ಸಾಹಿತ್ಯ
ನೀನು ನನಗೆಲ್ಲಾ ಕೊಟ್ಟಿರುವೆ...
ಬದುಕಿರುವ ಕೊನೆಯ ಕ್ಷಣದವರೆಗೂ
ನಂತರವೂ ನಿನ್ನ ನೆನಪುಗಳನ್ನು...
ಹೇಗೆ ಮರೆಯಲಿ ಅವುಗಳನ್ನು...
ನಿನಗಾಗಿ ನಿನ್ನ ನೆನಪುಗಳಿಗಾಗಿ
ನನ್ನಿಂದ ಏನನ್ನೂ ನಿರೀಕ್ಷಿಸಬೇಡ...
ಪ್ರತಿನಿತ್ಯ ಸುರಿಸುತ್ತಿರುವ ಎರಡು ಹನಿ
ಕಣ್ಣೀರಿನ ಹೊರತಾಗಿ...
- ಸೌಮ್ಯ, ಸಾಗರ.
ಈ ಕನಸು ಅವಾರ್ಡ್
ಅನೇಕ ವೇಳೆ ನಮ್ಮ ಕಣ್ಣು ಏನನ್ನೊ ಅರಸುತ್ತಿರುತ್ತದೆ,ಆದರೆ ವನ್ಯಜೀವಿ ಸಂಶೋಧಕರಾದ ಕೃಪಾಕರ ಮತ್ತು ಸೇನಾನಿಯವರ ಕ್ಯಾಮೆರಾ ಕಣ್ಣು ಸತತ ಮೂರು ದಶಕಗಳಿಂದ ಅರಸಿದ್ದು ಸಂಘಜೀವಿಗಳಾದ ಸೀಳುನಾಯಿಗಳನ್ನ. ಮನುಷ್ಯನ ರೀತಿಯ ಸಾಮಜಿಕ ಸಂ-ರಚನೆಯನ್ನು ಹೊಂದಿರುವ ಸೀಳು ನಾಯಿಗಳ ಕೌಟುಂಬಿಕ ವ್ಯವಸ್ಥೆ, ಮಾನಸಿಕ ತೊಳಲಾಟ, ಜೀವನಶೈಲಿ, ಅವುಗಳ ಬದ್ಧವೈರಿಗಳು, ಸಂಸಾರ-ಸರಸ, ವಿರಸಗಳ ಜಾಡು ಹಿಡಿದು, ಕಾಡಿನ ನಿಶ್ಯಬ್ಧವನ್ನು ಸೀಳುನಾಯಿಗಳ ಹೆಜ್ಜೆಯಿಂದ, ತರಗೆಲೆಗಳು ಮಾಡುವ ಸರಪರ ಸದ್ದನ್ನು ಆಲಿಸಿ ಅದನ್ನು ಸೆರೆಹಿಡಿದ ಪ್ರಯತ್ನಕ್ಕೆ ಇಂದು ಫಲ ದೊರೆತಿದೆ. ಭಾರತದ ಯಾವುದೋ ಕಾಡಿನ ಮೂಲೆಯ ಈ ಒಂದು ಪುಟ್ಟ ಪ್ರಾಣಿ ಇಂದು `ಹಸಿರು ಆಸ್ಕರ್'ನಂತಹ ಶ್ರೇಷ್ಠ ಪ್ರಶಸ್ತಿಗೆ ಪಾತ್ರವಾಗುವ ಮೂಲಕ ಕೃಪಾಕರ ಸೇನಾನಿ ಈ ಮಿತ್ರರಲ್ಲಿ ಸಾರ್ಥಕ್ಯಭಾವ ಮೂಡಿಸಿದೆ. ಇದು ಭಾರತೀಯರ ಪಾಲಿಗೆ ಒಂದು ಹೆಮ್ಮೆಯೇ ಸರಿ!.ಹಸಿರು ಆಸ್ಕರ್ ಪ್ರಶಸ್ತಿಯನ್ನು ಮೂಡಿಗೇರಿಸಿಕೊಂಡ ದಿ ಪ್ಯಾಕ್ ಡಾಕ್ಯುಮೆಂಟರಿ ಚಿತ್ರವನ್ನು ನೋಡಿದ ನಂತರ ಕೃಪಾಕರ ಸೇನಾನಿಯವರನ್ನು ನಮ್ಮ ತಂಡ ಬೇಟಿ ಮಾಡಲೇಬೇಕು ಎಂಬ ಹಂಬಲದಿಂದ ತೆರಳಿದಾಗ, ಅಂದು ನಮಗೆ ಕೃಪಾಕರ್ ಅವರೊಂದಿಗೆ ಮಾತ್ರ ಸಂದರ್ಶನ ಲಭ್ಯವಾಯಿತು. ಮುಂದಿನದು ಅವರೊಂದಿಗೆ ನಡೆಸಿದ ಸಂದರ್ಶನದ ಸಾರಾಂಶ.
ಪ್ರಶ್ನೆ: ಭಾರತದಲ್ಲಿ ಹಲವಾರು ರೀತಿಯ ಪ್ರಾಣಿಗಳಿವೆ, ಆದರೆ ಸೀಳುನಾಯಿಗಳನ್ನೆ ನೀವು ನಿಮ್ಮ ಸಂಶೋಧನೆಗೆ, ಚಿತ್ರನಿರ್ಮಾಣಕ್ಕೆ ಬಳಸಿಕೊಳ್ಳಲು ಕಾರಣವೇನು?
ಕೃಪಾಕರ್: ಇದಕ್ಕೆ ಬಹುಮುಖ್ಯವಾಗಿ ಮೂರು ಪ್ರಮುಖ ಕಾರಣಗಳಿವೆ, ಮೊದಲನೆಯದಾಗಿ ಈಗಾಗಲೇ ರಾಜ ಪ್ರಾತಿನಿಧ್ಯ ಪಡೆದಿರುವಂತಹ ಹುಲಿ! ಅದೊಂದು ಗ್ಲಾಮರಸ್ ಪ್ರಾಣಿ,ಅದರ ಬಗ್ಗೆ ಅಂತಹ ಆಸಕ್ತಿಧಾಯಕವಾಗಿ ಅನ್ನಿಸಲಿಲ್ಲ.ಎರಡನೆಯದಾಗಿ ಸೀಳುನಾಯಿಗಳ ಬಗ್ಗೆ ಇದ್ದಂತಹ ಅವೈಜ್ಞಾನಿಕ ಅರಿವು ಅಂದರೆ ಅವುಗಳಿಂದ ಜಿಂಕೆಗಳ ಸಂತತಿ ಕಡಿಮೆಯಾಗುತ್ತಿದೆ,ಎಂಬುದನ್ನು ತೆಗೆದು ಹಾಕಬೇಕು ಎಂದು ,ಬಹುಪ್ರಮುಖವಾಗಿ ಸೀಳುನಾಯಿಗಳು ಮನುಷ್ಯರಂತೆ ಸಾಂಘಿಕಜೀವನವನ್ನು ನಡೆಸುತ್ತವೆ ಮತ್ತು ನಮ್ಮ ಜೀವನಶೈಲಿಗೆ ಹತ್ತಿರವಾದಂತಹ ಜೀವನವನ್ನು ಸೀಳುನಾಯಿಗಳು ಹೊಂದಿರುವ ಕಾರಣ ನಾವು ಇವುಗಳ ಬಗ್ಗೆ ಅಧ್ಯಯನ ಮಾಡಬೇಕೆಂದು ಯೋಚಿಸಿದೆವು ಎಂದರು.
ಪ್ರಶ್ನೆ: ನಿಮ್ಮ ಹಾಗೇ ಕಾಡು ಹಾಗೂ ಕಾಡುಪ್ರಾಣಿಗಳ ಬಗ್ಗೆ ಆಸಕ್ತಿಯಿರುವ ಯುವಕರು ಇದನ್ನು ಒಂದು ವೃತ್ತಿಯಾಗಿ ಆಯ್ಕೆಮಾಡಿಕೊಳ್ಳಬಹುದಾ?ಮಾಡಿಕೊಂಡದ್ದೆ ಆದರೆ ಬರುವ ತೊಡಕುಗಳೇನು ?
ಕೃಪಾಕರ್ : ಕಾಲೇಜ್ ದಿನಗಳಲ್ಲಿ ನನಗೆ ಸ್ಟಿಲ್ ಫೋಟೊಗ್ರಫಿಯ ಬಗ್ಗೆ ಆಸಕ್ತಿ ಬೆಳೆಯಿತು.ಆದಾದ ನಂತರ ಬ್ಯಾಂಕ್ನ್ನಲ್ಲಿ ಕೆಲಸ ಸಿಕ್ಕಿದರು ಆ ಕೆಲಸಕ್ಕೆ ಹೋಗಲಿಲ್ಲ, ಯಾಕಂದ್ರೆ ನನಗೆ ಹಾಗೇ ಬದುಕಬೇಕಾಗಿತ್ತು. ಹಾಗೇ ಬರಿ ಆಸಕ್ತಿ ಇದ್ದರೆ ಸಾಲದು, ಆಸಕ್ತಿ ಅಗಾಧವಾಗಿರಬೇಕು.ಕಾಡಿನ ಬಗ್ಗೆ, ಪ್ರಾಣಿಗಳ ಬಗ್ಗೆ ಆಳವಾದ ಜ್ಞಾನವಿರಬೇಕು. ವಿಜ್ಞಾನಿಗಳೊಂದಿಗೆ ಒಡನಾಟವಿರಬೇಕು. ವಿಜ್ಞಾನದಂತಹ ವಿಷಯವನ್ನು ಕಥಾರೂಪವಾಗಿ ಇರಿಸುವ ನೈಪುಣ್ಯತೆ ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಒಳ್ಳೆಯ ಕ್ಯಾಮರಾ ವರ್ಕ ಗೊತ್ತಿರಬೇಕು. ಏಕೆಂದರೆ ಪ್ರಾಣಿಗಳ ಬಳಿ ನಾವು ಮತ್ತೊಂದು ಟೇಕ್ ಕೇಳುವುದಕ್ಕೆ ಸಾದ್ಯವಾಗುವುದಿಲ್ಲ. ಬಹು ಮುಖ್ಯವಾಗಿ ಮನಸ್ಸು ಒಂದು ಎಡಿಟಿಂಗ್ ಸಾಫ್ಟ್ವೇರ್ ರೀತಿ ಕೆಲಸ ನಿರ್ವಹಿಸಬೇಕು, ಯಾವ ಸಮಯದಲ್ಲಿ ಯಾವ ದೃಶ್ಯ ಸೆರೆಹಿಡಿಯಬೇಕು ಎಂಬ ಅರಿವಿರಬೇಕು ಎಂದರು. ಎಲ್ಲಕ್ಕಿಂತ ಮಿಗಿಲಾಗಿ ಯಾವ ವೃತ್ತಿಯೇ ಆದರೂ ಅಲ್ಲಿ ನಾವು ಏನಾಗಬೇಕು, ಎಲ್ಲಿ ನಿಲ್ಲಬೇಕು ಎಂಬುದು ನಮಗೆ ನಿಚ್ಚಳವಾಗಿರಬೇಕು.
ಪ್ರಶ್ನೆ: ಸೀಳುನಾಯಿಗಳ ಪ್ರತಿಯೊಂದು ಚಲನವಲನವನ್ನು ಗಮನಿಸಿ, ಶೂನ್ಯ ದಿಟ್ಟಿಸಿ ಕೂತ ಚುಟ್ಟಿ ಮನಸ್ಸಿನಲ್ಲಿ ನಡೆಯುವ ತೊಳಲಾಟ, ಕಣ್ಣಿನಲ್ಲಿ ಕಾಣುವ ಆತಂಕ ಈ ಭಾವನೆಗಳನ್ನು ಗುರುತಿಸುವುದು ಹೇಗೆ ಸಾಧ್ಯ ?
ಕೃಪಾಕರ್: ಇವರ ಮೊದಲ ಉತ್ತರ ಮುವತ್ತು ವರ್ಷಗಳೊಂದಿಗೆ ಕಾಡಿನೊಂದಿಗೆ ಒಡನಾಟ ಜೊತೆಗೆ ಪ್ರಾಣಿಗಳ ಹಾಗೂ ಮನುಷ್ಯರ ನಡವಳಿಕೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುವುದರಿಂದ ಇವೆಲ್ಲಾ ಸಾಧ್ಯವಾಯಿತು ಎನ್ನುವ ಇವರು ಮತ್ತೊಂದು ಗಮನಾರ್ಹ ಅಂಶವನ್ನು ತಿಳಿಸಿದರು.. ಪ್ರಾಣಿಗಳನ್ನು ಪ್ರಾಣಿಗಳ ದೃಷ್ಟಿಕೋನದಿಂದ ನೋಡಬೇಕೆ ವಿನಹ ಮನುಷ್ಯ ದೃಷ್ಟಿಕೋನದಿಂದ ನೋಡಬಾರದು. ಎಷ್ಟೋ ಸಾರಿ ನಾವು ನಮ್ಮಂತೆ ಅವು ಯೋಚಿಸುತ್ತಿವೆ, ಕೆಲಸ ಮಾಡುತ್ತಿವೆ ಎನ್ನುತ್ತೇವೆ ಆದರೆ ಅದು ತಪ್ಪು ತಿಳುವಳಿಕೆ.
ಪ್ರಶ್ನೆ: ಕ್ಯಾಮರಾ ಹೆಗಲಿಗೇರಿಸಿಕೊಂಡು, ಸಣ್ಣ ಪುಟ್ಟ ಪಕ್ಷಿ ಅರಸುತ್ತಿದ್ದ ನಿಮಗೆ ಎಂದಾದರೂ ಆಸ್ಕರ್ ಪ್ರಶಸ್ತಿಯ ಕಲ್ಪನೆಯಾದರೂ ಮೂಡಿತ್ತಾ ?
ಕೃಪಾಕರ್: ಇಲ್ಲ .
ಪ್ರಶ್ನೆ: ನಮ್ಮ ಭಾರತೀಯರಲ್ಲಿ ವನ್ಯ ಜೀವಿ ಸಂಶೋಧಕರು ಅತೀ ವಿರಳ ಆದರೆ ವಿದೇಶಿಯರು ಅತೀ ಹೆಚ್ಚು ಏಕೆ ?
ಕೃಪಾಕರ್: ಮೊದಲನೆಯದಾಗಿ ನಮ್ಮ ಭಾರತೀಯರ ಮನೋಭಾವ, ನಮ್ಮಲ್ಲಿ ಮಕ್ಕಳನ್ನು ನೀವು ಏನಾಗುತ್ತೀರ ಎನ್ನುವ ಭಾವನೆಗಿಂತ ನೀನು ಏನಾಗಬೇಕು ಎನ್ನುವ ಭಾವನೆ ಬಿತ್ತುವುದು ಹೆಚ್ಚು. ಹೀಗಾಗಿ ನಮ್ಮ ಮಕ್ಕಳ ಪ್ರತಿಭೆ ಚಿಗುರುವುದಕ್ಕಿಂತ ಕಮರುವುದು ಹೆಚ್ಚು. ಎರಡನೆಯದಾಗಿ ಫೀಲ್ಟ್ಗೆ ಬಂದು ಸಂಶೋಧಿಸುವುದಕ್ಕಿಂತ ಪುಸ್ತಕ ರೂಪದ ಸಂಶೋಧನೆಗೆ ಹೆಚ್ಚು ಬೆಲೆ. ಪುಸ್ತಕ ರೂಪದ ಸಂಶೋಧನೆಯನ್ನು ಸಮಥರ್ಿಸುವಂತಹ ಕ್ಷೇತ್ರ ಅಧ್ಯಯನವು ಅಷ್ಟೇ ಮುಖ್ಯ. ಅದರ ಕೊರತೆಯೇ ಇದಕ್ಕೆ ಕಾರಣ .
ಪ್ರಶ್ನೆ: ಮೊದಲ ಬಾರಿಗೆ ನೀವು ಸಮಾಜದ ದೃಷ್ಟಿಯಲ್ಲಿ ಗುರುತಿಸಿಕೊಂಡಿದ್ದು ಯಾವಾಗ ?
ಕೃಪಾಕರ್: ಬಹುಶಃ ಅದು ನಾನು ಮತ್ತು ಸೇನಾನಿ ಪ್ರಜಾವಾಣಿಗೆ ಅಂಕಣ ಬರೆಯುತ್ತಿದ್ದಾಗ. ಅದು ಕೂಡ ಕೃಷಿ ಭೂಮಿಯಲ್ಲಿರುವ ಚಿಕ್ಕ ಪಕ್ಷಿಗಳ ಬಗ್ಗೆ ಎಂದು ಖುಷಿಯಿಂದ ನೆನಪಿಸಿಕೊಂಡರು.
ಪ್ರಶ್ನೆ: ಕಾಡಿನೊಂದಿಗೆ ಮೂರು ದಶಕಗಳ ಕಾಲ ಸಂಬಂಧ ಹೊಂದಿರುವ ನಿಮ್ಮನ್ನ ಇಂತಹ ಕೈಂಕರ್ಯಕ್ಕೆ ದೂಡಿದ ಸ್ಪೂರ್ತಿ?
ಕೃಪಾಕರ್: ಬಹುಶಃ ಅದು ನಮ್ಮಿಬ್ಬರಲ್ಲಿ ಇರಬಹುದಾದ ಜೀವನಾಸಕ್ತಿ ಇರಬಹುದು. ಉದಾಹರಣೆಗೆ ಒಂದು ಊರಿಗೆ ಪ್ರಯಾಣ ಮಾಡುವಾಗ ಅದು ನಮಗೆ ತಲಿಪಬೇಕಲ್ಲ ಎಂಬ ತಲೆನೋವಲ್ಲ, ಬದಲಿಗೆ ಹೋಗುತ್ತೇವಲ್ಲ ಎಂಬ ಖುಷಿ. ಇದೇ ಕಾರಣವಿರಬಹುದು.
ಪ್ರಶ್ನೆ: ನಮ್ಮ ಸರಕಾರ ಜಾರಿ ಮಾಡುವಂತಹ ಸಾಮಾಜಿಕ ಅರಣ್ಯ, ರಕ್ಷಿತ ಅರಣ್ಯ ಇಂತಹ ಕಾರ್ಯಕ್ರಮಗಳ ಬಗ್ಗೆ ನಿಮ್ಮ ಅಭಿಪ್ರಾಯದಲ್ಲಿ?
ಕೃಪಾಕರ್: ನೈಸರ್ಗಿಕವಾಗಿ ಇರುವುದನ್ನು ಯಾರು ಸೃಷ್ಟಿಮಾಡಲು ಸಾಧ್ಯವಾಗುವುದಿಲ್ಲ ಮತ್ತು ಇಂತಹ ಕಾರ್ಯಕ್ರಮಗಳನ್ನು ಅಷ್ಟೇ ಕಾಳಜಿಯಿಂದ ಮುಂದುವರೆಸಿಕೊಂಡು ಹೋಗುವುದಿಲ್ಲ. ಈ ಕಾರಣದಿಂದಾಗಿ ಇವು ಯಾವ ಉಪಯೋಗಕ್ಕೆ ಬರುವುದಿಲ್ಲ. ಇವುಗಳನ್ನು ಬೆಳೆಸುವುದರ ಹಿಂದೆಯೂ ಮಾನವನ ಸ್ವಾರ್ಥ ಅಡಗಿದೆ .
ಪ್ರಶ್ನೆ: ಪರಿಸರ ಉಳಿಸಿ ಇಂತಹ ಅಭಿತಾನಗಳಲ್ಲಿ ಎಂದಾದರೂ ಭಾಗವಹಿಸಿದ್ದಿದೆಯಾ?
ಕೃಪಾಕರ್: ಮೊದಲನೆಯದಾಗಿ ಪ್ರತಿಕ್ರಿಯಿಸುದಕ್ಕಿಂತ ನಮ್ಮಿಂದಾಗುವ ಕ್ರಿಯೆಯಲ್ಲಿ ನಂಬಿಕೆ ಇಟ್ಟವನು. ಸಾಧರಣವಾಗಿ ಇಂತಹ ಸಂದರ್ಭದಲ್ಲಿ ಯಾರೋ ಒಬ್ಬ ನಾಯಕ ಧ್ವನಿ ಎತ್ತುವುದಕ್ಕಿಂತ ಸ್ಥಳೀಯರು ಒಂದಾಗಿ ಪತಿಭಟಿಸುವುದು ಹೆಚ್ಚು ಸೂಕ್ತ .
ಪ್ರಶ್ನೆ: 'ದಿ ಪ್ಯಾಕ್' ನಂತರ ಮುಂದಿನ ನಿಮ್ಮ ಕಾಡಿನ ದಾರಿಯಲ್ಲಿ ನಿಮಗೆ ಎದುರಾಗುವ ಪ್ರಾಣಿ ಯಾವುದು ?
ಕೃಪಾಕರ್: ಆ ವಿಷಯದಲ್ಲಿ ಯಾವ ತೀರ್ಮಾನ ಮಾಡಿಲ್ಲ. ಹಾಗೇಯೆ ಮುಂಚೆಯೇ ಯೋಚಿಸುವ ಅಭ್ಯಾಸವೂ ಇಲ್ಲ ಎಂದರು.
- ಉಷಾ ಜಿ.ಎಸ್.
ಪ್ರಾದೇಶಿಕ ಸುದ್ದಿ
ಕೆರೆಮನೆ ಶಂಭುಹೆಗಡೆ ಗ್ರಂಥ ಪ್ರಶಸ್ತಿಗೆ ಆಹ್ವಾನ
ಸಾಗರ: ಇಲ್ಲಿನ ನಿಧಿ ಪ್ರಕಾಶನ ನೀಡುವ ಕೆರೆಮನೆ ಶಂಭುಹೆಗಡೆ ಗ್ರಂಥ ಪ್ರಶಸ್ತಿಗೆ ಅರ್ಹ ಗ್ರಂಥವನ್ನು ಆಹ್ವಾನಿಸಲಾಗಿದೆ. ಗ್ರಂಥವು 2010ರ ಜನವರಿ-ಡಿಶಂಬರ್ ಅವಧಿಯಲ್ಲಿ ಪ್ರಕಟವಾಗಿರಬೇಕು. ಗ್ರಂಥವು ಯಕ್ಷಗಾನ, ಬಯಲಾಟ, ಮೂಡಲಪಾಯ, ಸಣ್ಣಾಟ, ಪಾರಿಜಾತ, ಗೊಂಬೆಯಾಟ ಈ ಪ್ರಕಾರಗಳಿಗೆ ಸೇರಿರಬೇಕು. ಪ್ರಶಸ್ತಿಯು ಐದು ಸಾವಿರ ರೂಪಾಯಿ ಮೊತ್ತ ಮತ್ತು ಪ್ರಶಸ್ತಿಪತ್ರವನ್ನು ಒಳಗೊಂಡಿರುತ್ತದೆ.
ಲೇಖಕರು, ಪ್ರಕಾಶಕರು, ವಿದ್ವಾಂಸರು ಹಾಗೂ ಆಸಕ್ತರು ವಿವರಗಳನ್ನು ನಿಧಿ ಪ್ರಕಾಶನ, ಅಕ್ಷರ, ವಿನೋಬಾನಗರ, ಸಾಗರ-577401(ದೂರವಾಣಿ-08183-226776, 9480012488) ತಿಳಿಸಿದರೆ ಪ್ರಕಾಶನವು ಗ್ರಂಥದ ಪ್ರತಿಯನ್ನು ಖರೀದಿಸಿ ಪಡೆಯುತ್ತದೆ. ಮೇ ಹದಿನೈದರೊಳಗೆ ತಿಳಿಸಲು ಕೋರಿದೆ.
ಇದು ಕೆರೆಮನೆ ಶಂಭುಹೆಗಡೆಯವರ ಹೆಸರಿನಲ್ಲಿ ನೀಡುತ್ತಿರುವ ಮೂರನೆಯ ವರ್ಷದ ಗ್ರಂಥ ಪ್ರಶಸ್ತಿ. 2009ರಲ್ಲಿ ಈ ಗ್ರಂಥ ಪ್ರಶಸ್ತಿಯನ್ನು ಶತಾವಧಾನಿ ಡಾ. ಆರ್.ಗಣೇಶರ 'ಯಕ್ಷರಾತ್ರಿ' ಕೃತಿಗೆ ನೀಡಿ ಪುರಸ್ಕರಿಸಲಾಗಿದೆ. ಎರಡನೆಯ ವರ್ಷದ ಗ್ರಂಥಪ್ರಶಸ್ತಿಯನ್ನು ಡಾ.ಮೋಹನ ಕುಂಟಾರರ 'ಯಕ್ಷಗಾನ ಆಹಾರ್ಯ' ಕೃತಿಗೆ ನೀಡಿ ಗೌರವಿಸಲಾಗಿದೆ.
ಸಾಹಿತ್ಯ
ಮನಸ್ಸೆಂಬ ಹುತ್ತದಲಿ
ಆಸೆಗಳ ಹಾವು
ಘಳಿಗೆಗೊಂದು ಬಣ್ಣ
ಯಾರಿಗೂ ಕಾಣದು ಅಣ್ಣ
ಆಸೆಗಳ ಮೊಡಕೆ ಒಡೆಯಿತು
ಒಂದೊಂದಾಗಿ ಆಚೆ ಹಾರಿತು
ಬೆಳಿಗ್ಗೆ ತಪಸ್ವಿ, ರಾತ್ರಿ ಕಾಮಿ
ರಾತ್ರಿ ಜ್ಞಾನಿ, ಬೆಳಿಗ್ಗೆ ಅಜ್ಞಾನಿ
ಸುಮ್ಮನಿರಲೂ ಬಿಡುತ್ತಿಲ್ಲ ಯೋಚನೆ
ಒಳ್ಳೆಯ ಕೆಟ್ಟ ಪರಿಕಲ್ಪನೆ
ಗಾಳಿಯಲ್ಲಿ ಯೋಚನೆಗಳು ಹಾರುತ್ತಿರಬೇಕು
ನನ್ನ ಮನಸ್ಸು ಸ್ಪರ್ಶತಂತಾಗಿರಬೇಕು
ಸ್ವರ್ಗದ ಆಸೆ ಕೆಲವೊಮ್ಮೆ
ಹಣದ ಆಸೆ ಕೆಲವೊಮ್ಮೆ
ಸಾವಿನ ಭಯ ಕೆಲವೊಮ್ಮೆ
ವಿಶ್ವ ಜಯಿಸುವ ಛಲ ಕೆಲವೊಮ್ಮೆ
ಕಾಲದ ಬಿರುಗಾಳಿಗೆ ಸಿಲುಕಿ
ಲೋಲಕವಾಗಿದೆ ಬದುಕು
ಭಾವನೆಗಳ ಕೋಟೆಯಲಿ
ಕಲ್ಪನೆಗಳ ಕಹಳೆ
ಯೋಚಿಸಲು ಖರ್ಚಿಲ್ಲ
ಯೋಚನೆಗಳಿಗೆ ಸಾವಿಲ್ಲ- ಜಬೀವುಲ್ಲಾ ಖಾನ್
ಆಟ - ಅವಲೋಕನ
ಮೊಹಾಲಿ: ’ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಸೆಂಚುರಿ ಹೊಡೆದಿಲ್ಲ...ಎಲ್ಲರ ಹರಕೆ ಹಾರೈಕೆ ಭಾರತ ತಂಡದ ಮೇಲೆ ಶುಭ ತಂದಿದೆ. ಅಂತೂ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ತನ್ಮೂಲಕ ಫೈನಲ್ ಪ್ರವೇಶಿಸಿದೆ. ಪಾಕಿಸ್ಥಾನದ ವಿರುದ್ಧ ಭಾರತ ತಂಡದ ರೋಚಕ ಆಟದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲವು ಸಾಧಿಸಿ ವಿಜಯದ ನಗೆ ಬೀರಿದೆ. ಹಂತ ಹಂತದಲ್ಲೂ ಎಡವುತ್ತಿದ್ದ ಪಾಕಿಸ್ಥಾನದ ಕ್ರಿಕೆಟ್ ಟೀಂ ಮುಖ ಮುಚ್ಚಿಕೊಳ್ಳುವಂತಾಗಿದೆ. ತನ್ಮೂಲಕ ಈ ಬಾರಿಯ ವಿಶ್ವಕಪ್ ತನ್ನದಾಗಿಸುವತ್ತ ಭಾರತದ ದೃಷ್ಠಿ ಪುಷ್ಠಿಪಡೆದಿದೆ.
ಪಾಕಿಸ್ಥಾನ ತಂಡವನ್ನು ಆಲ್ ಔಟ್ ಮಾಡುವ ಮೂಲಕ ಟೀಂ ಇಂಡಿಯಾ ತನ್ನ ಪ್ರಾಭಲ್ಯವನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ. ತನ್ಮೂಲಕ ಪಾಕಿಸ್ಥಾನದ ಅಹಂಕಾರಕ್ಕೆ ತಕ್ಕ ಪಾಠ ಕಲಿಸಿದಂತಾಗಿದೆ. 29ರನ್ ಗಳ ರೋಚಕ ಜಯ, ಟೀಂ ಇಂಡಿಯಾ ನಾಯಕನ ಭರವಸೆಯ ಮಾತುಗಳನ್ನು ಸಾಬೀತು ಪಡಿಸಿದಂತಾಗಿದೆ. ಒಟ್ಟಾರೆಯಾಗಿ ಉಸಿರು ಬಿಗಿಹಿಡಿಸುವಂತಹ ಕದನವಾಗಿತ್ತು. ಕ್ರಿಕೆಟ್ ಪ್ರೇಮಿಗಳು ರೋಚಕ ಪಂದ್ಯವನ್ನು ಆಸ್ವಾದಿಸಿದ್ದು ಸಾರ್ಥಕವಾದಂತಾಗಿದೆ. ಫೈನಲ್ ಪಂದ್ಯದಲ್ಲೂ ಟೀಂ ಇಂಡಿಯಾ ಇನ್ನೂ ಹೆಚ್ಚಿನ ಮಹತ್ವದ ಆಟ ಪ್ರದರ್ಶಿಸಬೇಕಾಗಿದೆ.
ಸಾಹಿತ್ಯ
ದೇವ ನಿನ್ನ ಬೇಡಿಕೊಂಬೆ
ನಮ್ಮ ಭುವಿಗೆ ತರುವ ಮುನ್ನ
ಮತ್ತೆ ಮತ್ತೆ ಯೋಚಿಸು
ಆ ಮೃತ್ಯು ತೊಟ್ಟಿಲೊಳು ತೇಲಿಸು!
ಮರ್ತ್ಯ ಬಲೆಯೊಳು
ಸಿಲುಕಿಸುವ ಮುನ್ನ ದೇವ
ಮತ್ತೆ ಮತ್ತೆ ಯೋಚಿಸು
ನೋವಿನಾಳದಲಿ ನೂಕುವ ಬದಲು
ಸಾವಿನಾಳದಲಿ ಮುಳುಗಿಸು
ದೇವ ನಿನ್ನ ಬೇಡಿಕೊಂಬೆ
ನಿನ್ನಾಲಯಕೆ ಎನ್ನ ಕರೆಯಿಸು
ಇಹದ ಚಿಂತೆ ಬಿಡಿಸಿ ಎನಗೆ
ಅಂಧಕಾರವ ತೊಲಗಿಸು
ದೇವ ನನ್ನ ಪುಟ್ಟಿಸಿದೆ
ಜ್ಞಾನ ಮಾರ್ಗವ ತೋರಿಸು
ಮುಳ್ಳ ಹಾದಿಯಿಂದ ಬಿಡಿಸಿ
ಹೂವ ತೇರಲಿ ಕೂಡಿಸು
ಎಷ್ಟು ಬೇಡಿಕೊಂಬುದು ದೇವ
ಕರುಣೆಯೇ ಬರದಾಯಿತೇ
ಸುಳಿಯಿಂದ ಎತ್ತೆಂದು ಕೇಳಿದರೂ
ಕಿವಿಯೇ ಕಿವುಡಾಯಿತು
ದೇವ ನಿನ್ನ ಬೇಡಿಕೊಂಬೆ
ಒಂದೆ ಬಾರಿ ಯೋಚಿಸು
ಕಣ್ಣು ಬಿಡುವ ಮೊದಲೆ
ನನ್ನ ಉಸಿರನೊಮ್ಮೆ ನಿಲ್ಲಿಸು...
- ಸೌಮ್ಯ ಸಾಗರ.
