ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
1:59 PM

ವಿರಾಸತ್ - 20

Posted by ekanasu

ರಾಜ್ಯ - ರಾಷ್ಟ್ರ


ಮೂಡಬಿದಿರೆ: ಇಲ್ಲಿನ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸಾಂಸ್ಕೃತಿಕೋತ್ಸವ ಆಳ್ವಾಸ್ ವಿರಾಸತ್ ಗೆ ಕ್ಷಣ ಗಣನೆ ಪ್ರಾರಂಭಗೊಂಡಿದೆ. ಮೂಡಬಿದಿರೆಯ ಸನಿಹದಲ್ಲಿರುವ ಮಿಜಾರು ಶೋಭಾವನ ಇದಕ್ಕಾಗಿ ಸರ್ವ ಸನ್ನದ್ಧಗೊಂಡಿದೆ. ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಶೋಭಿಸುತ್ತಿದೆ.

ರಾಷ್ಟ್ರೀಯ ಮಟ್ಟದ ಕಲಾವಿದರು ಆಳ್ವಾಸ್ ವಿರಾಸತ್ ನ 4ದಿನಗಳ ಕಾಲ ವೈವಿಧ್ಯಮಯ ಪ್ರದರ್ಶನ ನೀಡಲಿದ್ದಾರೆ. ಜ.5ರಿಂದ 8ರ ತನಕ ದಿನಕ್ಕೆರಡು ಪ್ರಕಾರಗಳಲ್ಲಿ ರಾಷ್ಟ್ರೀಯ ಖ್ಯಾತಿಯ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಸಂಜೆ 6ರಿಂದ 10ರ ತನಕ ಕಾರ್ಯಕ್ರಮ ನಡೆಯಲಿವೆ.

0 comments:

Post a Comment