ರಾಜ್ಯ - ರಾಷ್ಟ್ರ
ಚೆನ್ನೈನಲ್ಲಿ ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯವಸ್ಥಗೊಂಡಿತು.
ಪ್ರಾದೇಶಿಕ ಸುದ್ದಿ
ಮೂಲ್ಕಿ:ಕನ್ನಡ ನಾಡು ನುಡಿಯ ಬೆಳವಣಿಗೆಗೆ ಸಹಕಾರ ನೀಡುವುದು ಕನ್ನಡಿಗರಾದ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಬುಧವಾರ ಕರ್ನಾಟಕ ಶುದ್ಧೀಕರಣ ಹೋರಾಟ ವೇದಿಕೆಯ ರಾಜ್ಯ ಸಮಿತಿಯ ಆಶ್ರಯದಲ್ಲಿ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಕರ್ನಾಟಕದ 56ಗಡಿ ಪ್ರದೇಶಗಳಲ್ಲಿ ಸಂಚರಿಸಿ ನಾಡು ನುಡಿ,ಜಲ,ಸಂಸ್ಕೃತಿಯ ಬಗ್ಗೆ ಜಾಗೃತಿ ನೀಡುವ ಜೊತೆಗೆ ಸಮಸ್ತ ಕನ್ನಡಿಗರಿಗೆ ಗಂಗಾವತಿಗೆ ಅಹ್ವಾನ ನೀಡಲು ಬಂದಿರುವ ತಂಡವನ್ನು ಸ್ವಾಗತಿಸಿ ಮಾತನಾಡಿದರು.
ಮಾತೃ ಭಾಷೆಯ ಜೊತೆಗೆ ನಮ್ಮ ರಾಜ್ಯ ಭಾಷೆಗೆ ಮನ್ನಣೆ ನೀಡುವುದರೊಂದಿಗೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬೆಳೆಸಬೇಕು ಎಂದ ಅವರು ಗಂಗಾವತಿಯಲ್ಲಿ ನಡೆಯಲಿರುವ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಈ ಸಂದರ್ಭ ವೇದಿಕೆಯ ರಾಜ್ಯಾಧ್ಯಕ್ಷ ಹೆಚ್.ಕೃಷ್ಣಪ್ಪ ಗುಣಸಾಗರ,ರಾಜ್ಯ ಉಪಾಧ್ಯಕ್ಷೆಂ.ಎಸ್.ಹನುಮಂತಪ್ಪ,ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಆರ್.ಶಕುಂತಲಾ,ಎಂ.ದೇವಪ್ರೀಯ,ಕ.ಸಾಪ ತಾಲೂಕು ಅಧ್ಯಕ್ಷ ಸವರ್ೋತ್ತಮ ಅಂಚನ್, ಮೂಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಹರಿಶ್ಚಂದ್ರ ಪಿ.ಸಾಲ್ಯಾನ್,ಲಯನ್ಸ್ ಅಧ್ಯಕ್ಷ ಹರೀಶ್ ಪುತ್ರನ್,ಎಂ.ಪಿ.ಕಾಮತ್,ನ್ಯಾಯವಾದಿ ಸತೀಶ್ ಕಾಮತ್,ಗೋಪೀನಾಥ ಪಡಂಗ,ಮಾಧವ ಶೇರ್ವೆಗಾರ್ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ - ವರದಿ : ಭಾಗ್ಯವಾನ್ ಮುಲ್ಕಿ.
ಪ್ರಾದೇಶಿಕ ಸುದ್ದಿ
ಮೂಲ್ಕಿ: ಮೂಲ್ಕಿ ಕಿಲ್ಪಾಡಿ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ಪ್ರಯುಕ್ತ ಪುಷ್ಪಾಲಂಕೃತ ಶ್ರೀ ಸುಬ್ರಹ್ಮಣ್ಯ ದೇವರು. ಚಿತ್ರ: ಭಾಗ್ಯವಾನ್ ಮುಲ್ಕಿ.
ಮೈಗ್ರೇನ್ ತಲೆನೋವಿನ (ಅರೆತಲೆನೋವು) ನಿವಾರಣೆಗೆ ಯೋಗ ಸಹಕಾರಿ
ಇತ್ತೀಚಿನ ಆಧುನಿಕ ಜೀವನ ಶೈಲಿಯ ವಿಧಾನದಲ್ಲಿ ಬಹಳಷ್ಟು ಮಂದಿಗೆ ಮೈಗ್ರೇನ್ ತಲೆನೋವಿನ ಸಮಸ್ಯೆ ಕಾಡುತ್ತಿರುವುದು ಕಂಡುಬರುತ್ತದೆ. ಇಲ್ಲಿ ವೈಜ್ಞಾನಿಕವಾಗಿ ದೃಢಪಟ್ಟಂತಹ ಯೋಗವನ್ನು ವ್ಯಕ್ತಿಯು ತನ್ನ ಜೀವನದಲ್ಲಿ ಸಮರ್ಪಕವಾಗಿ ಅಳವಡಿಸಿಕೊಂಡರೆ ನೆಮ್ಮದಿಯ ಬಾಳುವೆಗೆ ಸೋಪಾನವಾಗುವುದು. ಮೈಗ್ರೇನ್ ತಲೆನೋವಿನಿಂದ ಬಳಲುವ ಮಂದಿ ಇಂದು ಹೆಚ್ಚಾಗಿದೆ. ಸರ್ವೇ ಒಂದು ಈ ಅಂಶವನ್ನು ದೃಢಪಡಿಸಿದೆ. ವಿವಿಧ ಕಾರಣಗಳು ಈ ಮೈಗ್ರೇನ್ ತಲೆನೋವಿಗಿದೆ ಎಂಬುದು ಪ್ರಯೋಗಗಳಿಂದ ಲಭಿಸಿದ ಮಾಹಿತಿ. ಈ ಮೈಗ್ರೇನ್ ತಲೆನೋವು ಶಾಪವೆಂದು ನಂಬುವ ಮಂದಿ ಅನೇಕರಿದ್ದಾರೆ. ಏನೇ ಇರಲಿ ಇದಕ್ಕೂ ಒಂದು ಔಷಧಿಯಿದೆ. ಇದನ್ನೂ ಗುಣಪಡಿಸಬಹುದಾಗಿದೆ. "ಯೋಗ ಚಿಕಿತ್ಸೆ" ಮೂಲಕ ಮೈಗ್ರೇನ್ ನಿವಾರಣೆ ಸಾಧ್ಯ ಎಂಬ ಅಭಿಪ್ರಾಯ ನಮ್ಮ ಅಂಕಣಗಾರ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರದ್ದು... ಈ ಮಾಹಿತಿ ಈ ಕನಸು.ಕಾಂ ಓದುಗರಿಗಾಗಿ...
ಮೈಗ್ರೇನ್ ಸಮಸ್ಯೆಗೆ ಕಾರಣಗಳು ಹಲವಾರು :
- ಪದೇ ಪದೇ ಮನಸ್ಸಿಗೆ ಕಿರಿಕಿರಿಯಾಗುವುದು. ಅತಿಯಾದ ಒತ್ತಡದ ಕೆಲಸಮಾಡುವವರಲ್ಲಿ ಇತ್ತೀಚೆಗಿನ ದಿನಗಳಲ್ಲಿ ಪ್ರತಿಯೊಬ್ಬರೂ ಒತ್ತಡದಿಂದ ಬಳಲುತ್ತಿರುತ್ತಾರೆ. ಸುತ್ತಮುತ್ತಲಿನ ಪರಿಸರ ಮತ್ತು ಪುರುಸೊತ್ತು ಇಲ್ಲದ ಆಧುನಿಕ ನಗರ ಜೀವನ ಶೈಲಿಯಿಂದಾಗಿ ಸಾಕಷ್ಟು ಒತ್ತಡಗಳಿಗೆ ಗುರಿಯಾಗುತ್ತಾರೆ. ಆರೋಗ್ಯವಂತರಾಗಿರಬೇಕೆಂದು ಎಲ್ಲರೂ ಇಚ್ಚಿಸುತ್ತಾರೆ ಆದರೆ, ಅದರಲ್ಲಿ ಎಲ್ಲರೂ ಸಫಲರಾಗುವುದಿಲ್ಲ.

- ಅತಿಯಾದ ಶಬ್ದ ಮಾಲಿನ್ಯ
- ಹೆಚ್ಚಿನ ಬೆಳಕು
- ಶಾರೀರಿಕ ವ್ಯಾಯಾಮ ಕೊರತೆಗಳು, ಯಾ ಅತೀ ವ್ಯಾಯಾಮಗಳನ್ನು ಮಾಡುವುದು.
- ಮಹಿಳೆಯರಿಗೆ ಮುಟ್ಟಿನ ಅವಧಿಯಲ್ಲಿ ಹಾರ್ಮೋನ್ ಬದಲಾವಣೆಯಾಗುವುದರಿಂದ.
- ವಿದ್ಯಾರ್ಥಿಗಳಿಗೆ ಪರೀಕ್ಷೆಯ ಒತ್ತಡದಿಂದ
- ಅತಿಯಾದ ಮಧ್ಯಪಾನ
- ಕೆಲವೊಮ್ಮೆ ಕಛೇರಿಯಲ್ಲೂ ಅತಿಯಾದ ಕೆಲಸ ಕಾರ್ಯಗಳ ಒತ್ತಡದಿಂದ, ಅತಿಯಾದ ಚಿಂತನೆಯಿಂದ,
- ಸಮಯಕ್ಕೆ ಸರಿಯಾಗಿ ಉತ್ತಮ ಆಹಾರವನ್ನು ಸೇವಿಸದೇ ಇರುವುದು (ಅನಿವಾರ್ಯವಾದ ಆಹಾರ ಪದ್ದತಿ) ಹಾಗೂ ಶುದ್ಧ ನೀರನ್ನು ಸೇವಿಸದೇ ಇರುವುದು.
- ದೂಳಿನ ಅಲರ್ಜಿ.
- ತುಂಬಾ ಹೊತ್ತು ಕಂಪ್ಯೂಟರ್ನಲ್ಲಿ ಕೆಲಸ ನಿರ್ವಹಣೆ ಹಾಗೂ ಇತ್ಯಾದಿ ಕಾರಣಗಳಿವೆ.
ಮೈಗ್ರೇನ್ ತಲೆನೋವಿನಲ್ಲಿ ಹಣೆಯ ಒಂದೇ ಬದಿಯಲ್ಲಿ ಅತಿಯಾದ ನೋವು ವಾಂತಿ, ದೇಹದ ಚಲನೆಯಾದ ನೋವಿನ ಅನುಭವ, ಮೈಗ್ರೇನ್ ತಲೆನೋವು ದಿನಾಲೂ ಬರಬಹುದು. ದಿನ ಬಿಟ್ಟು ಬರಬಹುದು, ವಾರಕ್ಕೊಮ್ಮೆ.- ಮೆದುಳಿನ ರಕ್ತನಾಳಗಳು ಹಿಗ್ಗಿದಾಗ ಇತ್ಯಾದಿ ಸಮಸ್ಯೆಯಿಂದ ತುಂಬಾ ನೋವಿನ ವೇದನೆ ಅನುಭವಿಸಬೇಕಾಗುತ್ತದೆ.
ತೀವ್ರ ತರದ ತಲೆನೋವು ಬಂದಾಗ ವ್ಯಕ್ತಿ ಶಾಂತ ಸ್ಥಳದಲ್ಲಿ ಒಂದೆಡೆ ವಿಶ್ರಾಂತಿ ಪಡೆಯಲು ಬಯಸುತ್ತಾನೆ.
ಈ ಮೈಗ್ರೇನ್ ಸಮಸ್ಯೆಗಳ ಪರಿಹಾರಕ್ಕೆ ವೈಜ್ಞಾನಿಕ ದೃಢಪಟ್ಟ ಯೋಗ ಬಹಳಷ್ಟು ನಿಯಂತ್ರಣಗೊಳಿಸಬಹುದು. ಪತಂಜಲ ಋಷಿ ತಿಳಿಸಿದ ಯಮ, ನಿಯಮ ಪಾಲಿಸಿ ಉತ್ತಮ ಜೀವನ ಶೈಲಿ ಸೂಕ್ಷ್ಮವಾದ ಕೆಲವು ಅಗತ್ಯವಿರುವ ಯೋಗಾಸನಗಳನ್ನು ಪ್ರಾಣಯಾಮಗಳನ್ನು ಅಭ್ಯಾಸ ಮಾಡುತ್ತಾ ಕೊನೆಯಲ್ಲಿ ಶವಾಸನ ಮಾಡಿ ಧ್ಯಾನ ಮಾಡಬೇಕು. ಯೋಗಾಸನಗಳನ್ನು ಶಿಸ್ತು ಬದ್ಧವಾಗಿ ಕ್ರಮವತ್ತಾಗಿ ಉಸಿರಿನ ಗತಿಯೊಂದಿಗೆ ಅಭ್ಯಾಸ ನಡೆಸಿದರೆ ದೇಹದ ಒಳಗಿನ ಅಂಗಗಳಿಗೆ ವ್ಯಾಯಾಮ, ಮತ್ತು ಚೆನ್ನಾಗಿ ರಕ್ತಪರಿಚಲನೆ ಜರಗುತ್ತದೆ. ಯೋಗಾಸನಗಳಿಂದ ಪ್ರತಿಯೊಂದು ಅಂಗಗಳು ನವ ಚೈತನ್ಯವುಂಟಾಗುತ್ತದೆ. ಇದರಿಂದ ದೈಹಿಕ ಆರೋಗ್ಯ ಹೆಚ್ಚಿ ತಾಳ್ಮೆ, ಶಾಂತಿ ಒದಗಿ ನರಮಂಡಲ ಚೈತನ್ಯಶೀಲವಾಗುವುದು.
ಪ್ರಾಣಾಯಾಮವು ಉಸಿರಾಟದ ಮೇಲೆ ಹಿಡಿತವುಂಟುಮಾಡುವುದಲ್ಲದೆ, ಸಕ್ರಮಗೊಳಿಸಿ ಶ್ವಾಸಕೋಶದ ಮತ್ತು ನರಮಂಡಲದ ಸಾಮರ್ಥ್ಯವನ್ನು ಹೆಚ್ಚಿಸುವುದು ನಾಡಿ ಶುದ್ದಿಯಾಗಿ ಮನಸ್ಸಿನ ಚಂಚಲತೆ ಇಲ್ಲದಾಗಿ ಅದು ಶಾಂತವಾಗುವುದು. ಸಂಯಮ ಉಂಟಾಗುವುದು. ವೈಜ್ಞಾನಿಕವಾಗಿ ಹೇಳುವುದಾದರೆ ನಮ್ಮ ಪ್ರಾಣಮಯ ಕೋಶದ ಶುದ್ದೀಕರಣವಾಗಿ ಅದು ಸಶಕ್ತವಾಗುವುದು.
ಧ್ಯಾನ ಮಾಡುವುದರಿಂದ ಮನಸ್ಸಿನ ಹಾಗೂ ಅಂತಃಕರಣಗಳ ಚಂಚಲತೆ ನಿವಾರಣೆಯಾಗಿ ಮನಸ್ಸಿಗೆ ಆಳ ವಿಶ್ರಾಂತಿ ದೊರೆಯುತ್ತದೆ. ಮನಸ್ಸು ಪರಿಶುದ್ಧವಾಗುತ್ತದೆ ಹಾಗು ಮನಸ್ಸು ಅರಳುತ್ತದೆ. ಸಹಜ ಸ್ಥಿತಿಯಾದ ಆನಂದ ಸ್ವರೂಪವನ್ನು ಪಡೆಯಲು ಧ್ಯಾನದಿಂದ ಸಾಧ್ಯವಾಗುತ್ತದೆ.
ಮೈಗ್ರೇನ್ ತಲೆನೋವು ಪೀಡಿತರಿಗೆ ಇರುವ ಸರಳ ಯೋಗದ ಸಂಕ್ಷಿಪ್ತ ಪಟ್ಟಿ.
- ಆರಂಭದಲ್ಲಿ ಇಷ್ಟದೇವರ ಪ್ರಾರ್ಥನೆ.
- ಕಪಾಲ ಬಾತಿ, ತ್ರಾಟಕ ಕ್ರಿಯೆ.
- ಸರಳ ವ್ಯಾಯಾಮಗಳು, ಸೂರ್ಯ ನಮಸ್ಕಾರ (ಸಾಧ್ಯವಾಗುವವರಿಗೆ) ತುಸು ವಿಶ್ರಾಂತಿ.
ಯೋಗಾಸನಗಳು : ಅರ್ಧ ಚಕ್ರಾಸನ, ಪಾದ ಹಸ್ತಾಸನ, ಪಾರ್ಶ್ವೋತ್ತಾನಾಸನ, ಪದ್ಮಾಸನ, ಯೋಗ ಮುದ್ರಾಸನ, ವಜ್ರಾಸನ, ಶಶಾಂಕಾಸನ, ಅರ್ಧ ಉಷ್ಟ್ರಾಸನ, ಸರ್ವಾಂಗಾಸನ, ಹಲಾಸನ, ಮಕರಾಸನ, ಊಧ್ರಮುಖ ಶ್ವಾನಾಸನ, ಅದೋ ಮುಖ ಶ್ವಾನಾಸನ, ಶವಾಸನ.
- ಸರಳ ಪ್ರಾಣಯಾಮ, ನಾಡಿ ಶುದ್ಧಿ ಪ್ರಾಣಯಾಮ, ಉಜ್ಜಯೀ ಪ್ರಾಣಯಾಮ.
- ಧ್ಯಾನ-ಉಸಿರನ್ನು ಗಮನಿಸುವ ಹಾಗೂ ಇಷ್ಟ ದೇವರ ಧ್ಯಾನ ಅಭ್ಯಾಸ ಮಾಡಬೇಕು
ವೈವಿಧ್ಯದಿನದ ಜಂಜಾಟ...ಅದೇ ಕೆಲಸದ ಒತ್ತಡ...ಒಂದಿಷ್ಟು ಲೈಫ್ ನಲ್ಲಿ ರಿಲೀಫ್ ಬೇಕು, ಗೊಂದಲದ ಗೂಡಾಗಿ ಹೋಗಿದ್ದ ತಲೆಗೆ ಒಂದಷ್ಟು ರಿಲ್ಯಾಕ್ಸ್ ಬೇಕು... ಅದೇ ಕೆಲ್ಸ...ಅದೇ ಕಚೇರಿ... ಅದೇ ರಾಜಕೀಯ... ಅದೇ ಕಾಲೆಳೆಯೋ ಮಂದಿ... ವಿಘ್ನ ಸಂತೋಷಿಗಳ ನಡುವೆ ಬದುಕಿ ಬೆಂಡಾಗಿ ಹೋಗಿದ್ದೆ... ನೂರಾರು ಯೋಚನೆ...ಯೋಜನೆ ... ತಲೆ ಅಕ್ಷರಶಃ ಭಾರ ಭಾರ... ಏನ್ ಮಾಡಿದ್ರೂ ಮನಸ್ಸು ನಿಯಂತ್ರಣದಲ್ಲಿ ಸಿಗ್ತಾ ಇಲ್ಲ... ತುಸು ನೆಮ್ಮದಿ, ಮನಕ್ಕೆ ಒಂದಷ್ಟು ಖುಷಿ ಬೇಕು ಎಂಬ ಆಶೆ ಮನೆಮಾಡಿತು.ದಕ್ಷಿಣ ಕನ್ನಡದ ಬಿಸಿಲ ಬೇಗೆ, ಇದೆಲ್ಲಕ್ಕಿಂತ ತುಸು ಮುಕ್ತಿಗೆ ಮನಸ್ಸು ಹಪಹಪಿಸುತ್ತಿತ್ತು. ದೂರದ ಗೆಳೆಯನಿಗೆ ಒಂದು ದೂರವಾಣಿ... ಹಾಗೇ ಒಂದು ರೌಂಡ್ ಹೋಗಿ ಬರೋಣವೆಂದೆ. ಸರಿ ಎಂದವನೇ 4*4 ಮಹೀಂದ್ರಾ ಏರಿ ಬಂದ.
