ಈ ಕನಸು

ಇದು ವರ್ಷದ ಕನಸು

ಈ ಕನಸು.ಕಾಂಗೆ ಸುದ್ದಿ,ವಿಶೇಷ ಲೇಖನ ಬರಹಗಳನ್ನು ಈ ವಿಳಾಸಕ್ಕೆ ಕಳುಹಿಸಿ.info@ekanasu.com
10:20 PM

ಮತ್ಸ್ಯಾಸನ

Posted by ekanasu

ವೈವಿಧ್ಯ

ಮೊದಲು ಪದ್ಮಾಸನದಲ್ಲಿ ಕುಳಿತುಕೊಳ್ಳಬೇಕು. ಆಮೇಲೆ ಹಿಂದಕ್ಕೆ ಬಗ್ಗಿ ನೆಲದ ಮೇಲೆ ಮಲಗಬೇಕು. ಅನಂತರ ಉಸಿರು ಬಿಟ್ಟು ಎದೆ, ಕುತ್ತಿಗೆ ನೆಲದಿಂದ ಮೇಲೆ ಮಾಡಿ ಬೆನ್ನು ಬಗ್ಗಿಸಿ ತಲೆಯ ನಡು ನೆತ್ತಿಯನ್ನು ನೆಲದ ಮೇಲೆ ಇಡಬೇಕು. ಕಾಲ ಬೆರಳುಗಳನ್ನು ಕೈಗಳಿಂದ ಹಿಡಿದಿರಬೇಕು. ಈ ಆಸನದಲ್ಲಿ ಸಮ ಉಸಿರಾಟ ನಡೆಸುತ್ತಾ ಅರ್ಧ ನಿಮಿಷದಿಂದ ಒಂದು ನಿಮಿಷ ಕಾಲ ಇರಬೇಕು.


ಉಪಯೋಗಗಳು :
ಈ ಆಸನದಲ್ಲಿ ಬೆನ್ನಿಗೆ, ಹೊಟ್ಟೆಗೆ, ಕುತ್ತಿಗೆಗೆ ಹೆಚ್ಚು ವ್ಯಾಯಾಮ ದೊರಕಿ ಬೆನ್ನು ನೋವು, ಕುತ್ತಿಗೆ ನೋವು ಪರಿಹಾರವಾಗಲು ಸಹಕಾರಿಯಾಗುತ್ತದೆ. ಬೆನ್ನು ಹಾಗೂ ಎದೆಯ ಭಾಗಗಳು ವಿಶಾಲವಾಗಲು ಉಪಕಾರಿಯಾಗುತ್ತದೆ. ಮೂಲವ್ಯಾದಿ, ಅಸ್ತಮಾ ಗುಣ ಹೊಂದಲು ಹಾಗೂ ಥೈರೊಡ್ ಗ್ರಂಥಿ ಮೊದಲಾದ ಅನೇಕ ಗ್ರಂಥಿಗಳ ಆರೋಗ್ಯ ವರ್ಧನೆಗೆ ಈ ಆಸನವು ಉಪಯುಕ್ತವಾಗಿದೆ. ಮೀನಿನ ಹೆಸರನ್ನು ಈ ಆಸನಕ್ಕೆ ಇಡಲಾಗಿದೆ.


-'ಯೋಗರತ್ನ' ಶ್ರೀ ಗೋಪಾಲಕೃಷ್ಣ ದೇಲಂಪಾಡಿ

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮೂಡಬಿದಿರೆ: ಕರಾವಳಿಯಲ್ಲಿ ಮುಂಗಾರು ಮಳೆ ಆರಂಭಗೊಂಡಿದೆ. ಮೇ.31ರಂದು ಅಬ್ಬರದ ಸಿಡಿಲು,ಗಾಳಿಯೊಂದಿಗೆ ಭರ್ಜರಿ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಹು ಭಾಗಗಳಲ್ಲಿ ಮಳೆ ಸುರಿದಿದೆ. ತನ್ಮೂಲಕ ಮುಂಗಾರು ಮಳೆಯ ಒಡ್ಡೋಲಗವಾಗಿದೆ. ಈ ಬಾರಿ ಅತ್ಯಂತ ಸಮರ್ಪಕವಾಗಿಯೇ ಮುಂಗಾರು ಪ್ರವೇಶಗೊಂಡಿದೆ ಎಂದರೆ ತಪ್ಪಾಗಲಾರದು. ಜೂನ್ 1ರಂದು ಮಳೆಗಾಲ ಆರಂಭ ಎಂಬಂತೆ ಈ ಹಿಂದೆ ಇತ್ತು.ಆದರೆ ಬರ ಬರುತ್ತಾ ಹವಾಮಾನದ ವೈಪರೀತ್ಯ, ಪ್ರಕೃತಿಯಲ್ಲಿನ ಬದಲಾವಣೆಯಿಂದ ಮುಂಗಾರು ನಿಗಧಿತ ಸಮಯಕ್ಕೆ ಪ್ರಾರಂಭಗೊಳ್ಳುತ್ತಿರಲಿಲ್ಲ.ಇದೀಗ ಮೇ ಅಂತ್ಯದಲ್ಲೇ ಮಳೆಯ ಆರಂಭವಾಗಿದೆ.

ಮುಂದೆ ಓದಿ

ಈ ಕನಸು ಅವಾರ್ಡ್

ವರ್ಷಧಾರೆ

ಪ್ರಥ್ವಿಗೆ ವರುಣನ
ಮೊದಲ ಚುಂಬನ

- ಮಲ್ಲಿಕಾ ಭಟ್, ಪರಪ್ಪಾಡಿ.

ಮುಂದೆ ಓದಿ

ವೈವಿಧ್ಯ
ಮಲೆನಾಡ ಮಡಿಲಲ್ಲಿ ಮರದ ತುಂಬಾ ಮಧು ಮಕರಂದ

ಸಮೃದ್ದ ಕಾಡು ಯಲ್ಲಾಪುರದಲ್ಲಿ ವನ್ಯಜೀವಸಂಕುಲಕ್ಕೆನು ಕೊರತೆಯಿಲ್ಲ. ಕಾಡು ಸುತ್ತುವ ಹವ್ಯಾಸವೋಂದಿದ್ದರೆ ಪ್ರತಿ ಗಳಿಗೆಯು ಹೊಸ ಅನುಭವ. ಎಲ್ಲು ಕಾಣಸಿಗದಂತ ಹಲವಾರು ಸೋಜಿಗದ ಸಂಗತಿಗಳು ಇಲ್ಲಿ ತೆರದುಕೊಳ್ಳುತ್ತವೆ. ಅಂತವುಗಳಲ್ಲಿ ಜೇನುಗೂಡುಗಳು ಒಂದು. ಇಲ್ಲಿ ಒಂದೆ ಮರದ ಕೊಂಬೆಗಳಿಗೆ ನುರಾರು ಜೇನುಗೂಡುಗಳು ಕಂಡುಬಂದರೂ ಅಚ್ಚರಿಪಡಬೇಕಾಗಿಲ್ಲ. ಅಪರೂಪಕೊಮ್ಮೆ ಇಂಥವುಗಳನ್ನು ನೋಡುವ ಭಾಗ್ಯ ನಮ್ಮದಾಗಿರುತ್ತದೆ. ಲಕ್ಷಾಂತರ ಹುಳುಗಳು ಪಟ್ಟ ಪರಿಶ್ರಮದ ಫಲ ಅವರಿಗೆ ಲಭಿಸುವದು ಅಷ್ಟಕಷ್ಟೆ!
ಎಷ್ಟೋ ಬಾರಿ ಮಾನವನ ಸ್ವಾರ್ಥಕ್ಕೆ ಜೇನುಗುಡುಗಳೂ ಬಲಿಯಾದರೂ ಸಹ, ಮರುವರ್ಷ ಅದೇ ಮರಕ್ಕೆ ಜೇನುಹುಳುಗಳು ಆಗಮಿಸಿ ಸಂಸಾರ ಹೂಡುವದು ವಿಚಿತ್ರ.ಅದಕ್ಕಾಗಿಯೇ ಬೃಹದಾಕಾರವಾದ ಮಾನವನಿಗೂ ಏರಲಸಾಧ್ಯ ಎಂಬ ಮರಗಳನ್ನು ತಮ್ಮ ವಾಸ್ತವ್ಯಕ್ಕೆ ಬಳಸುತ್ತಿರಬೇಕು!.


ಸೂರ್ಯ ನಿದ್ರಿಸಿದ ಸಮಯದಲ್ಲಿ ಕಾಡಿನ ಬೆಟ್ಟವನ್ನೇರಿ, ಮರಕ್ಕೆ ಹಗ್ಗವನ್ನೆಸದು ಅದರ ಮೂಲಕವೇ ಜೋತಾಡಿ, ಜೇನುಗೂಡಿಗೆ ಹೊಗೆಯನ್ನು ಹಾಕಿ,ಒಂದೆರಡು ಹುಳುವಿನಿಂದ ಕಚ್ಚಿಸಿಕೋಂಡು ಹುಳುಗಳನ್ನು ಹೊರದಬ್ಬಿದ ಮಾತ್ರಕ್ಕೆ ಸಿಹಿ ಜೆನು ಸಿಗದು.ನಂತರ ಅನೇಕ ತಂತ್ರಗಳನ್ನು ಬಳಸಿ,ಹರಸಾಹಸ ಪಡುತ್ತ ಮರದಲ್ಲಿ ಜೋತಾಡುತ್ತಲೆ ಜೇನುತುಪ್ಪವನ್ನು ಕೆಳಗಿಳಿಸುವದು ಬಲು ಅಪಾಯಕಾರಿ. ಕೆಳಗಿಳಿಸಿದ ತುಪ್ಪವನ್ನು ಬೇರೆಯವರ ಕಣ್ತಪ್ಪಿಸಿ ಮನೆಗೆ ಸಾಗಿಸುವದು ಮನರಂಜನಾಕಾರಿಯೂ ಕೂಡ...!


-ಅಚ್ಯುತಕುಮಾರ, ಯಲ್ಲಾಪುರ

ಮುಂದೆ ಓದಿ

ರಾಜ್ಯ - ರಾಷ್ಟ್ರ

ಮಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ಶೀಘ್ರವೇ ಸ್ಲೀಪರ್ ಕೋಚ್ ಬಸ್ಸುಗಳ ಸೇವೆಯನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆರಂಭಿಸಲಿದೆ ಎಂದು ರಾಜ್ಯ ವಿಧಾನ ಸಭೆಯ ಉಪ ಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್ ಅವರು ಹೇಳಿದ್ದಾರೆ.ಅವರು ಮಂಗಳೂರಿನ ಬಿಜೈ ಕೆ.ಎಸ್. ಆರ್. ಟಿ.ಸಿ ಬಸ್ಸು ನಿಲ್ದಾಣ ದಲ್ಲಿ ಸರ್ಕಾರದ ನೆರವಿ ನೊಂದಿಗೆ ನಡೆಯುತ್ತಿ ರುವ ಯಾತ್ರಿ ನಿವಾಸ,ಮೂಲ ಭೂತ ಸೌಕರ್ಯಗಳ ಕಾಮ ಗಾರಿ ಯನ್ನು ವೀಕ್ಷಣೆ ಮಾಡಿದ ನಂತರ ಸುದ್ದಿ ಗಾರ ರೊಂದಿಗೆ ಮಾತ ನಾಡಿದರು.ಮೊದಲ ಹಂತ ವಾಗಿ 10 ಬಸ್ಸು ಗಳು ಈ ಸೇವೆಗೆ ಲಭ್ಯ ವಾಗ ಲಿದ್ದು,ಇವು ಗಳಲ್ಲಿ 6 ಬಸ್ ಮಂಗಳೂರಿ ನಿಂದ ಮತ್ತು 4 ಬಸ್ ಕುಂದಾ ಪುರ ದಿಂದ ಸೇವೆಯನ್ನು ಆರಂಭಿಸಲಿವೆ ಎಂದರು.


ಮಂಗಳೂರು ಕೆಸ್.ಆರ್,ಟಿ.ಸಿ. ಬಸ್ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಕಾಮಗಾರಿ ಪ್ರಗತಿಯಲ್ಲಿದ್ದು,ಈಗಾಗಲೇ ಸರ್ಕಾರ 3 ಕೋಟಿ.ರೂ.ಗಳನ್ನು ನೀಡಿದೆ.ಕಾಮಾಗಾರಿ ಪೂರ್ಣಗೊಳಿಸಲು ಇನ್ನೂ 25 ಲಕ್ಷ ರೂ.ಗಳ ಅಗತ್ಯವಿದ್ದು,ಕೂಡಲೇ ಈ ಹಣ ಬಿಡುಗಡೆ ಮಾಡುವಂತೆ ಸಾರಿಗೆ ಸಚಿವರಲ್ಲಿ ವಿನಂತಿ ಮಾಡಲಾಗಿದೆ ಎಂದರು.ನಗರದ ಬೆಂದೂರು ವೆಲ್ ನಲ್ಲಿರುವ ಸಂಸ್ಥೆಯ 1.06 ಎಕರೆ ಜಾಗದಲ್ಲಿ ಖಾಸಾಗಿ ಸಹ ಭಾಗಿತ್ವದಲ್ಲಿ 20 ಕೋಟಿ ರೂ.ಗಳ ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.ಸಾರ್ವಜನಿಕರ ದೂರುಗಳು ಬಂದರೆ ಆ ದೂರುಗಳಿಗೆ ತಕ್ಷಣ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಕರುಂಬಯ್ಯ ಉಪಸ್ಥಿತರಿದ್ದರು.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಮಂಗಳೂರು:ಅಭಿವೃದ್ದಿ ಹೊಂದಿದ ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಅರಣ್ಯ ಪ್ರದೇಶ ಕಡಿಮೆಯಿದ್ದು, ರಾಜ್ಯದಲ್ಲಿ ಅರಣ್ಯವನ್ನು ಸಂರಕ್ಷಿಸಲು ಮತ್ತು ಅರಣ್ಯೇತರ ಭೂಮಿಯಲ್ಲಿ ಅರಣ್ಯ ಬೆಳೆಸಲು ಮುಖ್ಯಮಂತ್ರಿಗಳು 150 ಕೋಟಿ ರೂ. ಗಳ ಹೆಚ್ಚುವರಿ ಅನುದಾನ ನೀಡಿರುವುದಾಗಿ ಸಣ್ಣ ಕೈಗಾರಿಕೆ ಮತ್ತು ಅರಣ್ಯ ಸಚಿವ ಸಿ. ಎಚ್.ವಿಜಯಶಂಕರ್ ಹೇಳಿದರು.ಅವರಿಂದು ಗುಂಡ್ಯದಲ್ಲಿ ಅರಣ್ಯ ಇಲಾಖೆಯ ಪ್ಲಾಂಟೇಷನ್ ಗಳ ವೀಕ್ಷಣೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಅರಣ್ಯ ಇಲಾಖೆ ಸಹಜ ಮಳೆ, ಶುದ್ಧ ಗಾಳಿ ಹಾಗೂ ಹಸುರೀಕರಣದ ಉದ್ದೇಶವನ್ನಿರಿಸಿ ವಿನೂತನ ಯೋಜನೆಗಳನ್ನು ರೂಪಿಸಿದ್ದು ಅನುಷ್ಠಾನಕ್ಕೆ ತರಲು ಹಣಕಾಸಿನ ಕೊರತೆ ಇಲ್ಲ ಎಂದು ಅವರು ನುಡಿದರು.


ಕೃಷಿ ಪ್ರೋತ್ಸಾಹ ಯೋಜನೆಯಡಿ ಅರಣ್ಯ ಇಲಾಖೆಯು ಕೃಷಿಕರಿಗೆ ತನ್ನದೇ ಆದ ಕೊಡುಗೆಯನ್ನು ನೀಡಲು ತೀರ್ಮಾನಿಸಿದ್ದು, ಕೃಷಿಕರು ಬಯಸಿದ ಸಸಿ ನೀಡಲು ನಿರ್ಧರಿಸಲಾಗಿದೆ. ರೈತರಿಂದ ಈ ಸಂಬಂಧ ಅರ್ಜಿ ಪಡೆದು ಆರ್ ಟಿ ಸಿ ಆಧಾರದಲ್ಲಿ ಉಚಿತವಾಗಿ ಸಸಿಗಳನ್ನು ಹಂಚಲಾಗುವುದಲ್ಲದೆ ಒಂದು ಸಸಿಗೆ ಮೂರು ವರ್ಷ ಅವುಗಳ ನಿರ್ವಹಣೆಗೆ 45 ರೂ.ಗಳಂತೆ ಅನುದಾನವನ್ನೂ ನೀಡಲಾಗುವುದು ಎಂದರು. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಹಾಗೂ ಅರಣ್ಯ ಇಲಾಖೆಯಲ್ಲಿ ಅಜರ್ಿಗಳು ಲಭ್ಯವಾಗಲಿದ್ದು, ನಮೂನೆ ಯನ್ನು ಸಿದ್ಧಪಡಿಸಲಾಗಿದ್ದು ಅಂತಿಮಗೊಳಿಸಬೇಕಿದೆ ಎಂದರು.ಅರಣ್ಯ ಇಲಾಖೆ ಏಕ ರೂಪದ ಸಸ್ಯೋ ತ್ಪಾದನೆಗೆ ಇತಿಶ್ರೀ ಹಾಡಿದ್ದು, ನೀಲ ಗಿರಿ ಯನ್ನು ನಿಷೇ ಧಿಸ ಲಾಗಿದೆ. ಅಕೇಷಿ ಯವನ್ನು ಬೆಟ್ಟ ಗಳ ಮೇಲೆ ಮತ್ತು ಸಮುದ್ರ ದ ಅಂಚಿ ನಲ್ಲಿ ಬೆಳೆ ಯಲು ಮಾತ್ರ ಅವ ಕಾಶ ನೀಡ ಲಾಗಿದೆ ಎಂದರು.ಸಸಿ ಗಳನ್ನು ಉತ್ಪಾ ದಿಸಿ, ವಿತ ರಿಸಲು ರಾಜ್ಯ ಕೃಷಿ ವಿಶ್ವ ವಿದ್ಯಾಲಯ, ತೋಟಗಾರಿಕೆ ಕೇಂದ್ರ ಸರ್ಕಾರದ ಕೃಷಿ, ಸಂಶೋಧನಾ ಕೇಂದ್ರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಡಂಬಡಿಕೆ ಮಾಡಲಾಗಿದೆ. ಮುಂದಿನ ವರ್ಷದಿಂದ ಅವರಿಂದ ಸಸಿ ಪಡೆದು ರೈತರಿಗೆ ವಿತರಿಸಲು ಹಾಗೂ ಗುಣಮಟ್ಟದ ಖಾತ್ರಿಗೆ ಇಲಾಖೆಯ ಸಂಶೋಧನಾ ವಿಭಾಗಗಳನ್ನು ಬಳಸಿಕೊಳ್ಳುವ ಬಗ್ಗೆಯೂ ತಜ್ಞರ ಅಭಿಪ್ರಾಯ ಪಡೆಯಲಾಗಿದೆ ಎಂದರು. ಪ್ರತೀ ಜಿಲ್ಲೆಯಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕ್ ಮಾದರಿಯಲ್ಲಿ ಟ್ರೀ ಪಾಕ್ರ್ ಮಾಡುವ ಯೋಜನೆ ಹೊಂದಿದೆ. ಮಂಗಳೂರಿನಲ್ಲಿ ಪಿಲಿಕುಳದಲ್ಲಿ ಟ್ರೀ ಪಾರ್ಕ್ ಮಾಡುವ ಸಂಬಂಧ ಅಧಿಕಾರಿಗಳು ಸ್ಥಳ ಗುರುತಿಸಿದ್ದಾರೆ ಎಂದರು.
ನಿತ್ಯ ಯಾತ್ರಿಕರು, ಪ್ರವಾಸಿಗರು ಬರುವ ದೇವಾಲಯಗಳ ಪ್ರದೇಶಗಳಲ್ಲಿ ದೇವರೊಂದಿಗೆ ವನವನ್ನೂ ನೋಡಿ ಆನಂದಿಸುವಂತಾಗಲು ಪ್ರತೀ ಬೆಟ್ಟದಲ್ಲಿ ಸಾಂಪ್ರಾದಾಯಿಕ, ಅಳಿವಿನಂಚಿನ ಸಸ್ಯಗಳನ್ನು ಬೆಳೆಸಲಾಗುವುದು. ಪ್ರತೀ ದೇವವನದಲ್ಲಿ ಅರಣ್ಯ ಇಲಾಖೆಯಿಂದ ನರ್ಸರಿಯನ್ನೂ ಆರಂಭಿಸಲು ಚಿಂತಿಸಲಾಗಿದೆ ಎಂದು ಅರಣ್ಯ ಸಚಿವರು ಹೇಳಿದರು.
ಕಾಶ್ಮೀರದ ದಾಲ್ ಸರೋವರ, ಮೈಸೂರಿನ ಕಾರಂಜಿ ಕೆರೆ ಮಾದರಿಯಲ್ಲಿ ಕೆರೆಗಳ ಅಭಿವೃದ್ಧಿಯನ್ನು ಲಭ್ಯವಿರುವ ಪ್ರದೇಶಗಳಲ್ಲಿ ಅಭಿವೃದ್ಧಿಪಡಿಸಲು ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಕ್ಕಳಲ್ಲಿ ವೃಕ್ಷ ಪ್ರೇಮ ಬೆಳೆಸಲು 'ಮಗುವಿಗೊಂದು ಮರ' ಎಂಬ ಘೋಷವಾಕ್ಯದಡಿ ಮಗು ಬಯಸಿದ ಸಸಿಯನ್ನು ಪ್ರಮಾಣ ವಚನ ಬೋಧಿಸಿ ನೀಡಲಾಗುವುದು. 5ನೇ ತರಗತಿಯಿಂದ ಪಿಯುಸಿ ವರೆಗಿನ ಎಲ್ಲ ಮಕ್ಕಳಿಗೆ ಸಸಿ ನೀಡಲಾಗುವುದು.
ಪ್ರಾದೇಶಿಕ ಅರಣ್ಯ ನೀತಿ: ಇದುವರೆಗೆ ಇಲಾಖೆ ಕೇಂದ್ರದ ನೀತಿಯ ಚೌಕಟ್ಟಿನಲ್ಲಿ ಅರಣ್ಯ ನೀತಿ, ಮಾರ್ಗದರ್ಶಿಗಳು ಲಭ್ಯವಿದ್ದು, ಇದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕುತ್ತಿಲ್ಲ; ಮುಂದಿನ ಒಂದು ತಿಂಗಳೊಳಗೆ ಪ್ರಾದೇಶಿಕ ಅರಣ್ಯ ನೀತಿ ರೂಪಿಸಲಾಗುವುದು ಎಂದ ಸಚಿವರು, ಎಲ್ಲ ಯೋಜನೆಗಳಿಗೆ ಜೂನ್ 20ರಿಂದ ಜುಲೈ 25ರೊಳಗೆ ಚಾಲನೆ ನೀಡಲಾಗುವುದು ಎಂದರು.
ನೈಜ ಕಾಡು ಕಾಡಾಗಿ ಉಳಿಯಲು ಪಶ್ಚಿಮ ಘಟ್ಟ ಪ್ರದೇಶ ವ್ಯಾಪ್ತಿಯೊಳಗೆ ಯಾವುದೇ ಕಿರು ನೀರಾವರಿ ಯೋಜನೆಗಳಿಗೆ ತನ್ನ ಅವಧಿಯಲ್ಲಿ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ ಸಚಿವರು, ಪರಿಸರಕ್ಕೆ ಪೂರಕವಾದ ಸೋಲಾರ್ ಶಕ್ತಿಗೆ ಆದ್ಯತೆ ನೀಡಲಾಗುವುದೆಂದರು. ಪ್ರಾದೇಶಿಕ ಅರಣ್ಯ ಅಧಿಕಾರಿ ಶಾಂತಪ್ಪ, ಡಿಸಿಎಫ್ ವಿಜಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಮುಂದೆ ಓದಿ

ರಾಜ್ಯ - ರಾಷ್ಟ್ರ
ವರ್ಷ ಕ್ರಿಯೇಷನ್ಸ್ ನಿರ್ಮಾಣದ "ನಿಗೂಢ" ಫೋಟೋ ಕಾಮಿಕ್ಸ್ ಧಾರಾವಾಹಿ ಮುಂದಿನ ತಿಂಗಳಿನಿಂದ ಭಾಮಿನಿ ಮಾಸಿಕದಲ್ಲಿ ಪ್ರಕಟಗೊಳ್ಳಲಿದೆ.



ಈ ಧಾರಾವಾಹಿಯ ಚಿತ್ರ - ಕಥೆ, ನಿರ್ಮಾಣ, ನಿರ್ದೇಶನವನ್ನು ಪತ್ರಕರ್ತ ಹರೀಶ್ ಕೆ.ಆದೂರು ನಿರ್ವಹಿಸಲಿದ್ದಾರೆ. "ವರ್ಷ ಕ್ರಿಯೇಷನ್ಸ್" ಲಾಂಛನದಡಿ ಈ ಧಾರಾವಾಹಿ ನಿರ್ಮಾಣಗೊಳ್ಳುತ್ತಿದೆ." ಸಸ್ಪೆನ್ಸ್" ಕಾದಂಬರಿಯಲ್ಲಿ ಮೂಡಿಬರುವ ಕಥಾನಕದ ಒಂದು ಭಾಗವನ್ನು ಆಯ್ದು ಈ ಧಾರಾವಾಹಿ ನಿರ್ಮಿಸಲಾಗುತ್ತಿದೆ.ನೈಜ ಘಟನೆಯನ್ನಾಧರಿಸಿದ ಕಥಾವಸ್ತು ಇದಾಗಿದೆ. ಹೊಸಮುಖಗಳಿಗೆ ಆದ್ಯತೆ ನೀಡುವ ಮೂಲಕ ಹೊಸ ಪರಂಪರೆಗೆ ವರ್ಷ ಕ್ರಿಯೇಷನ್ಸ್ ನಾಂದಿ ಹಾಡುತ್ತಿದೆ.

ಮುಂದೆ ಓದಿ
7:06 PM

ಕ್ರಿ"ಕೆಟ್" ಆಟ!?

Posted by ekanasu

ವಿಚಾರ
ಭಾರತೀಯರ ಕ್ರಿಕೆಟ್ ಹುಚ್ಚನ್ನು ಸಮರ್ಥಿಸುತ್ತ ... !

ಭಾರತೀಯರ ಕ್ರಿಕೆಟ್ ಕ್ರೇಜ್ಝ್ ಸಮಗ್ರವಾಗಿ ನೋಡಿದಾಗ ಅದು ಕ್ರೀಡಾ ಪ್ರೇಮ ಅಥವಾ ಕ್ರಿಕೆಟ್ ಗೀಳಿ ಅನಿಸದು. ಕ್ರಿಕೆಟ್ ಹುಚ್ಚು ಎಂದೇ ಅನಿಸುತ್ತದೆ. ಈಗ ಐ.ಪಿ.ಎಲ್. ಜ್ವರ ದೇಶದಲ್ಲೆಡೆ ಹಬ್ಬಿದೆ. ಸ್ವಲ್ಪ ಮೊದಲು ವಿಶ್ವಕಪ್ ಜ್ವರದಲ್ಲಿ ಭಾರತೀಯರು ಕೋಮಾಕ್ಕೆ ಹೋಗಿದ್ದರು. ಕ್ರಿಕೆಟ್ ವೀಕ್ಷಿಸಲು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ, ನೌಕರರು ಆಫೀಸಿಗೆ ಚಕ್ಕರ್ ಹಾಕುವುದು ಇಲ್ಲಿ ಸ್ವಾಭಾವಿಕ. ಈ ಭಾರಿ ಮಠಾಧೀಶರೂ ಕೂಡ ಸಿಬ್ಬಂದಿಗಳಿಗೆ ಮಠದ ಆವರಣದಲ್ಲಿ ಕ್ರಿಕೆಟ್ ವೀಕ್ಷಿಸುವ ವ್ಯವಸ್ಥೆ ಮಾಡಿಕೊಟ್ಟರು! ಅವರೂ ತಂಡಕ್ಕೆ ಶುಭ ಕೋರಿ ಪಂದ್ಯ ವೀಕ್ಷಿಸಿದರು. ಇವುಗಳ ನಡುವೆ ಕೆಲವರು ಪರಮಜ್ಞಾನಿಗಳಂತೆ ಕ್ರಿಕೆಟ್ ನಿಂದಾಗುವ ದುಷ್ಟರಿಣಾಮಗಳ ಪಟ್ಟಿ ಮಾಡಿದರು!



ಅನುಮಾನವೆ ಬೇಡ ಭಾರತೀಯರ ಕ್ರಿಕೆಟ್ ಹುಚ್ಚು ಹಲವು ಭಾರಿ ಅತಿರೇಖಕ್ಕೆ ಹೋಗುತ್ತದೆ. ಭಾರತ ಪಂದ್ಯ ಗೆಲ್ಲಲಿ ಎಂದು ಪೂಜೆ ಮಾಡುವುದು ತಲೆ ಬೋಳಿಸಿ ಭಾರತ ಧ್ವಜ ಬಿಡಿಸುವುದು, ಇದೆಲ್ಲವೂ ಅತಿರೇಕವೇ ಆದರೆ ಯಾವುದಾದರೊಂದು ಕ್ರೀಡೆ ನೋಡುವುದು ಅಥವಾ ನೋಡದಿರುವುದು ವೈಯಕ್ತಿಕ ವಿಚಾರ ಅಲ್ಲವೆ? ಕ್ರಿಕೆಟ್ನ ನೋಡುವವರೆಲ್ಲ ಹಾಕಿಯನ್ನು ಕಡ್ಡಾಯವಾಗಿ ನೋಡಬೇಕು ಎಂದು ಕಾಯ್ದೆ ತರಲು ಸಾಧ್ಯವೇ?|

ಪ್ರತಿಯೊಬ್ಬ ಮನುಷ್ಯನಿಗೂ ಅವನದ್ದೆ ಆದ Likings ಮತ್ತು Dislikings ಗಳಿರುತ್ತವೆ. ಅವನ Likings ಗಳೇನು ಎನ್ನುವುದು ಅವನ ವೈಯಕ್ತಿಕ ವಿಚಾರ. ಕೆಲವರಿಗೆ ಬಿಳಿ ಅಂಗಿ ಇಷ್ಟ, ಕೆಲವರಿಗೆ ಕೆಂಪು ಅಂಗಿ ಇಷ್ಟ, ಅಂತೆಯೆ ಕ್ರಿಕೆಟ್, ಹಾಕಿ, ಪುಟ್ಬಾಲ್ ಕೂಡ. ಕೆಂಪು ಅಂಗಿಯಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಮಾತ್ರ ನಾವು ಆಕ್ಷೇಪಿಸಬಹುದು. ಉದಾಹರಣೆಗೆ ನಡುರಾತ್ರಿಯಲ್ಲಿ ಭಾರತ ಗೆದ್ದಿತೆಂದು ಪಟಾಕಿ ಸಿಡಿಸಿ ನೆರೆಹೊರೆಯದವರ ನಿದ್ದೆಗೆಡಿಸುವುದು!

