ರುದ್ರವ್ವನ ಕನಸು; ಕೊನೆಗೆ ನಮ್ಮ ಅಥವಾ ಇಲ್ಲಿ ನಿರ್ದೇಶಕನ ಕನಸು ಸಾಗುತ್ತಾ ಮಧ್ಯೆ ಮಧ್ಯೆ ಕಥೆ ಸಾಗುತ್ತದೆ. ಕನಸಿನಲ್ಲಿ ನಡೆಯುವ ಘಟನೆಗಳೆಲ್ಲಾ ಕಥೆಯಲ್ಲಿಯೂ ಮರುಪ್ರವೇಶ ಪಡೆಯುತ್ತಾ ಒಮ್ಮೆ ಗೊಂದಲ ಸೃಷ್ಟಿಸಿದರೂ ಸಿನಿಮಾದ ನಡುವೆ ಇದು ಕನಸು ಅನ್ನುವ ಸ್ಪಷ್ಟತೆ ಬರುವುದರಿಂದ ನಮ್ಮಲ್ಲಿ ಗೊಂದಲ ಮೂಡುವುದಿಲ್ಲ ಮತ್ತು ಒಂದು ಕಥೆಯನ್ನು ವ್ಯವಸ್ಥಿತಿ ರೀತಿಯಲ್ಲಿ ನೋಡುವ ಅನುಭವವಾಗುತ್ತದೆ.

ಚಿತ್ರದ ಕಥಾನಾಯಕ ಈರನಿಗೆ ಬರೀ ಸಾವಿನ ಕನಸುಗಳೇ ಕಾಣುತ್ತವೆ. ಅವನಿಗೆ ಕನಸು ಬಿದ್ದರೆ ಆ ಸತ್ತವನಿಗೆ ಕುಳಿ ತೋಡುವುದು ಅವನ ಕಾಯಕ. ಅವನ ಕನಸಿನ ಸ್ಪೆಷಾಲಿಟಿಯಿರುವುದು ನಿರ್ದಿಷ್ಟ ವ್ಯಕ್ತಿಯೇ ಸಾಯುತ್ತಾನೆನ್ನುವುದು. ಹಾಗೆ ಒಮ್ಮೆ ಬಿದ್ದ ಕನಸಿನಲ್ಲಿ ಆ ಊರಿನ ಮಹಾ ಉಡಾಳ ಜಮಿನ್ದಾರ ಗೌಡನ ಸಾವು. ಅವನು ನೇರವಾಗಿ ಗೌಡನ ಮನೆಗೆ ಹೋಗಿ ಎಲ್ಲಿ ಗುಂಡಿ ತೋಡಬೇಕೆನ್ನುತ್ತಾನೆ. ಇದರಿಂದ ಸಿಟ್ಟಾದ ಗೌಡನ ಮನೆಯವರು ಅವನನ್ನು ಬೈದು ಕಳುಹಿಸುತ್ತಾರೆ. ಆದರೆ ವಾಸ್ತವದಲ್ಲಿ ಗೌಡನ ಸಾವು ಸಂಭವಿಸುತ್ತದೆ. ಅವನ ಮಗ ಶಿವಪ್ಪಗೌಡ ತನ್ನ ಕೆಲಸದ ಅನಿವಾರ್ಯತೆಯಿಂದ ತಂದೆಯ ಹೆಣವನ್ನು ಹಾಗೆ ಬಿಟ್ಟು ಪರವೂರಿಗೆ ಹೋಗುತ್ತಾನೆ. ಹಿಂತಿರುಗಿ ಬರುವುದು ಒಂದು ವಾರಗಳ ತರುವಾಯ. ಅಷ್ಟರಲ್ಲಿ ಹೆಣ ಕೊಳೆತು ನಾದಿರುತ್ತದೆ. ಆ ಸಮಯಕ್ಕೆ ಸರಿಯಾಗಿ ಈರನ ಹೆಂಡತಿ ರುದ್ರವ್ವನಿಗೂ ಒಂದು ಕನಸು ಬಿದ್ದು ಸುಡುಗಾಡು ಸಿದ್ದ ಬರುತ್ತಾನೆನ್ನುವುದು ತಿಳಿಸುತ್ತಾಳೆ. ಸಿದ್ಧನ ಬಗ್ಗೆ ವಿಷೇಶ ಭಕ್ತಿಯಿರುವ ಈರ ಅವನಿಗೆ ಬೇಕಾಗುವ ವ್ಯವಸ್ಥೆಯನ್ನು ಮಾಡುತ್ತಾನಾದರೂ ಅವನಿಗೆ ಒಂದೇ ಒಂದು ಕೊರಗು ತನ್ನ ಕನಸು ಮೊತ್ತ ಮೊದಲಬಾರಿಗೆ ಸುಳ್ಳಾಯಿತೆನ್ನುವ ವೇದನೆ. ಅದೇ ಕೊರಗಿನಲ್ಲಿ ಅವನಿಗೆ ಮತ್ತೊಂದು ಆಘಾತ ಸುಡುಗಾಡು ಸಿದ್ಧ ಬರುತ್ತೇನೆಂದವನು ಬರೆದು ಹೋಗುವನೆನ್ನುವುದು. ಆ ರಾತ್ರಿ ವಿಷಯ ತಿಳಿದು ಅವನು ಹೆಂಡ ಕುಡಿದು ಮಲಗುತ್ತಾನೆ. ಆದರೆ ಸಿದ್ಧ ಬರುವ ಸುದ್ದಿಯ ದಿನದಂದೆ ಶಿವಪ್ಪಗೌಡ ಕೆಲಸ ಮುಗಿಸಿ ಹಿಂತಿರುಗುವಾಗ ಗೌಡನ ಸಾವಿನ ಸುದ್ದಿಯನ್ನು ಹಬ್ಬುತ್ತಾನೆ ಹಿರೆಮುತ್ಯಾ. ಸಿದ್ದ ಬರುವ ಸಮಯಕ್ಕೆ ಸಾವು ಸಂಭವಿಸಿದರೆ ಆ ವ್ಯಕ್ತಿ ಪುಣ್ಯವಂತನೆನ್ನುವ ಅಭಿಪ್ರಾಯ ಊರವರದ್ದು. ಆದರೆ ಅವನ ಸಾವಿಗೆ ಈರ ಗುಂಡಿ ತೋಡುವುದನ್ನು ನಿರಾಕರಿಸುತ್ತಾನೆ. ಗೌಡನ ಸಾವನ್ನು ಮುಚ್ಚಿಟ್ಟು ತನ್ನ ಕನಸನ್ನು ಹುಸಿ ಮಾಡಿದರೆನ್ನುವ ವೇದನೆಯಿಂದಿರುತ್ತಾನೆ. ಒಂದು ಕಾಲದೊಂದಿಗಿನ ಅನುಸಂಧಾನದೊಂದಿಗೆ ಹೀಗೆ `ಕನಸೆಂಬೊ ಕುದುರೆಯನೇರಿ' ಮುಗಿಯುತ್ತದೆ.

ಗಿರೀಶ್ ಕಾಸರವಳ್ಳಿಯವರ ನಿರ್ದೇಶನದ ಈ ಚಿತ್ರದಲ್ಲಿ ಚಿತ್ರಕಥೆ ಗೋಪಾಲಕೃಷ್ಣ ಪೈ ಅವದ್ದು ನಿರ್ಮಾಣ ಬಂಸಂತ್ ಪಾಟೀಲ್ ಹಾಗೂ ಕಲಾವಿದರಾಗಿ ಬಿರದಾರ್, ಉಮಾಶ್ರೀ, ಶಿವರಂಜನ್, ಪವಿತ್ರಾ ಲೋಕೇಶ್ ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರ ಏಷ್ಯಾಟಿಕಾ ಚಿತ್ರೋತ್ಸವ ರೋಂ 2010ರ ಶ್ರೇಷ್ಟ ಚಿತ್ರ ಪ್ರಶಸ್ತಿ; 2010ರ ಏಷ್ಯಾದ ಶ್ರೇಷ್ಟ ಚಿತ್ರಕ್ಕಾಗಿ ನೆಟ್ಪ್ಯಾಕ್ ಪ್ರಶಸ್ತಿ; ಶ್ರೇಷ್ಟ ಕನ್ನಡ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಮತ್ತು ಚಿತ್ರ ಕಥೆಗೂ ಪ್ರಶಸ್ತಿಯನ್ನು ಪಡೆದಿದೆ.



-ಅನು ಬೆಳ್ಳೆ

ಮುಂದೆ ಓದಿ
9:35 PM

ಧ್ಯಾನ

Posted by ekanasu

ವೈವಿಧ್ಯ





ಇತ್ತೀಚಿನ ದಿನಗಳಲ್ಲಿ ದಿನದಿಂದ ದಿನಕ್ಕೆ ಸುಧಾರಣೆಯ ಹೆಸರಿನಲ್ಲಿ ನಾವು ನಮ್ಮ ಜೀವನ ಶೈಲಿಯನ್ನು ಬದಲಾಯಿಸುತ್ತಿರುವುದರಿಂದಾಗಿ, ಸನಾತನ ಭಾರತೀಯ ಜೀವನ ಶೈಲಿಯು ಶಿಥಿಲವಾಗುತ್ತದೆ. ನೂತನ ಆಕರ್ಷಣೆಯು ಪಾರಂಪರಿಕವಾದ ಸಂಸ್ಕೃತಿಯನ್ನು ಹೊಡೆದೋಡಿಸುತ್ತಿದೆ. ಜೀವನವು ಹೊಳಪಾಗುವುದರ ಬದಲಿಗೆ ಹೊಲಸಾಗುವಂತಾಗಿದೆ. ಈಗಿನ ಆಧುನಿಕ ಯುಗದಲ್ಲಿ ಮನಸ್ಸಿಗೆ ಗೊಂದಲವಾಗುವ ಪರಿಸರ ಕೆಲವೊಮ್ಮೆ ಸೃಷ್ಠಿಯಾಗುತ್ತದೆ. ವ್ಯಕ್ತಿಯು ತನ್ನ ಜೀವನದಲ್ಲಿ ಪದೇ ಪದೇ ಒತ್ತಡಕ್ಕೆ ಒಳಗಾಗುವ ಸಂಭವ ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತದೆ. ಹಾಗೂ ಸದ್ವಿಚಾರಗಳ ಕೊರತೆಯು ಕಂಡುಬರುತ್ತದೆ. ಮನಸ್ಸು ನಿಯಂತ್ರಣ ತಪ್ಪಿ ದಿಕ್ಕೆಟ್ಟು ಓಡಾಡಿ ಬಸವಳಿರುತ್ತಿದೆ. ನಿದ್ರೆ ಆಹಾರ ವಿಹಾರ ವಿಚಾರಗಳಲ್ಲೂ ಕೆಲವೊಮ್ಮೆ ನಿತ್ಯ ವ್ಯತ್ಯಾಸವಾಗುತ್ತಿದೆ. ಆದ್ದರಿಂದ ಮನಸ್ಸಿನ ನಿರ್ಮಲತೆಗಾಗಿ, ಏಕಾಗ್ರತೆಗಾಗಿ ಹಾಗೂ ಆಳ ವಿಶ್ರಾಂತಿಗಾಗಿ ಮತ್ತು ಶಾಂತ ಸ್ಥಿತಿಗಾಗಿ ವೈಜ್ಞಾನಿಕವಾಗಿ ದೃಢಪಟ್ಟಂತಹ ಧ್ಯಾನ ಈ ಮೇಲಿನ ಸಮಸ್ಯೆಯ ನಿವಾರಣೆಗೆ ಬಹಳಷ್ಟು ಸಹಕಾರಿಯಾಗುತ್ತದೆ.

ಧ್ಯಾನದ ಸಂಕ್ಷಿಪ್ತ ಮಾಹಿತಿ :

ಪತಾಂಜಲಿ ಋಷಿಮುನಿ ತಿಳಿಸಿದ ಅಷ್ಟಾಂಗ ಯೋಗದ ಏಳನೇ ಮಾರ್ಗವೇ 'ಧ್ಯಾನ'. ಧ್ಯಾನ ಎಂದರೆ ನಿರಂತರವಾದ ಪ್ರಯತ್ನ ರಹಿತವಾದ ಒಂದೇ ವಸ್ತುವಿನ ಯಾ ವಿಷಯದ ಯೋಚನೆಯ ಪ್ರವಾಹವಾಗಿದೆ. ಧ್ಯಾನದಿಂದ ಮನಸ್ಸಿನ ಚಂಚಲತೆ ನಿವಾರಣೆಯಾಗಿ ಮನಸ್ಸಿಗೆ ಆಳ ವಿಶ್ರಾಂತಿ ದೊರೆಯುತ್ತದೆ. ಮನಸ್ಸು ಪರಿಶುದ್ಧವಾಗಿ, ನಿರ್ಮಲಗೊಂಡು ಪ್ರಸನ್ನತೆಯಿಂದ ಅರಳುತ್ತದೆ. ಅಪೇಕ್ಷಿತ ವಿಷಯವಾಗಿ ಮನಸ್ಸು ಗಾಢವಾಗಿ ಚಿಂತಿಸಲು ಧ್ಯಾನ ಸಹಕಾರಿ. ವಿಷಯ ವೈಶಾಲ್ಯತೆ ಲಭಿಸುವುದು. ವಿದ್ಯುತ್ ನಿಂದ ತಂತಿ ಹೇಗೆ ಬೆಳೆಗುತ್ತದೆಯೋ ಅದೇ ರೀತಿ ಧ್ಯಾನದಿಂದ ಯೋಗಿಯ ಮನಸ್ಸು ಬೆಳಗುತ್ತದೆ. ಧ್ಯಾನದ ವೇಳೆ ಜೀವಾತ್ಮ ಪರಮಾತ್ಮರ ಮುಖಾಮುಖಿಯಾಗುವುದು. ಧ್ಯಾನಕ್ಕೆ ಆಂತರಿಕ ವಿಷಯಗಳಾದ ಉಸಿರು, ಹೃದಯ, ನಾಸಾಗ್ರ, ಭ್ರೂಮಧ್ಯೆ ಇತ್ಯಾದಿ ಹಾಗೂ ಬಾಹ್ಯ ವಿಷಯಗಳಾದ ಓಂಕಾರ, ನಕ್ಷತ್ರ, ಚಂದ್ರ, ಇಷ್ಟದೇವತಾಚಿತ್ರ, ಪ್ರತಿಮೆ, ಇತ್ಯಾದಿಗಳನ್ನು ಉಪಯೋಗಿಸಿ ಧ್ಯಾನ ಮಾಡಲಾಗುತ್ತದೆ. ಇದು ಜಾಗೃತ ಸ್ಥಿತಿಯಲ್ಲದೆ ನಿದ್ರಾಸ್ಥಿತಿಯಲ್ಲ; ಇಲ್ಲಿ ಏಕಾಗ್ರತೆಯು ಅಗತ್ಯವಾಗಿದೆ. ಧ್ಯಾನದಿಂದ ದುಃಖ, ಮನಸ್ಸಿನ ಒತ್ತಡ ನಿವಾರಣೆಯಾಗಿ ಮನಸ್ಸು ಹಗುರ, ಶಾಂತ ಆಗಿ ಲವಲವಿಕೆಯಾಗಿ ಆನಂದಮಯವೂ ಆಗುವುದು. ಮನೋಬಲ, ಆತ್ಮಬಲ ಹೆಚ್ಚುವುದು. ನಾವು ಸಮಾಧಿ ಸ್ಥಿತಿಗೆ ಸಿದ್ಧರಾಗುವೆವು. ಧ್ಯಾನದ ವೇಳೆ ಮನಸ್ಸು ಪೂರ್ಣಎಚ್ಚರ ಸ್ಥಿತಿಯಲ್ಲಿರಬೇಕು. ನಿದ್ರಿಸಬಾರದು. ಬೇರೆ ಬೇರೆ ವಿಷಯಗಳ ಆಲೋಚನೆ, ಚಿಂತೆ ಸಲ್ಲದು.

ಧ್ಯಾನ ಎಂಬ ಶಬ್ಧ ಲ್ಯಾಟಿನ್ ಭಾಷೆಯ 'ಮೆಡಿರೈ' ಎಂಬ ಶಬ್ಧದಿಂದ ಬಂದಿದೆ. 'ಮೆಡಿರೈ' ಎಂದರೆ ಶಾಂತಿ. ಧ್ಯಾನವನ್ನು ಮೊದಲ 6 ಮೆಟ್ಟಿಲುಗಳ (ಯಮ, ನಿಯಮ, ಆಸನ, ಪ್ರಾಣಯಾಮ, ಪ್ರತ್ಯಾಹಾರ, ಧಾರಣ) ಅಭ್ಯಾಸದ ನಂತರವೇ ಮಾಡಬೇಕು.

ಧ್ಯಾನದ ಉಪಯೋಗಗಳು

ಧ್ಯಾನ ಮಾಡುವುದರಿಂದ ಮನಸ್ಸಿನ ಹಾಗೂ ಅಂತಃಕರಣಗಳ ಚಂಚಲತೆ ನಿವಾರಣೆಯಾಗಿ ಮನಸ್ಸಿಗೆ ಆಳ ವಿಶ್ರಾಂತಿ ದೊರೆಯುತ್ತದೆ. ಮನಸ್ಸು ಪರಿಶುದ್ಧವಾಗುತ್ತದೆ ಹಾಗೂ ಮನಸ್ಸು ಅರಳುತ್ತದೆ. ಸಹಜ ಸ್ಥಿತಿಯಾದ ಆನಂದ ಸ್ವರೋಪವನ್ನು ಪಡೆಯಲು ಧ್ಯಾನದಿಂದ ಸಾಧ್ಯವಾಗುತ್ತದೆ.

ಮನಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋ ಹೀಗಂದು ಉಪನಿಷತ್ತು ತಿಳಿಸುತ್ತದೆ. ಅಂದರೆ ಮನುಷ್ಯನ ಬಂಧನಕ್ಕೂ ಮೋಕ್ಷಕ್ಕೂ ಮನಸ್ಸೇ ಕಾರಣ. ಮನಸ್ಸನ್ನು ನಿಯಂತ್ರಿಸದೆ ಸುಮ್ಮನೆ ಬಿಟ್ಟರೆ ಅದು ಕೊನೆಗೆ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಮನಸ್ಸನ್ನು ಪ್ರಥಮವಾಗಿ ನಿಯಂತ್ರಿಸಿಕೊಳ್ಳಬೇಕು. ನಮ್ಮ ವಿವೇಕ (ಬುದ್ಧಿ) ಹೇಳಿದಂತೆ ನಮ್ಮ ಮನಸ್ಸು ಕೇಳಬೇಕೇ ವಿನಹ ಮನಸ್ಸು ಹೇಳಿದಂತೆ ನಾವು ಕೇಳಬಾರದು. ಮನಸ್ಸನ್ನು ಜಯಿಸಿದರೆ ಜಗತ್ತನ್ನೇ ಜಯಿಸಬಹುದು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ನಾವು ದೇಹದ ಆರೋಗ್ಯಕ್ಕೆ ಒತ್ತು ಕೊಡುವ ಹಾಗೇ ಮನಸ್ಸಿನ ಆರೋಗ್ಯಕ್ಕೆ ಒತ್ತು ಕೊಡುವುದಿಲ್ಲ. ಆದ್ದರಿಂದ ಮನಸ್ಸನ್ನು ಶುದ್ಧಗೊಳಿಸುವ ವಿಧಾನ ತಿಳಿದಿರಬೇಕು. ಹೆಚ್ಚಿನ ನಮ್ಮ ಸಮಸ್ಯೆ ಮನಸ್ಸಿನ ದೋಷದಿಂದಲೇ ಆಗುತ್ತದೆ.

ಯಾವ ರೀತಿ ಸೋಪು, ಪೌಡರ್ ಹಾಕಿ ಪಾತ್ರೆಯನ್ನು ಸ್ವಚ್ಛಗೊಳಿಸುತ್ತೇವೆ ಅದೇ ರೀತಿ ನಮ್ಮ ಮನಸ್ಸನ್ನು ಯೋಗ, ಧ್ಯಾನ, ಸತ್ಸಂಗ, ಜಪ, ಒಳ್ಳೆಯ ವಿಚಾರ ಇತ್ಯಾದಿಗಳಿಂದ ಶುದ್ಧಗೊಳಿಸಬಹುದು ಹಾಗೂ ಪೂಜೆ, ಭಜನೆ, ಕರ್ಮ ಯೋಗ ಇತ್ಯಾದಿಗಳಿಂದ ಮಾಡಬಹುದು. ಧ್ಯಾನದ ವೇಳೆ ಮನಸ್ಸು ಜಾಗ್ರತವಾಗಿರಬೇಕಲ್ಲದೆ ನಿದ್ರಿಸಬಾರದು.