ಜೊತೆಗೆ ಕ್ಯಾಮರಾ ಹೆಗಲಿಗೇರಿಸಿ ಮಡಿಕೇರಿಯತ್ತ ಪಯಣ ಬೆಳೆಸಿದೆ. ದಕ್ಷಿಣ ಕನ್ನಡದಿಂದ ಮಡಿಕೇರಿಯತ್ತ ಸಾಗಿತು ನಮ್ಮೀ ಪಯಣ... ಹಾದಿಮಧ್ಯೆ ಕಲ್ಲಡ್ಕದ ಲಕ್ಷ್ಮೀಹೋಟೆಲ್ ನಲ್ಲಿ ಖಡಕ್ ಕೆಟಿ ಸವಿ ಸವಿದೆವು. ನೀರು ದೋಸೆಯ ಜೊತೆಗೆ ಚಟ್ನಿ...ಇನ್ನೂ ಕೈ ಪರಿಮಳ ಮಾಸಿಲ್ಲ. ನಾಲ್ಕು ಪ್ಲೇಟ್ ಬಾಳೆ ಹಣ್ಣಿನ ಬನ್ಸು ಕಟ್ಟಿಕೊಂಡು ಪಯಣ ಮುಂದುವರಿಸಿದೆವು.ಯಮಯಾತನೆ...ಮಡಿಕೇರಿಯ ರಸ್ತೆಯೆಂದರೆ ಉಸ್ಸಪ್ಪಾ...ನಮ್ಮ ಜೀಪಿಗೂ ಕಣ್ಣೀರು ಬರುತ್ತಿತ್ತು. ಮಡಿಕೇರಿಯತ್ತ ಎಂಟ್ರಿಕೊಡುತ್ತಲೇ ಸಾಕಪ್ಪಾ ಸಾಕೆಂಬಂತಾದರೂ ಹಿತವಾದ ಗಾಳಿ, ಆಹ್ಲಾದಕರ ತಣ್ಣನೆಯ ವಾತಾವರಣ...ಮುಖಕ್ಕೆ ಮುತ್ತಿಕ್ಕುತ್ತಿದ್ದ ಮೋಡ...ಎಲ್ಲವೂ ಸಂತಸ ನೀಡುತ್ತಿದ್ದವು.ಪೇಟೆ - ಪಟ್ಟಣದ ಜಂಜಾಟ, ಕಚೇರಿ ವಾತಾವರಣದಿಂದ ದೂರವಾದಷ್ಟು ಖುಷಿ...ಹೌದು ಎಂಬಷ್ಟರ ಮಟ್ಟಿಗೆ ಸಂತಸ ಮಡಿಕೇರಿಗೆ ಎಂಟ್ರಿ ಕೊಡುತ್ತಲೇ ನಮಗೆ ದೊರಕಿತ್ತು.
ಇಲ್ಲೇ ಇದ್ದು ಬಿಡೋಣ ಎಂಬಂತೆ!
ಮಡಿಕೇರಿಯ ವಾತಾವರಣವೇ ಹಾಗೆ... ಕೊಡವ ಸಂಸ್ಕೃತಿ, ಸಂಪ್ರದಾಯ, ಬೆಡಗು , ಬಿನ್ನಾಣ... ಆತಿಥ್ಯ ಅವೆಲ್ಲವೂ ಪ್ರವಾಸಿಗರಿಗೆ ಎಲ್ಲಿಲ್ಲದ ಖುಷಿಕೊಡೋದ್ರಲ್ಲಿ ಸಂದೇಹವಿಲ್ಲ. ಏನೇ ಆಗ್ಲಿ ಒಂದೆರಡು ದಿನವಾದ್ರೂ ಇಲ್ಲಿ ಉಳ್ಕೊಳ್ಳೇ ಬೇಕು ಎಂಬ ತೀರ್ಮಾನ ತೆಗೆದುಕೊಂಡೆವು.
ಮಡಿಕೇರಿಗೆ ಬರುವ ಪ್ರವಾಸಿಗರಿಗೆ ಉಳಿದುಕೊಳ್ಳಲು ಇದೀಗ ಕರ್ನಾಟಕ ಸರಕಾರದ ಪ್ರವಾಸೋಧ್ಯಮ ಇಲಾಖೆಯ ಪರವಾನಿಗೆ ಪಡೆದ ಸುಮಾರು 30ರಷ್ಟು ಸ್ಟೇ ಹೋಂ ಮಡಿಕೇರಿಯಲ್ಲಿವೆ. ಹಿತವಾದ ವಾತಾವರಣದ ಮಡಿಕೇರಿಯಲ್ಲಿ ಒಂದೆರಡು ದಿನ ಇದ್ದು ಬಿಡೋಣ ಎಂದು ಬರುವವರ ಸಂಖ್ಯೆ ಅಧಿಕವಾಗುತ್ತಲೇ ಹೋಂ ಸ್ಟೇಗಳ ಸಂಖ್ಯೆಯೂ ಹೆಚ್ಚತೊಡಗಿವೆ. ಈಗ ನೂರಾರು ಸ್ಟೇ ಹೋಂಗಳು ಅಲ್ಲಲ್ಲಿ ತಲೆಯೆತ್ತಿಕೊಂಡಿವೆ. ಆದರೆ ಅವ್ಯಾವವೂ ಅಧಿಕೃತ ಪರವಾನಿಗೆಯಲ್ಲಿ ನಡೆಯುತ್ತಿಲ್ಲ.
ಅಂದೆಂದೋ ಮಡಿಕೇರಿಗೆ ಹೋದಾಗ ಪರಿಚಯವಾದ ಮೋಹನ ಮೊನ್ನಪ್ಪ ಹಾಗೂ ಶಶಿ ಮೊನ್ನಪ್ಪ ದಂಪತಿ ತಟ್ಟನೆ ನೆನಪಿಗೆ ಬಂದ್ರು. ಅಲ್ಲೇ ಒಂದು ಕಾಲ್. ಪ್ರೀತಿಯ ಸ್ವಾಗತ. ನಮ್ಮ ಹೋಂ ಸ್ಟೇ ನಿಮಗಾಗಿ ಸಿದ್ಧಪಡಿಸಿದ್ದೇವೆ. ಬನ್ನಿ ಎಂಬ ಪ್ರೀತಿಯ ಆಹ್ವಾನ. ಹೌದು ಆ ದಂಪತಿಗೆ ಪ್ರೀತಿಯ ಎರಡು ಮಕ್ಕಳು . ಮಗಳು ಮೈಥಲಿ. ಈಕೆಯ ಹೆಸರಲ್ಲೇ ಒಂದು ಸ್ಟೇ ಹೋಂ ನಿರ್ಮಿಸಿದ್ದಾರೆ. ಮನೆಯ ಸನಿಹದಲ್ಲೇ ಇದೆ. ವಿಶಾಲವಾದ ಡೈನಿಂಗ್ ರೂಂ. ಪ್ರತ್ಯೇಕ ಬೆಡ್ ರೂಂ. ಅಟೇಚ್ಡ್ ಬಾತ್ ರೂಂ. ವ್ಯವಸ್ಥಿತವಾದ ಬಾತ್ ರೂಂ ಅನ್ನೋದೇ ಸೂಕ್ತ. ಟಿ.ವಿ. , ಬೆಡ್, ಸಂಪೂರ್ಣ ವ್ಯವಸ್ಥೆ ಚೆನ್ನಾಗಿದೆ. ಕಾರು ಪಾರ್ಕಿಂಗ್ ಮಾಡೋದಕ್ಕೂ ವ್ಯವಸ್ಥೆಯಿದೆ. ಡ್ರೈವರ್ ರೂಂ ಪ್ರತ್ಯೇಕ. ಕೊಡಗಿನ ಸವಿ ಸವಿ ಊಟದ ರುಚಿ ಇಲ್ಲಿ ಲಭ್ಯ. ಅದಕ್ಕಿಂತಲೂ ಹೆಚ್ಚಾಗಿ ಈ ದಂಪತಿಗಳ ಸೇವೆ; ಕಾಳಜಿ...ಪ್ರೀತಿ ತುಂಬಿದ ನಾಲ್ಕು ಮಾತುಗಳು ಮನಸ್ಸು ತುಂಬಿ ಬರುವಂತೆ ಮಾಡಿತ್ತು.
ಹೆಚ್ಚೇನೂ ವೆಚ್ಛವಿಲ್ಲ. ಆದರೆ ಆ ಮೈಥಲಿ ರೆಸಾರ್ಟ್ ಸೇಫ್...ಅಷ್ಟೇ ಖುಷಿ ಕೊಡುವಂತಹುದು. ಕೊಡಗಿಗೆ ಹೋದರೆ ಒಮ್ಮೆ ಅಲ್ಲಿಹೋಗಿ ಬನ್ನಿ. ಅವರ ಆತಿಥ್ಯ ಸವಿದು ಬನ್ನಿ.
ಕೊಡಗು (ಕೂರ್ಗ್ ಎಂಬ ಆಂಗ್ಲೀಯ ಬಳಕೆಯೂ ಇದೆ) ಕರ್ನಾಟಕದ ಒಂದು ಜಿಲ್ಲೆ. 'ಕೊಡಗು' - ಕನ್ನಡದ ಕುಡು, ಎಂದರೆ ಗುಡ್ಡ ಅಥವಾ ಬೆಟ್ಟದ ಪ್ರದೇಶ ಎಂಬುದರಿಂದ ಬಂದಿರಬಹುದೆಂದು ಭಾವಿಸಲಾಗಿದೆ. ಕೊಡಗು ಕರ್ನಾಟಕದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ದಕ್ಷಿಣ ಕನ್ನಡದ ಸೀಮೆಗೆ ಹೊಂದಿಕೊಂಡಂತೆ ಇದೆ, ಇದರ ಪಕ್ಕದ ಜಿಲ್ಲೆಗಳು - ಉತ್ತರಕ್ಕೆ ಹಾಸನ, ಪೂರ್ವಕ್ಕೆ ಮೈಸೂರು, ದಕ್ಷಿಣಕ್ಕೆ ಕೇರಳದ ಕಣ್ಣೂರು ಜಿಲ್ಲೆ. ಈ ಜಿಲ್ಲೆಯಲ್ಲಿ ಕಾಫಿ ಬಹಳವಾಗಿ ಬೆಳೆಯಲಾಗುತ್ತದೆ. ಇಲ್ಲಿಯ ಜನಸಂಖ್ಯೆ ೫೪೫,೩೨೨ (೨೦೦೧ ರಲ್ಲಿ) ಇತ್ತು.
ಈ ಜಿಲ್ಲೆಯ ರಾಜಧಾನಿ ಮಡಿಕೇರಿ (ಮರ್ಕೆರಾ ಎಂದೂ ಆಂಗ್ಲದಲ್ಲಿ ಕರೆಯಲಾಗುತ್ತದೆ). ಭಾರತದ 'ಸ್ಕಾಟ್ ಲ್ಯಾಂಡ್' ಎಂಬ ಹೆಸರೂ ಕೊಡಗಿಗೆ ಇದೆ.ಕೊಡಗು ಮೊದಲು ಬ್ರಿಟಿಷರ ಕಾಲದಲ್ಲಿ ರಾಜ್ಯವಾಗಿತ್ತು.ಕ್ರಮೇಣ ಬ್ರಿಟಿಷರು ಕೊಡಗನ್ನು ಮೈಸೂರು ರಾಜ್ಯಕ್ಕೆ ಜಿಲ್ಲೆಯಾಗಿ ಸೇರಿಸಿದರು.ಈ ಜಿಲ್ಲೆಯಲ್ಲಿ ಕಾಫಿಯಲ್ಲದೆ ಕರಿ ಮೆಣಸು,ಏಲಕ್ಕಿ,ಕಿತ್ತಳೆ,ಮತ್ತು ಭತ್ತ ಪ್ರಮುಖ ಬೇಸಾಯ.ಒಂದು ಕಾಲದಲ್ಲಿ ಕೊಡಗಿನ ಕಿತ್ತಳೆ ಭಾರತದಲ್ಲೆ ಹೆಸರಾಗಿತ್ತು.ಅದರೆ ಇಂದು ಅದು ಕೊಡಗಿನಲ್ಲಿಯೆ ಅಪರೂಪವಾಗಿದೆ.ಮೊದಲು ಕೊಡಗಿನಿಂದ ಕರ್ನಾಟಕ ರಾಜ್ಯಕ್ಕೆ ೩/೧ ಪಾಲು ಆದಾಯ ತೆರಿಗೆಯಾಗಿ ಹೋಗುತ್ತಿತ್ತು.ಕೊಡಗಿನ ೩ ತಾಲುಕಿನಲ್ಲು ಪ್ರವಾಸಿ ಕೆಂದ್ರವಿದೆ, ಮುಖ್ಯವಾಗಿ ಮಡಿಕೇರಿಯಲ್ಲಿ: ಅಬ್ಬಿ ಜಲಪಾತ, ಓಂಕಾರೇಶ್ವರ ದೇವಸ್ಥಾನ, ಗದ್ದಿಗೆ, ಅರಮನೆ, ರಾಜಸೀಟ್,ತಲಕಾವೇರಿ, ಸೊಮವಾರಪೇಟೆ ತಾಲುಕಿನಲ್ಲಿ: ಕಾವೇರಿ ನಿಸರ್ಗಧಾಮ, ಕೊಪ್ಪದ ಗೊಲ್ದನ್ ದೇವಸ್ಥಾನ, ವೀರಭೂಮಿ,ದುಭಾರೆ, ಹಾರಂಗಿ ಜಲಾಶಯ, ಚಿಕ್ಲಿ ಹೊಳೆ,ಹೊನ್ನಮನ ಕೆರೆ,ಮಲ್ಲಳ್ಳಿ ಜಲಪಾತ, ವಿರಾಜಪೇಟೆಯಲ್ಲಿ: ನಾಗರಹೊಳೆ,ಇರ್ಪು,ಕುಂದ,ಟೀ ಏಸ್ಟೇಟ್ ಇದೆ.
ಕೊಡವರು ಇಲ್ಲಿಯ ಮುಖ್ಯ ಜನರು. ಕೊಡವ ತಕ್ಕ್ ಕೊಡಗಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. ಕನ್ನಡ ಆಡಳಿತ ಭಾಷೆ. ಇದಲ್ಲದೆ ಮಲಯಾಳಂ,ತಮಿಳು, ಅರೆಗನ್ನಡ, ತುಳು,ರಾವುಲ, ಮುಂತಾದವನ್ನು ಆಡುವವರು ಇಲ್ಲಿರುವರು. ಕೊಡವ ಭಾಷೆ ಅಥವಾ ಕೊಡವ ತಕ್ಕ್‌ಗೆ ಲಿಪಿಯಿಲ್ಲ, ಇದನ್ನು ಸುಮಾರು ೫೦೦,೦೦೦ ಜನರು ಮಾತನಾಡಲು ಬಳಸುತ್ತಾರೆ. ಯೆರವೆರು (ಅಥವಾ) ರಾವುಲರು, ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಆದಿಯರೆಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂಗಳು ಹಾಗೂ ವ್ಯವಸಾಯಗಾರರು
- ಟೀಂ ಈ ಕನಸು.
ಈ ಕನಸು ಅವಾರ್ಡ್ಜಗತ್ತಿನಲ್ಲಿ ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮ ಎನ್ನುತ್ತಾರೆ, ಮಗುವನ್ನು ಒಂಭತ್ತು ತಿಂಗಳು ಹೊತ್ತು ಹೆತ್ತು, ಮಡಿಲಲ್ಲಿ ಹಾಕಿಕೊಂಡು ಸಾಕಿ ಸಲಹಿ ಕಾಪಾಡುವಳು ಹೆತ್ತ ತಾಯಿ. ಅಮ್ಮ ಎಂಬ ಶಬ್ದವನ್ನು ಬಾಯ್ತುಂಬಾ ಕರೆಯೋದೆ ಒಂದು ಹರುಷ ನಮ್ಮೆಲ್ಲರ ಪಾಲಿಗೆ ಅವಳೇ ದೈವವಾಗಿದ್ದಾಳೆ, ತಾಯಿಗಿಂತ ಮಿಗಿಲಾದುದು ಯಾವುದೂ ಇಲ್ಲ. ತಾಯಿ ಮಗುವಿಗೆ ತೋರಿಸುವ ಮಮತೆಯು ನಿಷ್ಕಲ್ಮಶವಾಗಿರುತ್ತದೆ, ನಿರ್ಮಲವಾಗಿರುತ್ತದೆ. ಆ ತಾಯಿಯ ಮಮತೆ ಪಡೆಯುವ ಮಗುವೇ ಧನ್ಯ. ತಾಯಿ ಮಗುವಿಗೆ ತೋರಿಸುವ ಪ್ರೀತಿ, ವಿಶ್ವಾಸವನ್ನು ಎಷ್ಟು ಬಣ್ಣಿಸಿದರೂ ಸಾಲದು. ಅಳುವ ಕಂದನನ್ನು ಅಪ್ಪಿಕೊಂಡು ತನ್ನ ಮಡಿಲಲ್ಲಿ ಹಾಕಿಕೊಂಡು ಅಮೃತಕ್ಕಿಂತ ಮಿಗಿಲಾದ ಆ ತಾಯಿಯ ಎದೆಹಾಲು ಉಣಿಸುವದರ ಮೂಲಕ ಆ ಮಗುವಿಗೆ ಸಮಾಧಾನ ಮಾಡುತ್ತಾಳೆ.
ತಾಯಿಯ ಎದೆ ಹಾಲು ಬಹಳ ಶ್ರೇಷ್ಠವಾದದು ಎದೆ ಹಾಲು ಕುಡಿದ ಮಕ್ಕಳು ಯಾವುದೇ ನ್ಯೂನ್ಯತೆ ಇಲ್ಲದೆ ದಷ್ಟ ಪುಷ್ಟವಾಗಿ ಬೆಳೆಯುತ್ತಾರೆ, ಹಾಲನ್ನು ಕುಡಿಯದೇ ಇರುವಂತಹ ಮಕ್ಕಳು ಅನಾರೋಗ್ಯದಿಂದ ಬಳಲುವುದನ್ನು ಕಾಣುತ್ತೇವೆ. ಇದರಿಂದ ಕಣ್ಣಿನ ಸಮಸ್ಯೆ, ಜ್ಞಾಪಕ ಶಕ್ತಿ, ಮೆದುಳಿನ ಶಕ್ತಿಯನ್ನು ಕಳೆದುಕೊಳ್ಳುತ್ತದೆ, ಪೋಷಕಾಂಶಗಳ ಕೊರತೆ ಉಂಟಾಗುತ್ತದೆ.
ಹುಟ್ಟಿದ ಮಗು ಮೂರು ವರ್ಷಗಳ ವರೆಗೆ ತಾಯಿಯ ಬೆಚ್ಚನೆಯ ಅಪ್ಪುಗೆಯಲ್ಲಿಯೇ ನಿದ್ರಿಸಬೇಕು, ಇಲ್ಲವಾದರೆ ಮಗು ಭವಿಷ್ಯದಲ್ಲಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾದೀತು ಎಂದು ಹೊಸ ಸಂಶೋಧನೆಯೊಂದು ಇತ್ತೀಚೆಗೆ ಹೇಳಿದೆ. ದಕ್ಷಿಣ ಆಫ್ರಿಕಾದ ಕೇಪ್ಟೌನ್ ವಿಶ್ವವಿದ್ಯಾಲಯದ ಡಾ.ನೀಲ್ಸ್ ಬ್ರಿಜ್ಮನ್ ನೇತೃತ್ವದ ಸಂಶೋಧಕರ ತಂಡ ಈ ಬಗ್ಗೆ ಅಧ್ಯಯನ ನಡೆಸಿ, ತಾಯಿಯ ಜೊತೆ ಮಗು ನಿದ್ರಿಸದಿದ್ದರೆ ಮಗುವಿನ ಹೃದಯದ ಮೇಲೆ ಹೆಚ್ಚಿನ ಒತ್ತಡ ಉಂಟಾಗಲಿದೆ ಎಂದು ಹೇಳಿದೆ. ಅಮ್ಮನ ಹಿತವಾದ ಸಾಮೀಪ್ಯದಲ್ಲಿ ನಿದ್ರಿಸಿದರೆ ಮಗುವಿನ ಮೆದುಳು ಬೆಳವಣಿಗೆ ಹೊಂದುತ್ತದೆ.