ಕ್ರಿಕೆಟ್ ಹುಚ್ಚಿನಲ್ಲಿ ತೇಲಾಡುವವರಲ್ಲಿ ಹಲವರು ಸ್ವಂತ ನಿಲುವಿಲ್ಲದವರೂ ಇರುತ್ತಾರೆ. ಅವರಿಗೆ ಆರಾಧಿಸಲು ವ್ಯಕ್ತಿ ಬೇಕು ಅಷ್ಟೇ. ಕ್ರಿಕೆಟ್ ಎನ್ನುವ ಕ್ರೀಡೆ ಇರದಿದ್ದರೆ ಅವರು ಯಾವುದಾದರು ಚಿತ್ರತಾರೆಯ ಪೊಸ್ಟರ್ಗೆ ಹಾಲಿನ ಅಭಿಷೇಕ ಮಾಡುತ್ತಿದ್ದರು! ಕ್ರಿಕೇಟ್ ಇಸ್ ರಿಲಿಜನ್ ಸಚೀನ್ ಇಸ್ ಗಾಡ್ ಎಂಬ ಅತಿರೇಖದ ಮಾತನ್ನು ಹುಟ್ಟು ಹಾಕಿದವರು ಅವರೇ. ಕ್ರಿಕೇಟ್ ಇರದಿದ್ದರೆ ಬಹುಶಃ ಸಿನಿಮಾ ಇಸ್ ರಿಲಿಜನ್, ಅಮಿತಾಬ್ ಇಸ್ ಗಾಡ್ ಎನ್ನುತ್ತಿದ್ದರ ಅವರು!

ಕ್ರಿಕೆಟ್ ಜ್ವರ ಮತ್ತು ಪರಮಜ್ಞಾನಿಗಳ ನಡುವೆ ನಾವೊಂದು ವಿಚಾರ ಮರೆತಿದ್ದೇವೆ. ಕ್ರಿಕೆಟ್ನಲ್ಲೂ ಕ್ಲಾಸ್ ಇದೆ. ಭೀಮ್ಸೇನ್ ಜೋಶಿಯವರ ಹಾಡಿನಲ್ಲಿ ಶ್ರೇಷ್ಠತೆಯಿದೆ. ಸಚೀನ್ ಅವರ ಬ್ಯಾಟಿಂಗ್ನಲ್ಲೂ ಇದೆ. ಕ್ರಿಕೆಟ್ ಎಂದರೆ ಪರಮಜ್ಞಾನಿಗಳು ಹೇಳುವಂತೆ ಮೂರು ಗೂಟಾ ಚೆಂಡು ಬ್ಯಾಟು ಅಲ್ಲ. ಪ್ರತಿ ಕಲಾ ಪ್ರಕಾರದಲ್ಲಿ ಕ್ರೀಡೆಯಲ್ಲಿ ಕ್ಲಾಸ್ ಆಳ ಇರುವಂತೆ ಕ್ರಿಕೇಟ್ ಎಂಬ ಕ್ರೀಡೆಯಲ್ಲೂ ಇದೆ. ಬ್ಯಾಟ್ ಹಿಡಿದೊಡನೆ ಬೀಸಿದೊಡನೆ ಕ್ರಿಕೇಟ್ ಆಗುವುದಿಲ್ಲ. ಕ್ರಿಕೇಟ್ನ ಈ ಕ್ಲಾಸ್ ಜನರಿಗೆ ಅಚ್ಚುಮೆಚ್ಚು ಇವತ್ತು ಕೇವಲ ಭಾರತ ಗೆದ್ದಿತು ಎಂದು ಜನರು ಸಂಭ್ರಮಿಸುತ್ತಿಲ್ಲ. ಸಚೀನ್ರ ಸ್ಟ್ರೇಟ್ ಡ್ರೈವ್, ಯುವರಾಜ್ರ ಕವರ ಡ್ರೈವ್ ಮುಂತಾದವುಗಳಿಗೂ ಜನ ಸಂಭ್ರಮಿಸುತ್ತಾರೆ. ಕ್ರಿಕೇಟ್ನ ಆಳ ಶ್ರೇಷ್ಠತೆ, ಕ್ಲಾಸ್ನ ಅನುಭವಿಸದೆ ಇದ್ದಿದ್ದರೆ ಜನ ಈ ಪ್ರಮಾಣದಲ್ಲಿ ಹುಚ್ಚುರಾಗುತ್ತಿರಲಿಲ್ಲ. ಈ ಮಾತು ಎಲ್ಲಾ ಕ್ರಿಕೇಟ್ ಹುಚ್ಚರಿಗೂ ಅನ್ವಯಿಸದೆ ಇರಬಹುದು ಅಥವಾ ಅದನ್ನೆಲ್ಲ ಅನಿಭವಿಸಿದವರಲ್ಲಿ ಬಹಳ ಜನ ಕ್ರಿಕೇಟ್ ಜ್ವರದಲ್ಲಿ ಕೋಮಾಕ್ಕೆ ಹೋಗದಿರಬಹುದು ಆದರೂ ಅದು ಸತ್ಯ.

ಭಾರತೀಯರಿಗೆ ಎಷ್ಟು ಕ್ರಿಕೇಟ್ ಹುಚ್ಚು ಇದೆಯೊ ಅದಕ್ಕಿಂತ ಹೆಚ್ಚು ಪುಟ್ಬಾಲ್ ಹುಚ್ಚು ಅಮೇರಿಕಾದವರಿಗೆ, ಬ್ರಿಟಿಷರಿಗೆ ಇದೆ. ಅಲ್ಲಿ ಆಟಗಾರ ಸರಿಯಾಗಿ ಆಡಲಿಲ್ಲವೆಂದು ಪುಟ್ಬಾಲ್ ಹುಚ್ಚರು ಕೊಲೆ ಮಾಡಿದ ಉದಾಹರಣೆಯು ಇದೆ! ಕ್ರಿಕೇಟ್ ಹುಚ್ಚು ಅತಿಯಾದ್ದರಿಂದಲೇ ದೇಶ ಬೆಳೆಯಲಿಲ್ಲ ಎಂದು ವಾದ ಮಾಡುವ ಪರಮಜ್ಞಾನಿಗಳು ತಿಳಿಯದ ವಿಷಯವಿದು ಉತ್ತರಕನ್ನಡದ ಕೆಲವು ಹಳ್ಳಿಗಳಲ್ಲಿ ಅಂತವರು ಭಾಷಣ ಮಾಡುವಾಗ ದೇಶದ ಪ್ರಗತಿಗೆ ಮಾರಕವೆಂದು ಅಮೇರಿಕಾದಲ್ಲಿ ಕ್ರಿಕೆಟ್ ಅನ್ನು Ban ಮಾಡಿದ್ದಾರೆ. ಎಂದದ್ದನ್ನು ನಾನು ಕೇಳಿದ್ದೇನೆ! ಅಮೇರಿಕ ದಶಕಗಳಿಂದ ಟೆಸ್ಟ್ ಆಡುವ ಮಾನ್ಯತೆ ಪಡೆಯಲು ಪರದಾಡುತ್ತಿದೆ. ಮಾನ್ಯತೆ ಸಿಗದಿರುವ ಕಾರಣದಿಂದಲೇ ಇಂದು ಆಡುತ್ತಿಲ್ಲ. ಬಹುಶಃ ಹುಚ್ಚು ಪ್ರತಿಯೊಬ್ಬರಿಗೂ ಇರುತ್ತದೆ. ಕೆಲವರಿಗೆ ಕ್ರಿಕೇಟ್ ಹುಚ್ಚು, ಕೆಲವರಿಗೆ ಸಿನಿಮಾ, ಕೆಲವರಿಗೆ ಸಂಗೀತ, ಕೆಲವರಿಗೆ ಅದೆಲ್ಲವೂ ! ಪ್ರಬುದ್ಧ ಮನಸ್ಸುಗಳು ಆಸಕ್ತಿಯನ್ನು ಆಸಕ್ತಿಗೆ ಸೀಮಿತವಾಗಿಸುತ್ತದೆ. ಅಪ್ರಬುದ್ಧ ಮನಸ್ಸುಗಳು ಅದನ್ನು ಹುಚ್ಚಿನ ತನಕ ಬೆಳೆಯಲು ಬಿಡುತ್ತದೆ. ಅದೆಲ್ಲವೂ ಅವರವರ ಮನಸ್ಸಿಗೆ ವಯಕ್ತಿಕ ಆಯ್ಕೆಗೆ ಸಂಬಂಧಪಟ್ಟದ್ದು.



- ಆದಿತ್ಯ ಭಟ್

ಮುಂದೆ ಓದಿ

ಈ ಕನಸು ಅವಾರ್ಡ್

ಮನುಷ್ಯ ಈ ಜಗತ್ತಿನಲ್ಲಿ ಅಜ್ಙಾನದ ಅಂಧಕಾರದಿಂದ ತೊಳಲಾಡುತ್ತಿರುವಾಗ ಭಗವಂತನು ಗುರುವಿನ ರೂಫದಲ್ಲಿ ಕಾಣಿಸಿಕೊಂಡನಂತೆ ಆದ್ದರಿಂದಲೇ ಗುರುವನ್ನು 'ಆಚಾರ್ಯ ದೇವೋಭವ' ಎಂದು ವರ್ಣಿಸಲಾಗಿದೆ. ಮಕ್ಕಳು ಗುರುಗಳ ಬಳಿ ಬಂದ ಬಿಳಿ ಹಾಳೆಗಳು. ಅದರ ಮೇಲೇ ಗುರುಗಳದ್ದೇ ಮೊದಲ ಅಚ್ಚು. ಗುರುವು ತ್ರಿಮೂರ್ತಿಗಳಿಗೆ ಸರಿಸಮವೆಂದು ಹೇಳಲಾಗಿದೆ. ಶಿಷ್ಯರ ಮನಸ್ಸಿನಲ್ಲಿ ಸದ್ವಿಚಾರಗಳ ಸೃಷ್ಟಿಗೆ ಕಾರಣನಾಗಿ ಬ್ರಹ್ಮನಾಗುತ್ತಾನೆ. ಸುಜ್ಞಾನವನ್ನು ಉಳಿಸಿ-ಬೆಳೆಸುವ ವಿಷ್ಣುವಾಗುತ್ತಾನೆ. ಉದಿಸುವ ಶಂಕೆ,ಅಜ್ಞಾನಗಳನ್ನು ಪರಿಹರಿಸಿ ಮಹೇಶ್ವರನಾಗುತ್ತಾನೆ.


ಜ್ಞಾನ ಪ್ರಾಪ್ತಿಗೂ, ಜೀವನ್ಮುಕ್ತಿಗೂ ಗುರು ಬೇಕು. 'ಗುರುವಿನ ಗುಲಾವನಾಗುವ ತನಕ ದೊರೆಯದಣ್ಣ ಮುಕುತಿ". ಸಮುದ್ರಗಳನ್ನು ಶಾಯಿಯನ್ನಾಗಿ ಮಾಡಿ ಇಡೀ ಭೂಮಿಯನ್ನು ಕಾಗದವನ್ನಾಗಿ ಮಾಡಿದರೂ ಕೂಡಾ ಗುರುವಿನ ಗುಣವನ್ನು ಬಣ್ಣಿಸಲಾಗದು. ಪ್ರಯೋಗಾಲಯದಲ್ಲಿ ಪ್ರಯೋಗ ಮಾಡಿ ಅರಿತುಕೋಳ್ಳುತ್ತೇನೆಂದರೆ ತಿಳಿಯಲು ಅಸಾಧ್ಯವಾದ ದಿವ್ಯಶಕ್ತಿ.
ಹಿಂದಿನ ಕಾಲದ ಶಿಷ್ಯರು ಗುರುವೇ ನಮಃ ಎನ್ನುತ್ತಿದ್ದರೆ ಆಧುನಿಕ ಕಾಲದ ಶಿಷ್ಯೋತ್ತಮರು 'ಗುರುವೇನು ಮಹಾ'?ಎನ್ನುವುದಾಗಿ ಪ್ರಶ್ನಿಸುತ್ತಾರೆ. ಹಿಂದೆ ಗುರು ಮುಂದೆ ಗುರಿ ಇರಬೇಕಾದದ್ದು ಸಹಜ. ಗುರು ಪಾಠ ಹೇಳಿಕೊಡುವ ಯಂತ್ರವಲ್ಲ. ನಮ್ಮ ಜೀವನವನ್ನು ರೂಪಗೊಳಿಸುವ, ಸಂಸ್ಕರಿಸುವ ಮಹಾನ್ ಶಿಲ್ಪಿ... ನಿತ್ಯವೂ ವಂದಿಸೋಣ...

-ಮಲ್ಲಿಕಾಭಟ್ ಪರಪ್ಪಾಡಿ.

ಮುಂದೆ ಓದಿ
6:46 PM

"ಗಜ" ಕಾಣಿಕೆ!!!

Posted by ekanasu

ವೈವಿಧ್ಯ
ಭಾರತದಲ್ಲಿ ಕಾಣಿಕೆ ಹುಂಡಿಗಳಿಲ್ಲದ ದೇವಾಲಯಗಳು ಅತೀ ವಿರಳ. ಕಾಣಿಕೆ ಹುಂಡಿಗಳು ಸಹ ವಿವಿಧ ಆಕಾರಗಳಲ್ಲಿ, ವಿವಿಧ ಬಣ್ಣಗಳಲ್ಲಿ ಕೆಲವೊಮ್ಮೆ ವಾಸ್ತು ಶಾಸ್ತ್ರದ ಹಿಡಿತದಲ್ಲಿರುವುದು ಸಾಮಾನ್ಯ. ಉತ್ತರ ಕನ್ನಡ ಜಿಲ್ಲೆಯ ದೇವಿಮನೆ ಘಟ್ಟದ ದೇವಿ ದೇವಸ್ಥಾನದ ಮುಂಭಾಗದಲ್ಲಿ ಆನೆಯ ಹೊಟ್ಟೆಯ ಭಾಗವೇ ಖಜಾನೆಯಾಗಿ ಗಮನ ಸೆಳೆಯುತ್ತದೆ. ಆನೆಯ ಸೊಂಡಿಲಿನ ತಳಭಾಗ ಅಂದರೆ ಬಾಯಿಯ ಮುಖಾಂತರ ನಾವೂ ಹಾಕುವ ಕಾಣಿಕೆ ಹೊಟ್ಟೆ ಭಾಗದಲ್ಲಿ ಶೇಖರವಾಗುತ್ತದೆ.ಆನೆಯ ಹೊಟ್ಟೆಗೆ "ಕಾಸಿ"ನ ಮಜ್ಜಿಗೆ!

ಸಚಿತ್ರ ಬರಹ : ಅಚ್ಯುತಕುಮಾರ, ಯಲ್ಲಾಪುರ.

ಮುಂದೆ ಓದಿ

ವಿಚಾರ

ಕೆಲ ಆಸ್ಪತ್ರೆಗಳಿಗೆ ಆರೋಗ್ಯ ವಿಮೆ(Health Insurance Policy) ಇರುವ ಗಿರಾಕಿಗಳು ಬಂದು ಬಿಟ್ಟರೆ ಚಿನ್ನದ ಮೊಟ್ಟೆ ಇಡುವ ಕೋಳಿ ಬಂದಷ್ಟು ಸಂತೋಷ
ಸುಮ ಮತ್ತು ಅವಳ ತಂಗಿ ಇಬ್ಬರೂ ವೈದ್ಯರು. ಸುಮ ಒಂದು ಪುಟ್ಟ ಆಸ್ಪತ್ರೆ ನಡೆಸುತ್ತಿದ್ದಾಳೆ.


ಒಮ್ಮೆ ಸುಮ ಎಲ್ಲೋ ಹೋಗಿದ್ದಳು. ಅಂತಹ ಸಮಯದಲ್ಲಿ ಒಂದು ಎಮರ್ಜನ್ಸಿ ಹೆರಿಗೆ ಕೇಸ್ ಬಂದಿದೆ. ಸುಮಳ ತಂಗಿ ತಕ್ಷಣ ಹೆರಿಗೆ ನೋವಿಂದ ನರಳುತ್ತಿದ್ದ ಆ ಹೆಂಗಸಿಗೆ ಡೆಲಿವರಿ ವಾರ್ಡಿಗೆ ಕರೆದುಕೊಂಡು ಹೋದಳು. ಅಕ್ಕ ಆಸ್ಪತ್ರೆಯಲ್ಲಿಲ್ಲದಿದ್ದರು ತಾನೇ ಸಾಹಸ ಮಾಡಿ ಹೇಗೋ ನಾರ್ಮಲ್ ಡೆಲಿವರಿ ಮಾಡಿಸಿಬಿಡುತ್ತಾಳೆ. ಅಕ್ಕ ಸಾಯಂಕಾಲ ಬರುತ್ತಾಳೆ. ಡೆಲಿವರಿ ಆದ ವಿಷಯ ತಿಳಿಯುತ್ತದೆ. ತಂಗಿಗೆ ಬಾಯಿಗೆ ಬಂದ ಹಾಗೆ ಬಯ್ಯುತ್ತಾಳೆ. ಬಯ್ಯಲು ಕಾರಣವೇನು ಗೊತ್ತೇ....? ತಂಗಿ ಮಾಡಿದ ಒಂದೇ ಒಂದು ತಪ್ಪು...ಆಕೆ ಅಂಥ ತಪ್ಪು ಮಾಡಿದ್ದೇನು...? ಆಕೆ ಮಾಡಿದ ತಪ್ಪು ಒಂದೇ - "ನಾರ್ಮಲ್ ಡೆಲಿವರಿ". ನಾರ್ಮಲ್ ಡೆಲಿವರಿ ಯಾಕೆ ಮಾಡಿದೆ....? ಸಿಸೇರಿಯನ್ ಮಾಡಬೇಕಿತ್ತು. ಅನ್ಯಾಯವಾಗಿ ೫೦ ಸಾವಿರ ರೂಪಾಯಿಗಳು ಹೋಯಿತಲ್ಲ. ನಿನಗೆ ಒಂದು ಚೂರು ಬುದ್ಧಿ ಇಲ್ಲ... ಹೀಗೆ ಅಕ್ಕ ಕೋಪಮಾಡಿಕೊಂಡು ತಂಗಿಗೆ ಬೈದಿದ್ದೇ ಬೈದಿದ್ದು. ಇದು ಕಟ್ಟು ಕತೆ ಅಲ್ಲ, ನಿಜವಾದ ನಡೆದ ಘಟನೆ. ಇಂತಹ ನೂರಾರು ಘಟನೆಗಳು ನಮ್ಮ ಸುತ್ತಮುತ್ತಲ ಆಸ್ಪತ್ರೆಗಳಲ್ಲಿ ನಡೆಯುತ್ತಿವೆ.

ಕೆಲ ಆಸ್ಪತ್ರೆಗಳಿಗೆ ಆರೋಗ್ಯ ವಿಮೆ(Health Insurance Policy) ಇರುವ ಗಿರಾಕಿಗಳು ಬಂದು ಬಿಟ್ಟರೆ ಚಿನ್ನದ ಮೊಟ್ಟೆ ಇಡುವ ಕೋಳಿ ಬಂದಷ್ಟು ಸಂತೋಷ ಆಗುತ್ತದೆ. ಕಂಪನಿಗಳಲ್ಲಿ ಕೆಲಸ ಮಾಡುವ ಎಂಪ್ಲಾಯಿಗಳು ಆಸ್ಪತ್ರೆಯವರಿಗೆ ಸಿಕ್ಕಿಬಿಟ್ಟರಂತೂ...ಮಜವೋ ಮಜ. ಸಾರಸಗಟಾಗಿ ಶೇವ್ ಮಾಡಿಬಿಡುತ್ತಾರೆ. ಏಕೆಂದರೆ ಒಂದು ಸಾಮನ್ಯ ಜ್ವರಕ್ಕೆ ೪೦ ಸಾವಿರ ರೂಪಾಯಿಗಳಷ್ಟು ಹಣವನ್ನು ಯಾರು ಕೊಡುತ್ತಾರೆ ಹೇಳಿ ಇವರಿಗೆ...? ಆಸ್ಪತ್ರೆಯವರು ಯೋಚಿಸುವ ರೀತಿಯೇ ಬೇರೆ....ವಿಮಾದಾರ ಪ್ರತಿ ವರ್ಷ ಪ್ರೀಮಿಯಂ ಕಟ್ಟುತ್ತಿದ್ದಾನೆ, ಆಸ್ಪತ್ರೆಯ ಬಿಲ್ಲನ್ನು ರೋಗಿ ತನ್ನ ಕೈಯಿಂದ ಕಟ್ಟುತ್ತಿಲ್ಲವಲ್ಲ....ವಿಮೆ ಕಂಪನಿ ವೆಚ್ಚ ಭರಿಸುತ್ತದೆ. ಎಷ್ಟು ಹಣ ಕಸಿಯಲು ಸಾಧ್ಯವೋ ಅಷ್ಟನ್ನು ಕಸಿದುಕೊಳ್ಳೋಣ...ಅಲ್ಲವೇ...?

ನೀವು ಮಾಡುತ್ತಿರುವುದು ಸರಿಯೇ ಅಂತ ಆಸ್ಪತ್ರೆಯವರಿಗೆ ಕೇಳಿ ನೋಡಿ...ಅವರು ಕೊಡುವ ಉತ್ತರ ಇಷ್ಟೆ - ನಮ್ಮ ಕಷ್ಟ ನಮಗೆ ಗೊತ್ತು. ಆಸ್ಪತ್ರೆ ನಡೆಸೋದು ಅಷ್ಟೊಂದು ಸುಲಭವಾದ ಕೆಲಸ ಅಲ್ಲ. ಆಸ್ಪತ್ರೆ ನಡೆಸಿ ನೋಡಿ ನಿಮಗೇ ಗೊತ್ತಾಗುತ್ತೆ. ಆ ಮೇಂಟನನ್ಸು, ಈ ಮೇಂಟನೆನ್ಸು, ಆ ಖರ್ಚು, ಈ ಟ್ಯಾಕ್ಸು...ಅಬ್ಬಬ್ಬಾ...ಸಾಕಾಗಿಹೋಗಿದೆ.

ರೋಗಿಯ/ವಿಮಾದಾರನ ಯೋಚನೆಗಳೇ ಬೇರೆ....ನಾನು ಪ್ರೀಮಿಯಂ ಕಟ್ಟುತ್ತಿದ್ದೇನೆ. ಜನರಲ್ ಅಥವಾ ಸೆಮಿ ಪ್ರೈವೇಟ್ ವಾರ್ಡ್ ಗೆ ಯಾಕೆ ಹೋಗಬೇಕು..? ಡೀಲಕ್ಸ್ ವಾರ್ಡ್ ಗೇ ಹೋಗೋಣ. ಪಾಪ ! ಆಸ್ಪತ್ರೆಯವರು ಅವನ ಜುಟ್ಟು ಬುಡದಿಂದ ಕುಯ್ಯುತ್ತಿರುವುದು ಆತನಿಗೆ ಗೊತ್ತಾಗುವುದಿಲ್ಲ. ಗೊತ್ತಾದರೂ ಬೇಜಾರಿಲ್ಲ. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅಂದು ಕೊಂಡಿರುತ್ತಾನೆ. ನೆಂಟರಸ್ಥರಿಗೆ ನಾನು ಸ್ಪೆಷಲ್ ವಾರ್ಡ್ ನಲ್ಲಿ ಇದ್ದೇನೆ ಅಂತ ಬೇರೇ ಹೇಳಬೇಕಲ್ಲ...!

ಕೆಲವು ಎಂಪ್ಲಾಯಿಗಳಂತೂ ಕ್ರಿಮಿನಲ್ ಗಳು, ತಾವು ಆಸ್ಪತ್ರೆಯಲ್ಲಿ ಭರ್ತಿಯೇ ಆಗಿರುದುವುದಿಲ್ಲ, ಆಸ್ಪತ್ರೆಯವರ ಜೊತೆ ಸೆಟ್ಟಿಂಗ್ ಮಾಡಿಕೊಂಡು, ಪಾಲಿಸಿ ಹಣವನ್ನು ಕ್ಲೇಮ್ ಮಾಡಿಸಿಕೊಂಡು ಅರ್ಧ ಅರ್ಧ ಹಣ ಹಂಚಿಕೊಳ್ಳುತ್ತಾರೆ. ಇಂತಹ ಪ್ರಕರಣಗಳಲ್ಲಿ ಕೆಲವರು ಸಿಕ್ಕಿಹಾಕಿಕೊಂಡು ಕಂಪನಿಗಳು ಅಂತಹವರಿಗೆ ಗುಪ್ತವಾಗಿ ಕೆಲಸದಿಂದ ವಜಾ ಮಾಡಿರುವುದು ಸಹ ಉಂಟು.

ಇನ್ನು ಕೆಲವು ಆಸ್ಪತ್ರೆಗಳು ಆಲ್ಕೋಹಾಲ್ ರೋಗಿಗಳ ಕೇಸ್ಗಳನ್ನು ಸಹ ಪಾಸ್ ಮಾಡಿಸಲು ಹಿಂಜರಿಯುವುದಿಲ್ಲ. ಇಂತಹ ಅನೇಕ ಕೇಸ್ಗಳನ್ನು ಕಂಡು ಹಿಡಿಯಲು TPA ಕಂಪನಿಗಳು ಒಂದು ನಿಗ್ರಹಾ ದಳವನ್ನು ರೂಪಿಸಿದ್ದಾರೆ. ಸಂಶಯ ಬಂದರೆ, ಆಸ್ಪತ್ರೆಗೆ ಧಿಡೀರನೆ ಭೇಟಿ ನೀಡಿ ಕೇಸ್ ಕಂಡು ಹಿಡಿಯಲು ಪ್ರಯತ್ನ ಮಾಡುತ್ತಾರೆ. IRDA (ಸರ್ಕಾರಿ ಸಮಿತಿ) ಟಿ.ಪಿ.ಎ. ಗಳಿಗೆ ಇನ್ನೂ ಹೆಚ್ಚು ಅಧಿಕಾರ ನೀಡಬೇಕು, ಆಗ ಮೋಸಗಾರರನ್ನು ಶಿಕ್ಷೆಗೆ ಗುರಿಪಡಿಸಬಹುದು.

ಈಗ ಸ್ಪಲ್ಪ ವಿಮೆ ಬಗ್ಗೆ ತಿಳಿದುಕೊಳ್ಳೋಣ...

ಸಾಮಾನ್ಯವಾಗಿ ಲೈಫ್ ಇನ್ಶೂರೆನ್ಸ್ ಬಗ್ಗೆ ಎಲ್ಲರಿಗು ಗೊತ್ತು ಆದರೆ ಹೆಲ್ತ್ ಇನ್ಶೂರೆನ್ಸ್ ಬಗ್ಗೆ ತಿಳುವಳಿಕೆ ಬಹಳ ಕಡಿಮೆ. ಅಷ್ಟು ಇಷ್ಟು ಗೊತ್ತಿದ್ದರು ತನ್ನದೇ ಆದ ಡೌಟುಗಳು ಇದ್ದೇ ಇರುತ್ತವೆ. ನಮ್ಮ ದೇಶದ ಸುಮಾರು 2% ಜನರು ಮಾತ್ರ ಆರೋಗ್ಯ ವಿಮೆಯನ್ನು ಹೊಂದಿದ್ದಾರೆ. ಮುಂಬರುವ 10 ವರ್ಷಗಳಲ್ಲಿ ಈ ಪ್ರಮಾಣ ಹೆಚ್ಚಾಗಲಿದೆ ಎಂಬುದು ಇನ್ಶೂರೆನ್ಸ್ ಕಂಪನಿಗಳ ಲೆಕ್ಕಾಚಾರ. ಹಾಗಾದಲ್ಲಿ ಸುಮಾರು 20 ಸಾವಿರ ಕೋಟಿಯ ವಹಿವಾಟು ನಡೆದಂತಾಗುತ್ತದೆ.

ಏನಿದು ಹೆಲ್ತ್ ಇನ್ಶೂರೆನ್ಸ್..?

ಅನಾರೋಗ್ಯದ ಪರಿಸ್ಥಿತಿ ಅಥವಾ ಆಕಸ್ಮಿಕ ದುರಂತಗಳಿಂದ ಎದುರಾಗುವ ವೈದ್ಯಕೀಯ ವ್ಯಚ್ಚವನ್ನು ಭರಿಸುವ ವಿಮೆಗೆ ಆರೋಗ್ಯ ವಿಮೆ ಎನ್ನುತ್ತಾರೆ. ನಾಳೆ ನಮ್ಮ ಜತೆಯಲ್ಲಿ ಏನು ನಡೆಯಬಹುದು ಎಂಬುದು ನಮಗೆ ಗೊತ್ತಿಲ್ಲ. ಇಂದು ಆರೋಗ್ಯ ಚೆನ್ನಾಗಿರಬಹುದು, ನಾಳೆ ಏನೋ ಪರಿಚಿತ,ಅಪರಿಚಿತ ಕಾಯಿಲೆಗಳಿಗೆ ಒಳಗಾಗಬಹುದು ಅಥವಾ ಯಾವುದೋ ಆಕಸ್ಮಿಕ ಘಟನೆ ಸಂಭವಿಸಿ ಪ್ರಾಣಾಪಾಯವಾಗಬಹುದು. ಅಂತಹ ಸಂದರ್ಭದಲ್ಲಿ ಕೈಯಲ್ಲಿ ಹಣವಿದ್ದರೆ ಮಾತ್ರ, ನಮ್ಮ ಆರೋಗ್ಯವನ್ನು ಕಾಪಾಡಲು ಅಥವಾ ಬಂದಿರುವಂತಹ ಅನಾಹುತದಿಂದ ಪಾರಾಗಲು ಪ್ರಯತ್ನ ಮಾಡಬಹುದು. ಹಣ ಇಲ್ಲದಿದ್ದರೆ....? ಆಸ್ಪತ್ರೆಯ ಮೆಟ್ಟಿಲು ಹತ್ತಲು ಸಹ ನೂರು ಸಲ ಯೋಚಿಸಬೇಕಾಗುತ್ತದೆ. ಒಂದು ಆರೋಗ್ಯ ವಿಮೆ ಮಾಡಿಸಿದ್ದರೆ ಧೈರ್ಯದಿಂದ ಆಸ್ಪತ್ರೆಗೆ ಹೋಗಿ ಭರ್ತಿಯಾಗಬಹುದು.