ಧ್ಯಾನ ಮಾಡಲು ಆಂತರಿಕ/ಬಾಹ್ಯ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

1. ಧ್ಯಾನಕ್ಕೆ ಉಪಯೋಗಿಸುವ ಆಂತರಿಕ ವಿಷಯಗಳು : ಉಸಿರು, ಹೃದಯ ಇತ್ಯಾದಿ
2. ಧ್ಯಾನಕ್ಕೆ ಉಪಯೋಗಿಸುವ ಬಾಹ್ಯ ವಿಷಯಗಳು : ನಾಸಾಗ್ರ/ ಭ್ರೂ ಮಧ್ಯೆ/ ಓಂಕಾರ/ ನಕ್ಷತ್ರ/ ಚಂದ್ರ/ ಇಷ್ಟದೈವಚಿತ್ರ/ ಪ್ರತಿಮೆ/ ದೀಪದ ಜ್ಯೋತಿ, ಪೆನ್ಸಿಲಿನ ತುದಿ, ವ್ಯಕ್ತಿ ಹಾಗೂ ಯಾವುದೇ ಇನ್ನಿತರ ವಸ್ತುಗಳನ್ನು ಆರಿಸಿಕೊಳ್ಳಬಹುದು.

ಅಭ್ಯಾಸ ಕ್ರಮ:

ಸರಳ ಧ್ಯಾನ ಮಾಡುವ ವಿಧಾನ :

ಆರಂಭದಲ್ಲಿ ಸಿದ್ಧತೆ ಮಾಡಬೇಕು 'ಶುಚೌದೇಶೇ ಪ್ರತಿಷ್ಠಾಪ್ಯ ಸ್ಥಿರವಾದ ಆಸನವೊಂದನ್ನು ಸ್ಥಾಪಿಸುವುದು ಎಂದರ್ಥ. 'ಸಮಂ ಕಾಯ ಶಿರೋಗ್ರೀವಂ' ಎಂದರೆ ಶಿರಸ್ಸು, ಬೆನ್ನು, ಕುತ್ತಿಗೆ, ನೇರ. ಪದ್ಮಾಸನ/ ವಜ್ರಾಸನ/ ಸ್ವಸ್ತಕಾಸನ/ ಸುಖಾಸನ/ ವೀರಾಸನ ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.

ಈ ಮೇಲೆ ತಿಳಿಸಿದ ಯಾವುದಾದರೂ ಆಸನದಲ್ಲಿ ಕುಳಿತುಕೊಳ್ಳಬೇಕು. ಬೆನ್ನು, ಕುತ್ತಿಗೆ ಶಿರಸ್ಸು ನೇರವಾಗಿರಬೇಕು. ದೇಹ ಸಡಿಲಗೊಂಡಿರಬೇಕು ಹಾಗೂ ಹಾಯಾಗಿಕುಳಿತಿರಬೇಕು. ಮುಖದಲ್ಲಿ ಪ್ರಸನ್ನತೆ, ಸೌಮ್ಯ ಭಾವವಿರಬೇಕು. ಕೈಗಳು 'ಚಿನ್ಮುದ್ರೆ' ಭಂಗಿಯಲ್ಲಿರಬೇಕು. ಸಾಮಾನ್ಯ ಉಸಿರಾಟದಲ್ಲೇ ನೆಲಸಬೇಕು. ಹಾಗೇ ಸ್ವಲ್ಪ ಹೊತ್ತು ಮನಸ್ಸನ್ನು ಗಮನಿಸಬೇಕು. ಆಮೇಲೆ ಮನಸ್ಸಿನಿಂದ ಸಾಮಾನ್ಯ ಉಸಿರಾಟವನ್ನೇ ಗಮನಿಸಬೇಕು. (ಆರಂಭದಲ್ಲಿ ಸ್ವಲ್ಪಹೊತ್ತು) ಈ ಸ್ಥಿತಿಯಲ್ಲಿ ಯಾವುದೇ ರಿತಿಯ ಯೋಚನೆಯನ್ನು ಮಾಡದೇ ಉಸಿರಾಟವನ್ನೇ ನಿರಂತರವಾಗಿ ಗಮನಿಸುತ್ತಾ ಇರಬೇಕು. ಈ ಸ್ಥಿತಿಯಲ್ಲಿ ಐದರಿಂದ ಹತ್ತಿಪ್ಪತ್ತು ನಿಮಿಷದವರೆಗೆ ಧ್ಯಾನ ಮಾಡಬಹುದು. ಆದರೆ ಧ್ಯಾನ ಮಾಡುವಾಗ ಯಾವುದೇ ರೀತಿಯಾ ನೋವಿನ ಅನುಭವ ಬರಬಾರದು. ಆರಂಭದಲ್ಲಿ ಉಸಿರನ್ನು ಗಮನಿಸಿಕೊಂಡೇ ಧ್ಯಾನ ಮಾಡಲು ಸುಲಭವಾಗುತ್ತದೆ. ಆಮೇಲೆ ಓಂಕಾರ/ ಇಷ್ಟದೇವರ ಚಿತ್ರ/ ಪ್ರತಿಮೆ ಭ್ರೂಮಧ್ಯ ಅಥವಾ ನಾಸಾಗ್ರದಲ್ಲಿ ದೃಷ್ಠಿಯಿರಿಸಿ ಧ್ಯಾನ ಮಾಡಬಹುದು. ಈ ಧ್ಯಾನವನ್ನು ಗುರುಮುಖದಲ್ಲೇ ಕಲಿಯಬೇಕು.

ಯೋಗದಿಂದ ದೈಹಿಕ ಮಾನಸಿಕ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ. ಈ ಆಧುನಿಕ ಯಾಂತ್ರಿಕ ವೈಜ್ಞಾನಿಕ ಸೌಕರ್ಯಗಳಿಂದ ಈ ಈಗಿನ ದಿನಗಳಲ್ಲಿ ದೈಹಿಕ ವ್ಯಾಯಾಮದ ಕೊರತೆಯನ್ನು ನಿವಾರಿಸಲು ಆರೋಗ್ಯವನ್ನು ಪಡೆಯಲು ಯೋಗಾಸನಗಳು ಅತ್ಯಾವಶ್ಯಕ. ಯೋಗ, ಆಸನ, ಪ್ರಾಣಯಾಮ, ಧ್ಯಾನ ಗುರುಮುಖೇನನೇ ಕಲಿತು ನಿತ್ಯ ನಿರಂತರ ಉದಾಸೀನ ಬಿಟ್ಟು ಅಭ್ಯಾಸ ಮಾಡಬೇಕು.


ಲೇಖಕರು :''ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ

ಮುಂದೆ ಓದಿ
9:21 PM

ಸತ್ಯಮೇವ ಜಯತೆ

Posted by ekanasu

ಸಾಹಿತ್ಯ

ಸತ್ಯಮೇವ ಜಯತೆ
ಸತ್ಯಮೇವ ಜಯತೆ ದೇಶದ ಸೂತ್ರ
ಆದರೆ ಪ್ರತಿ ಕ್ಷಣ
ಸಾಯುತಿದೆ ಕಾನೂನಿನ ಕುಲ ಗೋತ್ರ
ದುರಾಡಳಿತ ಅನ್ಯಾಯ ಗುಂಡಾಗಿರಿ ಹೆಡೆ ಎತ್ತಿವೆ
ದಕ್ಷತೆ ನ್ಯಾಯ ನೀತಿ ಬದುಕಿದ್ದು ಸತ್ತಿವೆ


ಮೋಸ ವಂಚನೆ ಕೊಲೆ ದರೋಡೆ ಭುಗಿಲೆದ್ದಿವೆ
ಮನುಷ್ಯತ್ವ ಮಾನವೀಯತೆ ಸಹನೆ ನೆಲ ತೆತ್ತಿವೆ
ಆಸ್ಪತ್ರೆ ಶಾಲೆ ಅನ್ನ ದುಬಾರಿ
ಸಾಮಾನ್ಯ ಜನರ ಗೋಳು ಕೇಳುವರಾರಿಲ್ಲಿ
ಮನೆ ಮನ ವ್ಯಾಪಾರ ನೌಕರಿಯಲಿ ಅಶಾಂತಿ
ಬದುಕಿಗಿಂತ ಸಾವು ಮೇಲು ಆದರೆ
ಅದು ದುಬಾರಿ
ಧೈರ್ಯದಿಂದ ದೇವನು ನೀಡಿರುವ
ವರಗಳನು ಬಾಚಿ, ಹಾಸಿಗೆ ಇದ್ದಷ್ಟು
ಕಾಲು ಚಾಚಿ, ಸೋಲನೊಪ್ಪದೆ, ವಿಧಿಬರಹ ಎನ್ನದೆ
ಸಮಯದ ಚಕ್ರವ್ಯೂಹ ಸೀಳಿ
ಮುನ್ನಡೆ...

-ಜಬೀವುಲ್ಲಾ ಖಾನ್

ಮುಂದೆ ಓದಿ
9:42 PM

ಬದುಕು

Posted by ekanasu

ಸಾಹಿತ್ಯ
ಒಡೆದ ಕನ್ನಡಿ ಚೂರಿನೊಳಗೆ
ಇಣುಕಿದ ವಿವಿಧ ಪ್ರತಿಬಿಂಭ
ನೀರಿನೊಳಗೆ ಕದಡಿದ
ಬಣ್ಣ ಬಣ್ಣದ ಚಿತ್ತಾರ!

- ಸೌಮ್ಯ ಸಾಗರ

ಮುಂದೆ ಓದಿ
8:36 PM

ಮಹಾಶಿವರಾತ್ರಿ

Posted by ekanasu

ರಾಜ್ಯ - ರಾಷ್ಟ್ರ
ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವ ಶ್ರೀ ಗೋಕರ್ಣ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಮಹೋತ್ಸವ ಫೆ.26ರಿಂದ ಮಾರ್ಚ್ 6ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮಗಳು ನಡೆಯಲಿದ್ದು ಭಗವಾದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿದೆ.














ಮುಂದೆ ಓದಿ
8:25 PM

ಸ್ವಗತ

Posted by ekanasu

ಸಾಹಿತ್ಯ

ಮಾತು ಮಾತಲ್ಲೆ
ಸಮುದ್ರ ತೀರದಲ್ಲಿ
ಬಂಡೆಯ ಮೇಲೆ
ಬೆಳಗಿನಿಂದ ಸಾಯಂಕಾಲದವರೆಗೂ
ಕುಳಿತು, ನಿನ್ನನೇ ನೋಡುತ
ನಿನ್ನ ಅಲೆಗಳೊಂದಿಗೆ ಪ್ರೀತಿ ಚಿಗುರಿ
ಮಾತು ಬೆಳೆದು, ಮಾತು ಮಾತಲ್ಲೆ
ಹೃದಯ ಬಿಚ್ಚಿರುವೆ.



ಪ್ರತಿ ದಿನ ಬರುವೆ
ನನ್ನನೆ ನೋಡುತಿರುವೆ
ಏಕಾಂಗಿಯಾಗಿ ಕುಳಿತು
ಗಾಡ ಚಿಂತೆಯಲ್ಲಿ ಮುಳುಗಿರುವೆ
ಯಾರು ನೀನು ಎಲ್ಲಿಂದ ಬಂದಿರುವೆ.

ಏನು ಹೇಳಲಿ
ಲೋಕದ ಬಗ್ಗೆ ಚಿಂತಿಸುತಿರುವೆ
ಬುದ್ಧಿ ಮಂಕಾಗಿ ಕುಳಿತಿರುವೆ
ನಿನ್ನ ತೀರದಿಂದಾಚೆಯಿಂದ
ಮೂರನೆ ಮಹಾಯುದ್ಧದ ಕೂಗು
ಕಂಪಿಸುತ್ತಿದೆ, ನಿನ್ನ ಅಲೆಗಳಿಗೆ ತಾಕಿ ಬರುವ
ಗಾಳಿ ಮುನ್ಸೂಚನೆ ನೀಡುತಿದೆ
ನಿನ್ನ ಬಣ್ಣವೂ ಒಂದಿನ ಕೆಂಪಾಗುವುದು
ಆಕಾಶ ಕಪ್ಪು
ಬೆಂಕಿಯ ಮಳೆಯಾಗುವುದು
ಸೂರ್ಯ ಅಳುವನು
ಚಂದ್ರ ಶೋಕ ತಾಳಲಾರದೆ
ಮೋಡಗಳಲ್ಲಿ ಮರೆಮಾಚುವನು.

ಓ ಗೆಳೆಯ, ನಿನ್ನ ಮಾತು ಕೇಳಿ
ಎದೆ ಝುಂಮ್ಮೆಂದಿತು
ನನ್ನ ಆಳಕ್ಕಿಂತ ನಿನ್ನ ಹೃದಯದ
ನೋವಿನ ಆಳ ಅತಿ ಆಳ
ಆ ಮಹಾಯುದ್ಧದ ಅಗ್ನಿ ಪರೀಕ್ಷೆ
ಸಾವು ನೋವಿನ ಘಳಿಗೆ
ಬಾರದಿರಲೆಂದು ದೇವರಲ್ಲಿ
ಬೇಡುತಿರುವೆ.

- ಜಬೀವುಲ್ಲಾ ಖಾನ್

ಮುಂದೆ ಓದಿ

ವಿಶೇಷ ವರದಿ
ಇಂಟರ್ಸೆಪ್ಟರ್ ಅರಂಭ ಬಲು ಜೋರು, ಅದಕ್ಕೀಗ ಆಗಿದೆ ಬೋರು!

ಉಡುಪಿ : `ಇಂಟರ್ಸೆಪ್ಟರ್' ಆಧುನಿಕ ಟ್ರಾಫಿಕ್ ಕಂಟ್ರೂಲ್ ವಾಹನಕ್ಕೆ ಉತ್ತಮ ಆರಂಭಸಿಕ್ಕಿತ್ತು. ಬರುಬರುತ್ತಾ ರಾಯರ ಕುದುರೆ ಕತ್ತೆ ಆಯ್ತು ಅಂತಾರಲ್ಲಾ ಆ ಸ್ಥಿತಿಗೆ ಬಂದಿದೆ. ಬಂದ ಹೊಸತರಲ್ಲಿ ದಿನಕ್ಕ್ಕೊಂದು ಕಾಕತಾಳಿಯ ಕತೆ ಹುಟ್ಟಿಕೊಂಡು ಅಗ್ಗದ ಪ್ರಚಾರಕ್ಕೆ ಬಂದಿತ್ತು ಇಂಟರ್ಸೆಪ್ಟರ್. ಭರೀ ಭರ್ಜರಿ ಆರಂಭ ಪಡೆದ ವಾಹನಕ್ಕೆ ಬರುಬರುತ್ತಾ ಬೋರಾಯಿತೋ ಏನೋ ಗೊತ್ತಿಲ್ಲ ಸಪ್ಪೆಯಾಗಿದೆ. ವಾಹನ ಮಂದಿ ಮಾಗಧರ ಬೆಂಗಾವಲಿಗಷ್ಟೆ ಎಂಬ ಸ್ಥಿತಿಗೆ ಬಂದಿದೆ.ಇಂಟರ್ಸೆಪ್ಟರ್ ಬಂದ ವೊದವೊದಲು ರಾತ್ರಿ ಕುಡಿದು ಗಾಡಿ ಓಡಿಸಲಿಕ್ಕೆ ಹೆದರುತ್ತಿದ್ದರು. ಎಲ್ಲಾದರೂ ಇಂಟರ್ ಸೆಪ್ಟೆರ್ ವಾಹನಕ್ಕೆ ಸಿಕ್ಕಿಬಿದ್ದರೆ ದಂಡ ಕಟ್ಟಬೇಕಾಗುತ್ತದೆ ಎಂದು ವಾಹನ ಚಾಲಕರು ಕುಡಿತಕ್ಕೊಂದು ಬ್ರೇಕ್ ಹಾಕಿ ಗಾಡಿ ಚಲಾಯಿಸುತ್ತಿದ್ದರು. ಓವರ್ ಸ್ಪೀಡ್, ರಸ್ತೆ ನಿಯಮ ಎಲ್ಲಾ ಒಂದು ಹಂತಕ್ಕೆ ಬಂದಿದೆ ಅನ್ನೋವಷ್ಟರಲ್ಲಿ ಇಂಟರ್ಸೆಪ್ಟರ್ ಅಚಾನಕ್ ಬದಿಗೆ ಸರಿದಿದೆ. ಎಗ್ಗಿಲ್ಲದೆ ವಾಹನಗಳ ನಾಗಾಲೋಟ ನಡೆಯುತ್ತಿದೆ.



ಏನದು ಇಂಟರ್ಸೆಪ್ಟರ್ : ಸುಮಾರು 25 ಲಕ್ಷ ರೂ. ವೆಚ್ಚದ ಅತ್ಯಾಧುನಿಕ ವಾಹನ ಇಂಟರ್ಸೆಪ್ಟರ್. ಹದ್ದು ಮೀರಿದ ವಾಹನಗಳ ಮೇಲೆ ಇಂಟರ್ಸೆಪ್ಟರ್ ಹದ್ದಿನ ಕಣ್ಣಿಡುತ್ತದೆ. ವಾಹನಗಳ ಮೇಲೊಂದು ಕಣ್ಣಿಡಲು ಇಂಟರ್ಸೆಪ್ಟರ್ ಸದಾ ಸಂಚಾರಿ. ಉಡುಪಿ ಜಿಲ್ಲೆಗೂ ಇಂಟರ್ಸೆಪ್ಟರ್ ವಾಹನ ಬಂದಿದೆ. ಕುಂದಾಪುರ, ಕಾರ್ಕಳ ಮತ್ತು ಉಡುಪಿ ಇಂಟರ್ಸೆಪ್ಟರ್ ಕಾರ್ಯಸ್ಥಾನ.

ಈ ವಾಹನ ಟ್ರಾಫಿಕ್ ನಿಯಮ ಮೀರಿದವರನ್ನು `ರೆಡ್ಹ್ಯಾಂಡ್'' ಆಗಿ ಹಿಡಿಯುತ್ತದೆ. ತಪ್ಪು ಮಾಡಿ ಇಂಟರ್ಸೆಪ್ಟರ್ ವಾಹನಕ್ಕೆ ಸಿಕ್ಕಿಬಿದ್ದರೆ ತಪ್ಪಿಸಿಕೊಳ್ಳುವ ಪ್ರಶ್ನೆಯೇ ಬರೋದಿಲ್ಲ. ದಂಡ ಕಟ್ಟದೆ ಬೇರೆ ದಾರಿಯೂ ಇಲ್ಲಾ. ಇನ್ನು ಚಾಲಕ ನಾನು ಕರೆಕ್ಟ್ ಅಂತ ನ್ಯಾಯಾಲಯದ ಕಟಕಟೆ ಹತ್ತಿದರೂ, ಇಂಟರ್ಸೆಪ್ಟರ್ ಬೇಕಾಗುವ ಸಾಕ್ಷಿ ಒದಗಿಸುತ್ತದೆ.

ವಾಹನದ ಕತೆಯಂತೂ : ಮಿತಿ ಮೀರಿದ ವಾಹನ ದಟ್ಟಣೆ, ಹೆಚ್ಚುತ್ತಿರುವ ರಸ್ತೆ ಅಪಘಾತ, ಬೇಕಾಬಿಟ್ಟಿ ಉಪಯೋಗವಾಗುತ್ತಿರುವ ರಸ್ತೆ ನಿಯಮ, ಕಳ್ಳ ಸಾಗಣೆ ಮುಂತಾದ ಅಪಸೌವ್ಯಗಳ ಮೇಲೆ ಕಣ್ಣಿಡಲು ರಾಜ್ಯ ಸರಕಾರ ಕಂಡುಕೊಂಡ ಮಾರ್ಗ ಇಂಟರ್ಸೆಪ್ಟರ್. ಈ ವಾಹನ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ನಿರ್ಮಿಸಲಾಗಿದೆ. ಈ ವಾಹನದ ವೆಚ್ಚ ಎಷ್ಟು ಗೊತ್ತಾ? ಬರೋಬ್ಬರಿ 25 ಲಕ್ಷ ರೂ.
ಇಂಟರ್ಸೆಪ್ಟರ್ನಲ್ಲಿ ವೀಡಿಯೋ ಚಿತ್ರೀಕರಣ, ವೇಗ ಪರೀಕ್ಷಕ ಯಂತ್ರ ಮತ್ತು ಡ್ರಿಂಕ್ ಎಂಡ್ ಡ್ರೈವ್ ಪತ್ತೆ ಮಾಡುವ ಸಾಧನಾ ಇರುತ್ತದೆ. ಒಟ್ಟಿನಲ್ಲಿ ಹೇಳೋದಾದರೆ ಅಪರಾತಪರಾಕ್ಕೆ ಮದ್ದರೆಯುವ ಎಲ್ಲಾ ವಿಧಾನ ವಾಹನದಲ್ಲಿದೆ. ಸಂಚಾರಿ ವಾಹನ ನೋಡಲಿಕ್ಕೂ ದಿವಿನಾಗಿದೆ.