ಈ ಕನಸು ಅವಾರ್ಡ್
ಕ್ರಿಕೆಟ್ ಎಂದರೆ ಪ್ರಾಣ
ಇಂದಿನ ಹುಡುಗರಿಗೆ
ತರಗತಿ ಬಿಟ್ಟು ಹೋಗುವರು
ಆಟ ನೋಡಲು ತಮ್ಮ ಮನೆಗೆ
ಪರದಾಡುವರು ಹಾಸ್ಟೆಲ್ ಹುಡುಗರು
ಮನದೊಳಗೆ
ತರಗತಿಗೆ ಗೈರು
ಟಿವಿ ಮುಂದೆ ಹಾಜರು
ಕೊಡುವರು ಕಾಮೆಂಟು
ಪ್ರತಿ ಚೆಂಡಿಗು
ಮೈ ಮರೆಯುವರು
ಕ್ರಿಕೆಟ್ಟಿನ ಚೌಕದೊಳಗೆ
ಪರೀಕ್ಷೆ ಎಂದರೆ ಜ್ವರ
ಕ್ರಿಕೆಟ್ ಎಂದರೆ ಖುಷಿ
ಜೀವನವೇ ಕ್ರಿಕೆಟ್ ಅಲ್ಲ
ಅದು ಒಂದು ಜೀವನದ ಭಾಗ
ಎಂದು ಅರಿತಾಗ ಯುವಕರು
ಬಾಳವರು ಭವಿಷ್ಯದಲ್ಲಿ.
- ದರ್ಶನ್ ಎಂ. ಕಮ್ಮಾರಗಟ್ಟೆ
ಪ್ರಥಮ ಬಿ.ಎ ಪತ್ರಿಕೋದ್ಯಮ
ಆಳ್ವಾಸ್ ಕಾಲೇಜ್
ಮೂಡುಬಿದಿರೆ
ಈ ಕನಸು ಅವಾರ್ಡ್
ಗೆಳತಿ ನಾನು ನೀನು ಎಷ್ಟು ಚಂದವಾಗಿ ಹಕ್ಕಿಯಂತೆ ಹಾರಾಡಿಕೊಂಡಿದ್ದೆವು.ನನ್ನ ನಿನ್ನ ನಡುವಿನ ಸಲುಗೆಯು ಎಲ್ಲರಿಗೂ ಹೊಟ್ಟೆ ಉರಿಸುವಂತೆ ಇತ್ತು.ಆದರೆ ಒಂದೊಂದು ದಿನ ಜಗಳ ಆಡಿಕೊಳ್ಳುವುದನ್ನು ನೋಡಿದರೆ ಇವರಷ್ಟು ದ್ವೇಷಿಗಳು ಈ ಜಗತ್ತಿನಲ್ಲಿಲ್ಲವೆನೋ ಎಂದೆನಿಸುತ್ತಿತ್ತು.ನಿಜವಾಗಿಯು ಗೆಳತಿ ನಮ್ಮ ಸ್ನೆಹಕ್ಕಿಂತ ನವಿರಾದ ಭಾವ ಮತ್ತೊಂದಿಲ್ಲ.ಈಗ ನಾನೊಂದು ಕಡೆ ನೀನೊಂದು ಕಡೆ ಆಗಿದ್ದೇವೆ.ನಿಜವಾಗಿಯೂ ಹತ್ತಿರವಿದ್ದಾಗ ನಮಗೆ ಅದರಬೆಲೆ ಗೊತ್ತಿರುವುದಿಲ್ಲ ದೂರ ಆದಾಗ ಗೊತ್ತಾಗುತ್ತದೆ ಎನ್ನುವ ಮಾತನ್ನು ಕೇಳಿದ್ದೆ ಇಂದು ನಾನೇ ಅನುಭವಿಸುತ್ತಿದ್ದೇನೆ.
ನೀನು ಕೊನೇ ದಿನ ಹೋಗುವಾಗ ನನ್ನನ್ನು ಮರೆಯಬೇಡ ಎಂದು ಹೇಳಿದ ಮಾತನ್ನೇ ಇನ್ನು ಮರೆಯಲು ಆಗುತ್ತಿಲ್ಲ.ಕಣ್ಣನ್ನು ಮುಚ್ಚಿದರೂ ತೆಗೆದರೂ ನೀನು ಹೇಳಿದ ಮಾತು ನೆನಪಾಗುತ್ತೆ.ದಿನಾಲೂ ಜೊತೆಗೇ ಊಟ ಮಾಡುತ್ತಿದ್ದೆವು.ಈಗ ನೀನು ಹೋದಾಗಿನಿಂದ ಊಟದ ತಟ್ಟೆಯ ಮುಂದೆ ಕುಳಿತರೆ ಕಣ್ಣೀರಿನಿಂದ ತಟ್ಟೆಯೆಲ್ಲ ಒದ್ದೆ ಆಗುತ್ತದೆ.ಪಾನೀಪುರಿ ಅಂಗಡಿ ಬಿಕೋ ಎನ್ನುತ್ತಿದೆ.ಅದೆಲ್ಲಕ್ಕಿಂತ ಹೆಚ್ಚಾಗಿ ಮನಸ್ಸು ನನ್ನ ಮಾತು ಕೇಳುತ್ತಿಲ್ಲ.ನಿನ್ನನ್ನು ಪದೇ ಪದೆ ನೋಡಬೆಕೆಂದು ಹಟ ಮಾಡುತ್ತಿದೆ ಎಷ್ಟು ಬುದ್ದಿ ಮಾತು ಹೇಳಿದರೂ ಕೇಳುತ್ತಿಲ್ಲ.ನೀನೇ ಬರಬೇಕಂತೆ.ನನ್ನ ಮನಸ್ಸು ಒಡೆದು ಚೂರಾಗುವ ಮುನ್ನ ಒಮ್ಮೆಯಾದರೂ ಬಂದು ನನ್ನ ಮನಸ್ಸಿಗೆ ಬುದ್ದಿ ಹೇಳಿ ಹೋಗು.
ಪದ್ಮಾ ಭಟ್,ಪ್ರಥಮ ಬಿಎ,
ಪತ್ರಿಕೋದ್ಯಮ ವಿಭಾಗ, ಶ್ರೀ ಧ.ಮ ಕಾಲೇಜ್ ಉಜಿರೆ.
ರಾಷ್ಟ್ರ - ಅಂತಾರಾಷ್ಟ್ರ
ಕರ್ನಾಟಕದ ಕೊಡಗಿನಲ್ಲಿ ಉದಯಿಸಿದ ಸೂರ್ಯ ಬ್ರಿಟನಿನ ಲಂಡನಿನಲ್ಲಿ ಅಸ್ತಂಗತ.
ಬದುಕೇ ಹಾಗೆ ! ತಾನೊಂದು ಬಗೆದರೆ ದೈವ ವೊಂದು ಬಗೆಯುತ್ತದೆ. ಸುಮಾರು ದಶಕಗಳ ಹಿಂದೆ ಕರ್ನಾಟಕದ ಕೊಡಗಿನಿಂದ ಇಂಗ್ಲೆಂಡಿಗೆ ಬಂದು ,ಶೈಕ್ಷಣಿಕ ,ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸಾಧನೆಯನ್ನು ಮಾಡಿ ದೈವಾಧೀನರಾದ ಕಿ ಕಿ ತಮ್ಮಯ್ಯ ನವರು ಇಂದು ನಮ್ಮೊಂದಿಗೆ ಇಲ್ಲ ಎನ್ನಲು ಬಹಳ ದುಃಖ ವಾಗುತ್ತದೆ. ಕರ್ನಾಟಕ ರಾಜ್ಯಕ್ಕೆ,ಕೊಡಗಿಗೆ ಹೆಮ್ಮೆ ತರುವಂತಹ ವೀರ ಕನ್ನಡಿಗ, ೨೦೦೦ ಇಸವಿಯಲ್ಲಿ ಪ್ರಪ್ರಥಮ ಭಾರಿಗೆ ಲಂಡನ್ನಿನ ಹ್ಯಾರೋ ಕೌನ್ಸಿಲ್ ಗೆ ಮೇಯರ್.೨೦ ವರುಷಗಳ ಕಾಲ ಲೇಬರ್ ಪಕ್ಷದ ಸೋಲಿಲ್ಲದ ಕೌಂಸಿಲ್ಲರ್,ಇಂಗ್ಲೆಂಡಿನ ಮಾಜಿ ಪ್ರಧಾನಿಗಳಾದ ,ಟೋನಿ ಬ್ಲೇರ್ ಮೊದಲಾದವರೊಂದಿಗೆ ರಾಜಕೀಯ ಒಡನಾಟ,ಬ್ರಿಟನಿನ ರಾಜಮನೆತನದೊಂದಿಗೆ ನಿಕಟ ಸಂಬಂಧ,ಕರ್ನಾಟಕದ ರಾಜಕೀಯ ಮುತ್ತ್ಸದ್ದಿಗಳಾದ ರಾಮಕೃಷ್ಣ ಹೆಗಡೆ,ಎಂ ಪಿ ಪ್ರಕಾಶ್ ರವರ ಸ್ನೇಹಿತ ,ಹತ್ತಾರು ಅಂತರಾಷ್ಟ್ರೀಯ ಸನ್ಮಾನಗಳು ಇಷ್ಟೆಲ್ಲಾ ಅರ್ಹತೆ ಇದ್ದರು ಯಾವುದೇ ಪ್ರಚಾರವನ್ನು ಬಯಸದ,ನಿಗರ್ವಿ,ಸಹೃದಯಿ ಶ್ರೀ ಕಿ ಕಿ ತಮ್ಮಯ್ಯನವರು.ಅವರ ಜೀವ ಇಂದು ನಮ್ಮೊಂದಿಗಿಲ್ಲದಿದ್ದರು ಅವರ ವ್ಯಕ್ತಿತ್ವ ನಮ್ಮೊಂದಿಗಿದೆ. ಎಪ್ಪತ್ತಾರು ವರುಷಗಳ ತಮ್ಮಯ್ಯ ನವರು ಪತ್ನಿ, ಪುತ್ರನನ್ನು ಅಗಲಿದ್ದಾರೆ.
ಇತ್ತೀಚಿಗೆ ಸಂಗಮ ಸಮಿತಿಯು ವಿಶ್ವ ಕನ್ನಡ ಸಮ್ಮೇಳನ ಯುರೋಪ್-೨೦೧೧ ಲಂಡನ್ನಿನಲ್ಲಿ ಆಯೋಜಿಸಿದ್ದೇವೆ,ನೀವು ಸಂಗಮ ಸಮಿತಿಯ ಅಧ್ಯಕ್ಷರಾಗಿ ನಮ್ಮನ್ನು ನಿರ್ದೇಶಿಸಬೇಕೆಂದು ಕೇಳಿಕೊಂಡಾಗ ಅವರು ಹೇಳಿದ ಮಾತು "ಕನ್ನಡಕ್ಕಾಗಿ ನನ್ನ ತನು ,ಮನ ಧನ ಆದರೆ ಅಂತಹ ದೊಡ್ಡ ಸಾಧನೆಯನ್ನೇನು ನಾನು ಮಾಡಿಲ್ಲ.ನಿಮ್ಮೊಂದಿಗೆ ನಾನು ಅಳಿಲು ಸೇವೆ ಮಾಡುತ್ತೇನೆ.ಅಧ್ಯಕ್ಷರನ್ನಾಗಿ ಬೇರೆಯವರನ್ನು ಮಾಡಿ " ಎಂದು ಸೌಜನ್ಯ ಪೂರ್ವಕವಾಗಿ ಹೇಳಿದ್ದರು.ನಿಮ್ಮ ಹೆಸರೇ ನಮಗೆ ಶ್ರೀ ರಕ್ಷೆ,ಗೌರವ ,ಸ್ಫೂರ್ತಿ ಹಾಗಾಗಿ ನೀವೇ ಅಧ್ಯಕ್ಷರಾಗ ಬೇಕೆಂದು ಹೇಳಿದಾಗ ವಿಶ್ವ ಕನ್ನಡ ಸಮ್ಮೇಳನ ಲಂಡನ್ನಿನಲ್ಲಿ ಆಗಲೇ ಬೇಕಾದ್ದು.ಎಲ್ಲ ಕನ್ನಡಿಗರನ್ನು ಈ ವಯಸ್ಸಿನಲ್ಲಿ ಕಾಣುವ ಯೋಗ ಬಂದಿದೆ.ನಾನು ಅಧ್ಯಕ್ಷನಾಗಿ ಸಹಕರಿಸುತ್ತೇನೆ ಎಂದು ಅನಾರೋಗ್ಯ ಇದ್ದಾಗ್ಯೂ ಒಪ್ಪಿ ಕೊಂಡರು.
ಮೊದಲನೇ ಮೀಟಿಂಗ್ ನಮ್ಮ ಮನೆಯಲ್ಲೇ ನಡೆಯಲಿ ಎಂದು ಮಾರ್ಚ್ ೨೭,ಭಾನುವಾರ ಸಂಜೆ ಮೂರು ಘಂಟೆಗೆ ಎಲ್ಲರನ್ನು ಬಹಳ ಆದರದಿಂದ ಬರಮಾಡಿಕೊಂಡು,ನಮ್ಮೊಂದಿಗೆ ಮೂರು ಘಂಟೆಗಳ ಕಾಲ ಬೆರೆತು,ಚರ್ಚಿಸಿ ನಮ್ಮನ್ನು ಹುರಿದುಂಬಿಸಿ ಇಂದು ನಮ್ಮನ್ನು ಬಿಟ್ಟು ಹೋಗಿ ಅನಾಥರನ್ನಾಗಿ ಮಾಡಿದ್ದಾರೆ.ಅವರ ಆತ್ಮಕ್ಕೆ ಭಗವಂತನು ಮೋಕ್ಷವನ್ನು ಕರುಣಿಸಲಿ,ಅವರ ಕುಟುಂಬಕ್ಕೆ ದುಃಖ ವನ್ನು ತಡೆಯುವ ಶಕ್ತಿ ದೇವರು ಕರುಣಿಸಲಿ.ಅವರ ಆಶಯಗಳನ್ನು ಪೂರೈಸುವ ಶಕ್ತಿ ಸಂಗಮಕ್ಕೆ ದೇವೆರು ಕೊಡಲಿ ಎಂದು ಪ್ರಾರ್ಥಿಸೋಣ
ವಿಶ್ವ ಕನ್ನಡಿಗರ ಹೃದಯದಲ್ಲಿ ಶ್ರೀ ತಮ್ಮಯ್ಯನವರ ವ್ಯಕ್ತಿತ್ವ ಸಂಗಮವಾಗಲಿ.ವಿಶ್ವ ಕನ್ನಡಿಗನ ಭಾವಪೂರ್ಣ ಶ್ರದ್ಧಾಂಜಲಿ ಭಗವಂತನ ಪದಕಮಲದಲ್ಲಿ ಸಂಗಮ ವಾಗಲಿ.ತಮ್ಮಯ್ಯನವರ ಆಶಯದಂತೆ ವಿಶ್ವ ಕನ್ನಡಿಗರ ಹೃದಯ ಸಂಗಮ ವಾಗಲಿ.ವಿಶ್ವ ಕನ್ನಡಿಗನ ಆಶಯದಂತೆ ತಮ್ಮಯ್ಯನವರ ಆತ್ಮ ಪರಮಾತ್ಮನಲ್ಲಿ ಸಂಗಮವಾಗಲಿ.
ಕೊಡಗಿನ ಕಾವೇರಿಗೆ ಜನಿಸಿದ ತಮ್ಮಯ್ಯ ಲಂಡನಿನ ಥೇಮ್ಸ್ ನದಿಯಲ್ಲಿ ಸಂಗಮಿಸಿದ
ಜಾತಸ್ಯ ಹಿ ಮರಣಂ ಧ್ರುವಂ ಆದರೆ ಬೆರಳೆಣಿಕೆಯಷ್ಟು ಜನರು ಮಾತ್ರ ಪ್ರಪಂಚದಲ್ಲಿ ದೈಹಿಕವಾಗಿ ಇಲ್ಲದಿದ್ದರೂ ಎಲ್ಲರ ಮನಸ್ಸಿನಲ್ಲೂ ಜಿವನ್ತವಾಗಿರುತ್ತಾರೆ .ಅಂತಹ ಒಂದು ಉತ್ತಮರ ಸಾಲಿಗೆ ಸೇರಿದ ಶ್ರೀ ತಮ್ಮಯ್ಯನವರನ್ನು ಕರ್ನಾಟಕ ಸರಕಾರ ಗುರುತಿಸದೆ ಹೋದದ್ದು ಖೇದನೀಯ.ಇನ್ನಾದರೂ ಕರ್ನಾಟಕ ಸರಕಾರ ಮರಣೋತ್ತರವಾಗಿ ಗೌರವಿಸ ಬೇಕು.
-ಕುಮಾರ್ ಕುಂಟಿಕಾನಮಠ , ಲಂಡನ್
ಕ್ರೀಡೆ
ಮೊಹಾಲಿ:ತನ್ನ ನಾಯಕ ಹುದ್ದೆಯ ಜವಾಬ್ದಾರಿಯನ್ನರಿತು ಆಟ ಆಡುವೆನು. ಉತ್ತಮ ಪ್ರದರ್ಶನ ತೋರಿ ಭಾರತ ತಂಡಕ್ಕೆ ಗೆಲುವು ತರುವುದೇ ನನ್ನ ಗುರಿ. ಈ ವಿಶ್ವಾಸದ ನುಡಿಗಳು ಟೀಂ ಇಂಡಿಯಾದ ನಾಯಕ ಧೋನಿ ಅವರದ್ದು. ಟೀಂ ಇಂಡಿಯಾದ ಎಲ್ಲಾ ಆಟಗಾರರೂ ಫಿಟ್ ಆಗಿದ್ದಾರೆ. ಪಂದ್ಯಕ್ಕೆ ಬೇಕಾದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮಾಧ್ಯಮಗಳ ರೋಚಕ ಸುದ್ದಿಗಳ ಬಗೆಗೆ ವಿಶೇಷ ಕಾಳಜಿ ವಹಿಸಬೇಕಾಗಿಲ್ಲ ಎಂಬ ಮಾಹಿತಿಯನ್ನು ಪ್ರತಿಯೊಬ್ಬ ಆಟಗಾರರಿಗೂ ತಿಳಿಸಲಾಗಿದೆ. ಏನಿದ್ದರೂ ಟೀಂ ಇಂಡಿಯಾಕ್ಕೆ ಗೆಲುವು ತರುವುದು ನಮ್ಮ ಉದ್ದೇಶವಾಗಿದೆ ಎಂದು ಧೋನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರಾದೇಶಿಕ ಸುದ್ದಿ 
ಮಂಗಳೂರು: ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಗಡಾಯಿಕಲ್ ಹತ್ತಿರದ ನದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಳು ಸತ್ತು ಸಾರ್ವಜನಿಕರಲ್ಲಿ ಕಳವಳ ಉಂಟುಮಾಡಿತ್ತು. ಈ ಸಂಬಂಧ ಮಂಗಳೂರಿನ ಮೀನುಗಾರಿಕಾ ಕಾಲೇಜು ಜಲಕೃಷಿ ವಿಭಾಗದವರು ಸ್ಥಳಕ್ಕೆ ಭೇಟಿ ನೀಡಿ ಮೀನುಗಳ ಸಾಯುವಿಕೆಗೆ ಸಾಂಕ್ರಾಮಿಕ ಹುಣ್ಣು ರೋಗ (ಇ ಯು ಎಸ್) ಕಾರಣ ಎಂದು ಮನೋಕ್ಲೋನಲ್ ಆಂಟಿಬಾಡಿ ಇಮ್ಯುನೋಡಾಟ್ ಪರೀಕ್ಷೆಯಿಂದ ಖಚಿತವಾಗಿದೆ ಎಂದು ಮೀನುಗಾರಿಕಾ ಕಾಲೇಜಿನ ಮುಖ್ಯಸ್ಥರಾದ ಕೆ. ಎಂ. ಶಂಕರ್ ಅವರು ತಿಳಿಸಿದ್ದಾರೆ.
ರೋಗವು ನೀರಿನ ಉಷ್ಣಾಂಶ ಕಡಿಮೆಯಾದಾಗ (ನವೆಂಬರ್ ನಿಂದ ಫೆಬ್ರವರಿ ತಿಂಗಳ)ವರೆಗೆ ಬರುತ್ತದೆ. ಈ ರೋಗವು 20 ವರ್ಷಗಳ ಹಿಂದೆ ಮೊದಲ ಬಾರಿಗೆ ಕಾಣಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಳು ಸತ್ತಿದ್ದವು. ಇತ್ತೀಚೆಗೆ ಈ ರೋಗ ಕಡಿಮೆಯಾಗುತ್ತಿದೆ. ಅಪನೋಮೈಸಿಸ್ ಇನ್ವೇಡನ್ಸ್ ಎಂಬ ಬೂಸ್ಟ್ ನಿಂದ ಈ ರೋಗ ಹರಡುತ್ತಿದ್ದು ಸಾರ್ವಜನಿಕರು ಈ ರೋಗದ ಬಗ್ಗೆ ಭಯಪಡಬೇಕಿಲ್ಲ ಎಂದು ತಿಳಿಸಿದ್ದಾರೆ.
ಸಾಹಿತ್ಯ
ಓ ಮೇಘರಾಜ...
ಬೇಗ ಬಂದು ಬಿಡು
ನಿನಗಾಗಿ ವಸುಂಧರೆ ಪರಿತಪಿಸುತಿಹಳು
ನಿನ್ನ ಸಿಡಿಲು - ಗುಡುಗುಗಳ
ರಥದ ಶಬ್ಧಕ್ಕೆ ತನ್ನ
ಕಿವಿಗಳ ತೆರೆದಿಟ್ಟು ನಿಂತಿಹಳು...!
ತನ್ನ ಪ್ರಿಯನ ಆಗಮನಕ್ಕೆ
ವಸಂತನನ್ನು ಕರೆಸಿ ಹಸಿರಿನ
ಚಪ್ಪರವ ಹಾಕಿಸಿಹಳು
ಉಪಾಹಾರಕ್ಕಾಗಿ ಹಲವು
ಹಣ್ಣುಗಳ ತಂದಿಹಳು
ಚಪ್ಪರ ಒಣಗುವ ಮೊದಲೇ
ಹಣ್ಣು ಕೊಳೆಯುವ ಮೊದಲೇ
ನೀ ಬರುವಿಯಲ್ಲವೇ...?
- ಸೌಮ್ಯ, ಸಾಗರ.
ವೈವಿಧ್ಯಈ ಆಸನವು ತ್ರಿಕೋಣಾಕಾರದಲ್ಲಿರುತ್ತದೆ.
ಅಭ್ಯಾಸ ಕ್ರಮ
ಮೊದಲು ತಾಡಾಸನದಲ್ಲಿ ನಿಲ್ಲಬೇಕು. ಅನಂತರ ಕಾಲುಗಳನ್ನು ಅಗಲಿಸಿ ಮೂರು ಯಾ ಮೂರೂವರೆ ಅಡಿಗಳಷ್ಟು ಅಂತರದಲ್ಲಿ ನಿಲ್ಲಿಸಬೇಕು. ಕೈಗಳೆರಡನ್ನೂ ಹೆಗಲಿನ ಮಟ್ಟಕ್ಕೆ ಇರುವಂತೆ ನೇರವಾಗಿ ಚಾಚಬೇಕು. ಆಮೇಲೆ ಬಲಪಾದವನ್ನು ಬಲಕಡೆಗೆ 90ಡಿಗ್ರಿ ತಿರುಗಿಸಿ ಉಸಿರನ್ನು ಹೊರಕ್ಕೆ ಬಿಟ್ಟು ಶರೀರವನ್ನು ಬಲಭಾಗಕ್ಕೆ ಬಾಗಿಸಬೇಕು. ಬಲಕೈಯು ಬಲಕಾಲಿನ ಪಕ್ಕದಲ್ಲಿ ಇಡಬೇಕು. ಆಗ ದೃಷ್ಟಿಯು ಎಡಕೈಯ ಬೆರಳ ಮೇಲಿರಬೇಕು. ಈ ಸ್ಥಿತಿಯಲ್ಲಿ ಸಮ ಉಸಿರಾಟ ನಡೆಸುತ್ತಾ ಅರ್ಧ ನಿಮಿಷದಿಂದ ಒಂದು ನಿಮಿಷ ಇರಬೇಕು. ಆಮೇಲೆ ಅದೇ ರೀತಿ ಎಡ ಭಾಗದಲ್ಲಿ ಅಭ್ಯಸಿಸಬೇಕು. ಅನಂತರ 2 ನಿಮಿಷ ವಿಶ್ರಾಂತಿ.
ಉಪಯೋಗಗಳು
ಈ ಆಸನ ಅಭ್ಯಾಸದಿಂದ ಕಾಲುಗಳ ಮಾಂಸಖಂಡಗಳು ಚೆನ್ನಾಗಿ ಪಳಗುತ್ತವೆ. ಕಾಲುಗಳ ಸಾಮಾನ್ಯ ವಕ್ರತೆಯಿದ್ದರೆ ಈ ಆಸನ ಅಭ್ಯಾಸದಿಂದ ಸರಿಪಡಿಸಬಹುದಾಗಿದೆ. ಹಾಗೂ ಈ ಆಸನದಿಂದ ಬೆನ್ನುನೋವು, ಕುತ್ತಿಗೆ ನೋವು, ಸೊಂಟನೋವು ಪರಿಹಾರವಾಗುತ್ತದೆ. ಮೊಣಕೈಗಳು ಬಲಗೊಳ್ಳುತ್ತವೆ.
- 'ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ
ಅಂತರರಾಷ್ಟ್ರೀಯ ತೀರ್ಪುಗಾರರು.
ಪ್ರಾದೇಶಿಕ ಸುದ್ದಿ
ಉಡುಪಿ : ಕಾರ್ಯನಿರತ ಪತ್ರಕರ್ತರ ಹೊರತಾಗಿ ಜಿಲ್ಲೆಯಲ್ಲಿ ಸಂಚರಿಸುವ ಅನೇಕ ವಾಹನಗಳು `ಪ್ರೆಸ್' ಫಲಕ ಬಳಸಿ ಸಂಚಾರಿ ನಿಯಮ ಉಲ್ಲಂಘಿಸುತ್ತಿರುವುದು ಕಂಡುಬಂದಿದೆ. ಮಾಧ್ಯಮ ಕ್ಷೇತ್ರದಲ್ಲಿ ಇರದವರು `ಪ್ರೆಸ್' ಫಲಕ ಬಳಸುವುದು ಕಾನೂನುಬಾಹಿರಾಗಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಉಡುಪಿ ಜಿಲ್ಲಾಡಳಿತ ಜಂಟಿಯಾಗಿ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳು ಬಳಸುವ ವಾಹನಗಳಿಗೆ ಮಾತ್ರ ಬಳಸುವ ಅಧಿಕೃತ ಸ್ಟಿಕ್ಕರ್ ಸಿದ್ಧಪಡಿಸಿದೆ. ಈ ಸ್ಟಿಕ್ಕರ್ನ್ನು ಹೊರತುಪಡಿಸಿ ಉಳಿದ `ಪ್ರೆಸ್' ಸ್ಟಿಕ್ಕರ್ ಬಳಸುವ ವಾಹನಗಳ ತಪಾಸಣೆ ನಡೆಸುವ ಅಧಿಕಾರ ಪೊಲೀಸರಿಗಿದೆ.
ಅಧಿಕೃತ ಸ್ವಿಕ್ಕರ್ ಬಿಡುಗಡೆ ಮಾ. 30ರ ಸಂಜೆ 5.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿ ಪಿ. ಹೇಮಲತಾ ಪೊನ್ನುರಾಜ್, ಪೊಲೀಸ್ ವರಿಷ್ಠಾಧಿಕಾರಿ ಡಾ. ರವಿಕುಮಾರ್ ವೈ. ಎಸ್. ಹಾಗೂ ಮಣಿಪಾಲ ಡಿಜಿಗೋ ವಿಭಾಗ ಮುಖ್ಯಸ್ಥ ಸತೀಶ್ಚಂದ್ರ ಎಸ್. ಎಸ್. ಅಭ್ಯಾಗತರಾಗಿ ಆಗಮಿಸುವರು ಸಂಘದ ಕಾರ್ಯದರ್ಶಿ ಕಿರಣ್ ಮಂಜನಬೈಲು ತಿಳಿಸಿದ್ದಾರೆ.
ಸಾಹಿತ್ಯ
ಪ್ರಪಂಚದ ಮೇಲೆ ಯಾಕಿಷ್ಟು ದ್ವೇಷ?
ಏನುತ್ತರ ಕೊಡಲಿ
ನನ್ನಲ್ಲೀಗ ಎಲ್ಲವೂ ಶೇಷ...!
ಎಲ್ಲವೂ ಭಾರವಾಗುತ್ತಿದೆ
ಪ್ರತಿ ನಿಮಿಷ....
ನೀ ತೋರಿಸಿದರೂ ನಾನಾ
ತರದ ಆಮಿಷ
ನನ್ನಲ್ಲಿ ಹುಟ್ಟಲಾರದು
ಜೀವಿಸುವ ತ್ವೇಷ
ಇದೆಲ್ಲದರ ಪರಿಹಾರಕ್ಕೆ
ಸಿಗಲಾರದು ಉತ್ತರ
ಹುಡುಕಿದರೂ ವಿಶ್ವಕೋಶ!
- ಸೌಮ್ಯ , ಸಾಗರ.
ಈ ಕನಸು ಅವಾರ್ಡ್
ಅದು ಸುಮಾರು ಬೆಳಗ್ಗೆ 9.30 ರ ಸಮಯ ಶಿರಸಿ ಸಮೀಪದ ಮತ್ತಿಘಟ್ಟದ ಕೆಳಗಿನಕೇರಿ ತಲುಪಿದ್ದೆವು.ಈ ಕನಸು.ಕಾಂ ಏರ್ಪಡಿಸುತ್ತಿರುವ ವಿದ್ಯಾರ್ಥಿ ವಾರ್ಷಿಕ ಅವಾರ್ಡ್ ಗಾಗಿ ಒಂದಿಲ್ಲೊಂದು ವಿಶೇಷ ವರದಿ ಹುಡುಕುವ ಕಾತರ...ಆಗ ಹೊಳೆದದ್ದು ಸಿದ್ದಿ ಜನಾಂಗ!.ಆ ಸಿದ್ದಿ ಜನಾಂಗದ ಭೇಟಿಗಾಗಿ ಕಾಡೊಳಗೊಂದು ಅಲೆತ...ಅದರ ಅನುಭವ ಕಥನ..ಇಲ್ಲಿದೆ. ಇದು ನಿಮಗಾಗಿ...ಅದಾಗ ನಮ್ಮ ನೆರವಿಗೆ ಸಿಕ್ಕಿದ್ದು ದಾಮೋದರ ಸಿದ್ದಿ. ಅವರ ಜೊತೆ ಸಿದ್ದಿಗಳ ಕೇರಿ ನೋಡಲು ಹೊರಟೆವು. ಸಿದ್ದಿಗಳು ಬುಡಕಟ್ಟು ಜನಾಂಗಕ್ಕೆ ಸೇರಿದವರು. ಈ ಊರಿನಲ್ಲಿ ಸುಮಾರು ಹನ್ನೊಂದು ಸಿದ್ದಿ ಸಂಸಾರಗಳು ಇವೆ. ಅವರ ಆಚಾರ, ವಿಚಾರ, ಕಾಡಿನ ಜೀವನದನುಭವವನ್ನು ತಿಳಿಯಲು ಕಾಡ ತೊರೆಯ ಜಾಡುಗಳನ್ನು ಹಿಡಿದು ನಡೆಯುತ್ತಾ ಹೋದೆವು. ಎರಡು ಕಿಲೋ ಮೀಟರ್ ದೂರ ಇದೆ ಎಂದು ಹೇಳಿದ್ದ ದಾಮೋದರ ಸಿದ್ದಿ ನಮ್ಮನ್ನು ಐದಾರು ಕಿಲೋ ಮೀಟರ್ ನಡೆಸಿಕೊಂಡು ಹೋದರು. ಕಾಡಿನ ಕಿರಿದಾದ ಕಾಲು ದಾರಿಯಲ್ಲಿ ನಡೆದುಕೊಂಡು ಅನೇಕ ತೊರೆಗಳು, ಕಾಡ ಗಿಡಗಂಟಿಗಳನ್ನು ದಾಟಿಕೊಂಡು ಕೊನೆಗೆ ದಾಮೋದರ ಸಿದ್ದಿಯ ಮನೆ ತಲುಪಿದೆವು.
ಅಲ್ಲಿನ ಅವರ ಜೀವನ ವ್ಯವಸ್ಥೆಯನ್ನು ನೋಡಿದಾಗ ಅವರು ಸಾಮಾಜಿಕವಾಗಿ ಮುಂದುವರೆದಿದ್ದಾರೆ ಎನಿಸಿತು. ಪಕ್ಕಾ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಟಿ.ವಿ, ಡಿಶ್, ಮೊಬೈಲ್ ಫೋನ್ಗಳು ಅವರ ಪ್ರತಿನಿತ್ಯದ ಜೀವನದಲ್ಲಿ ಬೆರೆತು ಹೋಗಿವೆ. ಅಂತರ್ಜಾತಿಯ ಪ್ರೇಮ ವಿವಾಹಗಳು ಅವರಲ್ಲಿ ನಡೆದಿವೆ ಇಂದಿಗೂ ಕೂಡ ನಡೆಯುತ್ತಿವೆ. ಇಷ್ಟೆಲ್ಲಾ ನಾಗರೀಕರಾಗಿದ್ದರೂ ಕೂಡ ಅವರು ಸಮಾಜದಿಂದ ದೂರ ಇದ್ದಾರೆ. ಎಲ್ಲೋ ಆ ಕಾಡಿನ ಮಧ್ಯದಲ್ಲಿ ಜನಜೀವನ ನಡೆಸಿಕೊಂಡು ಸಾಗುತ್ತಿದ್ದಾರೆ. ಇಂದು ಅವರು ಸಮಾಜದ ಮುಖ್ಯ ವಾಹಿನಿಗೆ ಬರಬೇಕಿದೆ. ಅಲ್ಲಿನ ಜನ ಅವರೇ ರಚಿಸಿದಂತಹ "ಸಂಗ್ಯಾಬಾಳ್ಯಾ" ದ ಕವಿತೆಗಳನ್ನು ನಮ್ಮ ಮುಂದೆ ಹಾಡಿದ್ದಾರೆ.