ಆರೋಗ್ಯ ವಿಮೆಯ ಹಲವಾರು ಕಂಪನಿಗಳಿವೆ. ನ್ಯಾಷನಲ್, ನ್ಯೂ ಇಂಡಿಯಾ, ಒರಿಯಂಟಲ್ ಮತ್ತು ಯುನೈಟೆಡ್ - ಇವು ಸರ್ಕಾರಿ ವಿಮೆ ಕಂಪನಿಗಳು. ಖಾಸಗಿ ಕಂಪನಿಗಳಿಗೂ ಬರ ಇಲ್ಲ. ಅಂತರ್ಜಾಲದಲ್ಲಿ ಜಾಲಾಡಿ ನಮಗಿಷ್ಟವಾದ ಕಂಪನಿ ಆರಿಸಿಕೊಳ್ಳಬಹುದು. ಅದೂ ಆಗಲ್ಲ ಅಂದರೆ. ನಮಗೆ ಸಹಾಯ ಮಾಡಲು ಏಜೆಂಟ್ ಗಳು ನಮಗಾಗಿ ಕೈಕಟ್ಟಿ ನಿಂತಿದ್ದಾರೆ. ಪಾಲಿಸಿ ಮಾಡಿಸುವುದು ಬಿಡುವುದು ಅವರವರ ಇಷ್ಟ. ಆದರೆ ಅದರ ಬಗ್ಗೆ ಸ್ಪಲ್ಪ ಸಾಮಾನ್ಯ ಜ್ಞಾನಪಡೆದುಕೊಳ್ಳುವುದು ತಪ್ಪೇನಿಲ್ಲ...ಅಲ್ಲವೇ..?

ಆರೋಗ್ಯ ವಿಮೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.

೧. ಇಂಡಿವಿಜ್ಯುವಲ್ ಪಾಲಿಸಿ

೨. ಗ್ರೂಪ್ ಪಾಲಿಸಿ

ಇಂಡಿವಿಜ್ಯುವಲ್ ಪಾಲಿಸಿ:

ಈ ವಿಮೆಯ ವ್ಯಾಪ್ತಿಗೆ ವಿಮಾದಾರ ಮಾತ್ರ ಒಳಪಡುತ್ತಾನೆ. ಉದಾಹರಣೆಗೆ ನಮ್ಮ ಮನೆಯಲ್ಲಿ ನಾಲ್ಕು ಸದಸ್ಯರಿದ್ದೇವೆ ಆದರೆ ನಾನೊಬ್ಬ ಮಾತ್ರ ಆರೋಗ್ಯವಿಮೆ ಮಾಡಿಸಿದ್ದೇನೆ. ಉಳಿದ ಸದಸ್ಯರು ಆರೋಗ್ಯ ವಿಮೆ ಮಾಡಿಸಿಲ್ಲ. ನಾನು ಅನಾರೋಗ್ಯದ ಕಾರಣ ಆಸ್ಪತ್ರೆ ಸೇರಿದ್ದರೆ, ನಾನು ಹೊಂದಿರುವ ವಿಮಾ ವ್ಯಾಪ್ತಿಗೆ ಅನುಗುಣವಾಗಿ ಚಿಕಿತ್ಸಾ ವೆಚ್ಚವನ್ನು ವಿಮೆ ಮೂಲಕ ತುಂಬ ಬಹುದು.

ವಿಮಾವ್ಯಾಪ್ತಿ:

ನಾನು ಒಂದು ಲಕ್ಷದ ವಿಮೆಯನ್ನು ಮಾಡಿಸಿದ್ದೇನೆ. ಅದರ ಕಾಲಾವಧಿ ಒಂದು ವರ್ಷ ಮಾತ್ರ. ಪಾಲಿಸಿಯ ಕಾಲಾವಧಿಯಲ್ಲಿ ನನಗೆ ಏನಾದರು ರೋಗ ಬಂದಲ್ಲಿ ಅಥವಾ ಅಪಘಾತ ಸಂಭವಿಸಿದಲ್ಲಿ ಆ ಒಂದು ಲಕ್ಷ ರೂಪಾಯಿಗಳನ್ನು ನಾನು ಬಳಸಿಕೊಳ್ಳಲು ಅರ್ಹನಾಗಿರುತ್ತೇನೆ. ಪಾಲಿಸಿಯ ಕಾಲಾವಧಿ ತೀರುವ ಮುನ್ನವೆ ಪ್ರೀಮಿಯಂ(ಒಂದು ವರ್ಷಕ್ಕೆ ಸುಮಾರು ೩ ಸಾವಿರ ರೂಪಾಯಿಗಳು) ಹಣವನ್ನು ಕಟ್ಟಿ ಪಾಲಿಸಿಯನ್ನು ರಿನೀವಲ್ ಮಾಡಿಸಿಕೊಂಡರೆ ಅದು ಚಾಲ್ತಿಯಲ್ಲಿರುತ್ತದೆ ಅಥವಾ ಜೀವಂತವಾಗಿರುತ್ತದೆ.

ಇಂಡಿವಿಜ್ಯುವಲ್ ಫ್ಲೋಟರ್ ಪಾಲಿಸಿ:

ಈ ವಿಮೆಯ ವ್ಯಾಪ್ತಿಗೆ ವಿಮಾದಾರನ ಕುಟುಂಬ ಒಳಪಡುತ್ತದೆ. ಪಾಲಿಸಿಯಲ್ಲಿ ನಮೂದಿಸಿರುವ ಕುಟುಂಬದ ಎಲ್ಲಾ ಸದಸ್ಯರು ವಿಮೆಯ ಲಾಭ ಪಡೆಯಬಹುದು. ಉದಾಹರಣೆಗೆ ವಿಮೆಯ ಮೊತ್ತ(Sum Insured) ಒಂದು ಲಕ್ಷ. ನನ್ನ ಕುಟುಂಬದ ನಾಲ್ಕು ಸದಸ್ಯರ ಹೆಸರನ್ನು ನಾನು ಪಾಲಿಸಿಯಲ್ಲಿ ನೊಂದಾಯಿಸಿದ್ದೇನೆ. ಆ ಒಂದು ಲಕ್ಷ ವಿಮೆಯ ಮೊತ್ತವನ್ನು ನಾಲ್ಕು ಸದಸ್ಯರು ಸಹ ಬಳಸಿಕೊಳ್ಳಲು ಅರ್ಹರಾಗಿರುತ್ತಾರೆ.

ಗ್ರೂಪ್ ಪಾಲಿಸಿ:

ಖಾಸಗಿ ಕಂಪನಿಗಳಲ್ಲಿ ಅಥವಾ ಬೇರೆ ಬೇರೆ ಇಲಾಖೆಗಳಲ್ಲಿ ಗುಂಪು ಗುಂಪಾಗಿ ಕೆಸಲ ಮಾಡುವವರು ಈ ವಿಮೆಯ ವ್ಯಾಪ್ತಿಯಲ್ಲಿ ಬರುತ್ತಾರೆ. ಆ ನೌಕರರಿಗೆ/ಕಾರ್ಮಿಕರರಿಗೆ ಅವರು ಕೆಲಸ ಮಾಡುತ್ತಿರುವ ಕಂಪನಿಯೇ ಆರೋಗ್ಯವಿಮೆ ಮಾಡಿಸಿಕೊಡುತ್ತದೆ. ತಿಂಗಳ ವರಮಾನದಲ್ಲಿ ಒಂದಷ್ಟು ಪ್ರಿಮಿಯಂ ಹಣವನ್ನು ಕಡಿದುಕೊಳ್ಳಲಾಗುತ್ತದೆ. (ಪ್ರತಿಯೊಂದು ಕಂಪನಿಯ ತನ್ನದೇ ಆದ ನೀತಿ ನಿಯಮಗಳಿವೆ.) ಕಂಪನಿಗಳು ಗುಂಪು ಗುಂಪಾಗಿ ಒಟ್ಟಾರೆ ಪಾಲಿಸಿಗಳನ್ನು ಮಾಡಿಸುವುದರಿಂದ ಮತ್ತು ಅಧಿಕ ಪ್ರೀಮಿಯಂ ಭರಿಸುವುದರಿಂದ ಅವರಿಗೆ ವಿಶೇಷವಾದ ರಿಯಾಯಿತಿಗಳು ಸಿಗುತ್ತವೆ. ಉದಾಹರಣೆಗೆ - ಹೆರಿಗೆ ಸೌಲಭ್ಯ. ಇಂಡಿವಿಜ್ಯುವಲ್ ಪಾಲಿಸಿಯಲ್ಲಿ ಈ ಸೌಲಭ್ಯವನ್ನು ಕಲ್ಪಿಸಲಾಗುವುದಿಲ್ಲ.

ಕೆಲ ಗ್ರೂಪ್ ಪಾಲಿಸಿಯಲ್ಲಿ ಪಾಲಿಸಿಯ ನಿಯಮಗಳಾದ 4.1, 4.2, 4.3 ಅನ್ವಯಿಸುವುದಿಲ್ಲ ಆದರೆ ಇಂಡಿವಿಜ್ಯುವಲ್ ಪಾಲಿಸಿಯಲ್ಲಿ ಈ ನಿಯಮಗಳು ಅನ್ವಯಿಸುತ್ತವೆ.

ಮಾರುಕಟ್ಟೆಯಲ್ಲಿ ಈಗಿರುವ ನಾಲ್ಕು ಸರ್ಕಾರಿ ಆರೋಗ್ಯ ವಿಮೆ ಕಂಪನಿಗಳಲ್ಲಿ ಈ ಕೆಳಗಿನ ಪಾಲಿಸಿ ನಿಯಮಗಳು ಚಾಲ್ತಿಯಲ್ಲಿವೆ (ಸರ್ಕಾರಿ ಮತ್ತು ಖಾಸಗಿ ವಿಮೆ ಕಂಪನಿಗಳು ಕಾಲಕ್ಕುನುಗುಣವಾಗಿ ತಮ್ಮ ನಿಯಮಗಳನ್ನು ಬದಲಿಸುತ್ತಿರುತ್ತವೆ.)

4.1 -

ಪಾಲಿಸಿಯನ್ನು ತೆಗೆದುಕೊಳ್ಳುವ ಸಮಯದಲ್ಲಿ ವಿಮಾದಾರನಿಗಿದ್ದಂತಹ ಅಥವಾ ವಿಮೆ ತೆಗೆದುಕೊಳ್ಳುವ ಮುಂಚಿತವಾಗಿದ್ದಂತಹ ಕಾಯಿಲೆಗಳು ಮತ್ತು ಅದರಿಂದ ಉದ್ಭವಿಸುವ ತೊಂದರೆಗಳಿಗೆ ವಿಮೆ ಕಂಪನಿ ವೆಚ್ಚವನ್ನು ಭರಿಸುವುದಿಲ್ಲ. ಆದರೆ ನಾಲ್ಕು ವರ್ಷ ಸತತವಾಗಿ ಪಾಲಿಸಿಯನ್ನು ಕ್ಲೇಮ್ ಮಾಡದೇ ಇದ್ದಲ್ಲಿ, ಪಾಲಿಸಿ ತೆಗೆದುಕೊಳ್ಳುವ ಮುನ್ನ ಇದ್ದ ಎಲ್ಲಾ ಕಾಯಿಲೆಗಳಿಗೆ ವಿಮೆ ಕಂಪನಿ ವೆಚ್ಚವನ್ನು ಭರಿಸುತ್ತದೆ.
4.2 -

ಪಾಲಿಸಿ ಮಾಡಿಸಿದ 30 ದಿನಗಳ ಒಳಗೆ ನಿಯಮ 4.3 ಕ್ಕೆ ಸಂಬಂಧಪಟ್ಟ ಯಾವುದೇ ಕಾಯಿಲೆಗೂ ವಿಮೆ ಕಂಪನಿ ವೆಚ್ಚ ಭರಿಸುವುದಿಲ್ಲ.
4.3 -

ಪಾಲಿಸಿ ಮಾಡಿಸಿದ ಎರಡು ವರ್ಷದ ಒಳಗೆ ಈ ಕೆಳಗಿನ ಕಾಯಿಲೆಗಳು ವಿಮಾದಾರನಲ್ಲಿ ಕಂಡು ಬಂದಲ್ಲಿ ವಿಮೆ ಕಂಪನಿ ಆ ರೋಗಕ್ಕೆ ಖರ್ಚಾದ ಹಣವನ್ನು ಭರಿಸುವುದಿಲ್ಲ. ಅಂದರೆ ಸ್ವತಃ ರೋಗಿಯೇ ಖರ್ಚನ್ನು ಭರಿಸಿಬೇಕಾಗುತ್ತದೆ. ಆದರೆ ವಿಮಾದಾರ ಸತತವಾಗಿ ಎರಡು ವರ್ಷಗಳವರೆಗೆ ತನ್ನ ಪಾಲಿಸಿಯನ್ನು ರಿನೀವಲ್ ಮಾಡಿಸಿ, ಪಾಲಿಸಿಯನ್ನು ಚಾಲ್ತಿಯಲ್ಲಿಟ್ಟಿದ್ದರೆ ವಿಮೆ ಕಂಪನಿ ಈ ಕಾಯಿಲೆಗಳಿಗೆ ವೆಚ್ಚವನ್ನು ಭರಿಸುತ್ತದೆ.
೧.ಯಾವುದೇ ಚರ್ಮ ರೋಗಗಳು

೨.ಯಾವುದೇ ರೀತಿಯ ಒಳ ಅಥವಾ ಹೊರ ಅಮಾರಕ ರೋಗ ತಗುಲಿದ, ಗಂತಿ,ಗಂಟು,ಅರ್ಬುದ,ದುರ್ಮಾಂಸ,ಎದೆಯಲ್ಲಿ ಗಂಟು

೩.ಅಮಾರಕ ಕಿವಿ,ಮೂಗು,ಗಂಟಲು ಅಸ್ವಸ್ಥತೆ ಅಥವಾ ರೋಗ

೪.ಅಮಾರಕ ಮೂತ್ರಕೋಶದ ಅಥವಾ ಜನನೇಂದ್ರಿಯಕ್ಕೆ ಸಂಬಂಧಪಟ್ಟ ಗ್ರಂಥಿಯ ಕಾಯಿಲೆಗಳು

೫.ಕಣ್ಣಿನ ಪೊರೆ ಮತ್ತು ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಕಾಯಿಲೆಗಳು

೬.ಮಧುಮೇಹ

೭.ಜಠರಕ್ಕೆ ಸಂಬಂಧಿಸಿದ ಕಾಯಿಲೆಗಳು

೮.ಸಂಧಿವಾತ, ಕೀಲುಗಳು ಊದಿ ಕೆರಳುವ ರೋಗ

೯.ಹರ್ನಿಯ, ಎಲ್ಲಾ ರೀತಿಯ ಅಂಡವಾಯು ರೋಗ

೧೦.ಹೈಡ್ರೋಸೀಲ್

೧೧.ರಕ್ತದೊತ್ತಡ

೧೨.ರಕ್ತಸ್ರಾವಕ್ಕೆ ಸಂಬಂಧಪಟ್ಟ/ಗರ್ಭ ಜಾರುವಿಕೆ/ಸಂಬಂಧಪಟ್ಟ ಕಾಯಿಲೆಗಳು

೧೩.ಕೀಲು ನೋವು

೧೪.ಪೈಲ್ಸ್ - ಮೂಲವ್ಯಾಧಿ ರೋಗ

೧೫.ಪಿಲಾನಿಡಲ್ ಸೈನುಸ್, ಸೈನಸೈಟಿಸ್ ತೊಂದರೆಗಳು

೧೬.ಬೆನ್ನುಹುರಿ, ಬೆನ್ನು ಮೂಳೆ ಕುಸಿತ (ಅಪಘಾಗ ರಹಿತ)

೧೭.ಪಿತ್ತಜನಕಾಂಗ ಮತ್ತು ಪಿತ್ತನಾಳದ ಕಲ್ಲು

೧೮.ಮೂತ್ರಜನಕಾಂಗದ ಕಲ್ಲುಗಳು

೧೯.ಜನ್ಮಜಾತ ಕಾಯಿಲೆಗಳು

೨೦.ವೆರಿಕೋಜ್ ವೈನ್ಸ್/ವೆರಿಕೋಜ್ ಹುಣ್ಣು

ಪಾಲಿಸಿ ಮಾಡಿಸಿದ ನಾಲ್ಕು ವರ್ಷದ ಒಳಗೆ ಈ ಕೆಳಗಿನ ಕಾಯಿಲೆಗಳು ವಿಮಾದಾರನಲ್ಲಿ ಕಂಡು ಬಂದಲ್ಲಿ ವಿಮೆ ಕಂಪನಿ ಆ ರೋಗಕ್ಕೆ ಖರ್ಚಾದ ಹಣವನ್ನು ಭರಿಸುವುದಿಲ್ಲ. ಅಂದರೆ ಸ್ವತಃ ರೋಗಿಯೇ ಖರ್ಚನ್ನು ಭರಿಸಿಬೇಕಾಗುತ್ತದೆ. ಆದರೆ ವಿಮಾದಾರ ಸತತವಾಗಿ ನಾಲ್ಕು ವರ್ಷಗಳವರೆಗೆ ತನ್ನ ಪಾಲಿಸಿಯನ್ನು ರಿನೀವಲ್ ಮಾಡಿಸಿ, ಪಾಲಿಸಿಯನ್ನು ಚಾಲ್ತಿಯಲ್ಲಿಟ್ಟಿದ್ದರೆ ವಿಮೆ ಕಂಪನಿ ಈ ಕಾಯಿಲೆಗಳಿಗೆ ವೆಚ್ಚವನ್ನು ಭರಿಸುತ್ತದೆ.

೧.ವಯಸ್ಸಿಗ ಸಂಬಂಧಪಟ್ಟ ಕೀಲುನೋವು/ಆಸ್ಟಿಯೋ ಆರ್ಥ್ರೈಟಿಸ್/ಆಸ್ಟಿಯೋ ಪೊರೋಸಿಸ್

೨.ಕೀಲು ಬದಲಾವಣೆ

ಈ ಕೆಳಗೆ ನಮೂದಿಸಿರುವ ಕಾಯಿಲೆ/ಶಸ್ತ್ರಚಿಕಿತ್ಸೆಗಳನ್ನು ಹೊರತುಪಡಿಸಿ ಬೇರಾವ ಕಾಯಿಲೆಗಳಿಗು ಕನಿಷ್ಟಪಕ್ಷ 24 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಉಳಿಯಲೇ ಬೇಕು. ಇಲ್ಲವಾದಲ್ಲಿ ವಿಮಾದರನೇ ಆಸ್ಪತ್ರೆ ಬಿಲ್ಲನ್ನು ಕೈಯಿಂದ ಕಟ್ಟಬೇಕಾಗುತ್ತದೆ. ವಿಮಾದಾರ ಕೇವಲ ತಪಾಸಣೆಗಾಗಿ ಮಾತ್ರ ಆಸ್ಪತ್ರೆಯಲ್ಲಿ ಭರ್ತಿಯಾಗಿ ೨೪ ತಾಸು ಕಳೆದಿದ್ದರೂ ಸಹ ವಿಮೆ ಕಂಪನಿ ಖರ್ಚನ್ನು ಭರ್ತಿಸುವುದಿಲ್ಲ. (ಉದಾಹರಣೆಗೆ - ನನಗೆ ಬೆನ್ನುನೋವು, MRI ಮಾಡಿಸಿಕೊಂಡೆ, ರಿಪೋರ್ಟಿನಲ್ಲಿ ಎಲ್ಲಾ ನಾರ್ಮಲ್ ಇದೆ ಅಂತ ಬಂತು. ವೈದ್ಯರು ಗುಳಿಗೆಗಳನ್ನು ಮಾತ್ರ ಬರೆದು ಕೊಟ್ಟರು - ಅಂತಹ ಸಂದರ್ಭದಲ್ಲಿ ವಿಮೆ ಕಂಪನಿ ಖರ್ಚು ಭರಿಸುವುದಿಲ್ಲ. ಕಾಯಿಲೆಗೆ ಆಸ್ಪತ್ರೆಯಲ್ಲಿ ತಕ್ಕ ಚಿಕಿತ್ಸೆ ಕೊಡಲೇಬೇಕು ಆಗ ಮಾತ್ರ ವಿಮೆ ಕಂಪನಿ ಖರ್ಚನ್ನು ಭರಿಸುತ್ತದೆ.)

೧.ರೇಬಿಸ್ ಲಸಿಕೆ

೨.ಅಪೆಂಡಿಸೆಕ್ಟಮಿ

೩.ಸಿ.ಎ.ಜಿ.

೪.ಕಾರೋನರಿ ಆನ್ಜಿಯೋಪ್ಲಾಸ್ಟಿ

೫.ದಂತ ಚಿಕಿತ್ಸೆ(ಅಪಘಾತಕ್ಕೆ ಒಳಗಾಗಿದ್ದರಿ ಮಾತ್ರ)

೬.ಗರ್ಭಪಾತ

೭.ಕಣ್ಣಿನ ಶಸ್ತ್ರಚಿಕಿತ್ಸೆ

೮.ಮೂಳೆ ಮುರಿತ/ಜಾರುವಿಕೆ

೯.ಜೀರ್ಣಾಂಗವ್ಯೂಹಕ್ಕೆ ಸಂಬಂಧಿತ

೧೦.ಡಯಾಲಿಸಿಸ್

೧೧.ಹೈಡ್ರೊಸೀಲ್

೧೨.ಗರ್ಭಕೋಶ ಶಸ್ತ್ರಚಿಕಿತ್ಸೆ

೧೩.ಹರ್ನಿಯಾ

೧೪.ಕಿಡ್ನಿ ಕಲ್ಲು

೧೫.ಕಿಮೋಥೆರಪಿ

೧೬.ಪೈಲ್ಸ್/ಫಿಸ್ತುಲ

೧೭.ಪ್ರೊಸ್ಟೇಟ್

೧೮.ರೇಡಿಯೋಥೆರಪಿ

೧೯.ಸೈನಸೈಟಿಸ್

೨೦.ಪಿತ್ತಜನಕಾಂಗದ ಕಲ್ಲು

೨೧.ಗಂಟಲ ಗಂಟಿನ ಶಸ್ತ್ರಚಿಕಿತ್ಸೆ

೨೨.ಮೂತ್ರಜನಕಾಂಗಕ್ಕೆ ಸಂಬಂಧಿತ

ಸೂಚನೆ: ಅನಾವಶ್ಯಕ ಗರ್ಭಪಾತಕ್ಕೆ ವಿಮೆ ಕಂಪನಿ ಖರ್ಚು ಭರಿಸುವುದಿಲ್ಲ.

ನಗದು ರಹಿತ ಕ್ಲೇಮ್(Cashless):

ಈ ನಡುವೆ "ಕ್ಯಾಶ್ಲೆಸ್" ಎನ್ನುವ ಪದ ಬಹಳ ಚಾಲ್ತಿಯಲ್ಲಿದೆ. ಈ ಪ್ಲಾನ್ ಪ್ರಕಾರ ಆಸ್ಪತ್ರೆಯ ಖರ್ಚುಗಳನ್ನು ಭರಿಸುವ ಕೆಲಸವನ್ನು ಆಸ್ಪತ್ರೆ ಮತ್ತು ವಿಮೆ ಕಂಪನಿ ನೇರವಾಗಿ ಮಾಡಿಕೊಳ್ಳುತ್ತವೆ. (ಆಸ್ಪತ್ರೆಗೆ ನೀವು ಭರ್ತಿಯಾಗಲು ಹಣ ತೆಗೆದುಕೊಂಡು ಹೋಗುವ ಬದಲು, ವಿಮೆ ಕಂಪನಿ/ಟಿ.ಪಿ.ಎ ಕಂಪನಿ ನಿಮಗೆ ನೀಡಿರುವ ಗುರುತಿನ ಚೀಟಿ ಕೊಂಡೊಯ್ಯಬೇಕಾಗುತ್ತದೆ)

ಟಿ. ಪಿ. ಎ. (TPA - Third Party Administration):

ಎಲ್ಲ ಖಾಸಗಿ ಮತ್ತು ಸರ್ಕಾರಿ ವಿಮೆ ಕಂಪನಿಗಳು ತಮ್ಮ ಅತಿಯಾದ ಕೆಲಸದ ಭಾರ ತಾಳಲಾರದೆ, ಕೆಲಸದ ಕಾರ್ಯವೈಖರಿಯನ್ನು ಉತ್ತಮಪಡಿಸಲು ಮತ್ತು ಅತಿ ಶೀಘ್ರವಾಗಿ ವಿಮೆದಾರನಿ ಸಹಾಯ ಕಲ್ಪಿಸಲು, ಸರ್ಕಾರದ ಕಾನೂನಿಡಿ ನೊಂದಣಿಯಾಗಿರುವ ಹೊರಗುತ್ತಿಗೆ ಕಂಪನಿಗಳಿಗೆ ತಮ್ಮ ಕೆಲಸವನ್ನು ವರ್ಗಾಯಿಸಿವೆ. ಆ ಹೊರಗುತ್ತಿಗೆ ಕಂಪನಿಗಳಿಗೆ TPA ಕಂಪನಿ ಎನ್ನುತ್ತಾರೆ. ವಿಮೆದಾರ ಯಾವುದೇ ವಿಮೆ ಕಂಪನಿಗೆ ನೇರವಾಗಿ ಸಂಪರ್ಕಿಸುವ ಬದಲು ಟಿ.ಪಿ.ಎ. ಕಂಪನಿಗಳ ಸಂಪರ್ಕಕ್ಕೆ ಒಳಪಡುತ್ತಾನೆ. ವಿಮೆದಾರರಿಗೆ ಸಹಾಯ ಮಾಡಲು TPA ಗಳು ಕಾಲ್ ಸೆಂಟರ್ ಗಳ ವ್ಯವಸ್ಥೆ ಮಾಡಿವೆ.(ವಿಮೆದಾರ ತನ್ನ ಟಿಪಿಎ ಕಂಪನಿಯ ಫೋನ್ ನಂಬರ್ ತಿಳಿದುಕೊಳ್ಳುವುದು ಉತ್ತಮ).

ಉದಾಹರಣೆಗೆ - ನಾನು ಅರೋಗ್ಯವಿಮೆಯನ್ನು ನ್ಯಾಶನಲ್ ಇನ್ಶೂರೆನ್ಸ್ ಕಂಪನಿಯಿಂದ ತೆಗೆದುಕೊಂಡೆ. ಆಗ ಅವರು ನನಗೆ ಒಂದು ಪಾಲಿಸಿಯ ಪ್ರತಿಯನ್ನು ಕೊಡುತ್ತಾರೆ. ಅದರಲ್ಲಿ ಪಾಲಿಸಿಯ ಕಾಲಾವಧಿ,ಪಾಲಿಸಿಯ ಮೊತ್ತ(Sum Insured),ನನ್ನ ಹೆಸರು,ವಯಸ್ಸು,ಲಿಂಗ,ಪಾಲಿಸಿಯ ನಂಬರ್,ಪಾಲಿಸಿಯ ಕಾಯಿದೆ ಕಾನೂನು ಇತ್ಯಾದಿ ಇರುತ್ತದೆ. ಅದನ್ನು ನಾವು ಜೋಪಾನವಾಗಿಟ್ಟುಕೊಳ್ಳಬೇಕಾಗುತ್ತದೆ. ಏಕೆಂದರೆ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಬಂದರೆ ಪಾಲಿಸಿ ನಂಬರ್ ಬಹಳ ಮುಖ್ಯ.

ನ್ಯಾಶನಲ್ ಇನ್ಶೂರೆನ್ಸ್ ಕಂಪನಿಯವರು ನನ್ನ ಪಾಲಿಸಿಯ ಎಲ್ಲಾ ವಿವರಗಳನ್ನು ಟಿ.ಪಿ.ಎ. ಕಂಪನಿಗೆ ಕಳುಹಿಸುತ್ತಾರೆ. (ಸದ್ಯಕ್ಕೆ ೨೮ ಟಿ.ಪಿ.ಎ. ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ). ಆ ಟಿ.ಪಿ.ಎ. ಕಂಪನಿಗಳು ಪಾಲಿಸಿದಾರನ ವಿಳಾಸಕ್ಕೆ - ವಿಮಾದಾರರೇ ನೀವು ನಮ್ಮ ಟಿ.ಪಿ.ಎ. ಕಂಪನಿಯ ಕಾರ್ಯವ್ಯಾಪ್ತಿಯಲ್ಲಿ ಒಳಪಡುತ್ತೀರಿ ಎಂದು ವಿಮಾದಾರನಿಗೆ ಖಚಿತ ಪಡಿಸಲು, ಮುಂದೆ ಯಾವುದೇ ರೀತಿಯ ಮಾಹಿತಿ ಅಥವಾ ಸೇವೆ ಪಡೆಯಲು ಒಂದು ಗುರುತಿನ ಚೀಟಿಯನ್ನು(Identity Card) ಕಳುಹಿಸುತ್ತಾರೆ. ಅದರಲ್ಲಿ ವಿಮಾದಾರನಿಗೆ ಒಂದು ವಿಶೇಷ ಗುರುತಿನ ಸಂಖ್ಯೆಯನ್ನು ಕೊಟ್ಟಿರಲಾಗುತ್ತದೆ. ವಿಮಾದಾರ ಆಸ್ಪತ್ರೆಗೆ ಭರ್ತಿಯಾಗಬೇಕಾದರೆ ಆ ಐ.ಡಿ. ಕಾರ್ಡನ್ನು ಕೊಂಡೊಯ್ಯಬೇಕಾಗುತ್ತದೆ. ಆಗ "ಕ್ಯಾಶ್ಲೆಸ್ ಫೆಸಿಲಿಟಿ" ಪಡೆಯಲು ಸಹಾಯವಾಗುತ್ತದೆ.