ಒಂದು ವೇಳೆ ತಾಯಿಯಿಂದ ಬೇರ್ಪಟ್ಟು ನಿದ್ರಿಸಿದರೆ ಮೆದುಳಿನಲ್ಲಿ ದೋಷ ಕಾಣಿಸಿಕೊಳ್ಳಲಿದೆ. ಅಲ್ಲದೇ ವರ್ತನೆಯಲ್ಲಿ ಸಮಸ್ಯೆ ಉಂಟಾಗಲಿದೆ ಎಂದು ಸಂಶೋಧಕರು ತಿಳಿಸಿರುವ ವಿಚಾರವನ್ನು ಕನ್ನಡ ದಿನ ಪತ್ರಿಕೆಯೊಂದು ಇತ್ತೀಚೆಗೆ ಪ್ರಕಟಿಸಿತ್ತು. ಈ ವಿಷಯದಿಂದ ತಾಯಿ ಮಗುವಿನ ಸಂಬಂಧ ಎಷ್ಟೊಂದು ಮಹತ್ವದ್ದು ಎಂದು ತಿಳಿದು ಬರುತ್ತದೆ. ತಾಯಿ ಮತ್ತು ಮಗುವಿನ ಸಂಬಂಧ ಬಹಳ ಅನ್ಯೋನ್ಯವಾದುದು. ಮಾತೃ ಪ್ರೇಮ ಮಕ್ಕಳಿಗೆ ದೊರೆತರೆ ಅವರು ಲವಲವಿಕೆಯಿಂದ ಬೆಳೆಯುತ್ತಾರೆ . ತಾಯಿ ಪ್ರೀತಿ ಎಲ್ಲರಿಗೂ ದೊರೆಯುವದಿಲ್ಲ. ಪ್ರೀತಿ ಕಳೆದುಕೊಂಡ ಮಕ್ಕಳ ನೋವನ್ನು ಹೇಳಲಾಗದು ಯಾಕೆಂದರೆ ದಾಹ ಆದಾಗಲೇ ನೀರಿನ ಮಹತ್ವ ತಿಳಿಯುವಂತೆ, ತಾಯಿ ಇಲ್ಲವಾದಾಗ ಅವಳ ಪ್ರೀತಿಯ ಮಹಿಮೆ ಗೊತ್ತಾಗುವದು.
ಮಕ್ಕಳು ಚಿಕ್ಕವರಿದ್ದಾಗಲೇ ಅವರನ್ನು ಬೆಳೆಸಿ ಸರಿ ದಾರಿಗೆ ತರುವವಳು ಈ ಮಹಾತಾಯಿ. ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಅಂತರ ಮಹಾವಿದ್ಯಾಲಯ ಯುವಜನೋತ್ಸವ 2011ರ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಕ್ಲೇ ಮಾಡೆಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಾಯಿ ಮಗುವಿಗೆ ಹಾಲುಣಿಸುವ ಹಾಗೂ ಮಮತೆ ತೋರಿಸುವ ಸುಂದರ ಕಲಾಕೃತಿಯನ್ನು ರಚಿಸಿ ಎಲ್ಲರ ಗಮನ ಸೆಳೆದರು. ಒಂದೊಂದು ಕಲಾಕೃತಿಯನ್ನು ನೋಡಿದ ಪ್ರತಿಯೊಬ್ಬರಿಗೂ ತಾಯಿಯ ಮಮತೆಯ ಬಗ್ಗೆ ಪ್ರೀತಿ ಹುಟ್ಟುತ್ತದೆ.
ಈ ಅದಮ್ಯ, ಅಗೋಚರವಾದ ಅಮ್ಮನ ಪ್ರೀತಿ ಮುಂದೆ ಎಲ್ಲವೂ ತೃಣಕ್ಕೆ ಸಮಾನವಾಗುತ್ತದೆ. ಅಮ್ಮ ಎಂದರೆ ಸಿಗುವ ತೃಪ್ತಿ, ಮಕ್ಕಳಲ್ಲಿ ಚಿಮ್ಮುವ ಉತ್ಸಾಹ, ಉಲ್ಲಾಸ ಅವರ ಬೆಳವಣಿಗೆಗೆ ಪೂರಕವಾಗುತ್ತದೆ. ಮಕ್ಕಳಿಗೆ ತಾಯಿಯೇ ಬಾಳಿನ ಬೆಳಕಾಗಿ, ಅವರ ಜೀವನದ ಜ್ಯೋತಿಯನ್ನು ಬೆಳಗುತ್ತಾಳೆ ಅವಳಿಲ್ಲದೇ ಎಲ್ಲವೂ ಶೂನ್ಯ.
ಇಂದಿನ ದಿನಗಳಲ್ಲಿ ಕಾಲ ಬದಲಾದಂತೆ ಎಲ್ಲವೂ ಬದಲಾವಣೆಯಾಗುವದನ್ನು ನಾವು ಕಾಣುತ್ತೇವೆ. ಈ ಹೈಬ್ರಿಡ್ ಕಾಲದಲ್ಲಿ ಎಲ್ಲವೂ ದೊರೆಯುತ್ತದೆ, ಆದರೆ ಮಕ್ಕಳಿಗೆ ತಾಯಿ ಪ್ರೀತಿ ಸಿಗುವದೇ ಕಷ್ಟವಾಗಿದೆ. ಇಂದಿನ ಒತ್ತಡ ಜೀವನದಲ್ಲಿ ತಂದೆ, ತಾಯಿ ಹಣ ಗಳಿಸಿಲೆಂದು ಇರುವ ಸಮಯವನ್ನೇ ಅದರಲ್ಲಿ ಕಳೆಯುತ್ತಿದ್ದಾರೆ. ತಾವು ಹೆತ್ತ ಮಕ್ಕಳ ಬಗ್ಗೆ ಸ್ವಲ್ಪನು ಚಿಂತೆ ಇಲ್ಲದೆ ಅವರನ್ನು ಕಾನ್ವೆಂಟ್ ಸ್ಕೂಲಿಗೆ ಸೇರಿಸಿ ತಮ್ಮ ಜವಾಬ್ದಾರಿ ಕಳೆಯಿತೆಂದು ಸುಮ್ಮನಾಗಿ ಬಿಡುತ್ತಾರೆ.
ಆದರೆ ತಂದೆ, ತಾಯಿಯನ್ನು ಕಾಣಬೇಕೆಂಬ ಮಕ್ಕಳ ಆಸೆ ಹಾಗೆ ಕಮರಿ ಹೋಗುತ್ತದೆ. ಮಕ್ಕಳ ಮನಸ್ಸು ಸೂಕ್ಷ್ಮ ಸಂವೇದನೆಯಿಂದ ಕೂಡಿರುತ್ತದೆ. ಅದನ್ನು ಅರ್ಥಮಾಡಿಕೊಳ್ಳದೆ ಅವರು ಮಕ್ಕಳಿಗೆ ಬೇಸರ ಉಂಟು ಮಾಡುತ್ತಾರೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ತೀವ್ರವಾದ ಪರಿಣಾಮ ಉಂಟಾಗುತ್ತದೆ ಎಂದು ತಿಳಿದರೂ ಸಹ ಅವರು ಮತ್ತೆ ಅದೇ ರೀತಿ ಮಾಡುವದು ವಿಷಾದದ ಸಂಗತಿ.
ಈಗತಾನೇ ಭೂಮಿಗೆ ಕಾಲಿಟ್ಟ ಏನು ಅರಿಯದಿರುವ ಹಸುಳೆ ಶಿಶುವನ್ನು ಹೆತ್ತ ಎಷ್ಟೋ ತಾಯಂದಿರು ಅವರನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗುವದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾದ ಕೆಲಸವಾಗಿದೆ. ಈ ರೀತಿಯ ಘಟನೆಗಳು ಅಮಾನವೀಯ ಕೃತ್ಯಗಳಾಗಿವೆ. ಮಾನವೀಯ ಮೌಲ್ಯ ಹೊಂದಿದ ಯಾವುದೇ ವ್ಯಕ್ತಿ ಇಂಥಹ ಘಟನೆಗೆ ಆಸ್ಪದ ಕೊಡಬಾರದು.
ಮಕ್ಕಳು ದೇವರು ಸಮಾನ ಎನ್ನುತ್ತಾರೆ. ಅವರನ್ನು ಕಾಪಾಡುವದು ಅವರವರ ಕರ್ತವ್ಯವಾಗಿದೆ. ಅದೇ ರೀತಿ ಯಾವ ತಾಯಿಯು ಕೆಟ್ಟವರಿರುವದಿಲ್ಲ ಆದರೆ ಸಮಯ, ಸಂದರ್ಭಗಳು ಮನುಷ್ಯನನ್ನು ಆಟ ಆಡಿಸುತ್ತವೆ. ಜೀವನದಲ್ಲಿ ನಂಬಿಕೆ ಮುಖ್ಯ, ನಂಬಿಕೆಯಿಂದಲೇ ಜೀವನ ನಡೆಸಬೇಕು. ಗಾಳಿಯೂ ನಿನ್ನದೇ, ದೀಪವೂ ನಿನ್ನದೇ ಆರದಿರಲಿ ಬದುಕು. ಒಬ್ಬನು ಎಲ್ಲರಿಗಾಗಿ, ಎಲ್ಲರೂ ಒಬ್ಬನಿಗಾಗಿ ಬಾಳುವದು ಜೀವನದ ನಿಯಮ. ನೋಡಲು ದೇವರಿಲ್ಲ, ಆ ದೇವರನ್ನೇ ತಾಯಿಯಲ್ಲಿ ಕಾಣಬೇಕು.
ಅಮರೇಶ ನಾಯಕ, ಜಾಲಹಳ್ಳಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಗುಲಬರ್ಗಾ ವಿಶ್ವವಿದ್ಯಾಲಯ ಗುಲಬಗರ್ಗಾ.
ಈ ಕನಸು ಅವಾರ್ಡ್
ಅವರಂತೆ ನನಗೆ ಕವನದ ಸಾಲುಗಳನ್ನು ಬರೆಯಲು ತಿಳಿದಿಲ್ಲ.ಕವನದ ಛಾಯೆಯಲ್ಲಿ ನನ್ನ ಪ್ರೀತಿಯನ್ನು ವ್ಯಕ್ತಪಡಿಸಲೂ ತಿಳಿದಿಲ್ಲ.ಆ ನಿನ್ನ ಬೆರಳುಗಳನ್ನು ಹಿಡಿಯುವ ಮನಸ್ಸಿದ್ದರೂ, ನಾನು ನಿನಗೆಂದೇ ಹಂಬಲಿಸುತ್ತಿರುವಾಗಲೇ ಇನ್ನಾರೋ ನಿನ್ನ ಕೈ ಬೆರಳು ಹಿಡಿದಾಗ ಮನದಲ್ಲಿ ಮೂಡಿದ ಆಸೆಗಳು ಕಣ್ಣಿರಾಯಿತು. ಎಷ್ಟು ಸಮಯ ಮೂಕನಂತಿರಲಿ. ಅವರ ಸಾಹಿತ್ಯದ ಕನ್ನಡಿಯಲ್ಲಿ ಅವರ ಅವರ ಅಂತರಾಳದ ಭಾವವಿತ್ತು. ಆದರೆ ನನ್ನ ಭಾಳ ಭಾವನೆಗಳು ಒಡೆದ ಕನ್ನಡಿಯಾಗಿದೆ. ನನ್ನ ಕೊಳಲು ಹಾಡು ಮರೆತಿದೆ. ತಂಪುಗಾಳಿಗಾಗಿ ಅದು ಕಾಯುತ್ತಿದೆ. ದೂರದ ಬಿದಿರನ್ನು ನೋಡುತ್ತೇನೆ. ಅದಾದರೂ ಹಾಡಬಹುದೆಂದು...
ನನ್ನ ಕೊಳಲ ದನಿಯಿಂದ ಹೊರಚಿಮ್ಮಿದ ನನ್ನ ಮನಸ್ಸಿನ ಭಾವನೆಯೂ ನಿನಗರ್ಥವಾಗಲಿಲ್ಲ ಗೆಳತಿ ಅವರಿವರ ಕವನದ ಸಾಲುಗಳಲ್ಲಿ ನಿನ್ನನ್ನು ಕಂಡಾಗ ನನ್ನ ಕೊಳಲಿನಿಂದ ನಿನಾದವೇ ಹೊರಬರದಂಥಾಯಿತು.
ಕೊಳಲು ತಂದು ನುಡಿಸ ಹೇಳಿಕೊಟ್ಟವಳು ನೀನು. ಆದರೆ ಈ ಕೊಳಲನ್ನು ಯಾರಿಗಾಗಿ ನುಡಿಸಲಿ.. ನನ್ನ ಉಸಿರಿನಂತಿದ್ದ ಕೊಳಲು ನೀನು ಹೋದ ಮೇಲೆ ಕೊಳೆತು ಬಿದ್ದ ಬಿದಿರಿನ ಕಡ್ಡಿಯಂತಾಗಿದೆ. ಆದರೂ ಮತ್ತೆ ನೀ ಬರಬಹುದು ನನ್ನ ಹಾಡು ಕೇಳಲು ಎಂಬ ನೀರೀಕ್ಷೆ ಈ ಜೀವಕೆ.
- ಸನತ್ ಕುಮಾರ್
ವೈದೇಹೀ ಕಾದಂಬರಿ
ಕಳೆದ ಸಂಚಿಕೆಯಿಂದ...
ವಾಸ್ತೇವ ಎಂದೂ ಹಾಗೆ ಮಾಡಲಿಕ್ಕಿಲ್ಲ, ನಾನು ಭಾಸ್ಕರನ ಮನೆಗೆ ಕಾಲಿಡುವುದೂ ಇಲ್ಲ. ನಂಗವ ಮಗನೂ ಅಲ್ಲ' - ಅವರ ಸ್ವರ ನಡುಗುತ್ತ ಕರಗುತ್ತ ಹೋಯಿತು. ಸುತ್ತ ನಿರಿಗೆಗಟ್ಟಿ ಬಾವಿಗಿಳಿದಿದ್ದ ಬಿಳಿಹೂವಿನ ತೆಳು ಪರೆಯ ಕಣ್ಣಿಂದ ಒಂದು ಹುಂಡು ಕಣ್ಣೀರು ಕುಡಿಯಲ್ಲಿ ಬಂದು ಕಳಕಿತು.
`ಆಗದು ಎಂದ ಕೂಡಲೆ ಮನಸ್ಸಿಗೆ ಬಂದದ್ದನ್ನೆಲ್ಲ ಹೇಳುವುದಾ ನೀವು ? ನಿಮ್ಮದು ಅತಿರೇಕವಾಯಿತು ' - ಎಂದಳು ಸರೋಜ
ರತ್ನನಿಗೆ ಸರೋಜ ಹಾಗೆ ಪಾರ್ತಕ್ಕನಿಗೆ ತಲೆ ಹೆಟ್ಟಿ ಹೇಳಿದಂಎ ಹೇಳಿದ್ದು ಸರಿಕಾಣಲಿಲ್ಲ. ಇವಳ ಪ್ರಾಯ ಎಷ್ಟು , ಅವರದೆಷ್ಟು. ನಾಲಗೆ ಸ್ವಲ್ಪ ಹಿಂದಿದ್ದರೇ ಒಳ್ಳೆಯದು. ಕೊರಾತಿಯನ್ನು ಮದುವೆಯಾದರೆ ಯಾರು ಸಹಿಸುತ್ತಾರೆ ? ಬೇರೆ ಯಾವ ಜಾತಿಯವರನ್ನು ಬೇಕಾದರೂ ಮದುವೆಯಾಗಲಿ ಆದರೆ ಎಲ್ಲ ಬಿಟ್ಟು ಕೊರಾತಿಯನ್ನ ! ತನ್ನ ರವಿ ಹಾಗೆ ಮಾಡಿದರೆ ತಾನೂ, ಈ ಕಾಲದಲ್ಲಿ ಬೆಳೆದವಳೂ ಖಂಡಿತಾ ಒಪ್ಪಲಿಕ್ಕಿಲ್ಲ. ಸರೋಜನಿಗೇನು, ಇನ್ನೂ ಮದುವೆಯಾಗಲಿಲ್ಲ, ಮಕ್ಕಳಿಲ್ಲ. ಕಷ್ಟದ ಬಿಸಿ ಗೊತ್ತಾಗುವುದಿಲ್ಲ ಎಂದುಕೊಂಡಳು.
`ಸರೋಜ , ಪಾರ್ತಕ್ಕ ಹೇಳುವುದು ಅತಿರೇಕವೆಂತದು ? ನೀನೇ ಆಲೋಚನೆ ಮಾಡು. ನಾಳೆ ನಿನ್ನ ಒಬ್ಬ ಮಗ ಕೊರಾತಿಯನ್ನು - ಎಲ್ಲಕ್ಕಿಂತಲೂ ನೀಚ, ನೀಚದಲ್ಲಿ ನೀಚ ಜಾತಿಯ ಹುಡುಗಿಯನ್ನು - ಮದುವೆಯಾಗಿ ಬಂದರೆ ನೀನು ಮನೆ ಹೊಗ್ಗಿಸಿಕೊಳ್ಳುತ್ತಿಯಾ ? ಹೋಗಲಿ. ನೀನೇ ಒಬ್ಬ ಕೊರಗನನ್ನು ಮದುವೆಯಾಗಲು ತಯಾರಿದ್ದಿಯಾ ? '
`ಅದನ್ನೆಲ್ಲ ಈಗ ಹೇಗೆ ಹೇಳುವುದು...? ಅಂತಹ ಸಂದರ್ಭ ಬಂದರೆ ತಿಳಿದೀತು. ಈಗ ನಾನು ಹೌದು ಎಂದರೂ ಇಲ್ಲ ಎಂದರೂ ಬೆಲೆಯಿಲ್ಲ. ಆದರೆ ರತ್ನಕ್ಕ , ಭಾಸ್ಕರಣ್ಣ ನನ್ನ ನಿನ್ನಂತಹ ಮನಸ್ಸಿನವನಲ್ಲ. ಅವ ಯೋಚಿಸುವ ರೀತಿಯೇ ಬೇರೆ.ಶೂದ್ರರಿಗಾಗಿ ಕೆಲಸ ಮಾಡುವವರು ಬೇಕಷ್ಟು ಜನ ಇದ್ದಾರೆ.ಆದರೆ ಅದನ್ನೇ ಇಷ್ಟು ಸೀರಿಯಸ್ಸಾಗಿ ತೆಗೆದುಕೊಂಡು ಅಲ್ಲಿನದೇ ಒಬ್ಬ ಹುಡುಗಿಯನ್ನು ಮದುವೆಯಾಗಿ ಅವಳ ಬದುಕಿನಲ್ಲಿ ಬೆಎಯುವ ಧೈರ್ಯ ಯಾರು ಮಾಡಿದ್ದಾರೆ?...ಭಾಸ್ಕರಣ್ಣ ಮದುವೆಯೇ ಬೇಡ ಎನ್ನುತ್ತಿದ್ದವ ಕುಮುದಿನಿ ಅತ್ತಿಗೆಯನ್ನು ಯಾಖೆ ಮದುವೆಯಾದ ಗೊತ್ತುಂ ನಿಂಗೆ ?
ಒಂದು ದಿನ ಶೀನಣ್ಣನ ಹತ್ತಿರ ಹೇಳಿದನಂತೆ. ``ನಾನೇನೂ ಅವರ ಉದ್ಧಾರಕ್ಕೆ ಆಗಲಿಲ್ಲ. ತೀರಾ ಕೆಳಮಟ್ಟದವರೆಂತ ಹೇಳುವ ಅವರಲ್ಲಿ ನಾನು ಬರೆಯಬೇಕು ಎಂಬ ಆಸೆಯಿಂದ ಆದೆ. ನಾನು ಅವರಂತೆಯೇ ಅವರು ನನ್ನಂತೆಯೇ ಎಂಬುದು ನನಗೂ ತಿಳಿಯಬೇಕು ಅಂತ ಆದೆ " - ಎಂದನಂತೆ.
ಆದರೆ ಪಾಪ ಅವಳ ಕಡೆಯವರೂ ಅವರಿಬ್ಬರನ್ನೂ ಮನೆಯೊಳಗೆ ಸೇರಿಸುವುದಿಲ್ಲವಂತೆ. ತನ್ನ ಊರಿಗೆ ಹೋಗದೆಯೇ ಬಹಳ ಕಾಲವಾಯಿತು ಅತ್ತಿಗೆ.'
ಮುಂದುವರಿಯುತ್ತದೆ...
- ವೈದೇಹಿ.
ಈ ಕನಸು ಅವಾರ್ಡ್
ಅದು ಸೂರ್ಯಾಸ್ತಮಾನದ ಸಮಯ, ಎಕಾಂಗಿಯಾಗಿ ಕುಳಿತು ಗಾಢ ಯೋಚನೆ? ಏನೋ ಕಳೆದುಕೊಂಡ ನೆನಪು? ನಾ ಆಸರೆಯಾಗಿದ್ದ ಬೋಳುಮರವೇ ಹೇಳುತಿತ್ತು ನಾ ಎಲ್ಲವನ್ನೂ ಕಳೆದುಕೊಂಡಿದ್ದೇನೆ.. ನನ್ನೊಂದಿಗೆ ಯಾರೂ ಇಲ್ಲವೆಂದು!
ನಿಜಕ್ಕೂ ಆ ಮರದಲ್ಲಿ ಒಂದು ಸಣ್ಣ ಎಲೆಯೂ ಇರಲಿಲ್ಲ, ಆದರೂ ನನಗೆ ಆ ಮರ ಆಶ್ರಯ ನೀಡಿತ್ತು!. ಯಾವಾಗಲೂ ಬೋಳುಮರ ಏಕಾಂಗಿಗಳಿಗೆ ಹೆಚ್ಚು ಪ್ರಿಯವಂತೆ!? ನನಗೂ ಕೂಡಾ!? ಸೂರ್ಯಾಸ್ತಮಾನದ ಪ್ರತಿಕ್ಷಣವೂ ಕೂಡಾ ಸೂರ್ಯ ಆ ಮರವನ್ನು ನೋಡಿ ನಗುತಿದ್ದ.