ಆ ಮನೆಯ ಚಿಕ್ಕ ಹುಡುಗಿ ಸುನಿತಾ "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ" ಎಂಬ ಹಾಡನ್ನು ಇಂದಿನ ಯಾವ ಸಂಗೀತಗಾರರು ನಾಚುವಂತೆ ಹಾಡಿದ್ದು ವಿಶೇಷ. 
ಇಷ್ಟೆಲ್ಲಾ ಅವರು ಮುಂದುವರೆದಿದ್ದರೂ ಕೂಡ ಅನೇಕ ಅನಾನುಕೂಲಗಳು ಅವರಿಗೆ ಕಾಡುತ್ತಿವೆ. ಸರಿಯಾದ ರಸ್ತೆಗಳು ಇಲ್ಲ. ಅಲ್ಲಿನ ತೊರೆಗಳಿಗೆ ಸೇತುವೆಗಳು ಇಲ್ಲ. ರೋಗಿಗಳನ್ನ ಕಂಬಳಿಯಲ್ಲಿ ಹೊತ್ತುಕೊಂಡು ತೊರೆಗಳನ್ನು ದಾಟಬೇಕು. ಅಲ್ಲಿನ ಶಾಲೆಗೆ ಹೊಗುವ ಮಕ್ಕಳು ಪ್ರತಿನಿತ್ಯ 8 ಕಿಲೋ ಮೀಟರ್ ನಡೆಯಬೇಕು. ಹೀಗೆ ಅನೇಕ ರೀತಿಯ ತೊಂದರೆಗಳನ್ನು ಅನುಭವಿಸುತ್ತಾ ಕಾಲಚಕ್ರದೊಂದಿಗೆ ಸಾಗುತ್ತಿದ್ದಾರೆ.
ಏನೇ ಆದರೂ ಕೂಡಾ ಅವರ ಸಂಸ್ಕೃತಿಯನ್ನು ಬಿಟ್ಟಿಲ್ಲ, ಇಂದಿಗೂ ಆಚರಿಸಿಕೊಂಡು ಬರುತ್ತಿದ್ದಾರೆ. ಅವರಲ್ಲಿ ವಧುದಕ್ಷಿಣೆ ಪದ್ದತಿ ಜಾರಿಯಲ್ಲಿದೆ. ಅನೇಕ ಆಚಾರ-ವಿಚಾರ, ರೂಢಿ ಸಂಪ್ರದಾಯಗಳು ಅವರಲ್ಲಿ ಇಂದಿಗೂ ಇರುವಂತಹ ವಿಷಯ ಶ್ಲಾಘನೀಯವಾಗಿದೆ..
- ದರ್ಶನ್ ಎಂ. ಕಮ್ಮಾರಗಟ್ಟೆ
ಪ್ರಥಮ ಬಿ.ಎ ಪತ್ರಿಕೋದ್ಯಮ
ಆಳ್ವಾಸ್ ಕಾಲೇಜ್
ಮೂಡುಬಿದಿರೆ
ಭಕ್ತಿ ಸಿಂಚನ
ವಿಶ್ವದ ವಿರಾಟ್ ಪುರುಷ, ನಮ್ಮ ದೇಹದಲ್ಲಿ ಸ್ವರಾಟ್ ಪುರುಷನಾಗಿ ವಿಹರಿಸುವ ರಾಮ
ಇತ್ತ ನೋಡಿರೆ ದೇವರು, ಅತ್ತ ಜೀವರ ಮಧ್ಯೆ ನಾವು
ಇತ್ತ ಪರಮಾತ್ಮ ಅತ್ತ ಸಂಸಾರ ಮಧ್ಯೆ ನಾವು
ಪರಮಾರ್ಥ ಗಳಿಸುವುದಕ್ಕಾಗಿರುವುದೆ ಸಂಸಾರ
ನಿನ್ನೆಬೆಳಗ್ಗೆಯ ೯೯೯೯ ನೆಯ ಸಂಖ್ಯೆಯನ್ನು ಕೂಡಿರೆ ೩೬ ನಾವು ಮೂವತ್ತಾರನೆಯ ಪೀಠಾಧಿಪತಿಗಳು, ನಾವು ೯ನೆಯ ರಾಘವೇಶ್ವರರು.
ಈ ಎರಡು ದಿನಗೞಿನ ಒಂದೊಂದು ಪೂಜೆ ಹತ್ತು ಸಾವಿರ ಪೂಜೆಗೆ ಸಮಾನ, ಯಾಕೆಂದರೆ ೧೦೦೦ ಸಾವಿರ ಜನ ಕೂ ಡಿ ಮಾಡಿದ್ದೇವೆ.
ಸಾವಿರ ಕಂಠಗಳು, ಒಂದು ಕರ
ದೇವರ ಸನ್ನಿಧಿಯಲ್ಲಿ ನಾವು ಒಂದಾದೆವು, ಬೇರೆಯಾಗುವುದಕ್ಕೆ ಸಾಧ್ಯವಿಲ್ಲ.
ಪರಮಾತ್ಮನನ ಸನ್ನಿಧಿಯಲ್ಲಿ “ಬೇರೆಯಾಗುವುದು”ಎಂಬ ಪದವಿಲ್ಲ.
ಪೂಜೆಯಲ್ಲಿ ನೀವು ಹೇಳುವುದು, ನಾವು ಮಾಡುವುದು
“ರಾಮಕಥೆ – ನಮ್ಮ ಬದುಕಿನ ಮಹತ್ತರ ತಿರುವು”.
ಇಷ್ಟು ಹೊತ್ತು ಕುಳಿತು ಶ್ರಮ ಪಟ್ಟ ನಿಮಗೆಲ್ಲ ಈ ದಿನ ಎಣ್ಣೆ ಹಇ ಸ್ನಾನ ಮಾಡಿಸ್ಯಉವ ತಾಯಿ ನಾವಾಗಬೇಕಿತ್ತು, ಎಂದು ನಮಗನಿಸುತ್ತಾ ಇದೆ.
ಎಂದೂ ಆಗದಷ್ಟೂ ಅರ್ಚನೆಗಳು ಈ ಎರಡು ದಿನಗಳಲ್ಲಿ ನಡೆದಿದೆ. ೧ ಗಂಟೆ ೨೦ ನಿಮಿಷದಲ್ಲಿ ೧ ಕೋಟಿ ಕುಂಕುಮಾರ್ಚನೆ, ತುಳಸಿ ಅರ್ಚನೆ ನಡೆದಿದೆ. ೧೬,೬೬೧ ಬಾರಿ ರುದ್ರ ಪಠಿಸಿದರೆ ಅತಿರುದ್ರ, ಆದರೆ ಇಂಡು ಮುಕ್ಕಾಲು ಗಂಟೆಯಲ್ಲಿ ೨೨,೩೬೫ ಬಾರಿ ರುದ್ರ ಪಠಿಸಲಾಗಿದೆ, ‘ವಿಶ್ವ ವಿಕ್ರಮ ಇದು’.
ಕೌಸಲ್ಯೆ ರಾಮನಿಗಾಗಿ ಕಾದಂತೆ ಅಶೋಕೆಯೂ ಕಾದಿತ್ತು ರಾಮನಿಗಾಗಿ. ಎಷ್ಟೋ ಕಾಲದಿಂದ, ಎಷ್ಟೋ ಶತಮಾನಗಳಿಂದ ಕಾದಿತ್ತು ಅಶೋಕೆ.
ಇಲ್ಲಿ ಮೊದಲು ಇದ್ದಿದ್ದು ಗೇರು ಮರ ಈಗ ಇರುವುದು ಗುರು.
ಶಂಕರಾಚಾರ್ಯರು ಹಲವು ಕಡೆ ಮಠಗಳನ್ನು ಸ್ಥಾಪನೆ ಮಾಡಿದ್ದಾರೆ. ಆದರೆ ಅದೇಕೆಯೋ ನಮ್ಮ ಪರಂಪರೆ ಮಾತ್ರ ಈ ವಿಶ್ವದಲ್ಲಿ ‘ಅವಿಚ್ಛಿನ್ನ’ವಾಗಿ ಉಳಿದಿದೆ.
ಕರಪತ್ರದಲ್ಲಿ ಬರೆದಿದ್ದ ’ಹತ್ತು ಸಾವಿರದೆಡೆಗೆ’ಎಂದರೆ ಹತ್ತು, ಸಾವು ಇರದ ಕಡೆಗೆ. ಅಮೃತತ್ವದ ಕಡೆಗೆ.
ಬೇಸಿಗೆಯಲ್ಲಿ ನದಿ ಬತ್ತಿದಂತೆ ಕಂಡರೂ ಅದು ಬತ್ತಿರುವುದಿಲ್ಲ. ಹಾಗೆಯೇ ಅಶೋಕೆಯ ಮಠವೂ ನಾಶವಾಗಿಲ್ಲ. ಅದು ಸುಪ್ತವಾಗಿ ಇದೆ. ಈ ಸಮಯ ಬಂದೊಡನೆ ಅದು ವಿಶ್ವರೂಪವಾಗಿ ಪ್ರಕಟವಾಯ್ತು.
ಹನುಮಾನ್ – ದವಡೆಯೞವನು. ಒಂದು ದವಡೆ ಹೋಯ್ತು, ನೂರು ದವಡೆ ಬಂತು. ಅಶೋಕೆಗೆ ಒಂದು ಕಡೆ ಹಾನಿಯಾದರೆ ನೂರು ಕಡೆಯಿಂಡ ಶಕ್ತಿ ಬರುತ್ತೆ, ಅದಕ್ಕೆ ಸಾಕ್ಷಿ ಈ ಕಾರ್ಯಕ್ರಮ.
ಕಡು ಬಡವ ದೇವರ ಕುರಿತು ತಪಸ್ಸು ಮಾಡಿ ‘ಆನೆ’ ಕೊಡು ಅಂತ ಕೇಳುತ್ತಾನೆ,
ಆನೆ ಯಾಕೆಂದು ಕೇಳಿದಾಗ ಆತ ಹೇಳುತ್ತಾನೆ
ಆ – ಎಂದರೆ ಆರೋಗ್ಯ
ನೆ – ಎಂದರೆ ನೆಮ್ಮದಿ ಎಂದು.
ಶರೀರಕ್ಕೆ ಆರೋಗ್ಯ ಮನಸ್ಸಿಗೆ ನೆಮ್ಮದಿ ಬೇಕು.
ನಮ್ಮ ಗುರು ಪೀಠ ಸಾವಿರ ಸಾವಿರ ವರ್ಷಗಳಿಂದ ಸಮಾಜಕ್ಕೆ ಆನೆಯನ್ನು ಕೊಡ್ತಾ ಬಂದಿದೆ.
ರಾಮ ಜಗತ್ತಿಗೆ ಒಬ್ಬನೇ, ನಮ್ಮ ರಾಮನ ವಿಗ್ರಹವೂ ಹಾಗೆಯೆ.
ಒಂದು ಕಡೆ ಊರ್ಧ್ವ ಮುಖ, ಇನ್ನೋದು ಅಧೋಮುಖ.
ಒಂದು ದಿವಿ, ಇನ್ನೊಂದು ಭುವಿ
ಹೆಬ್ಬೆರಳು ಪರಮಾತ್ಮ, ತೋರುಬೆರಳು ಜೀವಾತ್ಮ
ಜೀವಾತ್ಮ ಪರಮಾತ್ಮನನ್ನು ಸೇರಿದಾಗ ವೃತ್ತ ಪರಿಪೂರ್ಣವಾಗುತ್ತದೆ – ಇನ್ಮುದ್ರೆಯ ಸಂದೇಶವಿದು.
ಮೌಳಿಸ್ಥಾನದಲ್ಲಿ ಚಂದ್ರ – ಚಂದ್ರಮೌಳೀಶ್ವರ ಲಿಂಗ. ಹೆಸರಿಗೆ ಅನುರೂಪವಾಗಿದೆ.
ಚಂದ್ರಮೌಳೀಶ್ವರದಲ್ಲಿ ಸಂಪೂರ್ಣ ಭಾರತದ ಇತ್ರವಿದೆ.
ಚಂದ್ರಮೌಳೀಶ್ವರ ಲಿಂಗದ ಹಿಂಭಾಗದಲ್ಲಿ ಸುಸ್ಪಷ್ಟವಾಗಿ ಆತ್ಮಲಿಂಗದ ಛಾಯೆ ಮೂಡಿದೆ
ಇಲ್ಲಿನ ರಾಜರಾಜೇಶ್ವರಿಯ ಶ್ರೀಚಕ್ರವೂ ಅತ್ಯಂತ ಅಪರೂಪವಾದದ್ದು. ಗಣಪತಿಯ ಮೂರ್ತಿಯೂ ಗೋಕರ್ಣದಲ್ಲಿರುವ ಗಣಪತಿಯಂತೆಯೆ ಇದೆ.
ಹಾಗಾಗಿ ನಾವು ಸಲ್ಲಿಸುವ ಪೂಜೆಯೆಲ್ಲಾ ಗೋಕರ್ಣಕ್ಕೆ ಸಲ್ಲುತ್ತದೆ
ಸಾಹಿತ್ಯ
ವೈದೇಹಿ ಕಾದಂಬರಿ : ಭಾಗ - 3
ಮಕ್ಕಳಿಗೆಲ್ಲ ಬೇಗ ಊಟಹಾಕಿದ್ದಾಳೆ ಸರೋಜ. ಪುಟ್ಟ ಜಯರಿಗೆ ನಿದ್ದೆ ಬಂದಾಯಿತು. ಇನ್ನೂ ಹೆರಿಗೆಯಾಗಿಲ್ಲ. ಈಗ, ಇನ್ನು ಒಂದು ಸ್ವಲ್ಪ ಹೊತ್ತಿನೊಳಗೆ ಎಂಬ ಒಸಗೆ ಮಾತ್ರ ಬರುತ್ತಿದೆ. ಅವತ್ತಿಡೀ ಕೆಲಸ ತನ್ನ ಮೇಲೆ ಬಿದ್ದದ್ದಕ್ಕೂ , ಜೊತೆಗೆ ರತ್ನನ ಹಿರಿಯ ಮಗ ರವಿಯನ್ನೂ ನೋಡಿಕೊಂಡು ಸಾಕಾಗಿದ್ದಕ್ಕೂ ಸರೋಜನಿಗೆ ಕಣ್ಣೆಳೆಯುತ್ತಿದೆ.ತಮ್ಮ ಶಿವನನ್ನು ಕರೆದು `ಮಣಿ , ಮಗು ಹುಟ್ಟಿದ ಕೂಡಲೆ ನನ್ನನ್ನು ಕರೆ.ರವಿಗೆ ನಿದ್ರೆ ಬರುತ್ತಿದೆ.ಮಲಗಿಸಲು ಹೋಗುತ್ತೇನೆ' - ಎಂದಳು. `ಹೂಂ ಹೂಂ ಮಗುವಿನ ಹೆಳೆ , ತನ್ನ ಬೆಳೆ ' - ಎಂದ ಶಿವ.
ಈಗ ಶಾಮಿ ಮತ್ತು ಶಿವ ಮಾತ್ರ ಕಾಯುತ್ತಿದ್ದಾರೆ. ಗಂಟೆ ದಾಟುತ್ತಾ ಇದೆ. ಗೌರಮ್ಮ `ಮಕ್ಕಳೇ , ಮಲಗಬಾರದ?' - ಎಂದರೆ `ಹೂಂ' ಎನ್ನುತ್ತಾರೆ. ಕೂತಲ್ಲಿಂದ ಹಂದುವುದಿಲ್ಲ.
ಶಾಮಿ ಅಣ್ಣನೊಡನೆ ಪಿಸಿ ಪಿಸಿಯಾಗಿ ಕೇಳಿದಳು.
`ಹೆರುವುದೆಂದರೆ ಹೇಗೆ?'
ಶಿವ ಜೋರಿನಿಂದೊಮ್ಮೆ ಅವಳತ್ತ ನೋಡಿದ. `ಇಸಿಸಿ, ಬೇರೆ ಏನಿಲ್ಲವ ನಿಂಗೆ ಕೇಳಲಿಕ್ಕೆ? ಸುಮ್ಮನೆ ಕೂತುಕೋ' - ತನಗೆ ಗೊತ್ತಿಲ್ಲವೆಂಬ ಸುಳಿವು ಶಾಮಿಗೆ ಸಿಕ್ಕದಂತೆ ಗೊತ್ತಿದ್ದೂ ಹೇಳಿದವನಂತಹ ಮುಖ ಹೊತ್ತಿದ್ದ.
ಶಾಮಿಯೇ ಕಿವಿಯಲ್ಲಿ `ಹೊಟ್ಟೆ ಬಗೆಯುತ್ತಾರಂತೆ '
`ಹಾಗೆ ಮಾಡಬೇಕು ನಿನ್ನಂಥವರಿಗೆ'
`ಹೋಗ.'
`ಹೆಣೆ , ಒಂದು ಕ್ಷಣ ಬಾಯಿ ಹೊಲಿದುಕೊಳ್ಳುತ್ತಿಯ? ಈ ಅಪರ ರಾತ್ರಿಗೆ ಹೀಗೆ ನಿದ್ದೆ ಮಾಡದೆ ಕೂತದ್ದು ಯಾಕೆ ಅಂತ ಈಗ!' ಕೋಣೆಯೊಳಗಿಂದಲೇ ಗೌರಮ್ಮ ಗದರಿಸಿದರು.
ಮಿಡ್ ಬಾಯಿಯ ಸ್ವರ ಕೇಳುತ್ತಿತ್ತು. `ಹೂ....ಹಾ....ಗೆ ನಿಧಾ...ನ. ಇನ್ನು ಒಂದೇ ಒಂದು ನೋವು ಕೊಟ್ಟುಬಿಡು...'
`ಮತ್ತೆ ಮಕ್ಕಳು ಬೇಕೆಂದರೆ ಸುಮ್ಮನೆ ಆಗುತ್ತದೆಯೇ?' - ಪಾರ್ತಕ್ಕ.
ಗೌರಮ್ಮ ಪುನಃ ಕೇಳಿದರು. `ಮಕ್ಕಳೇ , ಮಲಗಿಕೊಳ್ಳಿ ಹೋಗಿ.'
ಇಬ್ಬರೂ ಏಳಲಿಲ್ಲ.
ಶಾಮಿ ಕುಪ್ಪಳಿಸಿ ಶಿವನಿಗೆ ಮತ್ತಷ್ಟು ಹತ್ತಿರ ಕುಳಿತಳು.
`ಅವತ್ತು ಎಮ್ಮೆ ಕರುಹಾಕಿತ್ತಲ್ಲ. ರಾತ್ರಿಯಿಡೀ ಕಸ ಬಿದ್ದಿರಲಿಲ್ಲ. ಸೀತು ಚಿಮಿಣಿ ದೀಪ ಇಟ್ಟುಕೊಂಡು ಅದು ಬೀಳುವುದನ್ನೇ ಕಾಯುತ್ತಾ ಕುಳಿತಳು. ಕಸ ತಿಂದರೆ ಎಮ್ಮೆ ಹಾಲುಕೊಡುವುದಿಲ್ಲ ಅಂತಲ್ಲ! ಅಮ್ಮ ಎಷ್ಟು ಬೇಡವೆಂದರೂ ನಾನು ಸೀತುವಿನ ಒಟ್ಟಿಗೆ ಕೂತಿದ್ದೆ... ಬರೀ ಮೀನು ಜಂಬು ಮಾರಾಯ ಅವಳು.'
`ಮತ್ತೆ ? ಮೀನು ತಿಂದವರ ಹತ್ತಿರ ಮೀನು ವಾಸನೆ ಅಲ್ಲದೆ ಬೇರೆಯದು ಇರುತ್ತದ?"
`ಆ ದಿನ ಎಂಥೆಂಥಾ ಕತೆ ಹೇಳಿದಳು ಗೊತ್ತುಂಟ? ಹಟ್ಟಿಯ ಹಿಂದೆ ಹಾಯ್ಗುಳಿ ದೈವ ಇದೆಯಂತೆ. ಅದು ಬೇಗ ಕಸ ಬೀಳಲು ಬಿಡುವುದಿಲ್ಲವಂತೆ. ಅದಕ್ಕೊಂದು ಮುಟ್ಸು ಮಾಡಿದ್ದೇನೆ - ಎಂದಳು. ಕೆಂಪಿ ದನ ಯಾಕೆ ಹಾಲು ಕೊಡುವುದಿಲ್ಲವಂತೆ ಆದಿತ್ಯವಾರ ಗೆಂಡದಲ್ಲಿ ಕೇಳುತ್ತಾಳಂತೆ. ಒಂದು ಸಲ ನಮ್ಮನ್ನೆಲ್ಲ ಕರೆದುಕೊಂಡು ಹೋಗುತ್ತೇನೆ ಗೆಂಡಕ್ಕೆ ಎಂದಿದ್ದಾಳೆ. ಬರುವುದಾದರೆ ಬಾ... ಕಡೆಗೂ ಬಿತ್ತು ಕಸ. ಅವಳು ಅದನ್ನು ಮಡಕೆಗೆ ಎತ್ತಿ ಹಾಕಿ ಕೊಂಡ ತೋಡಿ ಹುಗಿದು ಬಂದಳು.'
`ಕಸ ಎಂದರೆ?'
ಆಹಾ! ಈಗ ತನ್ನ ಸರದಿ! ಕಸ ಎಂದರೆ ಏನಂತ ನಾನೂ ಸೀತುವಿನ ಹತ್ತಿರ ಕೇಳಿದ್ದೆ. ಆಕೆಯೂ ಹೇಳಿರಲಿಲ್ಲ. `ಕಸ ಎಂದರೆ ಕಸ' - ಎಂದಿದ್ದಳಲ್ಲ! ತಾನೂ `ಕಸ ಎಂದರೆ, ಕಸ'! ಅಷ್ಟೂ ಗೊತ್ತಿಲ್ಲನ' - ಎಂದಳು.
`ನಿನ್ನ ಮಂಡೆ.'
`ನಿನ್ನ ಮಂಡೆ.'
`ಬಾಯಿ ಮುಚ್ಚುತ್ತೀರ ಇಲ್ಲವ! ಅಲ್ಲ ಮಕ್ಕಳೆ , ನಿಮಗೆ ನಿದ್ದೆಯಾದರೂ ಬರುವುದಿಲ್ಲವ ಎಂತದು?'
`...'
ರತ್ನ ಅಮ್ಮಾ ಎಂದು ಗಟ್ಟಿಯಾಗಿ ಒಮ್ಮೆ ಕಿರುಚಿದಳು... ಸ್ವಲ್ಪ ಹೊತ್ತಿನಲ್ಲಿಯೇ....
ಮುಂದುವರಿಯುತ್ತದೆ...
- ವೈದೇಹಿ.
ಪ್ರಾದೇಶಿಕ ಸುದ್ದಿ
ಕಾಂತಾವರ:ರಂಗಕಲಾವಿದ,ರಂಗ ನಿರ್ದೇಶಕ ಜೀವನ ರಾಂ ಸುಳ್ಯ ಅವರಿಗೆ ವಿಶ್ವರಂಗ ಭೂಮಿ ದಿನದಂದು ಕಾಂತಾವರದ ಕನ್ನಡ ಭವನದಲ್ಲಿ "ಸುವರ್ಣ ರಂಗ ಸನ್ಮಾನ್" ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು ಹತ್ತುಸಾವಿರ ನಗದು, ಪ್ರಶಸ್ತಿಪತ್ರ, ಫಲಕ,ಶಾಲು, ಹಾರ, ಫಲತಾಂಬೂಲಗಳನ್ನು ಒಳಗೊಂಡಿತ್ತು.
ಹಿರಿಯರಾದ ಕೆ.ವಿ.ಅಕ್ಷರ, ಟಿ.ಪಿ.ಅಶೋಕ, ಸಿ.ಕೆ.ಪಡಿವಾಳ್, ಡಾ.ನಾ.ಮೊಗಸಾಲೆ, ರಂಗಕರ್ಮಿ ಸದಾನಂದ ಸುವರ್ಣ,ಡಾ.ಸೀತಾಲಕ್ಷ್ಮಿ ಕರ್ಕಿಕೋಡಿ ಅತಿಥಿಗಳಾಗಿದ್ದರು.
ಸಾಹಿತಿ, ಉಪನ್ಯಾಸಕ ಡಾ.ಧನಂಜಯ ಕುಂಬ್ಳೆ ಅಭಿನಂದನಾ ಭಾಷಣ ಮಾಡಿ ಹೇಳಿದ್ದು ಇಷ್ಟು. "ಬಾಲ್ಯದಲ್ಲಿ ನೋಡುತ್ತಿದ್ದ ಯಕ್ಷರಂಗದ ಪ್ರಭಾವ ಜೀವನ್ ರಾಂ ಅವರ ನಾಟಕದಲ್ಲಿ ಧನಾತ್ಮಕವಾಗಿ ಇಂದು ಗೋಚರಿಸುತ್ತಿದೆ.ಇದು ಅಭಿನಂದನಾರ್ಹ. ರಂಗಭೂಮಿ, ಯಕ್ಷರಂಗದ ಪ್ರೇರಣೆಗಳು ಧನಾತ್ಮಕವಾಗಿ ಜೀವನರಾಂ ಸುಳ್ಯ ನಿರ್ದೇಶಿತ ನಾಟಕಗಳಲ್ಲಿ ಗೋಚರಿಸುತ್ತಿರುವುದು ಅವರ ಆಳವಾದ ಅನುಭವ,ಕ್ಷೇತ್ರದ ಬಗೆಗಿನ ಪ್ರೀತಿಗೆ ಒಂದು ನಿದರ್ಶನ. 

"ಜೀವನವೊಂದೇ ನಾಟಕ ರಂಗ " ಎಂಬಂತೆ ನಾಟಕವನ್ನೇ ಉಸಿರಾಗಿಸಿಕೊಂಡವರು ಜೀವನ್ ರಾಂ ಸುಳ್ಯ ಅವರು. ನಟನಾಗಿ, ನಿರ್ದೇಶಕನಾಗಿ, ಸಂಗೀತರಾಗನಾಗಿ, ವಿವಿಧ ಆಯಾಮಗಳಲ್ಲಿ ಕಾಣಿಸಿಕೊಳ್ಳುವ ಜೀವನ್ ರಾಂ ಸುಳ್ಯರು ಸಮಗ್ರ ನಿರ್ವಹಣೆಯ ಶಕ್ತಿಯನ್ನು ಹೊಂದಿದ್ದಾರೆ. ಚೌಕಟ್ಟನ್ನು ಅರ್ಥಪೂರ್ಣವಾಗಿ ಮೀರುವಲ್ಲಿ ಸಫಲತೆಯನ್ನು ಸಾಧಿಸಿಕೊಂಡಿದ್ದಾರೆ.ಪರಿಕರಗಳನ್ನು ಜೀವಂತ ಪಾತ್ರಗಳಂತೆ ಕಾಣುವ , ಬಿಂಭಿಸುವ ಚಾಕಚಕ್ಯತೆ ಜೀವನ್ ಅವರಲ್ಲಿದೆ."
`ಹೋಗುವೆನು ನಾ' - ಕುವೆಂಪು ಕವನ; ಕೆ.ವಿ. ಶಿಶಿರ ದೃಶ್ಯ ಶ್ರಾವ್ಯ -ಒಂದು ಅವಲೋಕನ
ಕೊನೆಯ ಕಂತು
ಈ ದೃಶ್ಯ ಶ್ರಾವ್ಯದಲ್ಲಿ ಇನ್ನೊಂದು ಮುಖ್ಯವಾಗಿ ಗಮನಿಸಬೇಕಾದ ಅಂಶವೊಂದಿದೆ. ಅದು ಶಿಶಿರ ಕೆ.ವಿ. ಅವರು ಇಡೀ ಕವನವನ್ನು ಬಳಸಿಕೊಳ್ಳದೆ ಕೇವಲ ಕೆಲವೇ ಕೆಲವು ಸಾಲುಗಳನ್ನು ಬಳಸಿಕೊಂಡು ಶ್ರಾವ್ಯಗಾಗಿರಿಸಿರುವುದು. ಇದರಿಂದ ಕೇಳುವ ದನಿ ಎಲ್ಲೂ ಎಡತಾಕದೆ ಸುಶ್ರಾವ್ಯವಾಗಿ ಮೂಡಿ ಬಂದಿದೆ. ಕೆಳಗಿನ ಸಾಲುಗಳಲ್ಲಿಯ ಕೊನೆಯ ಎರಡು ಸಾಲುಗಳು ಮತ್ತು ಆನಂತರದ ಪ್ಯಾರಾದಲ್ಲಿ ಕೊನೆಯ ಎರಡು ಸಾಲುಗಳನ್ನು ಉಪಯೋಗಿಸಿಕೊಂಡು ಬಹಳ ಜಾಣ್ಮೆಯಿಂದ ರಾಗ ಸಂಯೋಜಿಸುವುದು ಅದ್ಭುತ ಅನಿಸಿಬಿಡುತ್ತದೆ.
ಎಲ್ಲಿ ತಿಂಗಳು ಕಾಡುಮಲೆಗಳ ಮೇಲೆ ಹಾಲ್ಮಳೆ ಸುರಿವುದೋ,
ಕಿವಿಯ ಜಿಹ್ವೆಗೆ ಎಲ್ಲಿ ಜೊನ್ನುಣಿ ತೇನೆ ಜೇನ್ಮಳೆ ಕರೆವುದೋ,
ಎಲ್ಲಿ ಕದ್ದಿಂಗಳಲಿ ತಾರಾಕೋಟಿ ಕಿಡಿಕಿಕ್ಕಿರಿವುದೋ,
ಕಾರಿನಿರುಳಲಿ ಮಿಂಚುಹುಳುಗಳ ಸೇನೆ ಕತ್ತಲೆಗಿರಿವುದೋ,
ಮೇಲಿನ ಸಾಲುಗಳಲ್ಲಿ ಕವಿ ತನ್ನ ಮಲೆನಾಡನ್ನು ಇನ್ನಷ್ಟು ವಿವರಿಸುತ್ತಾ ಅಲ್ಲಿ ಏನಿದೆ? ಹೇಗಿದೆಯೆಂದು ನೆನಪಿಸಿಕೊಳ್ಳುತ್ತಾ ಪ್ರಕೃತಿಯ ಸೊಬಗನ್ನು ತೆರೆದಿಡುತ್ತಾನೆ. ತಿಂಗಳ ಬೆಳಕು ಕಾಡುಮಲೆಗಳ ಮೇಲೆ ಹಾಲು ಮಳೆಯನ್ನು ಸುರಿಯುವಲ್ಲಿ, ಕಿವಿಯ ನಾಲಿಗೆಗೆ ಅಂದರೆ ಕಿವಿ ಕೇಳುವ ಇಂಪಾದ ಗಾನವನ್ನು ಗುಂಜಿಸುವ ಜೇನು ನೊಣಗಳ ಗುಂಜಾರವಿದೆಯೋ, ಬೆಳದಿಂಗಳು ಕದ್ದು ಹೋಗಿರುವಲ್ಲಿ ಕೋಟಿ ತಾರೆಗಳು ಮಿನುಗುತ್ತವೋ ಆ ಇರುಳಿನಲ್ಲಿ ಮಿಂಚುಹುಳುಗಳ ಗೊಂಚಿಲು ಕತ್ತಲೆಯನ್ನು ದೂರಮಾಡುತ್ತದೋ ಅಂತಹ ಮಲೆನಾಡಿಗೆ ಹೋಗಿ ಬಿಡುವ ದಾವಂತ ಕವಿಗೆ. ಇಲ್ಲಿ ಇನ್ನೊಂದು ಸೂಕ್ಷ್ಮವಾದ ವಿಚಾರವನ್ನು ತಿಳಿದುಕೊಳ್ಳುವ ಅಗತ್ಯವಿದೆ. ಕವನದಲ್ಲಿ ಬೆಳದಿಂಗಳು ಇದ್ದ ಮಲೆನಾಡು ಮತ್ತು ಕಾರಿನಿರುಳಿನ ಮಲೆನಾಡು ಎರಡೂ ವ್ಯತಿರಿಕ್ತಗಳನ್ನು ಪಕ್ಕಪಕ್ಕದಲ್ಲಿಟ್ಟು ಕವಿ ಮಲೆನಾಡನ್ನು ಬಣ್ಣಿಸುವಾಗ ಕವಿ ಮನ ಪುಳಕವಾಗದಿರದು.
