ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಯುವಾ
"ಟಿಕೆಟ್" ಇಲ್ಲದೆ ರೈಲಿನಲ್ಲಿ ಪ್ರಯಾಣಿಸುವುದು ಕಾನೂನು ಪ್ರಕಾರ ಅಪರಾದ ಅಂತ ನಮಗೆಲ್ಲಾ ಗೊತ್ತಿರುವ ಸಂಗತಿ ಯಾದರು ನಾವು ಅನಿವಾರ್ಯವಾಗಿ ಕೆಲವೊಮ್ಮೆ ತಪ್ಪುಮಾಡುತ್ತೇವೆ. ಹೀಗೆ ಒಂದು ಸಲ ನಾನು "ಟಿಕೆಟ್" ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿ "ಟಿಸಿ"ಕೈಯಲ್ಲಿ ಸಿಕ್ಕು ಅವನಿಂದ ಚೆನ್ನಾಗಿ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡು ಅನುಕಂಪ ಮೂಡುವಂತೆ ಕಣ್ಣೀರು ಸುರಿಸಿ ನನ್ನ ಹಳ್ಳಿಗೆ ನಾನು ತಲುಪಿದ ಇಂಟ್ರೆಸ್ಟಿಂಗ್ ಸ್ಟೋರಿ ನಿಮ್ಮ ಜೋತೆಯಲ್ಲಿ ಸ್ವಲ್ಪ ಹಂಚಿಕೊಳ್ಳುವ ಆಸೆ.


ಭಾರತ ಸರಕಾರ ಹೊಸದಾಗಿ ಜಾರಿಗೆ ತಂದಿರವ ಭಾರತೀಯ ನಾಗರೀಕರ ಗುರುತಿನ ಚೀಟಿ(ಆಧಾರ ಕಾರ್ಡ್) ಮಾಡಿಸುವ ಸಲುವಾಗಿ ನಾನು ನನ್ನ ಊರಿಗೆ ಹೋಗುವ ಅನಿವಾರ್ಯತೆ ಉಂಟಾಗಿತ್ತು. ಉಪನ್ಯಾಸಕರ ಅನುಮತಿಯನ್ನು ಪಡೆದು ನಾನು ನೇರವಾಗಿ ತರಾತುರಿಯಲ್ಲಿ"ಗುಲ್ಬರ್ಗ" ರೈಲು ನಿಲ್ದಾಣಕ್ಕೆ ಬಂದೆ.

ಅಷ್ಟರಲ್ಲಿಯೆ ನಮ್ಮೂರಿನ ಮಾರ್ಗವಾಗಿ ಹೋಗುತಿದ್ದಾ "ಬಿಜಾಪೂರ್_ರಾಯಚೂರ್"ಇಂಟರ್ಸಿಟಿ ಪ್ಯಾಸೆಜರ್ ರೈಲು ಹೊರಡಲು ಸಿದ್ಧವಾಗಿ ನಿಂತಿತ್ತು ನಾನು ಅವಸರದಲ್ಲಿ "ಟಿಕೆಟ್" ಕೌಂಟರ್ ಕಡೆ ಹೋಗುವಷ್ಟರಲ್ಲಿ ರೈಲೂ...ಪೂಂ...ಪೂಂ... ಎಂದು ಹಾರ್ನ್ ಹಾಕುತ್ತಾ ಮೆಲ್ಲಗೆ ಮುಂದೆ ಸಾಗಿತು.ಅಲ್ಲಿಯೇ ನಿಂತಿದ್ದ ರೈಲ್ವೇ - ಪೊಲೀಸ್ ನನ್ನ ಕಡೆ ತಿರುಗಿ ಮುಂದಿನ ಸ್ಟೇಷನಲ್ಲಿ "ಟಿಕೆಟ್" ತೆಗಿಸು ಎಂದು ಹೇಳಿದ.

ನನಗು ಅಷ್ಟೆ ಬೇಕಾಗಿತ್ತು. ಅವಸರದಲ್ಲಿ ರೈಲನ್ನು ಹತ್ತಿದೆ,ರೈಲಿನ ಬೋಗಿಯಲ್ಲಿ ಜನವೋ...ಜನ.!! ಕುಳಿತು ಕೊಳ್ಳಲು ಜಾಗವಿರಲಿಲ್ಲ. ನಿಂತುಕೊಂಡೆ ಪ್ರಯಾಣಿಸಿದೆ. ಸ್ವಲ್ಪ ಸಮಯದ ನಂತರ ರೈಲು "ಶಾಹಬಾದ"ನಿಲ್ದಾಣ ತಲುಪಿತು ಅಲ್ಲಿ ಸ್ವಲ್ಪ ಪ್ರಯಾಣಿಕರ ಸಂಖ್ಯೆ ಕಡಿಮೆಯಾಯ್ತು. ನನಗೆ ಕುಳಿತುಕೊಳ್ಳಲು ಕಿಟಕಿ ಹತ್ತಿರ ಸ್ವಲ್ಪ ಜಾಗ ಸಿಕ್ಕಿತು.