ಆ ಮರ ಎಲ್ಲಕ್ಕೂ ತಣ್ಣಗೆ ಉತ್ತರ ನೀಡುತ್ತಿತ್ತು.ಅವರಿವರು ನನ್ನ ಜೀವನವನ್ನು ನೋಡಿ ನಗುತ್ತಿದ್ದರು. ಅವರಿಗೇನು ತಿಳಿದಿದೆ ನಮ್ಮ ಕಥೆ-ವ್ಯಥೆ ? ಆದರೆ ಸೂರ್ಯನಿಗಾದರೂ ಆ ಮರವನ್ನು ನೋಡಬೇಕೆಂಬ ಬಯಕೆಯಿಂದ ಪ್ರತಿನಿತ್ಯ ಬರುತಿದ್ದ, ಆ ಮರಕ್ಕೂ ಸೂರ್ಯನೆಂದರೆ ಬಲುಇಷ್ಟ.
ಆದರೆ ನನಗೆ? ಇದ್ದರೂ ಇಲ್ಲದಂತೆ, ಜೇನಿನಂತೆ ಇದ್ದ ನನ್ನ ಪ್ರೀತಿಯನ್ನು ಹೀರಲು ಅವರಿಗೆಲ್ಲಾ ಬಯಕೆ.
ನನ್ನ ಜೇನನ್ನು ನನ್ನ ಪ್ರೀತಿಯನ್ನು ಕಳೆದುಕೊಂಡ ಮೇಲಂತೂ ಅವರಿಗೆಲ್ಲಾ ಖುಷಿಯೋ ಖುಷಿ ಆದರೆ ನನಗೆ ಸೂರ್ಯನಂತೆ ಉರಿಯಲು ತಿಳಿದಿಲ್ಲ, ನಗಲೂ ತಿಳಿದಿಲ್ಲ. ಬೋಳುಮರದಂತೆಯೇ ನನ್ನ ಬದುಕು.. ಸಾಯುವುದಂತೂ ನಿಶ್ಚಿತ.. ಇಂದೋ ನಾಳೆಯೋ?
ಯಾವ ನೆರಳೂ ಸಿಗದ ಯಾವತ್ತೂ ಸ್ವಚ್ಚಂದ ತಂಪು ಗಾಳಿ ಬೀಸದ ಆ ಮರವನ್ನೇ ಪ್ರೀತಿಸುತ್ತೇನೆ. ಆ ಸೂರ್ಯ ಅದೆಷ್ಟು ಬಾರಿ ನಕ್ಕು ಹೋದರೂ ಆ ಬೋಳುಮರ ತನ್ನ ಅಸ್ತಿತ್ವವನ್ನು ಬದಲಾಯಿಸಿಲ್ಲ. ನಿರ್ಧಾರ ಬದಲಾಯಿಸಿಲ್ಲ. ಆದರೂ ಆ ಬೋಳುಮರಕ್ಕೆ ಸೂರ್ಯನಿದ್ದಾನೆ, ಆ ಸೂರ್ಯನಿಗೆ ಆ ಬೋಳುಮರವಿದೆ. ಆದರೆ ನನಗಾರು?
- ಸನತ್ ಕುಮಾರ್
ಈ ಕನಸು ಅವಾರ್ಡ್
ನನ್ನವಳೆ ಮನದ ಮುತ್ತಾಗಿಯಾದರು ನನ್ನೊಳಗೆ ಬಾ
ನನ್ನ ಮನದ ಅರಗಿಣಿಯಾಗಿಯಾದರು ನನ್ನೊಳಗೆ ಬಾ
ಮುಚ್ಚಿದ ಕಂಗಳಲಿ ಕನಸಾಗಿ ನನ್ನೊಳಗೆ ಬಾ
ಬಿಚ್ಚಿದ ಕಂಗಳಲಿ ನನಸಾಗಿಯಾದರು ನನ್ನೊಳಗೆ ಬಾ
ಹೃದಯ ಮಿಡಿದಾಗಲೊಮ್ಮೆ ನೆನಪಾಗಿ ನನ್ನೊಳಗೆ ಬಾ
ಹೃದಯ ನಿಂತಾಗಲೊಮ್ಮೆ ಸಾವಾಗಿಯಾದರು ನನ್ನೊಳಗೆ ಬಾ
ಪ್ರೀತಿ ವರ್ಣನೆಗೆ ಪದಗಳವೆಷ್ಟೊ ಸೋತಿವೆ ನನ್ನೊಳಗೆ ಬಾ
ಮಾತು ಸೋತ ಮನಕ್ಕೆ ಮೌನದ ಮುತ್ತಾಗಿಯಾದರು ನನ್ನೊಳಗೆ ಬಾ
ಪ್ರೀತಿಯಿಲ್ಲದ ಬಡಿತವದು ಭಾವವಿಲ್ಲದ ದೇಹದಂತೆ ಪ್ರಭೆಯ
ಬದುಕಿನ ಭಾವಕ್ಕೆ ಭಾಷೆಯಾಗಿ ನಿಶೆಯಾಗಿಯಾದರು ನನ್ನೊಳಗೆ ಬಾ.
ಪ್ರಕಾಶ.ಬಿ. ಜಾಲಹಳ್ಳಿ
ಸಂಶೋಧನಾ ವಿದ್ಯಾರ್ಥಿ, ಕನ್ನಡ ವಿಭಾಗ
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಗುಲಬರ್ಗಾ
ಪ್ರಾದೇಶಿಕ ಸುದ್ದಿ
ಅಶ್ವತ್ಥಪುರ ಶ್ರೀ ಸೀತಾ ಶ್ರೀರಾಮಚಂದ್ರ ದೇವಸ್ಥಾನದಲ್ಲಿ ದೀಪೋತ್ಸವ, ಪಾಲಕ್ಕಿ ಉತ್ಸವ, ಭಜನಾ ಕಾರ್ಯಕ್ರಮಗಳು ನಡೆದವು.ಇದೇ ಸಂದರ್ಭ ದೇಗುಲದ ಪ್ರಧಾನ ಅರ್ಚಕ ವೇದ ಬ್ರಹ್ಮ ಗಣೇಶ್ ಭಟ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ರಾಮಕೃಷ್ಣ ಕಾಟುಕುಕ್ಕೆ ಅವರಿಂದ ದಾಸ ಸಂಕೀರ್ತನೆ ನಡೆಯಿತು.




ಕ್ಲಿಕ್...






ವಿಚಿತ್ರವಾದರೂ ಸತ್ಯ...ಪ್ರಕೃತಿಯ ವೈವಿಧ್ಯಮಯ ಚಿತ್ರಗಳು ಈ ಕನಸು ಓದುಗರಿಗಾಗಿ. ಓದಿ, ಅಭಿಪ್ರಾಯಿಸಿ
ಚಿತ್ರ: ಹರೀಶ್ ಕೆ.ಆದೂರು
ಸಾಹಿತ್ಯ
ನನ್ನಲ್ಲಿನ್ನೂ ಸಾಹಿತ್ಯ ರಸ ಬತ್ತಿಲ್ಲ
ಎಲ್ಲೆಲ್ಲೋ , ಎಂದೆಂದೋ ಹೊಳೆದ
ಹಲವು ಪದಗಳ ಪೋಣಿಸಿ ರಚಿಸಿದ
ಕವಿ ಮನದ ಒಳ ಬಂದ ಕವನವನ್ನು
ಕಾಂಕ್ರೀಟು ಕಾಡುಗಳ ಮಧ್ಯದ
ಪುಟ್ಟ ಗಾರ್ಡನ್ನಿನ ಸಾಹಿತ್ಯದ ಶಿಲ್ಪಕ್ಕೆ
ಅರ್ಪಿಸುವೆ
- ಸೌಮ್ಯ, ಸಾಗರ.
ಈ ಕನಸು ಅವಾರ್ಡ್
ಮನುಷ್ಯನ ಜೀವನದಲ್ಲಿ ಪ್ರೇರಣೆ ಎನ್ನುವುದು ಅತ್ಯಂತ ಪ್ರಚೋದಕ ಶಕ್ತಿ ಎಂದರೆ ತಪ್ಪಾಗಲಾರದು. ಏಕೆಂದರೆ ಬದುಕಿನಲ್ಲಿ ಪ್ರತಿಯೊಬ್ಬರಿಗೂ ಪ್ರೇರಣೆ, ಮಾರ್ಗದರ್ಶನ ಅಗತ್ಯ. ಇಲ್ಲದಿದ್ದರೆ ಮುಂದುವರೆಯಲು ಅಸಾಧ್ಯವಾಗುತ್ತದೆ. ತಂದೆ-ತಾಯಿ, ಅಕ್ಕ-ತಂಗಿ, ಅಣ್ಣ-ತಮ್ಮ, ಸಂಬಂಧಿಗಳು ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಗೆಳೆಯ ಗೆಳತಿಯರಿರಬಹುದು. ಅವರಿಂದಲೂ ಪ್ರಗತಿಯ ಪಥ ಹೊಂದಲು ದಾರಿದೀಪವಾಗುತ್ತದೆ. ಹಾಗೆಯೇ, ನನ್ನ ಜೀವನದಲ್ಲಿಯೂ ಕೂಡ ಒಳ್ಳೆ ಗೆಳತಿಯಿಂದ ಸುಧಾರಿಸಿದೆ..ಬದಲಾದೆ... ನಾನು ಎಸ್.ಎಸ್.ಎಲ್.ಸಿ. ನಲ್ಲಿ 2ವರ್ಷ ಫೇಲಾಗಿ ಆಮೇಲೆ ಪಾಸಾಗಿ ಕಾಲೇಜಿಗೆ ಬಂದೆ. ಓದುವುದು ಅಂದರೆ ಬೇಸರ ಅನಿಸುತಿತ್ತು. ಆವಾಗ ನನ್ನ ಬಾಳಿನಲ್ಲಿ ಆಶಾ ಕಿರಣದಂತೆ ಬಂದವಳೆ ಈ ಗೆಳತಿ.
ದಿನಾಲು ಒಂದೆ ಬಸ್ಸಿನಲ್ಲಿ ಬರುವಾಗ ಅವಳ ಪರಿಚಯ ಮಾಡಿಕೊಂಡೆ. ಹೀಗೆ ದಿನ ಕಳೆದಂತೆ ಅವಳು ನನಗೆ ಕಾಲೇಜು ಅಂದರೆ ಮಜಾಮಾಡುವುದು ಅಲ್ಲ,ಬಂದು ದಿನಾಲು ಟೈಮ್ ಪಾಸು ಮಾಡುವುದಕಿಂತ ಓದಿನ ಕಡೆ ಗಮನ ಹರಿಸು ಅಂತ ಹೇಳಿದಳು. ಹೀಗೆ ಬಸ್ಸಿನಲ್ಲಿ ಪ್ರಯಣ ಮಾಡುವಾಗ ನನಗೆ ಸಲಹೆ ನೀಡುತ್ತಿದ್ದಳು.
ಅವಳು ಹೇಳಿದ ಮೇಲೆ ಸ್ವಲ್ಪ ಓದಿನ ಕಡೆ ಗಮನ ಹರಿಸಿದೆ. ಅವಳು ಕ್ಲಾಸಿನ ಅತ್ಯುತ್ತಮ ವಿದ್ಯಾರ್ಥಿನಿಯಾಗಿದ್ದಳು. ಕ್ಲಾಸಿನ ಯಾವುದೇ ಕಾರ್ಯಕ್ರಮಗಳಲ್ಲಿ ಅವಳು ಮೊದಲು ಭಾಗವಹಿಸುತ್ತಿದ್ದಳು. ನಾನು ಸ್ವಲ್ಪಮಟ್ಟಿಗೆ ಎಲ್ಲ ಸ್ನೇಹಿತರಲ್ಲಿ ಹೊಂದಿಕೊಂಡೆ.ಹೀಗೆ ಕಾಲೇಜಿನಲ್ಲಿ ಸ್ನೇಹ ಮುಂದುವರೆಯಿತು. ದ್ವಿತೀಯ ವರ್ಷ ಪರೀಕ್ಷೆ ಬಂದವು ಅವಳದು ನಂದು ಒಂದೆ ಡೆಸ್ಕಿನಲ್ಲಿ ನೊಂದಣಿ ಸಂಖ್ಯೆ ಹಾಕಿದರು. ನನಗೆ ಭಯವಾಯಿತು. ಇವಳು ಯಾಕಪ್ಪ ಇಲ್ಲಿ ಬಂದಳು ಅನಿಸಿತು. ನಾನು ಏನಾದರು ಕಾಪಿ ಮಾಡಬಹುದಿತ್ತೆನಿಸಿತು.
ಅವಳು ಬಂದು ಪರೀಕ್ಷೆಯಲ್ಲಿ ಕುಳಿತಳು ನಾನು ಕುಳಿತು ಕೊಂಡೆ. ಏನಾದರೆ ತಿಳಿಯದಿದ್ದರೆ ನನಗೆ ಕೇಳೆಂದಳು. ನಾನು ನಿನಗೆ ಉತ್ತರ ಪತ್ರಿಕೆಯನ್ನು ಕೊಡುವೆ ನೋಡಿ ಬರೆ ಎಂದಳು. ಆದರೆ, ನನಗೆ ಹುಡಿಗಿಯ ಪೇಪರ್ ನೋಡಿ ಬರೆದರೆ ಮುಂದೆ ಅವಳಿಗೆ ನನ್ನ ಬಗ್ಗೆ ಅಸಹ್ಯ ಹುಟ್ಟಬಹುದೆಂದು ತಿಳಿದು, ನನಗೆ ಬಂದ್ದಷ್ಟು ಬರೆಯುತ್ತೇನೆಂದೆ. ಅವಳು ನಿನ್ನಿಷ್ಟ ಏನಾದರು ಮಾಡದೆಂದಳು.ಕೊನೆಯಲ್ಲಿ ಫಲಿತಾಂಶ ಬಂದಿತ್ತು. ಶೇಕಡಾ 50% ಬಂದರೆ ಅವಳದು 75% ಪಲಿತಾಂಶ ಬಂದಿತ್ತು. ನಿಜವಾಗಲು ಹೇಳಬೇಕೆಂದರೆ, ನನಗೆ ಓದಬೇಕೆನಿಸಿದು ಅವಳ ಸ್ನೇಹವಾದ ಮೇಲೆ.
ಮುಂದೆ ಅವಳು ಡಿ.ಎಡ್. ಆಯ್ಕೆ ಮಾಡಿಕೊಂಡಳು ನಾನು ಬಿ.ಎ. ಐಚ್ಛಿಕ ಕನ್ನಡ ಆಯ್ಕೆ ಮಾಡಿಕೊಂಡೆ. ತದ ನಂತರ ನಾನು ದಿನಾಲು ಅವಳ ಜೋತೆ ಫೊನ್ ಮುಖಾಂತರ ಮಾತಾನಡುತಿದ್ದೆ. ಹೀಗೆ ದಿನಕಳೆದಂತೆ ನಮ್ಮಿಬ್ಬರಲ್ಲಿ ಸ್ನೇಹ ಗಟ್ಟಿಗೊಳ್ಳುತ್ತಾ ಹೋಯಿತು. ಓದು ಬರಹ ಹಾಗೂ ಇಬ್ಬರು ಮನೆಗಳ ಸಮಸ್ಯೆಗಳ ಬಗ್ಗೆ ವಿಚಾರ ಮಡುತ್ತಲಿದ್ದೆವು. ಒಂದು ದಿನಾ ಫೊನ್ ಮಾಡಲಿಲ್ಲವೆಂದರೆ ಏನೋ ಕಳೆದುಕೊಂಡಂತೆ ಆಗುತ್ತಿತ್ತು.
ಈಗ ಅವಳು ನನ್ನ ಜೊತೆ ಮಾತು ಬಿಟ್ಟು ಒಂದು ವರ್ಷ ಕಳೆಯಿತು. . ಓ ಗೆಳತಿ ನೀನೇಕೆ ಹೀಗೆ? ಗೆಳಯ ಗೆಳತಿಯರ ಭಾವನೆಯಲ್ಲಿ ತೊಡಕಾಗಿ ಪ್ರೀತಿ-ಪ್ರೇಮವೆಂದು ಕಾಲ ಕಳೆಯುತ್ತೀರಿ. ಪ್ರೀತಿ-ಪ್ರೇಮವನ್ನು ಹೊರಬಿಟ್ಟು ಬಂದು ನಿಜವಾದ ಸ್ನೇಹದ , ಭಾವನೆಯ ಅರ್ಥ ತಿಳಿದುಕೊಳ್ಳಿ. ಗೆಳತಿ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬ ಗಾದೆ ಮಾತಿದೆ. ಏಕೆ ನೀನು ಹಾಗೆ ಮಾಡಲಿಲ್ಲ. ನಿಜವಾದ ಸ್ನೇಹಕ್ಕೆ ಬೆಲೆಯಿಲ್ಲವೇ? ಗೆದ್ದು ನಿಲ್ಲುವ ಹೊತ್ತಲ್ಲಿ, ಅರ್ಧದಲ್ಲಿ ಎದ್ದು ಹೋದರೆ (ಮರೆಯಾದರೆ) ಏನನ್ನಲಿ.
- ಅಶೋಕ ಬಿ. ಕಲಾಲ.
ಗುಲಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ .
ಈ ಕನಸು ಅವಾರ್ಡ್
ಸುದ್ದಿಮಾಡಲು,ಹೋಗಿ,ಸುದ್ದಿಮನೆಯಲ್ಲಿ ಸುದ್ದಿಯಾದ ನಮ್ಮ "ಸತೀಶನ" ಕಥೆ.
ನಾವು,ಪತ್ರಿಕೋದ್ಯಮ,ವಿಭಾಗದ ವಿಧ್ಯಾರ್ಥಿಗಳು,ಸುದ್ದಿಮಾಡುವುದು,ಲೇಖನಗಳನ್ನು,ಬರೆಯುವುದು,ಬರೆದಂತಹವುಗಳನ್ನು,ವಿವಿಧ ಪತ್ರಿಕೆಗಳಿಗೆ ಕಳಿಸುವುದು,ನಂತರ ಅವುಗಳ ಪ್ರಕಟಣೆಗಾಗಿ ಕಾಯುವುದು ನಮ್ಮ ದಿನ ನಿತ್ಯದ ಕೆಲಸ.ನಮ್ಮ ವಿಭಾಗದಲ್ಲಿ ,ಪ್ರತಿ ಶನಿವಾರ ತಪ್ಪದೆ ವಿವಿಧ ಪತ್ರಿಕೆಗಳಲ್ಲಿ,ಹೆಸರು ಮಾಡಿದ ಹಿರಿಯ ಪತ್ರಕರ್ತರನ್ನು ಆಹ್ವಾನಿಸಿ,ಅವರಿಂದ ನಮಗೆ ಉಪನ್ಯಾಸ ಮಾಡಿಸುತ್ತಾರೆ. ಉಪನ್ಯಾಸದ ನಂತರ ಆ ಉಪನ್ಯಾಸದ ಬಗ್ಗೆ ಒಂದು ಸುದ್ದಿ ಮಾಡಬೇಕು ನಂತರ ವಿವಿಧ ಪತ್ರಿಕೆಗಳಿಗೆ ತಲುಪಿಸುವ ಕೆಲಸ ವಿಧ್ಯಾರ್ಥಿಗಳೇ ಮಾಡಬೇಕು.
ಹೀಗೆ ಒಂದು ದಿನ ನಮ್ಮ ವಿಭಾಗಕ್ಕೆ ಹೆಸರಾಂತ ಪತ್ರಿಕೆಯ ವರದಿಗಾರ ಆಗಮಿಸಿದ್ದರು .ಬಂದತಂಹ ವರದಿಗಾರ ತನ್ನ ಅನುಭವವನ್ನು ನಮ್ಮ ಜೊತೆಯಲ್ಲಿ ಮುಕ್ತವಾಗಿ ಹಂಚಿಕೊಂಡರು ಆನಂತರ ಪತ್ರಿಕೆಗಳಲ್ಲಿ ವರದಿ ಮಾಡುವದು ಹೇಗೆ ಎನ್ನುವುದರ ಬಗ್ಗೆ ತಿಳಿಸಿದರು.