ಮುಂದಿನ ಸಾಲುಗಳಲ್ಲಿ ಹಸಿರು ಚಿಮ್ಮುವ ಪಚ್ಚೆ ಪೈರುಗಳು ಬೆಳೆಯುವಲ್ಲಿ, ಗದ್ದೆಗಳ ನಡುವೆ ಬರುವ ಗಾಳಿಯಿದೆಯೋ ಅಲ್ಲಿ ಭ್ರಮರದ ಕಣ್ಣುಗಳ ಮಲೆನಾಡಿನ ಹೆಣ್ಣುಗಳ ನೋಟದಲ್ಲಿ ಹೃದಯ ಎಲ್ಲಿ ಸೆಳೆದು ಬಿಡುವುದೋ ಎಂಬ ಭಯ, ಹಾಗೆ ಎಲ್ಲಿ ಕಾಲವು ಸುಖದಲ್ಲಿ ತಿಳಿಯದ ಹಾಗೆ ಕಳೆದು ಹೋಗುವುದೋ ಅಂತಹ ಮಲೆನಾಡು ಕವಿಯನ್ನು ಕೂಗಿ ಕರೆವುದು.
ಎಲ್ಲಿ ಹಸುರನು ಚಿಮ್ಮಿ ಕಣ್ಣಿಗೆ ಪೈರು ಪಚ್ಚೆಯ ಬೆಳೆವುದೋ,
ಎಲ್ಲಿ ಗದ್ದೆಯ ಕೋಗು ಪವನನ ಹತಿಗೆ ತೆರೆತೆರೆಯೊಲೆವುದೋ,
ಬಿಂಗಗಣ್ಗಳ ಮಲೆಯ ಹೆಣ್ಗಳ ದಿಟ್ಟಿಯೆಲ್ಲೆದೆ ಸೆಳೆವುದೋ,
ಎಲ್ಲಿ ಕಾಲವು ತೇಲಿ ಸುಖದಲಿ ತಿಳಿಯದಂತೆಯೆ ಕಳೆವುದೋ,
ದೃಶ್ಯಶ್ರಾವ್ಯದಲ್ಲಿ ಎಲ್ಲಿ ಕದ್ದಿಂಗಳಲಿ ತಾರಾಕೋಟಿ ಕಿಡಿಕಿಕ್ಕಿರಿವುದೋ, ಕಾರಿನಿರುಳಲಿ ಮಿಂಚುಹುಳುಗಳ ಸೇನೆ ಕತ್ತಲೆಗಿರಿವುದೋ ಮತ್ತು ಬಿಂಗಗಣ್ಗಳ ಮಲೆಯ ಹೆಣ್ಗಳ ದಿಟ್ಟಿಯೆಲ್ಲೆದೆ ಸೆಳೆವುದೋ, ಎಲ್ಲಿ ಕಾಲವು ತೇಲಿ ಸುಖದಲಿ ತಿಳಿಯದಂತೆಯೆ ಕಳೆವುದೋ ಬಹಳ ಅದ್ಭುತವಾಗಿ ಕೇಳಿಸುವುದಲ್ಲದೆ ಮಲೆನಾಡಿನ ಸದ್ಯದ ಸ್ಥಿತಿಯನ್ನು ತೋರಿಸುತ್ತದೆ. ದೃಶ್ಯ ಮಾಧ್ಯಮಕ್ಕೆ ಕವನ ಮತ್ತು ಕಥೆಯನ್ನು ಅಳವಡಿಸುವಾಗ ಕೆಲವೊಂದು ಚೌಕಟ್ಟುಗಳಿರುತ್ತದೆ. ಆ ಸಮಯದಲ್ಲಿ ಸರಿಯಾದ ರೂಪದರ್ಶಿಗಳಿಲ್ಲದೆ ಅಥವಾ ಪರಿಕರಗಳಿರದೆ ನಿರ್ದಿಷ್ಟವಾದ ರೂಪುರೇಷೆ ಬರಲು ಸಾಧ್ಯವಿಲ್ಲ. ಹಾಗೆಯೇ ಇಲ್ಲಿ ಕಲಾವಿದರ ಕೊರತೆ ಎದ್ದು ಕಾಣುತ್ತದೆ. ಅತೀ ಕಡಿಮೆ ಖರ್ಚಿನಲ್ಲಿ ದೃಶ್ಯವನ್ನು ಸೆರೆಹಿಡಿಯುವ ಪ್ರಯತ್ನವನ್ನು ಮಾಡಲಾಗಿದೆ ಅನಿಸಿದರೆ ಹೆಚ್ಚಲ್ಲ. ಹಾಗಾಗಿ ಇನ್ನೂ ಪ್ರಕೃತಿಯ ಮತ್ತು ರೂಪದರ್ಶಿಗಳ ಎಕ್ಸ್ಪೋಸಿಂಗ್ ಆಗಬೇಕಾಗಿತ್ತು ಅನ್ನುವುದು ಸ್ಪಷ್ಟವಾಗಿದೆ.
ಅಲ್ಲಿಗೈದುವೆನಲ್ಲಿಗೈದುವೆನಿಲ್ಲಿ ಬೇಸರವಾಗಿದೆ;
ಕಾಡುಮಲೆಗಳನಲೆವ ಹುದ್ದಿನ ಕಿಚ್ಚು ಹೃದಯದಿ ರೇಗಿದೆ!
ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ;
ಹಸುರು ಸೊಂಪಿನ ಬಿಸಿಲು ತಂಪಿನ ಗಾನದಿಂಪಿನ ಕೂಡಿಗೆ!
ಈ ಸಾಲುಗಳಲ್ಲಿ ಬಯಲು ಸೀಮೆ ಬೇಸರವಾಗಿ ಮಲೆನಾಡಿಗೆ ಹೋಗುವೆನೆನ್ನುವ ಕವಿಯ ತುಡಿತ ಮತ್ತೆ ಮತ್ತೆ ಅನುರಣಿಸುತ್ತದೆ. ಇದಿಷ್ಟು ವಾಸ್ತವತೆಯ ಮಗ್ಗುಲನ್ನು ಸೂಚಿಸಿದರೆ ಉಳಿದಂತೆ ಭಾವನೆಯ ಲೋಕಕ್ಕೆ ಕವಿ ಇಳಿಯುವುದನ್ನು ಮುಂದಿನ ಸಾಲುಗಳಲ್ಲಿ ನೋಡಬಹುದು.
ಅಲ್ಲಿ ಭಾವದ ಬೆಂಕಿಹಕ್ಕಿಯ ಮಿಂಚುರೆಕ್ಕೆಯನೇರುವೆ;
ಧರಣಿ, ದಿನಮಣಿ, ತಾರೆ, ನೀಹಾರಿಕೆಯ ನೇಮಿಯ ಮೀರುವೆ!
ಕಾಲದಾಚೆಗೆ, ದೇಶದಾಚೆಗೆ, ಚಿಂತೆಯಾಚೆಗೆ ಹಾರುವ;
ಕಾವ್ಯಕನ್ಯಾಶ್ರಾವ್ಯಕಂಠದೊಳಾತ್ಮಭೂತಿಯ ಸಾರುವೆ!
ಇಲ್ಲಿ ಬೆಂಕಿಯ ಹಕ್ಕಿಯೆನ್ನುವುದು ವಾಸ್ತವದಲ್ಲಿಲ್ಲದ್ದು; ಅದು ಭಾವನಾತ್ಮಕವಾದದ್ದು. ಕವಿ ತನ್ನ ನಾಡಿನ ಬಗ್ಗೆ ಹೇಳುತ್ತಾ ಹೇಳುತ್ತಾ ಭಾವದ ಬೆಂಕಿ ಹಕ್ಕಿಯೆನ್ನುವ ಉತ್ಪ್ರೇಕ್ಷೆಗೆ ಇಳಿಯುತ್ತಾ ಅದರ ಮಿಂಚಿನಂತಹ ರೆಕ್ಕೆಯನ್ನು ಏರುತ್ತಾ, ಭೂಮಿ, ಸೂರ್ಯ, ಚಂದ್ರ, ತಾರೆಗಳನ್ನು ಮೀರಿ ಹೋಗುವೆನೆನ್ನುತ್ತಾನೆ. ಮತ್ತು ಕಾಲ, ದೇಶ, ಚಿಂತೆಯ ದಿಗಂತವನ್ನು ಹಾರಿ ಕಾವ್ಯ ಶ್ರಾವ್ಯಗಳಲ್ಲಿ ಆತ್ಮಭೂತಿಯನ್ನು ಸಾರುವುದನ್ನು ಹೇಳಿಕೊಳ್ಳುತ್ತಾನೆ.
ನಗರ ನಾಗರಿಕತೆಯ ಗಲಿಬಿಲಿ ಅಲ್ಲಿ ಸೋಂಕದು, ಸುಳಿಯದು,
ದೇಶದೇಶದ ವೈರಯುದ್ಧದ ಸುದ್ದಿಯೊಂದೂ ತಿಳಿಯದು.
`ತಿಳಿಯದಿರುವುದೆ ತಿಳಿವು' ಎಂಬುವ ನನ್ನಿ ಆಯೆಡೆ ತಿಳಿವುದು,
`ತಿಳಿಯೆ ನೋವಿರೆ, ತಿಳಿಯದಿರುವುದೆ ಜಾಣ್ಮೆ' ಎಂಬರಿವುಳಿವುದು.
ಅಲ್ಲಿ ನಗರ ನಾಗರೀಕತೆಯ ಗಲಿಬಿಲಿಯಿಲ್ಲ; ದೇಶದೇಶ ಹಗೆತನ, ಯುದ್ಧದ ಸುದ್ದಿ ತಿಳಿಯುವುದಿಲ್ಲ. ತಿಯದಿರುವುದೆ ತಿಳಿವು ಮತ್ತು ತಿಳಿಯೆ ನೋವಿರೆ, ತಿಳಿಯದಿರುವುದು ಜಾಣ್ಮೆಯೆಂದು ತನ್ನನ್ನು ತಾನು ಸಮಾಧಾನಿಸುತ್ತಾ ಮುಂದಿನ ಸಾಲುಗಳನ್ನು ಹೇಳುತ್ತಾ ತನ್ನೂರಿನ ಕನಸು ಕಾಣುತ್ತಾನೆ.
ಶಿಶಿರರ ದೃಶ್ಯಶ್ರಾವ್ಯದಲ್ಲಿಯೂ ನೇರ ಮಣ್ಣಿನ ದಾರಿಯೊಂದು ತೆರೆದುಕೊಳ್ಳುತ್ತಾ ಕಾಲದಾಚೆಗೆ, ದೇಶದಾಚೆಗೆ, ಚಿಂತೆಯಾಚೆಗೆ ಎಲ್ಲವನ್ನು ತೊರೆದು ಸಾಗುವಂತೆ ಕೊನೆಯಾಗುತ್ತದೆ.
ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ;
ಮಲೆಯನಾಡಿಗೆ, ಮಳೆಯ ಬೀಡಿಗೆ ಸಿರಿಯ ಚೆಲುವಿನ ರೂಢಿಗೆ.
ಬೇಸರಾಗಿದೆ ಬಯಲು, ಹೋಗುವೆ ಮಲೆಯ ಕಣಿವೆಯ ಕಾಡಿಗೆ;
ಹಸುರು ಸೊಂಪಿನ ಬಿಸಿಲು ತಂಪಿನ ಗಾನದಿಂಪಿನ ಕೂಡಿಗೆ!
ಒಟ್ಟಾರೆಯಾಗಿ ಕವನಗಳನ್ನು ಕವಿತೆಗಳನ್ನು ಓದಲು ಪ್ರಚೋದಿಸುವ ಒಂದು ಸುಂದರ ದೃಶ್ಯ ಶ್ರಾವ್ಯ ಈ `ಹೋಗುವೆನು ನಾ' ಒಂದು ಪ್ರಾಯೋಗಿಕ ಕಿರುಚಿತ್ರವಾಗಿ ಮೂಡಿಬಂದಿದೆ. ಶಿಶಿರ ಕೆ. ವಿ. ಅವರಿಗೆ ಅಭಿನಂದನೆಗಳು. ನಿಮ್ಮಿಂದ ಇನ್ನಷ್ಟು ಶ್ರೇಷ್ಠ ಕವನಗಳು ದೃಶ್ಯಮಯವಾಗಿ ಮೂಡಿಬರಲಿ.
(ಮುಗಿಯಿತು)
ದೃಶ್ಯ ಕೃಪೆ : ಶಿಶಿರ ಕೆ. ವಿ.
ರೂಪದರ್ಶಿ : ಸುಭಾಷ್ ಹಾರೆಗೊಪ್ಪ
- ಅನು ಬೆಳ್ಳೆ
ರಾಜ್ಯ - ರಾಷ್ಟ್ರ
ನಿರ್ಮಲ ಗ್ರಾಮದ ಸಮುದಾಯ ಶಿಬಿರ ಸಮಾರೋಪವೇಣೂರು: ರಾಜ್ಯದಲ್ಲೇ ನಿರ್ಮಲ ಗ್ರಾಮವೆಂಬ ಪುರಸ್ಕಾರಕ್ಕೆ ಪಾತ್ರವಾದ ಹೊಸಂಗಡಿ ಗ್ರಾಮವನ್ನು ಆಳ್ವಾಸ್ ಎಜುಕೇಷನ್ ಫೌಂಡೇಷನ್ ದತ್ತು ಗ್ರಾಮವನ್ನಾಗಿ ಸ್ವೀಕರಿಸುವ ಬಗ್ಗೆ ಚಿಂತಿಸಿದೆ.
ಗ್ರಾಮದ ನೈರ್ಮಲ್ಯವನ್ನು ಕಾಪಾಡುವುದು, ಗ್ರಾಮಸ್ಥರನ್ನು ಸ್ವಾವಲಂಬಿಗಳನ್ನಾಗಿಸುವುದು, ದುಶ್ಚಟ ಮುಕ್ತ ಗ್ರಾಮವನ್ನಾಗಿ ಹೊಸಂಗಡಿಯನ್ನು ರೂಪಿಸುವುದು, ಸಂಪೂರ್ಣ ಪ್ಲಾಸ್ಟಿಕ್ ನಿರ್ಮೂಲನೆಗೆ ಮುಂದಡಿಯಿಡುವುದು ಇವೇ ಮೊದಲಾದ ಯೋಜನೆಗಳ ಸಂಪೂರ್ಣ ಅನುಷ್ಠಾನಕ್ಕೆ ಆಳ್ವಾಸ್ ಸಂಸ್ಥೆ ಸಹಕಾರ ನೀಡಲಿದೆ ಎಂದು ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಘೋಷಿಸಿದರು.
ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಆವರಣದಲ್ಲಿ ಸಮುದಾಯ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೊಸಂಗಡಿ ಗ್ರಾಮದ ಮೂರನೇ ವಾರ್ಡ್, ಆಳ್ವಾಸ್ ಸಮಾಜಕಾರ್ಯ ಕಾಲೇಜು ಮೂಡಬಿದಿರೆ ಇಲ್ಲಿನ ಬಿ.ಎಸ್.ಡಬ್ಲ್ಯು ವೇದಿಕೆ , ಹೊಸಂಗಡಿ ಫ್ರೆಂಡ್ಸ್ ಕ್ಲಬ್ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊಸಂಗಡಿ - ಬಡಕೋಡಿ., ಸ್ವಚ್ಛತಾ ಸಮಿತಿ 3ನೇ ವಾರ್ಡ್ ಇವುಗಳ ಸಂಯುಕ್ತಾಶ್ರಯದಲ್ಲಿ ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಆವರಣದಲ್ಲಿ ಸಮುದಾಯ ಶಿಬಿರ ಏರ್ಪಡಿಸಲಾಗಿತ್ತು.
ಹೊಸಂಗಡಿ ಗ್ರಾಮ ವ್ಯಾಪ್ತಿಯ ಯೋಗ್ಯ, ಅರ್ಹ ಹಿಂದುಳಿದ ಜನತೆಗೆ ಶಿಕ್ಷಣದಲ್ಲಿ ಸಹಕಾರ ನೀಡುವ ಬಗ್ಗೆ ಆಳ್ವಾಸ್ ಸಂಸ್ಥೆ ಪೂರಕ ಯೋಜನೆ ರೂಪಿಸಲಿದೆ ಎಂದು ಡಾ.ಆಳ್ವ ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಪ್ಲಾಸ್ಟಿಕ್ ಸಂಗ್ರಹಿಸಿದ ದ.ಕ.ಜಿ.ಪ.ಹಿ.ಪ್ರಾ.ಶಾಲೆ ಬಡಕೋಡಿ ಇದರ ನಾಲ್ಕನೇ ತರಗತಿ ವಿದ್ಯಾರ್ಥಿ ದೀಪಕ್, ದ.ಕ.ಜಿ.ಪ.ಹಿ.ಪ್ರಾ.ಶಾಲೆ ಪಡ್ಡಂದಡ್ಕ ಇದರ 7ನೇ ತರಗತಿ ವಿದ್ಯಾರ್ಥಿ ಮನ್ಮಥ, ದ.ಕ.ಜಿ.ಪ.ಹಿ.ಪ್ರಾ.ಶಾಲೆ ಪೆರಿಂಜೆ ಇದರ 7ನೇ ತರಗತಿ ವಿದ್ಯಾರ್ಥಿ ಸಿರಾಜ್ ಮನ್ಸೂರ್ ಇವರಿಗೆ ಶಾಲಾ ನೈರ್ಮಲ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಾದರಿ ಮನೆ ಸುಸ್ಥಿರ ಸ್ವಾವಲಂಬೀ ಸಮುದಾಯ ಯೋಜನೆಯ ರೂವಾರಿ , ಸಮಾಜ ಸೇವಕ ಹರಿಪ್ರಸಾದ್ ಅವರನ್ನು ಈ ಸಂದರ್ಭದಲ್ಲಿ ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಸದಸ್ಯರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಮಾದರಿ ಮನೆ ಸುಸ್ಥಿರ ಸ್ವಾವಲಂಬೀ ಸಮುದಾಯ ಯೋಜನೆಯ ಅರ್ಹ ಕುಟುಂಬಗಳಿಗೆ ಡಾ.ಎಲ್.ಎಚ್.ಮಂಜುನಾಥ್ ಮಾನ್ಯತಾ ಪತ್ರ ವಿತರಿಸಿದರು.
ಜಿ.ಪಂ.ಮಂಗಳೂರು ಇದರ ನೆರವು ಘಟಕದ ಮೇಲ್ವಿಚಾರಕಿ ಮಂಜುಳಾ ಜಿ, ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಧರಣೇಂದ್ರ ಕುಮಾರ್,ಸುದ್ದಿ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಡಾ.ಯು.ಪಿ.ಶಿವಾನಂದ, ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀ ರಮೇಶ್ , ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ , ತಾ.ಪಂ ಸದಸ್ಯರು, ಗ್ರಾ.ಪಂ.ಸರ್ವ ಸದಸ್ಯರು ಉಪಸ್ಥಿತರಿದ್ದರು. ಆಳ್ವಾಸ್ ಕಾಲೇಜು ಮೂಡಬಿದಿರೆ ಇದರ ಪ್ರಾಂಶುಪಾಲ ಪ್ರೊ.ಕುರಿಯನ್ ಸಮಾರೋಪ ಭಾಷಣ ಮಾಡಿದರು.
ಆಳ್ವಾಸ್ ರೀಚ್ 2011 ಸಮಾರೋಪ: ಇದೇ ಸಂದರ್ಭದಲ್ಲಿ ಮಂಗಳೂರು ವಿ.ವಿ.ಆಶ್ರಯದ ಬಿ.ಎಸ್.ಡಬ್ಲ್ಯು ಕಾಲೇಜುಗಳ ಸಮ್ಮಿಲನ ಕಾರ್ಯಕ್ರಮ ಆಳ್ವಾಸ್ ರೀಚ್ 2011 ಇದರ ಸಮಾರೋಪ ಸಮಾರಂಭವೂ ನಡೆಯಿತು.
ಆಳ್ವಾಸ್ ರೀಚ್ 2011ರ ಸಮಗ್ರ ಪ್ರಶಸ್ತಿಯನ್ನು ಕಾರ್ಕಳ ಭುವನೇಂದ್ರ ಕಾಲೇಜಿನ ಬಿ.ಎಸ್.ಡಬ್ಲ್ಯು ವಿಭಾಗ ತನ್ನದಾಗಿಸಿಕೊಂಡಿತು.
ಫಲಿತಾಂಶ ವಿವರ: ಸಮೂಹ ಗೀತೆ: ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜು (ಪ್ರಥಮ), ಸಂತ ಅಲೋಶಿಯಸ್ ಕಾಲೇಜು (ದ್ವಿತೀಯ), ಟಿ -ಶರ್ಟ್ ಪೇಂಟಿಂಗ್ : ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ (ಪ್ರಥಮ), ಎಸ್.ಆರ್.ಎಸ್. ಕಾಲೇಜು ಬಾರ್ಕೂರು (ದ್ವಿತೀಯ), ಮೂಕಾಭಿನಯ: ಕಾರ್ಕಳ ಭುವನೇಂದ್ರ ಕಾಲೇಜು (ಪ್ರಥಮ), ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ (ದ್ವಿತೀಯ), ಕೊಲಾಜ್ : ಭುವನೇಂದ್ರ ಕಾಲೇಜು ಕಾರ್ಕಳ (ಪ್ರಥಮ), ಭಿತ್ತಿ ಪತ್ರ ರಚನೆ: ವಿಟ್ಲ ಪ್ರಥಮ ದರ್ಜೆ ಕಾಲೇಜು (ಪ್ರಥಮ), ಭುವನೇಂದ್ರ ಕಾಲೇಜು (ದ್ವಿತೀಯ), ಬೀದಿನಾಟಕ : ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ (ಪ್ರಥಮ), ಭುವನೇಂದ್ರ ಕಾಲೇಜು ಕಾರ್ಕಳ (ದ್ವಿತೀಯ).
ವಿಶೇಷ ವರದಿ
ಮೂಡಬಿದಿರೆ: ಸ್ವಿಝರ್ಲ್ಯಾಂಡ್ ಬೆಡಗಿ ಭಾರತೀಯ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯನ್ನು ಯಶಸ್ವಿಯಾಗಿ ಪೂರೈಸಿದ್ದಾಳೆ. ಹೌದು. ರಾಜೀವಗಾಂಧಿ ಆರೋಗ್ಯ ವಿ.ವಿ.ಆಶ್ರಯದಲ್ಲಿರುವ ಮೂಡಬಿದಿರೆ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಸ್ವಿಝರ್ ಲ್ಯಾಂಡ್ನ ಕ್ಯಾರೋಲ್ ಝಿನ್ಸೆಲ್ ಎಂಬಾಕೆ ನಾಲ್ಕೂವರೆ ವರುಷಗಳ ಅವಧಿಯ ಆಯುರ್ವೇದ ವೈದ್ಯಕೀಯ ಶಿಕ್ಷಣ (ಬಿ.ಎ.ಎಂ.ಎಸ್.)ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣವಾಗುವ ಮೂಲಕ ಹೊಸತೊಂದು ದಾಖಲೆ ಸೃಷ್ಟಿಸಿದ್ದಾಳೆ.
ರಾಜೀವಗಾಂಧಿ ವಿ.ವಿಯಲ್ಲಿ ಮೊತ್ತ ಮೊದಲ ಬಾರಿ ಸ್ವಿಝರ್ ಲ್ಯಾಂಡ್ನ ಯುವತಿಯೋರ್ವಳು ಶಿಕ್ಷಣ ಪಡೆದ ಹೆಗ್ಗಳಿಕೆ ಇದಾಗಿದೆ. ಈ ಹೆಗ್ಗಳಿಕೆಗೆ ಮೂಡಬಿದಿರೆ ಆಳ್ವಾಸ್ ಕಾಲೇಜು ಪಾತ್ರವಾಗಿದೆ.
ಸೆ.28 , 2006ರಲ್ಲಿ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿಗೆ ಬಿ.ಎ.ಎಂ.ಎಸ್ ಪದವಿಗಾಗಿ ಕ್ಯಾರೋಲ್ ಸೇರ್ಪಡೆಗೊಂಡಿದ್ದಳು. ಇದೀಗ ನಾಲ್ಕೂವರೆ ವರುಷಗಳ ಬಿ.ಎ.ಎಂ.ಎಸ್ ಪದವಿಯನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿದ್ದು ಈಕೆಯ ಹೆಗ್ಗಳಿಕೆ. ಶಿಕ್ಷಣದ ಮೇಲಿನ ಈಕೆಯ ಮಮತೆ ಇದನ್ನು ತೋರುಸುತ್ತಿದೆ.
ವಿರಾಸತ್ ಪ್ರೇರಣೆ
ಕ್ಯಾರೋಲ್ ಆಳ್ವಾಸ್ ಶಿಕ್ಷಣ ಸಂಸ್ಥೆಯನ್ನು ಆಯ್ಕೆಮಾಡಲು ಪ್ರಮುಖ ಕಾರಣ ಆಕೆಯ ತಾಯಿ ಹಾಗೂ ಅವರ ಸಂಬಂಧಿ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪ್ರಾಯೋಜಿಸುತ್ತಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ನ ಸೊಬಗನ್ನು ಕಣ್ಣುತುಂಬಿಸಿಕೊಂಡ ಕ್ಯಾರೋಲ್ನ ಸಂಬಂಧಿ, ವೈದ್ಯರೋರ್ವರು ಈ ಶಿಕ್ಷಣ ಸಂಸ್ಥೆಯ ಬಗ್ಗೆ ಕ್ಯಾರೋಲ್ ಅವರ ತಾಯಿ ಅವರಲ್ಲಿ ವಿಷಯ ಪ್ರಸ್ತಾವಿಸಿದರು. ಈ ಮೊದಲೇ ಆಯುವರ್ೇದದ ಬಗೆಗಿನ ಆಸಕ್ತಿ ಕ್ಯಾರೋಲ್ ನಲ್ಲಿರುವುದನ್ನು ಅರಿತ ತಾಯಿ ಆಕೆಯನ್ನು ಈ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗಕ್ಕಾಗಿ ಕಳುಹಿಸಿದರು.
ಆಳ್ವಾಸ್ ಸಮೂಹ ಸಂಸ್ಥೆಗಳ ಆಶ್ರಯದಲ್ಲಿರುವ ಶೋಭಾವನ, ಆಳ್ವಾಸ್ ಫಾರ್ಮಸಿ, ಅತ್ಯಂತ ಸಾಂಪ್ರದಾಯಿಕ ರೀತಿಯ ಔಷಧಿ ತಯಾರಿಕಾ ಘಟಕ, ಶಿಕ್ಷಣದ ಗುಣಮಟ್ಟ, ಶಿಸ್ತುಬದ್ಧ ನಡತೆಗಳು ಕ್ಯಾರೋಲ್ ಅವರ ಕುಟುಂಬಿಕರನ್ನು ಆಳ್ವಾಸ್ ಸಂಸ್ಥೆಯತ್ತ ಆಕರ್ಷಿಸುವಂತೆ ಮಾಡಿತು. ಅದರ ಫಲವೇ ಕ್ಯಾರೋಲ್ ನಾಲ್ಕೂವರೆ ವರುಷದ ಶಿಕ್ಷಣವನ್ನು ಒಂದು ತಪಸ್ಸು ಎಂಬಂತೆ ಪೂರೈಸಿದ್ದಾಳೆ.
" ಭಾರತ ದೇಶದ ಸಂಪ್ರದಾಯ, ದೇಶೀಯತೆ, ಭಾಷಾ ವೈವಿಧ್ಯತೆ, ಉಡುಗೆ ತೊಡುಗೆ, ಸಂಸ್ಕೃತಿಯ ಬಗೆಗೆ ನನಗೆ ಅಪಾರವಾದ ಅಭಿಮಾನವಿದೆ. ಇಲ್ಲಿನ ಶಿಕ್ಷಣದ ಗುಣಮಟ್ಟವೂ ಅತ್ಯಂತ ಉತ್ಕೃಷ್ಠವಾದುದು. ಈ ಕಾರಣಕ್ಕೆ ನಾನು ಭಾರತವನ್ನು ಶಿಕ್ಷಣಕ್ಕಾಗಿ ಆಯ್ಕೆಗೊಳಿಸಿದೆ. ಅದರಲ್ಲೂ ಮೂಡಬಿದಿರೆಯೆಂಬ ಒಂದು ಪುಟ್ಟ ಪ್ರದೇಶ ಅದ್ಭುತವಾದ ಗುಣಲಕ್ಷಣವನ್ನು ಹೊಂದಿದೆ. ಇಲ್ಲಿನ ಪ್ರತಿಯೊಂದು ಕ್ರಿಯೆಗಳು ಸಹ ವಿಶೇಷವಾದುದು. ಇಲ್ಲಿ ಶಿಕ್ಷಣ ಪಡೆಯುವ ಭಾಗ್ಯ ನನಗೆ ದೊರಕಿದ್ದು ನನ್ನ ಪುಣ್ಯ " ಈ ಅಂತರಾಳದ ಮಾತುಗಳನ್ನು ಕ್ಯಾರೋಲ್ ಹೇಳುತ್ತಿದ್ದಾರೆ.
ಆಯುರ್ವೇದದ ಇತಿಹಾಸ, ಸಂಸ್ಕೃತ ಭಾಷೆ ಇವೆಲ್ಲವುಗಳ ಅಧ್ಯಯನ ಆಕೆಗೆ ಯಾವುದೇ ತೊಡಕನ್ನುಂಟುಮಾಡಿಲ್ಲ. ಇತರ ವಿದ್ಯಾರ್ಥಿಗಳಂತೆಯೇ ಅತ್ಯಂತ ಲವಲವಿಕೆಯಿಂದಲೇ ಈ ಎಲ್ಲಾ ವಿಚಾರಗಳ ಸೂಕ್ಷ್ಮಾಧ್ಯಯನವನ್ನು ಅತ್ಯಂತ ಕಾಳಜಿಯಿಂದ , ಮುತುವರ್ಜಿಯಿಂದ ಕ್ಯಾರೋಲ್ ಪೂರೈಸಿದ್ದಾಳೆ.
ಈ ಭಾಗದ ಎಲ್ಲಾ ತೊಂದರೆಗಳ ಬಗ್ಗೆ ನನಗೇನೂ ಬೇಸರವಾಗಿಲ್ಲ. ನನಗೆ ಬೇಕೆಂದು ಇಲ್ಲಿನ ಹವಾಮಾನದ ಬದಲಾವಣೆಯೂ ಸಾಧ್ಯವಿಲ್ಲ. ಇವೆಲ್ಲವುಗಳನ್ನು ಒಪ್ಪಿ ನಾನು ಈ ದೇಶಕ್ಕೆ ಬಂದಿದ್ದೇನೆ. ಹೊಂದಿಕೊಂಡು ಹೋಗುವುದು ನನ್ನ ಕರ್ತವ್ಯ ಎಂಬ ಆಕೆಯ ನುಡಿಗಳು ಆಕೆಯ ಬದ್ಧತೆಗೆ ಒಂದು ನಿದರ್ಶನವಾಗಿತ್ತು.
ಕರ್ನಾಟಕದಲ್ಲೇ ಸ್ನಾತಕೋತ್ತರ ಪದವಿಯನ್ನು ಪಂಚಕರ್ಮ ಅಥವಾ ಕಾಯಚಿಕಿತ್ಸೆ ವಿಷಯದಲ್ಲಿ ಪಡೆಯಬೇಕೆಂಬುದು ಈ ಬೆಡಗಿಯ ಆಸೆಯಾಗಿದೆ.
ವಿಶೇಷ ವರದಿ: ಹರೀಶ್ ಕೆ.ಆದೂರು
ಈ ಕನಸು ಅವಾರ್ಡ್
ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರೀಯಸಿ ಎಂಬ ಮಾತಿನಂತೆ ಜನ್ಮ ಕೊಟ್ಟ ತಾಯಿ ಹಾಗೂ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು. ಮಗು ಹುಟ್ಟಿದ ಕೂಡಲೇ ಮೊದಲು ನೋಡುವುದು ತಾಯಿಯ ಮುಖವನ್ನು. ಆಕೆಯೇ ತನ್ನ ಮಗುವಿಗೆ ಮೊದಲ ಗುರು ಸ್ನೇಹಿತೆ ಎಲ್ಲವೂ ಅವಳೇ. ತನ್ನ ಮಕ್ಕಳಿಗೆ ನೀ ತೋರಿಸುವ ಪ್ರೀತಿ ಬೇರೆ ಯಾರಿಂದಲೂ ಅಸಾಧ್ಯ. ಲಾಲಿ ಹಾಡಿ ಮಕ್ಕಳನ್ನು ಮಲಗಿಸುವ ನಿನ್ನ ಈ ಮಾತೃ ಪ್ರೇಮವನ್ನು ಎಷ್ಟು ಹೊಗಳಿದರೂ ಸಾಲದು. ನೀನು ಬರೀ ಮಾತೆಯಲ್ಲ ದೇವತೆ. ಹೆಣ್ಣು ನೀನು.