ಇಂಟರ್ಸೆಪ್ಟರ್ ವಾಹನ ನೂರು ಕಿಮೀ ಅಂತರದಲ್ಲಿ ಬರುವ ಮತ್ತು ಹೋಗುವ ವಾಹನದ ವಾಸನೆ ಹಿಡಿದು ಅದರ ವೇಗವನ್ನು ಕರಾರುವಕ್ಕಾಗಿ ದಾಖಲಿಸುತ್ತದೆ. ರಸ್ತೆ ಬದಿಯಲ್ಲಿ ನಿಂತು ವಾಹನ ಬರುತ್ತಿರುವ ಮಾಹಿತಿಯನ್ನು ಪೊಲೀಸರಿಗೆ ನೀಡುತ್ತದೆ. ನಿಯಮ ಮೀರಿ ಬರುತ್ತಿರುವ ವಾಹನವನ್ನು ತಡೆದು ದಂಡ ಹಾಕುತ್ತಾರೆ. ಪೊಲೀಸರು ಸೂಚಿಸಿಸದರೂ ನಿಲ್ಲದೆ ವಾಹನ ಮುಂದಕ್ಕೆ ಹೋದರೆ ಇಂಟರ್ಸೆಪ್ಟರ್ ಛೇಸ್ ಮಾಡೋಕೆ ಹಿಂಜರಿಯೋದಿಲ್ಲ. ಇನ್ನು ಸಿಕ್ಕಿಬಿದ್ದ ವಾಹನಗಳಿಗೆ ದಂಡ ಕಟ್ಟದೆ ವಿಧಿಯಿಲ್ಲ. ಸ್ಥಳದಲ್ಲೆ ದಂಡ ಕಟ್ಟದೆ ನ್ಯಾಯಾಲಯದ ಕಟ್ಟೆ ಏರಿದರೆ ನ್ಯಾಯಾಲಯ ಬರೆ ಎಳೆಯುತ್ತದೆ.

ವಾಹನಗಳಿಗೂ ಕಲೆ ಸ್ಪೀಡ್ ಲಿಮಿಟ್ ಇದೆ. ಬಾಡಿಗೆ ಕಾರು ಅಥವಾ ಬಸ್ಗಳಿಗೆ 65 ಕಿ.ಮೀ. ಸ್ಪೀಡ್ ಲಿಮಿಟ್ ಇದೆ. ಮಂಗಳೂರು, ಕುಂದಾಪುರ ಕಡೆ ಸಂಚರಿಸುವ ಯಾವ ಬಸ್ಸ್ಸೂ ನಿಯಮ ಪಾಲಿಸೋದಿಲ್ಲ. ಆದರೆ ಇಂಟರ್ಸೆಪ್ಟರ್ ಹೆದ್ದಾರಿಯಲ್ಲಿ ಕಾಣಿಸೋದಿಲ್ಲಾ!

ಜಿಲ್ಲೆಯಲ್ಲಿ 54 ಲಕ್ಷ ರೂ. ದಂಡ : ಇಂಟರ್ಸೆಪ್ಟರ್ ಇದೂವರಿಗೆ ಉಡುಪಿ ಜಿಲ್ಲೆಯಲ್ಲಿ 24 ಲಕ್ಷ ರೂ. ದಂಡ ವಸೂಲಿ ಮಾಡಿದೆ. ಅದೂ ಪುರುಸತ್ತಾದಾಗಿ ರಸ್ತೆ ಬದಿಯಲ್ಲಿ ನಿಂತಿದ್ದಕ್ಕೆ ಸಿಕ್ಕ ಪ್ರತಿಫಲ. ಕರಾರುವಕ್ಕಾಗಿ ಸಂಚಾರಿ ವಾಹನ ರಸ್ತೆಗಿಳಿದಿದ್ದರೆ ದಂಡ ದುಪ್ಪಟ್ಟಾಗುತ್ತಿತ್ತು ಎನ್ನೋದು ಕೆಲ ಜನರ ಆಶಯ. ಸಮಚಾರಿ ವ್ಯವಸ್ಥೆಯೂ ಹಿಡಿತಕ್ಕೆ ಬರುತ್ತಿತ್ತು.
ಕಳೆದ ಒಂದು ವರ್ಷದ ಹಿಂದೆ ಕುಂದಾಪುರದಲ್ಲಿ ಒಂದೇ ದಿನ 54 ಸಾವಿರ ರೂ. ದಂಡ ವಸೂಲಾಗಿದೆ ಎಂದರೆ ಅದು ಇಂಟರ್ ಸೆಪ್ಟರ್ ವಾಹನದ ತಾಕತ್ತು ಸೂಚಿಸುತ್ತದೆ.
ಪ್ರಸಕ್ತ ಹೆದ್ದಾರಿ ಸಂಚಾರ ಅಂದರೆ ಯಮಲೋಕದ ರಹದಾರಿಯಂತಾಗಿದೆ. ಇದರೊಟ್ಟಿಗೆ ಹೆದ್ದಾರಿ ವಿಸ್ತರಣೆ ದಿನಕ್ಕೊಂದು ಅವಗಢ ಸೃಷ್ಟಿಸುತ್ತಿದೆ. ಮೀನು ಲಾರಿಯವರದ್ದೂ ಮೃತ್ಯು ವೇಗ. ದಿನ ನಿತ್ಯ ಇದೆಲ್ಲಾ ನಡೆಯುತ್ತಿದ್ದರೂ ಇಂಟರ್ಸೆಪ್ಟರ್ ಹೆದ್ದಾರಿಯಲ್ಲಿ ಸಿಕ್ಕೊದಿಲ್ಲ.
ಹಿಂದೆಲ್ಲಾ ಪೋಲೀಸರು ಹೇಳೋದಿತ್ತು ನಮಗೂ ಅತ್ಯಾಧುನಿಕ ವಾಹನ, ಶಸ್ತ್ರಕೊಡೆ ಅಪಸೌವ್ಯಗಳನ್ನು ಮಟ್ಟಹಾಕುತ್ತೇವೆ ಅಂತ ಜಂಬ ಕೊಚ್ಚಿಕೊಳ್ಳುತ್ತಿದ್ದರು. ಅತ್ಯಾಧುನಿಕ ವ್ಯವಸ್ಥೆ ಮಾಡಿಕೊಟ್ಟರೂ ಅದೇ ಹಾಡು ಅದೇ ಪಾಡಿ. ಒಟ್ಟ್ಟಿನಲ್ಲಿ ಇಂಟರ್ಸೆಪ್ಟರ್ ಆಟಕ್ಕುಂಟು ಲೆಕ್ಕಕ್ಕಿಲ್ಲ.

ಶ್ರೀಪತಿ ಹೆಗಡೆ ಹಕ್ಲಾಡಿ.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಬಸಂತ್ ಕುಮಾರ್ ಪಾಟೀಲ್ ನಿರ್ಮಿಸಿದ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಕನ್ನಡ ಚಿತ್ರ 'ಕನಸೆಂಬೋ ಕುದುರೆಯನೇರಿ' ಚಿತ್ರಕ್ಕೆ ಫ್ರಾನ್ಸ್ ದೇಶದ ವೆಸೂಲ್ ಚಿತ್ರೋತ್ಸವದಲ್ಲಿ ವಿಮರ್ಶಕರ ಪ್ರಶಸ್ತಿ ದೊರೆತಿದೆ. ಅಮರೇಶ್ ನುಗಡೋಣಿಯವರ ಸವಾರಿ ಕಥೆ ಆದರಿಸಿದ ಈ ಚಿತ್ರ ರೋಮ್ ನಲ್ಲಿ ನಡೆದ ಏಷ್ಯನ್ ಚಿತ್ರೋತ್ರವದಲ್ಲೂ ಶ್ರೇಷ್ಠ ಚಿತ್ರ ಹಾಗೂ ವಿಮರ್ಶಕರ ಪ್ರಶಸ್ತಿ ಎರೆಡನ್ನೂ ಪಡೆದಿತ್ತು. ಕಳೆದ ವರ್ಷ ಶ್ರೇಷ್ಠ ಕನ್ನಡ ಚಿತ್ರ ಹಾಗೂ ಶ್ರೇಷ್ಠ ಚಿತ್ರ ಕಥೆಗಾಗಿ ಎರೆಡು ಪ್ರಶಸ್ತಿ ಪಡೆದಿತ್ತು. ಗೋಪಾಲಕೃಷ್ಣ ಪೈ ಸಹಚಿತ್ರ ಕಥಾ ಲೇಖಕರು.
ಉಮಾಶ್ರೀ ಹಾಗೂ ಬಿರಾದಾರ್ ಮುಖ್ಯ ಪಾತ್ರಗಳಲ್ಲಿದ್ದು ಅವರ ಮನೋಜ್ನ ಅಭಿನಯಕ್ಕಾಗಿ ಚಿತ್ರ ವಿಮರ್ಶಕರಿಂದ ಮುಕ್ತ ಪ್ರಶಂಸೆ ಪಡೆದಿರುತ್ತಾರೆ. ಉಳಿದ ಪಾತ್ರಗಳಲ್ಲಿ ಸದಾಶಿವ ಬ್ರಹ್ಮಾವರ್,ಪವಿತ್ರಾ ಲೋಖೇಶ್, ಶಿವರಂಜನ್, ಬೇಬಿ ಸೌಂದರ್ಯ ಇದ್ದಾರೆ. ಹಾ.ಮಾ.ರಾಮಚಂದ್ರ ಹಾಲ್ಕೆರೆ ಯವರ ಛಾಯಾಗ್ರಹಣ ವಿರುವ ಈ ಚಿತ್ರಕ್ಕೆ ಎಂ.ಎನ್.ಸ್ವಾಮಿಯವರ ಸಂಕಲನವಿದೆ. ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ ರವರು ಈ ಚಿತ್ರದ ಸಂಗೀತ ನಿರ್ದೇಶಿಸಿದರು.


ಕನಸೆಂಬೋ ಕುದುರೆಯನೇರಿ ಈ ತನಕ 14 ಚಿತ್ರೋತ್ಸವದಲ್ಲಿ ಭಾಗವಹಿಸಿದೆ. ಕನಸೆಂಬೋ ಕುದುರೆಯನೇರಿ ಚಿತ್ರದ ಚಿತ್ರ ಕಥೆ ಹಾಗೂ ಅಮರೇಶ ನುಗಡೋಣಿಯವರ ಮೂಲ ಕಥೆ ಎರೆಡೂ ಸೇರಿದ ಪುಸ್ತಕ ಸವಾರಿಯ ಕನಸು ಮಾರ್ಚ್ 5ರಂದು ಬಿಡುಗಡೆಯಾಗಲಿದೆ. ಡಾ. ಪ್ರಸಾದಸ್ವಾಮಿಯವರ ಸಂಪಾದಕತ್ವದಲ್ಲಿ ಸಿದ್ಧವಾದ ಈ ಪುಸ್ತಕವನ್ನು ಈ ವರ್ಷ ಸಿನಿಮಾ ಸಾಹಿತ್ಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಡಾ. ಕೆ.ಪುಟ್ಟಸ್ವಾಮಿಯವರು ಬಿಡುಗಡೆ ಮಾಡಲಿದ್ದಾರೆ. ಖ್ಯಾತ ಸಾಹಿತ್ಯ ವಿಮರ್ಶಕ ಎಸ್. ಆರ್. ವಿಜಯ ಶಂಕರ್ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಅದೇ ಸಂಧರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ಡಾ. ಗಿರೀಶ್ ಕಾಸರವಳ್ಳಿಯವರನ್ನು
ಸನ್ಮಾನಿಸಲಾಗುವುದು.

ಮುಂದೆ ಓದಿ

ರಾಜ್ಯ - ರಾಷ್ಟ್ರ

ವಿಶ್ವಕಪ್ ಜ್ವರ ಈ ಹಂತಕ್ಕೂ ತಲುಪಿದೆ ನೋಡಿ!. ಬೆನ್ನ ಮೇಲೆ ವಿಶ್ವಕಪ್ ಲೋಗೋ ಟ್ಯಾಟೋ ಬರೆಯಿಸಿ ತನ್ನ ವಿಶ್ವಕಪ್ ಮೋಹವನ್ನು ಪ್ರದರ್ಶಿಸುವ ವಿಶ್ವಕಪ್ ಪ್ರಿಯೆಯ ಪರಿ...ಹೇಗಿದೆ ನೋಡಿ ವಿಶ್ವಕಪ್ ಮಹಿಮೆ!












ಚಿತ್ರ ಕೃಪೆ: ಯಾಹೂ ಕ್ರಿಕೆಟ್.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಈ ಕನಸು ಮಂಗಳೂರಿನ ಮೊದಲ ಅಂತರ್ಜಾಲ ಕನ್ನಡ ಪೋರ್ಟಲ್ ಆಗಿ ಹೊರಹೊಮ್ಮುವ ಮೂಲಕ ಕರಾವಳಿ ಜಿಲ್ಲೆಯ ಸಾರಥ್ಯ ವಹಿಸಿ ರಾಜಕೀಯ , ಸಾಮಾಜಿನ, ಗ್ರಾಮೀಣ ಮತ್ತು ಕೃಷಿ ಸುದ್ದಿಗಳನ್ನೂ ಪ್ರಕಟಿಸುವ ಮೂಲಕ ದೇಶ ಮಾತ್ರವಲ್ಲ ವಿದೇಶಗಳಲ್ಲೂ ಸ್ಥಾನ ಪಡೆದಿರುವುದು ತುಂಬಾ ಸಂತಸ ತಂದಿದೆ. ಜೊತೆಗೆ ಸಾಹಿತ್ಯಕ್ಕೂ ಒತ್ತು ನೀಡುತ್ತಿರುವುದು ಪ್ರಶಂಸನಾರ್ಹ. ಇನ್ನಷ್ಟು ಈ ಕನಸು ಬೆಳೆಯಲಿ , ಕನ್ನಡಿಗರೆಲ್ಲರ ಕನಸು ನನಸಾಗಲಿ.

- ಮಹೇಶ್ ಪುಚ್ಚಪ್ಪಾಡಿ , ಪತ್ರಕರ್ತ.

ಮುಂದೆ ಓದಿ
8:40 PM

ಭಾವನೆ

Posted by ekanasu

ಸಾಹಿತ್ಯ

ಆಗಸದ ತುಂಬಾ ತುಂಬಿದ
ದಟ್ಟ ಕಾರ್ಮೋಡದ ಅಂಚಿನಲ್ಲೂ
ಒಂದು ಬೆಳ್ಳಿಗೆರೆ; ಆಹಾ...!
ಏನು ವೈಚಿತ್ರ್ಯ ಈ ಪ್ರಕೃತಿಯಾಟ
ಮನಸ್ಸಿನ ಭಾವನೆಗಳಂತೆ...



ದು:ಖದಲ್ಲಿ ಕಣ್ಣೀರು ಸುರಿಸಿ
ಸುಖದಲ್ಲಿ ತಂಗಾಳಿಯಂತೆ ನಗುಹರಿಸಿ
ಹತಾಶೆ, ಕೋಪಗಳನ್ನು ಬೇಸಿಗೆಯ
ಬಿಸಿಲಿನಂತೆ ಪ್ರಖರವಾಗಿಸುವಂತೆ

ದೇವರಿತ್ತ ವರವೋ...ಶಾಪವೋ
ಅಂತೂ ಜನ್ಮದತ್ತವಾಗಿ ಬಂದು
ನೆರಳಿನಂತೆ ಹಿಂಬಾಲಿಸುತ್ತಿದೆ
ಬಹುಶ: ಸಾವಿನವರೆಗೂ...!


- ಸೌಮ್ಯ ಸಾಗರ

ಮುಂದೆ ಓದಿ
8:27 PM

ಯೋಗ ... ಯೋಗ

Posted by ekanasu

ವೈವಿಧ್ಯ

ಸತತವಾಗಿ ಕಳೆದೆರಡು ವರುಷಗಳಿಂದ ಪ್ರಜಾವಾಣಿ ದಿನಪತ್ರಿಕೆಯ ಪ್ರತಿ ಶನಿವಾರದ ಭೂಮಿಕಾದಲ್ಲಿ ಬರುತ್ತಿದ್ದ ಯೋಗ ಭಾಗ್ಯವೆಂಬ ಲೇಖನಮಾಲೆಯನ್ನು ಓದುವ ಸುಯೋಗ ನನಗೆ ಇತ್ತೀಚೆಗೆ ದೊರಕಿತ್ತು. ಇದಕ್ಕೆ ಪೂರಕವೆಂಬಂತೆ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ನಡೆದ ಯೋಗ ಶಿಬಿರದಡಿ ಭಾಗವಹಿಸುವ ಸಂದರ್ಭವೊದಗಿ ಬಂತು. 15 ದಿನಗಳ ಕಾಲ ನಡೆದ ಈ ಯೋಗ ಶಿಬಿರದಲ್ಲಿ ಪಾಲ್ಗೊಂಡ ನಾನು ಸ್ಪೂರ್ತಿಯಿಂದ ಬರೆದ ಅನುಭವವಿದು...
ನಮ್ಮ ಮಂಗಳೂರಿನ ಶ್ರೀ
ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ
ವಿಶಿಷ್ಟ ತರಬೇತಿ ಶಿಬಿರ
ಅದುವೇ ಉತ್ತಮ ಜೀವನ ಶೈಲಿಗಾಗಿ 'ಯೋಗ' ||


ನವೆಂಬರ್ ತಿಂಗಳ ಅತ್ತ ಮಳೆಗಾಲ ಅಲ್ಲದ
ಆದರೂ ಜಡಿಗುಟ್ಟುವ ಮಳೆಯಬ್ಬರದ ನಡುವೆ
ಮುಂದೆ ಬರುವ ಚಳಿಗಾಲವನ್ನು ಸ್ವಾಗತಿಸುತ್ತಾ
ನಮ್ಮ ನಿಮ್ಮೆಲ್ಲರನ್ನೂ ಈ 'ಯೋಗ' ಶಿಬಿರದಡಿ
ಒಂದಾಗಿಸಿದ ಕೀರ್ತಿಯ ಗರಿ ಸಲ್ಲುತ್ತದೆ
ಎಸ್.ಡಿ.ಎಂ ಕಾಲೇಜು ಮುಖ್ಯಸ್ಥರಿಗೆ ಹಾಗೂ
ಯೋಗ ಕಲಿಸಿದ ಶ್ರೀ ಗುರುಗಳಿಗೆ ||

ಪ್ರಾಚೀನ ಭಾರತದ ದೊಡ್ಡ ಕೊಡುಗೆಯಾದ
ಭಾರತೀಯ ಯೋಗ ವಿಜ್ಞಾನವೆಂಬ
ಶ್ರೀ ಪತಂಜಲಿ ವಿರಚಿತ ಯೋಗಾಸನವನ್ನು
ನಮಗೆಲ್ಲಾ ಕರುಣಿಸಿದರು, ಆರೋಗ್ಯವೆಂಬ ಟಾನಿಕ್ ಭಾಗ್ಯವನ್ನು! ||

ಯಾರಿಗೆ ಬೇಡ ಆರೋಗ್ಯ?
'ಅಯ್ಯೋ ಕೂರಕ್ಕಾಗಲ್ಲ, ಕೂತರೆ ನಿಲ್ಲೊಕ್ಕಾಗಲ್ಲ ;
ಮಲಗಿದರೆ ನಿದ್ರೆ ಬಾರದು, ನಿದ್ದೆ ಮಾತ್ರೆ ನುಂಗಿದರೆ,
ಮತ್ತೆ ಕುಂಭಕರ್ಣ!

ಅಲ್ಲಿ ನೋವು ! ಇಲ್ಲಿ ಸೆಳೆತ !
ದೇಹವಿಡೀ ಆಲಸ್ಯ, ನಿಶ್ಯಕ್ತಿ . . . !

ಜೀವನದಲ್ಲಿ ಉತ್ಸಾಹ ಇಲ್ಲ ಲವಲವಿಕೆ ಮೊದಲೇ ಇಲ್ಲ
ಆದರೂ ನಾವು ನೀವುಗಳೆಲ್ಲಾ ಇಂದು
ಕುರುಡು ಕಾಂಚಾಣವೆಂಬ ಹಣದ ಹಿಂದೆ . . . ಹಿಂದೆ . . .
'ಯೋಗ'ವೆಂಬ ಆರೋಗ್ಯ ಭಾಗ್ಯ ನಿಧಿಯನರಸುತ
ಓಡುತ್ತೇವೆಯೇ?. ನೆವರ್...