ಕೆಲವು ಗಂಟೆಗಳನಂತರ ಉಪನ್ಯಾಸ ಮುಗಿಯಿತು,ನಮ್ಮ ವಿಭಾಗದ ಉಪನ್ಯಾಸಕರಾದ,ಸುಭಾಷ ಬಣಗಾರ,ಮತ್ತು ಕುಮಾರಸ್ವಾಮಿ ,ಉಪನ್ಯಾಸ ಕಾರ್ಯಕ್ರಮದ ಬಗ್ಗೆ ಸುದ್ದಿ ಸಿದ್ಧಪಡಿಸಿ ಪತ್ರಿಕೆಗಳಿಗೆ ತಲುಪಿಸುವ ಜವಾಬ್ದಾರಿಯನ್ನು ನನಗು ನನ್ನ ಗೆಳೆಯರಾದ ಸತೀಶಕುಮಾರ,ಮತ್ತು ಮಂಜುನಾಥನಿಗೆ,ವಹಿಸಿದ್ದರು.
ಗುರುಗಳ ಮಾತಿಗೆ ತಲೆ ಬಾಗಿ ಸುದ್ದಿ ಕಚೇರಿಗಳತ್ತ ನಾವು ತೆರಳಿದೆವು... ಇಲ್ಲೇ ನೋಡಿ...ಸುದ್ದಿಕೊಡಲು ಹೋದಾತನೇ ಸುದ್ದಿಯಾದ ರಸಭರಿತ ಕಥೆ ಹುಟ್ಟಿದ್ದು!
ಪತ್ರಿಕಾ ಕಚೇರಿಯ ಒಳಹೊಕ್ಕೆವು. ಸಂಪಾದಕರು ಸ್ವಲ್ಪ ಕೆಲಸದ ಒತ್ತಡದಲ್ಲಿದ್ದರು. ನಮಗೆ ಕೊಂಚ ಕುಳಿತುಕೊಳ್ಳುವಂತೆ ಸೂಚಿಸಿದರು.ನಾವು ಸುಮ್ಮನೆ ಕುಳಿತುಕೊಳ್ಳುವವರಲ್ಲ. ಸುದ್ದಿಮನೆ ತುಂಬಾ ಓಡಾಡಿ ಸೂಕ್ಷ್ಮ ವಿಚಾರ ತಿಳಿದುಕೊಳ್ಳತೊಡಗಿದೆವು. ಸಂಪಾದಕರ ದೃಷ್ಠಿ ಆಗಾಗ ನಮ್ಮತ್ತ ತಿರುಗುತ್ತಿತ್ತು.
ಸ್ವಲ್ಪ ಸಮಯದ ನಂತರ ಸಂಪಾದಕರು ಬಂದರು. ನಮ್ಮ ಕಡೆಗೆ ತಿರುಗೆ " ಎನ್ರಪ್ಪ ಸುದ್ದಿನಾ?" ಎಂದರು.ಮುಕ್ತ ಮಾತುಗಳು, ಆತ್ಮೀಯವಾಗಿ ವಿಚಾರ ವಿಮರ್ಶೆಗಳು ನಡೆದವು. ಏನತ್ಮಧ್ಯೆ ನಮ್ಮ ಬಿಡುವಿನ ವೇಳೆ ಹೇಗೆ ಕಳೆಯುತ್ತೀರಿ ಎಂಬ ಪ್ರಶ್ನೆ ಸಂಪಾದಕರಿಂದ ಬಂತು.
ನಾವು ಕೆಲಸ ಮಾಡ್ತಿವಿ ಎಂದೆವು. ಅದಕ್ಕೆ ಯಾವ ಕೆಲಸ ಮಾಡ್ತಿರಾ ಎಂಬ ಪ್ರಶ್ನೆ... ನಾನು ಆಟ ಆಡುವೆ ಸರ್ ಎಂದೆ.ನನ್ನ ಗೆಳೆಯ ಮಂಜುನಾಥ ನಾನು ಅಂಗಡಿಯಲ್ಲಿ ಕೆಲಸ ಮಾಡುವೆ ಎಂದ.ಇನ್ನೋರ್ವ ಗೆಳೆಯ ಸತೀಶನಿಗೆ ಕೇಳಿದರು ಆಗ ಸತೀಶ ಚಡಪಡಿಸಲು ಸುರುಮಾಡಿದ ಅವನ ವರ್ತನೆಯನ್ನು ಗಮನಿಸಿದ ನಾನು " ಸರ್"ನಮ್ಮ ಸತೀಶ ಕಾಲೇಜು ಮುಗಿದ ನಂತರ ರಾಜಕೀಯ ಮಾಡ್ತನೆ ಸಾರ್ ಎಂದೆ.
ನನ್ನ ಮಾತುಕೇಳಿದ ತಕ್ಷಣವೆ ಸತೀಶನಿಗೆ ನೀನು ರಾಜಕಾರಣಿನಾ? ಎಂದರು ಆಗ "ಸತೀಶ ಹೌದು'ಸರ್ ಎಂದು ತಲೆಯಾಡಿಸಿದ. ನನ್ ಗೆಳೆಯ ಮಂಜುನಾಥ ಸುಮ್ಮನಾಗಲಿಲ್ಲ. ನಮ್ ಸತೀಶ ಗುಲ್ಬರ್ಗಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 'ಬನ್ನೂರು ಗ್ರಾಮ ಪಂಚಾಯ್ತಿ ಸದಸ್ಯ ಎನ್ನಬೇಕೇ...!
ನಮ್ಮ ಮಾತು ಕೇಳಿದ ಸಂಪಾದಕರು ಆಶ್ಚರ್ಯಚಕಿತರಾದರು. ಅಲ್ಲಿ ಕುಳಿತಿದ್ದಾ ತಮ್ಮ ವರದಿಗಾರನನ್ನು ಕರೆದು ಸತೀಶನ ಬಗ್ಗೆ ಒಂದು ಸುಂದರವಾದ ಸುದ್ದಿಮಾಡಲು ಹೇಳಿದರು. ಕಾಲೇಜಿಗೆ ಹೊರಡಿ ನಾಳೆ ನಿಮ್ಮ ಗೇಳೆಯನ ಬಗ್ಗೆ ಪ್ರಕಟವಾಗುವ ಲೇಖನ ತಪ್ಪದೆ ಓದಿ ಎಂದರು.
ಮರುದಿನ ಪತ್ರಕೆಯಲ್ಲಿ ವರ್ಣರಂಜಿತವಾಗಿ ನಮ್ಮ ಸತೀಶನ ಕುರಿತಾದ ಲೇಖನ ಪ್ರಕಟವಾಗಿತ್ತು! ಗೆಳೆಯರೆ ನೋಡಿ ನಮ್ಮ ಸತೀಶ ಯಾವರೀತಿಯಲ್ಲಿ ಹೆಸರಾದ!
-ತೋಟೇಂದ್ರ.ಎಸ್.ಮಾಕಲ್.
ಪತ್ರಿಕೋದ್ಯಮ ವಿಭಾಗ.ಗುಲ್ಬರ್ಗಾ ವಿ.ವಿ.
ಸಾಹಿತ್ಯ
ಮುತ್ತುಗಳೆಷ್ಟೋ ಕಡಲೊಳಗೆ
ಹೆಕ್ಕಿಕೊಂಡಷ್ಟೇ ದಕ್ಕುವುದು
ಉಳಿದವು ಅಲೆಗಳೊಳಗೆ
ಮುಚ್ಚಿ ಹೋಗುವುದು
ಅರ್ಥವಿಲ್ಲದೆ, ಬೆಲೆಯಿಲ್ಲದೆ
ಅನೇಕ ಜೀವಿಗಳಂತೆ ಈ ಪ್ರಪಂಚದೊಳಗೆ
- ಸೌಮ್ಯ, ಸಾಗರ
ಪ್ರಾದೇಶಿಕ ಸುದ್ದಿ
ಅಂತರಾಷ್ಟ್ರೀಯ ಯೋಗ ತೀರ್ಪುಗಾರ ಈ ಕನಸು.ಕಾಂ ನ ಯೋಗ ಅಂಕಣ ಕಾರ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ರಚಿಸಿದ ಯೋಗದಿಂದ ಯೋಗ ವಿದ್ಯಾರ್ಥಿ ಎಂಬ ಯೋಗ ಪುಸ್ತಕವನ್ನು ಡಾ.ಡಿ. ವೀರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿದರು. ಈ ಯೋಗ ಪುಸ್ತಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಇದರ ಪ್ರಯೋಜನವನ್ನು ಎಲ್ಲರೂ ಪಡೆಯಲಿ ಎಂದು ಹಾರೈಸಿದರು. ದೇಲಂಪಾಡಿ ಹಾಗೂ ಪತ್ನಿ ವೀಣಾ ದೇಲಂಪಾಡಿಯವರನ್ನು ಈ ಸಂಧರ್ಭದಲ್ಲಿ ಗೌರವಿಸಿ, ಸನ್ಮಾನಿಸಿದರು. ಈ ಪುಸ್ತಕ ಹೊರ ತರುವಲ್ಲಿ ಸಹಕರಿಸಿದ ಹಿರಿಯ ಲೆಕ್ಕ ಪರಿಶೋಧಕರಾದ ಜಗನ್ನಾಥ ಕಾಮತ್ ದಂಪತಿ ಹಾಗೂ ಮೆಸ್ಕಾಂ ಅಧಿಕಾರಿ ಜಗದೀಶ್ ಕಾಕುಂಜೆ ದಂಪತಿಯವರನ್ನು ಡಾ. ವೀರೇಂದ್ರ ಹೆಗ್ಗಡೆಯವರು ಗೌರವಿಸಿದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ ಕಾಲೇಜಿನ ಭರತ್ ಜೈನ್ ಉಪಸ್ಥಿತರಿದ್ದರು.
ಈ ಕನಸು ಅವಾರ್ಡ್
ಎರಡು ವರ್ಷಗಳನಂತರ ನನ್ನ ಆತ್ಮಿಯ ಗೆಳೆಯ "ನಬಿಸಾಬ"ದೂರದ "ದುಬೈ" ದೇಶದಿಂದ ಮತ್ತೆ ತನ್ನ ತವರು ದೇಶವಾದ ಭಾರತಕ್ಕೆ ಮರಳಿ ಬಂದಿದ್ದಾನೆ,ಇವನು ಹೆತ್ತವರನ್ನು ಬಂಧು ಮಿತ್ರರನ್ನು ಭಾರತದಲ್ಲೇ ಬಿಟ್ಟು ದುಬೈ ವಿಮಾನ ಹತ್ತಿದ್ದ...ಇದೀಗ ದೇಶಕ್ಕೆ ಮರಳಿದ್ದಾನೆ. ಆತನೊಂದಿಗೆ ದುಬೈ ಅನುಭವ ಕೇಳಿದ್ದೆ. ರಾಜ್ಯ ಬಿಟ್ಟು ಹೋಗದ ನನಗೆ ದುಬೈ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ನೀಡಿದ್ದಾನೆ. ಈ ಕನಸು ಓದುಗರಿಗೂ ದುಬೈ ಪರಿಚಯ ಮಾಡ್ತಿಸ್ತೀನಿ...ಇದು ನನ್ನ ಗೆಳೆಯ ನಬಿಸಾಬನ ದುಬೈ ಅನುಭವ...
ಹೇಗಿದೆ "ದುಬೈ"?
ಭಾರತಕಿಂತ ದುಬೈ ಗಾತ್ರದಲ್ಲಿ ಚಿಕ್ಕದು,ನಮ್ಮ ದೇಶದಲ್ಲಿರುವಂತೆ ಅಲ್ಲಿ ಹಳ್ಳಿಗಳಿಲ್ಲಾ,ನೋಡಲು ಬಾಹಳ ಆಕರ್ಷಕವಾಗಿ ಕಾಣುವ ಮೋಹಕ ನಗರಿ "ದುಬೈ".
"ದುಬೈ" ದೇಶದ ಆಹಾರ ಮತ್ತು ಸಂಸ್ಕೃತಿ ಹೇಗಿದೆ?
ದುಬೈನಲ್ಲಿ ಹೆಚ್ಚಿನವರು ಮಾಂಸಾಹಾರಿಗಳು. ಆದರೆ ಭಾರತೀಯರು ಅನೇಕರು ಸಸ್ಯಾಹಾರವನ್ನೇ ನೆಚ್ಚುತ್ತಾರೆ ,ನನಗೆ ತಿಳಿದಹಾಗೆ ಅಲ್ಲಿಯ ಸಂಸ್ಕೃತಿಯನ್ನು ನಮ್ಮ ದೇಶಕ್ಕೆ ಹೋಲಿಸಲು ಸಾಧ್ಯವಿಲ್ಲ. ಯಾಕಂದರೆ ನಮ್ಮ ದೇಶದ ಸಂಸ್ಕೃತಿ ಶ್ರೀಮಂತವಾಗಿದೆ.
" ದುಬೈ"ಶ್ರೀಮಂತ ನಗರವಂತೆ ನಿಜವೆ?.
ನಿಜವಾಗಿಯು "ದುಬೈ"ತುಂಬಾ ಶ್ರೀಮಂತ ದೇಶ ಅಲ್ಲಿ ನಮ್ಮ ದೇಶದಲ್ಲಿ ಕಂಡು ಬರುವಂತೆ ಬಿಕ್ಷುಕರು ಕಾಣಿಸುವುದಿಲ್ಲ . ಎಲ್ಲರೂ ಕಾರಿನಲ್ಲಿ ತಿರುಗಾಡುತ್ತಾರೆ.
"ದುಬೈ"ನಲ್ಲಿ ಮಳೆ ಮತ್ತು ವಾತಾವರಣ ಹೇಗಿದೆ?
ಅಲ್ಲಿ ಮುಂಜಾನೆ ಹೊತ್ತಿನಲ್ಲಿ ಮಂಜು ಬೀಳುತ್ತದೆ.ವರ್ಷದಲ್ಲಿ ಒಂದು ಸಲ ಮಳೆಯಾಗಬಹುದೇನೋ?ನಾನು ಸಹ ಮಳೆ ಬರವುದನ್ನು ನೋಡಿಲ್ಲಾ!.
"ದುಬೈ"ನಗರಿ ನೋಡಲು ಸುಂದರ ನಗರಿಯಂತೆ ನಿಜವೆ?'
ಹೌದು ದುಬೈ ನಗರ ಸುಂದರವಾಗಿದೆ. ಅಲ್ಲಿಯ ಗಗನ ಚುಂಬಿ ಕಟ್ಟಡಗಳು ನೋಡಲು ಆಕರ್ಷಕವಾಗಿವೆ. ಅಲ್ಲಿ ರಸ್ತೆಗಳಂತು ಕನ್ನಡಿಯ ಹಾಗೆ ಕಾಣುತ್ತವೆ'
ಭಾರತ ಚಂದವೋ ದುಬೈ ಚಂದವೋ?
ನನಗೆ ತಿಳಿದಹಾಗೆ ಭಾರತವೆ ಚಂದ. ಯಾಕಂದರೆ ನಮ್ಮ ದೇಶದಲ್ಲಿ ಸಿಗುವಂತ ನೆಮ್ಮದಿ ದುಬೈನಲ್ಲಿ ಸಿಗುವುದಿಲ್ಲಾ.
-ತೋಟೇಂದ್ರ.ಎಸ್.ಮಾಕಲ್.
-ಪತ್ರಿಕೋದ್ಯಮ ವಿಭಾಗ, ಗುಲ್ಬರ್ಗಾ ವಿ.ವಿ
ವೈದೇಹೀ ಕಾದಂಬರಿ...
ಕಳೆದ ಸಂಚಿಕೆಯಿಂದ...
`ಹೆಣೆ , ನಿನ್ನ ಪ್ರಾಯ ಎಷ್ಟು ? ಅನುಭವ ಎಷ್ಟು ? ನಿನ್ನ ವಯಸ್ಸಿಗೆ ನೀನು ಹೀಗೆ ಆಡುವುದೇ ಸರಿ. ಬೇಗ ಒಂದು ಮದುವೆಯಾಗಿ ಆಚೆ ಕಂಡು ಈಚೆ ಕಾಣುವುದರೊಳಗೆ ಒಂದು ಮಗುವಾಗಲಿ. ಆ ಮಗು ದೊಡ್ಡದಾಗಲಿ. ಆಗ ಗೊತ್ತಾಗುತ್ತದೆ ಇದೆಲ್ಲ ಏನು ಅಂತ. ಇಂತಹ ಮಾಯೆ ಬಿಡಬೇಕು ಎನ್ನುತ್ತಾರೆ. ಮಾಯೆಯನ್ನೇ ಬಿಟ್ಟ ಮೇಲೆ ಪ್ರಪಂಚ ಯಾಕೆ ಇರಬೇಕು ?'
`ನಾನು ಭಾಸ್ಕರನನ್ನು ಹೇಗೆ ಸಾಕಿದೆ ? ನಿಮ್ಮಂತೆಲ್ಲ ಬೇಕಂಬಷ್ಟು ಇದ್ದು ಸಾಕಿದೆನ? ಆ ದೇವರಿಗೂ ಗೊತ್ತಿತ್ತು ನನ್ನ ಕಷ್ಟ. ಅದಕ್ಕೆ ನನಗೆ ಎಷ್ಟು ಹಾಲಿತ್ತು ಗೊತ್ತುಂಟ? ಎರಡು ವರ್ಷದವರೆಗೂ ಎಳೆದಿದ್ದನಲ್ಲ ಅವ! ಸುಮ್ಮನೆ ಊಜಿದ್ದಲ್ಲ. ಅವ ಮರೆತರೆ ಕೂಗಿ ಕರೆದು ಕುಡಿಸುವಷ್ಟು ಹಾಲು ತುಂಬಿರುತ್ತಿತ್ತು. ಈಗಿನವರ ಹಾಗೆ ಬಚ್ಚಟೆ ಮೊಲೆಯಲ್ಲ. ನಿಮ್ಮದೆಲ್ಲಯಂತದ್ದು? ನಾಲ್ಕು ತಿಂಗಳಿಗೇ ಹಾಲಿಲ್ಲ. ಬಾಟಲಿಯಂತೆ, ಡಬ್ಬಿಯಂತೆ. ಇದು ಮಕ್ಕಳನ್ನು ಸಾಕುವ ಚಂದವಾ ?..' ಎಲ್ಲ ಮರೆತು ನಕ್ಕರು ಒಂದು ಕ್ಷಣ.
ರತ್ನನಿಗೂ ನಗು ಬಂತು.ತುಸು ನಾಚಿಗೆಯೂ ಆಯಿತು. ತನ್ನಷ್ಟಕ್ಕೆ ಕೈ ಸೆರಗು ಸರಿ ಮಾಡಿತು. ತಲೆ ಬೋಳಿಸಿಕೊಂಡು ರವಕೆ ಹಾಕದೆ ಬರಿಯ ಕೆಂಪು ಸೀರೆಯಲ್ಲಿ ಕುಳಿತ ಪಾರ್ತಕ್ಕನ ಎದೆ ಸಹ, ಬಾಡಿ ಬತ್ತಿರುವ ಅವಸ್ಥೆಯಲ್ಲಿಯೂ ಹಸಿಯ ಗುರುತಿದ್ದಂತಿತ್ತು. ಫಕ್ಕೆಂತ `ಅಲ್ಲ ಪಾರ್ತಕ್ಕ , ಗಂಡ ಸತ್ತ ಮೇಲೆ ಹೀಗೆ ರವಕೆ ಸಹ ಹಾಕದೆ ಹೇಗೆ ಕಳೆದಿರಿ ನೀವು !' - ಎಂದು ಕೇಳಿದಳು.
`ಆ ವಿಷಯ ಬಿಡು. ಹೇಳಿದರೆ ರಾಮಾಯಣ ಬಿಟ್ಟು ವಾಲ್ಮೀಕಿ ಇದನ್ನೇ ಬರೆಯುತ್ತಿದ್ದ. ನಾ ಏನು ಹೇಳುತ್ತಿದ್ದೆ ? ಭಾಸ್ಕರನಲ್ಲವೇ ? ಮಾಣಿ ಮದುವೆ ಬೇಡ ಮದುವೆ ಬೇಡ ಅಂದದ್ದು ಕಡೆಗೂ ಕೊರಾತಿಯನ್ನು ಮದುವೆಯಾದನಲ್ಲ! ಅವ ಯಾರನ್ನೇ ಮದುವೆಯಾಗಲಿ. ಅಮ್ಮ, ಹೀಗೆ ಹೀಗುಂಟು ಅಂತ, ನಾ ಸಿಟ್ಟು ಮಾಡಿಕೊಂಡಿದ್ದರೂ , ಹೇಳಿ ಕಾಲಿಗೆ ಬಿದ್ದು ಹೋಗುತ್ತಿದ್ದ ನೋಡು; ನಾ ಮಗ ಇಲ್ಲ ಎಂಬ ಸಮಾಧಾನ ಮಾಡಿಕೊಳ್ಳುತ್ತಿದ್ದೆ. ಅವನಿಗೆ ಅಷ್ಟು ಬುದ್ಧಿ ದೇವರು ಕೊಡಲಿಲ್ಲ '.