ಮಮಕಾರವನ್ನು ಸಂಸ್ಕಾರವನ್ನು ನೀಡುವ ಮಹಾ ಮಾತೆ, ತನ್ನ ಅಂತಕರಣದಿಂದ ಧಾರೆ ಎರೆಯುವ ವಸುಂಧರೆ ನೀನು, ಆಕೆಯ ಕರುಣೆಯ ಕಾವೇರಿಯಲ್ಲಿ ಪ್ರತಿಯೊಬ್ಬ ಮನುಷ್ಯನು ಮೀಯಬೇಕು. ಆಗ ನಿಜವಾದ ಮನುಷ್ಯನಾಗುತ್ತಾನೆ ಎಂದು ಮುರುಘಾ ಶರಣರು ಹೇಳಿದ್ದಾರೆ. ತಾಯಿ ಎಲ್ಲಾ ಮಾಡುವುದು ಮಕ್ಕಳಿಗಾಗಿ. ಯನಗಿಲ್ಲದಿದ್ದರೂ ಪರವಾಗಿಲ್ಲ ನನ್ನ ಮಕ್ಕಳಿಗೆ ಬೇಕು ಎನ್ನುವ ನಿಸ್ವಾರ್ಥ ಆಕೆಯದು. ಅವಳಲ್ಲಿನ ಗುಣಗಳು ಮತ್ತಾರಿಗೂ ಬರಲು ಅಸಾಧ್ಯ. ನೀನು ಭೂಮಿಯಿದ್ದಂತೆ ಎಲ್ಲವೂ ನಿನ್ನ ಒಡಲಲ್ಲಿ ಇತ್ತು ಬೆಳಸುವೆ. ಮಮತೆ ಎಂಬ ಈ ಸಾಗರದಲ್ಲಿ ನಮ್ಮನ್ನು ಬೆಳೆಸಿದೆ, ಹೋಮ್ ವರ್ಕ್ ಮಾಡಿಸಿದೆ, ಪಾಠ ಹೇಳಿದೆ, ಊಟ ಮಾಡಿಸಿದೆ, ಲಾಲಿ ಹಾಡಿ ಮಲಗಿಸಿದೆ ಇದ್ದಾವುದೂ ಮಾಡದಿದ್ದಾಗ ಪ್ರೀತಿಯಿಂದ ಒಂದೇಟು ಹೊಡೆದೆ.
ಎಷ್ಟು ಬಣ್ಣಿಸಿದರೂ ಸಾಲದು ತಾಯಿ ಮಾತೃ ಪ್ರೇಮವನ್ನು. ದೇವರು ಎಲ್ಲಾ ಕಡೆ ಇರಲು ಆಗದ ಕಾರಣ ನಿನ್ನನ್ನು ಸೃಷ್ಠಿಸಿದ್ದಾನೆ. ಎಲ್ಲರೂ ನಿನ್ನನ್ನು ಪ್ರೀತಿಸುತ್ತಾರೆ. ನೀನೂ ಎಲ್ಲರನ್ನೂ ಪ್ರೀತಿಸುತ್ತೀಯ. ನಿನ್ನ ಮಾತೇ ವೇದ ವಾಕ್ಯ. ನೀನು ಹಾಕಿದ ಗೆರೆ ಲಕ್ಷ್ಮಣ ರೇಖೆಗೆ ಸಮಾನ. ನನ್ನೊಲುಮೆಯ ಓ ಅಮ್ಮ ಐ ಲವ್ ಯು, ಐ ಲವ್ ಯು..
ಅಮ್ಮ ನಿನಗೆ ನೆನಪಿದೆಯಾ ಅಂದೊಂದು ದಿನ ನಾನು ಚಿಕ್ಕವನಿರುವಾಗ ನೀನು ಮಿಕ್ಸಿಯಲ್ಲಿ ಚಟ್ನಿ ರುಬ್ಬುತ್ತಿದ್ದೆ. ಆಫ್ ಮಾಡಿ ನೀನು ಕೈಯಾಡಿಸುತಿರುವಾಗ ನಾನು ಮಿಕ್ಸಿ ಆನ್ ಮಾಡಿದೆ ಆಗನಿನ್ನ ಬೆರಳು ಕತ್ತರಿಸಿ ಹೋಗಿತ್ತು. ದಯವಿಟ್ಟು ನನ್ನ ಕ್ಷಮಿಸಿ ಬಿಡು ಅಮ್ಮ. ಎಲ್ಕೆಜಿ ಮಗುವಿಗೆ ಹೇಗೆ ಗೊತ್ತಾಗುತ್ತೆ ಅಲ್ವ?!
ಇಂದಿನ ಯುವಜನತೆಗೆ ಹೇಳುವುದು ಇಷ್ಟೇ. ಎಲ್ಲವನ್ನು ನಿಮಗೆ ಧಾರೆ ಎರೆದ ನಿಮ್ಮ ತಾಯಿಯನ್ನ ಮಾತ್ರ ಮರೆಯಬೇಡಿ. ಕೊನೆಗಾಲದಲ್ಲಿ ನೀವೇ ಅವಳಿಗೆ ಆಸರೆ. ಹೆತ್ತವರಿಗೆ ಹೆಗ್ಗಣವೂ ಮುದ್ದು ಅನ್ನೋ ಹಾಗೆ ನಿಮ್ಮನ್ನ ಬೆಳೆಸಿರುತ್ತಾರೆ. ಇಷ್ಟೆಲ್ಲಾ ಮಾಡುವ ಆಕೆಯನ್ನ ಪ್ರೀತಿಸಿ. ಆಕೆಗೆ ಆಸರೆಯಾಗಿ, ವೃದ್ದಾಶ್ರಮಕ್ಕೆ ನೂಕ ಬೇಡಿ. ಕೆಲ ತಾಯಂದಿರು ಸಮಾಜದಲ್ಲಿ ಅನೇಕ ಅಪವಾದಗಳು ಬಂದರೂ ಅದನ್ನು ಲೆಕ್ಕಿಸದೇ ನಿಮ್ಮನ್ನು ಬೆಳೆಸಿರುತ್ತಾರೆ. ಅದಕ್ಕಾದರೂ ಕೂಡ ಆಕೆಗೆ ಆಸರೆಯಾಗಿ.
ಮಡಿಲಲ್ಲಿ ಮಲಗಿಸಿದೆ
ಅಕ್ಕರೆಯಿಂದ ಮುದ್ದಿಸಿದೆ
ಪ್ರೀತಿಯಿಂದ ಲಾಲಿ ಹಾಡಿದೆ
ಓ ತಾಯಿಯೇ ನಿನಗೊಂದು ನಮನ.
-ದರ್ಶನ್ ಎಂ. ಕಮ್ಮಾರಗಟ್ಟೆ
ಪ್ರಥಮ ಬಿ.ಎ ಪತ್ರಿಕೋದ್ಯಮ
ಆಳ್ವಾಸ್ ಕಾಲೇಜ್
ಮೂಡುಬಿದಿರೆ.
ಸಾಹಿತ್ಯ
ಬಾಯಿಯಿಂದ, ಮೂಗಿನಿಂದ ಹೊಗೆ ಬಿಡುತ್ತಾ
ಸುತ್ತಮುತ್ತಲ ಪರಿಸರ ಸುಡುತ್ತಾ
ಹಾಯಾಗಿ ನಿಂತಿರುವೆಯಾ
ಸಿಗರೇಟು,ಗುಟುಕ,ಸಾರಾಯಿಗೆ ಬಲಿಯಾಗಿ
ತಾನೂ ಸಾಯುವುದಲ್ಲದೆ ಪರರಿಗೂ
ಸಾಯಿಸಲು ನಿಂತಿರುವೆಯಾ
ಕಿರು ವಯಸ್ಸಿನಲಿ, ಕೆಟ್ಟ ಚಟಗಳಲ್ಲಿ ಬಿದ್ದು
ಮನೆಯಿಂದ ಹಣ ಕದ್ದು
ಶೋಕಿ ಮಾಡಲು ಹೊರಟಿರುವೆಯಾ
ಮೂರು ಅಂಗುಲದ ಸಿಗರೇಟು
ತರುವುದು ಪ್ರಾಣಕ್ಕೆ ಆಪತ್ತು
ಮನಸ್ಸು ಮಾಡು
ಅದು ನಿನ್ನನ್ನು ಬಿಡುವ ಮುನ್ನ
ನೀ ಅದನ್ನು ಬಿಡು. - ಜಬೀವುಲ್ಲಾ ಖಾನ್
ರಾಜ್ಯ - ರಾಷ್ಟ್ರ
ಮೂಡಬಿದಿರೆ:ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2009 -10ನೇ ಸಾಲಿನಲ್ಲಿ ನಡೆಸಿದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದ ಎಂ.ಎ.ಎಂ.ಸಿ.ಜೆಯಲ್ಲಿ ಪತ್ರಕರ್ತ, ಈ ಕನಸು.ಕಾಂ ಸಂಪಾದಕ ಹರೀಶ್ ಕೆ.ಆದೂರು ಅವರಿಗೆ 6ನೇ ರ್ಯಾಂಕ್ ದೊರಕಿದೆ.
ಹರೀಶ್ ಆದೂರು ಅವರು ಪ್ರಸ್ತುತ ಮೂಡಬಿದಿರೆಯ ಪ್ರತಿಷ್ಠಿತ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಪ್ರವರ್ತಿತ ಆಳ್ವಾಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಈಗಾಗಲೇ ಸಮಾಜಶಾಸ್ತ್ರದಲ್ಲಿ ಎಂ.ಎ ಪದವಿ, ಕಂಪ್ಯೂಟರ್ ಸಾಯನ್ಸ್ನಲ್ಲಿ ಡಿಪ್ಲೋಮಾ ಪದವಿ, ಐಟಿಐ ನಲ್ಲಿ ಮ್ಯಕಾನಿಕ್ ರೆಫ್ರಿಜರೇಷನ್ ಅಂಡ್ ಏರ್ ಕಂಡೀಷನಿಂಗ್ ತರಬೇತಿ, ಸೋಲಾರ್ ಟೆಕ್ನೀಷಿಯನ್ ತರಬೇತಿ, ಹಾರ್ಡ್ವೇರ್ ಅಂಡ್ ನೆಟ್ ವರ್ಕಿಂಗ್ ಡಿಪ್ಲೋಮಾ ಹಾಗೂ ಇತರ ಸರ್ಟಿಫಿಕೇಟ್ ಕೋರ್ಸುಳನ್ನು ಯಶಸ್ವಿಯಾಗಿ ಪೂರೈಸಿರುತ್ತಾರೆ.
ರಾಜ್ಯಮಟ್ಟದ ವಿವಿಧ ಪತ್ರಿಕೆಗಳಲ್ಲಿ ಕೆಲಸಮಾಡಿದ ಅನುಭವ ಹೊಂದಿರುವ ಹರೀಶ್ ಅವರಿಗೆ 2010ರಲ್ಲಿ ಗ್ರಾಮೀಣ ಪತ್ರಿಕೋದ್ಯಮದ ಸಾಧನೆಗಾಗಿ ಪ.ಗೋ.ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇದಲ್ಲದೆ ಮೂಡಬಿದಿರೆ ಕಾರ್ಯನಿರತ ಪತ್ರಕರ್ತರ ಸಂಘದ ಸಾಧಕ ಪ್ರಶಸ್ತಿ, ಗಡಿನಾಡ ಪ್ರಶಸ್ತಿಗಳು ಲಭಿಸಿವೆ.
ಪ್ರಾದೇಶಿಕ ಸುದ್ದಿ
ಬೆಳ್ತಂಗಡಿ ತಾಲೂಕಿನ ನೇರಳೆಗುಡ್ಡೆ ಕೊಡಮಣಿತ್ತಾಯ ದೈವ ಮತ್ತು ಬೈದರ್ಕಳ ದೈವದ ಸ್ಥಾನದಲ್ಲಿ ಗುರುವಾರ ರಾತ್ರಿ ಬೈದರ್ಕಳ ಮಾಣಿ ಬಾಲೆ ಉತ್ಸವ ನಡೆಯಿತು.
ಈ ಕನಸು ಅವಾರ್ಡ್
ಪರಶುರಾಮ ಸೃಷ್ಠಿಯ ನಾಡು ತುಳುವ ನಾಡು. ಈ ತುಳುವನಾಡು ಉತ್ತರಕ್ಕೆ ಬಾರಕೂರಿನಿಂದ ದಕ್ಷಿಣಕ್ಕೆ ಮಂಜೇಶ್ವರದವರೆಗೆ ಹಬ್ಬಿಕೊಂಡಿದೆ. ಇಲ್ಲಿ ಅನೇಕ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಆದರೆ ಆಡುಭಾಷೆ ಮಾತ್ರ ತುಳು. ತುಳುವ ನಾಡಿನ ವಿಶೇಷ ಆಕರ್ಷಣೆ ಇಲ್ಲಿನ ವಿಸ್ತಾರವಾದ ಕರಾವಳಿ ಪ್ರದೇಶ. ಈ ಕರಾವಳಿ ಪ್ರದೇಶದಲ್ಲಿ ವಾಸಿಸುವ ಜನರೇ ಮೊಗವೀರ ಜನಾಂಗದವರು. ಈ ಮೊಗವೀರರ ಕುಲಕಸುಬು ಮೀನುಗಾರಿಕೆ. ಮುಂಜಾನೆಯ ಸೂರ್ಯೋದಯಕ್ಕೆ ಸರಿಯಾಗಿ ಮೊಗವೀರರು ಮೀನು ಹಿಡಿಯುವುದಕ್ಕಾಗಿ ದೋಣಿಗಳನ್ನು ಬಳಸಿ ಸಮುದ್ರದ ಕಡೆಗೆ ಹೋಗುತ್ತಾರೆ. ಸಮುದ್ರದಲ್ಲಿ ಬಲೆ ಬೀಸಿ ಮೀನುಗಳನ್ನು ಹಿಡಿದು ಹಿಂದಿರುಗುವಾಗ ಸೂರ್ಯ ನೆತ್ತಿಯ ಮೇಲೆ ಬಂದು ನಿಂತಿರುತ್ತಾನೆ. ಹಿಡಿದು ತಂದ ಮೀನುಗಳನ್ನು ಕಡಲ ತಡಿಯಲ್ಲಿಯೇ ವ್ಯಾಪಾರ ಮಾಡುತ್ತಾರೆ. ಇನ್ನುಳಿದ ಮೀನುಗಳನ್ನು ಮೊಗವೀರ ಹೆಂಗಸರು ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡುತ್ತಾರೆ. ಅಲ್ಲೂ ಮಾರಾಟವಾಗದೇ ಉಳಿದ ಮೀನುಗಳನ್ನು ಉಪ್ಪು ಹಾಕಿ ಒಣಗಿಸುತ್ತಾರೆ.
ಮೊಗವೀರರಿಗೆ ಮೀನುಗಾರಿಕೆಗೆ ದೋಣಿಯೇ ಆಧಾರ. ಪ್ರತಿಯೊಂದು ಮನೆಗೂ ಒಂದೊಂದು ದೋಣಿಯಿದ್ದರೂ ಮೊಗವೀರರು ಸಮೂಹವಾಗಿ ಮೀನು ಹಿಡಿಯುವುದನ್ನೇ ಹೆಚ್ಚಾಗಿ ಇಷ್ಟಪಡುತ್ತಾರೆ. ಫ್ರೆಂಚರು ಭಾರತಕ್ಕೆ ಆಗಮಿಸಿದ ಕಾಲದಲ್ಲಿ ತಮ್ಮ ವಸಾಹತುಗಳನ್ನು ಹೆಚ್ಚಾಗಿ ಕರಾವಳಿ ಪ್ರದೇಶಗಳಲ್ಲಿಯೇ ಸ್ಥಾಪಿಸಿದರು. ಕರಾವಳಿ ಪ್ರದೇಶದಲ್ಲಿದ್ದ ಮೀನುಗಾರರಿಗೆ ಫ್ರೆಂಚರು ಗುಂಪುಗುಂಪಾಗಿ ಮೀನುಗಾರಿಕೆ ನಡೆಸುವ ಸಮೂಹ ಮೀನುಗಾರಿಕೆಯನ್ನು ಪರಿಚಯಿಸಿದರು. ಈ ಸಮೂಹ ಮೀನುಗಾರಿಕೆಯನ್ನು ಮೊಗವೀರ ಜನಾಂಗದವರು ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಸಿಕೊಂಡು ಬಂದಿದ್ದಾರೆ. ಮೊಗವೀರರು ಕೈರಂಪಣಿಯ ಮೂಲಕವೂ ಮೀನುಗಾರಿಕೆ ಮಾಡುವುದಿದೆ. ಕೈರಂಪಣಿ ಎಂದರೆ ಒಂದು ರೀತಿಯ ಸಾಮೂಹಿಕ ಮೀನುಗಾರಿಕೆಯಾಗಿದೆ. 10ರಿಂದ 20 ಮೊಗವೀರ ಜನರು ಒಂದು ಗುಂಪನ್ನು ರಚಿಸಿ ಸಮುದ್ರದಲ್ಲಿ ಸುಮಾರು 2 ಕಿ.ಮೀ. ದೂರ ದೋಣಿಗಳಲ್ಲಿ ಚಲಿಸಿ, ಬಲೆ ಬೀಸಿ ಮೀನುಗಳನ್ನು ಹಿಡಿಯುತ್ತಾರೆ. ಹಿಂದಿನ ಕಾಲದಲ್ಲಿ ಮರದ ದೋಣಿಗಳನ್ನು ಮಾತ್ರ ಬಳಸಿ ಕೈರಂಪಣಿಯಿಂದ ಮೀನುಗಾರಿಕೆ ನಡೆಸುತ್ತಿದ್ದರು. ಆದರೆ ಈಗ ಯಂತ್ರಗಳ ದೋಣಿಗಳನ್ನೂ ಬಳಸುತ್ತಿದ್ದಾರೆ. ಈ ಕೈರಂಪಣಿಯ ಮುಖ್ಯಸ್ಥನನ್ನು ತಂಡೇಲ್ ಎಂದು ಕರೆಯುತ್ತಾರೆ.
ಮೀನುಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದ್ದರೂ ಮೊಗವೀರರಿಗೆ ಸರಿಯಾದ ಆದಾಯ ದೊರಕುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಮಧ್ಯವರ್ತಿಗಳು . ಈ ಮಧ್ಯವರ್ತಿಗಳು ಮೊಗವೀರರಿಂದ ಕಡಿಮೆ ಬೆಲೆಗೆ ಮೀನುಗಳನ್ನು ಪಡೆದುಕೊಂಡು ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆಗೆ ಮಾರಾಟ ಮಾಡಿ ಲಾಭ ಗಳಿಸುತ್ತಾರೆ. ಇದರಿಂದಾಗಿ ಅದೆಷ್ಟೋ ಮೊಗವೀರ ಕುಟುಂಬಗಳು ಬಡತನದ ಬೇಗೆಯಲ್ಲಿಯೇ ಬೇಯುತ್ತಿವೆ. ಮನೆಯಲ್ಲಿ ಅವಿಭಕ್ತ ಕುಟುಂಬಗಳನ್ನಿಟ್ಟುಕೊಂಡು ಕಷ್ಟಕರ ಬದುಕು ಸಾಗಿಸುತ್ತಿದ್ದಾರೆ. ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡುವುದೂ ಇವರಿಂದ ಅಸಾಧ್ಯವಾಗಿದೆ. ಈ ಕಾರಣಕ್ಕಾಗಿಯೇ ಇರಬೇಕು ಹೆಚ್ಚಿನ ಮೊಗವೀರರು ತಮ್ಮ ಕೊನೆಯ ಮಗುವಿಗೆ ಮಾತ್ರ ವಿದ್ಯಾಭ್ಯಾಸವನ್ನು ನೀಡುತ್ತಿದ್ದಾರೆ.
ಆಚಾರ-ವಿಚಾರ
ಮೊಗವೀರರ ಆಚರಣೆ ಸಾಂಪ್ರದಾಯಗಳು ವಿಶೇಷವಾದವುಗಳು. ಊರಿನ ಎಲ್ಲಾ ಮನೆಗಳ ಸಭೆ, ಸಮಾರಂಭಗಳನ್ನು ನಿರ್ವಹಿಸುವವನು ಗುರಿಕಾರ. ಗುರಿಕಾರನನ್ನು ಮೊಗವೀರರು ತಂಡೇಲ್ ಎಂಬುವುದಾಗಿ ಕರೆಯುತ್ತಾರೆ. ತಂಡೇಲ್ ಕೈರಂಪಣಿಯ ಮುಖ್ಯಸ್ಥನಾಗಿರುತ್ತಾನೆ. ಆತ ಊರಿನ ಮುಖ್ಯಸ್ಥನೂ ಹೌದು. ಮೊಗವೀರರ ವಿವಾಹ ಆಚರಣೆ ಮನೆಯವರ ಮೇಲೆ ಸೀಮಿತವಾಗಿರುತ್ತದೆ. ಮನೆಯವರ ಒಪ್ಪಿಗೆ ಪಡೆದ ಮೇಲಷ್ಟೇ ವಿವಾಹ ಕಾರ್ಯ ಮುಂದುವರೆಯುತ್ತದೆ. ವಯುಕ್ತಿಕ ನಿರ್ಧಾರಗಳನ್ನು ತಳೆಯುವಲ್ಲಿ ಗಂಡು ಹೆಣ್ಣಿಗೆ ಅಷ್ಟೇನೂ ಸ್ವಾತಂತ್ರ್ಯ ಇರುವುದಿಲ್ಲ. ಹಿಂದಿನ ಕಾಲದಲ್ಲಿ ಮೊಗವೀರರಲ್ಲಿ ಬಾಲ್ಯ ವಿವಾಹ, ವರದಕ್ಷಿಣೆಗಳಂತಹ ಆಚರಣೆಗಳು ಕಂಡುಬರುತ್ತಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಹೆಣ್ಣು ಮಕ್ಕಳು ಮೈನೆರೆದಾಗ ಆ ವಿಷಯವನ್ನು ಊರಿಗೆ ತಿಳಿಸಿ ಕಲಶ ಮುಹೂರ್ತ ಮಾಡಿಸಿ ಅವಳ ಹೆಸರಿನಲ್ಲಿ ದೇವರಿಗೆ ಪೂಜೆ ಮಾಡುವ ವಿಶೇಷ ಆಚರಣೆ ಇಂದಿಗೂ ಮೊಗವೀರರಲ್ಲಿದೆ.
ಮೊಗವೀರರ ವಿಶೇಷ ಹಬ್ಬ ದಿಂಡು ಹಬ್ಬ. ಈ ಹಬ್ಬವನ್ನು ದೀಪಾವಳಿಯ ನಾಲ್ಕು ದಿವಸದ ನಂತರ ಮೊಗವೀರರು ಆಚರಿಸುತ್ತಾರೆ. ದೀಪಾವಳಿ ಹಬ್ಬದ ದಿನದಂದು ಮಾರುಕಟ್ಟೆಯಲ್ಲಿ ಮೀನುಗಳಿಗೆ ವಿಶೇಷ ಬೇಡಿಕೆ ಇರುತ್ತದೆ. ಆ ದಿನದಂದು ಹೆಂಗಸರು ಮೀನುಗಳನ್ನು ಮಾರಾಟ ಮಾಡಿ ಅದಕ್ಕೆ ಆದಾಯವಾಗಿ ದವಸ ಧಾನ್ಯಗಳನ್ನು ಪಡೆದುಕೊಂಡು ನಾಲ್ಕು ದಿನದ ನಂತರ ದಿಂಡು ಹಬ್ಬವನ್ನು ಆಚರಿಸುವುದು ರೂಢಿಯಾಗಿದೆ. ತುಳುವನಾಡು ಭೂತಾರಾಧನೆಗೆ ಹೆಸರುವಾಸಿ. ಈ ಭೂತಾರಾಧನೆಗೆ ಮೊಗವೀರರೂ ಹೊರತಾಗಿಲ್ಲ. ಮೊಗವೀರರು ತಮ್ಮ ಕುಲದೈವವಾಗಿ ಪಂಜುರ್ಲಿ ದೈವವನ್ನು ಆರಾಧಿಸುತ್ತಾರೆ. ಬಬ್ಬರ್ಯ, ಭಗವತಿಗಳೆಂಬ ದೈವಗಳನ್ನೂ ಮೊಗವೀರ ಜನಾಂಗದವರು ಆರಾಧಿಸಿಕೊಂಡು ಬಂದಿದ್ದಾರೆ. ಊರಿನಲ್ಲಿ ಈ ದೈವಗಳಿಗೆ ನೇಮೋತ್ಸವ ಜರಗುತ್ತದೆ.
ಆಧುನಿಕ ಸ್ಥಿತಿಗತಿ...
ಇಂದು ಮೊಗವೀರರ ಜೀವನದಲ್ಲಿ ಮಂದಹಾಸ ಮೂಡಿದೆ. ಇವರ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಮೀನುಗಳಿಗೆ ಜಗತ್ತಿನಾದ್ಯಂತ ಬೇಡಿಕೆ ಹೆಚ್ಚಾದುದರಿಂದ ಮೊಗವೀರರ ಆದಾಯವೂ ಜಾಸ್ತಿಯಾಗಿದೆ. ಮೊಗವೀರ ಜನಾಂಗಕ್ಕಾಗಿಯೇ ಸರಕಾರ ವಿಶೇಷ ಸಹಕಾರವನ್ನು ನೀಡುತ್ತಿದೆ. ಬಡ ವರ್ಗದ ಮೊಗವೀರರಿಗೆ ವಸತಿಗಳನ್ನು ಕಲ್ಪಿಸಲು ಸರಕಾರ ಮತ್ಸ್ಯ ಯೋಜನೆಯ ಮೂಲಕ 40 ಸಾವಿರ ರೂಪಾಯಿಗಳ ಅನುದಾನವನ್ನು ನೀಡುತ್ತದೆ. ಮೊಗವೀರರು ಒಟ್ಟಾಗಿ ಸಹಕಾರಿ ಸಂಘಗಳನ್ನು ಸ್ಥಾಪಿಸಿದ್ದಾರೆ. ಈ ಸಹಕಾರಿ ಸಂಘದ ಸದಸ್ಯರಾದ ಮೊಗವೀರರಿಗೆ ಮಾತ್ರ ಈ ಮತ್ಸ್ಯ ಯೋಜನೆಯ ಅವಕಾಶ ದೊರಕುತ್ತದೆ. ಈ ಮತ್ಸ್ಯ ಯೋಜನೆಯ ಹಣವನ್ನು ಕಂತುಗಳ ರೂಪದಲ್ಲಿ ನೀಡಲಾಗುತ್ತದೆ. ಮೊಗವೀರರು ಮರದ ದೋಣಿಗಳ ಬದಲಾಗಿ ಈಗ ಹೆಚ್ಚಾಗಿ ಫೈಬರ್ ದೋಣಿಗಳನ್ನು ಬಳಸುತ್ತಿದ್ದಾರೆ. ಮೊಗವೀರರು ಮೀನುಗಳನ್ನು ನೇರವಾಗಿ ಬಂದರುಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಮಧ್ಯವರ್ತಿಗಳ ಕಾಟ ತಪ್ಪಿದೆ. ಉತ್ತಮ ದರ್ಜೆಯ ಮೀನುಗಳಾದ ಮಾಂಜಿ, ಬೊಂಡಾಸ್, ಸಿಗಡಿ ಮೀನುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ.
ಇತ್ತೀಚಿನ ದಿನಗಳಲ್ಲಿ ಮೊಗವೀರರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದ್ದಾರೆ. ಶಿಕ್ಷಣಕ್ಕಾಗಿ ಸರಕಾರ ಮೊಗವೀರರಿಗೆ ವಿಶೇಷ ನೆರವನ್ನು ನೀಡುತ್ತಿದೆ. ಮೊಗವೀರರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸುವಷ್ಟೂ ಪ್ರಗತಿ ಸಾಧಿಸಿದ್ದಾರೆ. ಇಂದು ಅನೇಕ ಮೊಗವೀರ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆದು ವೈದ್ಯಕೀಯ, ಇಂಜಿನೀಯರಿಂಗ್ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೊಗವೀರರ ಮುಖ್ಯ ಸಾಧನೆ ಎಂದರೆ ಸಂಘ ಸಂಸ್ಥೆಗಳ ನಿರ್ಮಾಣ. ಮೊಗವೀರ ಯುವಕರು ಒಟ್ಟಾಗಿ ಹಲವು ಸಂಘಗಳನ್ನು ಸ್ಥಾಪಿಸಿದ್ದಾರೆ. ಮಹಿಳೆಯರ ಪಾತ್ರವೂ ಈ ಸಂಘಗಳಲ್ಲಿವೆ. ಈ ಸಂಘಗಳಿಂದಾಗಿ ಬಡ ಮೊಗವೀರರಿಗೆ ಹಣಕಾಸಿನ ನೆರವು ದೊರಕುತ್ತಿದೆ. ಮಹಿಳೆಯರ ಸ್ಥಾನಮಾನವೂ ಸುಧಾರಿಸಿದೆ. ಮೊಗವೀರ ಮಹಿಳೆಯರೂ ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಪಡೆಯುತ್ತಿದ್ದಾರೆ.
ಭರತ್ ರಾಜ್,
ತೃತೀಯ ಬಿ.ಎ, ಗೋವಿಂದ ದಾಸ ಕಾಲೇಜು, ಸುರತ್ಕಲ್.
ಪ್ರಾದೇಶಿಕ ಸುದ್ದಿ
ಇತಿಹಾಸ ಪ್ರಸಿದ್ದ ಮೂಲ್ಕಿ ಬಪ್ಪನಾಡು ದುರ್ಗಾ ಪರಮೇಶ್ವರಿ ದೇವಸ್ಥಾನದ ವಾರ್ಷಿಕ ರಥೋತ್ಸವದ ಪ್ರಯುಕ್ತ ಗುರುವಾರ ಹಗಲು ಬ್ರಹ್ಮರಥೋತ್ಸವ ಜರುಗಿತು. ಚಿತ್ರ: ಭಾಗ್ಯವಾನ್ ಮುಲ್ಕಿ.
ಪ್ರಾದೇಶಿಕ ಸುದ್ದಿ
ಹೊಸಂಗಡಿಯಲ್ಲಿ ನಡೆಯುತ್ತಿರುವ ಸಮುದಾಯ ಶಿಬಿರದಲ್ಲಿ ಆಳ್ವಾಸ್ ಸಮಾಜಕಾರ್ಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸಂಜೆ ನಡೆಯಿತು.
ಪ್ರಾದೇಶಿಕ ಸುದ್ದಿ
ನೀರು ನೈರ್ಮಲ್ಯ ವಿಶ್ವದ ಮುಂದಿರುವ ಬೃಹತ್ ಸವಾಲುಗಳು: ಪ್ರೊ.ಕುರಿಯನ್ವೇಣೂರು: ಶುದ್ಧ ಜಲ ಹಾಗೂ ಸಮಾಜದ ನೈರ್ಮಲ್ಯ ಇಂದು ವಿಶ್ವದ ಮುಂದಿರುವ ಬೃಹತ್ ಸಮಸ್ಯೆಯಾಗಿದೆ. ಪ್ರತಿಯೊಬ್ಬ ನಾಗರೀಕರೂ ಪರಿಸರದ ಸ್ವಚ್ಛತೆ ಹಾಗೂ ಶುದ್ಧ ಜಲದ ಜಾಗೃತಿಯಲ್ಲಿ ಕಾರ್ಯೋನ್ಮುಖರಾಗಬೇಕಾಗಿದೆ ಎಂದು ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಕುರಿಯನ್ ಕರೆನೀಡಿದರು.ಅವರು ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಆವರಣದಲ್ಲಿ ಗುರುವಾರ ಆರಂಭಗೊಂಡ ಸಮುದಾಯ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪರಿಸರವನ್ನು ಶುಚಿಯಾಗಿಡುವ ಚಿಂತನೆ ಪ್ರತಿಯೊಂದು ಮನೆ , ಮನಗಳಲ್ಲಿ ಮೂಡಬೇಕಾಗಿದೆ. ಆಗ ಮಾತ್ರ ಇಡೀ ಸಮಾಜದ ತನ್ಮೂಲಕ ದೇಶದ ಪ್ರಗತಿ ಸಾಧ್ಯ ಎಂದು ಅವರು ಅಭಿಪ್ರಾಯಿಸಿದರು.