ಆಸ್ಪತ್ರೆಯಲ್ಲಿ ಭರ್ತಿಯಾಗಲು ನೀವು ಹೋದಿರಿ ಎಂದಿಟ್ಟುಕೊಳ್ಳೋಣ. ಅಲ್ಲಿ - ನನ್ನ ಬಳಿ ಹೆಲ್ತ್ ಇನ್ಶೂರೆನ್ಸ್ ಇದೆ, ಕ್ಯಾಶ್ಲೆಸ್ ಫೆಸಿಲಿಟಿ ಕೊಡಿ ಎಂದು ಕೇಳಬೇಕು. ಆಗ ಅವರು ನಿಮ್ಮದು ಯಾವ ಟಿ.ಪಿ.ಎ. ಎಂದು ಕೇಳುತ್ತಾರೆ. ಅವರ ಹತ್ತಿರ ಎಲ್ಲಾ ಟಿ.ಪಿ.ಎ. ಗಳ "ಕ್ಲೇಮ್ ಫಾರ್ಮ್" ಗಳಿರುತ್ತವೆ. ಆ ಫಾರ್ಮಿನಲ್ಲಿ ನಿಮಗೆ ಟಿ.ಪಿ.ಎ. ಕಂಪನಿ ಕೊಟ್ಟಿರುವ ಗುರುತಿನ ಸಂಖ್ಯೆ ಅಥವಾ ಪಾಲಿಸಿ ಸಂಖ್ಯೆ,ನಿಮ್ಮ ಹೆಸರು,ವಯಸ್ಸು,ಲಿಂಗ,ಮೊಬೈಲ್ ನಂಬರ್ ಬರೆದು, ರುಜು ಮಾಡಿ ಕೊಡಬೇಕು. ನೀವು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ನಿಮ್ಮ ಎಮ್ಪ್ಲಾಯಿ ನಂಬರ್ ನಮೂದಿಸಬೇಕು. ಅವರು ಆ ಫಾರ್ಮನ್ನು ನಿಮಗೆ ಯಾವ ವೈದ್ಯರು ನೋಡುತ್ತಿದ್ದಾರೋ ಅವರಿಗೆ ಕೊಡುತ್ತಾರೆ. ಆ ವೈದ್ಯರು ನಿಮ್ಮ ರೋಗಲಕ್ಷಣಗಳನ್ನು ಮತ್ತು ಅದಕ್ಕೆ ಬೇಕಾದ ಚಿಕಿತ್ಸೆ ಹಾಗೂ ಅದಕ್ಕೆ ತಗಲುವ ವೆಚ್ಚವನ್ನು ಅದರಲ್ಲಿ ಭರ್ತಿಮಾಡಿ ಅವರಿಗೆ ಹಿಂತಿರಿಗಿಸುತ್ತಾರೆ. ನಿಮಗೆ ಆಸ್ಪತ್ರೆಯಲ್ಲಿ ಭರ್ತಿಮಾಡಿಕೊಂಡು, ನಂತರ ಆ ಕ್ಲೇಮ್ ಫಾರ್ಮನ್ನು ಆಸ್ಪತ್ರೆಯವರು ಟಿ.ಪಿ.ಎ. ಕಂಪನಿಗೆ ಫ್ಯಾಕ್ಸ್ ಮಾಡುತ್ತಾರೆ ಅಥವಾ ಅಂತರ್ಜಾಲದ ಸಹಾಯದಿಂದ ಕಳುಹಿಸುತ್ತಾರೆ.



ಆ ಫ್ಯಾಕ್ಸ್ ಟಿ.ಪಿ.ಎ. ಗೆ ಬಂದಾಕ್ಷಣ ರೋಗಿಯ ವಿವರಗಳನ್ನು ಟಿ.ಪಿ.ಎ. ಕಂಪನಿ ತನ್ನ ತಂತ್ರಾಂಶದಲ್ಲಿ ಸಂಗ್ರಹಿಸಿಕೊಂಡು ನಂತರ ಟಿ.ಪಿ.ಎ. ಕಂಪನಿಯ ವೈದ್ಯರ ಬಳಿ ಕಳುಹಿಸುತ್ತದೆ (ಎಲ್ಲಾ ಕೆಲಸಗಳೂ ಅಂತರ್ಜಾಲದ ಮುಖಾಂತರ ನಡೆಯುತ್ತವೆ). ಟಿ.ಪಿ.ಎ. ವೈದ್ಯರು ರೋಗಿಯ ಬಗ್ಗೆ ಆಸ್ಪತ್ರೆಯವರು ಕಳುಹಿಸಿರುವ ಎಲ್ಲಾ ವಿವರಗಳನ್ನು ಓದುತ್ತಾರೆ. ನಂತರ ಪಾಲಿಸಿಯ ನಿಯಮಗಳ ಪ್ರಕಾರ ಕ್ಯಾಶ್ಲೆಸ್ ಸೌಲಭ್ಯ ಪಡೆಯಲು ವಿಮಾದಾರ ಅರ್ಹನಾಗಿದ್ದರೆ, ಆಸ್ಪತ್ರೆಯವರು ಎಷ್ಟು ಹಣ ಕೇಳುತ್ತಿದ್ದಾರೆ, ಎಷ್ಟು ಕೊಡಬಹುದು ಎಂದು ತೀರ್ಮಾನಿಸಿ , ನಿಯಮಗಳ ಪ್ರಕಾರ ನಾವು ಇಷ್ಟು ಹಣವನ್ನು ಬಿಡುಗಡೆ ಮಾಡಿದ್ದೇವೆ ಎಂದು ಆಸ್ಪತ್ರೆಗೆ ಫ್ಯಾಕ್ಸ್ ಕಳುಹಿಸುತ್ತಾರೆ. (ಕೆಲವು ರೋಗಗಳಿಗೆ ಪ್ಯಾಕೇಜ್ ಗಳಿರುವುದುಂಟು).

ಹಣ ಬಿಡುಗಡೆ ಮಾಡುವ ಮೊದಲು, ಇನ್ನೇನಾದರು ಆಸ್ಪತ್ರೆಯಿಂದ ಹೆಚ್ಚಿನ ಮಾಹಿತಿ ಬೇಕಾದರೆ, ನಮಗೆ ಇಂತಹ ಮಾಹಿತಿ ಬೇಕೆಂದು ಆಸ್ಪತ್ರೆಗೆ ಫ್ಯಾಕ್ಸ್ ಕಳುಹಿಸುತ್ತಾರೆ, ಉತ್ತರ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ.

ಕೆಲವು ಸಂದರ್ಭಗಳಲ್ಲಿ ವಿಮಾದಾರ ಪಾಲಿಸಿಯ ನಿಯಮಗಳ ಪ್ರಕಾರ ಕ್ಯಾಶ್ಲೆಸ್ ಸೌಲಭ್ಯ ಪಡೆಯಲು ಅರ್ಹನಾಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ. ಈ ನಿಮ್ಮ ರೋಗಿ ಪಾಲಿಸಿಯ ನಿಯಮಗಳ ಪ್ರಕಾರ ಕ್ಯಾಶ್ಲೆಸ್ ಸೌಲಭ್ಯ ಪಡೆಯಲು ಅರ್ಹನಾಗಿರುವುದಿಲ್ಲ, ದಯವಿಟ್ಟು ಎಲ್ಲಾ ವೆಚ್ಚವನ್ನು ರೋಗಿಯಿಂದ ಪಡೆದುಕೊಳ್ಳಿ ಎಂದು ಆಸ್ಪತ್ರೆಗೆ ಫ್ಯಾಕ್ಸ್ ಮೂಲಕ ಸಂದೇಶವನ್ನು ಕಳುಹಿಸಲಾಗುತ್ತದೆ. ಇದೆಲ್ಲಾ ಆರು ಗಂಟೆಗಳಲ್ಲಿ ನಡೆದು ಹೋಗುತ್ತದೆ. ರೋಗಿ ಗುಣವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಮಯದಲ್ಲಿ ಫೈನಲ್ ಬಿಲ್ ಪುನಃ ಟಿ.ಪಿ.ಎ. ಗೆ ಬರುತ್ತದೆ. ಆಗ ಟಿ.ಪಿ.ಎ. ವೈದ್ಯರು ಡಿಸ್ಚಾರ್ಜ್ ಸಮ್ಮರಿಯನ್ನು ಸಂಪೂರ್ಣವಾಗಿ ವೀಕ್ಷಿಸಿ, ಫೈನಲ್ ಬಿಲ್ಲನ್ನು ಜಾಲಾಡುತ್ತಾರೆ. ಎಲ್ಲವು ಸರಿಯಾಗಿದ್ದಲ್ಲಿ ಬಿಲ್ಲನ್ನು ಅಪ್ರೂವ್ ಮಾಡುತ್ತಾರೆ. ಈ ಫ್ಯಾಕ್ಸ್ ಆಸ್ಪತ್ರೆಗೆ ತಲುಪಿದಾಕ್ಷಣ ಆಸ್ಪತ್ರೆಯಿಂದ ರೋಗಿ ಹೊರಗೆ ಹೋಗಲು ಅನುಮತಿ ಸಿಗುತ್ತದೆ.

ರೋಗಿಯ ಎಲ್ಲಾ ವರ್ಜಿನಲ್ ಡಾಕ್ಯುಮೆಂಟುಗಳನ್ನು ಆಸ್ಪತ್ರೆಯಿಂದ ಟಿ.ಪಿ.ಎ.ಗೆ ತರಸಿಕೊಳ್ಳುತ್ತಾರೆ. ಅದನ್ನು ಕೂಲಂಕುಶವಾಗಿ ವೀಕ್ಷಿಸಿ, ನಂತರ ಆಸ್ಪತ್ರೆಗೆ ಇ-ಸರ್ವಿಸ್ ಮೂಲಕ ಹಣ ಪಾವತಿ ಮಾಡುತ್ತಾರೆ.

ಕೆಲವರು ಕ್ಯಾಶ್ಲೆಸ್ ಸೌಲಭ್ಯಕ್ಕೆ ಹೋಗಲ್ಲ. ತಾವೆ ಸ್ವತಃ ಆಸ್ಪತ್ರೆಯ ಬಿಲ್ಲನ್ನು ಕಟ್ಟಿ ನಂತರ ಟಿ.ಪಿ.ಎ. ಗೆ ತಮ್ಮ ಎಲ್ಲಾ ವರ್ಜಿನಲ್ ಬಿಲ್ಲುಗಳನ್ನು,ಆಸ್ಪತ್ರೆಯ ದಾಖಲೆಗಳನ್ನು ಕಳುಹಿಸಿ ಹಣವನ್ನು ಪಡೆಯುತ್ತಾರೆ. ಟಿ.ಪಿ.ಎ. ಕಂಪನಿ ದಾಖಲೆಗಳನ್ನು ಕೂಲಂಕುಶವಾಗಿ ವೀಕ್ಷಿಸಿ ವಿಮಾದಾರ ಅರ್ಹನಾಗಿದ್ದರೆ ಮಾತ್ರ ಅವನ ವಿಳಾಸಕ್ಕೆ ಚೆಕ್ ಕಳುಹಿಸುತ್ತದೆ.(ಇದಕ್ಕೆ ೩ ತಿಂಗಳುಗಳು ಹಿಡಿಯುತ್ತವೆ)

ನನ್ನದು ಒಂದೇ ವಿನಂತಿ. ಆರೋಗ್ಯವಿಮೆ ಮಾಡಿಸುವುದು ಬಿಡುವುದು ನಿಮಗೆ ಬಿಟ್ಟಿದ್ದು. ಹಾಗೆ ಮಾಡಿಸಲು ಇಷ್ಟವಿದ್ದರೆ, ಕೂಲಂಕುಶವಾಗಿ ಪಾಲಿಸಿಯ ಕಂಡೀಷನ್ ಗಳನ್ನು ಓದಿ. ಬೇಕಾದರೆ ಏಜಂಟ್ ಹತ್ತಿರ ಎರಡು ದಿನ ಸಮಯ ತೆಗೆದುಕೊಳ್ಳಿ. ನಿಮಗೆ ಏನಾದರು ಸಂಶಯಗಳಿದ್ದರೆ ಆತನಿಗೆ ಕೇಳಿ ತಿಳಿದುಕೊಳ್ಳಿ. ಕಮೀಷನ್ ಆಸೆಗೆ ಅವರು ಹೆಚ್ಚಿನ ವಿವರಗಳನ್ನು ನೀಡದೆಯೇ ಪಾಲಿಸಿಯನ್ನು ನಿಮಗೆ ಮಾರಿ ಬಿಡುತ್ತಾರೆ.

ಕೆಲವರು ಇಂಡಿವಿಜ್ಯುವಲ್ ಪಾಲಿಸಿ ಮಾಡಿಸಿ ಹೆರಿಗೆಗಾಗಿ ಹೋಗಿ ಆಸ್ಪತ್ರೆಯಲ್ಲಿ ಭರ್ತಿಯಾಗಿರುತ್ತಾರೆ. ಬಿಲ್ಲು ಐವತ್ತು ಸಾವಿರ ಆಗಿರುತ್ತದೆ. ಆಮೇಲೆ ಹೊತ್ತಾಗುತ್ತೆ ಹೆರಿಗೆ ಪಾಲಿಸಿ ನಿಮಯಗಳಿಗೆ ಒಳಪಡುವುದಿಲ್ಲ ಅಂತ. ಆಗ ಶುರು ನೋಡಿ ಅವರ ಪರದಾಟ....

ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರು ದಯವಿಟ್ಟು ಡೀಲಕ್ಸ್ ರೂಂ ಗೆ ಹೋಗಬೇಡಿ. 30% ಬಿಲ್ಲು ಹೆಚ್ಚು ಬರುತ್ತೆ. ಆ 30% ಹಣ ನಿಮ್ಮ ಪಾಲಿಸಿಯಲ್ಲಿ ಉಳಿದಿದ್ದರೆ ನಾಳೆ ನಿಮಗೇ ಉಪಯೋಗ ಆಗಬಹುದು ಅಲ್ಲವೆ...? (ಆಸ್ಪತ್ರೆಗೆ ಭರ್ತಿಯಾಗುವ ಮುನ್ನ ನಿಮ್ಮ ಕಂಪನಿಯ ನಿಯಮಗಳ ಪ್ರಕಾರ ನೀವು ಯಾವ ರೂಮ್ ಗೆ ಭರ್ತಿಯಾಗುವ ಅರ್ಹತೆ ಹೊಂದಿದ್ದೀರಿ ಎಂದು ತಿಳಿದುಕೊಳ್ಳಿ.)(ಕೆಲವು ಕಂಪನಿಗಳಲ್ಲಿ ನೌಕರರು ಕೊ-ಪೆ ಕೊಡಬೇಕಾಗುತ್ತದೆ. ಉದಾಹರಣೆಗೆ - ಬಿಲ್ಲಿನ ಮೊತ್ತವನ್ನು ನೀವು 10% ಕಟ್ಟಬೇಕಾಗುತ್ತದೆ ಉಳಿದ ಹಣ ಕಂಪನಿ ಕಟ್ಟುತ್ತದೆ)

ಕೆಲ ಕಂಪನಿಗಳಲ್ಲಿ ಅಂಬ್ರೆಲ್ಲಾ ಕವರ್/ಬಫರ್ ಅಮೌಂಟ್ ಅಂತ ಪ್ರತ್ಯೇಕ ಠೇವಣಿ ಇರುತ್ತದೆ. ಕೆಲವೊಮ್ಮೆ ನಿಮ್ಮ ಪಾಲಿಸಿಯ ಎಲ್ಲಾ ವಿಮೆಮೊತ್ತ ಖರ್ಚಾಗಿ ಹೋದರೆ, ನಿಮ್ಮ ಕಂಪನಿ ಬಫರ್ ಅಮೌಂಟ್ ನಿಂದ ಟಿ.ಪಿ.ಎ. ಕಂಪನಿಯ ಮೂಲಕ ಆಸ್ಪತ್ರೆಗೆ ಹಣ ಬಿಡುಗಡೆ ಮಾಡುತ್ತದೆ. ನಿಮ್ಮ ಹೆಚ್.ಆರ್. ಬಳಿ ಕೇಳಿ ತಿಳಿದುಕೊಳ್ಳಿ.(ಪ್ರತಿಯೊಂದು ಕಂಪನಿಯ ತನ್ನದೇ ಆದ ನಿಯಮಗಳಿವೆ)

ಮಾನಸಿಕ ಕಾಯಿಲೆಗಳಿಗೆ,ಏಡ್ಸ್ ಮತ್ತು ಇನ್ನಿತರೆ ಗುಪ್ತ ಕಾಯಿಲೆಗಳಿಗೆ,ಮದ್ಯಪಾನ ಸಂಬಂಧಿತ ಕಾಯಿಲೆಗಳಿಗೆ,ಭಯೋತ್ಪಾದನೆಯಿಂದ ಸಂಭವಿಸಿದ ಅನಾಹುತಗಳಿಗೆ ಯಾವುದೇ ಆರೋಗ್ಯವಿಮೆಯಲ್ಲಿ ಸ್ಥಾನವಿಲ್ಲ.

ನಿಮಗೆ ವಿಮೆ ಕಂಪನಿ ಅಥವಾ ಟಿ.ಪಿ.ಎ ಕಂಪನಿಯ ಸೇವಗಳು ಇಷ್ಟವಾಗದಿದ್ದಲ್ಲಿ ಬೇರೆ ವಿಮೆ ಕಂಪನಿ ಅಥವಾ ಟಿ.ಪಿ.ಎ ಕಂಪನಿಗೆ ಯಾವುದೇ ತೊಂದರೆ ಇಲ್ಲದೆ ವರ್ಗಾವಣೆಗೊಳ್ಳಬಹುದಾದ ಕಾನೂನು ಶೀಘ್ರವೇ ಬರಲಿದೆ.

-ಜಬೀವುಲ್ಲಾ ಖಾನ್

ಮುಂದೆ ಓದಿ

ರಾಜ್ಯ - ರಾಷ್ಟ್ರ

ಹೊಸದಿಲ್ಲಿ:ಮುಂಗಾರ ಮೋಡ ಸೋರುತಿದೆ ನೋಡಾ..ಹೊಸ ವರುಷದ ನಿರೀಕ್ಷೆಯ ಪೂರೈಸಿದೆ ನೋಡಾ...ಮುಂಗಾರು ಮೋಡ ಸೋರುತಿದೆ ನೋಡಾ...ಹೌದು...ಮುಂಗಾರು ನಿರೀಕ್ಷೆಯಂತೆಯೇ ಕಾಲಿಡುತ್ತಿದೆ.ಕೇರಳದಲ್ಲಿ ಮುಂಗಾರು ಮಳೆ ಕಚಗುಳಿಯಿಟ್ಟಿದೆ.ಇದರಿಂದ ಕೃಷಿಕರ ಮುಖದಲ್ಲಿ ಮಂದಹಾಸ ಮೂಡಿದೆ.


ದಕ್ಷಿಣ ಅರೇಬಿಯನ್‌ ಸಮುದ್ರ, ಬಂಗಾಳ ಕೊಲ್ಲಿಯ ದಕ್ಷಿಣ ಭಾಗ, ದಕ್ಷಿಣ ಅಂಡಮಾನ್‌ ಪ್ರದೇಶ, ಕೇರಳ ಮತ್ತು ತಮಿಳ್ನಾಡಿನ ಕೆಲವು ಭಾಗಗಳಲ್ಲಿ ಮುಂಗಾರು ಮಳೆ ಮೋಡಗಳು ದಟ್ಟೈಸಿವೆ ಎಂದು ಹವಾಮಾನ ಇಲಾಖೆ ಪ್ರಕಟಿಸಿದ್ದು , ಮುಂದಿನ ಎರಡು ದಿನಗಳೊಳಗಾಗಿ ಕೇರಳ, ತಮಿಳ್ನಾಡು ಮತ್ತು ಕರ್ನಾಟಕದ ಹಲವೆಡೆಗಳಲ್ಲಿ ಮಳೆ ಬೀಳಲಿದೆ.

ಸಾಕಷ್ಟು ಮಳೆ ಬಿದ್ದಲ್ಲಿ ಕೃಷಿ ಕಾರ್ಯಗಳು ಯಶಸ್ವಿಯಾಗಬಹುದಾಗಿದೆ. ಈ ಬಾರಿ ಕರ್ನಾಟಕದಲ್ಲಿ ಏಪ್ರಿಲ್ , ಮೇ ತಿಂಗಳಲ್ಲಿ ಆಗಾಗ ಮಳೆಯಾಗುತ್ತಿದ್ದ ಹಿನ್ನಲೆಯಲ್ಲಿ ನೀರಿನ ತೊಂದರೆ ಅಷ್ಟೊಂದು ಕಂಡು ಬಂದಿರಲಿಲ್ಲ.
ಕುಡಿಯುವ ನೀರು ಹಾಗೂ ಕೃಷಿ ಕಾರ್ಯಗಳಿಗೆ ಹೆಚ್ಚಿನ ತೊಡಕು ಉಂಟಾಗಿರಲಿಲ್ಲ. ಇದೀಗ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಮತ್ತೆ ಕೃಷಿ ಕಾರ್ಯಗಳು ಚುರುಕುಪಡೆದುಕೊಳ್ಳುತ್ತಿವೆ.

ಮುಂದೆ ಓದಿ

ವಿಶೇಷ ವರದಿ
ಅಡಿಕೆಯು ಏರು ಹಾದಿಯಲ್ಲಿ ಸಾಗುತ್ತಿದ್ದರೆ , ರಬ್ಬರ್ ಇಳಿಕೆಯ ಹಾದಿಯಲ್ಲಿದೆ. ಕೃಷಿಕರಿಗೆ ಈಗ ಇದೆರಡು ಸಂಗತಿಗಳು ಅತ್ಯಂತ ಪ್ರಮುಖ ಘಟ್ಟಗಳು. ಅನೇಕ ವರ್ಷಗಳ ಬಳಿಕ ಅಡಿಕೆ ಆಶಾದಾಯಕ ಹೆಜ್ಜೆ ಇರಿಸಿದರೆ , ರಬ್ಬರ್ ಇತ್ತೀಚೆಗೆ ತನ್ನ ಬಿಗುತನವನ್ನು ಸಡಿಲಿಸಿಕೊಂಡಿದೆ. ಹೀಗಾಗಿ ಕೃಷಿಕರಿಗೆ ಈಗ ಮಿಶ್ರಫಲ !.


ಸರಿಸುಮಾರು ಎಂಟು ಹತ್ತು ವರ್ಷಗಳ ಬಳಿಕ ಅಡಿಕೆ ಬೆಳೆಗಾರ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾನೆ. ಅಡಿಕೆಯ ದರ ಈಗ ಚೆನ್ನಾಗಿದೆ, ಎಂಬ ಒಂದು ಖುಷಿ ಅವನಿಗಿದೆ. ಉಳಿದ ಸಮಸ್ಯೆಗಳು ರಾಶಿ ರಾಶಿ ಇದ್ದರೂ ಧಾರಣೆ ಕೊಂಚ ತೃಪ್ತಿದಾಯಕವಾಗಿದೆ ಎಂಬ ನೆಮ್ಮದಿ ಇದೆ. ಮೊನ್ನೆ ಮೊನ್ನೆ ಶತಕ ದಾಟಿದ ಬಳಿಕ ಆತಂಕ ಹೆಚ್ಚಿತ್ತು. ಅಂತೂ ಎಲ್ಲಾ ಆತಂಕಗಳ ನಡುವೆಯೂ ಹಳೆ ಚಾಲಿ ಅಡಿಕೆಯು 150 ಗಡಿ ದಾಟಿ ಮುಂದೆ ಹೋಗಿದೆ. ಶುಕ್ರವಾರದಂದು 155 ರೂಪಾಯಿಯ ಆಸುಪಾಸಿಗೆ ಬಂದು ನಿಂತರೆ ಹೊಸ ಅಡಿಕೆಯೂ ಹಾಗೆಯೇ 136 ರೂಪಾಯಿವರಗೆ ಖರೀದಿಯಾಗಿದೆ. ಹೀಗಾಗಿ ಕೃಷಿಕರಿಗೆ ಹೊಸ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಧಾರಣೆ ಇಷ್ಟು ಏರಿಕೆಯ ಹಾದಿಯಲ್ಲಿದ್ದರೂ ಮಾರುಕಟ್ಟೆಗೆ ಅಡಿಕೆಯು ಸಾಕಷ್ಟು ಮಾರುಕಟ್ಟೆಗೆ ಬರುತ್ತಿಲ್ಲ.ಹೀಗಾಗಿ ಮತ್ತೆ ಏರುತ್ತಲೇ ಸಾಗಿದೆ ಈ ಧಾರಣೆ.ಈಗ ಒಂದು ಹಂತದ ಅಡಿಕೆಯನ್ನು ಕೃಷಿಕರು ಮಾರಾಟ ಮಾಡಿಯಾಗಿದೆ. ಇನ್ನು ಏನಿದ್ದರೂ ಅಗತ್ಯಕ್ಕೆ ತಕ್ಕಷ್ಟೇ ಮಾರುಕಟ್ಟೆಗೆ ಬಿಡುತ್ತಾರಾದ್ದರಿಂದ ಇದೇ ಧಾರಣೆ ಮುಂದುವರಿಯುವ ಸಾಧ್ಯತೆಯೇ ಹೆಚ್ಚು ಎಂಬುದು ಅಡಿಕೆ ಮರುಕಟ್ಟೆ ವಲಯದ ಮಾತು.ಧಾರಣೆ ಏರಿಕೆಗೂ ಪ್ರಮುಖ ಕಾರಣ ಇದೇ. ಬೇಡಿಕ ಇದೆ , ಅದಕ್ಕೆ ತಕ್ಕಷ್ಟು ಪೂರೈಕೆ ಇಲ್ಲ. ಅಂದರೆ ಈ ಬಾರಿ ಅಡಿಕೆ ಬೆಳೆಯೂ ಕಡಿಮೆ. ಇದರ ಜೊತೆಗೆ ಅಡಿಕೆ ಆಮದು ನಿಷೇಧ , ಕ್ಯಾಂಪ್ಕೋ ಪಾತ್ರ , ಗುಟ್ಕಾ ಇನ್ನಿತರ ವಿಚಾರಗಳೂ ಧಾರಣೆ ಏರಿಕೆಗೆ ಪೂರಕವಾಗಿದೆ.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರ ಇನ್ನೊಂದು ಪ್ರಮುಖ ಬೆಳೆ ರಬ್ಬರ್ ಮಾತ್ರಾ ಈಗ ಇಳಿಕೆಯ ಹಾದಿಯಲ್ಲಿದೆ. ಒಂದು ತಿಂಗಳ ಹಿಂದೆ 242 ರೂಪಾಯಿವರೆಗೆ ಹೋಗಿದ್ದ ಧಾರಣೆ ಈಗ ಇಳಿಕೆಯ ಹಾದಿಯಲ್ಲಿದೆ.ಒಂದು ವಾರದ ಹಿಂದೆ ಅಂದರೆ ಕಳೆದ ಗುರುವಾರ 222.50 ರೂಪಾಯಿ ಇದ್ದ ರಬ್ಬರ್ ಧಾರಣೆ ನಿನ್ನ್ನೆ ಸಂಜೆಯ ವೇಳೆಗೆ 215.50 ರೂಪಾಯಿಗೆ ಇಳಿದಿದೆ. ಇಲ್ಲೂ ಹಾಗೆಯೇ ಇದು ತಾತ್ಕಾಲಿಕ ಇಳಿಕೆ ಎಂದು ಮಾರುಕಟ್ಟೆ ವಿಶ್ಲೇಷಣೆ ಹೇಳುತ್ತದೆ. ಒಂದು ತಿಂಗಳ ಹಿಂದೆ ಭಾರತದಲ್ಲಿ ರಬ್ಬರ್ ಕೊರತೆ ಬಂದಾಗ ವಾಣಿಜ್ಯ ಮಂಡಳಿಯ ರಬ್ಬರ್ ಆಮದಿಗೆ ಅನುಮತಿ ನೀಡಿತ್ತು. ಇದರಿಂದಾಗಿ ಮಲೇಶ್ಯಾ ಸೇರಿದಂತೆ ವಿವಿದ ದೇಶಗಳಿಂದ ರಬ್ಬರ್ ಆಮದಾಗಿತ್ತು. ಇದರಿಂದಾಗಿ ದೇಶದ ರಬ್ಬರ್ ಮಾರುಕಟ್ಟೆಗೆ ಕೊಂಚ ಹೊಡೆತ ಬಿತ್ತು. ಈ ನಡುವೆ ಬೇಸಗೆ ಕಾಲವಾದ್ದರಿಂದ ಸರಿಯಾದ ರಬ್ಬರ್ ಪೂರೈಕೆಯೂ ಇಲ್ಲದ ಕಾರಣದಿಂದಾಗಿ ಕೆಲ ಪ್ರಮುಖ ಕಂಪನಿಗಳಿಗೆ ರಬ್ಬರ್ ಸರಬರಾಜುದಾರರು ಹಿಂದೆ ಸರಿದಿದ್ದರು. ಹೀಗಾಗಿ ವಿದೇಶದ ರಬ್ಬರ್, ಎಲ್ಲಾ ತೆರಿಗೆಗಳೂ ಸೇರಿಕೊಂಡು 220 ರೂಪಾಯಿಯ ಆಸುಪಾಸಿನಲ್ಲಿ ಲಭ್ಯವಾಗುತ್ತಿದ್ದ ಕಾರಣ ಇದೇ ಧಾರಣೆ ಇಲ್ಲೂ ಮುಂದುವರಿಯಿತು ಎನ್ನುತ್ತದೆ ರಬ್ಬರ್ ಮಾರುಕಟ್ಟೆ ವಲಯ. ಇನ್ನು ಕೆಲವೇ ದಿನದಲ್ಲಿ ಮತ್ತೆ ಏರಿಕೆ ಕಾಣಬಹುದು ಎನ್ನುತ್ತದೆ ಇದೇ ವಿಶ್ಲೇಷಣೆ.

ಒಟ್ಟಿನಲ್ಲಿ ಮೊನ್ನೆ ಮೊನ್ನೆಯವರೆಗೆ ಏರುಹಾದಿಯಲ್ಲಿದ್ದ ರಬ್ಬರ್ ಈಗ ಇಳಿಕೆಯ ಹಾದಿಯಲ್ಲೇ ಸಾಗುತ್ತಿರುವಾಗ ರಬ್ಬರ್ ಬೆಳೆಗಾರರಿಗೆ ಒಂದು ಕಡೆ ಆತಂಕವಾಗುತ್ತಿದ್ದರೆ ಇತ್ತ ಕಡೆ ದಿನದಿಂದ ದಿನಕ್ಕೆ ಅಡಿಕೆ ಧಾರಣೆಯು ಏರುಹಾದಿಯಲ್ಲಿ ಸಾಗುತ್ತಿರುವುದರಿಂದ ಅಡಿಕೆ ಬೆಳೆಗಾರರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಹೀಗಾಗಿ ದಕ್ಷಿಣ ಕನ್ನಡದ ಜಿಲ್ಲೆಯ ಕೃಷಿಕರಿಗೆ ಈಗ ಮಿಶ್ರ ಫಲ.

- ಮಹೇಶ್ ಪುಚ್ಚಪ್ಪಾಡಿ

ಮುಂದೆ ಓದಿ
9:05 PM

ಇದು ಎಲೆಯಲ್ಲ...