ಉಗ್ರಾಣ ಕೋಣೆಗೆ ಸಾಮಾನು ಸೇರಿಸಿಡಲೆಂದು ಹೋಗುತ್ತಿದ್ದ ಗೌರಮ್ಮ ಒಂದು ಗಳಿಗೆ ನಿಂತು ನೋಡಿ ` ಪಾರ್ತಕ್ಕನಿಗೆ ಮಾತಾಡಲಿಕ್ಕೊಂದು ಜನ ಗಟ್ಟಿ ಸಿಕ್ಕಿತು ' - ಎಂದು ನಗುತ್ತ ಹೋದರು.
`ಪರಾಧೀನ ಅಲ್ಲ ಎಂದಳು ನಿನ್ನ ಅಮ್ಮ. ಅಪ್ಪಯ್ಯನೂ . ಅದು ಅವರ ದೊಡ್ಡ ಮನಸ್ಸು. ಆದರೆ ಇದು ನನ್ನ ಜಾಗವಾ? ಎಷ್ಟೆಂದರೂ ಒಂದು ಉಪಕಾರ. ನಾಳೆ ನಾನು ಕೈಕಾಲು ಬಿದ್ದು ಮಲಗಿದಲ್ಲೇ ಆದರೆ ಹೇಳು ಉಚ್ಚೆ ಬಾಚಬೇಕು ಗೌರಿಯೇ. ಇದು ಸಮವ ? ಒಂದೊಂದು ಸಲ ಎಣಿಸುತ್ತ ಹೋದರೆ ರಾತ್ರಿ ತಟಕು ನಿದ್ರೆ ಹತ್ತುವುದಿಲ್ಲ ಗೊತ್ತುಂಟ ?
`ಹಾಗೆಂತ ಅವನ ಹೆಂಡತಿ ಒಳ್ಳೆಯದಂತಲ್ಲ. ಬಂದು ಹೋದವರಿಗೆ ಬಹಳ ಉಪಚಾರವಂತೆ. ಅಪ್ಪಯ್ಯನೇ ಹೇಳುತ್ತಿದ್ದರಲ್ಲ.ಅಪ್ಪಯ್ಯನೇನು ಸ್ವಲ್ಪ ಸಲ ಹೋಗಿದ್ದರ ಅವನ ಮನೆಗೆ ? ಅವರು ಅವನ ಮನೆಯಲ್ಲಿಯೇ ಇದ್ದರಲ್ಲ ?!'
`ಹೌದು ಮಾರಾಯ್ತಿ, ಇವ ಅವನ ಮನೆಗೆ ಯಾವ ಕರ್ಮಕ್ಕೆ ಹೋಗಬೇಕು ? ಹಾಗೆ ಹೋಗುವುದು, ಇರುವುದು ನಂಗೆ ಸಮ ಕಾಣುವುದಿಲ್ಲ. ಯಾಕೆ ಹೋಗಬೇಕು ಜನಿವಾರ ಹಾಕಿಕೊಂಡವ. ಗಾಯತ್ರಿ ಹೇಳುವವ ? ಇರಲಿ, ಭಾಸ್ಕರ ಅವನ ಹತ್ತಿರ ಒಂದು ಸಲವಾದರೂ ಅಮ್ಮ ಇದ್ದಾಳಾ ಸತ್ತಳಾ ಎಂದು ವಿಚಾರಿಸಿದ್ದಾನಾ ಕೇಳು. ಹೆತ್ತ ಅಬ್ಬೆಯನ್ನೇ ವಿಚಾರಿಸದವ ಇವ ದೇಶ ಉದ್ಧಾರ ಮಾಡುತ್ತಾನಾ ? ಹೆಂಡತಿ ಒಳ್ಳೆಯದೇ ಇರಲಿ. ಅವನಿಗೆ ಪರಮಾನ್ನವನ್ನೇ ಮಾಡಿ ಬಡಿಸಲಿ. ನಂಗೇನು ? '
`ನಿನ್ನನ್ನು ಕರೆದುಕೊಂಡು ಬರಲಿಕ್ಕೆ ಹೇಳುತ್ತಿದ್ದಳಂತೆ ಅಪ್ಪಯ್ಯನ ಎದುರಿಗೆ ?' - ಎಂದಳು ಸರೋಜ.
`ಹೇಳದೆ ! ಅಡಿಗೆ ಮಾಡಿ ಹಾಕಲಿಕ್ಕೆ ಒಂದು ಜನವಾಯಿತು... ಅವಳು ಹಾಗೆ ಹೇಳಿದರೆ ನನ್ನ ಮಗನೆನ್ನಿಸಿಕೊಂಡವ ಏನಂದ? ಏನಾದರೂ ಅಂದನಾ ? ಅವನ ಬಾಯಿ ಬಿದ್ದು ಹೋಗಲಿಕ್ಕೆ. , ಮುಟ್ಟಿದ ನೀರಿನಲ್ಲಿ ಹುಳವಾಗಲಿಕ್ಕೆ. ಮಾತನಾಡಿದರೆ ಎಲ್ಲಿ ನಿನ್ನ ಅಪ್ಪಯ್ಯ ನನ್ನನ್ನು ಕರೆದುಕೊಂಡು ಬಂದು ಬಿಡುತ್ತಾನೇನೋ ಅಂತ ಹೆದರಿದನೇನೋ...
ಮುಂದುವರಿಯುವುದು...
ಸಾಹಿತ್ಯ
ಮನಸು ಹೃದಯಾಂಗಣದಿ ತೇಲಿ
ಚುಕ್ಕಿ ಚಂದ್ರಮ ಬೆಳಗಿ
ಹಗಲು ಮಾಗಿ ಕಪ್ಪಾಗಿರುವ ಹೊತ್ತು
ನನ್ನ ಮನಸಿನೊಳಗೆ ನಿನ್ನ ಪ್ರತಿಬಿಂಬ
ಮೂಡಿ ಕಲ್ಪನೆಯ ಬೀಜ ಬಿತ್ತು...
ಈ ಕನಸು ಅವಾರ್ಡ್
ಕಲಬುರ್ಗಿಯ ಸಾರ್ವಜನಿಕ ಉದ್ಯಾನವನದಲ್ಲಿ ಓದುಗರ ಹವ್ಯಾಸ ಹೆಚ್ಚಿಸಲು ವಿನೂತನ ಕಲ್ಪನೆಯಲ್ಲಿ 2000ನೇ ಇಸವಿಯಲ್ಲಿ ಬಯಲು ಗ್ರಂಥಾಲಯ ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಈ ಬಯಲು ಗ್ರಂಥಾಲಯ ದೇಶದ ಮೊದಲ, ಜಗತ್ತಿನ ಎರಡನೇ ಗ್ರಂಥಾಲಯ ಎಂಬ ಹೆಗ್ಗಳಿಕೆ ಇದೆ. ಸರಕಾರದ ಸಹಾಯವಿಲ್ಲದೆ ಕಳೆದ 11 ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ.
ಪತ್ರಕರ್ತ ಸುಭಾಷ್ ಬಣಗಾರ್ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ರುಕ್ಮಾಪುರ ಗ್ರಾಮದವರು. ಸುರಪುರದ ಶಂಕ್ಷಪುರ ಶಾಲೆಯಲ್ಲಿ ಪ್ರಾಥಮಿಕ, ಹಾಗೂ ಸರಕಾರಿ ಪ್ರೌಢ ಶಾಲೆಯಲ್ಲಿ ನಂತರ, ಹೈ.ಕ.ಶಿಕ್ಷಣ ಸಂಸ್ಥೆಯ ಶ್ರೀ ಪ್ರಭು ಮಹಾವಿದ್ಯಾಲಯದಲ್ಲಿ ಪಿ.ಯು.ಸಿ. ಮುಗಿಸಿ ಬಿ.ಎ. ಪತ್ರಿಕೊದ್ಯಮ ಪದವಿಯನ್ನು ಬೆಂಗಳೂರಿನ ಸದಾಶಿವನಗರದ ಹೈ.ಕ. ಶಿಕ್ಷಣ ಸಂಸ್ಥೆಯ ಶ್ರೀ ವೀರೇಂದ್ರ ಪಾಟೀಲ್ ಕಾಲೇಜಿನಲ್ಲಿ ಪಡೆದು, ನಂತರ ಎಂ.ಎಸ್ಸಿ. ಸಂವಹನ (ಪತ್ರಿಕೋದ್ಯಮ) ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮುಗಿಸಿದರು.
ಇವರು 1994 ರಲ್ಲಿ ಬೆಂಗಳೂರಿನ ಭಾಷ್ಯಂ ಸರ್ಕಲ್ನಲ್ಲಿ ಕಚೇರಿ ಹೊಂದಿದ 'ಹೊಸ ದಿಗಂತ' ಪತ್ರಿಕೆಯಲ್ಲಿ ಫ್ರೂಪ್ ರೀಡರ್ (ಕರಡು ತಿದ್ದುವವರು) ಆಗಿ ಸೇರಿಕೊಂಡರು. ನಂತರ 1995-96 ರಲ್ಲಿ ಬೆಂಗಳೂರಿನ ದೇವಯ್ಯ ಪಾರ್ಕ್ ಬಳಿ ಆರಂಭಗೊಂಡ 'ಸಂಜೆ ನುಡಿ' ದಿನಪತ್ರಿಕೆಯಲ್ಲಿ ಚಲನಚಿತ್ರ ವರದಿಗಾರರಾಗಿ ಸೇರಿಕೊಂಡರು.
1997-98 ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಆರಂಭವಾದ 'ಉತ್ತರ ಕರ್ನಾಟಕ' ಪತ್ರಿಕೆಯಲ್ಲಿ ಚಲನಚಿತ್ರ, ಅಪರಾಧ, ರಾಜಕೀಯ ವರದಿಗಾರರಾಗಿ, ಉಪಸಂಪಾದಕರಾಗಿ, ಪುಟ ವಿನ್ಯಾಸಕಾರರಾಗಿ ಅಪಾರ ಅನುಭವ ಪಡೆದರು. ಮಂಗಳೂರಿನ 'ಕನ್ನಡ ಜನ ಅಂತರಂಗ' ದಿನಪತ್ರಿಕೆ ಹಾಗೂ 'ಕರಾವಳಿ ಅಲೆ' ಸಂಜೆ ಪತ್ರಿಕೆಗೆ ಚಲನಚಿತ್ರ ವರದಿಗಾರರಾಗಿ ಬೆಂಗಳೂರಿನಿಂದಲೇ ಕಾರ್ಯ ನಿರ್ವಹಿಸಿದರು.
ಈ ಪತ್ರಿಕೆಗಳೇ ಬೆಂಗಳೂರಿನಲ್ಲಿ ಮುದ್ರಣ ಆರಂಭಿಸಿದಾಗ ಅಲ್ಲಿ ಸೇರಿಕೊಂಡರು. ಬೆಳಗಾವಿಯ 'ಕನ್ನಡಮ್ಮ' ದಿನಪತ್ರಿಕೆಗೆ ಚಲನಚಿತ್ರ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮೈಸೂರಿನ 'ಮಹಾನಂದಿ' ಪತ್ರಿಕೆ ಬೆಂಗಳೂರಿನಲ್ಲಿ ಆರಂಭವಾದಾಗ ವರದಿಗಾರರಾಗಿ, ಇದರ ಜೊತೆಗೆ ಪತ್ರಿಕೆಗಳ ವಿತರಕರಾಗಿಯೂ ಕಾರ್ಯ ನಿರ್ವಹಿಸಿದರು.
ಬೆಂಗಳೂರಿನಿಂದ ಹದಿನೈದು ದಿನಕೊಮ್ಮೆ ಪ್ರಕಟವಾಗುತ್ತಿದ್ದ 'ಅಬಕಾರಿ ಆರಕ್ಷಕ', 'ರಾಜಕೀಯ ರಂಗ' ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. 1998 ರಲ್ಲಿ 'ಸಂಯುಕ್ತ ಕರ್ನಾಟಕ' ದಿನಪತ್ರಿಕೆಗೆ ಉಪಸಂಪಾದಕರಾಗಿ ಸೇರಿಕೊಂಡರು. 1999 ರಲ್ಲಿ ಕಲಬುರ್ಗಿ ಕಾರ್ಯಾಲಯಕ್ಕೆ ವರ್ಗವಾಗಿ ಬಂದು ಇಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹದಿನೆಂಟು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇವರು ಅಪಾರ ಅನುಭವ ಹೊಂದಿದ್ದಾರೆ. ಸರಳ ವ್ಯಕ್ತಿತ್ವ ರೂಢಿಸಿಕೊಂಡಿರುವ ಸುಭಾಷ ಬಣಗಾರ್ ಅವರ ಸಮಾಜ ಸೇವೆಗೆ ಹಲವಾರು ಪ್ರಶಸ್ತಿಗಳು ಅವರ ಮುಡಿಗೇರಿವೆ.
ಕೊಡೆಕಲ್ ದಿ.ಕಾಳಪ್ಪ ಮಾಸ್ಟರ್ ಸ್ಮರಣಾರ್ಥ ಪ್ರಶಸ್ತಿ, ಸಗರನಾಡು ಸೇವಾ ಪ್ರಶಸ್ತಿ, ಬೆಂಗಳೂರು ಪತ್ರಕರ್ತರ ವೇದಿಕೆ ವತಿಯಿಂದ ಪ್ರಶಸ್ತಿ ಅಲ್ಲದೆ ಇತ್ತೀಚೆಗೆ ನವೆಂಬರ್ 10 ರಂದು ನೀಡಲಾಗಿರುವ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕರ್ನಾಟಕ ಸೇವಾ ಸಿರಿ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ. ವಿವಿಧ ಸಂಘ, ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಿವೆ.
ಬಯಲು ಗ್ರಂಥಾಲಯ ಸಂಸ್ಥಾಪಕ
ಕಲಬುರ್ಗಿಯ ಸಾರ್ವಜನಿಕ ಉದ್ಯಾನವನದಲ್ಲಿ ಓದುಗರ ಹವ್ಯಾಸ ಹೆಚ್ಚಿಸಲು ವಿನೂತನ ಕಲ್ಪನೆಯಲ್ಲಿ 2000ನೇ ಇಸವಿಯಲ್ಲಿ ಬಯಲು ಗ್ರಂಥಾಲಯ ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಈ ಬಯಲು ಗ್ರಂಥಾಲಯ ದೇಶದ ಮೊದಲ, ಜಗತ್ತಿನ ಎರಡನೇ ಗ್ರಂಥಾಲಯ ಎಂಬ ಹೆಗ್ಗಳಿಕೆ ಇದೆ. ಸರಕಾರದ ಸಹಾಯವಿಲ್ಲದೆ ಕಳೆದ 11 ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ.
ಇವರು ಶೈಕ್ಷಣಿಕ ವಿಷಯಗಳ ಪ್ರಶ್ನೋತ್ತರ ಸರಮಾಲೆಯ "ಈ ಸಂಭಾಷಣೆ" ಪುಸ್ತಕವನ್ನು ಪ್ರಕಟಿಸಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರವನ್ನೇ ಉಸಿರಾಗಿಸಿಕೊಂಡಿರುವ ಇವರು ಹಲವಾರು ಯುವ ಪತ್ರಕರ್ತರನ್ನು ಸಿದ್ಧಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಪ್ರಸ್ತುತ ಕಲಬುರ್ಗಿ ವಿಶ್ವವಿದ್ಯಾಲಯದಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಹಾಗೂ ಕಲಬುರ್ಗಿ ಆವೃತ್ತಿಯ 'ಸಂಯುಕ್ತ ಕರ್ನಾಟಕ' ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ನಮ್ಮ ಜೊತೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
'ಕರ್ನಾಟಕ ಸೇವಾ ಸಿರಿ' ಪ್ರಶಸ್ತಿ ದೊರೆತಿರುವ ತಮಗೆ ಅಭಿನಂದನೆಗಳು. ನಿಮ್ಮ ಅನುಭವ...?
ಸಂತೋಷವಾಗಿದೆ. ಇನ್ನೂ ಹೆಚ್ಚು ಜವಾಬ್ದಾರಿ ಬಂದಂತಾಗಿದೆ. ಇದರಿಂದ ನನಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಾಗೂ ಪತ್ರಿಕೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ರೀತಿಯಲ್ಲಿ ಇನ್ನೂ ಉತ್ತಮ ಕೆಲಸ ಮಾಡಲು ಬೆನ್ನು ತಟ್ಟಿದಂತಾಗಿದೆ.
ಬಯಲು ಗ್ರಂಥಾಲಯ ಸ್ಥಾಪಿಸಿ ಯಶ ಗಳಿಸಿದ್ದೀರಿ..ಇದರ ಹಿಂದಿನ ಉದ್ದೇಶ..?
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ, ಟಿ.ವಿ. ಚಾನಲ್ಗಳು ಬಂದು ಓದುಗರನ್ನು ಕ್ಷೀಣಿಸಿವೆ. ಎಲ್ಲ ವರ್ಗದ, ವಯೋಮಾನದವರಲ್ಲಿ ಓದುವ ಹವ್ಯಾಸ ಹೆಚ್ಚಿಸುವ ಹಿನ್ನಲೆಯಲ್ಲಿ ಈ ಬಯಲು ಗ್ರಂಥಾಲಯ ಸ್ಥಾಪಿಸಲಾಯಿತು. ಸರಕಾರದ ಅನುದಾನವಿಲ್ಲದೇ, ಸ್ವ-ಪ್ರೇರಣೆಯಿಂದ ಹನ್ನೊಂದು ವರ್ಷಗಳಿಂದ ಈ ಬಯಲು ಗ್ರಂಥಾಲಯದ ಸೇವೆ ಸುಗಮವಾಗಿ ನಡೆದಿದೆ. ಪತ್ರಿಕೆಗಳ ಜೊತೆಗೆ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳುವದಕ್ಕಾಗಿ ವಿದ್ಯಾರ್ಥಿಗಳಿಗೆ ಹಾಗೂ ಓದುವ ಆಸಕ್ತಿಯಿರುವ ಜನತೆಗೆ ಈ ಬಯಲು ಗ್ರಂಥಾಲಯ ಅನುಕೂಲವಾಗಿದೆ. ಇಲ್ಲಿ ಅಧ್ಯಯನ ನಡೆಸಿದ ವಿದ್ಯಾರ್ಥಿಗಳು ಹಲವು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇದು ಈ ಗ್ರಂಥಾಲಯದ ಸದುಪಯೋಗ ಎನ್ನಬಹುದು.
ಎಲ್ಲೆಲ್ಲಿ ಬಯಲು ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದೆ?
ಓದುಗರ ಹವ್ಯಾಸ ಹೆಚ್ಚಿಸುವ ಹಿನ್ನೆಲೆಯಲ್ಲಿ ಪತ್ರಕರ್ತರ ಹಾಗೂ ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ಕಲಬುರ್ಗಿ ಸಾರ್ವಜನಿಕ ಉದ್ಯಾನವನದಲ್ಲಿ 2000 ನೇ ಇಸವಿ ನವೆಂಬರ್ ತಿಂಗಳಲ್ಲಿ ಬಯಲು ಗ್ರಂಥಾಲಯ ಸ್ಥಾಪಿಸಲಾಯಿತು. ಇದೇ ಮಾದರಿಯಲ್ಲಿ ಜೇವರ್ಗ, ಚಿತ್ತಾಪುರ, ಕಲಬುರ್ಗಿ, ರಾಯಚೂರು, ಕೊಪ್ಪಳ, ಕೊಡೇಕಲ್, ಕಕ್ಕೇರಾ, ಆಳಂದ, ಬಸವ ಕಲ್ಯಾಣ ಸೇರಿದಂತೆ ರಾಜ್ಯದ ವಿವಿಧೆಡೆ ಸುಮಾರು 15 ಕಡೆ ಬಯಲು ಗ್ರಂಥಾಲಯಗಳನ್ನು ಆಸಕ್ತರು ಸ್ಥಾಪಿಸಿದ್ದಾರೆ.
ಈ ನಿಮ್ಮ ಯಶಸ್ವಿಗೆ ಕಾರಣವೇನು?