ಹಲೋ,, ಇಲ್ಲಿ ಕೇಳಿ
ಬೆನ್ನು ಸೊಂಟ ನೋವೇ?
ಜಾನು ಶೀರ್ಷಾಸನ . . . ಸೇತು ಬಂಧಾಸನ . . . ಮಾಡಿ
ಮಂಡಿ, ಮೊಣಕಾಲಲ್ಲಿ ಸೆಳೆತವೇ?
ಉತ್ಕಟಾಸನ . . . ವೀರಾಸನ . . . ಪವನ ಮುಕ್ತಾಸನ . . .
ನೀವು ದಪ್ಪಗಿದ್ದೀರಾ ? ಚಿಂತಿಸಲೇಬೇಡಿ.
ಸೂರ್ಯನಿಗೆ ನಮಸ್ಕಾರ ಹಾಕಿ, ಕಪಾಲಭಾತಿ ಮಾಡಿ . . .
ರಕ್ತದೊತ್ತಡ ಏರಿತೇ?
ಶವಾಸನ, ಪದ್ಮಾಸನ, ಜಾನು ಶೀರ್ಷಾಸನ.

ದೇಹ ಸಕ್ಕರೆಯ ಕಾರ್ಖಾನೆಯೇ? ಪರಿಹಾರ ಇಲ್ಲಿದೆ.
ಜಾನು ಶೀರ್ಷಾಸನ, ಶಲಭಾಸನ, ಭುಜಂಗಾಸನ
ಏನು ನಿಮ್ಮ ಮಕ್ಕಳು ಓದುತ್ತಿಲ್ಲವೇ?
ಏಕಾಗ್ರತೆಯ ಕೊರತೆಯೇ?
ಪದ್ಮಾಸನ ಹಾಕಿಸಿ, ಶೀರ್ಷಾಸನದಲ್ಲಿ ನಿಲ್ಲಿಸಿ,
ಮತ್ತೆ . . ಮತ್ತೆ. . ಓಹ್ ! ಮರೆತೆ !
ಶಶಾಂಕಾಸನ ಮಾಡಿಸಿ, ಶವಾಸನದಲ್ಲಿ ಮಲಗಿಸಿ ಅಷ್ಟೆ !
ಹೆಣ್ಮಕ್ಕಳ ಸಮಸ್ಯೆಗಳಿಗಿದೆ ಇಲ್ಲಿ ರಾಮಬಾಣ !
ಬದ್ಧ ಕೋಣಾಸನ, ವೀರಾಸನ, ಸರ್ವಾಂಗಾಸನ.

ಅಯ್ಯೋ ಇಷ್ಟೆಲ್ಲಾ ಯೋಗ ? ಟೆನ್ಷನ್ ಆಯಿತೇ?
ಶವಾಸನ, ಅರ್ಧ ಚಕ್ರಾಸನ, ಶಶಾಂಕಾಸನ, ಮಕರಾಸನ. . .
ನಿಮ್ಮ ಒತ್ತಡಗಳಿಗೆಲ್ಲಾ ಪೂರ್ಣ ವಿರಾಮ!

ಸುಂದರ ಮಧುರ ಹೃದಯ ನಿಮ್ಮಲ್ಲಿದೆಯೇ?
ಅದು ನೋವಾಗದಂತಿರಲು
ಪದ್ಮಾಸನ, ಉತ್ತಿತ ಏಕಪಾದಾಸನ,
ಸರಳ ಪ್ರಾಣಾಯಾಮ ಧ್ಯಾನ. . .
ಮಾಡಿ ನೋಡಿ, ರೋಗವ ದೂಡಿ ||

ಮೊಬೈಲ್ ಯುಗದಲ್ಲಿ ನಾವಿಂದು ಸ್ವಾಭಾವಿಕವಾಗಿ . . .
ಮುಕ್ತವಾಗಿ ಉಸಿರಾಡುತ್ತಿಲ್ಲ್ಲ. . ಯಾಕೆ? ಪುರುಸೊತ್ತಿಲ್ಲ !
ಈ ಯೋಗದಲ್ಲಿರುವುದು ಮುಖ್ಯವಾಗಿ ನಾ ತಿಳಿದಂತೆ
ಚೈತನ್ಯದಾಯಕವಾದ ಉಸಿರಾಟದೊಂದಿಗೆ
ನಮ್ಮ ಶರೀರವನ್ನು ಬೇಕಾದ ರೀತಿಯಲ್ಲಿ
ಬಾಗಿಸಿ . . . ತಿರುಗಿಸಿ . . . ಚುರುಕುಗೊಳಿಸುವುದು . . ಅಷ್ಟೆ !

ಪರಿಣಾಮ ಅದ್ಭುತ! ಫಂಟಾಸ್ಟಿಕ್
ಯೋಗ ಆರೋಗ್ಯವರ್ಧಕ! ರೋಗ ನಿವಾರಕ!
ಅದಕ್ಕೆ ನಾವೆಲ್ಲರೂ
ಯೋಗವನ್ನು ಒಪ್ಪಿ ಅಪ್ಪಿಕೊಂಡರೆ,
ಮಿಸ್ ವಲ್ಡ್ ಯಾ ಮಿಸ್ ಇಂಡಿಯಾ ಅದೂ ಹೋಗಲಿ
ಮಿಸ್ ಪರ್ ಫೆಕ್ಟ್ ಆಗಬಹುದು!
ಯಾರಿಗ್ಗೊತ್ತು ಯೋಗದ ಕರಾಮತ್ತು !! ||


- ಭಾರತಿ ಜಗದೀಶ್.

ಮುಂದೆ ಓದಿ

ಪ್ರಾದೇಶಿಕ ಸುದ್ದಿ
ಮಂಗಳೂರು-ಕಾರ್ಕಳ ವೋಲ್ವೋ ಬಸ್
ಮಂಗಳೂರು :ಮಂಗಳೂರಿನಿಂದ ಕಾರ್ಕಳಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೋಲ್ವೋ ಬಸ್ ಸರ್ವಿಸ್ ಪ್ರಾರಂಭಿಸುವ ಪ್ರಸ್ತಾವನೆಯು ತುಂಬಾ ಸಮಯದಿಂದ ಕಾರ್ಯಗತಗೊಂಡಿಲ್ಲ.ಆದ್ದರಿಂದ ಮಂಗಳೂರಿನಿಂದ ಮೂಡಬಿದ್ರೆ ಮಾರ್ಗವಾಗಿ ಕಾರ್ಕಳಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ವೋಲ್ವೋ ಬಸ್ ಸಂಚಾರವನ್ನು ತಕ್ಷಣದಿಂದ ಪ್ರಾರಂಭಿಸಲು ಕ್ರಮ ಕೈಗೊಂಡು ವರದಿ ನೀಡಲು ವಿಜ್ಞಾನ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೇಮಾರ್ ದಕ್ಷಿಣಕನ್ನಡ ಮಂಗಳೂರಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ತಿಳಿಸಿದ್ದಾರೆ.

ಮುಂದೆ ಓದಿ

ವೈವಿಧ್ಯ

ನಮಗೆ ಸೌಖ್ಯವನ್ನು ಯಾವುದೇ ತೊಂದರೆ ಇಲ್ಲದೆ ಅನುಭವಿಸಬೇಕಾದರೆ ಪ್ರಥಮವಾಗಿ ನಮ್ಮ ಶರೀರ, ಇಂದ್ರಿಯಗಳಲ್ಲಿ ಯಾವುದೇ ಕಾಯಿಲೆ ಇಲ್ಲದೆ ಇರಬೇಕು. ಶರೀರದ ಭಾಗಗಳಾದ ಮೆದುಳು, ಕತ್ತು, ಎದೆ, ಶ್ವಾಸಕೋಶ, ಪಿತ್ತಕೋಶ, ಮೂತ್ರಕೋಶ, ಮಲಕೋಶ, ಅನ್ನನಾಳ, ಕಂಠನಾಳ, ಮೂತ್ರನಾಳ, ಗುದನಾಳ ಇತ್ಯಾದಿ ಭಾಗಗಳು ಸಮರ್ಪಕವಾಗಿ ಕೆಲಸವನ್ನು ನಿರ್ವಹಿಸುತ್ತಿರಬೇಕು.



ಆಧುನಿಕ ಜೀವನ ವಿಧಾನದಲ್ಲಿ ಮಹಿಳೆಯರಿಗೆ ಇತ್ತೀಚಿನ ದಿನಗಳಲ್ಲಿ ವ್ಯಾಯಾಮ ಹಾಗೂ ಆರೋಗ್ಯದ ಕೊರತೆ ಕಂಡುಬರುತ್ತದೆ. ಯಾಕೆಂದರೆ ಹಿಂದಿನ ಕಾಲದ ಮಹಿಳೆಯರಿಗೆ ಸಾಕಷ್ಟು ವ್ಯಾಯಾಮವಾಗಬಲ್ಲ ಬಹಳಷ್ಟು ಕೆಲಸಗಳಿದ್ದವು. ಉದಾ : ರುಬ್ಬುವುದು, ಒನಕೆಯಲ್ಲಿ ಭತ್ತ ಕುಟ್ಟುವುದು, ನೆಲ ಒರೆಸುವುದು, ಬಟ್ಟೆ ಒಗೆಯುವುದು ಇತ್ಯಾದಿ ಇರುತ್ತದೆ. ಅಲ್ಲದೆ ಬೆಳಿಗ್ಗೆ ಮತ್ತು ಸಂಜೆಯ ಹೊತ್ತಿನಲ್ಲಿ ಭಕ್ತಿಯಿಂದ ಭಜನೆ, ಧ್ಯಾನ, ದೇವರ ಪ್ರಾರ್ಥನೆಗಳನ್ನು ಮಾಡಿಕೊಂಡು ಶಾಂತಿ ನೆಮ್ಮದಿಯಲ್ಲಿ ಇರುತ್ತಿದ್ದರು. ಇಂದಿನ ಮುಂದುವರಿದ ಸಮಾಜದಲ್ಲಿ ಸೌಕರ್ಯಗಳು ಹೆಚ್ಚಿವೆ. ಹೆಚ್ಚಬೇಕಾದ ಅಗತ್ಯತೆಯೂ, ಅವಶ್ಯಕತೆಯೂ ಇದೆ. ಮಹಿಳೆಯರು ತಮ್ಮ ಕೌಟುಂಬಿಕ ಮತ್ತು ಉದ್ಯೋಗ ನಿರ್ವಹಣೆಗಾಗಿ ಆಧುನಿಕ ಸೌಕರ್ಯಗಳನ್ನು ಅಳವಡಿಸಿಕೊಳ್ಳಬೇಕಾಗಬಹುದು.
ಆದರೂ ಈ ಆಧುನಿಕ ಸೌಕರ್ಯಗಳಿಂದ ಈಗಿನ ದಿನಗಳಲ್ಲಿ ದೈಹಿಕ ವ್ಯಾಯಾಮದ ಕೊರತೆಯನ್ನು ನಿವಾರಿಸಲು ಆರೋಗ್ಯವನ್ನು ಪಡೆಯಲು ಯೋಗಾಸನಗಳು ಅತ್ಯವಶ್ಯಕ. ಯೋಗಾಸನದಿಂದ ದೈಹಿಕ, ಮಾನಸಿಕ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ. ಯಾರಿಗೆ ಈಗಿನ ಕೆಲಸಗಳನ್ನು ದೈಹಿಕ ವ್ಯಾಯಾಮದ ಕೊರತೆ ಇದೆಯೋ ಅಂಥವರು ದಿನಕ್ಕೆ ಕಡಿಮೆ ಪಕ್ಷ ಕೇವಲ ಅರ್ಧ ತಾಸುಗಳ ಕಾಲ 15ರಿಂದ 20 ಆಸನಗಳನ್ನು ಶಿಸ್ತು ಬದ್ಧವಾಗಿ ಕ್ರಮ ಪ್ರಕಾರವಾಗಿ ಉಸಿರಿನ ಗತಿಯೊಂದಿಗೆ ಮಾಡಿದರೆ ಧಾರಾಳ ಸಾಕು. ಯೋಗಾಭ್ಯಾಸದಿಂದ ಪ್ರತಿಯೊಂದು ಅಂಗವೂ ಪ್ರಚೋದನೆ ಪಡೆದು, ಸ್ಪೂರ್ತಿಯುತವೂ, ಹಗುರವೂ ಆಗಿ ಆರೋಗ್ಯ ಬಲಗಳು ಲಭಿಸುತ್ತವೆ. ಯೋಗಾಸನವು ಮನುಷ್ಯನ ಶರೀರದ ರಚನಾ ಶಾಸ್ತ್ರದ ಸಂಪೂರ್ಣ ಜ್ಞಾನದ ವೈಜ್ಞಾನಿಕ ಆಧಾರದ ಮೇಲೆ ನಿಂತಿದೆ. ಯೋಗಾಭ್ಯಾಸಿಯು, ಸದಾಚಾರಿಯೂ, ಸದ್ಗುಣ ಸಂಪನ್ನಳೂ ಆಗಿ ಯೋಗ್ಯ ಪ್ರಜೆಯಾಗುವಳು. ಶಿಸ್ತುಬದ್ಧವಾಗಿ ಕ್ರಮವತ್ತಾಗಿ ಉಸಿರಿನ ಗತಿಯೊಂದಿಗೆ ಯೋಗಾಸನ ಮಾಡುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸುಗಮವಾಗುವುದು. ರಕ್ತ ಶುದ್ಧಿಯಾಗುವುದು, ರಕ್ತದೊತ್ತಡದ ಏರಿಳಿತಗಳು ಹಿಡಿತಕ್ಕೆ ಬರುತ್ತವೆ. ಅಲ್ಲದೆ ರಕ್ತದ ಸಕ್ಕರೆ ಅಗತ್ಯದಷ್ಟೇ ಮಿತಿಯಲ್ಲಿರುತ್ತದೆ. ಖಾಯಿಲೆಗಳನ್ನು ಸುಲಭವಾಗಿ ಮಂಡಿನೋವು, ಕಾಲು ಸೆಳೆತ, ಮಾನಸಿಕ ಒತ್ತಡ ಮತ್ತು ಮುಟ್ಟಿನ ಸಮಸ್ಯೆ ಇತ್ಯಾದಿ ನಿವಾರಣೆಗೆ ನಮ್ಮ ಭಾರತೀಯ ಸಂಸ್ಕೃತಿ ಕಲೆಯಾದ ಯೋಗಾಸನಗಳು ತುಂಬಾ ಸಹಕಾರಿಯಾಗಿವೆ. ಯೋಗಾಸನವನ್ನು ಅಭ್ಯಾಸ ಮಾಡುವುದು ಜೀವನ ಸುಖಕ್ಕಾಗಿ. ಯೋಗಾಭ್ಯಾಸ ಮಾಡುವುದರಿಂದ ಸ್ತ್ರೀಯರ ದೈಹಿಕ ಸಾಮರ್ಥ್ಯ ಹೆಚ್ಚಿ ಸರ್ವತೋಮುಖ ಬೆಳವಣಿಗೆಯಾಗುತ್ತದೆ.


ಮಹಿಳೆಯರ ಆರೋಗ್ಯ ರಕ್ಷಣೆಗಾಗಿ ಇರುವ ಯೋಗಗಳ ಸಂಕ್ಷಿಪ್ತ ಪಟ್ಟಿ :

ಈಗಿನ ಆಧುನಿಕ ಮಹಿಳೆಯರ ಆರೋಗ್ಯ ಪಾಲನೆಗಾಗಿ ಇರುವ ಪ್ರಾಮುಖ್ಯವಾದ ಆಸನಗಳನ್ನು ಸಂಕ್ಷಿಪ್ತವಾಗಿ ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ. ಆದರೆ ಯೋಗಾಸನಗಳನ್ನು ಯಾವತ್ತು ವಿನ್ಯಾಸಗಳೊಂದಿಗೆ ಅಭ್ಯಾಸ ಮಾಡಬೇಕು. ವಿನ್ಯಾಸಗಳನ್ನು ಬಿಟ್ಟು ಅಭ್ಯಾಸ ಮಾಡಬಾರದು.
- ಆರಂಭದಲ್ಲಿ ಇಷ್ಟ ದೇವರ ಪ್ರಾರ್ಥನೆ
- ಕೆಲವು ಕ್ರಿಯೆಗಳಾದ ಕಪಾಲಭಾತಿ, ತ್ರಾಟಕ ಇತ್ಯಾದಿಗಳು
- ಕುತ್ತಿಗೆ ಭುಜಗಳ ಸರಳ ವ್ಯಾಯಾಮ (ಗುರುಗಳ ಸಲಹೆ ಮೇರೆಗೆ)
- ದೇಹದ ಜಡತ್ವ ಹೋಗಿ ಲಘುತ್ವ ಬರಲು ಕೆಲವು ಸರಳ ವ್ಯಾಯಾಮಗಳು
- ಸಾಧ್ಯವಾಗುವವರಿಗೆ ಸೂರ್ಯನಮಸ್ಕಾರಗಳು
- ತುಸು ವಿಶ್ರಾಂತಿ.

ಅಗತ್ಯದ ಯೋಗಾಸನಗಳ ಸಂಕ್ಷಿಪ್ತ ಪಟ್ಟಿ :

ತಾಡಾಸನ, ಅರ್ಧ ಚಕ್ರಾಸನ, ಉತ್ತಾನಾಸನ, ಪಾದ ಹಸ್ತಾಸನ, ಅರ್ಧ ಕಟಿ ಚಕ್ರಾಸನ, ಉತ್ಕಟಾಸನ, ತ್ರಿಕೋಣಾಸನ, ವೀರ ಭದ್ರಾಸನ, ಬದ್ಧ ಕೋಣಾಸನ, ಪದ್ಮಾಸನ, ಜಾನು ಶೀರ್ಷಾಸನ, ಪಶ್ಚಿಮೋತ್ತಾನಾಸನ, ವಜ್ರಾಸನ, ಶಶಾಂಕಾಸನ, ಉಷ್ಟ್ರಾಸನ, ಮಾರ್ಜಾಲಾಸನ, ವಕ್ರಾಸನ, ಊರ್ಧ್ವ ಪ್ರಸಾರಿತ ಪಾದಾಸನ, ಪವನ ಮುಕ್ತಾಸನ, ವಿಪರೀತ ಕರಣಿ, ಹಲಾಸನ, ಮಕರಾಸನ, ಭುಜಂಗಾಸನ, ಶಲಭಾಸನ, ಧನುರಾಸನ ಇತ್ಯಾದಿ. ಶವಾಸನ, ಸರಳ ಪ್ರಾಣಾಯಾಮ ನಾಡಿಶುದ್ಧಿ ಪ್ರಾಣಾಯಾಮ, ಸರಳ ಧ್ಯಾನ.

ಯೋಗ ಎಂದರೇನು?

ಇಂದು ವಿಶ್ವದ ಎಲ್ಲಾ ಜನಾಂಗದವರನ್ನು ಭಾರತದ ಸಂಸ್ಕೃತಿಯ ಉತ್ಕೃಷ್ಟ ಕಲೆಯಾದ ಯೋಗ ಶಾಸ್ತ್ರವು ಬಲವಾಗಿ ಆಕರ್ಷಿಸುತ್ತದೆ. ಯೋಗ ಎನ್ನುವ ಪದ ಸಂಸ್ಕೃತ ಮೂಲಧಾತುವಾದ 'ಯುಜ್' ಎನ್ನುವುದರಿಂದ ಬಂದಿದ್ದು ಕೂಡಿಸು, ಚಿತ್ತವೃತ್ತಿಯನ್ನು ನಿರೋಧಿಸು, ಮನಸ್ಸನ್ನು ಕೇಂದ್ರೀಕರಿಸು ಎನ್ನುವ ಆಜ್ಞೆಗಳನ್ನು ಕೊಡುತ್ತದೆ. ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ ಮತ್ತು ರಾಜಯೋಗಗಳೆಂಬ ನಾಲ್ಕು ವಿಧದ ಯೋಗಗಳಿವೆ. ಪತಂಜಲಿ ಯೋಗ ಸೂತ್ರದಲ್ಲಿ ಯೋಗ : 'ಚಿತ್ತವೃತ್ತಿ ನಿರೋಧಃ' ಎಂದು ತಿಳಿಸುತ್ತದೆ. ಚಿತ್ತದ ವೃತ್ತಿಗಳನ್ನು ಬಯಕೆಗಳನ್ನು ಸರ್ವಥಾ ತಡೆದು ನಿಲ್ಲಿಸಿ, ಏಕಾಗ್ರತೆ ಸಾಧಿಸುವುದು ಯೋಗ. ಋಷಿ ಪತಂಜಲಿಯವರು ಯೋಗದಲ್ಲಿ ಎಂಟು ಮೆಟ್ಟಿಲುಗಳನ್ನು ತಿಳಿಸಿದ್ದಾರೆ. ಅವು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ.

ಆಸನ ಎಂದರೇನು? ಮತ್ತು ಪ್ರಯೋಜನಗಳು ಏನು?