Posted by ekanasu

ವೈವಿಧ್ಯ
ಪ್ರಕೃತಿಯಲ್ಲಿ ವಿಸ್ಮಯಗಳು ಸಾಮಾನ್ಯ. ಅಂತಹುದೊಂದು ಪ್ರಕೃತಿ ವಿಸ್ಮಯಕ್ಕೆ ಸಾಕ್ಷಿಯೆಂಬಂತೆ ತಾಲೂಕಿನ ಶ್ರೀ ಕ್ಷೇತ್ರ ಕವಡಿಕೆರೆ ದೇವಸ್ಥಾನದ ಮುಂಭಾಗದಲ್ಲಿರುವ ಮರವೊಂದರಲ್ಲಿ ಎಲೆಯಂತಿರುವ ಎಲೆಕೀಟ ಗೋಚರಿಸಿ ಎಲ್ಲರ ಅಚ್ಚರಿಗೆ ಪಾತ್ರವಾಗಿದೆ. ಈ ಕೀಟವು 6 ಕಾಲುಗಳನ್ನು ಹೊಂದಿದೆ. ಇದರ ರೆಕ್ಕೆ-ಪುಕ್ಕಗಳು ಎಲೆಗಳನ್ನು ಹೋಲುತ್ತಿವೆ. . . ಈ ವಿಸ್ಮಯ ಕೀಟ ಪ್ರಭೇದಕ್ಯಾಮರಾ ಕಣ್ಣಿಗೆ ಸಿಕ್ಕಿದ್ದು ಹೀಗೆ

ಸಚಿತ್ರ ಬರಹ : ಅಚ್ಯುತಕುಮಾರ,ಯಲ್ಲಾಪುರ

ಮುಂದೆ ಓದಿ

ವೈವಿಧ್ಯ

ವಿವಿಧತೆಯಲ್ಲಿ ಏಕತೆ ಎಂದಾಗ ನೆನಪಾಗುವುದು ನಮ್ಮ ದೇಶ ಭಾರತ. ಈ ವೈವಿಧ್ಯಮಯ ಸಂಸ್ಕೃತಿ, ಪರಿಸರ, ಸಂಪ್ರದಾಯದಿಂದಾಗಿ ಭಾರತ ಪ್ರವಾಸಿ ಆಕರ್ಷಣೆಯ ಕೇಂದ್ರ. ವಿಶ್ವದ ನಾನಾ ದಿಕ್ಕಿನಿಂದ ಕೋಟ್ಯಂತರ ಜನ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ನಮ್ಮ ದೇಶದ ಪ್ರಾಕೃತಿಕ ಚೆಲುವಿಗೆ ತಲೆಬಾಗದವರು ಯಾರು ? ಪ್ರವಾಸಿಗರ ಮೊದಲ ಆಕರ್ಷಣೆ ಪ್ರೇಮ ಸೌಧ ತಾಜ್ ಮಹಲ್ ಆದರೆ, ಬಳಿಕ ರಾಷ್ಟ್ರ ರಾಜಧಾನಿ ಹೊಸದಿಲ್ಲಿ ನೋಡಿಕೊಂಡು ಗೋವಾದ ಕಡಲ ಕಿನಾರೆಯಲ್ಲಿ ಕೊಂಚ ರಿಲ್ಯಾಕ್ಸ್ ಆಗುವುದು.. ಇನ್ನೊಂದೆಡೆ ಹಿಮಾಲಯ ಪರ್ವತ ಶ್ರೇಣಿ ಹತ್ತುವುದು, ಪವಿತ್ರ ಗಂಗಾನದಿಯ ಪುಣ್ಯ ಸ್ನಾನ.. ಪ್ರತಿ ರಾಜ್ಯಕ್ಕೂ ತನ್ನದೇ ಆದ ವಿಶೇಷತೆಗಳಿವೆ.


ಹೀಗೆ ಒಂದೇ ಎರಡೇ ಎಷ್ಟೊಂದು ಪ್ರವಾಸಿ ಆಕರ್ಷಣೆಗಳು..
ಭಾರತಕ್ಕೆ ಆಗಮಿಸುವ ಪ್ರವಾಸಿಗರಲ್ಲಿ, ಚಾರಣಕ್ಕೆ ಬರುವ ಯುವಕರು ಸೇರಿದಂತೆ ಎಲ್ಲ ವಯಸ್ಸಿನವರು ಕೂಡಾ ಇದ್ದಾರೆ. ನಮ್ಮ ದೇಶವೇ ಒಂದು ಅನುಭವ. ಹೀಗಾಗಿ ಈ ಅನುಭವ ಗಳಿಸುವುದು ಅನೇಕ ಪ್ರವಾಸಿಗರ ಹಂಬಲವಾಗಿರುತ್ತದೆ. ಅದನ್ನು ಈಡೇರಿಸಲು ಪ್ರವಾಸ ಕೈಗೊಂಡು ಇಚ್ಛೆ ಪೂರೈಸಿದ ತೃಪ್ತಿಯೊಂದಿಗೆ ವಾಪಸು ಹೋಗುತ್ತಾರೆ.


ಅಂಕಿ ಅಂಶವೊಂದರ ಪ್ರಕಾರ, ಪ್ರತಿ ವರ್ಷ ಭಾರತಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚು ಕಡಿಮೆ 5 ಕೋಟಿ. ಇವರಲ್ಲಿ ಹೆಚ್ಚಿನವರು ಕೂಡಾ ಊರು ನೋಡುವುದಕ್ಕೆ ಬರುವವರು. ಇನ್ನು ಕೆಲವರು ಇತರೆ ಉದ್ದೇಶಕ್ಕಾಗಿ ಆಗಮಿಸುತ್ತಾರೆ. ಹಾಗೆ ನೋಡಿದರೆ, ಭಾರತ ಪ್ರವಾಸಿ ಆಕರ್ಷಣೆಯಲ್ಲಿ ವೈದ್ಯಕೀಯ ಚಿಕಿತ್ಸೆ ಕೂಡಾ ಸೇರಿಕೊಂಡಿದೆ. ಅದು, ಆಯುರ್ವೇದ ಇರಬಹುದು, ಯೋಗ ಇರಬಹುದು ಅಥವಾ ಅಲೋಪತಿ, ಯುನಾನಿ, ಹೋಮಿಯೋಪತಿಯೇ ಇರಬಹುದು. ವಿದೇಶಗಳಿಗೆ ಹೋಲಿಸಿದರೆ, ಉತ್ತಮ ಗುಣಮಟ್ಟದ ಚಿಕಿತ್ಸೆ ಭರಿಸಬಹುದಾದ ವೆಚ್ಚದಲ್ಲಿ ಭಾರತದಲ್ಲಿ ಪಡೆಯಬಹುದು. ಈ ಬಗ್ಗೆ ಇತ್ತೀಚೆಗೆ ಅಮೇರಿಕಾ ಅಧ್ಯಕ್ಷರು ನೀಡಿದ ಹೇಳಿಕೆ ವ್ಯಾಪಕ ಟೀಕೆಗೆ ಒಳಗಾಗಿತ್ತು ಅನ್ನೋದು ಬೇರೆ ವಿಚಾರ. ಆದರೂ, ಒಮ್ಮೆ ವೈದ್ಯಕೀಯ ಕ್ಷೇತ್ರ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಮೆಡಿಕಲ್ ಟೂರಿಸಂ ಎಂಬ ಕಲ್ಪನೆ...

ಜಾಗತಿಕವಾಗಿ ಮೆಡಿಕಲ್ ಟೂರಿಸಂ ಹೆಚ್ಚು ಹೆಚ್ಚು ಆದ್ಯತೆ ಪಡೆಯುತ್ತಿದೆ. ಭಾರತದಲ್ಲೂ ಮೆಡಿಕಲ್ ಟೂರಿಸಂಗೆ ಆದ್ಯತೆ ಇದೆ. ಹೀಗೆ ಹೇಳುವುದಕ್ಕಿಂತಲೂ ಭಾರತ ಮೆಡಿಕಲ್ ಟೂರಿಸಂ ಹಬ್ ಆಗಿ ಬೆಳೆದಿದೆ ಎಂದೇ ಹೇಳಬಹುದು. ವೈದ್ಯಕೀಯ ಚಿಕಿತ್ಸೆಗಾಗಿ ಜನರು ದೇಶ ಭಾಷೆ ಸಂಸ್ಕೃತಿಯ ಗಡಿ ಮರೆತು ಹೋಗುತ್ತಿರುವ ಬೆಳವಣಿಗೆ ಇಂದು ನಿನ್ನೆಯದಲ್ಲ. ಆದರೂ, ಕಳೆದ ಒಂದು ದಶಕದಲ್ಲಿ ಈ ಸಂಖ್ಯೆ ಹೆಚ್ಚಿದೆ ಎಂದೇ ಹೇಳಬೇಕಾಗುತ್ತದೆ. ಕಾರಣ ಇಷ್ಟೇ... ಅಂತರ್ಜಾಲ ತಾಣ, ತಂತ್ರಜ್ಞಾನಗಳು ಇಡೀ ವಿಶ್ವವನ್ನೇ ಒಂದು ಗ್ರಾಮವನ್ನಾಗಿಸಿದೆ.. ಎಲ್ಲವೂ ಸ್ಥಳೀಯ ಎನ್ನುವಷ್ಟರಮಟ್ಟಿಗೆ..

ವೈದ್ಯಕೀಯ ಚಿಕಿತ್ಸೆಗೆ ಜನ ವಿದೇಶಗಳಿಗೆ ತೆರಳುವುದಕ್ಕೆ ಮೊದಲ ಕಾರಣ ಭರಿಸಲಾಗದ ವೆಚ್ಚ, ಆಧುನಿಕ ತಂತ್ರಜ್ಞಾನದ ಬಳಕೆ, ಫಲಿತಾಂಶ ಎಲ್ಲವೂ ಗಣನೆಗೆ ಬರುತ್ತದೆ. ಮೊದಲನೇ ಕಾರಣವಾದ ವೈದ್ಯಕೀಯ ವೆಚ್ಚವನ್ನು ಗಮನಿಸಿದ್ರೆ, ಒಂದು ಅಂಕಿ ಅಂಶದ ಪ್ರಕಾರ, ಅಮೆರಿಕಾದಲ್ಲಿ ಶಸ್ತ್ರಚಿಕಿತ್ಸೆ ವೆಚ್ಚ ಶೇಕಡಾ 33 ರಿಂದ 50 ರಷ್ಟು ಹೆಚ್ಚಾಗಿದೆ. ಈ ಒಂದು ವಿಚಾರದಲ್ಲಿ ಭಾರತದಲ್ಲಿ ಭರಿಸಬಹುದಾದ ವೈದ್ಯಕೀಯ ವೆಚ್ಚಗಳು ಎಂಬುದು ವಿದೇಶದಿಂದ ಆಗಮಿಸುವವರ ಲೆಕ್ಕಾಚಾರದ ಅಭಿಮತ.
ಈ ಮಾತನ್ನು ಕೇಳಿದ ಭಾರತೀಯರು ಖಂಡಿತ ನಕ್ಕು ಬಿಡುತ್ತಾರೆ. ಯಾಕೆಂದರೆ, ಆಸ್ಪತ್ರೆ ಎಂದರೆ ಮಾರು ದೂರ ಓಡುವ ಜನ ನಾವು. ಅನಿವಾರ್ಯವಾಗಿ ಆಸ್ಪತ್ರೆಗೆ ಹೋಗಬೇಕು ಅಷ್ಟೇ.. ಅದೊಂಥರಾ ನರಕ ಯಾತನೆ.. ಆಸ್ಪತ್ರೆಯ ಟಿಪಿಕಲ್ ವಾಸನೆ, ವಾತಾವರಣ.. ರೋಗ ವಾಸಿ ಮಾಡುವುದಕ್ಕಿಂತ ಹೆಚ್ಚಾಗಿ ರೋಗಿ ಜೊತೆ ಹೋದವರ ಮನಸ್ಸಿಗೂ ಘಾಸಿ ಉಂಟು ಮಾಡುವ ಪರಿಸ್ಥಿತಿ ಸದ್ಯ ಇದೆ. ಯಾವುದೇ ಸರಕಾರಿ ಆಸ್ಪತ್ರೆಗೆ ಹೋದರೂ ಇದೇ ಕತೆ. ಇತ್ತೀಚೆಗೆ ವಿಕ್ಟೋರಿಯ ಆಸ್ಪತ್ರೆಗೆ ಸಚಿವರು ದಾಳಿ ನಡೆಸಿದಾಗ ಕಂಡು ಬಂದ ಅಂಶಗಳಷ್ಟೇ ಮಾಧ್ಯಮಗಳಲ್ಲಿ ವರದಿಯಾಗಿವೆ.

ಭಾರತದಲ್ಲಿ ಮೆಡಿಕಲ್ ಟೂರಿಸಂ

ಜಾಗತಿಕ ಮೆಡಿಕಲ್ ಟೂರಿಸಂ ಎಂದಾಕ್ಷಣ ಮೊದಲ ಸಾಲಿನಲ್ಲಿ ಕಾಣಸಿಗುವ ದೇಶದ ಹೆಸರು ಭಾರತ. ನಮ್ಮ ದೇಶದಲ್ಲಿ ಮೆಡಿಕಲ್ ಟೂರಿಸಂಗೆ ಅಷ್ಟೊಂದು ಅವಕಾಶ ಇದೆ. 2004 ರ ಅಂಕಿ ಅಂಶಗಳನ್ನು ಗಮನಿಸಿದ್ರೆ ಅಂದಿಗೇ 1.5 ಲಕ್ಷ ಮೆಡಿಕಲ್ ಟೂರಿಸ್ಟ್ ಗಳು ಭಾರತಕ್ಕೆ ಆಗಮಿಸಿ ಚಿಕಿತ್ಸೆ ಪಡೆದಿದ್ರು. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. 2008ರ ವೇಳೆಗೆ, ಶೇಕಡಾ 33 ರಷ್ಟು ಅಂದರೆ 2 ಲಕ್ಷ ಮೀರಿತ್ತು. ಈ ವಾರ್ಷಿಕ ಅಂಕಿ ಅಂಶಗಳ ಲೆಕ್ಕಾಚಾರದ ಪ್ರಕಾರ 2015ರ ವೇಳೆ ಮೆಡಿಕಲ್ ಟೂರಿಸ್ಟ್ಗಳ ಸಂಖ್ಯೆ 50 ಲಕ್ಷ ದಾಟಲಿದೆ.
ಅಚ್ಚರಿ ಎನಿಸುತ್ತಿದೆ ಅಲ್ಲವೇ.. ಭಾರತದಲ್ಲಿ ಖಾಸಗಿ ಆಸ್ಪತ್ರೆಗಳು ಅತ್ಯಾಧುನಿಕ ಮೆಡಿಕಲ್ ಟ್ರೀಟ್ಮೆಂಟ್ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ. ಇದು ಜಾಗತಿಕ ಮಟ್ಟದಲ್ಲಿ ಗಮನಸೆಳೆಯುವಂತೆ ಮಾಡಿವೆ. ವಿದೇಶಿ ಪ್ರವಾಸಿಗರಿಗೆ ಚಿಕಿತ್ಸೆಗೆ ದಾಖಲಾದಾಗ, ಆರಾಮದಾಯಕ ವಾಸ್ತವ್ಯಕ್ಕೆ ಬೇಕಾದ ಅನುಕೂಲಮಾಡಿಕೊಡುವ ಪರಿಪಾಠ ಕೂಡಾ ಇದೆ. ಪಾಶ್ಚಿಮಾತ್ಯ ವೈದ್ಯಕೀಯ ಚಿಕಿತ್ಸೆ ಪದ್ಧತಿ ಕಲಿತ ವೈದ್ಯರಿಂದ ಅತ್ಯಂತ ಕಡಿಮೆ(ವಿದೇಶಕ್ಕೆ ಹೋಲಿಸಿದರೆ) ವೆಚ್ಚದಲ್ಲಿ ಸೇವೆ ಒದಗಿಸಲಾಗುತ್ತದೆ.

ಇನ್ನೊಂದು ಪ್ಲಸ್ ಪಾಯಿಂಟ್ ಅಂದರೆ, ಭಾರತದಲ್ಲಿ ಯಾವ ವಿದೇಶಿಯನಿಗೂ ಭಾಷೆ ಒಂದು ತೊಡಕಾಗಲ್ಲ. ಯಾಕೆಂದ್ರೆ ಬಹುತೇಕ ಭಾರತೀಯರು ಇಂಗ್ಲಿಷ್ ಮಾತನಾಡುತ್ತಾರೆ..!

ಸಾಮಾನ್ಯವಾಗಿ, ಭಾರತಕ್ಕೆ ಆಗಮಿಸುವ ಮೆಡಿಕಲ್ ಟೂರಿಸ್ಟ್ಗಳು ಒಂದೋ ಓಪನ್ ಹಾರ್ಟ್ ಸರ್ಜರಿ ಅಥವಾ ಆರ್ಥೋಪೆಡಿಕ್ ಜಾಯಿಂಟ್ ರಿಪ್ಲೇಸ್ಮೆಂಟ್ ಸರ್ಜರಿಗೆ ಒಳಗಾಗುವವರು. ನಿಮಗೆ ಅಗತ್ಯ ಆರೋಗ್ಯ ವಿಮೆ ಇಲ್ಲದೇ ಹೋದರೆ, ಅತ್ಯಂತ ದುಬಾರಿ ಚಿಕಿತ್ಸೆ ಇವು.. ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತದ ಖಾಸಗಿ ಆಸ್ಪತ್ರೆಗಳು ಇಂತಹ ಚಿಕಿತ್ಸೆ ನೀಡುವುದರಲ್ಲಿ ಪಳಗಿವೆ. ಇದಲ್ಲದೇ, ಪ್ಲಾಸ್ಟಿಕ್ ಸರ್ಜರಿ, ಕ್ಯಾನ್ಸರ್ ಗೆ ಸಂಬಂಧಪಟ್ಟ ಚಿಕಿತ್ಸೆ, ಕಿಡ್ನಿ ಸ್ಟೋನ್ ಮೊದಲಾದ ಚಿಕಿತ್ಸೆಗೂ ಭಾರತಕ್ಕೆ ಆಗಮಿಸುವವರಿದ್ದಾರೆ.

ಆಸ್ಪತ್ರೆಗಳ ಬಗ್ಗೆ ಹೇಳಬೇಕು ಅಂದರೆ, ರಸ್ತೆಯಲ್ಲಿ ಸಂಚರಿಸುವಾಗ ಸಾಕಷ್ಟು ಹೋರ್ಡಿಂಗ್ ಕಾಣಸಿಗುತ್ತವೆ. ಆರೋಗ್ಯ ಸೇವೆ ಕುರಿತ ಹೋರ್ಡಿಂಗ್ ಕೂಡಾ ಇದರಲ್ಲಿವೆ. . ಇನ್ನು ಜಾಹೀರಾತು ಹಾಗು ಇನ್ನಿತರೆ ಮಾಧ್ಯಮದ ಮೂಲಕ ಭಾರತಕ್ಕೆ ಮೆಡಿಕಲ್ ಟೂರಿಸ್ಟ್ಗಳನ್ನು ಸೆಳೆಯುವ ಆಸ್ಪತ್ರೆಗಳ ಪಟ್ಟಿಯಲ್ಲಿ ಅಪೊಲೋ, ಮ್ಯಾಕ್ಸ್ ಹೆಲ್ತ್ ಕೇರ್ ಮುಂಚೂಣಿಯಲ್ಲಿವೆ. ಕರ್ನಾಟಕವನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾರೆ, ಜಯದೇವ, ವೊಕ್ಹಾರ್ಡ್, ಬಿಜಿಎಸ್, ಫೋರ್ಟ್ಸ್, ಮಣಿಪಾಲ್, ಕೊಲಂಬಿಯ ಏಷ್ಯಾ ಆಸ್ಪತ್ರೆಗಳು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತವೆ. ಆರೋಗ್ಯ ಕ್ಷೇತ್ರದಲ್ಲೊಂದು ಬದಲಾವಣೆಯ ಧ್ಯೇಯದೊಂದಿಗೆ ಬೆಂಗಳೂರಿನ ಮಿಲ್ಲರ್ಸ್ ರಸ್ತೆಯ ವಿಕ್ರಂ ಆಸ್ಪತ್ರೆ ಕೂಡಾ ಈ ಪಟ್ಟಿಗೆ ಸೇರ್ಪಡೆಗೊಂಡಿದೆ.

ಒಟ್ಟಿನಲ್ಲಿ ಆರೋಗ್ಯ ಕ್ಷೇತ್ರ ಮೆಡಿಕಲ್ ಟೂರಿಸ್ಟ್ಗಳಿಗೆ ಸೀಮಿತವಾಗದಿರಲಿ.. ಭಾರತೀಯರಿಗೂ ಭರಿಸುವುದಕ್ಕೆ ಸಾಧ್ಯವಾಗುವಂತೆ ಸೇವೆಯನ್ನು ಒದಗಿಸಲಿ.. ಆಸ್ಪತ್ರೆ ಎಂದರೆ ಸುಲಿಗೆ ಕೇಂದ್ರವಾಗದಿರಲಿ ಎಂಬುದೇ ನಮ್ಮೆಲ್ಲರ ಆಶಯ...

- ಉಮೇಶ್ ಕುಮಾರ್ ಶಿಮ್ಲಡ್ಕ

ಮುಂದೆ ಓದಿ
8:07 PM

ಸತ್ಕಾರದ ಸನ್ನಾಹ

Posted by ekanasu

ಭಕ್ತಿ ಸಿಂಚನ

ಪಾತಾಲವನ್ನೂ ಪುನೀತಗೊಳಿಸುವ ಪಾದಗಳು..!
ದೇವಲೋಕವನ್ನೇ ಮೇಲೆತ್ತುವ ಶೃಂಗಗಳು..!
ವಾತ್ಸಲ್ಯದ ಸಾ(ಗ)ರವನ್ನೇ ತುಂಬಿಕೊಂಡಿರುವ ಕೆಚ್ಚಲು..!
ಸೂರ್ಯ- ಚಂದ್ರರಿಗೇ ಬೆಳಕೀವ ಕಣ್ಣುಗಳು..!
ಹುಂಭಾರವದಲ್ಲಿ ಪ್ರತಿಧ್ವನಿಸುವ ವೇದಗಳು..!



ಪ್ರಪಂಚದಲ್ಲಿರಬಹುದಾದ ಪವಿತ್ರತೆಯೆಲ್ಲವೂ ರಾಶೀಭವಿಸಿದ ಶರೀರ..!
ಬೇಡಿದ್ದನ್ನು ಮಾತ್ರವೇನು-ಬಯಸಿದ್ದನ್ನೆಲ್ಲ ಕೊಡುವ ಕಾಮಧೇನುವವಳು..
ಬಯಕೆಗಳನ್ನು ‘ವಶ’ದಲ್ಲಿರಿಸಿಕೊಂಡು ‘ವಶಿ’ಗಳೆನಿಸಿಕೊಳ್ಳುವವರಲ್ಲಿ ಶ್ರೇಷ್ಠರಾದ ‘ವಶಿಷ್ಠ’ರಿಗೆ ಒಲಿದು ಬಂದವಳು..
ಸೂರ್ಯನ ಸೆಳೆತಕ್ಕೆ ಒಳಗಾಗಿ, ಸತತವೂ ಆತನ ಸುತ್ತಲೇ ಸುತ್ತುವ, ಎಂದೂ ಆತನ ಪ್ರಭಾವಲಯವನ್ನು ಬಿಟ್ಟು ದೂರ ಹೋಗದ ಧರಣಿಯಂತೆ,
ತೇಜೋರಾಶಿಯೇ ಆದ, ವಸಿಷ್ಠರ ಪ್ರೀತಿಯ ಸೆಳೆತಕ್ಕೆ,ಆ ಗುರುಶ್ರೇಷ್ಠನ ಗುರುತ್ವಾಕರ್ಷಣೆಗೆ ಒಳಗಾಗಿ,’ಎಂದೂ ದೂರವಾಗಲಾರೆ’ನೆಂಬ ಭಾವದಲ್ಲಿ ಅವರ ಸನ್ನಿಧಿಯಲ್ಲಿಯೇ ನೆಲೆ ನಿಂತವಳು..!!

ಹಾಲಿಗೆ ಅಮೃತವನ್ನು ಸೇರಿಸಿದಂತೆ, ಮೊದಲೇ ಪವಿತ್ರವಾದ ವಸಿಷ್ಠಾಶ್ರಮವನ್ನು ತನ್ನ ಸಾನ್ನಿಧ್ಯಮಾತ್ರದಿಂದಲೇ ಮತ್ತಷ್ಟು ಪವಿತ್ರಗೊಳಿಸುತ್ತಾ,
ಚಿನ್ನಕ್ಕೆ ಪುಟಕೊಟ್ಟಂತೆ, ಸಹಜಶುದ್ಧನಾದ ತನ್ನ ಕಂದನ ಪುಟ್ಟ ತನುವನ್ನು ಪರಮವಾತ್ಸಲ್ಯದಿಂದ ಮತ್ತೆ ಮತ್ತೆ ನೆಕ್ಕಿ ನೆಕ್ಕಿ,ಮತ್ತಷ್ಟು ಶುಚಿಗೊಳಿಸುತ್ತಿದ್ದ ಶಬಲೆಯ ಕಿವಿಗಳಲ್ಲಿ ಅನುರಣಿಸಿತು ‘ಏಹಿ ಏಹಿ ಶಬಲೇ’ ಎನ್ನುವ ಪ್ರೇಮದೊಡೆಯನ ಕರೆ..
ಶಬಲೆಗೆ ತನ್ನ ಕರುವೆಂತೋ ವಸಿಷ್ಠರ ಕರೆಯೂ ಅಂತೆಯೇ..!
ಮುದ್ದು ಕರುವಿನಿಂದ ಮಮತೆಯ ಕರೆಯೆಡೆಗೆ ಧಾವಿಸಿದಳಾಕೆ..

ವಾತ್ಸಲ್ಯವನ್ನು ಹರಿಸುವುದರಲ್ಲಿ ಶಬಲೆಯ ಕೆಚ್ಚಲೊಡನೆ ಸ್ಪರ್ಧಿಸುವ ತನ್ನ ಅಮೃತಕರಗಳಿಂದ ಆಕೆಯ ಮೈದಡವಿ ನುಡಿದರು ವಸಿಷ್ಠರು..

” ಶಬಲೇ ! ಚಕ್ರವರ್ತಿಯಾದ ಕೌಶಿಕನನ್ನೂ, ಆತನ ಅನಂತ ಪರಿವಾರವನ್ನೂ ಸತ್ಕರಿಸಬಯಸಿದ್ದೇನೆ..ಜೀವರಾಶಿಗಳನ್ನು ತೃಪ್ತಿಪಡಿಸುವುದರಲ್ಲಿಯೇ ಪರಮತೃಪ್ತಿಯನ್ನು ಕಾಣುವವಳಲ್ಲವೇ ನೀನು ?ಜಗದ ಹಸಿವಿಗಿಂತ ನಿನ್ನ ಹಾಲು ದೊಡ್ಡದೆಂಬುದು ಇಂದು ಪ್ರಕಟವಾಗಲಿ..ಕೌಶಿಕನು ಇಂದು ನಿನ್ನ ಕರುವಾಗಲಿ..ಸಾಗರ ಸದೃಶವಾದ ಈ ಸೇನಾಸ್ತೋಮದಲ್ಲಿ ಯಾರು ಯಾರು ಯಾವ ಯಾವ ಬಗೆಯ ಭಕ್ಷ್ಯ- ಭೋಜ್ಯಗಳನ್ನು, ಲೇಹ್ಯ-ಚೋಷ್ಯಗಳನ್ನು, ಖಾದ್ಯ-ಪೇಯಗಳನ್ನು ಬಯಸುವರೋ, ಅದೆಲ್ಲವನ್ನೂ ಅವರವರಿಗೆ ಶಾಶ್ವತ ತೃಪ್ತಿಯಾಗುವಷ್ಟು ಉಣಬಡಿಸಬೇಕು ನೀನು..
ಕೇವಲ ಕ್ಷೀರವನ್ನಲ್ಲ,ಕಾಮನೆಗಳನ್ನೇ ವರ್ಷಿಸಬೇಕು ನೀನಿಂದು..! ”

‘ಬೇಕೇ?’ ಎಂಬಂತೆ ಮುನಿಯ ಮೊಗವನ್ನೊಮ್ಮೆ ವೀಕ್ಷಿಸಿದಳು ಶಬಲೆ..
‘ನನಗಾಗಿ’ ಒಂದೇ ಪದದಲ್ಲಿ ಉತ್ತರಿಸಿದರು ವಸಿಷ್ಠರು..
ವಸಿಷ್ಠರಿಗಾಗಿಯೆಂದಾದರೆ ಕ್ಷೀರಧಾರೆಯೇನು, ಜೀವಧಾರೆಯನ್ನೇ ಹರಿಸಬಲ್ಲ ಶಬಲೆಯು ಸಿದ್ಧಳಾದಳು, ಕಂಡು ಕೇಳರಿಯದ ಕೌತುಕದ ಲೋಕವೊಂದಕ್ಕೆ ಕೌಶಿಕನನ್ನು ಕರೆದೊಯ್ಯಲು..

ಟಿಪ್ಪಣಿ :-
ಆಹಾರಗಳಲ್ಲಿ ಆರು ಬಗೆ..
ಆಹಾರಂ ಷಡ್ವಿಧಂ ಚೂಷ್ಯಮ್ ಪೇಯಂ ಲೇಹ್ಯಂ ತಥೈವ ಚ | ಭೋಜ್ಯಂ ಭಕ್ಷ್ಯಂ ತಥಾ ಚರ್ವ್ಯಂ ಗುರು ವಿದ್ಯಾತ್ ಯಥೋತ್ತರಂ ||

ಆಹಾರವು ಚೂಷ್ಯ, ಪೇಯ, ಲೇಹ್ಯ, ಭೋಜ್ಯ, ಭಕ್ಷ್ಯ, ಚರ್ವ್ಯ ಎಂಬುದಾಗಿ ಆರು ವಿಧ..
ಇವುಗಳಲ್ಲಿ ಮುಂದು-ಮುಂದಿನವು ಹಿಂದು-ಹಿಂದಿನದಕ್ಕಿಂತ ಗುರುಸ್ವಭಾವದವು..
ಚೂಷ್ಯ=ಹೀರಿ ಕುಡಿಯುವ ರಸವುಳ್ಳ ಆಹಾರವಸ್ತು, ಕಬ್ಬು,ಮೊದಲಾದವು..
ಪೇಯ=ನೀರು,ಪಾನಕ, ಮೊದಲಾದ ಕುಡಿಯುವ ವಸ್ತುಗಳು.
ಲೇಹ್ಯ=ನಾಲಗೆಯಿಂದ ನೆಕ್ಕಿ ರಸಾಸ್ವಾದನೆ ಮಾಡುವ ಆಹಾರ, ಚಟ್ನಿ,ಉಪ್ಪಿನಕಾಯಿ ಮೊದಲಾದವು.
ಭೋಜ್ಯ=ಊಟಮಾಡುವ ಅನ್ನ ಮೊದಲಾದ ಆಹಾರವಸ್ತುಗಳು.ಇದಕ್ಕೆ ಖಾದ್ಯ ಎನ್ನುವ ರೂಢಿಯು ಇದೆ.
ಭಕ್ಷ್ಯ=ತಿಂಡಿತಿನಿಸು ಮೊದಲಾದ ಆಹಾರ ಭಕ್ಷ್ಯ, ಗಟ್ಟಿಯಾದ ಆಹಾರವಸ್ತು.. ಸಿಹಿತಿಂಡಿ, ರೊಟ್ಟಿ, ಕಡುಬು ಮೊದಲಾದವು..
ಚರ್ವ್ಯ=ಹಲ್ಲಿನಿಂದ ಜಗಿದು ತಿನ್ನುವ ಆಹಾರವಸ್ತುಗಳು.. ಅವಲಕ್ಕಿ, ಪುರಿ, ಹುರಿಗಡಲೆ ಮೊದಲಾದವುಗಳು..
(ಶ್ರೀ ಗುರುಗಳ ಇನ್ನಷ್ಟು ವಚನಾಮೃತಗಳಿಗಾಗಿ ಹರೇರಾಮ.ಇನ್ ಲಾಗ್ ಇನ್ ಮಾಡಿರಿ.)