ವಾರದ ಹಿಂದೆಯಷ್ಟೇ ರಾಜ್ಯ ಸರಕಾರದಿಂದ ನಿರ್ಮಲ ಗ್ರಾಮ ಪುರಸ್ಕಾರ ಪಡೆದಂತಹ ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾರ್ಚ್ 26ರ ತನಕ ಸಮುದಾಯ ಶಿಬಿರ ನಡೆಯಲಿದೆ. ಹೊಸಂಗಡಿ ಗ್ರಾಮದ ಮೂರನೇ ವಾರ್ಡ್, ಆಳ್ವಾಸ್ ಸಮಾಜಕಾರ್ಯ ಕಾಲೇಜು ಮೂಡಬಿದಿರೆ ಇಲ್ಲಿನ ಬಿ.ಎಸ್.ಡಬ್ಲ್ಯು ವೇದಿಕೆ , ಹೊಸಂಗಡಿ ಫ್ರೆಂಡ್ಸ್ ಕ್ಲಬ್ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊಸಂಗಡಿ - ಬಡಕೋಡಿ., ಸ್ವಚ್ಛತಾ ಸಮಿತಿ 3ನೇ ವಾರ್ಡ್ ಇವುಗಳ ಸಂಯುಕ್ತಾಶ್ರಯದಲ್ಲಿ ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಆವರಣದಲ್ಲಿ ಸಮುದಾಯ ಶಿಬಿರ ಏರ್ಪಡಿಸಲಾಗಿದೆ.
ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀ ರಮೇಶ್ ಧ್ವಜಾರೋಹಣ ಗೈಯುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದ ಧರ್ಮದರ್ಶಿ ಎ.ಜೀವಂಧರ್ ಕುಮಾರ್ ಶಿಬಿರ ಉದ್ಘಾಟಿಸಿದರು.
ಪೆರಾಡಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ವ್ಯವಸ್ಥಾಪಕ ಕೆ.ಜಯಕುಮಾರ್, ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಧರಣೇಂದ್ರ ಕುಮಾರ್, ಫ್ರೆಂಡ್ಸ್ ಕ್ಲಬ್ ಕಾರ್ಯದರ್ಶಿ ಶ್ರೀಪತಿ ಭಟ್ ಸಂಪಿಗೆ ಅತಿಥಿಗಳಾಗಿದ್ದರು. ವಿದ್ಯಾರ್ಧಿಗಳಿಂದ ಗ್ರಾಮದ ವಿವಿಧ ಮನೆಗಳಿಗೆ ಭೇಟಿನೀಡಿ ನೈರ್ಮಲ್ಯ ಜಾಗೃತಿ ಕಾರ್ಯಕ್ರಮ ನಡೆಯಿತು.
ರಾಜ್ಯ - ರಾಷ್ಟ್ರ
ಮಾರ್ಚ್ 24ರಂದು ಶಿಬಿರದ ಉದ್ಘಾಟನೆ
ವೇಣೂರು: ವಾರದ ಹಿಂದೆಯಷ್ಟೇ ರಾಜ್ಯ ಸರಕಾರದಿಂದ ನಿರ್ಮಲ ಗ್ರಾಮ ಪುರಸ್ಕಾರ ಪಡೆದಂತಹ ಹೊಸಂಗಡಿ ಗ್ರಾಮ ಪಂಚಾಯತ್ ನಲ್ಲೀಗ ನಿರಂತರ ಕಾರ್ಯಚಟುವಟಿಕೆ. ಹೊಸಂಗಡಿ ಗ್ರಾಮದ ಮೂರನೇ ವಾರ್ಡು, ಆಳ್ವಾಸ್ ಸಮಾಜಕಾರ್ಯ ಕಾಲೇಜು ಮೂಡಬಿದಿರೆ ಇಲ್ಲಿನ ಬಿ.ಎಸ್.ಡಬ್ಲ್ಯು ವೇದಿಕೆ , ಹೊಸಂಗಡಿ ಫ್ರೆಂಡ್ಸ್ ಕ್ಲಬ್ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊಸಂಗಡಿ - ಬಡಕೋಡಿ., ಸ್ವಚ್ಛತಾ ಸಮಿತಿ 3ನೇ ವಾರ್ಡು ಇವುಗಳ ಸಂಯುಕ್ತಾಶ್ರಯದಲ್ಲಿ ಮಾರ್ಚ್ 24ರಿಂದ 26ರ ತನಕ ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಆವರಣದಲ್ಲಿ ಸಮುದಾಯ ಶಿಬಿರ ನಡೆಯಲಿದೆ. ಮಾ.24ರಂದು ಬೆಳಗ್ಗೆ ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀ ರಮೇಶ್ ಧ್ವಜಾರೋಹಣ ಗೈಯಲಿದ್ದಾರೆ. ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದ ಧರ್ಮದರ್ಶಿ ಎ.ಜೀವಂಧರ್ ಕುಮಾರ್ ಶಿಬಿರದ ಉದ್ಘಾಟನೆ ನಡೆಸಲಿದ್ದಾರೆ.
ಆಳ್ವಾಸ್ ಕಾಲೇಜು ಪ್ರಾಂಶುಪಾಲ ಪ್ರೊ.ಕುರಿಯನ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸುದ್ದಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಯು.ಪಿ.ಶಿವಾನಂದ , ಪೆರಾಡಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ವ್ಯವಸ್ಥಾಪಕ ಕೆ.ಜಯಕುಮಾರ್, ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಧರಣೇಂದ್ರ ಕುಮಾರ್, ಫ್ರೆಂಡ್ಸ್ ಕ್ಲಬ್ ಕಾರ್ಯದರ್ಶಿ ಶ್ರೀಪತಿ ಭಟ್ ಸಂಪಿಗೆ ಭಾಗವಹಿಸುವರು. ಮಾ.25ರಂದು ಕೆ.ಚಂದ್ರಶೇಖರ್ ಭಟ್ ಧ್ವಜಾರೋಹಣ ಗೈಯಲಿದ್ದಾರೆ. ತದನಂತರ ಮಣ್ಣು ಪರೀಕ್ಷೆಯ ಮಹತ್ವ ಹಾಗೂ ಮಣ್ಣಿನ ಮಾದರಿ ಸಂಗ್ರಹ ನಡೆಯಲಿದೆ. ಅಪರಾಹ್ನ ವೇಣೂರು ಪ್ರಾಥಮಿಕ ಆರೋಗ್ಯಕೇಂದ್ರದ ಸಹಯೋಗದೊಂದಿಗೆ ಉಚಿತ ರಕ್ತಪರೀಕ್ಷೆ ನಡೆಯಲಿದೆ. ಸಂಜೆ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮ ನಡೆಯಲಿದೆ.
ಮಾ.26ರಂದು ಬೆಳಗ್ಗೆ ಮೂರನೇ ವಾರ್ಡ್ ಸ್ವಚ್ಛತಾ ಸಮಿತಿ ಅಧ್ಯಕ್ಷ ರಾಜೇಶ್ ಕೊಳ್ಕೆಬೈಲು ಧ್ವಜಾರೋಹಣ ಗೈಯಲಿದ್ದಾರೆ. "ಆಳ್ವಾಸ್ ರೀಚ್ - 2011"ರ ಉದ್ಘಾಟನೆ ಈ ಸಂದರ್ಭ ನಡೆಯಲಿದೆ. ನಾರಾವಿ ಕ್ಷೇತ್ರದ ಜಿಲ್ಲಾಪಂಚಾಯತ್ ಸದಸ್ಯೆ ಸಿ.ಕೆ.ಚಂದ್ರಕಲಾ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ.ಕುರಿಯನ್ ವಹಿಸುವರು. ಅತಿಥಿಗಳಾಗಿ ಪೆರಾಡಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಪೆರಿಂಜೆ ಶಾಖೆಯ ಶಾಖಾಧಿಕಾರಿ ಶೇಖ್ ಲತೀಫ್ ಭಾಗವಹಿಸುವರು.
ಸಾಯಂಕಾಲ 5.30ಕ್ಕೆ ಸಮಾರೋಪ ಸಮಾರಂಭ, ಮಾದರಿ ಮನೆ ಸುಸ್ಥಿರ ಸ್ವಾವಲಂಬೀ ಸಮುದಾಯ ಯೋಜನೆ ಕಾರ್ಯಕ್ರಮದ ಅರ್ಹ ಕುಟುಂಬಗಳಿಗೆ ಮಾನ್ಯತಾ ಪತ್ರ ಪ್ರದಾನ ಸಮಾರಂಭ ನಡೆಯಲಿದೆ.
ಈ ಕಾರ್ಯಕ್ರಮದ ಮಾಧ್ಯಮ ಸಹಭಾಗಿತ್ವವನ್ನು ಈ ಕನಸು.ಕಾಂ ವಹಿಸಿದೆ.
ವೈವಿಧ್ಯ ಉತ್ಕಟವೆಂದರೆ ಬಲವತ್ತರವಾಗಿ ಪೀಠದಲ್ಲಿ ಕುಳಿತಂತೆ ತೋರುವ ಭಂಗಿಯಾಗಿದೆ
ಅಭ್ಯಾಸಕ್ರಮ
ತಾಡಾಸನದಲ್ಲಿ ಇದ್ದು ಕೈಗಳನ್ನು ತಲೆಯ ಮೇಲೆ ನೇರವಾಗಿ ಎತ್ತಿ ಹಿಡಿದು ಅಂಗೈಗಳೆರಡನ್ನು ಜೋಡಿಸಬೇಕು. ಉಸಿರನ್ನು ಬಿಡುತ್ತಾ ಮಂಡಿಗಳನ್ನು ಬಾಗಿಸಿ ಅರ್ಧ ಕುಳಿತುಕೊಳಳುವ ಭಂಗಿಯಾಗಬೇಕು (ಚಿತ್ರದಲ್ಲಿರುವಂತೆ) ಸಾಮಾನ್ಯ ಳಿ ನಿಮಿಷ ಸಮ ಉಸಿರಾಟದೊಂದಿಗೆ ಈ ಸ್ಥಿತಿಯಲ್ಲಿರಬೇಕು (ಅನಂತರ 2 ನಿಮಿಷ ವಿಶ್ರಾಂತಿ).
ಉಪಯೋಗಗಳು
ಈ ಆಸನ ಅಭ್ಯಾಸದಿಂದ ಕಾಲುಗಳ ಸಾಮಾನ್ಯ ನ್ಯೂನತೆ ಸರಿಪಡಿಸಲು ಸಹಾಯವಾಗುತ್ತದೆ. ಕಾಲಿನ ಮಾಂಸಖಂಡಗಳು ಬಲಿಷ್ಠವಾಗುತ್ತವೆ. ಭುಜಗಳ ಬಿಗಿತ ನಿವಾರಣೆಯಾಗಿ, ಎದೆ, ಬೆನ್ನು, ಕಿಬ್ಬೊಟ್ಟೆಗೆ ಮತ್ತು ಸೊಂಟಕ್ಕೆ ಮೃದುವಾದ ವ್ಯಾಯಾಮ ದೊರಕುತ್ತದೆ. ವಾಕಿಂಗ್ನ ಉಪಯೋಗ ಈ ಆಸನದಲ್ಲಿ ದೊರಕುತ್ತದೆ.
-'ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ
ಅಂತರರಾಷ್ಟ್ರೀಯ ತೀರ್ಪುಗಾರರು.
ರಾಜ್ಯ - ರಾಷ್ಟ್ರ
ಕಾಸರಗೋಡು: ಉನ್ನತ ಅಧ್ಯಯನಕ್ಕೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದಕ್ಕೋಸ್ಕರ ಎಪ್ರಿಲ್ ತಿಂಗಳ 25 ರಿಂದ 28 ರ ತನಕ ವಿಜ್ಞಾನ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಒಂಭತ್ತರಿಂದ ಹನ್ನೆರಡನೆ ತರಗತಿಯ ವಿದ್ಯಾರ್ಥಿಗಳಿಗೆ ವಿಜ್ಞಾನಿಗಳೊಂದಿಗೆ ಮುಖಾಮುಖಿಗೆ ಇದೊಂದು ಉತ್ತಮ ಅವಕಾಶ. ವಿವಿಧ ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳು, ವಿಶ್ವವಿದ್ಯಾನಿಲಯಗಳ ಉಪನ್ಯಾಸಕರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು. ಇಂಗ್ಲಿಷ್ ಭಾಷೆಯಲ್ಲಿ ಮಾಹಿತಿ ಉಪನ್ಯಾಸಗಳನ್ನು ನೀಡಲಾಗುವುದು. ಕೃಷಿ ವಿಜ್ಞಾನ, ಬಯೋಟೆಕ್ನಾಲಜಿ, ಬಯೋಇನ್ಫಾರ್ಮೆಟಿಕ್ಸ್, ಆಹಾರ ವಿಜ್ಞಾನ, ಆರೋಗ್ಯ ವಿಜ್ಞಾನ, ಮೆರೈನ್ ಎಂಜಿನಿಯರಿಂಗ್, ನ್ಯಾನೋಟೆಕ್ನಾಲಜಿ, ಸಾಗರ ಅಧ್ಯಯನ, ಬಾಹ್ಯಾಕಾಶ ಅಧ್ಯಯನ, ಅನಾಹುತ ನಿರ್ವಹಣೆ, ರಿಮೋಟ್ ಸೆನ್ಸಿಂಗ್, ಮಾಹಿತಿ ತಂತ್ರಜ್ಞಾನ, ಮೈಕ್ರೋಬಯಾಲಜಿ, ಅಣು ವಿಜ್ಞಾನ, ಪ್ರಕಾಶ ಕಣಗಳ ತಂತ್ರಜ್ಞಾನ, ಸಂಶೋಧನಾ ಕೇಂದ್ರಕ್ಕೆ ಭೇಟಿ ಮುಂತಾದ ವಿಷಯಗಳು ಈ ಕಾರ್ಯಗಾರದಲ್ಲಿ ಅಡಕವಾಗಿವೆ.
ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿದೆ.ಸ್ವದೇಶಿ ವಿಜ್ಞಾನ ಪ್ರಸ್ಥಾನವು ಈ ಕಾರ್ಯಾಗಾರವನ್ನು ಆಯೋಜಿಸಿದ್ದು ಭಾರತದ ಭವಿಷ್ಯದಲ್ಲಿ ಉತ್ತಮ ವೈಜ್ಞಾನಿಕ ಸಾಮರ್ಥ್ಯ ಪಡೆಯುವುದು ಇದರ ಉದ್ದೇಶ. ನಿರ್ವಹಣಾ ವೆಚ್ಚಕ್ಕಾಗಿ ರೂ 500 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ನೋಂದಾವಣೆ ಹಾಗೂ ಇತರ ಹೆಚ್ಚಿನ ಮಾಹಿತಿಗಳಿಗೆ ಸೀಪೀಸೀಆರ್ ಐಯ ವಿಭಾಗ ಮುಖ್ಯಸ್ಥ ಡಾ. ಮುರಲೀಧರನ್ ಇವರನ್ನು ಸಂಪರ್ಕಿಸಬಹುದು. ಮೊಬೈಲ್ ನಂಬ್ರ 9446169526 ಅಥವಾ ಮಿಂಚಂಚೆ ssmkasaragod@gmail.com ಗಳಲ್ಲಿ ಸಂಪರ್ಕಿಸಬಹುದು. ಮೊದಲು ತಲಪುವ ಅಪೇಕ್ಷೆಗೆ ಆದ್ಯತೆ ನೀಡಲಾಗುವುದು.
ಸಾಹಿತ್ಯ
ಮನಸು ಹೇಳುವ ಮಾತನಾಲಿಸುತಲಿ
ಕತ್ತಲೆಯ ದಾರಿಯಲಿ ಬೆಳಕನರಸುತಲಿ
ಕನಸಿನಾ ಲೋಕದಲಿ ತೇಲಿ ತೇಲಿ
ಮತ್ತೆ ಮುಳುಗಿರುವೆನಾ ಅದು ಕನಸಿನಲಿ...
ಸೂರ್ಯನ ತೇಜಸ್ಸು ನಾನೇ ಎಂಬ ಭ್ರಮೆಯಲಿ
ದೀಪವೆಂಬ ಚಿಕ್ಕ ಬೆಂಕಿಯನ್ನು ನಿರ್ಲಕ್ಷಿಸಿ
ಇರುಳು ಕಂಡ ಬಾವಿಗೆ ಹಗಲು ಹಾರುವಂತೆ
ಮತ್ತೆ ಮತ್ತೆ ಮುಳುಗಿದೆ ಈ ಜೀವನದಲಿ
ಬೆಳಕನ್ನರಸುವುದು ನಿಜವಾದರೂ
ಕತ್ತಲೆಯ ವ್ಯಾಪ್ತಿ ತಿಳಿಯಲಿಲ್ಲ
ಈ ಜಾಗದಿಂದ ಕರೆದೊಯ್ಯುವರ್ಯಾರೂ
ಇಲ್ಲದೆಂಬ ಭವಿಷ್ಯವನ್ನು ಯೋಚಿಸಲೂ ಇಲ್ಲ
ಒಬ್ಬಂಟಿಯಾಗಿಯೇ ಮುನ್ನುಗ್ಗಿದೆ ಆದರೆ
ಸಣ್ಣ ಕಿಡಿಯು ಜ್ವಾಲೆಯಾಗಬಹುದೆಂಬ ಸತ್ಯ
ಹೊಳೆಯಲೇ ಇಲ್ಲ...
ಸೂರ್ಯನೇ ನಾನೆಂಬ ಅಂಧಾಭಿಮಾನದಲಿ
ಮತ್ತೆ ಮುನ್ನಡೆದೆ ಅದೇ ಹಾದಿಯಲಿ
ಆದರೂ ತಿಳಿಯಲಿಲ್ಲ ಇದು ನನಸಾಗದ ಕನಸು
ಉತ್ತರವಿಲ್ಲದ ಪ್ರಶ್ನೆಯಂತೆ ಸೋಲಿಲ್ಲದ ಸರದಾರನಂತೆ
ಮತ್ತೆ ಮತ್ತೆ ನಕ್ಷತ್ರಿಕನಂತೆ ಬೆಂಬಿಡದೆ
ಹಿಂಬಾಲಿಸುತ್ತಾ ಕಾಣದ ಜಾಗಕ್ಕೆ ಕರೆದೊಯ್ಯುತಿದೆ
ಈ ಮನಸು...
- ಸೌಮ್ಯ ಸಾಗರ.
ಪ್ರಾದೇಶಿಕ ಸುದ್ದಿ
ಮಂಗಳೂರು:ಸಮುದಾಯ ಮತ್ತು ಬಡವರ ಪರವಾಗಿರುವ ಸಹಕಾರಿ ತತ್ವಗಳನ್ನು ಪ್ರೋತ್ಸಾಹಿಸಲು ಹಾಗೂ ಯುವಜನಾಂಗವನ್ನು ಸಹಕಾರಿ ತತ್ವದತ್ತ ಆಕರ್ಷಿಸಲು ಮಂಗಳೂರು ವಿಶ್ವವಿದ್ಯಾಲಯದಲ್ಲಿ ದಕ್ಷಿಣ ಏಷ್ಯಾ ಪ್ರಾದೇಶಿಕ ಒಕ್ಕೂಟದ ಸಹಕಾರಿಗಳ ಮೂರು ದಿನಗಳ ಅಂತಾರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಭಾರತ ರಾಷ್ಟ್ರೀಯ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಪಾಲ್ ಸಿಂಗ್ ಅವರು ಹೇಳಿದರು.
ಇಂದು ಮಂಗಳೂರು ವಿಶ್ವವಿದ್ಯಾನಿಲಯದ ಎಂಬಿಎ ಸೆಮಿನಾರ್ ಹಾಲ್ ನಲ್ಲಿ ದಕ್ಷಿಣ ಏಷ್ಯಾ ಪ್ರಾದೇಶಿಕ ಒಕ್ಕೂಟದ ಸಹಕಾರಿಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಬಾಂಗ್ಲಾ, ಬೂತಾನ್, ಇಂಡೋನೇಷಿಯಾ, ಜಪಾನ್, ಮಲೇಷಿಯಾ, ಥ್ಯೆಲ್ಯಾಂಡ್ ಸೇರಿದಂತೆ ಸುಮಾರು 9 ದೇಶಗಳಿಂದ ಪ್ರತಿನಿಧಿಗಳು ಆಗಮಿಸಿದ್ದು, ಸಂವಾದ ಮತ್ತು ಸಹಕಾರಿ ಯೋಜನೆಗಳ ಬಗ್ಗೆ ಸವಿವರವಾಗಿ ಕಾರ್ಯಾಗಾರದಲ್ಲಿ ಚರ್ಚಿಸುವುದಾಗಿ ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ಸಹಕಾರಿ ಸಂಘಗಳ ಅಧ್ಯಕ್ಷರಾದ ಜಿ.ಟಿ. ದೇವೇಗೌಡ ಅವರು, ಸಹಕಾರಿ ನೀತಿಯನ್ನು ಮೊತ್ತ ಮೊದಲನೆಯದಾಗಿ ರೂಪಿಸಿದ ರಾಜ್ಯ ಕರ್ನಾಟಕ. ವ್ಯವಸಾಯ ಕ್ಷೇತ್ರ, ಹಾಲು ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರಿಗಳು ಯಶಸ್ವಿಯಾಗಿದ್ದಾರೆ. ಸಹಕಾರಿಗಳನ್ನು ಪ್ರಸಕ್ತ ಸಂದರ್ಭದಲ್ಲಿ ಸಕ್ರಿಯವಾಗಿಸಲು ಯುವ ಜನಾಂಗ ಮತ್ತು ಮಹಿಳೆಯರ ಪಾಲ್ಗೊಳ್ಳುವಿಕೆಯ ಅಗತ್ಯವನ್ನು ಪ್ರತಿಪಾದಿಸಿದರು.ಕ್ಯಾಂಪಸ್ ಕೋ ಆಪರೇಷನ್ ಮೂಮೆಂಟ್ ಇಂದಿನ ಅಗತ್ಯ ಎಂದ ಅವರು, ಪ್ರಸಕ್ತ ಸನ್ನಿವೇಶದಲ್ಲಿ ವಿಶ್ವವಿದ್ಯಾಲಯದಲ್ಲಿ ಕಾರ್ಯಾಗಾರ ಆಯೋಜಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ಮಲೇಷಿಯಾದ ಮಲಯ ವಿಶ್ವವಿದ್ಯಾಲಯದ ಪ್ರೊ. ಮೊಹಮ್ಮದ್ ಆಲಿ ಹಸನ್ ಅವರು ಕಾರ್ಯಾಗಾರದ ಉದ್ದೇಶದ ಬಗ್ಗೆ ವಿವರಿಸಿದರು. ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಕುಲಪತಿಗಳಾದ ಪ್ರೊ. ಟಿ ಸಿ ಶಿವಶಂಕರ ಮೂರ್ತಿ ಅವರು, 260 ವರ್ಷಗಳ ಸಹಕಾರಿ ತತ್ವದ ಇತಿಹಾಸ ಹಾಗೂ ಇಂತಹ ಉತ್ತಮ ಕಾರ್ಯಾಗಾರವನ್ನು ವಿಶ್ವ ವಿದ್ಯಾಲಯದಲ್ಲಿ ಆಯೋಜಿಸಿದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಕರಾವಳಿಯಲ್ಲೂ ಮೊಳಹಳ್ಳಿ ಶಿವರಾಮ್ ಅವರ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.
ಸಾಹಿತ್ಯ
ನೀ ನನ್ನ ಚಂದ್ರಿಕೆ, ನಾ ನಿನ್ನಿ ಚಂದಿರ
ಬಾ ಹೋಗೋಣ ಬಾನಿಂದಾಚೆಗೆ
ತಾರೆಗಳು ಚಲ್ಲುತ್ತಿವೆ ಬೆಳಕು ನಮ್ಮ ದಾರಿಗೆ
ಗ್ರಹಗಳಿಗೆ ಪ್ರೀತಿಯ ಪಾಠ ಕಲಿಸಿ
ಬಾನಿನ ಎಲ್ಲೆ ಮುರಿದು
ಮುಂದೆ ಸಾಗೋಣ ಬಾ
ದೇವಚರರ ಸ್ವಾಗತ ಸ್ವೀಕರಿಸಿ
ಪ್ರೀತಿಯ ಕಿರೀಟ ಹೊತ್ತು
ಒಲವಿನ ಸಿಂಹಾಸನ ಏರೋಣ ಬಾ
ಏಳನೇ ಆಕಾಶದಿಂದ
ಲೋಕಕ್ಕೆ ಪ್ರೀತಿಯ ಹೂಗಳನ್ನು ಚಿಮ್ಮಿ
ಭೂಮಿಗೆ ಸ್ವರ್ಗ ಮಾಡೋಣ ಬಾ- ಜಬೀವುಲ್ಲಾ ಖಾನ್
ಸಾಹಿತ್ಯ
ಪ್ರೇಮ
ಹೃದಯ ಪಲ್ಲವಿಯ
ಪ್ರೇಮಗಾನ
ಮನದ ಸವಿ
ಕಲ್ಪನೆಯ ಯಾನ
* * *
ಇನಿಯ
ಮನದ ತುಂಬಾ
ನೀನೇ ತುಂಬಿರುವೆಯಲ್ಲಾ...
ಗರಿಗೆದರುವ ಕಲ್ಪನೆಗಳಿಗೆ
ಮಿತಿಯೇ ಇಲ್ಲವಲ್ಲ..!
* * *
ತೋರಣ
ಮುಂಜಾವಿನ ಹೊಂಬಣ್ಣದ
ಹೊಂಗಿರಣ
ನೋಡಿದಾಗ ಅನ್ನಿಸಿತು
ಇದೇ
ಭುವಿಯ ಮುಂಬಾಗಿಲಿನ ತೋರಣ
-ಸೌಮ್ಯ , ಸಾಗರ.
ಈ ಕನಸು ಅವಾರ್ಡ್
ಅದೇನೋ ಗೊತ್ತಿಲ್ಲ ಈಗಿನ ಕಾಲದ ಹುಡುಗರಿಗೆ ಒಂದು ಕ್ರೇಜ್ ಹುಟ್ಕೊಂಡಿದೆ. ಅದೇ ಡೆಸ್ಕಿನ ಮೇಲೆ ಬರಿಯೋದು. ಹಿಂದಿನ ಕಾಲದಲ್ಲಿ ರಾಜ ಮಹರಾಜರು ತಮ್ಮ ಜೀವನ ಚರಿತ್ರೆಯನ್ನ ಶಾಸನದಲ್ಲಿ ಬರೆದು ಇಡ್ತಾ ಇದ್ರು. ಪಾಪ,! ಈಗಿನ ಕಾಲದ ಹುಡುಗರಿಗೆ ಶಾಸನ ಬರಿಯೋಕೆ ಕಲ್ಲು ಸಿಗ್ಲಿಲ್ಲ ಅಂತ ಕಾಣತ್ತೆ ಅದಕ್ಕೆ ಡೆಸ್ಕ್ ಮೇಲೆ ಬರಿತಾ ಇದ್ದಾರೆ. ಕಾಲೇಜಿನ ಗೋಡೆಗಳು, ಟಾಯ್ಲೆಟ್ಟುಗಳು ಇವರ ಪಾಲಿನ ಶಾಸನ ಬರೆಯೋ ಜಾಗಗಳಾಗಿವೆ.(ಪುಣ್ಯಕ್ಕೆ ಇವರೆಲ್ಲ ತಮ್ಮ ಮನೆಗಳಲ್ಲೂ ಇದೇ ಚಾಳಿ ರೂಢಿಸಿಕೊಂಡಿದ್ದಾರೇನೋ!)
ಯುವಜನತೆ ಈಗ ಎಲ್ಲದ್ರಲ್ಲೂ ಫಾಸ್ಟ್. ಇದ್ರಲ್ಲೂ ಕೂಡಾ ಫಾಸ್ಟ್ ಇದ್ದಾರೆ. ಹೊಗ್ಲಿ ಬಿಡಿ ಅವರಾದ್ರು ಏನು ಮಾಡ್ತಾರೆ ಕ್ಲಾಸ್ನಲ್ಲಿ ಮೇಷ್ಟ್ರು ಪಾಠ ಮಾಡೋದು ಕೇಳುವುದನ್ನು ಬಿಟ್ಟು ಡೆಸ್ಕ್ ಮೇಲೆ ತಮ್ಮ ಕೈಚಳಕ ತೊರಿಸ್ತಾ ಇದ್ದಾರೆ. ಈಗ ಅದೂ ಕೂಡಾ ಒಂದು ಹಾಬೀ ಆಗಿದೆಯಂತೆ. ಅದೂ ಅವರ ಅಕ್ಷರಗಳಂತೂ ಯಾವ ಕವಿಯನ್ನೂ ಸಹ ಮೀರಿಸೋ ಹಾಗೆ ಇರುತ್ತವೆ. ಬೇಕಾದ್ರೆ ನೀವು ಆಗಾಗ ಡೆಸ್ಕ್ ನೋಡ್ತಾ ಇರಿ. ನೋಡಿ ಇಲ್ಲಿ ಸ್ವಲ್ಪ ಎಕ್ಸಾಂಪಲ್ಸ್ ಇದೆ:
* ಓ ನನ್ನ ಪ್ರಿಯಲತೆ,
ಇಲ್ಲಿದೆ ನಿನಗೊಂದು ಕವಿತೆ ನೀನು ಓದಿದರೆ ಸಾಕು ಈ ಕವಿತೆ,
ನಾ ಕಳೆದೆ ಒಂದು ಚಿಂತೆ. ನಿನ್ನವ ರವಿ.
ಅಯ್ಯೋ! ರವಿ ಯಾವ ಹುಡುಗಿ ಓದಬೇಕು ಅಂತ ಹೆಸರೇ ಹಾಕಿಲ್ವಲೊ. ಆಮೇಲೆ ಯಾರ್ಯಾರೋ ಓದಿದ್ರೆ ಕಷ್ಟ ಆಗಲ್ವಾ?!
ಹೀಗೆ ಹುಡುಗರು ಅವರವರ ಫೀಲಿಂಗ್ಸ್ ಅನ್ನ ಡೆಸ್ಕ್ ಮೇಲೆ ಬರೀತಾರೆ. ಮನಸಾರೆ ಫಿಲ್ಮಲ್ಲಿ ಹೇಳೊ ಹಾಗೆ, ಡೆಸ್ಕ್ ಮೇಲೆ ಐಲವ್ಯು ಪ್ರಿಯಾ ಮಾಲಿನಿ ಎಂಬ ಬರಹಗಳು. ಹುಡುಗರು ಡೆಸ್ಕ್ ಮೇಲೆ ಬರಿಯೋಕೆ ಸಾಧ್ಯನೇ ಹೊರತು, ಪರೀಕ್ಷೇನಲ್ಲಿ ಬರಿಯೋಕೆ ಆಗಲ್ಲ. ಹಾಗಂತ ಬರಿಯೋಲ್ಲ ಅಂತ ತಿಳ್ಕೋಬೇಡಿ. ಹಾಗೆ ಬರೆದಿರೋ ಉದಾಹರಣೆಯೂ ಉಂಟು.
ವಿದ್ಯಾರ್ಥಿ ಜೀವನ ಅನ್ನೋದು ಒಂದು ಸುವರ್ಣ ಯುಗ ಇದ್ದ ಹಾಗೆ. ಆಗ ನಾವು ಎಂಜಾಯ್ ಮಾಡಬೇಕು. ಬೇಡ ಅಂತ ಯಾರು ಹೇಳಿಲ್ಲ. ಎಲ್ಲವೂ ಕೂಡ ಲಿಮಿಟ್ ಅಲ್ಲಿ ಇದ್ರೆ ಒಳ್ಳೆದು ಅಂತ ನನ್ನ ಅಭಿಪ್ರಾಯ.
ಜೀವನ ಅನ್ನೋದು ಯಾವಗಲೂ ಹರಿಯೋ ನೀರು ಇದ್ದ ಹಾಗೆ. ಹೋಗ್ತಾನೇ ಇರತ್ತೆ. ಡೆಸ್ಕ್ , ಗೋಡೆಗಳ ಮೇಲೆಲ್ಲಾ ಬರೆದು ಟೈಮ್ ವೇಸ್ಟ್ ಮಾಡೋ ಬದಲು ಪಾಠ ಕೇಳಿ ಉದ್ದಾರ ಆದ್ರೆ ದೊಡ್ಡ ಪುಸ್ತಕವನ್ನೇ ಬರಿಯಬಹುದು.
ಎಲ್ಲದಕ್ಕೂ ಒಂದು ಕಾನೂನು ಅಂತ ಇದೆ. ಅಂತೆಯೇ ಕೆಲವು ಕಾಲೇಜುಗಳು ಡೆಸ್ಕ್ ಮೇಲೆ ಬರಿಯೋರಿಗೆ ದಂಡ ಹಾಕ್ತಾವೆ. ಆ ಕ್ಲಾಸ್ನಲ್ಲಿ ಯಾರೇ ಬರುದ್ರು ಕೂಡಾ ಇಡೀ ಕ್ಲಾಸಿಗೇ ದಂಡ ಹಾಕುತ್ತಾರೆ.