ಆಸನ ಎಂದರೆ ದೇಹದ ನಿಲುಮೆ ಆಗಿದೆ. ಇದು ಸುಖಕರವಾದ ಸ್ಥಿರವಾದ ಶರೀರದ ವಿವಿಧ ಭಂಗಿಗಳಾಗಿರುತ್ತವೆ. ಯೋಗಾಸನ ಮಾಡುವವರು ಯಮ ನಿಯಮ ಪಾಲಿಸಬೇಕು. ಯಮ ಎಂದರೆ ನೈತಿಕ ಸುಧಾರಣೆ ಮಾಡುವುದು. ನಿಯಮ ಎಂದರೆ ಉತ್ತಮ ದೈಹಿಕ ಹಾಗೂ ಮಾನಸಿಕ ನಡವಳಿಕೆಗಳ ಮೂಲಕ ಆರೋಗ್ಯ ರಕ್ಷಣೆ ಮಾಡುವುದು. ಆಸನವು ದೇಹವನ್ನು ಆ ಮೂಲಕ ಮನಸ್ಸನ್ನು ಆರೊಗ್ಯಕರವಾಗಿ ಮತ್ತು ಬಲಯುತವಾಗಿಯೂ ಸಮತೋಲನ ಸ್ಥಿತಿಯಲ್ಲಿಯೂ ಇರಿಸುತ್ತದೆ. ಯೋಗಾಸನವು ಮನುಷ್ಯನ ಶರೀರದ ರಚನಾ ಶಾಸ್ತ್ರದ ಸಂಪೂರ್ಣ ಜ್ಞಾನದ ವೈಜ್ಞಾನಿಕ ಆಧಾರದ ಮೇಲೆ ನಿಂತಿದೆ. ಯೋಗ ಸಾಧನೆಯಿಂದ ಪ್ರತಿಯೊಂದು ಅಂಗವೂ ಸ್ಪೂರ್ತಿಯುತವೂ, ಹಗುರವೂ ಆಗಿ ಆರೋಗ್ಯ ಬಲಗಳು ಲಭಿಸುತ್ತವೆ. ಯೋಗಾಭ್ಯಾಸಿಯು, ಸದಾಚಾರಿಯೂ ಸದ್ಗುಣ ಯೋಗ್ಯ ಪ್ರಜೆಯಾಗುವನು. ಗುರುಮುಖೇನವೇ ಯೋಗವನ್ನು ಕಲಿಯಬೇಕು. ಶಿಸ್ತು ಬದ್ಧವಾಗಿ ಕ್ರಮವತ್ತಾಗಿ ಉಸಿರಿನ ಗತಿಯೊಂದಿಗೆ ಯೋಗಾಸನ ಮಾಡುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸುಗಮವಾಗುವುದು. ರಕ್ತ ಶುದ್ಧಿಯಾಗುವುದು. ರೋಗ ನಿರೋಧಕ ಶಕ್ತಿ ಹೆಚ್ಚುವುದು. ಕಾಯಿಲೆಗಳನ್ನು ಸುಲಭವಾಗಿ ವೆಚ್ಚ ಮತ್ತು ಹಿಂಸೆ ಇಲ್ಲದೆ ಗುಣಪಡಿಸಬಹುದು. ಅದರಲ್ಲೂ ಮುಖ್ಯವಾಗಿ ಸೊಂಟನೋವು, ಬೆನ್ನುನೋವು, ಕಾಲು ಸೆಳೆತ, ಮುಟ್ಟಿನ ಸಮಸ್ಯೆ ಇತ್ಯಾದಿ ನಿವಾರಣೆಗೆ ಈ ಯೋಗಾಸನಗಳು ತುಂಬಾ ಸಹಕಾರಿಯಾಗಿವೆ. ಮುಂದೆ ಅಸೌಖ್ಯವಾಗುವುದನ್ನು ತಡೆದು ಉತ್ತಮ ಆರೋಗ್ಯವಂತಳಾಗಿ ಸುಖವಾಗಿ ಜೀವಿಸಬಹುದು. ರೋಗದಿಂದ ನರಳಬೇಕಾಗಿಲ್ಲ.


ಯೋಗಾಸನ ಕಲಿಯುವವರು ಈ ಕೆಳಗಿನ ಸೂಚನೆಗಳನ್ನು ಪಾಲಿಸಬೇಕು :

1. ಆಸನವನ್ನು ಖಾಲಿ ಹೊಟ್ಟೆಯಲ್ಲಿಯೇ ಮಾಡಬೇಕು, ಕಷ್ಟವಾದರೆ
ಎ) ಒಂದು ಲೋಟ ದ್ರವ ಆಹಾರವನ್ನು ಸೇವಿಸಬಹುದು. ಹೊಟ್ಟೆ ತುಂಬಾ ಉಂಡರೆ 4 ಗಂಟೆಯ ಅನಂತರ ಆಸನ ಮಾಡಬೇಕು. ಹಗುರವಾದ ಆಹಾರ ಸೇವಿಸಿದರೆ 1-2 ಗಂಟೆಯ ಅನಂತರ ಮಾಡಬಹುದು.
ಬಿ) ಆಹಾರವನ್ನು ತೆಗೆದುಕೊಳ್ಳಲು ಯೋಗಾಸನ ಮಾಡಿದ ಅರ್ಧ ಗಂಟೆಯ ಅನಂತರ ಆಗಬೇಕು.
ಸಿ) ಆಸನ ಅಭ್ಯಸಿಸುವ ಮುನ್ನ ಅಭ್ಯಾಸಿಯು ತನ್ನ ಮಲ ಮೂತ್ರ ಕೋಶಗಳನ್ನು ಬರಿದು ಮಾಡಿಡಬೇಕು.
ಡಿ) ವಿವಿಧ ಆಸನಗಳ ವೇಳೆ ಉಡುಪು ಮತ್ತು ದೃಷ್ಟಿ ಹೇಗಿರಬೇಕು ಎಂಬುದಕ್ಕೆ ಗುರುಗಳ ಆದೇಶವನ್ನು ಪಾಲಿಸಬೇಕು.
2. ಆಸನ ಅಭ್ಯಾಸಕ್ಕೆ ಬೆಳಗ್ಗೆ ಮತ್ತು ಸಂಜೆ ಅತ್ಯುತ್ತಮ ಸಮಯವಾಗಿದೆ.
3. ಆಸನ ಮಾಡಲು ಸ್ವಚ್ಛವಾದ ಗಾಳಿ, ಬೆಳಕು ಅಗತ್ಯ ಬೇಕು. ಸಮತಟ್ಟಾದ ನೆಲದ ಮೇಲೆ ಜಮಖಾನ ಹಾಸಿ ಮಾಡಬೇಕು.
4. ಆಸನ ಮಾಡಬಯಸುವವರಲ್ಲಿ ಶಿಸ್ತು, ದೃಢ ನಂಬಿಕೆ ಮತ್ತು ಸತತ ಪ್ರಯತ್ನ ಹಾಗೂ ಅಭ್ಯಾಸ ಈ ಮುಖ್ಯ ಗುಣಗಳಿರಬೇಕಾದುದು ಅತ್ಯವಶ್ತ.
5. ಆಸನಾಭ್ಯಾಸ ಮುಗಿದ ಅನಂತರ ಸ್ವಲ್ಪ ಹೊತ್ತು ಶವಾಸನದಲ್ಲಿ ಮಲಗಿರಬೇಕು. ಹೀಗೆ ಮಾಡಿದರೆ ಆಸನಾಭ್ಯಾಸದ ಬಳಲಿಕೆ ಮಾಯವಾಗುತ್ತದೆ. ಪ್ರತಿ ಆಸನಾಭ್ಯಾಸದ ನಂತರ ಅಲ್ಪಕಾಲ ವಿರಮಿಸಬೇಕು. ಆಗ ಆಸನದಿಂದ ಪ್ರಚೋದಿಸಲ್ಪಟ್ಟ ಅಂಗಾಂಗಳಿಗೆ ಸೂಕ್ತ ವಿಶ್ರಾಂತಿ ಸಿಕ್ಕಿ ಪುನಃ ಹೆಚ್ಚಿನ ಚೈತನ್ಯ ದೊರಕುವುದು.
6. ಆಸನಗಳನ್ನು ಪ್ರಾಯ, ಲಿಂಗ, ಜಾತಿ, ಮತ ಭೇದವಿಲ್ಲದೆ ಎಲ್ಲರೂ ಮಾಡಬಹುದು.
7. ಆದರೆ ಹೆಂಗಸರು ಮುಟ್ಟಾದಾಗ, ಗರ್ಭಿಣಿಯಾದಾಗ, ಬಾಣಂತಿ ಇದ್ದಾಗ ಮಾಡಬಾರದು.
8. ಬಿಸಿಲಿನಿಂದ ಬಂದ ಕೂಡಲೇ ಯೋಗಾಸನ ಮಾಡಬಾರದು.
9. ಯೋಗ್ಯ ಗುರುವಿನ ಮಾರ್ಗದರ್ಶನವಿಲ್ಲದೆ ಯೋಗಾಸನ ಮಾಡಬಾರದು. ಗುರುವಿನ ಎಲ್ಲಾ ಸಲಹೆ, ಸೂಚನೆಗಳನ್ನು ಪಡೆದುಕೊಂಡೇ ಅವುಗಳ ಪಾಲನೆ ಮಾಡಿಯೇ ಆಸನ ಅಭ್ಯಾಸ ಮಾಡಬೇಕು.
10. ಆಸನವನ್ನು ಆಯಾಸ ಮಾಡಿಕೊಂಡು ಮಾಡಬಾರದು.


'ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ
ನಿವೃತ್ತ ಸೀನಿಯರ ಹೆಲ್ತ್ ಇನ್ಸ್ಪೆಕ್ಟರ್
ಪಾರಿಜಾತ, ಮನೆ ಸಂಖ್ಯೆ 2-72:5
ಮಂಗಳೂರು.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಈ ಕನಸು ಸಂಪಾದಕರಿಗೆ,
ನಿಮ್ಮ `ಕನಸು' ಯಶಸ್ವಿಯಾಗಿ ಎರಡು ವರ್ಷಗಳನ್ನು ದಾಟಿದೆ. ಶುಭಾಶಯಗಳು. ವೈವಿಧ್ಯಪೂರ್ಣವಾದ ಲೇಖನ, ಕವನ, ಧಾರಾವಾಹಿ, ಚಿಂತನ, ಅಂಕಣಗಳ ಜೊತೆಗೆ ತಾಜಾ ಸುದ್ದಿಯನ್ನು ಕೂಡ ನೀಡುತ್ತಾ ಬಂದಿರುವ ಈ ವೆಬ್ಸೈಟ್, ಓದುಗರ ಮನ ಸೂರೆಗೊಂಡಿದೆ ಎಂಬುದರಲ್ಲಿ ಸಂಶಯವಿಲ್ಲ. ಸಂಪಾದಕ ಹರೀಶ್ ಕೆ ಆದೂರು ಮತ್ತು ತಂಡಕ್ಕೆ ಶುಭ ಹಾರೈಕೆಗಳು.

ಮುರಳಿ ಶೇಣಿ
ಸಂಪಾದಕ,
ಭಾಮಿನಿ ಮಾಸಪತ್ರಿಕೆ.

ಮುಂದೆ ಓದಿ

ಪ್ರಾದೇಶಿಕ ಸುದ್ದಿ

ಮುಂದೆ ಓದಿ
7:41 PM

ಬ್ರೆಡ್‌ ಹಲ್ವ

Posted by ekanasu

ವೈವಿಧ್ಯ

ಬೇಕಾಗುವ ಪದಾರ್ಥ
1 ಪೌಂಡ್ ದೊಡ್ಡ ಬ್ರೆಡ್
2 ಕಪ್ ಸಕ್ಕರೆ
1 ಕಪ್ ಹಾಲು
1 ಕಪ್ ತುಪ್ಪ ಮತ್ತು
ಆಗತ್ಯಕ್ಕೆ ತಕ್ಕಂತೆ ದ್ರಾಕ್ಷಿ , ಏಲಕ್ಕಿ ಪುಡಿ, ಗೋಡಂಬಿ ಚೂರು, ರೋಸ್ ಎಸೆನ್ಸ್ .



ಮಾಡುವ ವಿಧಾನ
ಬ್ರೆಡ್ಡನ್ನು ಸಣ್ಣ ಚೂರುಗಳಾಗಿ ಮಾಡಿ ತುಪ್ಪ ಹಾಕಿ ಬಾಣಲೆಯಲ್ಲಿ ಕೆಂಪಗೆ ಹುರಿಯಿರಿ. ಪ್ರತ್ಯೇಕ ಪಾತ್ರೆಯೊಂದರಲ್ಲಿ ಸ್ವಲ್ಪ ಸಕ್ಕರೆ ಮತ್ತು ಹಾಲು ಬೆರೆಸಿ ಪಾಕ ಮಾಡಿಕೊಳ್ಳಿ. ಹುರಿದಿಟ್ಟ ಬ್ರೆಡ್ಡನ್ನು ಹಾಲಿನ ಪಾಕದಲ್ಲಿ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಮಗುಚಿರಿ. ಈ ಮಿಶ್ರಣ ಗಟ್ಟಿಯಾಗುತ್ತಿರುವಂತೆಯೇ ತುಪ್ಪ, ಗೇರು ಬೀಜ, ಏಲಕ್ಕಿ ಪುಡಿ, ರೋಸ್ ಎಸೆನ್ಸ್ ಹಾಕಿರಿ.
ಮಗುಚುವುದನ್ನು ನಿಲ್ಲಿಸಿದರೆ ಮಿಶ್ರಣ ಅಡಿ ಹಿಡಿಯಬಹುದು. ಪಾಕ ಗಟ್ಟಿಯಾಗುತ್ತ ಒಂದು ಹದಕ್ಕೆ ಬಂದಾಗ, ತುಪ್ಪ ಸವರಿದ ತಟ್ಟೆಯಲ್ಲಿ ಹರಡುವುದು. ಆರಿದ ನಂತರ ತುಂಡು ಮಾಡಿ ಉಪಯೋಗಿಸಬಹುದು. ಇಲ್ಲದಿದ್ದರೆ ಕ್ಯಾರೆಟ್ ಹಲ್ವದಂತೆ ಚಮಚದಲ್ಲೂ ತಿನ್ನಬಹುದು.
- ವಿನಯ ರೈ, ನಾಗರತ್ನ

ಮುಂದೆ ಓದಿ

ರಾಜ್ಯ - ರಾಷ್ಟ್ರ
ಎಲ್ಲ ಕನ್ನಡ ಪ್ರೇಮಿಗಳಿಗೆ ಈ ಕನಸು ಮುಕ್ತವೇದಿಕೆಯಾಗಿ ತನ್ನ ಸೇವೆ ಸಲ್ಲಿಸುತ್ತಿದೆ. "ಈ ಕನಸಿನ" ವಿಶೇಷತೆಯೆಂದರೆ ಹೊಸಬರಿಗು ಸಹ ಬಿಚ್ಚುಮನಸ್ಸಿನಿಂದ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶ ಕಲ್ಪಿಸಿ ಕೊಡುತ್ತಿದೆ. ಎಲ್ಲರ ಪರವಾಗಿ "ಈ ಕನಸು.ಕಾಂ" ಗೆ ನನ್ನ ವಂದನೆಗಳು. "ನಿನ್ನ ಮಡಿಲಲಿ ನನ್ನ ಕವನಗಳ ಹೂ ಅರಳಿತು, ನಿನ್ನ ತೋಳಲಿ ನನ್ನ ಬರಹ ರೆಕ್ಕೆ ಬಿಚ್ಚಿತು, ನಿನ್ನ ಬೆರಳನು ಹಿಡಿದು ನಡೆಯುತಿರುವೆ, ನಿನ್ನನು ಮೊದಲ ಶಾಲೆಯೆಂದು ಕರೆಯುತಿರುವೆ.

- ಜಬೀವುಲ್ಲಾ ಖಾನ್

ಮುಂದೆ ಓದಿ
7:50 AM

ಮಳೆ...ಮಳೆ...

Posted by ekanasu

ಪ್ರಾದೇಶಿಕ ಸುದ್ದಿ
ಮಂಗಳೂರು: ದಕ ಜಿಲ್ಲೆಯಲ್ಲಿ ಮಳೆಯಾಗಿದೆ. ಕಳೆದ ರಾತ್ರಿ ಜಿಲ್ಲೆಯ ಹಲವು ಕಡೆಗಳಲ್ಲಿ ಉತ್ತಮ ಮಳೆ ಬಿದ್ದಿದೆ. ಗಾಳಿ,ಗುಡುಗು ಸಿಡಿಲುಗಳ ತೊಂದರೆಯಿಲ್ಲದೆ ಯತೇಚ್ಛವಾಗಿ ಮಳೆಸುರಿದಿದೆ. ರಾತ್ರಿ ಹತ್ತರ ಸುಮಾರಿಗೆ ಆರಂಭಗೊಂಡ ಮಳೆ ರಾತ್ರಿಯಿಡೀ ಸುರಿದಿದೆ. ಇದರಿಂದಾಗಿ ಅಡಿಕೆ ಕೃಷಿಕರು ತೊಂದರೆಅನುಭವಿಸುವಂತಾಗಿದೆ. ಅಡಿಕೆ ಕೃಷಿಕರು ಅಂಗಳದಲ್ಲಿ ಒಣಹಾಕಿದ್ದ ಅಡಿಕೆ ಅಕಾಲಿಕ ಮಳೆಯಿಂದಾಗಿ ತೋಯುವಂತಾಗಿದೆ. ಒಂದೆಡೆ ಬೆಳೆಕಡಿಮೆ, ಮತ್ತೊಂದೆಡೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಹೊಡೆತ ಇದೀಗ ಅಕಾಲಿಕ ಮಳೆಗೆ ಒಣ ಅಡಕೆಗಳು ಒದ್ದೆಯಾಗಿ ಮತ್ತೊಂದು ಅವಾಂತರ ಸೃಷ್ಟಿ.ಒಟ್ಟಾರೆಯಾಗಿ ಕೃಷಿಕ ನಿರಂತರ ತೊಂದರೆಅನುಭವಿಸುತ್ತಿದ್ದಾನೆ. ಮಳೆಯ ಆಗಮನದಿಂದ ಪರಿಸರದಲ್ಲಿ ತಂಪಾಗಿದೆ. ಧೂಳು ಕಡಿಮೆಯಾಗಿದೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮೂಡಬಿದಿರೆ: ಇಲ್ಲಿಗೆ ಸಮೀಪದ ಸಂಪಿಗೆ ಎಂಬಲ್ಲಿ ನಡೆದ ಭೀಕರ ಅಪಘಾತದಲ್ಲಿ 3ಮಂದಿ ಸಾವನ್ನಪ್ಪಿ 18ಮಂದಿ ತೀವ್ರ ಗಾಯಗೊಂಡಿದ್ದಾರೆ. ರಸ್ತೆ ಡಾಮರೀಕರಣಕ್ಕೆ ತೆರಳುತ್ತಿದ್ದ ಕೆಲಸಗಾರರನ್ನು ಹೊತ್ತೊಯ್ಯುತ್ತಿದ್ದ ಟಿಪ್ಪರ್ ಮೂಡಬಿದಿರೆ ಸಮೀಪದ ಸಂಪಿಗೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗುರುಳಿತ್ತು.ಚಾಲಕನ ನಿರ್ಲಕ್ಷ್ಯ ಅತಿವೇಗದ ಚಾಲನೆಯೇ ಘಟನೆಗೆ ಕಾರಣವಾಗಿದೆ. ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.ಗಾಯಾಳುಗಳು ಮೂಡಬಿದಿರೆಯ ಖಾಸಗೀ ಆಸ್ಪತ್ರೆ ಹಾಗೂ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಂದೆ ಓದಿ
7:09 PM

ಅಂತರಂಗ

Posted by ekanasu

ಸಾಹಿತ್ಯ

ತಲೆ ಮೇಲೆ ತೂಗಾಡುತ್ತಿದ್ದರೂ ಕತ್ತಿ
ನನ್ನಂತರಂಗದ ಕದವ ತಟ್ಟಿ
ಭಾವನೆಗಳೆಲ್ಲವ ಮೆಟ್ಟಿ
ನೆನಪುಗಳೆಲ್ಲವ ಮೀಟಿ
ಬಂದವನೇ ನೀನಾರು...?


- ಸೌಮ್ಯ ಸಾಗರ

ಮುಂದೆ ಓದಿ
6:53 PM

ಮನ ಮೋಹಕ...

Posted by ekanasu

ಕ್ಲಿಕ್...


ಯಾಣ...ಇದು ನಿಸರ್ಗದ ಸೋಜಿಗ. ಸೌಂದರ್ಯದ ಖಣಿ. ಇಲ್ಲಿನ ಬೃಹತ್ ಬಂಡೆಗಳು ಪ್ರಕೃತಿಯ ಅಚ್ಚರಿಗೊಂದು ನಿದರ್ಶನ. ಛಾಯಾಗ್ರಾಹಕರಿಗೆ ಇದೊಂದು ಸವಾಲಿನ ಕ್ಷೇತ್ರ. ಈ ಕಲ್ಲಿನ ಮೋಹಕ ಭಂಗಿಗಳನ್ನು ನನ್ನ ಪುಟ್ಟ ಕ್ಯಾಮರಾದಲ್ಲಿ ಸೆರೆಹಿಡಿದು ಈ ಕನಸಿಗೆ ಪ್ರೀತಿಯಿಂದ ಕಳುಹಿಸಿದ್ದೇನೆ...ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.


