ಮುಂದೆ ಓದಿ
7:38 PM

ಅಸ್ಪೃಶ್ಯರು

Posted by ekanasu

ಸಾಹಿತ್ಯ
ವೈದೇಹಿ ಕಾದಂಬರಿ
ಕಳೆದ ಸಂಚಿಕೆಯಿಂದ...
ಮಣೆಯಿಂದ ಗೌರಮ್ಮ ಮಗುವನ್ನು ತೆಗೆದು ಶಾಮಿಯ ತೊಡೆಯ ಮೇಲೆ ಇಟ್ಟಂತೆ ಮಾಡಿದರು. ಅಷ್ಟೇ. ತೆಗೆದಾಯಿತು., ಹಾಗೆ ಪುಟ್ಟ ಮತ್ತು ಜಯರ ತೊಡೆಯ ಮೇಲೆಯೂ. ಅಷ್ಟರೊಳಗೆ ಅವರೆಲ್ಲ ಮಗುವಿನ ಕೆನ್ನೆ ಮುಟ್ಟಿ, ಅಂಗಾಲು ಎಲ್ಲ ಸವರಿ `ಅಯ್ಯೋ ಎಷ್ಟು ಮೆತ್ತಗೆ ಅಲ್ಲ? ಹತ್ತಿಯೆಂದರೆ ಹತ್ತಿಯೇ. ಮುಟ್ಟಿದ್ದೇ ಗೊತ್ತಾಗುವುದಿಲ್ಲ'- ಎಂದು ಒಂದೊಂದು ಬಗೆಯ ಉದ್ಗಾರವೆತ್ತಿದರು. `ರವಿ, ಬಾಬುವನ್ನು ಎತ್ತಿಕೊಳ್ಳುತ್ತಿಯಾ? ಬಾ. ಇಲ್ಲಿ ಕುಳಿತುಕೋ'- ಎಂದರೆ ಎರಡು ವರ್ಷದ ರವಿ ಇಲ್ಲವೆನ್ನುವಂತೆ ತಲೆ ಅಲ್ಲಾಡಿಸಿದ. ನಿಂತಲ್ಲೆ ಉಚ್ಚೆಹೊಯ್ದು. `ಶ್ಶೀ ಈ ಮಾಣಿಗೆ ಅಪ್ಪುದೆಂತದು! ಒಳಗೆ ಉಚ್ಚೆ ಹೊಯ್ಯುವುದನ್ನು ಬಿಟ್ಟು ಎಷ್ಟು ಸಮಯವಾಗಿತ್ತು. ಈಗ ಹಾಸಿಗೆಯಲ್ಲೂ ಉಚ್ಚೆ! ಎರಡು ಸಮಾ ಕೊಡು ನೋಡುವ' - ಎಂದಳು ರತ್ನ.


`ಕೊಟ್ಟರೆ ಅದರ ಸಾಕಬ್ಬೆ ಹರಿದುಬಿಟ್ಟಾಳು ನನ್ನನ್ನು . ಹೊಯ್ಯಲಿ , ಹೊಯ್ದರೆ ಒರೆಸುತ್ತಾಳೆ. ಬೈಯಬಾರದಂತಲ್ಲ' - ಎಂದರು ಗೌರಮ್ಮ.
ಸಾಕಬ್ಬೆ ಎಂದರೆ ಸಾಕು ತಾಯಿ., ಮತ್ತೆ ಯಾರಲ್ಲ. ರತ್ನನ ತಂಗಿ ಸರೋಜ. ತಲೆ ತುಂಬ ಆದರ್ಶ ತಿಳುವಳಿಕೆ ತುಂಬಿಕೊಂಡು ಬಿಡು ಬೀಸು ಮಾತಿನ ಸರೋಜನಿಗೆ ಒಳಗಿನಿಂದ ಗೌರಮ್ಮನೂ ಕೊಂಚ ಹೆದರುವವರೇ.

ಸರೋಜ ಹೀಗೇ ಮಾಡಿ ತಾನು ಬಾಣಂತನ ಮುಗಿಸಿ ಏಳುವುದರೊಳಗೆ ಮಾಣಿಗೆ ಸಲಿಗೆ ಜಾಸ್ತಿಕೊಡುತ್ತಾಳೋ ಏನೋ, ಅವನ ಮೇಲಿನ ತನ್ನ ಬಿಗಿ ತಪ್ಪುತ್ತದೆಯೋ ಏನೋ ಅಂತೆಲ್ಲಾ ರತ್ನ ಹೇಳಿ ಮುಗಿಸುವುದರೊಳಗೆ ಸರೋಜನೇ ಅಲ್ಲಿಗೆ ಬಂದಳು.

`ಯಂತ ಮಾರಾಯ್ತಿ. ಹೊಡೆಯದೆ ಚೆಂದದಿಂದ ನೋಡಿಕೊಂಡಳು ಎಂಬಂಥ ಮಾತು ನಿನ್ನ ಬಾಯಿಲ್ಲಿ ಬರಲಿಕ್ಕಿಲ್ಲ ಸುಳ್ಳ? ಆ ಮಾಣಿ ಮೊದಲೇ ಬೆಪ್ಪುಗಟ್ಟಿದೆ. ಇನ್ನಷ್ಟು ಬೆಪ್ಪು ಕಟ್ಟಿಸು. ನಾನೀಗ ಸಲುಗೆ ಕೊಟ್ಟರೆ ನೀನು ಕರೆದುಕೊಂಡು ಹೋದಮೇಲೆ ಭಾವಯ್ಯ ಅದನ್ನು ಬಿಡಿಸಿಯಾರು' - ಎಂದಳು.

ಅದಕ್ಕೆ ಸರಿಕಟ್ಟಿ ಏನೋ ಮಾತನಾಡಲು ಹೊರಟ ರತ್ನನಿಗೆ `ಬಾಣಂತಿ ಹೆಚ್ಚು ಮಾತಾಡಬಾರದು. ಮಲಕೋ ಸುಮ್ಮನೆ. ಆ ಹೆಣ್ಣಿನ ಮಾತನ್ನ ಮಾತನ್ನ ಇನ್ನೂ ಮನಸ್ಸಿನೊಳಗೆ ಜಗಿಯುತ್ತ ಇರಬೇಡ' - ಎಂದರು ಗೌರಮ್ಮ.
ಅವರ ಈ ಮಾತು ಕೇಳಿದ್ದೇ ರತ್ನನ ಕಣ್ಣುಗಳಲ್ಲಿ ನೀರು ತುಂಬಿತು... ಆದರೆ ನಿಜಕ್ಕೂ ಕಣ್ಣೀರು ತುಂಬಿದ್ದು ಗಂಡನ ನೆನಪಾಗಿಯೇ? - ಗಂಡನ ನೆನಪಾದರೆ ಮುಖದಲ್ಲಿ ಮುಗುಳ್ನಗೆ ತೇಲಿ ಬಾರದವಳು ರತ್ನ.

ಆವತ್ತು ರಾತ್ರಿ ಮಗು ಹುಟ್ಟಿದ ಜಾಗದಲ್ಲಿ ಒಂದು ಪೆನ್ಸಿಲು ಕಾಗದ ಸ್ವಲ್ಪ ಅಕ್ಕಿ ವೀಳ್ಯದೆಲೆ , ಅಡಿಕೆ, ಬಾಳೆ ಹಣ್ಣು ಎಲ್ಲ ಇಟ್ಟು ಬ್ರಹ್ಮ ಇಂದು ಬಂದು ಮಗುವಿನ ಹಣೆಗೆ ಬರೆಯಲು ಸಜ್ಜುಗೊಳಿಸುವ ಶಾಸ್ತ್ರವೂ ಆಯಿತು. ಬ್ರಹ್ಮ ಬಂದು ಏನು ಬರೆಯುವನೋ. ಅಂತೂ ಅಲ್ಲಿಟ್ಟ ಸಾಮಾಗ್ರಿಗಳೆಲ್ಲ ನಾಳೆ, ಅಂದು ಹೆರಿಗೆಯಾದೊಡನೆ ಬಟ್ಟೆ ತೆಗೆದುಕೊಂಡು ಹೋಗಿ ಮಡಿ ಮಾಡಿದ ಮಡಿವಾಳ್ತಿಗೆ ಸೇರುತ್ತದೆ.

- ವೈದೇಹಿ.

ಮುಂದೆ ಓದಿ

ರಾಜೀವ್ ದಿಕ್ಷಿತ್, ಅಣ್ಣಾ ಹಜಾರೆ ಮತ್ತು ಸುಲಭವಾಗಿ ಎಚ್ಚೆತ್ತುಕೊಳ್ಳದ ನಾವೆಲ್ಲರು !

ರಾಜೀವ್ ದಿಕ್ಷಿತ್ ಈ ಹೆಸರು ಕೇಳಿದೊಡನೆ ದೇಶದಲ್ಲಿ ಲಕ್ಷಾಂತರ ಜನರು ಬಾವುಕರಾಗುತ್ತಾರೆ. ವಿದೇಶಿ ತಂಪು ಪಾನಿಗಳ ನೈಜ ಸ್ವರೂಪವನ್ನು ಬಿಚ್ಚಿಟ್ಟವರು, ಸ್ವಿಸ್ ಬ್ಯಾಂಕ್ನ ಕಪ್ಪು ಹಣದ ಬಗ್ಗೆ ಅಡ್ವಾಣಿಯವರಿಗಿಂತ ಸುಮಾರು 15 ವರ್ಷ ಮುಂಚೆಯೆ ಹೇಳಿದವರು ದೀಕ್ಷಿತ್. ದೇಶ ಕಂಡ ಮಹಾನ್ ವಿದ್ವಾಂಸ, ನಿಸ್ವಾರ್ಥಿ, ಹೋರಾಟಗಾರ ರಾಜೀವ್ ದಿಕ್ಷಿತ್. ಶ್ರೀಮಂತ ಮನೆತನದಲ್ಲಿ ಹುಟ್ಟಿದ್ದ ದೀಕ್ಷಿತರು ಆಜಾದಿ ಬಚಾವೊ ಆಂದೋಲನಕ್ಕಾಗಿ ತಮ್ಮ ಧನ, ಆಯುಷ್ಯ, ಸರ್ವಸ್ವವನ್ನು ತೇಯ್ದರು. ವಿದೇಶಿ ತಂಪು ಪಾನೀಯಗಳ ನೈಜ ಸ್ವರೂಪವನ್ನು ವೈಜ್ಞಾನಿಕವಾಗಿ ಅವರು ನಿರೂಪಿಸಿದರೂ ಜನ ಅದನ್ನು ನೋಡಿ, ಕೇಳಿ ಖುಷಿಪಟ್ಟರು ಹೊರತು ಕುಡಿಯುವುದನ್ನು ಬಿಡಲಿಲ್ಲ! ಅವರ ವಾಕ್ಚಾತುರ್ಯ ಪ್ರಬುದ್ಧ ಹಿಂದಿ, ಪ್ರಾಮಾಣಿಕತೆಗೆ ವ್ಹಾ ವ್ಹಾ ಎಂದರು ಹೊರತು ಮಾತುಗಳನ್ನು ಪಾಲಿಸಲಿಲ್ಲ.


ಇಂದು ಅಣ್ಣ ಹಜಾರೆಯವರಿಗೆ ದೊರೆಯುತ್ತಿರುವ ಜನಬೆಂಬಲದ ಅರ್ಧದಷ್ಟು ದಿಕ್ಷಿತರಿಗೆ ಸಿಗಲಿಲ್ಲ. ಹಜಾರೆಯವರಂತೆ ದಿಕ್ಷಿತರು ಪ್ರಾಮಾಣಿಕರಾಗಿದ್ದರು. ರಾಜಕೀಯದ ಆಸೆ, ಹುದ್ದೆಯ ಆಸೆ, ಜನಪ್ರಿಯತೆಯ ಆಸೆ ಯಾವುದು ಅವರಿಗೂ ಇರಲಿಲ್ಲ. ಆದರೂ ಅವರಿಗೆ ಹಜಾರೆಯವರಿಗೆ ದೊರೆತಷ್ಟು ಜನಬೆಂಬಲ ಸಿಗಲಿಲ್ಲ. ಈ ದೇಶದಲ್ಲಿ ಎಷ್ಟೋ ಜನ ಪ್ರಾಮಾಣಿಕರಿಗೆ ನಾವು ಬೆಂಬಲ ನೀಡದೆ ಮೂಲೆಗುಂಪು ಮಾಡಿದ್ದೇವೆ. ಅಪರೂಪಕೊಮ್ಮೆ ಜೆ.ಪಿ. ಯಂತವರಿಗೆ ಜನ ಬೆಂಬಲ ಸಿಕ್ಕಿದೆ. ಹಜಾರೆಯಂತವರ ಕರೆಗೆ ಜನ ಬೆಂಬಲ ನೀಡಿದ್ದಾರೆ ಅಷ್ಟೇ. ಅವರಿಬ್ಬರು ಒಂದೇ ರೀತಿ ಅಲ್ಲದಿರಬಹುದು. ಆದರೆ ದಿಕ್ಷಿತ್, ಹಜಾರೆ, ಜೆ.ಪಿ.ಯೆಲ್ಲ ಪ್ರಾಮಾಣಿಕ ಹೋರಾಟಗಾರರೇ. ಯಾಕೆ ಹೀಗೆ ಆಗುತ್ತದೆ? ಚೆರಿಶ್ಮಾ ಇದ್ದರೆ ಜನ ಬೆಂಬಲ ಸಿಗುತ್ತದೆ ಎನ್ನುವುದು ಸುಳ್ಳು ದಿಕ್ಷಿತರಿಗೆ ಚೆರಿಶ್ಮಾ ಇತ್ತು. ಅವರು ಆಯ್ದುಕೊಂಡ ಕ್ಷೇತ್ರಗಳೆ ಕಾರಣವೆ? ಅದೂ ಅಲ್ಲ.

ಬಲಿಗಂಬದ ಮೇಲೆ ತಲೆಯನ್ನಿಡುವ ತನಕ ದಂಗೆ ಎಳದ ಜನರನ್ನು ಕಂಡು ದುಃಖವಾಗುತ್ತದೆ. ನನಗೆ. ಎಂದವರು ಕಲೀಲ್ ಗಿರ್ಬನ್. ಚಾಲ್ತಿಯಲ್ಲಿರದ ಈ ಸಾಲನ್ನು ನೆನಪಿಸಿದವರು ನಾಗರಿಕ ಪತ್ರಿಕೆಯ ಕೃಷ್ಣಮೂರ್ತಿ ಹೆಬ್ಬಾರ್. ನಾನು ಮುಂದಿಟ್ಟಿರುವ ಪ್ರಶ್ನೆಗೆ ಉತ್ತರ ಇದೇ ಸಾಲಿನಲ್ಲಿದೆ. ಏನೇ ಅವಘಡಗಳು ದೇಶದಲ್ಲಿ ಸಂಭವಿಸಿದರು ಅದು ನಮ್ಮನ್ನು ಬಲಿಗಂಬದ ತನಕ ಕೊಂಡೊಯ್ಯದಿದ್ದರೆ ನಾವು ಎಚ್ಚೆತ್ತುಕೊಳ್ಳುವುದಿಲ್ಲ. ದೇಶದ ಒಳಿತಿಗಾಗಿ ಸ್ವದೇಶಿ ಉತ್ಪನ್ನಗಳನ್ನು ಬಳಸಿ ಎಂದರೆ ಬಹುತೇಕ ಜನರು ಬಳಸುವುದಿಲ್ಲ! ವಿದೇಶಿ ಬಳಸಿ ನಮಗೆ ತಕ್ಷಣ ದೊಡ್ಡ ಪ್ರಮಾಣದಲ್ಲಿ ಹಾನಿಯಾದರೆ ಮಾತ್ರ ಸ್ವದೇಶಿ ಬಳಸುತ್ತೇವೆ. ಅಣ್ಣಾ ಹೋರಾಡುತ್ತಿರುವುದು ಬ್ರಷ್ಟಾಚಾರದ ವಿರುದ್ಧ ಭ್ರಷ್ಟಾಚಾರದಿಂದಲೇ ಎಷ್ಟೇ ಭಾರತೀಯರಿಗೆ ಮಗನ ನೌಕರಿ, ಸೈಟು, ಪ್ರಮೋಷನ್ನು ಅಸಾಧ್ಯವಾದ ಮಾತಾಗಿದೆ.

ಲಂಚ ನೀಡಿ ಅದೆಲ್ಲವನ್ನೂ ಪಡೆದವರೂ ಲಂಚಕ್ಕೆ ನೀಡಿದ್ದು ಇನ್ವೆಂಸ್ಟ್ಮೆಂಟ್, ಇನ್ವೆಂಸ್ಟ್ಮೆಂಟ್ ಜಾಸ್ತಿಯಾಯಿತು! ಎಂದು ಪರಿಗಣಿಸಿ ಭ್ರಷ್ಟಾಚಾರವನ್ನು ಶಪಿಸುತ್ತಿದ್ದಾರೆ. ಹೀಗೆ ಭ್ರಷ್ಟಾಚಾರ ಬಹುತೇಕ ಜನರ ಕುತ್ತಿಗೆಗೆ ಬಲಿಗಂಬವಾಗಿ ಪರಿಣಮಿಸಿದೆ. ಮೇಲಾಗಿ ಎ. ರಾಜಾ, ಕಲ್ಮಾಡಿ ಮುಂತಾದವರ ಹಗರಣಗಳು ಜನರಲ್ಲಿ ಅಸಹ್ಯ ಮೂಡಿಸಿದ್ದವು. ಆ ಸಂದರ್ಭದಲ್ಲಿ ಅಣ್ಣಾ ಉಪವಾಸ ಕುಳಿತಿದ್ದರಿಂದ ಜನ ಬೆಂಬಲ ನೀಡಿದ್ದರು. ಭ್ರಷ್ಟಾಚಾರ ಈ ಪ್ರಮಾಣದಲ್ಲಿ ಇರದಿದ್ದರೆ ಅಣ್ಣಾರ ಹೋರಾಟಕ್ಕೆ ಇಷ್ಟು ಬೆಂಬಲ ಸಿಗುತ್ತಿರಲಿಲ್ಲ. ಭ್ರಷ್ಟಾಚಾರದಿಂದ ಯಾವುದೋ ಒಂದು ವರ್ಗಕ್ಕೆ ತೊಂದರೆಯಾಗುತ್ತಿದೆ. ಹೋರಾಟಕ್ಕೆ ಬನ್ನಿ ಎಂದರೆ ಇಷ್ಟೊಂದು ಜನ ಸೇರುತ್ತಿರಲಿಲ್ಲ. ಭ್ರಷ್ಟಾಚಾರ ಇವತ್ತು ಬಡ ಮಧ್ಯಮ ಹಾಗೂ ಎಲ್ಲಾ ವರ್ಗದವರಿಗೂ ಹಿಂಸೆ ನೀಡುತ್ತಿದೆ. ಅದೆ ಕಾರಣಕ್ಕಾಗಿ ದೇಶವೇ ಅಣ್ಣಾ ಬೆಂಬಲಕ್ಕೆ ನಿಂತಿದೆ.

ನೀವೇ ಗಮನಿಸಿ ಪೆಪ್ಸಿ, ಕೋಲಾ, ಅಪಾಯಕಾರಿ ಎಂದು ಎಲ್ಲರಿಗೂ ತಿಳಿದಿದೆ ಆದರೆ ಅದರಿಂದ ನೇರವಾಗಿ ತೊಂದರೆಗೆ ಒಳಪಟ್ಟವರು ತುಂಬಾ ಕಡಿಮೆ. ಎಲ್ಲೊ ಆಗೊಮ್ಮೆ ಈಗೊಮ್ಮೆ 5 ಬಾಟಲಿ ಪೆಪ್ಸಿ ಕುಡಿದ ವಿದ್ಯಾರ್ಥಿ ಸಾವು ಎನ್ನುವುದನ್ನು ನಾವು ಪತ್ರಿಕೆಗಳಲ್ಲಿ ಓದಿದ್ದೇವೆ ಹೊರತು ಅದರ ಸಣ್ಣ ವಿಕಾರವನ್ನು ನಾವು ಅನುಭವಿಸಿಲ್ಲ. ಆದರೆ ಭ್ರಷ್ಟಾಚಾರದ ಅಪಾಯವನ್ನು ಅನುಭವಿಸಿದ್ದೇವೆ. ಅರ್ಥಾತ್ ಭ್ರಷ್ಟಾಚಾರ ನಮ್ಮನ್ನು ಬಲಿಗಂಬಕ್ಕೆ ತಂದು ನಿಲ್ಲಿಸಿದೆ ಆದರೆ ಪೆಪ್ಸಿ ಕೊಲಾ ಹಾಗೆ ಮಾಡಲಿಲ್ಲ ಅದಕ್ಕಾಗಿ ದಿಕ್ಷಿತರು ಹೇಳಿದ ಪೆಪ್ಸಿ ಕೊಲಾ ಹಠಾವೊಕ್ಕಿಂತ ಅಣ್ಣಾ ಹೇಳಿದ ಭ್ರಷ್ಟಾಚಾರ ಹಠಾವೊಗೆ ನಾವು ಹೆಚ್ಚು ಬೆಂಬಲ ನೀಡಿದ್ದೇವೆ.

ಇಷ್ಟಕ್ಕೂ ಎಚ್ಚೆತ್ತುಕೊಳ್ಳಲು, ಅಣ್ಣಾರಂತವರ ಜೊತೆ ಕೈ ಜೋಡಿಸಲು ಇಷ್ಟಕ್ಕೂ ಬಲಿಗಂಬದ ಪರಿಸ್ಥಿತಿ ಬರುವ ತನಕ ಕಾಯಬೇಕೆ? ಎಂಡೋಸಲ್ಘಾನ್ ಇನ್ನೆಷ್ಟು ಜನರನ್ನು ಕಿತ್ತು ತಿಂದ ಮೇಲೆ ನಾವು ಎಚ್ಚೆತ್ತುಕೊಳ್ಳುತ್ತೇವೆ. ಅವಘಡಗಳು ಮಿತಿ ಮೀರಿದಾಗ ಮಾತ್ರ ನಾವು ಎಚ್ಚೆತ್ತುಕೊಳ್ಳುತ್ತೇವೆ. ಅದಕ್ಕಿಂತ ಸ್ವಲ್ಪ ಹಿಂದಿನ ಘಟ್ಟವಿರುವಾಗಲು ಯಾವುದಾದರು ಒಬ್ಬ ಪ್ರಮಾಣಿಕ ಹೋರಾಟಕ್ಕೆ ನಿಂತರೆ ನಮ್ಮ ಬೆಂಬಲ ಪಡೆಯುವುದು ಕಷ್ಟವೇ! ಇದೆ ಕಾರಣದಿಂದ ಬಾಬಾ ಆಮ್ಟೆಯವರ ಕೆಲವು ಹೋರಾಟಗಳು ಯಶಸ್ವಿಯಾಗಲಿಲ್ಲ. ಅದೆಷ್ಟೋ ರೈತರ ಪರ ಹೋರಾಟಗಳು ಸೋತು ಹೋದವು.

ಸ್ವಸ್ಥ ಸಮಾಜ ನಿರ್ಮಾಣವಾಗಬೇಕಾದರೆ ಅವಘಡಗಳು ಮಿತಿ ಮೀರಿದಾಗ ಮಾತ್ರ ಹೋರಾಟ ಮಾಡಿದರೆ ಸಾಲದು. ಅಣ್ಣಾರ ಹೋರಾಟ ಎ. ರಾಜಾ ಅಥವಾ ಕಲ್ಮಾಡಿ ಎಂಬ ಭ್ರಷ್ಟನ ವಿರುದ್ಧವಲ್ಲ ಅದು ಭ್ರಷ್ಟಾಚಾರದ ವಿರುದ್ಧ. ನಾವೇ ಲಂಚ ನೀಡಿದರೆ ಅಥವಾ ಪಡೆದರೆ ಅದು ನಮ್ಮ ಭ್ರಷ್ಟಾಚಾರದ ವಿರುದ್ಧವೂ ಆಗುತ್ತದೆ. ಅಣ್ಣಾರ ಹೋರಾಟ ಮಸೂದೆಯ ಜೊತೆಯಲ್ಲಿ ಜನರನ್ನು ಶುದ್ದ ಹಸ್ತರನ್ನಾಗಿ ಮಾಡಲಿ ಎಂದು ಆಶಿಸೋಣ ಬಹುಮುಖ್ಯವಾಗಿ ಅದು ಜನರನ್ನು ಅನ್ಯಾಯದ ವಿರುದ್ಧ ಸದಾ ಹೋರಾಡುವಂತೆ ಪ್ರೇರೆಪಿಸಲಿ ಎಂದು ಆಶಿಸೋಣ. ಪ್ರತಿ ಬಾರಿಯು ಅನ್ಯಾಯ ಮಿತಿ ಮೀರುವ ತನಕ ಸುಮ್ಮನಿದ್ದರೆ ಪ್ರಜಾಪ್ರಭುತ್ವ ಸೋಲುತ್ತದೆ.

-ಆದಿತ್ಯ ಭಟ್.

ಮುಂದೆ ಓದಿ

ವಿಚಾರ

ಬೇರೆ ವ್ಯಕ್ತಿಗಳು ನಿಮ್ಮ ಕಡೆ ಬೇಗ ವಾಲಬೇಕು,ನಿಮ್ಮ ಮಾತುಗಳನ್ನು ಕೇಳಿಸಿಕೊಳ್ಳಬೇಕು,ನಿಮ್ಮ ಮಾತುಗಳಿಗೆ ಬೆಲೆ ಕೊಡಬೇಕು, ಆರಾಮಾಗಿ ನಿಮ್ಮ ಜೊತೆ ಬೆರೆಯಬೇಕು ಎಂದು ನೀವು ಬಯಸಿದ್ದೇ ಆದರೆ - ನೀವು ಆ ವ್ಯಕ್ತಿಯ ಕನಸು-ನನಸುಗಳ ಬಗ್ಗೆ,ಆ ವ್ಯಕ್ತಿಯ ಮೌಲ್ಯಗಳ ಬಗ್ಗೆ,ಆ ವ್ಯಕ್ತಿಯ ಭಾವನೆಗಳ ಬಗ್ಗೆ,ಆ ವ್ಯಕ್ತಿಯ ಬೇಕು-ಬೇಡಗಳ ಬಗ್ಗೆ ಹಗುರವಾಗಿ ಮಾತನಾಡದೆ,ಬಹಳ ಕನಿಕರದಿಂದ,ಪ್ರೀತಿ ವಿಶ್ವಾಸದಿಂದ,ಮುಖ್ಯವಾಗಿ ನಿರ್ಮಲ ಮನಸ್ಸಿನಿಂದ,ತಾಳ್ಮೆಯಿಂದ ಮಾತನಾಡಿ. ಆಗ ಆ ವ್ಯಕ್ತಿ ನಿಮ್ಮ ಸ್ನೇಹಿತನಾಗುವುದರಲ್ಲಿ ಸಂದೇಹವೇ ಇಲ್ಲ. ಸ್ನೇಹ ಬೆಳೆದರೆ ಏನಾಗುತ್ತದೆ...? ನೀವು ಪರಸ್ಪರ ಸಹಾಯಕರಾಗುತ್ತೀರಿ. ಆಗ ನಿಮ್ಮ ದಾರಿ ಸುಗಮವಾಗುತ್ತದೆ. ಇದು ಬಹಳ ಬಲಿಷ್ಠ ಸೂತ್ರ. ಒಂದು ಸಲ ನೀವು ಅಳವಡಿಸಿ ನೋಡಿ. ಇದರ ಚಮತ್ಕಾರ ನಿಮಗೇ ತಿಳಿಯುತ್ತದೆ.