-ದರ್ಶನ್ ಎಂ. ಕಮ್ಮಾರಗಟ್ಟೆ
ಪ್ರಥಮ ಪತ್ರಿಕೋದ್ಯಮ
ಆಳ್ವಾಸ್ ಕಾಲೇಜ್
ಮೂಡುಬಿದಿರೆ.
ವಿಚಾರ
“ಮಾಧ್ಯಮ ಲೋಕದ ಒಳಸುಳಿಗಳೊಳಗೆ ಹೆಚ್ಚು ವಿಹರಿಸಬಾರದು. ಅಂದರೆ ಅದರ ಬಗ್ಗೆ ಏನೇನೋ ಯೋಚನೆ ಮಾಡಿಬಿಡಬಾರದು. ಎಲ್ಲರೂ ಕಂಡದ್ದನ್ನು ಎಲ್ಲರೂ ಒಪ್ಪಿಕೊಂಡದ್ದನ್ನು,ಎಲ್ಲರೂ ಮಾತಾಡುವುದನ್ನೇ ಒಪ್ಪಿಕೊಂಡುಬಿಡಬೇಕು. ಹಾಗೆ ಇಲ್ಲದಿದ್ದರೂ ಒಪ್ಪಿಕೊಂಡು ಬಿಡಬೇಕು. ಎಲ್ಲಾ ಕೆಲಸದ ಹಾಗೆ ಇದೂ ಒಂದು ಕೆಲಸ ಎಂದು ತೆಪ್ಪಗೆ ಇದ್ದು ಬಿಡಬೇಕು. ಮಾಧ್ಯಮಗಳ ಬಗ್ಗೆ ವಿನಾ ಕಾರಣ ಪ್ರಭಾವಳಿಯೊಂದನ್ನು ನಿರ್ಮಿಸಿಕೊಂಡು ಬಿಡಬಾರದು" ಹೀಗೆಲ್ಲಾ ಅನಿಸಿದ್ದು ನರಸಿಂಹರಾವ್ ಎಂಬ ಹಣ್ಣು ಹಣ್ಣು ದೇಹದ, ಬರೋಬ್ಬರಿ ೮೫ ವರ್ಷದ ಕಿವಿ, ಕಣ್ಣು ಮಂದವಾಗಿರುವ, ಅಗಾಧ ಅನುಭವದ ಪತ್ರಕರ್ತನನ್ನು ನೋಡಿದಾಗ ಮತ್ತು ಅವರ ಕಥೆಯನ್ನು ಕೇಳಿದಾಗ.
೧೯೪೮ರಲ್ಲೇ ಮಂಗಳೂರಿನಿಂದ ಮದ್ರಾಸ್‌ಮೈಲ್‌ಗೆ ವರದಿ ಮಾಡುತ್ತಾ ಬಂದ ರಾಯರು ಕನಿಷ್ಟ ಅದರ ಉದ್ಯೋಗಿಗಳೂ ಆಗಿರಲಿಲ್ಲ. ತಂದೆ ಮಾಡುತ್ತಿದ್ದ ಕೆಲಸವನ್ನು ಮುಂದುವರಿಸಿದರು ಅಷ್ಟೆ. ಅನಂತರ ಬೊಂಬಾಯಿಯ ಟೈಮ್ಸ್ ಆಫ್ ಇಂಡಿಯಾಕ್ಕೆ, ಮದರಾಸಿನ ದಿ ಹಿಂದೂವಿಗೆ, ಮಂಗಳೂರಿನ ಆಕಾಶವಾಣಿಗೆ, ಕೇರಳದ ಮಾತೃಭೂಮಿಗೆ ದಶಕಗಟ್ಟಲೆ ವರದಿ ಮಾಡಿದ ಅನುಭವವಿದ್ದರೂ ಕೂಡ ಅವರು ಅದರ ನೌಕರರಾಗಿರಲಿಲ್ಲ.
ಅಷ್ಟಕ್ಕೂ ಅಂದು ಪತ್ರಕರ್ತರು ನೌಕರರೇ ಆಗುತ್ತಿರಲಿಲ್ಲ. ಹಾಗೆಯೇ ನರಸಿಂಹರಾಯರು ವರದಿ ಮಾಡುತ್ತಾ ಇಂತಿಷ್ಟು ಉದ್ದದ ವರದಿಗೆ ಇಂತಿಷ್ಟು ಎಂಬ ಲೆಕ್ಕದಲ್ಲಿ ಸಂಭಾವನೆಯನ್ನು ಪಡೆಯುತ್ತಿದ್ದರು. ಹೀಗೇ ಕೊನೆಯವರೆಗೂ ಲೈನೇಜ್ ಆಧಾರದಲ್ಲೇ ದೇಶದ ದೊಡ್ಡ ದೊಡ್ಡ ಪತ್ರಿಕೆಗೆ ಕೆಲಸ ಮಾಡಿದರೂ ಮನೆ ಹೊರೆಯುವಷ್ಟು ಜೇಬು ತುಂಬುತ್ತಿರಲಿಲ್ಲ. ಕೆಲವೊಮ್ಮೆ ಊಟಕ್ಕೂ ಕಷ್ಟವಾಗುತ್ತಿತ್ತಂತೆ. ಪತ್ರಕರ್ತರ ಈ ದುರವಸ್ಥೆಯನ್ನು ನೋಡಿ ಊರಿನ ಅಂಗಡಿಯವರು, ಸಣ್ಣಪುಟ್ಟ ಉದ್ಯಮಗಳು ಪಾರ್ಟ್ ಟೈಮ್ ಕೆಲಸಕ್ಕೆ ಕರೆಯುತ್ತಿದ್ದರಂತೆ. ಆದರೆ ಪತ್ರಕರ್ತರು ಒಂದು ಗೌರವಾರ್ಹ ಕಾರ್ಯವನ್ನು ಬಿಟ್ಟು ಬೇರೆ ಕೆಲಸಕ್ಕೆ ಹೋಗುತ್ತಿರಲಿಲ್ಲವಂತೆ.
ರಾಯರು ೨೦೦ ರೂ. ಸಂಪಾದನೆಯ ಈ ಕೆಲಸದಲ್ಲೇ ನೆಮ್ಮದಿಗೆ ಪ್ರಯತ್ನಪಟ್ಟರಂತೆ. ಸೌಲಭ್ಯಗಳ ಕೊರತೆಯಂತೆ, ಸುದ್ದಿ ಕಳುಹಿಸಲು ಟೆಲಿಗ್ರಾಮನ್ನೇ ನಂಬಬೇಕಾದ ಪರಿಸ್ಥಿತಿಯಂತೆ ಎಂದೆಲ್ಲಾ ರಾಯರು ಹೇಳುತ್ತಾ ಹೋಗುತ್ತಾರೆ. ಮತ್ತು ಅಂದಿನ ಕಾಲದಲ್ಲಿ ಪತ್ರಿಕೋದ್ಯಮ ಎಂದರೆ ಇಡೀ ದೇಶದಲ್ಲಿ ಒಂದೇ ನಿಲುವು ಎಂದು ಹೇಳುವುದನ್ನೂ ಅವರು ಮರೆಯುವುದಿಲ್ಲ. ಅಲ್ಲಿ ಸಿದ್ಧಾಂತಗಳ ಹಂಗಿರಲಿಲ್ಲ. ವರದಿಯಲ್ಲಿ ವಸ್ತುನಿಷ್ಠತೆ ಮುಖ್ಯವಾಗಿತ್ತೇ ಹೊರತು ಒತ್ತಡ, ಬೆದರಿಕೆಗಳಿಗೆ ಆಸ್ಪದವೇ ಇರಲಿಲ್ಲ. ಎಲ್ಲಾ ಪತ್ರಿಕೆಗಳಿಗೆ ಒಂದೇ ನಮೂನೆಯಲ್ಲಿ ಸುದ್ದಿಗಳನ್ನು ಕಳುಹಿಸಬಹುದಿತ್ತು ಎಂದು ಹೇಳುತ್ತಾರೆ. ಅದಿಂದು ಸಾಧ್ಯವೇ ಎಂದೂ ಪ್ರಶ್ನಿಸುತ್ತಾರೆ. ಹೀಗೆ ಹಲವು ವೈಭವದ ಕಥೆಗಳನ್ನು ಹೇಳಿದರೂ ಸಂಬಳದ ವಿಷಯದಲ್ಲಿ ಅದಾವುದೂ ಸಹಾಯಕ್ಕೆ ಬರಲಿಲ್ಲ ಎಂದೂ ಹೇಳುತ್ತಾರೆ. ಕೊನೆಗೆ ಪತ್ರಕರ್ತರ ದುರವಸ್ಥೆಯನ್ನು ಕಂಡು ಕೇಂದ್ರ ಸರಕಾರ ‘ಬಚಾವತ್ ಆಯೋಗ’ದಲ್ಲಿ ಸುಧಾರಣೆಯನ್ನು ತರಬೇಕಾಯಿತಂತೆ. ಪತ್ರಕರ್ತರೂ ಸಂಬಳದ ಕೆಲಸಕ್ಕೆ ಅರ್ಹರು. ಅವರಿಗೂ ನ್ಯಾಯವಾದ ವೇತನ ನೀಡಬೇಕು ಎಂದು ಆಯೋಗ ಶಿಫಾರಸು ಮಾಡಿತಂತೆ. ವಿಚಿತ್ರವೆಂದರೆ ಹಾಗೆ ಶಿಫಾರಸು ಮಾಡಿದ ವರ್ಷಕ್ಕೇ ರಾಯರಿಗೆ ಅರವತ್ತು ದಾಟಿ ಮತ್ತೆಂದೂ ಸಂಬಳ ತೆಗೆಯಲಾರದೆ ಹೋದರಂತೆ. ಹೀಗೆ ಯಾರೂ ಸಂಬಳ ತೆಗೆದುಕೊಳ್ಳದಿದ್ದಾಗಲೂ, ಎಲ್ಲರೂ ಸಂಬಳ
ತೆಗೆದುಕೊಳ್ಳುತ್ತಿರುವಾಗಲೂ ರಾಯರು ಮಾತ್ರ ಹಾಗೆಯೇ ‘ಲೈನೇಜ್’ ಆಧಾರದಲ್ಲೇ ಪತ್ರಕರ್ತರಾಗಿಯೇ ಇದ್ದರಂತೆ. ಅದು ಹಳೆಯ ಪತ್ರಕರ್ತರೆಲ್ಲರಿಗೂ ಗೊತ್ತಿರುವ ಸಂಗತಿ.
ಆದರೆ ಇಂದು? ಬಚಾವತ್ ಆಯೋಗ ರಚನೆಯಾಗಿ ಸರಿಯಾಗಿ ಇಪ್ಪತ್ತೈದು ವರ್ಷಗಳೂ ಆಗಿರಲಿಕ್ಕಿಲ್ಲ. ಅಂದು ಊಟಕ್ಕಿಲ್ಲದ ಪತ್ರಕರ್ತರಿಗೆ ಊಟಕ್ಕೆ ಆಸ್ಪದ ನೀಡಿ ಎಂದು ಆಯೋಗ ರಚನೆಯಾದರೆ ಇಂದು ಅದೇ ಪತ್ರಕರ್ತರ ಆದಾಯವನ್ನು ಶಂಕಿಸಿ ಆಯೋಗದ ರಚನೆ ಮಾಡಬೇಕೆನಿಸುತ್ತಿಯಲ್ಲಾ ! ಕೆಲವೇ ವರ್ಷಗಳಲ್ಲಿ ಅದೇ ಪತ್ರಕರ್ತರು ಲಕ್ಷ ಕೋಟಿಗಳನ್ನು ತಿನ್ನುವಷ್ಟು ಬೆಳೆದರಲ್ಲಾ? ಇದೇನು ಮಾಯೆ? ಅಂದು ಸಂಬಳವಿಲ್ಲದಿದ್ದರೂ ಗೌರವಾರ್ಹ ಸ್ಥಾನ. ಇಂದು ಕೊಳೆಯುವಷ್ಟು ಸಂಬಳವಿದ್ದೂ ಎಂಜಲಿಗೆ ಆಸೆ! ನರಸಿಂಹರಾಯರಂಥವರ ಮಾತಿಗೆ ಬೆಲೆ ಬರುವುದು ಇಂಥ ಹೊತ್ತಿನಲ್ಲಿ.
ನರಸಿಂಹರಾಯರ ಕಾಲದ ಪತ್ರಿಕೋದ್ಯಮ ಮುಗಿದು ಕಾಲವಾಗಿದೆ. ಮೈಸೂರು ಕರ್ನಾಟಕವಾಗಿದೆ. ತುರ್ತು ಪರಿಸ್ಥಿತಿ ಮುಗಿದು ಪತ್ರಕರ್ತರು ಬಹಳಷ್ಟನ್ನು ನೋಡಿಯಾಗಿದೆ. ನೆರೆದೇಶಗಳೊಂದಿಗೆ ಯುದ್ಧಗಳು ಮುಗಿದು ಅಲಿಪ್ತನೀತಿಯನ್ನು ಹೊತ್ತುಕೊಂಡಿದ್ದು, ಜಾಗತೀಕರಣವೂ ಒಳನುಗ್ಗಿ ದೇಶಾದ್ಯಂತ ಒಂದು ಸ್ಥಿತ್ಯಂತರ ಮತ್ತು ಸಂಚಲನವೂ ಆಗಿದೆ. ಸಿದ್ಧಾಂತಗಳಲ್ಲೂ ಬದಲಾವಣೆಯಾಗಿ ಹಲವು ಬಿದ್ದು, ಇನ್ನು ಕೆಲವು ಮಣ್ಣುಪಾಲಾಗಿ ಸಮಾಜವಾದ, ಸಮತಾವಾದ, ಬಂಡವಾಳಶಾಹಿಗಳು ಗೆದ್ದಲಿನ ಸರಕುಗಳಾಗಿವೆ. ಅದರ ನಂತರ ಹೊರಳಿಕೊಂಡ ಮಾಧ್ಯಮರಂಗ ಒಂದು ಹೊಸ ವೇಷದಿಂದ ಮರು ಅವತರಿಸಿತು. ‘ನಾವು ನವನಾಗರಿಕತೆಯೊಂದನ್ನು ನಿರ್ಮಿಸುತ್ತೇವೆ’ ಎಂಬ ಭ್ರಮೆಯನ್ನು ಹೊತ್ತುಕೊಂಡೇಬಂತು. ವಿಚಿತ್ರವೆಂದರೆ ಆ ಹೊತ್ತಿಗೆ ಮಾಧ್ಯಮ ಒಡೆತನಗಳೆಲ್ಲವೂ ಬೃಹತ್‌ಉದ್ಯಮಗಳ ಕೈಯಲ್ಲಿದ್ದವು. ಜಾಗತೀಕರಣಕ್ಕೆ ಒಳಗಾಗಿ ಜಗತ್ತು ತನ್ನ ಪಾಡಿಗೆ ತಾನು ಒಂದು ನವನಾಗರಿಕತೆಯನ್ನು ಅದಾಗಲೇ ಒಪ್ಪಿಕೊಂಡಾಗಿತ್ತು. ತಾನು ಹಾತೊರೆಯುತ್ತಿದ್ದ ಅದೇ ಲೋಕ ಕಣ್ಣೆದುರು ಕಂಡಾಗ ಮಾಧ್ಯಮ ಅದನ್ನೇ ಸರಕಾಗಿಸಿಕೊಂಡಿತು.
ಅನಂತರದ್ದೆಲ್ಲಾ ಮಾಹಿತಿಯುಗ.
ತಲೆತುಂಬಾ ಮಾಹಿತಿಯನ್ನು ತುಂಬಿಕೊಡುವುದು. ಅದನ್ನೇ ಜ್ಞಾನದ ಅಪರವತಾರ ಎಂಬ ವಿಶೇಷಣದೊಂದಿಗೆ ಬಣ್ಣಿಸುವುದು. ಅಂದಿನಿಂದ ಲಾಗಾಯ್ತು ಈ ಮಾಹಿತಿ ಪ್ರಪಂಚ ಎಷ್ಟೊಂದು ಗಾಢವಾಗಿ ವ್ಯಾಪಿಸಿದೆಯೆಂದರೆ ಆಧುನಿಕ ಪ್ರಪಂಚಕ್ಕೆ ಮಾಹಿತಿಯುಗ ಎಂಬ ಹೆಸರೇ ಬಂದುಬಿಟ್ಟಿದೆ. ಆ ಮಾಹಿತಿ ಅನಿವಾರ್ಯತೆಯಲ್ಲ. ಒಂದು ಅನಿವಾರ್ಯ ಅಲ್ಲದ ಸಂಗತಿ ಉತ್ತಮ ವ್ಯವಸ್ಥೆಯೊಂದನ್ನು ಕೆಡಿಸಲೂಬಹುದು. ಈ ಮಾಹಿತಿ ಯುಗದಲ್ಲಿ ಅನಗತ್ಯ ಪ್ರಾಧಾನ್ಯವೂ ಒಂದು ಮಾರ್ಗವಾಯಿತು. ಅನಗತ್ಯ ಪ್ರಾಧಾನ್ಯ ಮಾಹಿತಿಯನ್ನು ಮಾಲಿನ್ಯಗೊಳಿಸಿತು. ಮಾಲಿನ್ಯದೊಳಗಿಂದ ಮಾಧ್ಯಮಲೋಕ ತನ್ನ ಅಸ್ತಿತ್ವ ಕಂಡುಕೊಂಡಿತು. ಹೀಗೆ ಒಂದು ನವಯುಗಕ್ಕೆ ಹೊರಳಿಕೊಳ್ಳುವ ಹೊತ್ತಿಗಾಗಲೇ ಮಾಧ್ಯಮ ಕ್ಷೇತ್ರದಿಂದ ನರಸಿಂಹರಾಯರಂಥವರು ರಂಗದಿಂದ ನಿರ್ಗಮಿಸಿಯಾಗಿತ್ತು. ಬರ್ಖಾದತ್‌ರಂಥವರು ಕೂತಾಗಿತ್ತು. ಈ ಹಂತದಲ್ಲಿ ಮಾಧ್ಯಮಗಳಿಗೆ ಭಿನ್ನತೆ ಬೇಕಾಗಿತ್ತು. ಆರಂಭದಲ್ಲಿ ಜನ ಬಯಸಿದ್ದನ್ನು ಕೊಡಲಾಗುತ್ತದೆ ಎಂದುಕೊಂಡಿತು. ಇದೀಗ ಆ ಪರಿಸ್ಥತಿ ಇಲ್ಲ. ಜನ ಬಯಸದ್ದನ್ನು, ಅಷ್ಟೇ ಏಕೆ?ನಿರೀಕ್ಷಿಸದ್ದನ್ನೂ ಕೊಡುತ್ತವೆ. ಅಂಥಲ್ಲಿ ಮಾಧ್ಯಮ ವ್ಯಾಪಾರವಾಗದೆ ಹೇಗಿದ್ದೀತು? ಒಂದು ವ್ಯಾಪಾರಿ ರಂಗವನ್ನು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಹೇಗೆ ತಾನೆ ಕರೆಯಬಹುದು? ವ್ಯಾಪಾರದ ಮುಖ್ಯ ವ್ಯಾಖ್ಯಾನವೇ ವಸ್ತಗಳ ವಿತರಣೆ. ಅದೂ ಜನ ಬಯಸಿದ್ದನ್ನು. ಆದರೆ ಮಾಧ್ಯಮ ಜನ ಬಯಸದ್ದನ್ನು ವಿತರಿಸಲು, ಅನಗತ್ಯ ಬಯಕೆಗಳನ್ನು ಉದ್ದೀಪಿಸುವ ವ್ಯಾಪಾರಿ ತಂತ್ರಕ್ಕಿಳಿಯಿತು. ಇದಕ್ಕೇನನ್ನಬೇಕು? ಅಂಥದ್ದನ್ನು ಪ್ರಜಾಪ್ರಭುತ್ವ ಆಧಾರಸ್ತಂಭ ಎನ್ನುವುದಾದರೆ ತಂಪುಪಾನೀಯ ಕಂಪೆನಿಗಳನ್ನೂ ಚಾಕಲೇಟ್ ಕಂಪೆನಿಗಳನ್ನೂ ಗಣಿ ಉದ್ಯಮವನ್ನೂ ನಾಲ್ಕನೇ ಆಧಾರಸ್ತಂಭ ಎನ್ನಬಾರದೇಕೆ?
ದೇಶಕ್ಕಿರುವುದು ಒಂದೇ ಕಾರ್ಯಾಂಗ, ಒಂದೇ ರಾಜ್ಯಾಂಗ, ಒಂದೇ ನ್ಯಾಯಾಂಗ ಕೂಡ. ಆದರೆ ಮಾಧ್ಯಮ...? ಎಷ್ಟಿವೆಯೋ ಅಷ್ಟು ಧೋರಣೆಗಳು. ರಾಷ್ಟ್ರೀಯ ಪ್ರಜ್ಞೆ ಯದ್ದೇ ಕೊರತೆ. ಹಲವಕ್ಕೆ ಆಳುವ ಪಕ್ಷಕ್ಕೆ ತಲೆಬಾಗುವ ಸ್ಲೇವರಿಯಾದರೆ ಇನ್ನು ಹಲವರಿಗೆ ಬಂಡಾಯದ ಬಾವುಟ ಹಾರಿಸುವ ಹುಮ್ಮಸ್ಸು. ಬಹುತೇಕ ಇಂದು ಪೇಯ್ಡ್‌ನ್ಯೂಸ್‌ಗಳು ಮತ್ತು ಎಕ್ಸ್‌ಕ್ಲೂಸಿವ್ ವರದಿಗಳನ್ನು ಹೊರತುಪಡಿಸಿದ ಮಾಧ್ಯಮ ಕ್ಷೇತ್ರವನ್ನು ಕಾಣಲಾರೆವು. ಪೈಪೋಟಿಯ ಯುಗದಲ್ಲಿ ಪ್ರತಿಸ್ಪರ್ಧೆಯೇ ಚೌಕ. ವೇಗದ್ದೇ ದಾಳ. ಆ ವೇಗಕ್ಕೆ ಎದುರು ಸಿಕ್ಕಿದೆಲ್ಲವೂ ಆದೀತು. ಆದರೂ ಮಾಧ್ಯಮ ದೇಶದ ಆಧಾರಸ್ತಂಭ? ಸತ್ತುಹೋದ ಕಮ್ಯುನಿಸಮ್ಮಿನ ಗುಂಗಿನಲ್ಲಿ ಇನ್ನೂ ಮೇಕಪ್ ಮಾಡಿಕೊಳ್ಳುತ್ತಿರುವ, ಸತ್ಯದ ತಲೆಗೆ ಹೊಡೆದಂತೆ ಸುದ್ದಿ ಮಾಡುವ, ಅಭಿರುಚಿಯನ್ನೇ ಗೌರವಿಸದ, ರೇಜಿಗೆಯಾಗುವಂತೆ ಹಣ ಮಾಡುವ ಮಾಧ್ಯಮಗಳು ಆಧಾರಸ್ತಂಭಗಳು! ನರಸಿಂಹರಾಯರು ಒಂದು ಮಾತೆಂದಿದ್ದರು. “ನಮ್ಮ ಕಾಲದಲ್ಲೂ ರಾತ್ರಿ ಪತ್ರಿಕಾಗೋಷ್ಠಿಗಳಿರುತ್ತಿದ್ದವು. ಈಗೀಗ ರಾಜಧಾನಿಯಲ್ಲಲ್ಲದೆ ಇತರೆಡೆ ಅದು ಅಷ್ಟಾಗಿ ಇಲ್ಲ. ಒಳ್ಳೆಯದು. ರಾತ್ರಿ ಪತ್ರಿಕಾಗೋಷ್ಠಿಗಳಲ್ಲೇ ಲಕೋಟೆಗಳು ಬಟವಾಡೆಯಾಗುತ್ತವೆ" ಎಂದಿದ್ದರು. ಆದರೆ ಮೂಲಗಳು ಹಲವಿರುವಾಗ ಯಕಶ್ಚಿತ್ ಲಕೋಟೆಗಳಿಂದೇನು? ರಾಜಕೀಯ ಪಕ್ಷಗಳೂ ನಾಯಕರೂ ಪತ್ರಕರ್ತರನ್ನು ಎಡತಾಕುವಾಗ ಲಕೋಟೆಗಳ ಕಾಲ ಎಂದೋ ಮುಗಿದುಹೋಗಿದೆ. ಈಗೇನಿದ್ದರೂ ಸೈಟುಗಳಿಂದ ಮೇಲ್ಮಟ್ಟ ವ್ಯವಹಾರ.
ಹೀಗೆ ಯಾವ ಕೋನದಿಂದ ನೋಡಿದರೂ ಮಾಧ್ಯಮವನ್ನು ನಾಲ್ಕನೆ ಸ್ತಂಭ ಎಂದೂ ಪ್ರಜಾಪ್ರಭುತ್ವದ ಕಾವಲು ನಾಯಿ ಎಂದೂ ಹೇಳಲಾಗುತ್ತಿಲ್ಲ. ನೆನಪು ಮಾಡಿಕೊಂಡರೂ ಗಾಂಯಂತೆ ತಿಲಕರಂತೆ ಕಿಂಚಿತ್ತಾದರೂ ಕಾಣುವ ರಾಷ್ಟ್ರಮಟ್ಟದ ಪತ್ರಕರ್ತರನ್ನು ಕಾಣಲಾರೆವು. ಇವತ್ತೇನಿದ್ದರೂ ಹೇರ್‌ಸ್ಟೈಟ್ನಿಂಗ್ ಮಾಡಿಸಿಕೊಂಡ ಬರ್ಖಾದತ್, ಕೋಟುದಾರಿ ಸರ್‌ದೇಸಾಯಿ, ಪ್ರಣವ್ ರಾಯ್, ಸಾಗರಿಕಾ ಘೋಷ್‌ಗಳಂತಹ ಶೋಕೀಲಾಲರೇ ಮುಖ್ಯವಾಹಿನಿಯಲ್ಲಿ ಕಾಣುತ್ತಾರೆ.ಇನ್ನುಳಿದಂತೆ ನಮ್ಮ ರಾಜ್ಯದಲ್ಲೂ ಅಂಥವರಿದ್ದಾರೆ. ಪರಮ ಅಹಂಕಾರದ, ಸರಕಾರಿ ಸೈಟು ಪಡೆದು ಉಪ್ಪುತಿಂದ ಋಣಕ್ಕೆ ಒಳಗಾಗಿ ಬಾಯಕಟ್ಟಿಕೊಂಡವರೂ ಲೋಕಕ್ಕೆ ಬುದ್ಧಿ ಹೇಳುವವರೂ ಇದ್ದಾರೆ. ಎಲ್ಲಾ ರಾಜ್ಯಗಳಲ್ಲೂ ಇದ್ದಾರೆ. ಇಂದು ಪತ್ರಕರ್ತರಲ್ಲಿ ಎಷ್ಟೊಂದು ದಾರ್ಷ್ಟ್ಯ ಮನೆಮಾಡಿದೆಯೆಂದರೆ ಒಂದು ಹಂತ ದಾಟಿದ ಅನಂತರ ಸಮಾಜದೊಳಗೆ ಆತ ಎಂದೂ ಸಾಗಲಾರ. ಇಂಥವರನ್ನು ಕಟ್ಟಿಕೊಂಡು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎನ್ನುತ್ತೇವಲ್ಲಾ?
Soಟಜieಡಿs ಠಿಡಿಚಿಥಿ ಜಿoಡಿ ಠಿeಚಿಛಿe. buಣ hoಠಿe ಜಿoಡಿ ತಿಚಿಡಿ ಎಂಬ ಸೊಲ್ಲೊಂದಿದೆ. ಅದನ್ನು ಸೈನಿಕರನ್ನು ಬಿಟ್ಟು ಪತ್ರಕರ್ತರಿಗೂ ಅನ್ವಯಿಸಿಬಿಟ್ಟರೆ ಕಷ್ಟ. ವಿಪರ್ಯಾಸವೆಂದರೆ ಇಂದು ಆ ಸೊಲ್ಲು ಮಾಧ್ಯಮಕ್ಕೂ ಅನ್ವಯಿಸುತ್ತದೆ. ಇತ್ತೀಚೆಗೆ ಒeಜiಚಿ ಅಡಿooಞs ಎಂಬ ವೆಬ್‌ಸೈಟೊಂದು ಪತ್ರಕರ್ತರ ಪ್ರಾರ್ಥನೆಗಳು ಎಂಬ ಶೀರ್ಷಿಕೆಯಲ್ಲಿ ಲೇಖನವೊಂದನ್ನು ಪ್ರಕಟಿಸಿತ್ತು. ಆ ಐದು ಪ್ರಾರ್ಥನೆಗಳು ಸದ್ಯದ ಮಾಧ್ಯಮದ ಧೋರಣೆಗಳು , ಮಾನಸಿಕತೆ ಮತ್ತು ಮಟ್ಟವನ್ನು ತೋರಿಸುತ್ತಿದ್ದವು.
ಪ್ರಾರ್ಥನೆ ಒಂದು - ನೈಸರ್ಗಿಕ ವಿಕೋಪಗಳು : ಮಾಧ್ಯಮದ ಮೊದಲ ಪ್ರಾರ್ಥನೆ ನೈಸರ್ಗಿಕ ವಿಕೋಪಗಳಂತೆ. ಒಮ್ಮೆ ಇಂಥ ವಿಕೋಪಗಳುಂಟಾದರೆ ಹಲವು ಸಮಯದವರೆಗೆ ಮೀಡಿಯಾ ಸುಗ್ಗಿ ಆಚರಣೆ ಮಾಡುವುದನ್ನು ಗಮನಿಸಿದ್ದೇವೆ. ಅದು ಹಲವು ಕ್ರಿಯೇಟಿವಿಟಿ ಕೈಗೊಳ್ಳುವ ಮಹತ್ತ್ವದ ಕಾಲ ಎಂದು ಬಹುತೇಕ ಎಲ್ಲಾ ಮಾಧ್ಯಮಗಳೂ ತಿಳಿಯುತ್ತವೆ.
ಪ್ರಾಥನೆ ನಂ. ಎರಡು-ಸೆಲಬ್ರಿಟಿಗಳ ರೇಪು/ಕೊಲೆ/ಸಾವು : ವಿಶೇಷ ಪುರವಣಿಗಳು, ಅಡಿಗಡಿಗೆ ಬ್ರೇಕಿಂಗ್ ನ್ಯೂಸುಗಳು, ತನಿಖಾ ವರದಿಗಳಿಗೆ ಈ ಹೊತ್ತು ಪ್ರಶಸ್ತ. ಹಾಗಾಗಿ ಹಲವರು ಸತ್ತ ಅನಂತರವಷ್ಟೇ ಸುದ್ದಿಯಾಗುತ್ತಾರೆ. ಜೆಸ್ಸಿಕಾಲಾಲ್‌ನಂತೆ.
ಪ್ರಾರ್ಥನೆ ನಂ. ಮೂರು-ಚುನಾವಣೆಗಳು : ಬರಪೂರ ಸುದ್ದಿ ಮತ್ತು ಕೈ ತುಂಬಾ ಝಣಝಣಕ್ಕೆ ಇದಕ್ಕಿಂತ ಬೇರೆ ಯಾವ ಹೊತ್ತಿದೆ. ಹಾಗಾಗಿ ಈ ಪ್ರಾರ್ಥನೆ.
ಪ್ರಾರ್ಥನೆ ನಂ. ನಾಲ್ಕು - ಹಿಂದೂವಿರೋ ಧೋರಣೆ:ದೇಶದ ಬಹುದೊಡ್ಡ ಮಾಧ್ಯಮಗಳು, ಖ್ಯಾತರೆನಿಸಿಕೊಂಡ ಪತ್ರಕರ್ತರು ಬೆಳಕಿಗೆ ಬಂದಿದ್ದೇ ಹಿಂದುತ್ವದತ್ತ ವಕ್ರ ಚಿತ್ತವನ್ನು ಬೀರಿ. ಇದೀಗಂತೂ ಈ ಪ್ರಾರ್ಥನೆ ಸಾಕಷ್ಟು ಫಲಿಸಿದೆ. ನವನವೀನ ಹಿಂದೂ ವಿರೋ ಸುದ್ದಿಗಳು, ಮಾಹಿತಿಗಳು ಬರುತ್ತಿವೆ.
ಪ್ರಾರ್ಥನೆ ನಂ. ಐದು - ಭಯೋತ್ಪಾದಕ ಘಟನೆಗಳು : ಊರು ಕೊಳ್ಳೆ ಹೋಗಲಿ, ಘಟನಾಸ್ಥಳದಿಂದ ಎದ್ದೂ ಬಿದ್ದೂ ನಾಟಕವಾಡಿ, ಮೊದಲು ತಲುಪಿ ಸೆನ್ಸೇಶನಲ್ ಸೃಷ್ಟಿಸಲು ಇದಕ್ಕಿಂತ ಬೇರೆ ಸಂದರ್ಭವಿಲ್ಲ. ಹಾಗಾಗಿ....