- ಅನೂಪ್, ಆಳ್ವಾಸ್ ಪತ್ರಿಕೋದ್ಯಮ ಕಾಲೇಜು, ಮೂಡಬಿದಿರೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಬೆಂಗಳೂರು: ರಾಜ್ಯಾದ್ಯಂತ ಜೈವಿಕ ಇಂಧನದ ಜಪ ಆರಂಭವಾಗಲಿದೆ. ಉತ್ತರ ಕನ್ನಡದ 1,17,000 ಹೆಕ್ಟೇರ್ ಪ್ರದೇಶದಲ್ಲಿ ಜೈವಿಕ ಇಂಧನಕ್ಕಾಗಿ ಜೈವಿಕ ಇಂಧನ ಮೂಲಗಳ ಸಸ್ಯಗಳನ್ನು ಬೆಳೆಸುವ ಬಗ್ಗೆ ಚಿಂತಿಸಲಾಗಿದೆ. ಈ ಪ್ರಕ್ರಿಯೆ ಮಳೆಗಾಲಕ್ಕೂ ಮೊದಲೇ ಆರಂಭಗೊಳ್ಳಲಿದೆ. ಜೈವಿಕ ಇಂಧನ ಮೂಲಗಳಾದ ಜಾತ್ರೋಪ, ಹೊಂಗೆ, ಹಿಪ್ಪೆ, ಬೇವಿನ ಗಿಡಗಳನ್ನು ನಾಟಿಮಾಡುವ ಬಗ್ಗೆ ಚಿಂತಿಸಲಾಗಿದೆ.ಪರ್ಯಾಯ ಇಂಧನ ಪ್ರಸ್ತುತತೆಯನ್ನು ಗಮನಿಸಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.ಜೈವಿಕ ಇಂಧನ ಮೂಲಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪೂರಕ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.


ಜೈವಿಕ ಇಂಧನ ಅಭಿವೃದ್ಧಿ ಸೇರಿದಂತೆ ಜನರಲ್ಲಿ ಜೈವಿಕ ಇಂಧನದ ಕುರಿತಾದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಸಿರು ಹೊನ್ನು ಬರಡು ಬಂಗಾರ ಎಂಬ ವಿನೂತನ ಯೋಜನೆಯೊಂದನ್ನು ಸರಕಾರ ರೂಪಿಸಿದೆ. ಪಶ್ಚಿಮ ಘಟ್ಟ ಕಾರ್ಯಪಡೆ, ಜೀವ ವೈವಿಧ್ಯ ಮಂಡಳಿಯ ಅರಣ್ಯ ರಕ್ಷಣೆ ಕಾರ್ಯಕ್ರಮಗಳ ಮೂಲಕವೂ ಜೈವಿಕ ಇಂಧನ ಕುರಿತಾದ ಮಾಹಿತಿ ಜಾಗೃತಿಗೆ ಶ್ರಮಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದಾರೆ.

ಮುಂದೆ ಓದಿ
6:11 PM

ನದಿ

Posted by ekanasu

ಸಾಹಿತ್ಯ

ನಮ್ಮೂರ ಜಿವ ನದಿ
ನಲಿಯುತ ಮಿನುಗುತ ಜಾರಿತು
ಜಿಂಕೆಯಂತೆ ಬಂಡೆಗಳ ಹಾರಿತು
ತಿರುವು ಹಲವು ಝರಿ ಒಂದೆ
ತೀರ ಎರಡು ಗುರಿ ಒಂದೆ
ಮೀನುಗಳಿಗೆ ತಾಯಾಗಿ
ಪ್ರಾಣಿಗಳಿಗೆ ಹಾಲಾಗಿ
ಪಕ್ಷಿಗಳಿಗೆ ಜೇನಾಗಿ


ಹಸಿರಿಗೆ ಉಸಿರಾಗಿ
ರೈತರಿಗೆ ಆಸರೆಯಾಗಿ
ಹರಿಯಿತು ನಮ್ಮೂರ ಜೀವ ನದಿ
ಹುಟ್ಟಿ , ಬೆಳೆದು , ಸಮುದ್ರ ಸೇರಿತು
ನೀರಲಿ ನೀರು ಸೇರಿ ನೀರಾಯಿತು
ಉಪ್ಪಿನ ಸ್ನೇಹದಲಿ ಉಪ್ಪಾಯಿತು
ತಾಯಿಗಿಂತ ಬಂಧುವಿಲ್ಲ
ಉಪ್ಪಿಗಿಂತ ರುಚಿಯಿಲ್ಲ ಎಂಬ
ಗಾದೆಗೆ ಋಣಿಯಾಯಿತು

-ಜಬೀವುಲ್ಲಾ ಖಾನ್

ಮುಂದೆ ಓದಿ
3:58 PM

ರಥಯಾತ್ರೆ

Posted by ekanasu

ಪ್ರಾದೇಶಿಕ ಸುದ್ದಿ
ದ.ಕ.ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರಿಂದ ಇಸ್ಕಾನ್ ರಥಯಾತ್ರೆಗೆ ವೈಭವದ ಚಾಲನೆದೊರಕಿತು.












ಮುಂದೆ ಓದಿ

ವಿಶೇಷ ವರದಿ:ನಾಡೋಡಿ.

ವೇಣೂರು: ಕಾಲ ಬದಲಾಗಿದೆ. ಮನುಷ್ಯನ ಆಚಾರ ವಿಚಾರ, ಆಚರಣೆಗಳಲ್ಲೂ ಬದಲಾವಣೆ ಕಾಣತೊಡಗಿದೆ. ಜೊತೆ ಜೊತೆಗೆ ಪರಿಸರದಲ್ಲೂ ಬದಲಾವಣೆಗಳಾಗಿವೆ. ಯಾರಿಗೂ ಯಾವುದಕ್ಕೂ ಕಾಯುವ ಪುರುಸೊತ್ತಿಲ್ಲ...ಎಲ್ಲವೂ ಸಿದ್ಧವಾಗಿ ದೊರೆತರೆ ಅದನ್ನು ಉಪಯೋಗಿಸುವುದಷ್ಟೇ ಬಾಕಿ ಎಂಬಷ್ಟರಮಟ್ಟಿಗೆ ಮನುಷ್ಯ ಆಲಸಿಯಾಗಿದ್ದಾನೆ. ಇದಕ್ಕನುಗುಣವಾಗಿ ಮನುಷ್ಯ ದಿನಬಳಕೆಯ ವಸ್ತುಗಳೂ ಬದಲಾಗುತ್ತಿವೆ. ಬೆಲೆ ಏರಿಕೆಯ ತಾಪ ಒಂದಡೆಯಾದರೆ, ಕೃಷಿಕ ಇನ್ನೊಂದು ರೀತಿಯಲ್ಲಿ ಭೀತಿಯನ್ನೆದುರಿಸುತ್ತಾನೆ. ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆಯಿಲ್ಲ ಎಂಬ ನೋವು ಒಂದೆಡೆಯಾದರೆ ಅಧಿಕ ಇಳುವರಿಗಾಗಿ ವಿವಿಧ ಪ್ರಯತ್ನಗಳು ಮತ್ತೊಂದೆಡೆಯಿಂದ ಸಾಗುತ್ತಿದೆ. ಏತನ್ಮಧ್ಯೆ ವಿದೇಶೀ ಕೃಷ್ಯುತ್ಮನಗಳ ಆಮದು ಸ್ಥಳೀಯ ಕೃಷಿಕರಿಗೆ ಕಗ್ಗಂಟಾಗುತ್ತಿದೆ. ಇದೆಲ್ಲದರ ಮಧ್ಯೆ ಇದೀಗ ಮತ್ತೊಂದು ಶಾಕ್ ಉಂಟಾಗಿದೆ. ಅದೇ ತರಕಾರಿಗಳಲ್ಲಿ ಕಲಬೆರಕೆ!



ಅಚ್ಚರಿಯಾದರೂ ಸತ್ಯ. ಹೌದು ಇಂದು ಸೊಪ್ಪು ತರಕಾರಿ ಪದಾರ್ಥಗಳಲ್ಲಿಯೂ ತೀವ್ರ ಕಲಬೆರಕೆ!.ಇದು ಗ್ರಾಹಕರ ಅರಿವಿಗೆ ಬರುವ ಹೊತ್ತಲ್ಲಿ ಕಾಲ ಮಿಂಚಿಯಾಗುತ್ತಿದೆ.
ಘಟನೆ 1 : ವೇಣೂರು ಸಮೀಪದ ಪಡ್ಡಂತಡ್ಕದ ಸುಶಿಕ್ಷಿತ ಸಸ್ಯಾಹಾರಿ ಕುಟುಂಬವೊಂದರಲ್ಲಿ ಹೀರೇಕಾಯಿಯನ್ನು ಅಂಗಡಿಯಿಂದ ಖರೀದಿಸಿ ಅಡುಗೆ ಸಿದ್ಧಪಡಿಸಲಾಯಿತು. ಆದರೆ ಅಡುಗೆಯ ರುಚಿ ಮಾತ್ರ ಕಹಿಯಾಗಿತ್ತು. ಕಾರಣ ಹೀರೇಕಾಯಿ ವಿಶಜ್ವಾಲೆ ಕಹಿಯಾಗಿತ್ತು. ಇದು ಒಂದಲ್ಲ ಎರಡು, ಮೂರು ಬಾರಿ ಇದೇ ಅನುಭವ. ತರಕಾರಿ ಕೊಂಡದ್ದು ಅಂಗಡಿಯಿಂದ ಅಲ್ಲಿಗೆ ಬಂದದ್ದು ಘಟ್ಟ ಪ್ರದೇಶದಿಂದ.

ಘಟನೆ 2: ಅದೊಂದು ತರಕಾರಿ ಪ್ರಿಯ ಕುಟುಂಬ. ಸೊಪ್ಪು ತರಕಾರಿ ಎಂದರೆ ಆ ಕುಟುಂಬದ ಸದಸ್ಯರಿಗೆಲ್ಲ ಪಂಚಪ್ರಾಣ. ಮೂಡಬಿದಿರೆಯ ಪ್ರತಿಷ್ಟಿತ ಕಾಲೇಜೊಂದರ ಉಪನ್ಯಾಸಕರ ಮನೆಯಲ್ಲಿ ನಡೆದ ಘಟನೆ. ಸಂತೆಯಿಂದ ಕೊಂಡ ಸೊಪ್ಪು ತರಕಾರಿ ಕಳೆದ ಕೆಲ ದಿನಗಳಿಂದ ತೀವ್ರ ಕಹಿರುಚಿಯನ್ನು ಹೊಂದಿತ್ತು. ಒಂದೆರಡು ದಿನ ಅದೇನೋ ಅಡುಗೆಯಲ್ಲಿ ತೊಂದರೆ ಎಂದು ಸುಮ್ಮನಾದರೆ ಇತ್ತೀಚೆಗೆ ಇತರ ತರಕಾರಿಗಳೂ ಕಹಿಯನುಭವ ನೀಡುತ್ತಿದೆ ಎನ್ನುತ್ತಾರೆ.

ಘಟನೆ 3: ಹೊಸಂಗಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಚಂದ್ರಶೇಖರ ಭಟ್ ಅವರ ಮನೆಯಲ್ಲಿ ನಡೆದ ಘಟನೆ. ಅಂಗಡಿಯಿಂದ ಕೊಂಡ ಬದನೆ ತೀವ್ರ ಕಹಿ. ಮಾಮೂಲಿ ಬದನೆ ಚೊಗರು ರುಚಿಯನ್ನು ಹೊಂದಿದ್ದರೆ ಈ ಬಾರಿ ಅವರು ಕೊಂಡ ಕಿಲೋಗಟ್ಟಲೆ ಬದನೆಗಳು ಮಾತ್ರ ಅತ್ಯಂತ ಕಹಿರುಚಿಯಿಂದ ಕೂಡಿತ್ತು.

ಘಟನೆ 4 : ಮೂಡಬಿದಿರೆ ಹೃದಯ ಭಾಗದಲ್ಲಿರುವ ಜನಪ್ರಿಯ ಸಸ್ಯಾಹಾರಿ ಹೋಟೆಲ್ ಒಂದರ ಮಾಲಿಕರಿಗಾದ ಅನುಭವ. ಮಧ್ಯಾಹ್ನದ ಊಟಕ್ಕಾಗಿ ತಯಾರಿಸಿದ ಬದನೆಕಾಯಿ ಹುಳಿ, ಗೊಜ್ಜು, ಸಾಂಬಾರುಗಳನ್ನು ಉಪಯೋಗಿಸಲಾಗದ ಸ್ಥಿತಿ.ಕಾರಣ ಬದನೆಯ ತೀವ್ರ ಕಹಿರುಚಿ.ಕಿಲೋಗಟ್ಟಲೆ ಬದನೆಯನ್ನು ತೊಟ್ಟಿಗೆಸೆದು ತಲೆಮೇಲೆ ಕೈಯಿರಿಸಿ ಕೂರುವ ಸ್ಥಿತಿ ಅವರದ್ದು.

ಸೊಪ್ಪು ತರಕಾರಿಗಳು ಕರಾವಳಿ ಪ್ರದೇಶಕ್ಕೆ ಹೆಚ್ಚಾಗಿ ಘಟ್ಟ ಪ್ರದೇಶಗಳಿಂದ ಪೂರೈಕೆಯಾಗುತ್ತಿದೆ. ಘಟ್ಟ ಪ್ರದೇಶಗಳಲ್ಲಿ (ಉದಾ: ಚಿಕ್ಕಮಗಳೂರು, ಹಾಸನ, ಬೆಂಗಳೂರು ಆಸುಪಾಸುಗಳಲ್ಲಿನ ಹಳ್ಳಿಗಳಿಂದ)ಕನಿಷ್ಠ ಅವಧಿಯಲ್ಲಿ ಗರಿಷ್ಠ ಬೆಳೆ ತೆಗೆಯುವ ಸಲುವಾಗಿ ವಿವಿಧ ಕಸರತ್ತುಗಳು ನಡೆಯುತ್ತಿರುತ್ತವೆ. ಕೃಷಿಯಲ್ಲಿ ಇಳುವರಿ ಅಧಿಕ ಪಡೆಯುವ ಸಲುವಾಗಿ ವಿವಿಧ ರಾಸಾಯನಿಕಗಳ ಬಳಕೆ ಮಾಡಲಾಗುತ್ತಿದೆ. ಬೆಳೆದ ಗಿಡ,ಸೊಪ್ಪುಗಳಿಗೆ ಬಾಧಿಸುವ ಕೀಟಗಳ ಹತೋಟಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕಗಳನ್ನು ಬಳಸಲಾಗುತ್ತಿದೆ. ಆದರೆ ಇವೆಲ್ಲದರ ಪರಿಣಾಮ ಈ ಉತ್ಪನ್ನಗಳನ್ನು ಕೊಂಡು ಬಳಸುವ ಗ್ರಾಹಕನಮೇಲಾಗುತ್ತಿದೆ!

ಹೌದು ಇತ್ತೀಚೆಗೆ ಈ ರೀತಿಯ ತೊಂದರೆಗಳು ಅಧಿಕವಾಗಿವೆ. ಇದಕ್ಕೊಂದು ನಿದರ್ಶನ ಕಹಿಬದನೆ!
ಬದನೆಯ ಸಸ್ಯಶಾಸ್ತ್ರೀಯ ಹೆಸರು ಸೊಲಾನಮ್ ಝ್ಹಂತೋ ಕಾರ್ಪಂ . ಇದು ಸೋಲಾನೇಸೀ ಕುಟುಂಬಕ್ಕೆ ಸೇರಿದ ಸಸ್ಯ. ಬದನೆಕಾಯಿ ಒಂದು ಸಾಮಾನ್ಯ ಉಪಯೋಗದಲ್ಲಿರುವ ತರಕಾರಿ. ಮೂತಲಃ ಭಾರತ ಮತ್ತು ಶ್ರೀಲಂಕಾಗಳಿಗೆ ಸೇರಿದ ಸಸ್ಯ.
ಇದೊಂದು ಶುಚಿ ರುಚಿ ಉತ್ತಮ ತರಕಾರಿಯಾಗಿರುವುದರಿಂದ ಬದನೆಗೆ ಬೇಡಿಕೆ ಅಧಿಕ.ಅದಕ್ಕನುಗುಣವಾಗಿ ಅದರ ಬೆಳೆಯೂ ಅಧಿಕವಾಗಿದೆ. ಆದರೆ ಇತ್ತೀಚೆಗೆ ಈ ಬದನೆ ಕಹಿಯಾಗಿರುವುದು ಮಾತ್ರ ಹೆಚ್ಚು ಸುದ್ದಿಯಾಗಿಲ್ಲ. ಸಸ್ಯಶಾಸ್ತ್ರಜ್ಞರು, ಅಧ್ಯಯನಕಾರರ ಪ್ರಕಾರ ಸಸ್ಯದಲ್ಲಿರುವ ಅಲ್ಕೋಲೈಡ್ ರಾಸಾಯನಿಕದ ಏರುಪೇರಿನಿಂದಾಗಿ ಬದನೆಯ ಕಾಯಿ ಕಹಿಯಾಗಿರುವ ಸಾಧ್ಯತೆಗಳಿವೆ ಎನ್ನುತ್ತಾರೆ.
ಮೂಡಬಿದಿರೆ ಆಳ್ವಾಸ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕ, ಸಂಶೋಧಕ ಚಿಗುರು ಪ್ರಕಾಶ್ ಪ್ರಕಾರ ಅಧಿಕ ಇಳುವರಿಗಾಗಿ ಬಳಸುವ ಗೊಬ್ಬರಗಳು ಕೂಡಾ ಬದನೆ ಕಾಯಿಯಲ್ಲಿ ಕಹಿಗುಣ ಹೆಚ್ಚಾಗಲು ಕಾರಣವಾಗಬಹುದು. ಗಿಡ ಬೆಳೆಯುತ್ತಿದ್ದ ಸಂದರ್ಭದಲ್ಲಿ ಕೀಟ ಬಾಧೆಯನ್ನು ತಡೆಗಟ್ಟಲು ಬಳಸಿರುವ ಕೀಟನಾಶಕಗಳಿಂದಾಗಿಯೂ ಬದನೇಕಾಯಿ ಕಹಿಯಾಗುವ ಸಂಭವವನ್ನು ತಳ್ಳಿಹಾಕುವಂತಿಲ್ಲ. ಇತ್ತೀಚೆನ ದಿನಗಳಲ್ಲಿ ಪರಿಸರದಲ್ಲಾಗುತ್ತಿರುವ ಏರುಪೇರು, ವಾತಾವರಣದ ಬದಲಾವಣೆ ಜೊತೆಗೆ ಭೂಮಿಯಲ್ಲಿ ಜೈವಿಕ ಸಾಂಧ್ರತೆ ವೃದ್ಧಿಯಾಗಿರುವುದು ಕೂಡಾ ಬದನೆ ಕಹಿಯಾಗಲು ಕಾರಣವಾಗುವ ಸಾಧ್ಯತೆಯಿದೆ ಎನ್ನುತ್ತಾರೆ. ಪರಾಗ ಸ್ಪರ್ಶದಿಂದಲೂ ಈ ರೀತಿ ಕಹಿಬದನೆ ಸೃಷ್ಠಿಯಾಗುವ ಸಾಧ್ಯತೆ ಇದೆ ಎಂಬುದು ಅವರ ದಟ್ಟ ವಾದ. ಒಂದೇ ಜಾತಿ/ಕುಟುಂಬಕ್ಕೆ ಸೇರಿದ ಜೀನಸ್ ಹೊಂದಿರುವ ಇತರ ಪ್ರಬೇಧಗಳ ಸಸ್ಯಗಳಿಂದ ನಡೆಸ ಪರಾಗಸ್ಪರ್ಶದಿಂದಾಗಿಯೂ ಕಹಿಬದನೆ ಉತ್ಪಾದನೆ ಆಗಲು ಸಾಧ್ಯ ಎಂಬುದು ಅವರ ಅಭಿಪ್ರಾಯ.
ಕಹಿಬದನೆಯ ಕುರಿತಾಗಿ ಹೆಚ್ಚಿನ ಅಧ್ಯಯನ ಆಗಬೇಕಾಗಿದೆ. ಇದಕ್ಕಾಗಿ ಕಹಿಬದನೆ ಉತ್ಪಾದನೆಯಾದ ಗಿಡ,ಬೇರು,ಎಲೆ,ಕಾಯಿಗಳ ಸಮಗ್ರ ಅಧ್ಯಯನ ನಡೆಸಬೇಕಾಗಿದೆ.