ಪರರನ್ನು ಟೀಕಿಸುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು(ವ್ಯಕ್ತಿತ್ವ ವಿಕಸನದ ಒಂದು ಕಿವಿ ಮಾತು)
ಕೆಲವೊಮ್ಮೆ ನಾವು ಪರರ ಪಿಸುಮಾತುಗಳಿಗೆ,ಅವರು ನಮ್ಮ ಬಗ್ಗೆಯೇ ಟೀಕಿಸುತ್ತಿರುವುದು ಎಂದು ಕಲ್ಪಿಸಿಕೊಂಡು, ಆ ವಿಷಯವನ್ನು ತೀರವಾಗಿ ಮನಸ್ಸಿಗೆ ಹಚ್ಚಿಕೊಂಡು ನೊಂದುಬಿಡುತ್ತೇವೆ. ಪರಿಸ್ಥಿತಿ ಹತೋಟಿ ಮೀರಿದರೆ ಸಂಬಂಧಗಳಲ್ಲಿ ಬಿರುಕು ಬಿಡಬಹುದು. ಅವರು ನಿಮ್ಮ ಬಗ್ಗೆ ನಿಜವಾಗಲೂ ಟೀಕೆ ಮಾಡಿಕೊಳ್ಳುತ್ತಿದ್ದರೆ ಮಾಡಿಕೊಳ್ಳಲಿ ಬಿಡಿ. ಅದಕ್ಕೆ ನಾವೇಕೆ ನಮ್ಮ ಮಂಡೆ ಬಿಸಿಮಾಡಿಕೊಳ್ಳಬೇಕು..? ಪರರ ಶಾಂತಿ ಭಂಗ ಮಾಡಲು ಪಿತೂರಿ ನಡೆಸುವುದರಿಂದ,ಟೀಕೆಗಳ ಗೋಪುರ ಕಟ್ಟುವುದರಿಂದ ಅವರು ತಮ್ಮ ಅಮೂಲ್ಯವಾದ ಸಮಯ ಮತ್ತು ಶಕ್ತಿ ವ್ಯರ್ಥಮಾಡಿಕೊಳ್ಳಲಿ ಬಿಡಿ. ನೀವು ಎಂದಿಗೂ ತಾಳ್ಮೆ ಮತ್ತು ಸಹನೆಯನ್ನು ಕಳೆದುಕೊಳ್ಳಬೇಡಿ. ಅಂತಹ ಸಂಗತಿಗಳನ್ನು ಪರಿಸ್ಥಿತಿಗಳನ್ನು ಮನಸ್ಸಿಗೆ ಹಚ್ಚಿಕೊಳ್ಳದೆ, ಮನಸ್ಸನ್ನು ಬೇರೆ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ . ಊರ ಬಾವಿ ಮುಚ್ಚಬಹುದು ಆದರೆ ಜನರ ಬಾಯಿ ಮುಚ್ಚಲು ಸಾಧ್ಯವೇ..! ಅಂತಹ ಸನ್ನಿವೇಶಗಳಿಗೆ ಪ್ರಾಮುಖ್ಯತೆಯೇ ನೀಡಬೇಡಿ. ತಾಳ್ಮೆ ಕಳೆದುಕೊಂಡರೆ ಮಾತಿಗೆ ಮಾತು ಬೆಳೆಯುತ್ತದೆ. ನಂತರ ಜಗಳ. ರಕ್ತಪಾತವೂ ಆಗಬಹುದು.

ನಯವಾಗಿ ಅರ್ಥವಾಗುವ ರೀತಿಯಲ್ಲಿ ಮಾತನಾಡಿ(ವ್ಯಕ್ತಿತ್ವ ವಿಕಸನದ ಒಂದು ಕಿವಿ ಮಾತು)

ನೀವು ಏನೇ ಮಾತನಾಡಬೇಕಾದರೂ ಬೇರೆಯವರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಮಾತನಾಡಿ. ಅವರನ್ನು ಅರ್ಥಮಾಡಿಸಲು ನೀವು ಹೆಚ್ಚು ಸಮಯ ಕಳೆಯುತ್ತಿದ್ದರೆ, ನೀವು ಆಡುತ್ತಿರುವ ಮಾತುಗಳು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿದೆ, ನೀವು ಸರಿಯಾಗಿ ಮಾತನಾಡುತ್ತಿಲ್ಲ ಎಂದರ್ಥ. ಅರ್ಥ ಮಾಡಿಸಲು ಹೆಚ್ಚು ಸಮಯ ತೆಗೆದುಕೊಳ್ಳದೆ ನಿಮ್ಮ ಮಾತುಗಳನ್ನು ಅರ್ಥಮಾಡಿಸಿ ಬಿಡಿ. ಅವರ ಬಗ್ಗೆ ನೀವು ಕಾಳಜಿ ವಹಿಸುತ್ತಿದ್ದೀರಿ ಎಂಬ ನಂಬಿಕೆ ಅವರಲ್ಲಿ ಬಂದರೆ, ಆಗ ಅವರು ನಿಮ್ಮೊಂದಿಗೆ ಸಹಕರಿಸುತ್ತಾರೆ. ಆ ನಂಬಿಕೆ ಹುಟ್ಟಿಸುವುದು ನಿಮ್ಮ ಮಾತಿನ ಚಾತುರ್ಯದ ಜೊತೆಗೆ ನಿರ್ಮಲ ಮನಸ್ಸಿನ ಸಿಹಿ ಸೇರಿದರೆ ಮಾತ್ರ ಸಾಧ್ಯ. ಪ್ಲಾಸ್ಟಿಕ್ ಮಾತುಗಳ ಪ್ರಭಾವ ಕ್ಷಣಿಕ,ನಿರ್ಮಲ ಮಾತುಗಳ ಪ್ರಭಾವ ಶಾಶ್ವತ ಎಂಬುದನ್ನು ಮರೆಯಬೇಡಿ.

- ಜಬೀವುಲ್ಲಾ ಖಾನ್.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಮಂಗಳೂರು:ರಾಜ್ಯ ಸರ್ಕಾರ ಪ್ರವಾಸೋದ್ಯಮಕ್ಕೆ ವಿಶೇಷ ಆದ್ಯತೆ ನೀಡಿದ್ದು, ಪ್ರವಾಸೋದ್ಯಮ ಕೇಂದ್ರಗಳ ಅಭಿವೃದ್ಧಿಗೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿಧಾನ ಸಭಾ ಉಪಸಭಾಧ್ಯಕ್ಷರಾದ ಎನ್. ಯೋಗೀಶ್ ಭಟ್ ಅವರು ಹೇಳಿದರು.



ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರವಾ ಸೋದ್ಯಮ ಇಲಾಖೆ, ಜಿಲ್ಲಾ ಡಳಿತ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಜನತಾ ಬಜಾರ್ ಶಾಖೆ ಸಂಯುಕ್ತ ಆಶ್ರಯ ದಲ್ಲಿ ಆಯೋಜಿ ಸಲಾದ ಪ್ರವಾಸಿ ಟ್ಯಾಕ್ಸಿ ವಿತರಣಾ ಸಮಾರಂಭ ದಲ್ಲಿ 21 ಪ್ರವಾಸಿ ಟ್ಯಾಕ್ಸಿ ಗಳನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ 2010-11ನೇ ಸಾಲಿನ ಎಸ್ ಸಿ ಪಿ/ ಟಿ ಎಸ್ ಪಿ ಯೋಜನೆ ಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅರ್ಹ ನಿರುದ್ಯೋಗಿ ಫಲಾನುಭವಿಗಳಿಗೆ ವಿತರಿಸುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಮಂಗ ಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಯಲ್ಲಿ ಪ್ರವಾ ಸೋದ್ಯಮ ಕೇಂದ್ರಗಳ ಅಭಿ ವೃದ್ಧಿ ಸಂಬಂಧಿಸಿದ ರೂಪು ರೇಷೆಗಳು ಅಂತಿಮ ಹಂತಕ್ಕೆ ತಲು ಪಿದ್ದು, ಅಂತಾ ರಾಷ್ಟ್ರೀಯ ಗೋಲ್ಫ್ ಕೋರ್ಸ್ ಮತ್ತು ರೋಪ್ ವೇ ಕಾಮಗಾರಿಗೂ ಅಂತಿಮ ರೂಪು ನೀಡ ಲಾಗುವುದು ಎಂದರು. ಸೋಮೇಶ್ವರ ಕಡಲ ತೀರವನ್ನು ಕನ್ಯಾಕುಮಾರಿಯಂತೆ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ ಎಂದು ಉಪಸಭಾಧ್ಯಕ್ಷರು ಹೇಳಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ. ಟಿ. ಶೈಲಜಾ ಭಟ್ ಅವರು ಮಾತನಾಡಿ, ಮಹಿಳಾ ಫಲಾನುಭವಿಗೂ ಕಾರು ನೀಡುವಂತೆ ಬ್ಯಾಂಕಿನವರಿಗೆ ಸೂಚಿಸಿದರಲ್ಲದೆ, ಫಲಾನುಭವಿಗಳಿಗೆ ಶುಭ ಹಾರೈಸಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ. ನಾಗರಾಜ ಶೆಟ್ಟಿ ಮಾತನಾಡಿ, ಉತ್ತಮ ಯೋಜನೆಗಳನ್ನು ಆರಂಭದಲ್ಲಿಯೇ ಸಕರ್ಾರ ರೂಪಿಸಿದ್ದು ಇಂದು ಫಲ ನೀಡುತ್ತಿದೆ. ಈ ಯೋಜನೆಯಡಿ ಇದುವರೆಗೆ 40 ಕಾರುಗಳನ್ನು ನೀಡಲಾಗಿದೆ ಎಂದರು. ಶಾಸಕ ಂಯು ಟಿ ಖಾದರ್ ಅವರು ಫಲಾನುಭವಿಗಳಿಗೆ ಶುಭ ಹಾರೈಸಿದರು.ಪ್ರವಾ ಸೋದ್ಯಮ ಇಲಾಖೆ ದ. ಕ ಜಿಲ್ಲೆಯ ಅರ್ಹ ನಿರು ದ್ಯೋಗಿ ಪರಿ ಶಿಷ್ಟ ಜಾತಿ ಮತ್ತು ಪರಿ ಶಿಷ್ಟ ಪಂಗ ಡದ ಅಭ್ಯರ್ಥಿ ಗಳಿಗೆ ಪ್ರವಾ ಸೋದ್ಯಮ ಕ್ಷೇತ್ರ ದಲ್ಲಿ ಉದ್ಯೋ ಗಾವ ಕಾಶ ಒದ ಗಿಸಿ ಅವ ರನ್ನು ಸ್ವಾವ ಲಂಬಿ ಗಳ ನ್ನಾಗಿಸುವ ಉದ್ದೇ ಶದಿಂದ ಕಳೆದ ಎರಡು ವರ್ಷ ಗಳಿಂದ ಟಾಟಾ ಇಂಡಿ ಕ್ಯಾಬ್ ಡಿ ಎಲ್ ಇ ಬಿ ಎಸ್ 3 ಪ್ರವಾಸಿ ಟ್ಯಾಕ್ಸಿ ಯನ್ನು ಶೇ. 50 ಸಹಾಯಧನ ಹಾಗೂ ಶೇ. 45 ಬ್ಯಾಂಕ್ ಸಾಲ ಸೌಲಭ್ಯ ಮತ್ತು ಶೇ. 5 ಫಲಾನುಭವಿ ಭರಿಸುವ ಮೂಲಕ ಖರೀದಿಸಿ ವಿತರಿಸಿದೆ. ಟ್ಯಾಕ್ಸಿ 3,59,339 ರೂ. ಮೌಲ್ಯದ್ದಾಗಿದೆ.

ಜಿಲ್ಲಾಧಿಕಾರಿ ಡಾ ಎನ್ ಎಚ್ ಚನ್ನಪ್ಪ ಗೌಡ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾದ ಎಂ.ಆರ್. ಪ್ರಕಾಶ್ ಅವರು ಸ್ವಾಗತಿಸಿದರು. ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಮಹೇಶ್ ಕುಮಾರ್ ವಂದಿಸಿದರು.

ಮುಂದೆ ಓದಿ
6:56 PM

ಸಾಹಿತ್ಯೋತ್ಸವ

Posted by ekanasu

ರಾಜ್ಯ - ರಾಷ್ಟ್ರ
ಮಂಗಳೂರು :ಅಖಿಲ ಭಾರತ 66ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,ಮಂಗಳೂರು ವಿಶ್ವ ವಿದ್ಯಾನಿಲಯ ಡಾಕ್ಟರೇಟ್,ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ನಾಡೋಜ ಪದವಿ ಪುರಸ್ಕೃತ ನಾಡೋಜ ಡಾ.ಕಯ್ಯಾರ ಕಿಂಞಣ್ಣ ರೈಯವರ 97ನೇ ವರ್ಷದ ಜನ್ಮದಿನೋತ್ಸವ ಮತ್ತು ಸಾಹಿತ್ಯೋತ್ಸವ ಕಾರ್ಯಕ್ರಮವನ್ನು ಕಾಸರಗೋಡು ಬದಿಯಡ್ಕ ಪೆರಡಾಲದ ಕವಿತಾ ಕುಟೀರದಲ್ಲಿ 2011 ಜೂನ್ 8 ರಂದು ಸಂಜೆ 3.00 ಗಂಟೆಗೆ ಹಮ್ಮಿಕೊಳ್ಳಲಾಗಿದೆ.ಸರಕಾರದ ಪರವಾಗಿ ಅಭಿನಂದನ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಕರಾವಳಿಯ ಮಹಾಕವಿಯಾಗಿ,ಸ್ವಾತಂತ್ರ್ಯ ಹೋರಾಟಗಾರರಾಗಿ,ಕರ್ನಾಟಕ ಏಕೀಕರಣ ಚಳವಳಿಯ ಮುಂಚೂಣಿಯ ನಾಯಕರಾಗಿ ,ಕಾಸರಗೋಡು ವಿಲೀನಿಕರಣ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕರಾಗಿ ದುಡಿದಿರುವ ಗಡಿನಾಡು ಕಾಸರಗೋಡಿನ ಸಾಂಸ್ಕೃತಿಕ ರಾಯಭಾರಿಯಾಗಿ ಗೌರವಿಸಲ್ಪಡುವ ನಾಡೋಜರ ಕಾವ್ಯ ಗಾಯನ,ರಾಜ್ಯ ಮಟ್ಟದ ಕವಿಗೋಷ್ಠಿಯೊಂದಿಗೆ ಹುಟ್ಟು ಹಬ್ಬವನ್ನು ವಿಶಿಷ್ಠ ರೀತಿಯಲ್ಲಿ ಆಚರಿಸಲಾಗುವುದು. ಸಾಧಕ ಒಡನಾಡಿಗಳನ್ನು ಗುರುತಿಸಿ ನಾಡೋಜ ಡಾ.ಕಯ್ಯಾರ ಕಿಂಞಣ್ಣ ರೈಯವರ ಹಸ್ತದಿಂದಲೇ ಪ್ರತಿಷ್ಠಿತ ನಾಡೋಜ ಡಾ.ಕಯ್ಯಾರ ಕಿಂಞಣ್ಣ ರೈ ಸಮ್ಮಾನವನ್ನು ನೀಡಿ ಗೌರವಿಸಲಾಗುವುದು.ಈ ಕಾರ್ಯಕ್ರಮದಲ್ಲಿ ಪ್ರಸಿದ್ದ ಸಾಹಿತಿಗಳು,ಸಚಿವರು,ಸಂಸದರು,ಶಾಸಕರು ಇನ್ನಿತರರು ಪಾಲ್ಗೊಳ್ಳಲಿದ್ದಾರೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಅಳಿವಿನಂಚಿನಲ್ಲಿರುವ ಜಲಚರಗಳನ್ನು ನಾಶಪಡಿಸಿದರೆ ಶಿಕ್ಷೆ
ಮಲ್ಪೆ: ಸಮುದ್ರದಲ್ಲಿ ಅಳಿವಿನಂಚಿನಲ್ಲಿರುವ ಜಲಚರಗಳಾದ ಕಡಲಾಮೆ, ತಿಮಿಂಗಿಲ ಮೊದಲಾದ ಮೀನಿನ ಪ್ರಭೇದಗಳನ್ನು ಹಿಡಿದು ಅದರ ಸಂತತಿಯನ್ನು ನಾಶಪಡಿಸಿದರೆ ಜೈಲು ಕಂಬಿ ಹಿಂದೆ ಗ್ಯಾರಂಟಿ...ನೀವೂ ಜಾಗ್ರತರಾಗಿ..ರಾಜ್ಯದ ಕಾನೂನಿನ ಪ್ರಕಾರ ಅಪರಾಧವೆನಿಸುತ್ತದೆ ಎಂದು ಕರ್ನಾಟಕ ಪೊಲೀಸ್ ಇಲಾಖೆಯ ಸಿಐಡಿ ಫಾರೆಸ್ಟ್ನ ಪೊಲೀಸ್ ಮಹಾ ನಿರ್ದೇಶಕ ಕೆ.ಎಸ್.ಎನ್. ಚಿಕ್ಕೆರೂರ್ ಹೇಳಿದ್ದಾರೆ.



ಕರ್ನಾಟಕ ಪೊಲೀಸ್ ಇಲಾಖೆಯ ಸಿಐಡಿ ಫಾರೆಸ್ಟ್ ವತಿಯಿಂದ ನಡೆದ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅಳಿವಿನಂಚಿನಲ್ಲಿರುವ ಮೀನಿನ ರಕ್ಷಣೆಯ ಬಗ್ಗೆ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಸೂಚನಾ ಫಲಕ ಉದ್ಘಾಟಿಸಲಾಗಿದೆ.
ಕೇಂದ್ರ ಸರಕಾರ 1972ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಹೊರಡಿಸಿದ್ದು, ಅದರಂತೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 2 ರಂತೆ ಜಲಚರ, ಸಸ್ತನಿ, ಸರಿಸೃಪ, ಕಶೇರುಕ, ಅಕಶೇರುಕಗಳು ಹಾಗೂ ಅವುಗಳ ವೊಟ್ಟೆ ಮರಿಗಳನ್ನು ನಾಶಪಡಿಸಿದರೆ ಅಪರಾಧವೆಸಗಿದವನಿಗೆ 3 ರಿಂದ 7 ವರ್ಷಗಳ ಕಾಲ ಸಜೆ ಮತ್ತು 25 ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ ಎಂದರು. ಈ ಬಗ್ಗೆ ಮೀನುಗಾರರಲ್ಲಿ ಎಚ್ಚರಿಕೆ ಮೂಡಿಸಲು ರಾಜ್ಯದ ಪ್ರಮುಖ ಬಂದರುಗಳಲ್ಲಿ ಮಾಹಿತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು ಕಾರಾವಾರ, ಹೊನ್ನಾವರ, ಭಟ್ಕಳ ಮತ್ತು ಮಲ್ಪೆಬಂದರುಗಳಲ್ಲಿ ಸೂಚನಾ ಫಲಕವನ್ನು ಅಳವಡಿಸಲಾಗಿದೆ .

ಇವುಗಳನ್ನು ಹಿಡಿದೀರಾ...ಜೋಕೆ...
ನೀಲಿ ತಿಮಿಂಗಿಲ, ಭರ್ಜಿ ಹಲ್ಲಿನ ಮೀನುಗಳು, ತಿಮಿಂಗಿಲ, ನೀರ್ ಬಲೆರ್, ಕಲ್ಲು ಥೊರಕೆ, ಚಿಕ್ಕ ಮೂತಿಯ ಸಾಮಾನ್ಯ ಡಾಲ್ಫಿನ್, ಗೂನು ಬೆನ್ನಿನ ಡಾಲ್ಫಿನ್, ಸವಕ್ಕು ಥೊರಕೆ, ದೊಡ್ಡ ಹಲ್ಲಿನ ಗರಗಸ ಮೀನು, ಕೆಂಪು ಹವಳ, ಬಿಳಿದೊಡ್ಡ ಹೊಟ್ಟೆಯ ಕಡಲ ಗರುಡ, ಒರಟು ಹಲ್ಲಿನ ಡಾಲ್ಫಿನ್, ಕಡಲ ಸೌತೆ, ಗಿಟಾರ್ ಮೀನು, ಬಾಟಲ್ ಮೂಗಿನ ಡಾಲ್ಫಿನ್, ಕ್ಯಾರೆಟ್ ಆಮೆ, ಹಸಿರ್ಗಡಲ ಆಮೆ, ಬೆಂಕಿ ಹವಳ, ಹದ್ದು ಕೊಕ್ಕಿನ ಆಮೆ, ಚರ್ಮದ ಆಮೆ, ಪಾಂಡಿಚೆರಿ ಮೀನು, ಚೂಪಾದ ಹಲ್ಲಿನ ಗರಗಸ ಮೀನು, ಕಪ್ಪು ಹವಳ, ಡೈಸಿ ಹವಳ, ಆಲೀಪ್ ರೆಡ್ಲೆ ಆಮೆ, ಕಡಲ ಕುದುರೆ, ಕೊಲೇಜ್ ವೊದಲಾದ ಮೀನುಗಳನ್ನು ಹಿಡಿಯುವುದು ಅಪರಾಧವಾಗುತ್ತದೆ.

-ಮಾನಸಿ

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮೂಡಬಿದಿರೆ:ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ಮೇ.27ರಂದು ನಡೆದ ಆಳ್ವಾಸ್ ಪ್ರಗತಿ ಬ್ಯಾಂಕಿಂಗ್ ಪ್ಲೇಸ್ ಮೆಂಟ್ ಡ್ರೈವ್ ಮೇಳದಲ್ಲಿ ಒಟ್ಟು 1500 ವಿದ್ಯಾರ್ಥಿಗಳು ನೋಂದಾವಣೆ ನಡೆಸಿ ಭಾಗವಹಿಸಿದ್ದರು. ಈ ಪೈಕಿ 240 ವಿದ್ಯಾರ್ಥಿಗಳ ಶಾರ್ಟ್ ಲಿಸ್ಟ್ ಗಳನ್ನು ಉದ್ಯೋಗಮೇಳದಲ್ಲಿ ಪಾಲ್ಗೊಂಡ ಬ್ಯಾಂಕುಗಳು ಸಿದ್ಧಪಡಿಸಿವೆ.ಐ.ಒ.ಬಿ, ಐ.ಸಿ.ಐ.ಸಿ.ಐ,ಐ.ಡಿ.ಬಿ.ಐ, ಟಿ.ಟಿ.ಕೆ, ಖಾರ್ವೇ, ಇಂಡಸ್, ಶೇರ್ಖಾನ್, ಲಾಡೆರ್, ಬಿರ್ಲಾ ಸನ್ ಲೈಟ್ ಸೇರಿದಂತೆ ಒಟ್ಟು 10 ಬ್ಯಾಂಕುಗಳು ಈ ಕಿರು ಉದ್ಯೋಗಮೇಳದಲ್ಲಿ ಭಾಗವಹಿಸಿದ್ದವು. 1,500ವಿದ್ಯಾರ್ಥಿಗಳು ನೋಂದಾವಣೆ ಮಾಡಿ ಈ ಮೇಳದಲ್ಲಿ ಭಾಗವಹಿಸಿದ್ದರು. ಈ ಪೈಕಿ 240ಮಂದಿಯನ್ನು ಶಾರ್ಟ್ ಲಿಸ್ಟ್ ಮಾಡುವ ಮೂಲಕ ಪ್ರಥಮ ಹಂತದಲ್ಲಿ ಆಯ್ಕೆ ನಡೆಸಲಾಗಿದೆ. ಮುಂದೆ ಆಯ್ಕೆಗೊಂಡ ಅಭ್ಯರ್ಥಿಗಳನ್ನು ಆಯಾ ಸಂಸ್ಥೆಗಳು ನೇರ ಸಂಪರ್ಕಕ್ಕೆ ಒಳಪಡಿಸಿ ಮುಂದಿನ ಆಯ್ಕೆಪ್ರಕ್ರಿಯೆಗಳ ಕಾರ್ಯ ಕೈಗೊಳ್ಳಲಿವೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಆಳ್ವಾಸ್ ಪ್ರಗತಿ: ದ ಬ್ಯಾಂಕಿಂಗ್ ಪ್ಲೇಸ್ ಮೆಂಟ್ ಡ್ರೈವ್ - 2011
ಮೂಡಬಿದಿರೆ: ಆಳ್ವಾಸ್ ಪ್ರಗತಿ - 2011 ಬೃಹತ್ ಉದ್ಯೋಗಮೇಳದ ಪೂರ್ಣ ಯಶಸ್ಸಿನ ಬೆನ್ನಲ್ಲೇ ಮೂಡಬಿದಿರೆಯ ಆಳ್ವಾಸ್ ಎಜುಕೇಷನ್ ಫೌಂಡೇಷನ್ "ಆಳ್ವಾಸ್ ಪ್ರಗತಿ: ದ ಬ್ಯಾಂಕಿಂಗ್ ಪ್ಲೇಸ್ ಮೆಂಟ್ ಡ್ರೈವ್ - 2011" ಎಂಬ ಮತ್ತೊಂದು ಉದ್ಯೋಗಮೇಳವನ್ನು ಯಶಸ್ವಿಯಾಗಿ ಮಿಜಾರು ಶೋಭಾವನ(ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಕ್ಯಾಂಪಸ್) ಕ್ಯಾಂಪಸ್ ನಲ್ಲಿ ಆಯೋಜಿಸಿತು. ಬ್ಯಾಂಕಿಂಗ್ ಮತ್ತು ಫಿನಾನ್ಶಿಯಲ್ ಸೆಕ್ಟರ್ ಗಳನ್ನೇ ಮುಖ್ಯಗುರಿಯನ್ನಾಗಿಸಿಕೊಂಡು ಈ ಮೇಳವನ್ನು ಆಯೋಜಿಸಿದ್ದು ವಿಶೇಷವಾಗಿತ್ತು.

















ಶುಕ್ರವಾರ (ಮೇ.27ರಂದು ) ಮೇಳಕ್ಕೆ ಚಾಲನೆ ನೀಡಿದ ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಅನಂತಕೃಷ್ಣ ಮಾತನಾಡಿ;ಪ್ರಸ್ತುತ ಬ್ಯಾಂಕಿಂಗ್ ಸೇರಿದಂತೆ ಹಣಕಾಸು ಕ್ಷೇತ್ರದಲ್ಲಿ ವಿಫುಲ ಉದ್ಯೋಗಾವಕಾಶವಿದೆ. ಸ್ಪರ್ಧಾತ್ಮಕವಾದ ವೇತನಶ್ರೇಣಿಯನ್ನೂ ಈ ಉದ್ಯೋಗಗಳು ಹೊಂದಿವೆ. ಆ ಕಾರಣಕ್ಕಾಗಿ ಹೆಚ್ಚಿನ ಯುವಜನತೆ ಈ ಕ್ಷೇತ್ರದತ್ತ ಆಕರ್ಷಿತರಾಗುತ್ತಿದ್ದಾರೆ ಎಂದರು.

ಒಂದು ದಿನದ ಈ ಉದ್ಯೋಗಮೇಳದಲ್ಲಿ ಪ್ರತಿಷ್ಠಿತ ಎಚ್.ಡಿ.ಎಫ್.ಸಿ, ಸೌತ್ ಇಂಡಿಯಾ, ಐ.ಒ.ಬಿ, ಆಕ್ಸಿಸ್ ಬ್ಯಾಂಕ್, ಮಹೀಂದ್ರಾ ಫೈನಾನ್ಸ್, ಕಾರ್ವೇ ಫೈನಾನ್ಸ್, ಡಾಯಿಷ್ ಬ್ಯಾಂಕ್, ಎಚ್.ಪಿ.ಫಿನಾನ್ಶಿಯಲ್ಸ್,ಐ.ಐ.ಎಫ್.ಎಲ್, ಯಸ್ ಬ್ಯಾಂಕ್ ಭಾಗವಹಿಸಿ ಆಯ್ಕೆ ಪ್ರಕ್ರಿಯೆ ಕೈಗೊಂಡವು.
ಉದ್ಯೋಗಮೇಳವನ್ನು ಸಂಪೂರ್ಣ ಉಚಿತವಾಗಿ ಆಯೋಜಿಸಲಾಗಿದೆ. ಎಂ.ಬಿ.ಎ., ಎಂ.ಕಾಂ, ಬಿ.ಕಾಂ ಮತ್ತು ಬಿ.ಬಿ.ಎಂ. ಪದವಿಪಡೆದ ವಿದ್ಯಾರ್ಥಿಗಳಿಗೆ ಈ ಉದ್ಯೋಗಮೇಳದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆಳ್ವಾಸ್ ಸಮೂಹ ಸಂಸ್ಥೆಗಳ ವಿದ್ಯಾಥರ್ಿಗಳಿಗಷ್ಟೇ ಈ ಮೇಳ ನಡೆಸದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅರ್ಹ ಪದವೀಧರರನ್ನೇ ಮುಖ್ಯ ಗುರಿಯಾಗಿರಿಸಿಕೊಂಡು ಈ ಮೇಳವನ್ನು ಆಯೋಜಿಸಿದ್ದು ವಿಶೇಷವಾಗಿತ್ತು.



ವರುಷಗಳ ಹಿಂದೆ ಸಣ್ಣ ಮಟ್ಟದಲ್ಲಿ ಆರಂಭಗೊಂಡ ಆಳ್ವಾಸ್ ಪ್ರಗತಿ ಉದ್ಯೋಗಮೇಳ ಮೊದಲ ಪ್ರಯತ್ನದಲ್ಲೇ ಉತ್ತಮ ಯಶ ಕಂಡಿತು.ಆ ಕಾರಣಕ್ಕೆ ಈ ವರುಷ ಬೃಹತ್ ಮಟ್ಟದಲ್ಲಿ "ಆಳ್ವಾಸ್ ಪ್ರಗತಿ - 2011" ಆಯೋಜಿಸಿದಾಗ 15ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಈ ಮೇಳದಲ್ಲಿ ಪಾಲ್ಗೊಂಡು 3,500ರಷ್ಟು ಉದ್ಯೋಗಗಳು ಉದ್ಯೋಗಾಕಾಂಕ್ಷಿಗಳಿಗೆ ಲಭ್ಯವಾದವು. ಈ ಯಶಸ್ಸಿನ ಹುರುಪಿನೊಂದಿಗೆ ಇದೀಗ ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳನ್ನಷ್ಟೇ ಗುರಿಯಾಗಿಸಿಕೊಂಡು ಮೇಳವನ್ನು ಆಯೋಜಿಸಲಾಗಿದೆ.ಮುಂದಿನ ವರುಷ ಇನ್ನೂ ವ್ಯವಸ್ಥಿತವಾಗಿ ಹೊಸತನದೊಂದಿಗೆ "ಪ್ರಗತಿ" ಉದ್ಯೋಗಮೇಳವನ್ನು ನಡೆಸುವ ಕನಸು ನಮ್ಮದು.ವರ್ಷದುದ್ದಕ್ಕೂ ನಿರಂತರವಾಗಿ ಈ ರೀತಿಯ ಉದ್ಯೋಗಮೇಳಗಳು ಆಳ್ವಾಸ್ ಕ್ಯಾಂಪಸ್ ನಲ್ಲಿ ನಿರಂತರವಾಗಿ ನಡೆಯುತ್ತಿರುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದರು.
ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇ ಗೌಡ ಉಪಸ್ಥಿತರಿದ್ದರು. ಅರುಣಾ ಮಿನೇಜಸ್ ಕಾರ್ಯಕ್ರಮ ನಿರ್ವಹಿಸಿದರು.