ಇದನ್ನು ಇಂಥ ಮಾಧ್ಯಮಕ್ಕೆಂದು ವಿಭಾಗಿಸುವ ಹಾಗಿಲ್ಲ. ಹಾಗಾಗಿ ಯಾವ ಮಾಧ್ಯಮವನ್ನೂ ಆಧಾರಸ್ತಂಭ ಎಂದುಕೊಳ್ಳುವ ಹಾಗಿಲ್ಲ. ಮನಬಿಚ್ಚಿ ಬರೆಯಲು ಇಂದು ಬಹುತೇಕ ಪತ್ರಕರ್ತರಿಗೆ ಅವಕಾಶವಿಲ್ಲ.ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಪರಿಸ್ಥಿತಿಗೋ ಗುಲಾಮಗಿರಿಗೋ ಬಂ. ಒಂದು ಕಾಲದ ಉಕ್ಕಿನ ಆಧಾರಸ್ತಂಭ ಇಂದು ತುಕ್ಕು ಹಿಡಿದಿದೆ. Iಟಿಜiಚಿಟಿ ಒeಜiಚಿ is ಣhe ಡಿeಚಿಟ sಛಿhooಟ ಜಿoಡಿ sಛಿouಟಿಜಡಿಚಿಟs ಎಂದು ಮೊನ್ನೆ ಯಾರೋ ಅಂದಿದ್ದರು.
ಅಂದ ಹಾಗೆ ನರಸಿಂಹರಾಯರೀಗ ಪತ್ರಿಕೆ ಓದುತ್ತಿಲ್ಲ.
- ಸಂತೋಷ್ ತಮ್ಮಯ್ಯ
ಕಥೆ
ಹೀಗೆ ಬನ್ನಿ..
ನೋಡಿ ಈ ಮಾವಿನ ಮರಗಳನ್ನು ನೆಟ್ಟವರು ಯಾರೋ.. ಆದರೆ ಈ ಕಾಲೇಜಿಗೆ ಬಂದವರಿಗೆಲ್ಲ ಇಲ್ಲಿರುವ ಹತ್ತು ಹನ್ನೆರಡು ಕಟ್ಟೆಗಳು ನೆರಳು ಕೊಟ್ಟಿದೆ. ವಿಶ್ರಾಂತಿಗೆ ಜಾಗ ಕೊಟ್ಟಿದೆ. ಕಾಲೇಜು ತೊಡಗುವ ಮೊದಲ ವಾರದಲ್ಲಿ ಎಷ್ಟೋ ಅಮ್ಮಂದಿರು ಬ್ಯಾಗಿನಲ್ಲಿ ಬುತ್ತಿ ಹಿಡಿದು ಇಲ್ಲೇ ಕಾಯುತ್ತಿರುತ್ತಾರೆ. ಶುರುವಾಗಿ ಎರಡು ಮೂರು ದಿನ ಕಳೆವಾಗ ಹೀಗೆ ಕಾಯುವುದು ಮಕ್ಕಳಿಗೆ ಇಷ್ಟವಾಗುವುದಿಲ್ಲ ಎಂಬುದು ಖಾಲಿ ಕಟ್ಟೆಗಳನ್ನು ನೋಡಿದರೇ ಗೊತ್ತಾಗುತ್ತೆ. ನಂತರ ಕೆಲ ದಿನ ಕೆಲವು ಕಟ್ಟೆಗಳಲ್ಲಿ ಹುಡುಗಿಯರು, ಇನ್ನು ಕೆಲವದರಲ್ಲಿ ಹುಡುಗರು ಆಚೀಚೆ ನೋಡುತ್ತಾ ಹರಟುತ್ತಾ ಕಾಲಕಳೆಯುತ್ತಾರೆ. ಪರೀಕ್ಷೆ ಬಂತೆಂದರೆ ಓದಿನ ನಡುವೆಯೇ ಓರೆ ಕಣ್ಣಲ್ಲಿ ಬರುವವರನ್ನು ನೋಡುತ್ತಾ, ಮರಕ್ಕೆ ಸುತ್ತು ಬರುತ್ತಾ, ಪುಸ್ತಕವನ್ನು ಎದೆಗವಚಿಕೊಳ್ಳುತ್ತ ಆಕಾಶ ನೋಡಿ ನೆನಪುಜಪ ಮಾಡುತ್ತಾ ಇರುವುದನ್ನು ದೂರ ಕುಳಿತು ನೋಡುವುದೇ ಸೊಗಸು.
ಬನ್ನಿ.. ಬನ್ನಿ..
ಇದು ಪ್ರವೇಶ ದ್ವಾರ. ಓ ಅಲ್ಲಿ ಆಕಾಶದಿಂದ ಇಳಿಬಿಟ್ಟಂತೆ ತೋರುವ ಆ ದೀಪ ಈ ಕಾಲೇಜಿನ ಕ್ರಿಯಾಶೀಲತೆಯ ಸಂಕೇತ. ಐದಾರು ಲೀಟರ್ ಎಣ್ಣೆಯನ್ನು ಒಮ್ಮೆಗೆ ತನ್ನೊಡಲಲ್ಲಿ ತುಂಬಿಕೊಳ್ಳುವ ಸಾಮರ್ಥ್ಯವಿರುವ ಈ ದೀಪದ ತೂಕ ಕನಿಷ್ಟ ಒಂದು ಕ್ವಿಂಟಾಲ್ ಇರಬಹುದು. ವರ್ಷಕ್ಕೆ ಮೂರು ಬಾರಿ ಈ ದೀಪ ಜೀವ ಪಡೆಯುತ್ತದೆ. ಓಣಂನ ಹಿಂದಿನ ದಿನ ಇದರ ಕೆಳಗೆ ದೋಡ್ಡ.. ಪೂಕಳಂ ಬಿಡಿಸುತ್ತಾರೆ. ಒಬ್ಬರ ಮೇಲೊಬ್ಬರು ನಿಂತು ಮನುಷ್ಯ ಗೋಪುರ ಮಾಡಿ ದೀಪ ಇಳಿಬಿಟ್ಟ ಸರಪಳಿಗೂ ಹೂವನ್ನು ಹೆಣೆದು ಸಿದ್ಧಗೊಳಿಸುತ್ತಾರೆ.
ಪ್ರಾಂಶುಪಾಲರು ಓಣಂ ದಿನ ಮೊದಲ ದೀಪ ಬೆಳಗಿ ನಗುತ್ತಾರೆ. ಆ ದಿನವಿಡೀ ಹುಡುಗ ಹುಡುಗಿಯರ ಮುಖ ತುಂಬಾ ನಗುವೋ ನಗು. ಮಾವೆಲಿ ಬೆಳಗ್ಗೆಯೇ ಇಲ್ಲಿಗೆ ಬಂದರಂತೂ ಉಳಿದವರು ಅವನಿಗಾಗಿ ಪೂಕಳಂ ಹಾಕಿ ಮನೆ ಮನೆಯಲ್ಲಿ ಕಾಯುವುದು ಖಂಡಿತಾ ವೇಸ್ಟ್. ಅಷ್ಟು ಸಂಭ್ರಮ. ಹಾಗೆಂದು ಇದು ಇಲ್ಲಿನ ಮಲಯಾಳಿಗಳ ಹಬ್ಬ ಮಾತ್ರವಲ್ಲ. ಪೂಕಳಂ ಸ್ಪರ್ಧೆಯಲ್ಲಿ ಹೆಚ್ಚಾಗಿ ಪ್ರಶಸ್ತಿ ಗೆಲ್ಲುವ ತಂಡದಲ್ಲಿ ಕನ್ನಡಿಗರು ಇದ್ದೇ ಇರುತ್ತಿದ್ದರು.
ದೀಪಾವಳಿ ಬಂತೆಂದರೆ ಇನ್ನೊಮ್ಮೆ ದೀಪಕ್ಕೆ ಜೀವ. ದೀಪದಿಂದ ಎರಡಾಳು ಕೆಳಗೆ ಅಂದರೆ ನೆಲದಲ್ಲಿ ಸುತ್ತ ವೃತ್ತಾಕಾರದಲ್ಲಿ ಹಣತೆಗಳು. ಕೇರಳಸೀರೆ ಉಟ್ಟ ಕಾಲೇಜು ಹುಡುಗಿಯರು ಉರಿಯುತ್ತಿರುವ ಕ್ಯಾಂಡಲ್ ದೀಪ ಕೈಯಲ್ಲಿ ಹಿಡಿದುಕೊಂಡು ಈ ಹಣತೆಗಳನ್ನು ಬೆಳಗುವಾಗ 'ದೀಪ ಹಚ್ಚೋಣ.. ಸಂಭ್ರಮದಾರತಿ ಬೆಳಗೋಣ...' ಎನ್ನುತ್ತಾ ನಾವೆಲ್ಲ ಚಪ್ಪಾಳೆ ಬಡಿದು ಸಂಭ್ರಮಿಸುತ್ತಿದ್ದೆವು. ಒಂದು ವರ್ಷದ ದೀಪಾವಳಿಯಂದು ಮಾತ್ರ ಅಚಾತುರ್ಯವೊಂದು ನಡೆದು ಹೋಯಿತು. ಮೊದಲ ಬಾರಿ ಸೀರೆಯುಟ್ಟಿದ್ದ ಹುಡುಗಿಯೊಬ್ಬಳಿಗೆ ಗೊತ್ತಾಗದೇ ಹಿಂದಿನ ಹಣತೆಯ ದೀಪ ತಾಗಿ ಸೆರಗು ಸುಟ್ಟಿತು. ತಕ್ಷಣ ಉಳಿದವರು ನಂದಿಸಿದರಾದರೂ ಹುಡುಗಿ ಮಾತ್ರ ಮೂರ್ಚೆ ತಪ್ಪಿ ಬಿದ್ದಳು. ಕೂಡಲೇ ಆಸ್ಪತ್ರೆ ಸೇರಿಸಿದರು. ಒಂದೆರಡು ದಿನದಲ್ಲಿ ಅವಳು ಮತ್ತೆ ಕಾಲೇಜಿಗೆ ಬರಲಾರಂಭಿಸಿದಳು.
ಕಾಲೇಜಿನ ತುಂಬಾ ಗುಸು ಗುಸು ಆರಂಭವಾಗಿತ್ತು. ಯಾರೋ ಅವಳು ಜನ ಸರಿಯಿಲ್ಲ. ಮಾಪ್ಳೆಗಳ ಜತೆ ಹೆಚ್ಚು ಮಾತಾಡ್ತಾಳೆ. ಕೆಲ ದಿನಗಳ ಹಿಂದೆ ಇದೇ ದೀಪದ ಅಡಿಯಲ್ಲಿ ಅವ ಕೊಟ್ಟ ರೋಸನ್ನು ತಕ್ಕೊಂಡಿದ್ದಳಂತೆ. ಅದಕ್ಕೇ ಹಾಗಾಯಿತು ಎನ್ನುವವರು ಕೆಲವರು. ಹಾಸ್ಟೇಲಿನಲ್ಲಿ ಹುಡುಗಿಯೊಬ್ಬಳ ಪರ್ಸ್ ನಿಂದ ಒಂದು ಸಾವಿರ ಕಳುವಾಗಿತ್ತಂತೆ. ಆ ಹುಡುಗಿ ಈ ದೀಪದಡಿ ಬಂದು ಕದ್ದವರಿಗೆ ತಕ್ಕ ಶಾಸ್ತಿಯಾಗಲಿ ಎಂದು ಹರಕೆ ಹೊತ್ತಿದ್ದಳಂತೆ ಎನ್ನುವವರು. ಅಂತೂ ಆ ಹುಡುಗಿಯನ್ನು ನೋಡಿದವರೆಲ್ಲಾ ಇನ್ನೊಬ್ಬರ ಮುಖ ನೋಡಿಕೊಂಡು ನಗುವವರೇ. ಈ ಪ್ರಕರಣದಿಂದ ಹುಡುಗಿಗೆ ಎಷ್ಟು ನೋವಾಯಿತೋ ಗೊತ್ತಿಲ್ಲ. ಆದರೆ ಈ ದೀಪಕ್ಕೆ ಮಾತ್ರ ಇದ್ದಕಿದ್ದಂತೇ ಪಾವಿತ್ರ್ಯ ಬಂದು ಬಿಟ್ಟಿತ್ತು.
ಈ ಕಾಲೇಜಿನಲ್ಲಿ ಕ್ಲಾಸಿಗಿಂತ ಹೆಚ್ಚು ಮುಷ್ಕರ. ಕನಿಷ್ಟ 10 ವಿವಿಧ ವಿದ್ಯಾರ್ಥಿ ಸಂಘಟನೆಗಳು ಇಲ್ಲಿ ಕಾರ್ಯಾಚರಿಸುತ್ತಿವೆ. ತಿಂಗಳಿಗೆ ಎರಡಾದರೂ ಒಂದು ಸಂಘಟನೆಯ ಮುಷ್ಕರ ಇಲ್ಲದಿದ್ದರೆ ಶಕ್ತಿ ಪ್ರದರ್ಶನ ಮಾಡುವುದಾದರೂ ಎಂತು? ಮತ್ತಿರುವ 10 ದಿನದಲ್ಲಿ ರಜೆ ಕ್ಲಾಸು ಎಲ್ಲ ನಡೆಯಬೇಕು. ತೈಲ ಬೆಲೆ ಹೆಚ್ಚಾದರೆ, ಬಸ್ಸು ಟಿಕೇಟು ದರ ಏರಿದರೆ, ತಿರುವನಂತಪುರದಲ್ಲಿ ತನ್ನ ಸಂಘಟನೆಯ ಸದಸ್ಯ ವಿದ್ಯಾರ್ಥಿಗೆ ಬಸ್ಸು ತಾಗಿದರೆ, ಅಮೆರಿಕದ ಅಧ್ಯಕ್ಷರೊಂದಿಗೆ ಪ್ರಧಾನಿ ಪೋನಿನಲ್ಲಿ ಮಾತಾಡಿದರೆ.. ಹೀಗೆ ಮುಷ್ಕರಕ್ಕೆ ಧಾರಾಳ ಕಾರಣ ಇದ್ದೇ ಇರುತ್ತಿತ್ತು.
ಕಾಲೇಜಿಗೆ ಬರುವವರಿಗೆ ತರಗತಿ ಇದೆಯೋ ಇಲ್ಲವೋ ಎಂದು ತಿಳಿಯುವುದು ಈ ದೀಪದ ಬುಡದಲ್ಲಿಯೇ. ಅಂದರೆ ಅಲ್ಲಿ ಸೂಚನಾ ಫಲಕ ಇದೆಯೆಂದಲ್ಲ. ಅಲ್ಲಿ ಯಾರಾದರೂ ನಾಲ್ಕು ವಿದ್ಯಾರ್ಥಿಗಳು ದೀಪ ಹಿಡಿದು ನಿಂತರೆಂದರೆ ಅಂದು ಮುಷ್ಕರ ಇದೆ ಎಂದರ್ಥ. ಸರಿಯಾಗಿ 9.30ಕ್ಕೆ ಇಂಕಿಲಾಬ್ ಜಿಂದಾಬಾದ್ ಎಂದೋ ಅಥವಾ ಬೋಲೋ ಭಾರತ ಮಾತಾಕಿ ಜೈ ಎಂದೋ ಕೂಗು ಕೇಳುತ್ತದೆ. ದೀಪದಡಿಯಿಂದ ಆರಂಭಗೊಂಡ ಜಾಥಾ ಬಲ ಕಡೆಗೆ ಚಲಿಸಿ, ಮೇಲೆಹತ್ತಿ ಎಡಗಡೆಗೆ ತಿರುಗಿ ಇಳಿದು ಇಡೀ ಕಾಲೇಜು ಸುತ್ತಿ ಪ್ರಾಂಶುಪಾಲರ ಕೊಠಡಿಯೆದುರು ಬಂದು ಮನವಿ ಕೊಟ್ಟು ಮರಳಿ ದೀಪದಡಿ ಸೇರುವಾಗ ಭರ್ತಿ ಹತ್ತೂವರೆ. ಆಗ ಲಾಂಗ್ ಬೆಲ್ ಬಾರಿಸುತ್ತದೆ.
ಮನೆಗೆ ಹೋಗುವವರು ಮನೆಗೆ. ಮೂಲೆ ಮೂಲೆಯಲ್ಲಿ ನಿಂತು ಮಾತಾಡುವವರು ಅವರವರ ಜಾಗಕ್ಕೆ, ಕ್ರಿಕೆಟ್ ಆಡುವವರು ಗ್ರೌಂಡಿಗೆ, ಕೆಲವು ಗಾಂಧಿಗಳು ಲೈಬ್ರರಿಗೆ, ಇನ್ನು ಹಲವರು ಹನ್ನೊಂದು ಗಂಟೆಗೆ ಆರಂಭಗೊಳ್ಳುವ ಸಿನಿಮಾಗಳಿಗೆ ಹಾಜರಾಗುತ್ತಾರೆ. ಮಮ್ಮುಟ್ಟಿಯದ್ದೋ, ಲಾಲೇಟನದ್ದೋ, ಗೋಪಿಯದ್ದೋ ಹೊಸ ಸಿನಿಮಾ ರಿಲೀಸ್ ಆಗುತ್ತೆ ಎಂದರೆ ಖಂಡಿತ ಒಂದು ಸ್ಟ್ರೈಕ್ ಇದ್ದೇ ಇದೆ ಎನ್ನುವಷ್ಟು ಸಿನಿಮಾಪ್ರಿಯರು ಇಲ್ಲಿದ್ದರು.
ಇದು ಕಾಲೇಜಿನ ಆಡಿಟೋರಿಯಂ. ಈ ವೇದಿಕೆಗೆ ಭಯಂಕರ ಇತಿಹಾಸವಿದೆ. ಇಲ್ಲಿ ಸಾಧಾರಣ ಎಲ್ಲ ಮಹನೀಯರೂ ಬಂದಿದ್ದಾರೆ. ಆದರೆ ಯಾರ ಮಾತನ್ನೂ ಪೂರ್ತಿಯಾಗಿ ಯಾರೂ ಕೇಳಿಸಿಕೊಂಡದ್ದಿಲ್ಲ. ಯಾಕೆ ಗೊತ್ತಾ? ಅವರು ಮಾತು ಆರಂಭಿಸುವ ಮೊದಲೇ ಕೇಕೆ, ಕೂಗು, ರಾಕೆಟ್, ಕೊನೆಗೆ ಪೆಟ್ಟು ಹೊಡೆದಾಟ ಇದು ಮಾಮೂಲಿ.
ಸುಧಾಮ ಕಾಲೇಜಿನ ಸೆಕ್ರೇಟರಿ ಆಗಿದ್ದ ಕಾಲ. ಕಾಲೇಜು ವಾರ್ಷಿಕೋತ್ಸವಕ್ಕೆ ತನ್ನ ಮಾತೃಪಕ್ಷದ ಮುಖಂಡರನ್ನು ಅತಿಥಿಗಳಾಗಿ ಕರೆದರೆಂದು ಉಳಿದ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು. ಕ್ಯಾರೇ ಅನ್ನದೇ ಕಾರ್ಯಕ್ರಮ ನಡೆಸಲು ಯೂನಿಯನ್ ನಿರ್ಧರಿಸಿತು. ಮೊದಲೇ ಅನುಕಂಪದ ಆಧಾರದ ಮೇಲೆ ಗೆದ್ದ ಪಕ್ಷದ ಮೇಲೆ ಸೋತವರಿಗೆ ಸಿಟ್ಟಿತ್ತು.
ಅನುಕಂಪ ಏನಂತೀರಾ. ಯೂನಿಯನ್ ಚುನಾವಣೆ ಘೋಷಣೆಯಾಗಿತ್ತು. ಚುನಾವಣೆಗೆ ಮೂರೇ ದಿನ ಬಾಕಿ. ಮದ್ಯಾಹ್ನ ಚುನಾವಣಾ ಪ್ರಚಾರ ರ್ಯಾಲಿ ನಡೆಸಲು ಇದ್ದ ಸಂಘಟನೆಯವರೆಲ್ಲಾ ಸಿದ್ಧರಾಗಿದ್ದರು. ಸಣ್ಣ ಪುಟ್ಟ ಸಂಘಟನೆಯವರೆಲ್ಲಾ ಮೂಲೆ ಮೂಲೆಯಿಂದ ಜಾಥಾ ಆರಂಭಿಸಿದ್ದರು. ಮುಖ್ಯ ಸಂಘಟನೆಯಾದ ಎಎನ್ಎಫ್ ಮತ್ತು ಬಿಎನ್ಐಯವರ ನಡುವೆ ಜಿದ್ದಾ ಜಿದ್ದಿ. ದೀಪದಡಿಯಿಂದ ಜಾಥಾ ತೊಡಗಬೇಕೆಂಬ ಹಠ. ಬಣ್ಣ ಬಣ್ಣದ ಕೊಡೆಗಳು, ಕುಣಿಯುವ ಗೊಂಬೆಗಳು, ಚೆಂಡೆ ತಾಳ ಬೊಬ್ಬೆ ಎಲ್ಲ ಶುರುವಾಯಿತು. ಎರಡೂ ತಂಡಗಳು ಹತ್ತಿರ..ಹತ್ತಿರ. ಯುವಕರ ರಕ್ತ ಕುದಿಯಿತು. ಯಾರೋ ಒಬ್ಬ ಇನ್ನೊಬ್ಬನಿಗೆ ತಾಗಿದ. ರಣರಂಗವಾಯಿತು.
ಚುನಾವಣೆಯಲ್ಲಿ ಸೆಕ್ರೆಟರಿ ಸ್ಥಾನಕ್ಕೆ ಸ್ಪರ್ಥಿಸಿದ್ದ ಬಿಎನ್ಐಯ ಸುಧಾಮನ ಕೈಯಲ್ಲಿದ್ದ ಚಕ್ರತಾಳ ಕೈಜಾರಿ ಕೆಳಕ್ಕೆ ಅವನ ಕಾಲಿಗೇ ಬಿತ್ತು. ಕಾಲಿನ ಕಿರುಬೆರಳು ತುಂಡಾಗಿ ರಟ್ಟಿತ್ತು. ಅಮ್ಮಾ.. ಎನ್ನುತ್ತಾ ಅಲ್ಲೇ ಕುಸಿದ. ಎಲ್ಲರೂ ಗೊಂದಲದಿಂದ ಆಚೀಚೆ ಓಡತೊಡಗಿದರು. ಬಿದ್ದು ಕಾಲನ್ನು ಗಟ್ಟಿ ಹಿಡಿದುಕೊಂಡಿದ್ದ ಸುಧಾಮನ ಕೈಗೆ ಯಾರೋ ರೀಪಿನ ತುಂಡಿನಿಂದ ಬಡಿದರು. ಲಟಕ್ ಎಂದಿತು ಕೈ. ಮೊದಲೇ ಹೊರಗೆ ರೆಡಿಯಾಗಿ ನಿಂತಿದ್ದ ಪೋಲೀಸ್ ಬಸ್ಸಿನಿಂದ ಲಾಠಿ ಮತ್ತು ರಕ್ಷಣಾ ಗುರಾಣಿ ಹಿಡಿದವರು ಕಾಲೇಜಿನೊಳಗೆ ನುಗ್ಗಿದರು. ಮತ್ತೆ ಹತ್ತು ನಿಮಿಷದಲ್ಲಿ ಎಲ್ಲಾ ಸ್ತಬ್ಧ.
ಮರುದಿನ ಗಲಾಟೆ ಜೋರಾಗುತ್ತೆ ಎಂದು ಭಾವಿಸಿದವರಿಗೆ ಅಚ್ಚರಿ ಕಾದಿತ್ತು. ಪ್ರಾಂಶುಪಾಲರು ಜಾಥಾಗಳನ್ನು ನಡೆಸಬಾರದು ಎಂದು ನೋಟಿಸ್ ಕಳುಹಿಸಿದರು. ಎಲ್ಲವೂ ಶಾಂತ.
ಚುನಾವಣೆಯ ದಿನ. ಕಾಲೇಜಿನ ಮುಖ್ಯದ್ವಾರ ಮಾತ್ರ ತೆರೆದಿತ್ತು. ಅದರ ಬಳಿಯಲ್ಲಿ ಹೊರಗೆ ಇಡೀ ಕಾಲಿಗೆ ಮತ್ತು ಕೈಗೆ ಬ್ಯಾಂಡೇಜು ಸುತ್ತಿಕೊಂಡು ವೀಲ್ ಚಯರಿನಲ್ಲಿ ಕುಳಿತು ಬಂದವರಿಗೆಲ್ಲ ಕಷ್ಟದಲ್ಲಿ ವಿಪರೀತ ನೋವನ್ನು ನಟಿಸುತ್ತಾ ಸುಧಾಮ ಮತ ಯಾಚಿಸುತ್ತಿದ್ದ. ಬಸ್ಸಿಂದ ಇಳಿದು ಬಂದ ಹುಡುಗಿಯರೆಲ್ಲಾ ಪಾಪ ಎಂಬಂತೆ ಮುಖ ಮಾಡಿ ಮುಂದೆ ಹೋಗುತ್ತಿದ್ದರು. ಎಎನ್ಎಫ್ ನವರಿಗೆ ವಿಪರೀತ ಸಿಟ್ಟು ಬಂದರೂ ಏನೂ ಮಾಡುವಂತಿಲ್ಲ. ಪೊಲೀಸರು ಅಲ್ಲೇ ಇದ್ದಾರೆ. ಒಳಗೊಳಗೆ ಚಡಪಡಿಸಿದರು.
ಫಲಿತಾಂಶ ಬಂತು. ಸುಧಾಮನ ಬಣ ಭರ್ಜರಿ ಜಯ ಸಾಧಿಸಿತ್ತು.
ತೂಗುದೀಪವನ್ನು ಬೆಳಗಿ ಆಡಿಟೋರಿಯಂಗೆ ಅತಿಥಿಗಳೆಲ್ಲಾ ಬಂದರು. ಕಾಲೇಜು ವಾರ್ಷಿಕೋತ್ಸವ ಆರಂಭವಾಯಿತು. ಒಂದೆಡೆ ನಾವು ಕನ್ನಡದ ಅತಿಥಿಗಳನ್ನು ಕರೆದಿಲ್ಲ ಎಂದು ಆಕ್ಷೇಪಿಸುತ್ತಿದ್ದೆವು. ಕನ್ನಡ ಕಲಿಯುವುದರಲ್ಲಿ ಹುಡುಗಿಯರೇ ಹೆಚ್ಚಿದ್ದದ್ದರಿಂದ ಜಗಳ ಆಗುವ ಸೂಚನೆಯರಿತ ನಾವು ಹುಡುಗಿಯರನ್ನೆಲ್ಲಾ ಸುತ್ತ ನಿಲ್ಲಿಸಿ ನಡುವಲ್ಲಿ ನಿಂತು ಧಿಕ್ಕಾರ ಕೂಗಿದೆವು. ಆದರೆ ಜಾಣ ಸುಧಾಮ ನಮ್ಮಲ್ಲಿನದ್ದೇ ಅಧ್ಯಾಪಕರೊಬ್ಬರನ್ನು ವೇದಿಕೆಗೆ ಕರೆತಂದು ಕುಳಿತುಕೊಳ್ಳಿಸಿಯೇ ಬಿಟ್ಟ. ನಾವು ತಣ್ಣಗಾದೆವು. ಇದರಿಂದ ತೀರಾ ಬೇಸರಗೊಂಡದ್ದು ಎಎನ್ಎಫ್ ನವರು. ಅವರು ನಮ್ಮ ಪ್ರತಿಭಟನೆಯಿಂದ ಕಾರ್ಯಕ್ರಮ ನಿಲ್ಲುತ್ತೆ ಎಂದು ಭಾವಿಸಿದ್ದರು. ಆದರೆ ಹಾಗಾಗಲಿಲ್ಲ. ಹಿಂದೆ ನಿಂತಿದ್ದ ಯಾರೋ ಒಬ್ಬ ಎದುರಿನ ಬೆಂಚು ಮೇಲೆ ನಿಂತಿದ್ದವನನ್ನು ದೂಡಿದ. ಒಮ್ಮೆಗೆ ಐದಾರು ಜನ ಬಿದ್ದರು. ಕೆಲ ಬಾಟ್ಲಿಗಳು ಒಡೆದ ಸದ್ದಾಯಿತು. ಮತ್ತೇನಾಯಿತೋ ಯಾರಿಗೂ ಗೊತ್ತಿಲ್ಲ.
ಅಲ್ಲಿದೆಯಲ್ಲಾ.. ಆ ಸ್ಮಾರಕ ಅದು ಆ ದೊಂಬಿಯ ಕುರುಹು. ದೊಂಬಿಯಲ್ಲಿ ಏನಾಯಿತು ಗೊತ್ತಾ? ನಮ್ಮ ಜತೆಗೆ ಕನ್ನಡ ಭಾಷಾ ತರಗತಿಯಲ್ಲಿ ಕುಳಿತುಕೊಳ್ಳುತ್ತಿದ್ದ ಇಸ್ಮಾಯಿಲ್ ಮತ್ತು ದೃಷ್ಟಿ ದೋಷದಿಂದ ಓದಲು ಕಷ್ಟಪಡುತ್ತಿದ್ದ ಸೋಡ ಗ್ಲಾಸಿನ ಮಲಯಾಳಿ ರಾಮು ಹೊಟ್ಟೆಗೆ ಯಾರೋ ಬಾಟ್ಲಿ ಚೂರನ್ನು ಚುಚ್ಚಿದ್ದರು. ಇಬ್ಬರೂ ರಕ್ತ ಸೋರಿ ವಿಲವಿಲನೆ ಒದ್ದಾಡುತ್ತಿದ್ದರಂತೆ. ಪೊಲೀಸರು ಆಸ್ಪತ್ರೆ ಸೇರಿಸಿದರೂ ಬದುಕು ಸಿಗಲಿಲ್ಲ. ಒಂದು ತಿಂಗಳು ಕಾಲೇಜು ಮುಚ್ಚಿತು. ವಿದ್ಯಾರ್ಥಿ ಸಂಘಟನೆಗಳ ನಡುವೆ ವಾರಗಟ್ಟಲೆ ಶಾಂತಿ ಸೌಹಾರ್ದ ಸಭೆ ನಡೆಯಿತು. ಮತ್ತೆ ಕಾಲೇಜು ತೆರೆಯಿತು.
ಕಾಲೇಜು ಆರಂಭಗೊಂಡ ದಿನ ಒಂದು ಎಸೆಂಬ್ಲಿ ನಡೆಯಿತು. ಎಲ್ಲರೂ ಇಲ್ಲೇ ಈ ಸ್ಮಾರಕದ ಎದುರಲ್ಲಿ ಸೇರಿದೆವು. ಗುರುಗಳೊಬ್ಬರು ಸ್ಮಾರಕದಲ್ಲಿರುವ ಹಸ್ತ ಲಾಘವದ ವಿನ್ಯಾಸವನ್ನು ತೋರಿ ಇದರಲ್ಲಿರುವ ಒಂದು ಕೈ ಇಸ್ಮಾಯಿಲ್ನದ್ದು. ಇನ್ನೊಂದು ರಾಮುವಿನದ್ದು. ಅವರಿಬ್ಬರ ಮನಸ್ಸು ನಮ್ಮ ನಡುವೆ ಇದೆ ಎಂದು ಕಣ್ಣೊರೆಸಿಕೊಂಡರು. ತಲೆ ಬಾಗಿಸಿ ನಾವು ನಮ್ಮ ನಾಚಿಕೆಯನ್ನೂ ಗೌರವವನ್ನೂ ಸಮರ್ಪಿಸಿದೆವು. ತೀರಾ ಭಾವುಕರಂತೆ ಕಂಡ ಗುರುಗಳು ಸ್ಮಾರಕದಲ್ಲಿ ಹಚ್ಚಿಟ್ಟಿದ್ದ ಹಣತೆಯನ್ನು ಕೈಯಲ್ಲಿ ಹಿಡಿದುಕೊಂಡು ತೂಗು ದೀಪದ ಬಳಿ ಬಂದರು. ಕೈಗಳನ್ನೆತ್ತಿ ತೂಗುದೀಪವನ್ನು ಬೆಳಗಿದೆವು. ಹಾಗೆ ಹೊರಟೆವು. ಹೊರಗೆ ಮಾವಿನ ಮರದಡಿಯ ಕಟ್ಟೆಯಲ್ಲಿ ಇಸ್ಮಾಯಿಲ್ನ ತಾಯಿ ಮತ್ತು ರಾಮುವಿನ ತಾಯಿ ಕುಳಿತುಕೊಂಡು ಹೊರಬರುತ್ತಿದ್ದ ನಮ್ಮನ್ನು ನೋಡುತ್ತಾ ಕಣ್ಣೊರೆಸಿಕೊಳ್ಳುತ್ತಿದ್ದರು.
ಡಾ.ಧನಂಜಯ ಕುಂಬ್ಳೆ
ಕನ್ನಡ ಉಪನ್ಯಾಸಕ, ಆಳ್ವಾಸ್ ಪದವಿ ಕಾಲೇಜು, ವಿದ್ಯಾಗಿರಿ, ಮೂಡುಬಿದಿರೆ-574227
ದೂ: 9448911190
Video