ಮುಂದೆ ಓದಿ

ವೈವಿಧ್ಯ




ಪತ್ತೇದಾರಿಯೆಂದರೆ ಮೇಲ್ನೋಟಕ್ಕೆ ನಿಗೂಢವಾಗಿ ಉಳಿದಿರುವ ಅಥವಾ ರಹಸ್ಯವಾಗಿರುವುದನ್ನು ಶೋಧಿಸಿ ಅದನ್ನು ಬಹಿರಂಗ ಪಡಿಸುವುದು ಎಂದರ್ಥ. ಪತ್ತೇದಾರಿಕೆಯ ಕ್ರಮದಲ್ಲಿ ಸಾಧ್ಯ ಅಸಾಧ್ಯಗಳ ತುಲನಾತ್ಮಕ ಪರಿಶೀಲನೆಯ ಜೊತೆಗೆ ತಾರ್ಕಿಕ ಅನುಸಂಧಾನಗಳು ಬಳಕೆಯಾಗುತ್ತವೆ. ಆದ್ದರಿಂದ ಪತ್ತೇದಾರಿಯೆಂದರೆ ಪರಿಶೋಧನೆ ಅಥವಾ ಇರುವಿಕೆಯ ಬಗೆಗಿನ ತಾರ್ಕಿಕ ಮತ್ತು ಬೌದ್ಧಿಕ ವಿಶ್ಲೇಷಣೆ ಎಂದು ಕೂಡ ಕರೆಯಬಹುದು.

ಪತ್ತೇದಾರಿ ಸಾಹಿತ್ಯ ಕೇವಲ ಒಂದು ಸಾಹಿತ್ಯ ಮಾತ್ರವಲ್ಲ, ಅದು ಸಾಹಿತ್ಯದ ಓದುಗರನ್ನು ಹುಟ್ಟುಹಾಕುವ ಕಲೆಯೂ ಹೌದು. ಓದುಗರನ್ನು ತುದಿಗಾಲ ಮೇಲೆ ನಿಲ್ಲಿಸಿ, ಓದುವಂತೆ ಪ್ರೇರೇಪಿಸುವ ಕಾರ್ಯ ಪತ್ತೇದಾರಿ ಕಥನಕದಿಂದ ಸಾಧ್ಯವಾಗಿದೆ. ಸಾಹಿತ್ಯದಲ್ಲಿ ಎಷ್ಟೇ ಪ್ರಕಾರಗಳಿದ್ದರೂ ಪತ್ತೇದಾರಿ ಸಾಹಿತ್ಯವು ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಓದುಗನ ಆರನೆಯ ಇಂದ್ರಿಯವನ್ನು ಜಾಗೃತಗೊಳಿಸುವ ಶಕ್ತಿ ಈ ಸಾಹಿತ್ಯಕ್ಕಿದೆ.

ಕನ್ನಡದ ಪತ್ತೇದಾರಿ ಸಾಹಿತ್ಯಕ್ಕೆ ಬಂದರೆ 1892 ರಲ್ಲಿ ಪ್ರಕಟವಾದ ಸಿ. ರಾಜಗೋಪಾಲ ಶೆಟ್ಟಿಯವರ `ರಾತ್ರಿ ಚುಕ್ಕೆ ಹಗಲು ಚುಕ್ಕೆ' ಕನ್ನಡದ ಪ್ರಥಮ ಪತ್ತೇದಾರಿ ಕಾದಂಬರಿಯಾಗಿದೆ. ತದ ನಂತರ ಕನ್ನಡದಲ್ಲಿ ಪತ್ತೇದಾರಿ ಸಾಹಿತ್ಯವನ್ನು ಆರಂಭಿಸಿದ ತಲೆಮಾರಿನಲ್ಲಿ ನರಹರಿಶರ್ಮ, ಬಿ.ಪಿ. ಕಾಳೆ, ರಮೇಶರವರು ಒಳ್ಳೆಯ ಕೃತಿಗಳನ್ನು ರಚಿಸಿದ್ದಾರೆ. ಕನ್ನಡದ ಪತ್ತೇದಾರಿ ಕಥನಕ ಕ್ರಮದ ಪುನರುತ್ಥಾನ ಮತ್ತು ಸುವರ್ಣಯುಗದ ಹರಿಕಾರರೆಂದರೆ ವೀರಕೇಸರಿ ಸೀತಾರಾಮಶಾಸ್ತ್ರಿಗಳ ಮಗನಾದ ಮ. ರಾಮ ಮೂರ್ತಿಯವರು. ಇವರು ಕನ್ನಡದ ಹಳದಿಕೆಂಪು ಬಣ್ಣದ ಬಾವುಟದ ಜನಕರೂ ಹೌದು. ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರ ಮೊದಲ ಕಾದಂಬರಿ 1951ರಲ್ಲಿ ಪ್ರಕಟವಾದ `ಮುತ್ತಿನ ಬಳೆಯವಳು'. ಇವರ ಪ್ರಸಿದ್ಧ ಕಾದಂಬರಿ `ವೈಯಾಳಿಕಾವಲ್'. ಆ ಬಳಿಕ ಪತ್ತೇದಾರಿಯ ಸ್ಥಿರ ಪಾತ್ರವಾದ ಪುರುಷೋತ್ತಮನನ್ನು ಸೃಷ್ಟಿಸಿ ಖ್ಯಾತರಾದವರು ಎನ್. ನರಸಿಂಹಯ್ಯನವರು. ಇವರು ಪತ್ತೇದಾರಿ ಸಾಹಿತ್ಯದಲ್ಲಿ ಇತಿಹಾಸವನ್ನು ನಿರ್ಮಿಸಿದವರೆಂದರೆ ಸುಳ್ಳಲ್ಲ. ಕುಂದಾನಿ ಸತ್ಯನ್, ಬಿ.ಕೆ. ಸುಂದರರಾಜು, ಎಂ. ಜೀವನ್, ಮಾಭೀಶೇ, ಎನ್ ಗುಂಡಾಶಾಸ್ತ್ರಿ, ಜಿಂದೆ ನಂಜುಂಡೆ ಸ್ವಾಮಿ, ಪಿ. ರಾಜು, ಬಿ. ಎಚ್ ಸಂಜೀವಮೂರ್ತಿ, ಕಾಕೋಳು ರಾಮಯ್ಯ, ಪುಲಕೇಶಿ, ಬಿ. ವಿ. ಅನಂತರಾಮ, ಸಾಸ್ಕಾಮೂರ್ತಿ, ಚೈತನ್ಯ (ಮಾಧವ ಕುಲಕರ್ಣಿ), ಎಚ್. ಜಿ. ಶಿವಶಂಕರ, ಸದಾನಂದ, ಸಾ. ಕೃ. ಪ್ರಕಾಶ್, ಶಿವಾಜಿ ರಾವ್, ರಮೇಶ್ ನಾಯಕ್ ಅಲ್ಲದೆ ಮಹಿಳೆಯರಲ್ಲಿ ಕೆ. ಆರ್. ಪದ್ಮಜೆಯವರು ಕೂಡ ಕನ್ನಡದ ಪತ್ತೇದಾರಿ ಸಾಹಿತ್ಯಕ್ಕೆ ತಮ್ಮ ಕೊಡುಗೆಯನ್ನು ನೀಡಿದವರಲ್ಲಿ ಪ್ರಮುಖರು.

ಆ ನಂತರ ವಿಶೇಷವಾಗಿ ವಿಭಿನ್ನ ಶೈಲಿ, ಕಥಾವಸ್ತು ಮತ್ತು ನಿರ್ಧಿಷ್ಟ ಪತ್ತೇದಾರನ ಪಾತ್ರ ಸೃಷ್ಟಿಸಿದ ಕಥನಕಗಳಿಗೆ ಹೆಸರಾದವರು ಟಿ. ಕೆ. ರಾಮರಾವ್ ಅವರು. ಅವರ ಕಥನ ಶೈಲಿಯೆ ಮೋಹಕ ಮತ್ತು ಶಾಸ್ತ್ರೀಯ ದಾಟಿಯ ಕಥಾ ಸರಣಿ. ಕಣ್ಣಿಗೆ ಕಟ್ಟಿದಂತೆ ದೃಶ್ಯಗಳನ್ನು ಸೃಷ್ಟಿಸುವ ಅವರ ಬರವಣಿಗೆಯ ಶೈಲಿ ಓದುಗನನ್ನು ಆ ಸ್ಥಳಕ್ಕೆ ಕೊಂಡೊಯ್ದು ಬಿಡುತ್ತಿತ್ತು. ಅದಕ್ಕಾಗಿಯೇ ಅವರ ಹೆಚ್ಚಿನ ಕಾದಂಬರಿಗಳೆಲ್ಲಾ ದೃಶ್ಯಮಾಧ್ಯಮದಲ್ಲಿಯೂ ಯಶಸ್ಸು ಕಂಡಿವೆ. ಅವರ ಕಾದಂಬರಿಯಲ್ಲಿ ಹೆಚ್ಚಾಗಿ ಸಾಮಾಜಿಕ ಕಥಾ ಹಂದರದ ಜೊತೆಗೆ ಕುತೂಹಲದ ಸನ್ನಿವೇಶಗಳಿದ್ದು ಒಂದು ರೀತಿಯಲ್ಲಿ ಅದು ಕ್ಲಾಸಿಕಲ್ ಶೈಲಿಯೆಂದೇ ಖ್ಯಾತಿಯಾದವು. ಇವರ ನಂತರ ಪತ್ತೇದಾರಿ ಸಾಹಿತ್ಯಕ್ಕೆ ಅನರ್ಘ್ಯ ಸೇವೆ ಸಲ್ಲಿಸಿದವರೆಂದರೆ ಸುದರ್ಶನ ದೇಸಾಯಿಯವರು. `ಹಳದಿ ಚೇಳು' ಕಾದಂಬರಿಯ ಮೂಲಕ ಓದುಗರನ್ನು ಸೆಳೆದ ದೇಸಾಯಿಯವರು ಆಧುನಿಕ ತಂತ್ರಜ್ಞಾನ ಮತ್ತು ಸಮಕಾಲಿನ ವಸ್ತುಗಳನ್ನು ಆರಿಸಿಕೊಂಡು ಪತ್ತೇದಾರಿ ಕೃತಿಯನ್ನು ರಚಿಸುತ್ತಿದ್ದುದರಿಂದ ಅವರ ಹೆಚ್ಚಿನ ಕಾದಂಬರಿಗಳೆಲ್ಲಾ ವಾಸ್ತವಕ್ಕೆ ಸನಿಹವಾಗಿವೆಯೆನೋ ಅನಿಸುತ್ತಿತ್ತು.

ಇಂತಹ ಪತ್ತೇದಾರಿ ಕಥೆಗಳನ್ನು ಆದರಿಸಿಯೋ ಇಲ್ಲ ಸ್ವತಂತ್ರ್ಯವಾಗಿಯೋ ಪತ್ತೇದಾರಿ ಕಥೆಗಳು ಕನ್ನಡ ಚಿತ್ರರಂಗದ ಮಟ್ಟಿಗಂತು ಯತ್ತೇಚ್ಛವಾಗಿ ಬಂದಿವೆ. ಸಿ.ಐ.ಡಿ 999, ಅಪರೇಷನ್ ಡೈಮಂಡ್ ರಾಕೇಟ್, ಎಜೆಂಟ್ ಅಮರ್, ಜೇಡರ ಬಲೆ, ಶರವೇಗದ ಸರದಾರ, ಶ್!, ನಿಗೂಢ ರಹಸ್ಯ, ಮಣ್ಣಿನ ದೋಣಿ, ವರ್ಣ ಚಕ್ರ, ಸೀಳು ನಕ್ಷತ್ರ ಹೀಗೆ ಹಲವು ಸಿನೆಮಾಗಳು ನೋಡುಗರನ್ನ ತುದಿಗಾಲಲ್ಲಿ ನಿಲ್ಲಿಸಿದಂತೆ ಮಾಡಿ ಬಾಕ್ಸ್ ಆಫೀಸಿನಲ್ಲಿಯೂ ಗೆದ್ದು ಬಂದಿವೆ. ಒಂದು ಚಿತ್ರ ಗೆಲ್ಲಬೇಕಾದರೆ ಗಾಂಧಿನಗರದ ಲೆಕ್ಕ ಪ್ರಕಾರ ಆ ಚಿತ್ರ ತುಂಬಿದ ಗೃಹಗಳಿಂದ ನಿರಂತರವಾಗಿ ಮೂವತ್ತೈದು ದಿನ ಓಡಬೇಕು. ಆಗ ನಿರ್ಮಾಪಕನಿಗೆ ಮೋಸವಿಲ್ಲ, ಚಿತ್ರ ಕೂಡ ಯಶಸ್ವಿ ಚಿತ್ರವೆಂದು ಹೇಳಬಹುದು.

ಅಂತಹ ಜನಪ್ರಿಯ ಚಿತ್ರ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ `ಸಂಯುಕ್ತಾ'. ಖ್ಯಾತ ಲೇಖಕಿ ಕಾಕೋಳು ಸರೋಜಮ್ಮ ಅವರ `ಮುಸುಕು' ಕಾದಂಬರಿಯನ್ನು ಆಧರಿಸಿದ ಈ ಚಿತ್ರದಲ್ಲಿ ಬಾಲರಾಜ್, ಗುರುದತ್ತ್ ಶಿವಣ್ಣನ ಜೊತೆಗಿನ ಇನ್ನಿಬ್ಬರು ನಾಯಕರು. `ಈ ನಮ್ಮ ನಾಡು ಚೆಂದವೋ, ಈ ನಮ್ಮ ನುಡಿಯೆ ಅಂದವು, ಬಳು ಬಳುಕುತ ತರುಲತೆಗಳಲ್ಲಿ ಅರಳಿದ ಹೂ ಚೆನ್ನ' ಹಾಡಿನೊಂದಿಗೆ ಮೂವರು ಗೆಳೆಯರು ನಮ್ಮ ನಾಡನ್ನು ಹೊಗಳುತ್ತಾ ಎಂಟ್ರಿ ಪಡೆಯುವ ಈ ಚಿತ್ರದಲ್ಲಿ ಸಂಯುಕ್ತಾ ಅನ್ನುವ ಹುಡುಗಿಯ ಕೊಲೆಯಾಗಿರುತ್ತದೆ. ಈ ಕೊಲೆಯ ನಿಗೂಢತೆಯನ್ನು ಬೇಧಿಸುವುದೇ ಈ ಚಿತ್ರದ ಕಥಾವಸ್ತು.

ಚಿತ್ರದ ಕೊನೆಯವರೆಗೂ ಕುತೂಹಲ ಕೆರಳಿಸಿ ನೋಡುಗನನ್ನು ಉಸಿರು ಬಿಗಿ ಹಿಡಿದು ನಿಲ್ಲಿಸುವ ಶಕ್ತಿ ಈ ಚಿತ್ರದ್ದು. ಈ ಚಿತ್ರದ ಇನ್ನೊಂದು ಜನಪ್ರಿಯ ಹಾಡು `ಮೈಸೂರಿನಲ್ಲಿ ಮಲ್ಲಿಗೆ ಹೂವು ಉಂಟಮ್ಮ; ಮಂಗಳೂರಿನಲ್ಲಿ ಭಾರೀ ಕಡಲೆ ಉಂಟಮ್ಮ; ಈ ಊರಲಿ ಏನುಂಟು ನೀನೇ ಹೇಳಮ್ಮ?' ಹಾಡು ಮಂಗಳೂರಿನ ಕಡಲಿನ ಅಬ್ಬರವನ್ನು ತೋರಿಸುವ ದೃಶ್ಯವಿದೆ. ಈ ಚಿತ್ರ ಶಿವರಾಜ್ಕುಮಾರ್ ಅಭಿನಯದ ನಾಲ್ಕನೆ ಚಿತ್ರ. ಮೊದಲ ಮೂರು ಚಿತ್ರಗಳಾದ ಆನಂದ್, ರಥಸಪ್ತಮಿ, ಮನಮೆಚ್ಚಿದ ಹುಡುಗಿ ಚಿತ್ರಗಳ ಜಯಭೇರಿ ಅವರಿಗೆ `ಹ್ಯಾಟ್ರಿಕ್ ಹೀರೋ' ಬಿರುದನ್ನು ತಂದುಕೊಟ್ಟಿದೆ. ಈ ಮೂರು ಚಿತ್ರಗಳು ಕೂಡಾ ಕನ್ನಡದ ಕಥೆ, ಕಾದಂಬರಿಗಳನ್ನು ಆಧರಿಸಿ ತಯಾರಿಸಿದ್ದೆನ್ನುವುದು ಹೆಮ್ಮೆಯ ಸಂಗತಿ. ಮೊದಲನೆ ಚಿತ್ರ ವಿದ್ಯುಲತಾ ಅವರ `ಪ್ರತಿಬಿಂಬ' ನೀಳ್ಗಥೆಯನ್ನಾಧರಿಸಿದರೆ, ಎರಡನೆ ಚಿತ್ರ ವಿದ್ಯುಲತಾ ಅವರ ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದ ಅದೇ ಹೆಸರಿನ ಕಾದಂಬರಿಯನ್ನಾದರಿಸಿದೆ. ಇನ್ನು ಮೂರನೇ ಚಿತ್ರ ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ಅವರ `ಬೇಟೆ' ಕಾದಂಬರಿಯಾಧಾರಿತ ಚಿತ್ರ. ಹಿಂದೆ ಕನ್ನಡ ಸಾಹಿತ್ಯಕ್ಕೂ ಕನ್ನಡ ಸಿನಿಮಾಕ್ಕೂ ನಂಟು ಹೇಗಿತ್ತಲ್ಲವೆ?




-ಅನು ಬೆಳ್ಳೆ

ಮುಂದೆ ಓದಿ

ವಿಶೇಷ ವರದಿ

ಉಡುಪಿ : ತ್ರಿಶಂಕು ಸ್ಥಿತಿ? ಹುಟ್ಟಿದೂರಲ್ಲಿ ನೆಲೆ ಕಳೆದುಕೊಂಡಿದ್ದಾರೆ. ಹೊಟ್ಟೆ ಪಾಡಿಗಾಗಿ ಮೆಟ್ಟಿದೂರು ದೂರವಾಗುತ್ತದೆ. ಒಟ್ಟಿನಲ್ಲಿ ವಲಸೆ ಕಾರ್ಮಿಕರು ಅಕ್ಷರಶಃ ನಿರಾಶ್ರಿತರು.ಸ್ಥಿತಿ ತ್ರಿಶಂಕು!
ಬ್ರಹ್ಮಾವರ ಸಕ್ಕರೆ ಕಾರ್ಖಾನೆಗಾಗಿ ವಲಸೆ ಬಂದ ಕಾರ್ಮಿಕರಿಗೆ ಕಾರ್ಖಾನೆ ಮುಖವಡಿಯಾಗಿ ಮಲಗಿದೆ. ಆ ಕಡೆ ಊರಿಗೂ ಹೋಗಲಾಗದೆ, ಈ ಕಡೆ ನಿಂತಲ್ಲಿಯೂ ನಿಲ್ಲಲಾಗದೆ ಆಕಾಶವೇ ತಲೆ ಮೇಲೆ ಕಳಚಿಬಿದ್ದ ಹಾಗೆ ವಲಸೆ ಕಾರ್ಮಿಕರು ಸೋತು ಕುಳಿತಿದ್ದಾರೆ. ವಲಸೆ ಕಾರ್ಮಿಕರಸಂಘ ಕೂಡಾ ಇವರ ನೆರವಿಗೆ ಬರುತ್ತಿಲ್ಲ.ಇದು ವಲಸೆ ಕಾರ್ಮಿಕರ ಕತೆಯೂ ಹೌದು ವ್ಯಥೆಯೂ ಹೌದು.



ಬ್ರಹ್ಮಾವರ ಹಾರಾಡಿ ಗ್ರಾಮ ಸಕ್ಕರೆ ಕಾರ್ಖಾನೆ ದೂಪದಹಾಡಿ ಮಗ್ಗಲ್ಲಲ್ಲಿ ಕಳೆದ ಇಪ್ಪತ್ತೈದು ವರ್ಷದಿಂದ ಕೂತ ಕಾರ್ಮಿಕರಿಗೆ ಹೆದ್ದಾರಿ17ರ ವಿಸ್ತರಣೆ ಬಗಲುಹುಣ್ಣು. ಕುಂದಾಪುರ, ಉಡುಪಿ ನಡುವಿನ ಜೀವ ಮತ್ತು ಸಸ್ಯ ವೈವಿಧ್ಯಕ್ಕೆ ಕೊಡಲಿ ಬೀಸಿದ ಹೆದ್ದಾರಿ ವಲಸೆ ಕಾರ್ಮಿಕರ ಬದುಕಿನ ಮೇಲೆ ಮುರುಕೊಂಡು ಬಿದ್ದಿದೆ.