ಮುಂದೆ ಓದಿ

ಈ ಕನಸು ಅವಾರ್ಡ್

ಚಿಂತೆ ಮತ್ತು ಚಿತೆಗೆ ಒಂದಕ್ಷರದ ಅಂತರ. ಆದರೆ ಅದರರ್ಥ ಅದೆಷ್ಟು ಗಂಭೀರ!. ಚಿತೆ ವ್ಯಕ್ತಿಯ ಮೃತ ದೇಹವನ್ನು ದಹಿಸಿದರೆ ಚಿಂತೆ ಜೀವಂತ ವ್ಯಕ್ತಿಯನ್ನು ಸುಡುತ್ತಿರುತ್ತದೆ. 'ಮನ ಏವ ಮನುಷ್ಯಣಾಂ ಕಾರಣಂ ಬಂಧ ಮೋಕ್ಷಯೇ' ಅರ್ಥಾತ್ ಮಾನವನಿಗೆ ಸಂಸಾರ ಬಂಧನಕ್ಕೂ ಮತ್ತು ಅದರ ಬಿಡುಗಡೆಗೂ ಮನಸ್ಸೇ ಕಾರಣ. 'ನಿನ್ನೆ', 'ನಾಳೆ'ಗಳ ಮಧ್ಯೆ ಮನಸ್ಸು ನಲುಗಿ ಹೋಗಿದೆ. ಪರಮಾತ್ಮ ದಯಪಾಲಿಸಿದ ಪವಿತ್ರವಾದ 'ಇಂದು'ವನ್ನು ಮರೆತು ಮನಸ್ಸು' ಚಿಂತೆ' ಎಂಬ ಪಿಶಾಚಿಯ ಕಾರ್ಯಗಾರವಾಗುತ್ತಿದೆ. ಗತಿಸಿ ಹೋದ ನಿನ್ನೆಗಳು ಅಲ್ಲೇ ಮರೆಯಾಗಲಿ. ಇನ್ನೂ ಜನ್ಮತಾಳದ ನಾಳೆಗಳ ಕಟ್ಟನ್ನು ಇಂದೇ ಏಕೇ ಹೊತ್ತುಕೊಂಡು ಇಂದಿನ ನೆಮ್ಮದಿಯ ಹಂತಕರಾಗಬೇಕು?. ಅವುಗಳನ್ನು ಕೂಡಾ ನಿನ್ನೆಗಳಂತೆ ಭದ್ರವಾಗಿ ಕದತಟ್ಟಿಬಿಡೋಣ...



ನಮಗೆ ವರ್ತಮಾನವೇ ಸಾಕು. ಭೂತ, ಭವಿಷ್ಯಗಳ ಬಗ್ಗೆ ಅನಗತ್ಯ ವಿಚಾರಕ್ಕೆ ಕೈಹಾಕುವ ಸಾಹಸ ಏಕೇ ಬೇಕು..? "ದ ಪೀಸ್ ಆಫ್ ದ ಮೈಂಡ್ ಕಂಮ್ಸ್ ಫ್ರಂ ಆಕ್ಸೆಪ್ಟಿಂಗ್ ದ ವರ್ಸ್ಟ್" ಅಲ್ಲವೇ..? ಮನಸ್ಸಿಗೆ ಕೆಟ್ಟದನ್ನು, ನೋವನ್ನು ಎದುರಿಸುವ, ತಾಳಿಕೊಳ್ಳುವ ಸಾಮರ್ಥ್ಯವಿದೆ. ನಮ್ಮ ಆಲೋಚನೆಗಳಿಂದಲೇ ಮನಸ್ಸಿನ ಆಗಾಧ ಶಕ್ತಿಯನ್ನು ಕುಗ್ಗಿಸಿಕೊಂಡು ಚಿಂತೆಗೆ ರಹದಾರಿ ಮಾಡಿ ಕೊಡುತ್ತಿದ್ದೇವೆ. ಚಿಂತೆಯನ್ನು ಒದ್ದೋಡಿಸಲರಿಯದವನಿಗೆ ಮುಪ್ಪು ಬೇಗನೆ ಅಪ್ಪಿಕೊಳ್ಳುತ್ತದೆ. ಸಾವು ಬೇಗನೆ ದಯಪಾಲಿಸುತ್ತದೆ.

ಮನಸ್ಸು ಶೂನ್ಯವಾಗಿದ್ದರೆ ಚಿಂತೆ, ಅಸೂಯೆ, ಆತಂಕ, ದ್ವೇಷ, ಸೇಡು ಮುಂತಾದ ಶಕ್ತಿಶಾಲಿ ಭಾವನೆಗಳು ಉದ್ಭವಿಸಿ ನಮ್ಮ ಮೇಲೆಯೇ ಹುಲಿಯಂತೆ ಎರಗಿ ನಮ್ಮ ಬಲ ಅಡಗಿಸಿ ವ್ಯಕ್ತಿತ್ವವನ್ನೇ ಮರೆಸುತ್ತದೆ. ಮನದ ಶಾಂತಿ, ಸಂತೋಷ, ಸಾತ್ವಿಕತೆಯನ್ನು ಕೆಡಿಸಿ ಅಲ್ಲೋಲ ಕಲ್ಲೋಲವಾಗಿಸುತ್ತದೆ. ಇಂದು ಜಗತ್ತಿನಾದ್ಯಂತ ದೇಹಕ್ಕೆ ಮದ್ದು ನೀಡುವ ಮುನ್ನ ಮನಸ್ಸಿಗೆ ಚಿಕಿತ್ಸೆ ನೀಡಿ ಎನ್ನುವ ಪರಿಕಲ್ಪನೆ ಮೂಡಿದೆ. ಮನಸ್ಸು ನಿಮ್ಮದೇ, ಉತ್ತಮ ಆಲೋಚನೆಗಳಿಂದ ಅದನ್ನು ನಿಯಂತ್ರಿಸಿಕೊಳ್ಳಿ...

-ಮಲ್ಲಿಕಾಭಟ್ ಪರಪ್ಪಾಡಿ.

ಮುಂದೆ ಓದಿ

ಈ ಕನಸು ಅವಾರ್ಡ್

ಮೈಸೂರು ಹುಲಿ ಎಂದೇ ಪ್ರಖ್ಯಾತಿಯನ್ನು ಪಡೆದ ಟಿಪ್ಪುವು ಯುದ್ದದಲ್ಲಿ ಚಾಣಾಕ್ಷ. ಆತನ ಯದ್ಧ ತಂತ್ರವು ಆಧುನಿಕ ಯುದ್ದತಂತ್ರವನ್ನು ನಾಚಿಸುವಂತೆ ಇತ್ತು. ಅವನ ಸೈನ್ಯವು ವಿದೇಶಿಯರಿಂದ ತರಬೇತಿಪಡೆಯುತಿದ್ದವು. ಆತನ ಸೈನ್ಯವು ಧಕ್ಷ ಸೈನಿಕರಿಂದ ಕೂಡಿತ್ತು. ಆತ ತನ್ನ ರಾಜ್ಯದ ಸುತ್ತಲು ಭದ್ರ ಕೋಟೆಯನ್ನು ನಿರ್ಮಿಸಿ, ಶತ್ರುಗಳು ಕೋಟೆಯ ಒಳ ನುಸುಳದಂತೆ ಕೋಟೆಯ ಸುತ್ತಲೂ ಆಳದ ಕಂದಕವನ್ನು ತೋಡಿಸಿದ್ದನು. ಶತ್ರು ಆಗಮನವನ್ನು ತಿಳಿದು ಆ ಕಂದಕಕ್ಕೆ ನೀರನ್ನು ತುಂಬಿಸಿ ಆದರಲ್ಲಿ ಕ್ರೂರ ಜಲಚರಗಳನ್ನು ಬಿಡುತ್ತಿದ್ದನಂತೆ.




ಇದ್ದಲ್ಲದೆ ಆತ ಕೋಟೆಯ ಹೊರಗಡೆ ಇರುವ ಶತ್ರುವಿನ ಮೇಲೆ ಆಕ್ರಮಣಮಾಡಲು ಸುಲಭವಾಗುವಂತೆ ಬಂದೂಕನ್ನು ಇಡಲು ಕಿಂಡಿಗಳನ್ನು ಸಹ ನಿರ್ಮಿಸಿದ್ದನು.ಮೈಸೂರು ಸೇರಿದಂತೆ ಇತ್ತ ದಕ್ಷಿಣ ಕನ್ನಡದ ಹಲವೆಡೆಗಳಲ್ಲಿರುವ ಟಿಪ್ಪು ನಿರ್ಮಿಸಿದ ಕೋಟೆಗಳನ್ನು ನೋಡಿದರೆ ಆತನ ಚಾಣಾಕ್ಷ್ಯತೆಗಳು ಸ್ಪಷ್ಟವಾಗುತ್ತವೆ. ಆತನ ಚಿಂತನೆ, ದೂರದೃಷ್ಟಿತ್ವ , ಮಹತ್ವಾಕಾಂಕ್ಷೆಗಳು ಅರ್ಥವಾಗುತ್ತವೆ.

ಟಿಪ್ಪುವಿನ ಯುದ್ದ ತಂತ್ರವನ್ನು ಯಾರೇ ಆದರೂ ಮೆಚ್ಚಲೆಬೇಕು. ಆತ ತನ್ನ ಕೋಟೆಗೆ ಅನತಿ ದೊರದಲ್ಲಿಯೇ ಮದ್ದು ತಯಾರಿಕ ಘಟಕವನ್ನು ಸಹ ಸ್ಥಾಪಿಸುತ್ತಿದ್ದ. ಟಿಪ್ಪು ಕೋಟೆಗಳನ್ನವಲೋಕಿಸಿದರೆ ಆತ ನಿರ್ಮಿಸಿದ ಕೋಟೆಯ ಸನಿಹದಲ್ಲಿರುವ ಮದ್ದು ರಚನಾ ಕೇಂದ್ರಗಳು ಪಿರಿಮಿಡ್ ಆಕೃತಿಯಲ್ಲಿ ಇರುವುದನ್ನು ಕಾಣಬಹುದು. ಬಹುತೇಕ ಈ ಮದ್ದು ತಯಾರಿಕ ಘಟಕವು 50:50 ರ ಅಳತೆಯಲ್ಲಿ ನಿರ್ಮಿಸಲಾಗಿದೆ. ಪೂರ್ವ ದಿಕ್ಕಿಗೆ ಬಾಗಿಲನ್ನು ಹೊಂದಿರುವ ಘಟಕಗಳು ಸಾಮಾನ್ಯವಾಗಿರುತ್ತವೆ.

ಮೈಸೂರಿನಲ್ಲೂ ಇಂತಹ ಒಂದು ಮದ್ದು ತಯಾರಿಕಾ ಘಟಕ ಕಾಣಬಹುದಾಗಿದೆ. ಈ ಮದ್ದು ತಯಾರಿಕ ಘಟಕವು ಇಂದು ಟಿಪ್ಪುವು ಮಡಿದ ಸ್ಥಳದಿಂದ 50ಆಡಿ ದೂರದಲ್ಲಿ ಇದೆ. ಪಿರಿಮಿಡ್ ಆಕೃತಿಯಲ್ಲಿ ಇರುವ ಆ ತಯಾರಿಕ ಘಟಕವು ಒಳಗಡೆ ಆಳವಾಗಿದೆ. ಇಂದು ಆದರ ಒಳಗೆ ಪ್ರವೇಶಿಸಲು ಸಾಧ್ಯಾವಿಲ್ಲವಾದರು ದೂರದಿಂದ ನೋಡಬಹುದು. ಈ ಕಟ್ಟಡ ಸುತ್ತಲೂ ಪಾಗಾರವಿದೆ.

ರಾಜ್ಯದ ಉದ್ದಗಲವನ್ನೊಮ್ಮೆ ಅವಲೋಕಿಸಿದರೆ ಟಿಪ್ಪುವಿನ ಕಾಲದಲ್ಲಿ ರಚಿತಗೊಂಡ ಕೋಟೆ ಕೊತ್ತಲಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಆದರೆ ಬಹುತೇಕ ಈ ನಿರ್ಮಿತಿಗಳು ಜೀರ್ಣಾವಸ್ಥೆಗೆ ತಲುಪಿವೆ. ಅತ್ಯಂತ ಆಕರ್ಷಕ ವಾಸ್ತು ವಿನ್ಯಾಸಗಳನ್ನೊಳಗೊಂಡ ಈ ನಿರ್ಮಿತಿಗಳ ರಕ್ಷಣೆಗೆ ಸಂಬಂಧಿತ ಇಲಾಖೆ ಮುಂದಾಗಬೇಕಾಗಿದೆ.

- ಶ್ರೀನಿಧಿ.ಎಸ್.ತಿರುಮಕೂಡಲು
ಸಂವಹನ ಮತ್ತು ಪತ್ರಿಕೋದ್ಯಮ, ಮಾನಸ ಗಂಗೋತ್ರಿ, ಮೈಸೂರು

ಮುಂದೆ ಓದಿ

ವಿಶೇಷ ವರದಿ
ಮುಸುಕು ಮಂಜಿನ ನಡುವೆ ಮಬ್ಬು ಕವಿದ ಹಾದಿ...ತಿರು ತಿರುವಿ ಜಾರ ಏರಿ ತಗ್ಗನಿಳಿದು ಅತ್ತ ತಲುಪುತ್ತಿದ್ದಂತೆ ಒಂದು ಕ್ಷಣ ಮೈ ಝಂ...ಎಂಬ ವಾತಾವರಣ...ಕಡಿದಾದ ಹಾದಿ...ದಣಿವು...ನೀರವ ಮೌನವನ್ನು ಬೇಧಿಸುವ ಜೀರುಂಡೆಗಳ ಝೇಂಕಾರ ... ಅಗೋಚರ ಶಕ್ತಿಯ ಆವಾಹನೆಗೊಂಡ ತಪೋವನ...ಪ್ರವೇಶಿಸುತ್ತಿದ್ದಂತೆಯೇ ಏನೋ ಅವ್ಯಕ್ತ ಭಾವನೆ... ಅದು ಹಸಿರ ರಾಶಿಯ ನಡುವಣ ಹಾದಿ..ಮೇಲೇರುವ ಸಾಹಸ...ವನದ ತುಂಬೆಲ್ಲಾ ಹಲಫಲಗಳು...ವೃಕ್ಷ ವೈವಿಧ್ಯ... ಜೊತೆಗೆ ಅಪರೂಪದ ಸಸ್ಯಪ್ರಬೇಧ...ಮೋಹಕ ಚುಂಬಕ ಶಕ್ತಿಯ ಪುಷ್ಪರಾಶಿ...ಇದು ಸಾಮಾನ್ಯ ವ್ಯಕ್ತಿಯ ಮನಸ್ಸಲ್ಲೊಂದು "ವಿಭಿನ್ನ"ಭಾವನೆಯನ್ನು ಮೂಡಿಸುವ ಸಾನಿಧ್ಯ ಪರಿಸರ...ಅದು ನಮ್ಮ ಪಾಲಿಗಂತೂ ನೈಜ ಅನುಭವ...


ಅಲ್ಲೊಂದು ಸಾಮಾನ್ಯ ಕಲ್ಲು...ಇದು ನೋಡುಗರ ಮಟ್ಟಿಗೆ ಮಾತ್ರ ಸಾಮಾನ್ಯ ಕಲ್ಲು...ಮೇಲ್ನೋಟಕ್ಕೆ! ಅವರೂ ಹಾಗೇ ಅಂದುಕೊಂಡಿದ್ದರು... ಆ ಕಾರಣಕ್ಕಾಗಿಯೇ ಕಲ್ಲ ಕೆಡವಿ ನೆಲಸಮ ಮಾಡಿದರು...ಆದರೆ ಅಲ್ಲಿನ ಆ ಶಕ್ತಿಯ ಮಹಿಮೆಯೇ ಹಾಗೆ... ಕಲ್ಲು ಕಲ್ಲಾಗಿ ಉಳಿದಿಲ್ಲ...ಮಳೆ ಬಂದು ಮಣ್ಣು ತೊಡೆದು ಹೋಯಿತೆಂಬ ಆತಂಕಕ್ಕೆ ಅವಕಾಶವೇ ಇಲ್ಲ...ದಿನ ದಿನವೂ ಕಲ್ಲು ಸೂಕ್ಷ್ಮ ಸೂಕ್ಷ್ಮವೇ ಬೆಳೆಯಲಾರಂಭಿಸಿತು...ಇದು ಅಗೋಚರ ಶಕ್ತಿಯ ಮಹಿಮೆ...!


ಇಲ್ಲೊಂದು ಶಕ್ತಿಯಿದೆ ಎಂಬ ಅರಿವು ಆಗಿದ್ದೇ ಒಂದು ಸೋಜಿಗ...ಕೋಡಿನಂತಿದ್ದ ಕಲ್ಲ ಕಡಿಯುವ ಮೊದಲು ಆ ಕಲ್ಲ ಮೇಲೆ ಕುಳಿತು ಗುಡಿನಿರ್ಮಿಸಿದರೆ ಎಷ್ಟು ಚೆನ್ನ ಎಂಬ ಚಿಂತನೆ ಮಾಡಿದ್ದೇ ಸರಿ... ಕಾಲ ತುಂಬ ಕಳೆದಿರಲಿಲ್ಲ... ಕೆಲದಿನಗಳಲ್ಲೇ ಅದಕ್ಕೆ ಕಾಲ ಕೂಡಿ ಬಂದಿತ್ತು... ಯಾವ ವಿಘ್ನವೂ ಎದುರಾಗಿಲ್ಲ...ಬದಲಾಗಿ ಪ್ರಸನ್ನ ಮೂರ್ತ ಕೂಡಿಬಂದಿತ್ತು...ಸುಂದರ ಗುಡಿ ರೂಪುತಾಳಿತ್ತು...ಆ ಕಾಡ ಗರ್ಭದಲ್ಲೂ ಅಷ್ಟೊಂದು ಜನ ಸೇರಿದ್ದರು..ಅಲ್ಲೊಂದು ದೇವಗುಡಿಯ ನಿರ್ಮಾಣಕ್ಕೆ ಅವರೆಲ್ಲರೂ ಸಹಭಾಗಿಗಳಾಗಿದ್ದರು...ಇದೇ ನೋಡಿ ವಿಚಿತ್ರವೆಂದರೆ!!! ಎಲ್ಲವೂ ದೇವ ಮಹಿಮೆ...ಈ ಮಹಿಮೆಯ ನಡುವೆ ನಾವೆಲ್ಲ ನಿಮಿತ್ತ ಮಾತ್ರ ಅಲ್ಲವೇ!!!


ಇರಲಿ...ಇದೇನೋ ಕಾಕ ತಾಳಿಯವಾಯಿತೆನ್ನಿ... ಈ ಶಕ್ತಿಯನ್ನೊಮ್ಮೆ ಪರೀಕ್ಷಿಸಿಯೇ ಸಿದ್ಧ...ಎಂಬ ಹಠದಲ್ಲಿ ಇಷ್ಟೂ ವರುಷಗಳ ಕಾಲ ಮದುವೆಯಾಗದೆ ಇದ್ದಂತಹ ವ್ಯಕ್ತಿಯೋರ್ವರು ಅಲ್ಲಿ ನಿಂತು ಆ ಭಾವನೆಯನ್ನು ವ್ಯಕ್ತಪಡಿಸಿದ್ದೇ ತಡ.... ತಿಂಗಳು ತುಂಬುವುದರೊಳಗಾಗಿ ಮದುವೆ ನಿಶ್ಚಯ...ಇದೀಗ ಮದುವೆಯಾಗಿ ಸುಖೀ ಕುಟುಂಬ ನಡೆಸುತ್ತಿದ್ದಾರೆ...ಈ ಕ್ಷೇತ್ರಕ್ಕೆ ನಿರಂತರ ಆಗಮನ ಅವರದ್ದು... ವ್ಹಾವ್...ಇದು ಕಟ್ಟು ಕಥೆಯಲ್ಲ...ನೈಜ ಘಟನೆಗಳ ಅನಾವರಣ...

ಇದೀಗ ಈ ಪರಿಸರ "ಶಕ್ತಿಪೀಠ"ಎಂದೇ ಪ್ರಸಿದ್ಧಿ ಪಡೆದಿದೆ. ಇಷ್ಟಾರ್ಥ ಸಿದ್ಧಿಗೆ ಇಲ್ಲಿ ಪ್ರಾರ್ಥನೆ ನೆರವೇರುತ್ತದೆ...ಅದು ಈಡೇರುತ್ತದೆ...
ಅಲ್ಲಿ ಪಂಚ ತೀರ್ಥಗಳಿವೆ. ಕಡಿದಾದ ಪ್ರದೇಶದಲ್ಲಿ ಗುಡಿಗೆ ಪ್ರದಕ್ಷಿಣಾ ಪಥದಲ್ಲಿ ಪಂಚ ತೀರ್ಥಗಳು ಜುಳು ಜುಳು ನಿನಾದದೊಂದಿಗೆ ವೈಯ್ಯಾರದಿಂದ ಹರಿಯುತ್ತಿದೆ. ನೈಸರ್ಗಿಕವಾಗಿ ನಿರ್ಮಿತಗೊಂಡ ಐದು ಕೆರೆಗಳೂ ಅಲ್ಲಿವೆ...ಕಾಡೊಳಗಿನಿಂದ, ವಿವಿಧ ಸಸ್ಯರಾಶಿಯೊಡಲಾಳದಿಂದ ಹರಿದು ಔಷಧೀಯ ಗುಣಗಳಹೊಂದಿರುವ ಈ ತೀರ್ಥ ಹಲವು ರೋಗಗಳಿಗೆ ಪರಿಹಾರ.ಒಟ್ಟಿನಲ್ಲಿ ಪ್ರಕೃತಿಯೇ ವಿಚಿತ್ರ...ಈ ವಿಚಿತ್ರವನ್ನು ಹುಡುಕಿಕೊಂಡು ಹೋಗುವ ಸಾಧನೆಯಿದೆಯಲ್ಲಾ ಅದು ಇನ್ನಷ್ಟು ಕಠಿಣ...

ಅಲ್ಲಿ ಪಂಚ ಶಕ್ತಿಗಳಿವೆ...
ಹೌದು...ಅಲ್ಲಿ ಐದು ಶಕ್ತಿಗಳಿವೆ...ಗಣಪತಿ., ದುರ್ಗೆ , ಶಿವ, ವಿಷ್ಣು, ಸೂರ್ಯ ಈ ಪಂಚ ಶಕ್ತಿಗಳನ್ನೊಳಗೊಂಡ ಪಂಚಾಯತನ ದೇಗುಲವೂ ಅಲ್ಲಿ ನಿರ್ಮಾಣಗೊಂಡಿದೆ. ಸುಂದರವಾದ ಪುಟ್ಟ ಗುಡಿ...ಅದರೊಳಗೆ ಶಕ್ತಿದೇವತೆಗಳ ಸ್ಥಾಪನೆ...ಇಷ್ಟಾರ್ಥ ಸಿದ್ಧಿಗೆ ಇಲ್ಲೊಂದು ಪ್ರಾರ್ಥನೆ...ಶುದ್ಧ ಮನಸ್ಸು, ನಿಶ್ಕಲ್ಮಶ ಮನೋಭಾವ...ಇವಿಷ್ಟಿದ್ದರೆ ಇಷ್ಟಪ್ರಾಪ್ತಿ...ಇದು ಅನುಭವಿಸಿದವರ ಮಾತು.

ಇರುವುದಾದರೂ ಎಲ್ಲಿ..?
ಈ ಶಕ್ತಿ ಪೀಠ, ಶ್ರೀ ಪಂಚತೀರ್ಥ ಮಠ,ತಪೋವನ, ಪಂಚತೀರ್ಥಗಳು ಇರುವುದಾದರೂ ಎಲ್ಲಿ ಎಂಬ ಪ್ರಶ್ನೆ ಉದ್ಭವಿಸದೆ ಇರಲಾರದು... ಇದಿರುವುದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆಗ್ಗದ್ದೆ ಮಾರನ ಹಳ್ಳಿ ಎಂಬಲ್ಲಿ. ಹೆದ್ದಾರಿಯ ಪಕ್ಕದಲ್ಲೇ ಇರುವ ಹಸಿರ ಹೊನ್ನಿನ ರಾಶಿಯೊಳಪ್ರವೇಶಿಸಿದರೆ ಒಂದಷ್ಟು ದೂರ ನಡೆದು ಸಾಗಿದರೆ ಈ ಪ್ರಶಾಂತ ಸ್ಥಳಕ್ಕೆ ತಲುಪಬಹುದು. ಮೂಲತಃ ಜ್ಯೋತಿಷ್ಯ ಮನೆತನದವರಾದ ಸುಬ್ರಹ್ಮಣ್ಯ ಭಟ್ಟ ಕುಳಮರ್ವ ಈ ಐತಿಹ್ಯದ ತಾಣವನ್ನು , ಇಲ್ಲಿನ ಶಕ್ತಿಯನ್ನು ಅರಿತವರು...ಇದೀಗ ಅದನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ...

ಸಂಶೋಧನೆಗೆ ಅವಕಾಶ:



ಸುಬ್ರಹ್ಮಣ್ಯ ಭಟ್ಟರು ಸರಕಾರಿ ಉದ್ಯೋಗದಲ್ಲಿರುವವರು. ಜ್ಯೋತಿಷ್ಯ ಮನೆತನದವರಾದ್ದರಿಂದ ಸಹಜವಾಗಿಯೇ ಜ್ಯೋತಿಷ್ಯದ ಬಗ್ಗೆ ಆಸಕ್ತಿ ಹೊಂದಿದರು. ವೈಜ್ಞಾನಿಕ ತಳಹದಿಯೊಂದಿಗೆ ಜ್ಯೋತಿಷ್ಯವನ್ನು ತಿಳಿಸುವ ಇವರ ವಿಶಿಷ್ಠಕ್ರಮ ಶ್ಲಾಘನಾರ್ಹ. ಇದೀಗ ಸುಬ್ರಹ್ಮಣ್ಯ ಭಟ್ಟರು ತಪೋವನದಲ್ಲಿ ಒಂದು ಹೊಚ್ಚ ಹೊಸ ಚಿಂತನೆಯನ್ನು ಹಾಕಿಕೊಂಡಿದ್ದಾರೆ. ಜ್ಯೋತಿಷ್ಯ ಸಂಶೋಧನಾ ಕೇಂದ್ರ ರೂಪಿಸುವುದು ಅವರ ಹೆಬ್ಬಯಕೆ. ವಿವಿಧ ರೀತಿಯ ಪ್ರಯೋಗಗಳಿಗೆ ಅವರು ಇಲ್ಲಿ ಸೂಕ್ತ ವೇದಿಕೆ ಕಲ್ಪಿಸುತ್ತಿದ್ದಾರೆ. ಇದೀಗ ಪೂರ್ವಭಾವೀ ಯೋಜನೆಗಳು ಇಲ್ಲಿ ರೂಪುಗೊಂಡಿವೆ. ಧ್ಯಾನ, ಯೋಗ,ಕ್ಕೆ ಬೇಕಾದ ವ್ಯವಸ್ಥೆ ಇಲ್ಲಿ ಸಿದ್ಧವಾಗಿದೆ. ಪೂಜಾ ಮಂದಿರವೂ ಇದೆ. ಸುಮಾರು 40ಮಂದಿಗೆ ಉಳಕೊಳ್ಳುವಂತಹ ಒಂದು ಕಾಟೇಜು ನಿರ್ಮಾಣಗೊಂಡಿದೆ. ಯಾವುದೇ ರೀತಿಯ ಹಣ ಗಳಿಕೆಯ ಉದ್ಧೇಶ ಇವರದ್ದಲ್ಲ. ಬದಲಾಗಿ ಜ್ಯೋತಿಷ್ಯದ ಹಿನ್ನೆಲೆಯಲ್ಲಿ ಸಂಶೋಧನೆ, ಹಾಗೂ ಇತರ ವೈದಿಕ, ಧಾರ್ಮಿಕ ವಿಧಿ ವಿಧಾನ, ದಣಿದ ಮನಸ್ಸಿಗೆ ಒಂದಷ್ಟು ರಿಲ್ಯಾಕ್ಸ್ ನೀಡುವ ಸದುದ್ದೇಶ...ಹೀಗೆ ಹಲವು ಚಿಂತನೆ , ಯೋಜನೆಗಳು ಈ ಪ್ರದೇಶದಲ್ಲಿ ರೂಪುಗೊಳ್ಳುತ್ತಿದೆ.
ವಿವರಗಳಿಗೆ ದೂರವಾಣಿ ಸಂಖ್ಯೆ +919886523865,+918762119326 ಸಂಪರ್ಕಿಸಬಹುದು.

ವರದಿ: ಹರೀಶ್ ಕೆ.ಆದೂರು.
ಚಿತ್ರ: ಶಂ.ನಾ.ಖಂಡಿಗೆ.

ಮುಂದೆ ಓದಿ

ರಾಜ್ಯ - ರಾಷ್ಟ್ರ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವೇಣೂರಿನ ಬಾಹುಬಲಿ ಬೆಟ್ಟದಲ್ಲಿ ಕಾಣಿಸಿಕೊಂಡದ್ದು ಹೀಗೆ...!!!
ಚಿತ್ರ: ಹರೀಶ್ ಕೆ.ಆದೂರು.

ಮುಂದೆ ಓದಿ

ರಾಜ್ಯ - ರಾಷ್ಟ್ರ
ಮಂಗಳೂರು: ಭತ್ತಕ್ಕೆ ಸರಿಯಾದ ಬೆಂಬಲ ಬೆಲೆ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಅವರು ಒತ್ತಾಯಿಸಿದ್ದಾರೆ.ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಇದಕ್ಕಾಗಿ ಅವಶ್ಯಕತೆ ಇದ್ದರೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಲು ರಾಜ್ಯದಿಂದ ನಿಯೋಗ ಕಳುಹಿಸಿ ಕೊಡಲಾಗುವುದು ಎಂದರು.ಇದು ವರೆಗೆ 7 ಬಾರಿ ಪೆಟ್ರೊಲ್ ಬೆಲೆಯನ್ನು ಕೇಂದ್ರ ಸರ್ಕಾರ ಏರಿಸಿದೆ.ಆದರೆ ರಾಜ್ಯ ಸರ್ಕಾರ ಒಂದು ಬಾರಿಯೂ ಹೆಚ್ಚುವರಿ ತೆರಿಗೆಯನ್ನು ಪೆಟ್ರೊಲ್ ಉತ್ಪನ್ನಗಳ ಮೇಲೆ ವಿಧಿಸಿಲ್ಲ.ಪೆಟ್ರೊಲ್ ಬೆಲೆ ಇಳಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು ಎಂದು ಮುಖ್ಯಮಂತ್ರಿಗಳು ಹೇಳಿದರು.ಕೆ.ಪಿ.ಎಸ್.ಸಿ ಯಲ್ಲಿ ಅಕ್ರಮ ನೇಮಕಾತಿ ಗಳು ನಡೆದಿದೆ ಎಂಬ ದೂರುಗಳಿದ್ದು,ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದರು.ವಿಧಾನ ಸಭೆಯ ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದರು.

ಮುಂದೆ ಓದಿ

ರಾಜ್ಯ - ರಾಷ್ಟ್ರ



ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ವೇಣೂರು ಜನತೆಯ ಪರವಾಗಿ ಮೇ.25ರಂದು ಸನ್ಮಾನಿಸಿ ಗೌರವಿಸಲಾಯಿತು.











ಮುಂದೆ ಓದಿ
| | |Home