ಸತತ ಪ್ರಯತ್ನ, ಸಮಯಕ್ಕೆ ತಕ್ಕ ನಿರ್ಧಾರ, ತಾಳ್ಮೆ ಇವು ಯಶಸ್ವಿಗೆ ಕಾರಣ. ನನ್ನಲಿರುವ ಆತ್ಮವಿಶ್ವಾಸ ಹಾಗೂ ನನ್ನ ಕುಟುಂಬದ, ಸಹೊದ್ಯೋಗಿಗಳ, ಆತ್ಮೀಯರ ಸಂಪೂರ್ಣ ಸಹಕಾರ ನನಗೆ ಸಹಾಯಕಾರಿಯಾಗಿದೆ. ಆತ್ಮವಿಶ್ವಾಸಕ್ಕೆ ಧಕ್ಕೆ ಬರುವಂತೆ ನಡೆದುಕೊಳ್ಳಬಾರದು, ದುಡುಕಿಯೂ ನಿರ್ಧಾರ ತೆಗೆದುಕೊಳ್ಳುವದು ಸರಿಯಲ್ಲ. ಎಲ್ಲರಿಗೂ ಗೌರವಿಸಬೇಕು. ಜಾತ್ಯಾತೀತ ಮನೋಭಾವ ಹೊಂದಿರಬೇಕು. ಅಧಿಕಾರ ದುರುಪಯೋಗ ಪಡೆದುಕೊಳ್ಳಬಾರದು. ಸಂಕುಚಿತ ಮನೋಭಾವ ಇರಬಾರದು. ನಿರಂತರ ಕಲಿಕೆ ಹಾಗೂ ಸತತ ಪ್ರಯುತ್ನ ಯಶಸ್ವಿಗೆ ಅಗತ್ಯವಾಗಿದೆ.
ಪತ್ರಿಕಾ ಕ್ಷೇತ್ರದಲ್ಲಿ ನಿಮ್ಮ ಅನುಭವದ ಬಗ್ಗೆ ಹೇಳಿ?
ಪತ್ರ್ರಿಕಾ ಕ್ಷೇತ್ರಕ್ಕೆ ಬಂದಿರುವದೇ ಒಂದು ಆಕಸ್ಮಿಕ. ನಾನು ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದಾಗ ಲೇಖನಗಳನ್ನು ಬರೆಯಲಾರಂಭಿಸಿದೆ. ಆಗ ಪತ್ರಿಕೆಗಳು ನನಗೆ ಅನೇಕ ಪ್ರೋತ್ಸಾಹ ನೀಡಿ ಬೆನ್ನು ತಟ್ಟಿವೆ. ನಾನು ಕಷ್ಡಪಟ್ಟು ದುಡಿದೆ. ಪತ್ರಿಕೆಗಳ ಬಂಡಲ್ ಕಟ್ಟುವುದು, ವಾಹನಗಳಿಗೆ ಸಾಗಿಸುವುದು, ಅಂಗಡಿಗಳಿಗೆ ಹಾಕುವುದು, ಉಳಿದ ಪ್ರತಿಗಳನ್ನು ವಾಪಸ್ಸು ತರುವುದು ಸೇರಿದಂತೆ ಹಗಲು ರಾತ್ರಿಯನ್ನದೆ ದುಡಿದೆ. ದುಡಿಸಿಕೊಂಡವರು ಸರಿಯಾಗಿ ಸಂಬಳ ನೀಡದಿದ್ದರೂ ಅವರ ಜೊತೆ ಸಂಬಂಧ ಕೆಡಿಸಿಕೊಳ್ಳಲಿಲ್ಲ. ಇವುಗಳ ಜೊತೆಗೆ ವಿಧಾನಸೌಧ, ಚಲನಚಿತ್ರ, ರಾಜಕೀಯ ವರದಿ, ಸಂಪಾದಕೀಯ ವಿಭಾಗದ ಮೇಲುಸ್ತುವಾರಿ ಸೇರಿದಂತೆ ಪತ್ರಿಕೋದ್ಯಮ ಕ್ಷೇತ್ರದ ಎಲ್ಲಾ ಕೆಲಸ ಕಾರ್ಯಗಳ ಅನುಭವ ಇದೆ.
ಅಮರೇಶ ನಾಯಕ, ಜಾಲಹಳ್ಳಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಗುಲಬರ್ಗಾ ವಿಶ್ವವಿದ್ಯಾಲಯ ಗುಲಬರ್ಗಾ
ಸಾಹಿತ್ಯ
ವಸುಧೇಂದ್ರ ಎಂಬ ವಿಶಿಷ್ಟವಾದ ಪ್ರತಿಭೆ ತಮ್ಮ ಸರಳವಾದ ಬರಹದ ಶೈಲಿ, ಭಾವನಾ ಲೋಕದಲ್ಲಿ ಒದುಗರನ್ನು ತೇಲಿಸುವ ಶಕ್ತಿಯ ಆಳವಾದ ಅನುಭವದ ಹೊತ್ತಿಗೆಯನ್ನು ಹೊತ್ತಗೆಯಲ್ಲಿ ಅರಳಿಸುವ ಕಥಾಗರ.
ಆದರೆ ಕಥೆಗಷ್ಟೆ ಸೀಮಿತಗೊಳ್ಳದ ಕಾದಂಬರಿಕಾರ, ಲಲಿತ ಪ್ರಬಂಧಕಾರ, ಒಳ್ಳೆಯ ಮಾತುಗಾರ ಮೇಲಾಗಿ ಸಹೃದಯರ ಗೆಳೆಯ . ದೈನಂದಿನ ಜೀವನದ ಇರಸು- ಮುರುಸು, ಮನುಷ್ಯ ಸಂಬಂಧಗಳ ತಾಳಮೇಳ, ಹಳ್ಳಿಯ ಜೀವನ, ಜನರ ಮುಗ್ದತೆ ಇಂತಹ ಹಲವಾರು ಸಣ್ಣ ಪುಟ್ಟ ವಿಚಾರಗಳೂ ಇವರ ಕೃತಿಯಲ್ಲಿ ಮುಖ್ಯವಾಗುತ್ತವೆ.
ಅಷ್ಟರ ಮಟ್ಟಿಗೆ ಅವು ಇವರನ್ನ ಕಾಡಿವೆ ಎಂದರೆ ತಪ್ಪಾಗುವುದಿಲ್ಲ. ಅಂತೆಯೇ ಸರ್ವೇ ಸಾಮಾನ್ಯ ವಿಚಾರಗಳನ್ನು ರಸವತ್ತಾಗಿ, ವಿಭಿನ್ನವಾಗಿ ತಿಳಿಸಿಕೊಡುವ ಪ್ರಯತ್ನ ಇವರ ಎಲ್ಲಾ ಸಾಹಿತ್ಯ ಸೃಷ್ಠಿಗಳಲ್ಲಿ ಕಾಣ ಬಹುದಾದ ಒಂದು ಪ್ರಧಾನವಾದ ಅಂಶ. ಹೀಗೆ ವಸುದೇಂದ್ರರು ಮೂಲತಃ ಸಾಫ್ಟವೇರ್ ಉದ್ಯಮಿಯಾದರೂ ಪ್ರವೃತ್ತಿಯಿಂದ ಪಕ್ಕಾ ಲೇಖಕ.
ಕೆಲಸದ ಒತ್ತಡದ ನಡುವೆಯೂ ಸಿಕ್ಕ ಸಮಯದಲ್ಲೇ ಸಾಹಿತ್ಯ ರಚನಾಕ್ರಿಯೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಇವರು ಈಗಂತೂ ತಮ್ಮ ಸಮಯವನ್ನು ಸಾಹಿತ್ಯಕ್ಕಾಗಿಯೇ ಮುಡಿಪಾಗಿಟ್ಟಿದ್ದಾರೆ. ಯಾಕೆಂದರೆ ತಮ್ಮ ಸಾಫ್ಟವೇರ್ ಕೆಲಸದಿಂದ ಸ್ವಲ್ಪ ಕಾಲದವರೆಗೆ ದೂರ ಬಂದಿದ್ದಾರೆ.
ಕುಟುಂಬದಲ್ಲಿ ಯಾವುದೇ ಸಾಹಿತ್ಯಿಕ ವಾತಾವರಣದಿಂದ ಹಿನ್ನಲೆಯಿಲ್ಲದಿದ್ದರೂ ಬಾಲ್ಯದಿಂದ ಇಂದಿನವರೆಗಿನ ಜೀವನಾನುಭವ ಮೇಲಾಗಿ ಅವರ ತಾಯಿ ದಿನವೂ ಹೇಳುತ್ತಿದ್ದ ಕಥೆಗಳು ಅವರನ್ನು ಕಥೆ, ಪ್ರಬಂಧಗಳನ್ನು ರಚಿಸುವಂತೆ ಪ್ರೇರೇಪಿಸಿತು.
ಈ ಹೊತ್ತಿಗೆ ಅತ್ಯಂತ ಜನಪ್ರಿಯ ಕಥೆಗಾರರಲ್ಲಿ ಒಬ್ಬರಾದ ವಸುಧೇಂದ್ರರು ತಮ್ಮ ಸರಳ ಉತ್ತರ ಕರ್ನಾಟಕದ ಗ್ರಾಮೀಣ ಭಾಷೆಯ ಪ್ರಬಲವಾದ ಬಳಕೆಯ ಜೊತೆಗೆ ಓದುಗರ ಭಾವಾಲೋಕವನ್ನು ತಟ್ಟುವ, ಓದುಗರು ಭಾವಾಲೋಕದಲ್ಲಿ ವಿಹರಿಸುವಂತೆ ಮಾಡಿವ ವಿಶೇಷ ಶಕ್ತಿಯಿದೆ. ಅದೇ ಕಾರಣದಿಂದಲೋ ಏನೋ ಅಥವಾ ತಾಯಿ ಮಗನ ಸಂಬಂಧವನ್ನು ಸೂಕ್ಷ್ಮವಾಗಿ ವಿವೇಚಿಸಿದ್ದದರ ಕಾರಣದಿಂದಲೂ ಇರಬಹುದು "ನಮ್ಮಮ್ಮ ಅಂದ್ರೆ ನನಗಿಷ್ಟ" ಎನ್ನುವ ಪ್ರಬಂಧ ಸಂಕಲನವು ಹತ್ತನೇ ಮುದ್ರಣಕ್ಕೆ ತಯಾರಾಗಿ ನಿಂತಿದೆ. ಇದೇ ರೀತಿಯಲ್ಲಿ ಇವರ ಕೃತಿಗಳನ್ನು ಬಿಸಿಬಿಸಿ ಕಜ್ಜಾಯದಂತೆ ಓದುಗರು ಸ್ವೀಕರಿಸಿದ್ದಾರೆ.
ಅಂದಹಾಗೆ ವಸುಧೇಂದ್ರ ಚಂದ್ರ ಅವರು ಮಾತಿಗೆ ಸಿಕ್ಕಿದ್ದು ಈ ಬಾರಿಯ ಆಳ್ವಾಸ್ ನುಡಿಸಿರಿಯಲ್ಲಿ. ಅವರು ಅಲ್ಲಿ "ಕಥಾಸಮಯ" ಕಾರ್ಯಕ್ರಮದಲ್ಲಿ ತಮ್ಮ ಕಥೆಯನ್ನು ವಾಚಿಸಲು ಬಂದಿದ್ದರು. ಹಾಗೆಯೇ ನನಗೆ ಮಾತಿಗೆ ಸಿಕ್ಕಿದ್ದು. ನಾನು ಅವರ ಸುಮಾರು ಒಂದು ಘಂಟೆಗಳ ಅವಧಿಯನ್ನು ತಿಂದದ್ದು ಇವೆಲ್ಲ ಈ ಸಂದರ್ಶನ ಸ್ವರೂಪದ ಲೇಖನಕ್ಕೆ ಸಾಕ್ಷಿಯಾಯಿತು.
ಸಣ್ಣ ಪ್ರಶ್ನೆಗಳಿಂದ ಆರಂಭವಾದ ಸಂವಾದದಲ್ಲಿ ಘಂಟೆ ಹೋದದ್ದೇ ತಿಳಿಯಲ್ಲ. ಆಪ್ತತತೆಯೂ ಗಟ್ಟಿಗೊಳ್ಳುತ್ತಾ ಹೋದದ್ದೂ ಗೋಚರವಾಗಲಿಲ್ಲ. ಅದಕ್ಕೆಲ್ಲಾ ಒಂದು ವೇದಿಕೆ ಕಲ್ಪಿಸಿಕೊಟ್ಟವರು ಮತ್ತೊಬ್ಬ ಕಥೆಗಾರ-ಕಾದಂಬರಿಕಾರ ಅನುಬೆಳ್ಳೆ ನಾಮಾಂಕಿತ ರಾಘವೇಂದ್ರ ಬಿ. ರಾವ್.
ವಸುದೇಂದ್ರರು ಸಾಹಿತ್ಯ ರಚಿಸಲು ಪ್ರೇರಣೆಯಾದ, ಪ್ರಭಾವ ಬೀರಿದ ಅಂಶಗಳು ಹೀಗಿವೆ; ಬಾಲ್ಯದಿಂಲೂ ತಾಯಿ ಹೇಳುತ್ತಿದ್ದ ಕಥೆಗಳು, ಬದುಕಿನ ಅನುಭವಗಳು, ಹೆಚ್ಚು ಹೆಚ್ಚಾಗಿ ನೋಡಿದ ಪಾಶ್ಚಾತ್ಯ ಅಥವಾ ಆಂಗ್ಲ ಸಿನೆಮಾಗಳು- ಹೀಗೆ ಅಂತಹ ಸಿನೆಮಾಗಳನ್ನು ನೋಡುವುದರಿಂದ ಹೊಸತನ, ಹೊಸಹೊಳಪು, ಹೊಸ ನೋಟಗಳು ಬೀರಲು ಸಾಧ್ಯ ಎಂದೇ ಅವರು ನಂಬಿದ್ದಾರೆ.
ಹಾಗೂ ಅದೇ ಸಲಹೆಯನ್ನು ಇತರರಿಗೂ ನೀಡುತ್ತಾರೆ. ಅದೇ ರೀತಿ ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಹಾಗೂ ಶಿವರಾಮ ಕಾರಂತರು ಅವರನ್ನು ಬಹಳಷ್ಟು ಪ್ರಭಾವಿಸಿದ್ದಾರೆ ಎನ್ನುತ್ತಾರೆ. ಕುವೆಂಪುರವರ ಕಲಾತ್ಮಕತೆ, ಮಾಸ್ತಿಯವರ ಧೈರ್ಯ, ಕಾರಂತರ ಅನುಭವಗಳನ್ನು ಓದಿದ ಇವರನ್ನೂ ಸಾಹಿತ್ಯ ರಚಿಸುವಂತೆ ಪ್ರೇರೇಪಿಸಿತು. ಬದುಕಿನ ಬಗೆಗಿನ ಪ್ರೀತಿ, ಕಾಡುವ ಮನುಷ್ಯ ಮನುಷ್ಯ ಸಂಬಂಧಗಳು ಇವರನ್ನು ಸದಾ ಕಾಡುವುದಿದೆಯಂತೆ. ಪರಿಸರ ಯಾವುದಾದರೂ ಸರಿ ಅಲ್ಲಿ ವಾಸಿಸುವ ಜನರೇ ಮುಖ್ಯರೆನಿಸುತ್ತಾರೆ ಅನ್ನುತ್ತಾರೆ.
ಇನ್ನು ಇವರ ಕೃತಿಗಳಲ್ಲಿ ಸಾಮಾನ್ಯರಂತಹ ಸಾಮಾನ್ಯರೂ ಅಂದರೆ ತೀರಾ ಕಡೆಗಣಿಸಲ್ಪಟ್ಟವರೂ ಕೂಡಾ ಮುಖ್ಯರಾಗುತ್ತಾರಲ್ಲ ಎಂಬ ಪ್ರಶ್ನೆಗೆ ಅವರ ಉತ್ತರ ಹೀಗಿತ್ತು - ಲೇಖಕನಿಗೆ 'ಸೂಕ್ಷ್ಮತೆ' ಇರಬೇಕು ಮತ್ತು ಮಕ್ಕಳ ರೀತಿಯಲ್ಲಿ ಬದುಕಬೇಕು ಮತ್ತು ಅಹಂಭಾವವನ್ನು ತೊರೆಯಬೇಕು ಎನ್ನುತ್ತಾರೆ.
ಇವರಲ್ಲಿ ಹುಟ್ಟುವ ಕಥೆ, ಪ್ರಬಂಧ, ಕಾದಂಬರಿಗಳ ವಸ್ತು ಬಹಳ ಹಿಂದಿನಿಂದಲೇ ಮನಸ್ಸಿನಲ್ಲಿ ಕಾಡುತ್ತಿರುತ್ತದೆ. ಅಮೂರ್ತ ರೂಪದಲ್ಲಿ ಬೆಳೆಯುತ್ತಾ ಸಾಗುತ್ತಿರುತ್ತದೆ. ಹೀಗೆ ಮನಸ್ಸಿನಲ್ಲಿ ಮೊಳಕೆಯೊಡೆಯುವ ಚಿಗುರು ಹದವಾಗುತ್ತಾ, ಮಾಗುತ್ತಾ ಸಾಗಿ ಯಾವುದೋ ಒಂದು ಸಂದರ್ಭದಲ್ಲಿ ಮೂರ್ತ ರೂಪಕ್ಕೆ ಬರುತ್ತದೆ ಎನ್ನುತ್ತಾರೆ. ಹಾಗೆಯೇ ಇವರು ಪೆನ್ನು-ಪೇಪರನ್ನು ಬಳಸಿ ಸಾಹಿತ್ಯ ರಚಿಸಿದ್ದು ಬಹಳ ಕಡಿಮೆ. ಇವರದ್ದೇನಿದ್ದರೂ ನೇರವಾಗಿ ಗಣಕಯಂತ್ರದಲ್ಲೇ, ಅಂದರೆ ಆ ಮೂಲಕ ಚಿಂತನೆಯ ಬದಲಾವಣೆಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದು ಎಂಬುದೇ ಆಗಿದೆ.
ವರ್ತಮಾನಕ್ಕೆ ಸಂವಾದಿಯಾಗಿ ಸಾಹಿತ್ಯ ರಚಿಸಬೇಕು ಎನ್ನುವ ಇವರು ಇತಿಹಾಸ ಉಳಿಸುವುದರಲ್ಲಿ ನಂಬಿಕೆಯನ್ನು ಹೊಂದಿಲ್ಲ, ತಮ್ಮ ಸಾಹಿತ್ಯದ ಮೂಲಕ ಓದುಗರನ್ನು ರಂಜಿಸುವುದಷ್ಟೇ ಅವರ ಉದ್ದೇಶವಲ್ಲ. ಹೊಸತನ್ನು ಹೇಳುವುದರ ಮೂಲಕ ಸಾರ್ವಕಾಲಿಕ ಮೌಲ್ಯಗಳನ್ನು ಪ್ರತಿಪಾದಿಸಬೇಕು ಎನ್ನುತ್ತಾರೆ. ಹಾಗೆಯೇ ಬರವಣಿಯಲ್ಲಿ ಸಂದರ್ಭಕ್ಕನುಸಾರವಾದ ಅಗತ್ಯವಾದ ಲಾಲಿತ್ಯ, ಅನುಭವ ಎಲ್ಲ ಬೇಕು ಎನ್ನುತ್ತಾರೆ. ಆದರೆ ಅದರ ಹೆಸರಿಲ್ಲಿ ಲಾಲಿತ್ಯದ ಅತಿಯಾದ ಹೇರಿಕೆ ಅನುಭವಗಳ ಅನಗತ್ಯ ತುರುಕುವಿಕೆಯಿಂದ ಕೃತಿಯು ಜಡ್ಡು ಹಿಡಿಯುತ್ತದೆ ಎನ್ನುತ್ತ ಮುಗ್ದತೆಯ ನಗುವನ್ನು ಬೀರುತ್ತಾರೆ.
ಜಸಾಮರಸ್ಯದಿಂದ ಸಂಘರ್ಷವನ್ನು ದೂರ ಮಾಡಬೇಕು ಎನ್ನುತ್ತಾರೆ. ಇನ್ನು ಅವರ ಕೃತಿಗಳ ಬಗ್ಗೆ ಮಾತನಾಡುತ್ತಾ ಅವರಿಗೆ ನಿರೂಪಣೆಯ ತಂತ್ರಗಾರಿಕೆಯಲ್ಲಿ ಆಸಕ್ತಿಯೂ ಇಲ್ಲ ಮತ್ತು ನಂಬಿಕೆಯೂ ಇಲ್ಲ ಎನ್ನುತ್ತಾರೆ. ಅನಿಸಿದ್ದನ್ನು ಬರೆಯಿತ್ತಾ ಹೋಗಬೇಕು ಆಗಲೇ ಸಾಹಿತ್ಯ ಹೆಚ್ಚು ಆಪ್ತವಾಗುತ್ತದೆ ಎನ್ನುತ್ತಾರೆ ರಸಾನುಭವಿ ಕಥೆಗಾರರಾದ ವಸುದೇಂದ್ರರು.