ಎಲ್ಲಿಂದ ಬಂದವರು : ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ-17ರ ಬಳಿ ಚಿಕ್ಕ ಚಿಕ್ಕ ಟೆಂಟ್ ಹಾಕಿ ಬದುಕು ಸಾಗಿಸುತ್ತಿರುವ ಕೂಲಿ ಕಾರ್ಮಿಕರ ಕೊಪ್ಪಳ ಜಿಲ್ಲೆ ಕುಷ್ಟಗಿತಾಲೂಕ್ ನಿಂದ ಬ್ರಹ್ಮಾವರಕ್ಕೆ ಬಂದವರು. ಬ್ರಹ್ಮಾವರದಲ್ಲಿ ಆರಂಭಗೋಂಡ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ಸಲುವಾಗಿ ಬಂದರು. ಕೆಲವರು ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡಿದ್ದರು. ಕಾರ್ಖಾನೆ ಮುಖವಡಿಯಾಗಿ ಮಲಗಿ ಹತ್ತು ವರ್ಷ ಪೂರೈಸಿದೆ. ಸಕ್ಕರೆ ಕಾರ್ಖಾನೆಯಲ್ಲಿ ದುಡುದ ಕೆಲ ಕಾರ್ಮಿಕರು ಇಹಲೋಕ ತ್ಯಜಿಸಿದ್ದಾರೆ. ಮತ್ತೆ ಕೆಲವರಿಗೆ ಸಕ್ಕರೆ ಕಾರ್ಖಾನೆ ಟೊಪ್ಪಿ ಹಾಕಿದೆ.

ಸಕ್ಕರೆ ಕಾರ್ಖಾನೆ ಬಂದ್ ಆದರೂ ವಲಸೆ ಕಾರ್ಮಿಕರು ಊರಿಗೆ ಹೋಗುವ ಮನಸ್ಸು ಮಾಡಲಿಲ್ಲ. ಊರಲ್ಲಿ ಅಂಗೈಅಗಲದ ಮನೆ ಬಿಟ್ಟರೆ ಮತ್ತೇನು ಇಲ್ಲಾ. ಇವರು ರಟ್ಟೆ ಕುಟ್ಟಬೇಕು ಹೊಟ್ಟೆ ತುಂಬಿಸಿಕೊಳ್ಳಬೇಕು. ಜೊತೆಗೆ ಊರಲ್ಲಿರುವ ಹಿರಿಯರನ್ನೂ ಸಲಹ ಬೇಕು.

ವೈವಿಧ್ಯತೆಯಲ್ಲಿ ಏಕತೆ : ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಮಗ್ಗಲ್ಲಿ ವಲಸೆ ಕಾರ್ಮಿಕರ ಐವತ್ತಕ್ಕೂ ಮಿಕ್ಕ ಟೆಂಟ್ ಹೌಸ್ ಇದೆ. ಮಕ್ಕಳು, ಮರಿ, ಚಳ್ಳೆ, ಪಿಳ್ಳೆ ಎಲ್ಲಾ ಸೇರಿದರೆ ಬರೋಬ್ಬರಿ 350 ರಷ್ಟು. ಹೆಚ್ಚಿನವರ ಅನಕ್ಷರಸ್ಥರು. ಕಲಿತವರು ಬೆರಳೆಣಿಕೆಯಷ್ಟು ಮಂದಿ ಇದ್ದಾರೆ.
ಟೆಂಟ್ ಮನೆಯಲ್ಲಿ ವಾಸ ಮಾಡುವ ಕುಟುಂಬದಲ್ಲಿ ಕುರುಬರದ್ದು ಸಿಂಹ ಪಾಲು. ಮುಸ್ಲಿಂ ಮತ್ತು ಬೇರೆಯವರೂ ಇದ್ದಾರೆ. ಇವರಲ್ಲಿ ಸೌಹಾರ್ದತೆಯಿದೆ. ಹಂದಿಗೂಡಿನಂತ ಟೆಂಟ್ ಮನೆಯಲ್ಲಿ ಬುದಕುತ್ತಿರುವ ಇವರ ತಾಕತ್ತಿಗೆ ಶರಣು ಎನ್ನದೆ ವಿಧಿಯಿಲ್ಲ.

ಟೆಂಟ್ ಹೌಸ್ ವಾಸಿಗಳು ಹಿಂದಿನವರ ಸಂಪ್ರದಾಯ ಮಾತ್ರ ಬಿಟ್ಟಿಲ್ಲ. ವರ್ಷಕ್ಕೊಮ್ಮೆ ಊರಿಗೆ ಹೋಗುತ್ತಾರೆ. ದಿಪಾವಳಿ ಕಳೆದ ಊರಲ್ಲಿ ನಡೆಯುವ `ಶರಣಪ್ಪನ ಜಾತ್ರೆ` ಮತ್ತು `ದೇವಮ್ಮನ ಜಾತ್ರೆಗೆ' ಊರಿಗೆ ಹೋದೊರು ಒಂದೆರಡು ದಿನ ಮನೆಯಲ್ಲಿದ್ದು, ಮತ್ತೆ ಯತಾಸ್ಥಾನದಲ್ಲಿ ಸ್ಥಾಪನೆಯಾಗುತ್ತಾರೆ. ಕೆಲಸದ ಬೇಟೆ ಆರಂಭಿಸುತ್ತಾರೆ.

ಟೆಂಟ್ ಮನೆಯಲ್ಲಿ ವಾಸಮಾಡೋ ಮಕ್ಕಳು ಮನಸ್ಸು ಬಂದರೆ ಶಾಲೆಗೆ ಹೋಗುತ್ತಾರೆ. ಇಲ್ಲಾ ಸೈಕಲ್ ಟಯರ್ ಹಿಡಿದು ತಟ್ಟುತ್ತಾ ಪೇರಿ ಹೊರಡುತ್ತಾರೆ. ಪೋಷಕರು ಕೆಲಸಕ್ಕೆ ಹೋಗೋದ್ರಿಂದ ಮಕ್ಕಳು ಶಾಲೆಗೆ ಹೋದವಾ, ಬಿಟ್ಟವಾ ಅಂತ ಕೇಳೋರಿಲ್ಲ.
ಟೆಂಟ್ ಗುಡಿಸಲು ನಿವಾಸಿ ಗಂಡಸರು ಯಾವ ಕೆಲಸಕ್ಕೂ ಜಗ್ಗೋದಿಲ್ಲ. ಬಾವಿ ಕೆಲದಿಂದ ಹಿಡಿದ ಕೃಷಿ ವರೆಗೆ, ರಸ್ತೆ ಕೆಲಸದಿಂದ ಹಿಡಿದು ಕತ್ತೆ ಚಾಕರಿವಗೆ ಇವರು ಹೊಂದಿಕೊಳ್ಳುತ್ತಾರೆ. ಗಂಡಸರು ದುಡಿಯುತ್ತಾರಲ್ಲಾ ಅಂತ ಹೆಂಗಸರು ಮನೆಯಲ್ಲಿ ಬೆಚ್ಚಗೆ ಕೂರೋದಿಲ್ಲ. ಅವರು ಕಲ್ಯಾಣ ಮಂಟಪ, ಮನೆ ಕೆಲಸ ಮತ್ತು ಹೊಟೇಲ್ ಚಾಕರಿಗೆ ಹೋಗುತ್ತಾರೆ. ಗಂಡಾಳು ದಿನಕ್ಕೆ 150 ರೂ. ದುಡಿದರೆ ಹೆಣ್ಣಾಳು 100 ರೂ. ಸಂಪಾದಿಸುತ್ತಾಳೆ.
ಟೆಂಟ್ ವಾಸಿಗಳ ಹೆಸರು ಅದೇ ಓಬಿರಾಯನ ಕಾಲದ್ದು. ಟೆಂಟ್ ನಿವಾಸಿಗಳು ಆಧುನಿಕ ಶೋಕಿಗೆ ಬೀಳಲಿಲ್ಲ. ಹಾಗೆ ದೇವರು, ದಿಂಡಿರ ಹೆಸರಿಡೋದನ್ನು ಕೈಬಿಟ್ಟಿಲ್ಲ. ಬಡಿಯಮ್ಮ, ನೀಲವ್ವ, ಶರಣಪ್ಪ, ಶರಣವ್ವ, ಶಾರವ್ವ, ಬಸಮ್ಮ, ಬಸಪ್ಪ ಹೀಗೆ ಹೆಸರುಗಳ ಪಟ್ಟಿ ಬೆಳೆಯುತ್ತದೆ.
ವಲಸೆ ಕಾರ್ಮಿಕರಿಗೆ ಊರಲ್ಲಿ ಓಟಿದೆ. ಚುನಾವಣೆ, ಗಿನಾವಣೆ ಬಂದರೆ ವಾಹನಮಾಡಿ ಇವರನ್ನು ಊರಿಗೆ ಕರೆದುಕೊಂಡು ಹೋಗುತಾರೆ ಚುವಾವಣೆಗೆ ನಿಂತವರು. ಓಟಾದ ನಂತರ ಮತ್ತೆ ವಲಸೆ ಕಾರ್ಮಿಕರು ಅಬ್ಬೆಪಾರಿಗಳು.

ಹಗಲೆಂದರೆ ಭಯ ಪಡುತ್ತಾರೆ : ಹೆಚ್ಚಿನ ಎಲ್ಲಾ ಜನರು ರಾತ್ರಿ ಭಯಪಟ್ಟರೆ ಟೆಂಟ್ ವಾಸಿಗಳು ಹಗಲೆಂದರೆ ಭಯ ಬೀಳುತ್ತಾರೆ. ಟೆಂಟ್ ಸಮುಚ್ಛಯದಲ್ಲಿ ಪಾಯಿಖಾನೆ ಜಳಕಾ ಕೋಲಿಗಳಿಲ್ಲ. ದೇಹ ಬಾಧೆ ತೀರಿಸಿಕೊಳ್ಳಲು ಇವರು ಇರುಳನ್ನು ಎದುಕರು ನೋಡಬೇಕು. ಇವರಿಗೆ ಬಯಲೇ ಶೌಚಾಯಲ ಬಟ್ಟಂಬಯಲೇ ಜಳಕಾ ಕೋಲಿ. ಕೆಲವರದ್ದು ಐಟಿ ಬಿಟಿ ತಂತ್ರಜ್ಞಾನದ ಬಾತ್ರೂ!
ವಲಸೆ ಕಾರ್ಮಿಕರ ಹಟ್ಟಿಯಲ್ಲಿ ನೀರಿಗೆ ಮತ್ತೊಂದು ತಲೆಬೇನೆ. ರಹದೂರದಿಂದ ನೀರು ತರಬೇಕು. ಕೆಲಸಕ್ಕೆ ಹೋಗೋದಾ ನೀರು ತರೋದು ಎಂಬ ಜಿಜ್ಞಾಸೆ ಇವರನ್ನು ಕಾಡಿದ್ದೂ ಇದೆ. ಒಟ್ಟಾರೆ ಮನುಷ್ಯರು ವಾಸಮಾಡಲಾಗದ ನಾಲಾಯಕ್ ಪರಿಸರದಲ್ಲಿ ವಲಸೆ ಕಾರ್ಮಿಕರ ವಾಸ್ಥವ್ಯ ಇರೋದು ಕಠೋರ ಸತ್ಯ.

ಬೇಡಿಕೆ ಏನು : ವಲಸೆ ಕಾರ್ಮಿಕರು ಇಂದ್ರಲೋಕ ಚಂದ್ರ ಲೋಕದ ಬೇಡಿಕೆ ಇಟ್ಟಿಲ್ಲ. ಇವರಿಗೆ ನೆರಳು ನೀಡುವ ಪುಟ್ಟ ಗುಡಿಸಲು ಕಟ್ಟಿಕೊಳ್ಳುವಷ್ಟು ಜಾಗಾ ಕೇಳುತ್ತಿದ್ದಾರೆ. ಪ್ರಸಕ್ತ ಬ್ರಹ್ಮಾವರ ಸರಕಾರಿ ಜಾಗದಲ್ಲಿ ಇವರು ಕೂತಿದ್ದಾರೆ. ಇವರ ಗುಡಿಸಲ ಹಿಂದೆ ಅರಣ್ಯ ಇಲಾಖೆ ಹಾಡಿಯಿದೆ. ಅತ್ತ ಅರಣ್ಯ ಇಲಾಖೆ ಭಯ ಇವರನ್ನು ಕಾಡುತ್ತಿರುವ ಜೊತೆಗೆ ಹೆದ್ದಾರಿ ವಿಸ್ತರಣೆ ಟೆಂಟ್ ಮನೆಗಳನ್ನು ದೂಡಿ ಹಾಕಿದೆ.
ಇನ್ನೂ ವಲಸೆ ಕಾರ್ಮಿಕರು ಊರಿಗಾದರೂ ಹಿಂದುರುಗಿ ಹೋಗುವಾ ಅಂದರೆ ಅದಕ್ಕೂ ಸಾಧ್ಯವಿಲ್ಲ. ಕಳೆದ ಪ್ರಕೃತಿ ವಿಕೋಪಕ್ಕೆ ಇವರ ಗುಬ್ಬಚ್ಚಿ ಗೂಡಿನ ಮನೆ ಅಪ್ಪಚ್ಚಿ. ಸರಕಾರದ ಮನೆಗಳು ಗಗನ ಕುಸುಮ.
ನಮಗೆ ಶ್ರೀಮಂತಿಕೆಯ ಬದುಕು ಬೇಡ. ಕನಿಷ್ಠ ಬದುಕು ಸಾಗಿಸಲಿಕ್ಕಾದರೆ ಸಾಕು. ಹೇಗಾದರೂ ನಾವು ಬದುಕಕೊಳ್ಳುತ್ತೇವೆ ಎಂದು ಕಸ್ತೂರಿ ಉಲಿಯುತ್ತಾಳೆ. ಸರಕಾರ ಸಣ್ಣದೊಂದು ಜಾಗ ಕೊಟ್ಟರೆ ಅದರಲ್ಲಿ ಮನೆ ಕಟ್ಟಿ ಕೂಲಿನಾಲಿ ಮಾಡಿ ಬದುಕುತ್ತೇವೆ ಎನ್ನೊದು ಮಮತಾ ಅವರ ಅಂತರಾಳದ ಮಾತು.
ವಲಸೆ ಕಾರ್ಮಿಕರಿಗೆ ಬದುಕು ಕಟ್ಟಿಕೊಳ್ಳೋದು ಎಷ್ಟು ಪ್ರಾಮುಖ್ಯವೋ ದಕ ಮತ್ತು ಉಡುಪಿ ಜಿಲ್ಲೆಯ ಜನರಿಗೆ ವಲಸೆ ಕಾರ್ಮಿಕರೂ ಅಷ್ಟೇ ಮುಖ್ಯ. ಅವಳಿ ಜಿಲ್ಲೆಯಲ್ಲಿ ಕಾರ್ಮಿಕರ ಕೊರತೆ ಅನುಭವಿಸುತ್ತಿರುವ ಸಮಯದಲ್ಲೇ ವಲಸೆ ಕಾರ್ಮಿಕರು ನೆರವಿಗೆ ಬಂದಿದ್ದಾರೆ. ಸಂಕಷ್ಟದಲ್ಲಿರುವ ಹೊಟೇಲ್ ಉದ್ಯಮಿಗಳ ನೆರವಿಗೆ ವಲಸೆ ಕಾರ್ಮಿಕ ಮಹಿಳೆಯರು ನಿಂತಿದ್ದಾರೆ. ಒಂದೊಂಮ್ಮೆ ವಲಸೆ ಕಾರ್ಮಿಕರು ಒಕ್ಕಲೆದ್ದು ಹೋದರೆ ಅದರ ಪರಿನಾಮ ಅವಳಿ ಜಿಲ್ಲೆಯಲ್ಲಿ ಆಗುತ್ತದೆ. ಕಾರ್ಮಿಕರ ಕೊರತೆಯಿಂದ ರಸ್ತೆ, ಕಟ್ಟಡ ಕೃಷಿ ಚಟುವಟಿಕೆಗೆ ಹಿನ್ನೆಡೆಯಾಗಲಿದೆ. ಈ ಎಲ್ಲಾ ವೈಪರೀತ್ಯ ಹೋಗಲಾಡಿಸಲು ಸರಕಾರ ಇವರಿಗೆ ಮನೆ ಕಟ್ಟಿಕೊಳ್ಳಲು ಜಾಗ, ಕುಡಿಯವ ನೀರು ಮತ್ತು ರೇಶನ್ ಕಾರ್ಡ್ ನೀಡಬೇಕಾಗಿದೆ. ಸರಕಾರ ಮತ್ತು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ವಲಸೆ ಕಾರ್ಮಿಕರ ನೆರವಿಗೆ ಬರುತ್ತದಾ?

ಪ್ರೀತಿಮಾಡು ತಪ್ಪೇನಲ್ಲಾ : ಟೆಂಟ್ ಹೌಸನಲ್ಲಿ ಪ್ರೀತಿ ಮಾಡೋದು ತಪ್ಪೇನಲ್ಲಾ ಅಂತಾರೆ. ಪ್ರೀತಿ ಮಾಡಿದ ಜೋಡಿಗೆ ಮದುವೇನೂ ಮಾಡ್ತಾರೆ. ಅದರೆ ಒಂದು ಕಂಡೀಶನ್ ಇದೆ. ಲೌವ್ ಮಾಡೋದಾದರೆ ತಮ್ಮ ಕುಲದವರನ್ನೇ ಪ್ರೀತಿಮಾಡಬೇಕು. ಇಲ್ಲಾ ತಮ್ಮ ಜಾತಿಗಿಂತ ಮೇಲಿನ ಜಾತಿಯರಾದರೂ ಪ್ರೀತಿಗೆ ಅಡ್ಡಿಯಿಲ್ಲ. ಎಲ್ಲಾದರೂ ಕೆಳಸ್ಥರದ ಜನರೊಟ್ಟಿಗೆ ಪ್ರತಿ ಅರಳಿದರೆ ಭಹಿಷ್ಕಾರ ಗ್ಯಾರೆಂಟಿ. ಪ್ರೀತಿ ಮಾಡೋರು ಹುಷಾರ್.


- ಶ್ರೀಪತಿ ಹೆಗಡೆ ಹಕ್ಲಾಡಿ

ಮುಂದೆ ಓದಿ
6:10 PM

ನಿರೀಕ್ಷೆ...

Posted by ekanasu

ಸಾಹಿತ್ಯ

ಮುಂಜಾನೆ ಸೂರ್ಯ ಹೊಂಬಿಸಿಲಲಿ ಮಿಂದು
ಮೂಡಣ ಬಾಗಿಲ ಕದ ತೆಗೆದು
ಅಶ್ವರಥವೇರಿ ಬರುತಾನ
ಮುಂಬಾಗಿಲ ಬಳಿಗೆ ನನ್ನಯ
ಒಳಗೆ ಭರವಸೆಯ ಬಿಸಿಲೊಡೆದು
ಬೆಳ್ಳಾನೆ ಬೆಳಕ ತರುತಾನ


ಮುದುಡಿ ಮೊಗ್ಗಾದ ಮನ
ಹಿರಿ ಹಿರಿ ಹಿಗ್ಗಿದೆಯೋ ನನ್ನ
ಸೂರ್ಯನ ಆಗಮನದಿ ಅರಳಿ
ಹಿಗ್ಗಿದ ನನ್ನಯ ಮನವು
ಬಣ್ಣ ಬಣ್ಣದ ಹೂವಾದವೋ

ಮುತ್ತು ಮಾಣಿಕ್ಯ ಎನ್ನದೆಯೇ
ನನ್ನ ಮನದೊಳಗೆ ಮನದೊಡೆಯ
ಪ್ರೀತಿಯ ಮಕರಂದ ತುಂಬಿದನೋ
ದುಂಬಿಯಾಗಿ ನನ್ನ ಒಡಲೆಲ್ಲಾ ಕೊರೆದು
ಮಧುವೆಲ್ಲಾ ಹೀರಿ ಹಾರಿದನೋ

ಮುಸ್ಸಂಜೆ ಸೂರ್ಯ ಸಾಗರದಿ ಮುಳುಗಿ
ಪಡುವಣದ ಪಲ್ಲಂಗದಲ್ಲಿ ಕದಹಾಕಿ
ಮಲಗಿದನೋ... ಅರಳಿನಿಂತ ಹೂವ
ಬಾಡಿಸಿ ಬತ್ತಿಸಿ ನನ್ನಯ ಮನವ
ಜೀವ ಸೆಲೆಯ ಕಿತ್ತು ದುಃಖದ ಮಡುವಲ್ಲಿ
ನೂಕಿದನು ಆದರೂ ನನ್ನ
ಸೂರ್ಯ ಮತ್ತೊಮ್ಮೆ ಬಂದೇ ಬರುತಾನೋ...

- ಸೌಮ್ಯ ಸಾಗರ.

ಮುಂದೆ ಓದಿ
| | |Home