ಕಥೆಗಳು ಬೆಳೆದು ಬಂದ ಪರಿಸರದಲ್ಲೇ ಹುಟ್ಟುತ್ತದೆ ಎನ್ನುತ್ತ 'ಪುಸ್ತಕ ಮಾರಾಟದ ಸೊಗಡಾಗಬಾರದು' ಎಂಬ ಎಚ್ಚರಿಕೆಯನ್ನು ನೀಡುತ್ತಾರೆ. ಕನ್ನಡದಲ್ಲಿ ಉತ್ತಮವಾದ ಹೊಸ ಜಾಯಮಾನದ ನವೀನ ಶೈಲಿಯ ಹಲವಾರು ಉತ್ತಮ ಬರಹಗಾರರು ಬರೆಯುತ್ತಾರೆ. ಅದು ಒಳ್ಳೆಯ ಬೆಳವಣಿಗೆ ಆದರೆ ಮುದ್ರಣ ಸಂಸ್ಥೆಗಳು ಯತೇಚ್ಚವಾಗಿ ಪುಸ್ತಗಳನ್ನು ಪ್ರಕಟಿಸುವ ಭರಾಟೆಯಲ್ಲಿ ಉತ್ತಮ ಗದ್ಯ ಕೃತಿಗಳು ಹೊರಹೊಮ್ಮುತ್ತಿಲ್ಲವಲ್ಲ? ಎಂಬ ಪ್ರಶ್ನೆಗೆ ಅವರು ಹೇಳುವ ಉತ್ತರ ಬಹಳ ಗಂಭೀರವಾದದ್ದು ಮತ್ತು ಆಲೋಚನಾರ್ಹವಾದದು - "ಸರಕಾರಗಳು ಮೊದಲು ಪುಸ್ತಕಗಳನ್ನು ಕೊಂಡುಕೊಳ್ಳುವುದನ್ನು ತಾತ್ಕಾಲಿಕವಾಗಿಯಾದರೂ ನಿಲ್ಲಿಸಬೇಕು" ಆಗಲೇ ಗಂಭೀರವಾದ ಗದ್ಯ ಉದಯಿಸಲು ಸಾಧ್ಯ ಎನ್ನುತ್ತಾರೆ.
ಇನ್ನು ನಮ್ಮ ಶಿಕ್ಷಣ ವ್ಯವಸ್ಥೆಯ ಬಗ್ಗೆ ಸ್ವಲ್ಪ ಬೇಸರದಲ್ಲಿಯೇ ಪ್ರಾಥಮಿಕ ಹಂತದಿಂದಲೇ ಸಾಹಿತ್ಯದ ಪ್ರೀತಿಯನ್ನು ಬೆಳೆಸಬೇಕು, ಸಾಹಿತ್ಯದಿಂದ ಶಿಕ್ಷಣವನ್ನು ಕಲಿಸಬೇಕು ಎನ್ನುತ್ತಾರೆ. ಅಂತೆಯೇ ಪಾಶ್ಚಾತ್ಯರು ಹೆಚ್ಚು ಹೆಚ್ಚು ಸಾಹಿತ್ಯವನ್ನು ಓದುತ್ತಾರೆ, ಅಲ್ಲಿನ ಸರಕಾರ ಆ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಕೈಗೊಳ್ಳುತ್ತವೆ, ಗ್ರಂಥಾಲಯಗಳು ಅದೇ ಕೆಲಸವನ್ನು ಮಾಡುತ್ತವೆ. ಇಲ್ಲೂ (ನಮ್ಮ ದೇಶದಲ್ಲೂ) ಅಂತಹದ್ದೇ ಹಲವಾರು ಬದಲಾವಣೆಗಳನ್ನು ಸಾಧ್ಯಾವಾಗಿಸಬೇಕು ಎಂಬುದನ್ನು ಸ್ಪಷ್ಟಪಡಿಸುತ್ತಾರೆ.
ಜಾಗತೀಕರಣದ ಈ ಸಂದರ್ಭವನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕೆಂಬುದು ಅವರ ಅಭಿಪ್ರಾಯ. ಹಾಗೆಯೇ ಮುಂದಿನ ತಲೆ ಮಾರಿನ ಬರಹಗಾರರಿಗೆ ಏನಾದರೂ ಸಲಹೆ ಸೂಚನೆಗಳಿವೆಯಾ? ಎಂದು ಕೇಳೆದರೆ ನಾನು ಹೊಸ ತಲೆಮಾರಿನವನೇ, ನನಗೂ ಹೆಚ್ಚೇನು ವಯಸ್ಸಾಗಿಲ್ಲ ಎನ್ನುತ್ತಾ ಮುಗ್ದತೆಯ ಮುಕ್ತ ನಗುವನ್ನು ಬೀರುತ್ತಾರೆ.
ಇವರ ಬಗ್ಗೆ ಇನ್ನೊಂದು ಸ್ವಾರಸ್ಯಕರ ಸಂಗತಿಯೊಂದನ್ನು ತಿಳಿಸಬೇಕು. ಇವರು ಬರಹವನ್ನು ಆರಂಭಿಸಿದಾಗ ಇಂತಹ ಬರಹಗಳನ್ನು ಯಾರು ಪ್ರಕಟಿಸುತ್ತಾರೆ ಹೋಗ್ರಿ? ಎಂದವರೇ ಹೆಚ್ಚು. ಆಗಲೇ ಹುಟ್ಟಿಕೊಂಡದ್ದಿ "ಛಂದ ಪ್ರಕಾಶನ". ಈ ಹೊತ್ತಿನಲ್ಲಿ ಒಂದು ಉತ್ತಮ ಪ್ರಕಾಶನ ಸಂಸ್ಥೆಯೂ ಹೌದು. ಹಾಗೆಯೇ ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ, ಸ್ಪರ್ಧೆ ನಡಿಸಿ ಆಯ್ಕೆಯಾದ ಪುಸ್ತಕವನ್ನು "ಛಂದ ಪ್ರಕಾಶನದ" ಮೂಲಕವೇ ಪ್ರಕಟಿಸುತ್ತಾರೆ. ಛಂದ ಪ್ರಕಾಶನವು ಓದುಗರನ್ನು- ಓದನ್ನು ಪ್ರೋತ್ಸಾಹಿಸುವ, ಬೆಳೆಸುವ ಉದ್ದೇಶದಿಂದ ಒಂದು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಅದೆಂದರೆ ಈ ಪ್ರಕಾಶನದ ಪುಸ್ತಕ ಬೇಕೆಂದರೆ ಛಂದ ಪ್ರಕಾಶನದ ಕಛೇರಿಗೆ ಕರೆ ಮಾಡಿದರಾಯ್ತು, ಅವರೇ ಬೇಕಾದ ಪುಸ್ತಕವನ್ನು ಮನೆಬಾಗಿಲಿನ ತನಕವೂ ತಲುಪಿಸುತ್ತಾರೆ. ಗಾಬರಿಬೇಕಿಲ್ಲ ನೀವು ಅವರಿಗೆ ಪಾವತಿಸಬೇಕಾದದ್ದು ಪುಸ್ತಕದ ಶುಲ್ಕ ಅಷ್ಟೆ. ಅಂದರೆ ಸಾರಿಗೆಯ ವೆಚ್ಚವಿಲ್ಲ.
ಅಂದ ಹಾಗೆ ಅವರು ಮೊದಲ ಕಥೆ ಬರೆದದ್ದು ಒಂಭತ್ತನೇ ತರಗತಿಯಲ್ಲಿ ಅದು ಪ್ರಕಟವೂ ಆಗಿತ್ತು. ಆದರೆ ಆ ಕಥೆ ನಿಮಗ್ಯಾರಿಗೂ, ಎಲ್ಲೂ ಸಿಗೊಲ್ಲಾ ಕಣೋ ಅನ್ನುತ್ತಾರೆ. ಹೀಗೆಯೇ ಎಲ್ಲರೂ ಹೆಚ್ಚು ಹೆಚ್ಚು ಓದಬೇಕು. ಏನೇ ಬರೆಯಬೇಕಾದರೂ ಜೀವನದಲ್ಲಿ ಮಾಡಬೇಕಾದ್ರೂ ಒಂದು ಸುಂದರವಾದ ಛಂದ ಲಯ ಇರಬೇಕು ಎನ್ನುತ್ತಾರೆ. ಛಂದ ಎಂದರೆ ಪ್ರೀತಿ ಎನ್ನುವ ಅರ್ಥವೇ ಹೊರತು ಬೇರೇನಲ್ಲ ಎಂದು ನಗುತ್ತಾರೆ. ಮತ್ತು ನಿರ್ಲಿಪ್ತತೆಯ, ನಿರಾಳ ಭಾವವನ್ನು ತಾಳುತ್ತಾರೆ. ಈ ಎಲ್ಲಾ ಆಪ್ತತೆ ಮತ್ತು ಬಹಳ ಸ್ಪಷ್ಟವಾದ ಚಿಂತನಾಶೀಲ ಆಲೋಚನೆಗಳಿಂದ ಬಹಳ ಮುಖ್ಯರೆನಿಸುತ್ತಾರೆ.
ಒಟ್ಟಾರೆಯಾಗಿ ಈ ಕಾಲಘಟ್ಟದಲ್ಲಿ ಪ್ರಮುಖವಾಗಿ ವಿಭಿನ್ನ ಶೈಲಿಯಲ್ಲೇ ಬರೆದು ಓದುಗರನ್ನು ಹತ್ತಿರದಿಂದ ಆತ್ಮೀಯವಾಗಿ ತಲುಪಿರುವ ವಸುಧೇಂದ್ರರು ನವನವೀನತೆಯನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದಾರೆ. ಅಷ್ಟೇ ಜನರನ್ನು ತಲುಪಿದ್ದಾರೆ. ಅವರ ಕೃತಿಯ ಬಗ್ಗೆ ಓದುಗರು ಹಂಚಿಕೊಳ್ಳುವ ಭಾವನೆಗಳು ಬಹಳ ಇಷ್ಟವಾಗುತ್ತವೆ ಎನ್ನುತ್ತಾರೆ. ಈಗಾಗಲೇ ಅವರ ಹಲವು ಕೃತಿಗಳು ರಂಗ ರೂಪದಲ್ಲೂ ಪ್ರದರ್ಶಿತವಾಗಿವೆ. ಅದೂ ಇವರಿಗೆ ಮತ್ತಷ್ಟು ಯಶಸ್ಸನ್ನು ದೊರಕಿಸಿದೆ. ಈ ಬಗ್ಗೆ ಅವರಿಗೆ ಸಂತೋಷವಿದೆ. ಈಗ ಒಂದು ಚಲನಚಿತ್ರಕ್ಕೆ ಸ್ಕ್ರಿಪ್ಟ್ ಕೂಡಾ ತಯಾರಿಸುವ ಪ್ರಕ್ರಿಯೆಯಲ್ಲಿದ್ದಾರೆ. ಮತ್ತು ಅವರ ಮನಸ್ಸು ಮಾತ್ರ ಕಥೆ ಕಟ್ಟುವತ್ತ ಚಿಂತಿಸುತ್ತಿದೆ.
ಶ್ರೇಯಾಂಕ ರಾನಡೆ
ಎಂ.ಎ ಕನ್ನಡ ವಿದ್ಯಾರ್ಥಿ
ಮಂಗಳೂರು ವಿ.ವಿ
ರಾಜ್ಯ - ರಾಷ್ಟ್ರವೇಣೂರು: ಏಳೂರು ಏನೂರಾಗಿ ಇದೀಗ ವೇಣೂರಾಯಿತು...ಇದು ವೇಣೂರ ಹೆಸರಿನ ಹಿಂದಿರುವ ಇತಿಹಾಸ.ಫಲ್ಗುಣೀ ನದೀ ದಂಡೆಯಲ್ಲಿ ಲಭಿಸಿದ ಶಿಲಾ ಲೇಖವೊಂದು ವೇಣೂರನ್ನು `ಏನೂರು' ಎಂದು ಕರೆದ ಬಗ್ಗೆ ಉಲ್ಲೇಖಿಸಲ್ಪಟ್ಟಿದೆ. ಏಳು ಊರುಗಳು ಕರಗಿ ಹೋಗಿ `ಏನೂರು' ಆಯಿತು.ಮುಂದೆ ವೇಣೂರು ಎಂದು ಕರೆಯಲ್ಪಟ್ಟಿತು ಎಂಬುದು ಇದರ ಹಿಂದಿರುವ ಕಥೆ.ವೇಣೂರು ಎಂದು ಕರೆಯಲ್ಪಡುವ ಈ ಊರಿನಲ್ಲಿ 390ವರುಷಗಳ ಹಿಂದೆ 770 ಜೈನ ಕುಟುಂಬಗಳು ವಾಸಿಸುತ್ತಿದ್ದವು ಎಂಬ ಮಾಹಿತಿ `ಜೈನಾಚಾರ' ಎಂಬ ಗ್ರಂಥದಲ್ಲಿ ಉಲ್ಲೇಖಿಸಲ್ಪಟ್ಟಿದೆ.ಆ ಸಂದರ್ಭದಲ್ಲಿ ವೇಣೂರು ಬೃಹತ್ ವ್ಯಾಪಾರ ಕೇಂದ್ರವಾಗಿಯೇ ಗುರುತಿಸಲ್ಪಟ್ಟಿತು. ಸೆಟ್ಟಿಗಾರರು, ಯೆಳಮೆಗಳು, ಹಲರು ಮೊದಲಾದ ಹೆಸರಿನಿಂದ ಕರೆಯಲ್ಪಡುತ್ತಿದ್ದ ವ್ಯಾಪಾರಿ ಸಂಘಗಳು ವೇಣೂರಿನಲ್ಲಿ ವ್ಯಾಪಾರ ವ್ಯವಹಾರ ನಡೆಸುತ್ತಿದ್ದವು.
ದಿ.ಲೋಕನಾಥ ಶಾಸ್ತ್ರಿಗಳ ಕೃತಿಯನ್ನು ಅವಲೋಕಿಸಿದರೆ ಅಲ್ಲೂ ವೇಣೂರಿನ ಉಲ್ಲೇಖ ಕಂಡು ಬರುತ್ತದೆ. 1965ರ ಸುಮಾರಿಗೆ ಈ ವೇಣೂರಿನ ಜನಸಂಖ್ಯೆ 300ರಷ್ಟಿದ್ದರಂತೆ.ಈ ಪೈಕಿ ಶೇಕಡಾ ಐವತ್ತರಷ್ಟು ಅಕ್ಷರಸ್ಥರೆಂಬುದು ಗಮನಾರ್ಹ. 1763.60 ಹೆಕ್ಟೇರ್ ವಿಸ್ತೀರ್ಣ ಹೊಂದಿರುವ ವೇಣೂರಿನಲ್ಲಿ ಪ್ರಸ್ತುತ ಹಿಂದೂ,ಜೈನ, ಕ್ರೈಸ್ತ, ಮುಸಲ್ಮಾನ ಹೀಗೆ ವಿವಿಧ ಜಾತಿ - ಧರ್ಮ - ಪಂಗಡದ ಜನ ಬಾಳ್ವಿಕೆ ನಡೆಸುತ್ತಿದ್ದಾರೆ. ಸಾಮರಸ್ಯದ ನಾಡು ಎಂಬ ಕೀರ್ತಿ ಈ ವೇಣೂರಿಗೆ ಇದೆ.
ವೇಣೂರನ್ನು ಮೇಲ್ನೋಟಕ್ಕೆ ಮೂರು ವಿಭಾಗಗಳಾಗಿ ಔದ್ಯಮಿಕ ಹಿನ್ನಲೆಯಿಂದ ವಿಂಗಡಿಸಬಹುದು. ವೇಣೂರು ಕೆಳಗಿನ ಪೇಟೆ, ವೇಣೂರು ಸೇತುವೆಯ ಪಕ್ಕದ ಪೇಟೆ (ಮಧ್ಯ ಪೇಟೆ) , ವೇಣೂರು ಮೇಲಿನ ಪೇಟೆ. ಈ ಮೇಲಿನ ಪೇಟೆ ಇರುವುದು ಬಾಹುಬಲಿ ಬೆಟ್ಟದ ಸುತ್ತಮುತ್ತಲು. ಇಲ್ಲೇ ಸನಿಹದಲ್ಲಿ ಇತರ ಬಸದಿಗಳು; ಮಹಾಲಿಂಗೇಶ್ವರ ದೇವಸ್ಥಾನ, ಬ್ಯಾಂಕ್, ಪ್ರಿಂಟಿಂಗ್ ಪ್ರೆಸ್,ಫೋಟೋ ಸ್ಟುಡಿಯೋ,ಪೋಸ್ಟ್ ಆಫೀಸ್, ಪೆಟ್ರೋಲ್ ಬಂಕ್, ಸಣ್ಣ ಪುಟ್ಟ ರಿಪೇರಿ ಅಂಗಡಿಗಳು, ಜಿನಸಿ ಅಂಗಡಿಗಳು , ವೆಲ್ಡಿಂಗ್ ಶಾಪ್, ಹೊಟೇಲ್ ಉದ್ಯಮಗಳು ಹೀಗೆ ಕಾಣಸಿಗುತ್ತವೆ. ಪುಟ್ಟ ಪೇಟೆ. ಪೇಟೆ ಮಧ್ಯದಲ್ಲೇ ಬೆಳ್ತಂಗಡಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಹಾದು ಹೋಗುತ್ತದೆ.
ಮಧ್ಯಪೇಟೆಯಲ್ಲಿ ಮೆಡಿಕಲ್ ಶಾಪ್, ಪುಟ್ಟ ಆಸ್ಪತ್ರೆ, ದಿನಸಿ ಅಂಗಡಿ, ಹೊಟೇಲ್, ಫೋಟೋ ಸ್ಟುಡಿಯೋ, ಇತರೆ ವ್ಯವಹಾರ, ಬ್ಯಾಂಕ್ ಉದ್ದಿಮೆ, ಸರ್ಕಾರಿ ಆಸ್ಪತ್ರೆ, ಕಾಲೇಜು, ಶಾಲೆ ಹೀಗೆ ವೈವಿಧ್ಯಮಯ ಅಂಶಗಳನ್ನು ಗಮನಿಸಬಹುದು. ಇಲ್ಲೇ ಅಯ್ಯಪ್ಪ ಸ್ವಾಮಿಯ ಗುಡಿಯೂ ಒಂದಿದೆ.
ಇದಾದ ನಂತರ ಫಲ್ಗುಣೀ ನದಿಗೆ ಸೇತುವೆಯನ್ನು ಕಟ್ಟಿ ಸಂಪರ್ಕವ್ಯವಸ್ಥೆ ಮಾಡಲಾಗಿದೆ. ಅದು ಕೆಳಗಿನ ಪೇಟೆಗೆ ಸಂಪರ್ಕ. ಅಲ್ಲಿ ಬೃಹತ್ ಮಟ್ಟದಲ್ಲಿ ವ್ಯಾಪಾರ ವಹಿವಾಟುಗಳು ನಡೆಯುತ್ತವೆ. ತರಕಾರಿ ಮಾರುಕಟ್ಟೆ, ವಾರದ ಸಂತೆ, ಬಸ್ ನಿಲ್ದಾಣ ಎಲ್ಲವೂ ಇದೇ ಪೇಟೆಯಲ್ಲಿ ಕಾಣಸಿಗುತ್ತವೆ. ಒಟ್ಟಾರೆಯಾಗಿ ಮೂರು ಹಂತದಲ್ಲಿ ವೇಣೂರಿನ ಪೇಟೆ ವಿಭಜಿಸಲ್ಪಟ್ಟಿದೆ.
42ವರುಷಗಳ ಬಳಿಕ ಮೊಟ್ಟಮೊದಲ ಬಾರಿ 2000ನೇ ಇಸವಿಯಲ್ಲಿ ಇದೇ ವೇಣೂರು ಬಾಹುಬಲಿಗೆ ಮಹಾ ಮಜ್ಜನದ ಭಾಗ್ಯ ಒಲಿದಿತ್ತು. ಆ ಸಂದರ್ಭದಲ್ಲಿ ವೇಣೂರು ಪೇಟೆ ಅಷ್ಟೊಂದು ಬೆಳವಣಿಗೆ ಹೊಂದಿರಲಿಲ್ಲ. ಇದೀಗ ಕಟ್ಟಡಗಳು ಈ ಭಾಗದಲ್ಲಿ ದಿನಕ್ಕೊಂದರಂತೆ ತಲೆಯೆತ್ತುತ್ತಿವೆ.ಲಾಡ್ಜ್,ಹೊಟೇಲ್ ಅಭಿವೃದ್ದಿಗೊಂಡಿವೆ. ಒಟ್ಟಾರೆಯಾಗಿ ವೇಣೂರು ಒಂದು ಪ್ರಮುಖ ಪಟ್ಟಣದಂತೆ ಈ ಭಾಗದಲ್ಲಿ ಕಾಣತೊಡಗಿದೆ.
- ಟೀಂ ಈ ಕನಸು.
Video