ಆದರೆ ಅದೆ ಸಮಯದಲ್ಲಿಯೆ ನನ್ನ ಎದೆ ಒಂದೆ ಸಮನೆ ಡಬ-ಡಬನೆ ಬಡಿದು ಕೊಳ್ಳಲು ಶುರುಮಾಡಿತು. ಯಾಕಂದರೆ ನಾನು "ಟಿಕೆಟ್" ಇಲ್ಲದೆ ಪ್ರಯಾಣ ಮಾಡುತ್ತಿರುವೆ ಒಂದುವೇಳೆ "ಟಿಸಿ"ಕೈಯಲ್ಲಿ ಸಿಕ್ಕರೆ ನನ್ನ ಗತಿಯೇನು? ಎನ್ನುವ ಭಯ ನನಗೆ ಕಾಡಲು ಶುರುಮಾಡಿತು.
ಮತ್ತೆ ರೈಲು ಮುಂದೆ ಸಾಗಿತು ಹಾಗೆ ನನ್ನ ಎದೆ ಬಡಿತ ಹೆಚ್ಚುತ್ತಲೆ ಹೋಯ್ತು ಸ್ವಲ್ಪ ಸಮಯದ ನಂತರ ರೈಲು "ವಾಡಿ"ರೈಲುನಿಲ್ದಾಣ ತಲುಪಿತು. ಆಗ ನಾನು ಉಸ್ಸಪ್ಪಾ...!ಎಂದು ಸ್ವಲ್ಪ ನಿಟ್ಟುಸಿರು ಬಿಟ್ಟೆ ಮುಂದಿನ ನಿಲ್ದಾಣವೆ ನಮ್ಮೂರು ಹೇಗಾದರು ನಾನು ಬೀಸೊ...ದೊಣ್ಣೆಯಿಂದ ತಪ್ಪಿಸಿಕೊಂಡೆ ಎಂದು ನಾನು ಮನದಲ್ಲಿಯೆ ನಗಲು ಶುರುಮಾಡಿದೆ.

ನನ್ನ ನಗು ಆ ಭಗವಂತನಿಗೆ ಸರಿಕಾಣಲಿಲ್ಲಾವೆನೋ? ಅದೆ ಸಮಯದಲ್ಲಿ ಕೆಂಪನೆ ಬಣ್ಣದ ಆರು ಅಡಿ ಎತ್ತರದ ಆಪರಿಚಿತ ವ್ಯಕ್ತಿ ನನ್ನ ಕಾಲರ್ ಹಿಡಿದು ಟಿಕೆಟ್ ಎಂದು ಕೇಳಿದ ಆಗ ನಾನು ಅವನ ಮುಖನೋಡಿ ಮೂಕ ಬಸವನಂತೆ ಇಲ್ಲಾ ಎಂದು ತಲೆಯಾಡಿಸಿದೆ ಆಗ ಅವನು ನನ್ನ ಶರ್ಟ್ ಹಿಡಿದು ಹೊರಗಡೆ ಎಳೆದುಕೊಂಡು ಬಂದು ಪೊಲೀಸ್...ಪೊಲೀಸ್...ಎಂದು ಜೋರಾಗಿ ಕೂಗತೊಡಗಿದ ನಾನೂ ಪರಿಪರಿಯಾಗಿ ಬೇಡಿಕೊಂಡರು ಅವನು ನನ್ನ ಶರ್ಟಕಾಲರ್ ಬಿಡಲಿಲ್ಲಾ ಎಲ್ಲಿ ನನ್ನ ಊರಿನವರು ನನ್ನನ್ನೂ ಈ-ವ್ಯವಸ್ಥೆಯಲ್ಲಿ ನೋಡಿದರೆ ನನ್ನ ಗತಿಯೇನು?ಎನ್ನುವ ಭಯ ಆವರಿಸಿತು.

ಅಲ್ಲಿಯೆ ನಿಂತಿದ್ದ ಒಬ್ಬ ಪ್ರಯಾಣಿಕ ನನ್ನ ಹತ್ತಿರ ಬಂದು "ಟಿಸಿ"ಗೆ ಐವತ್ತುರುಪಾಯಿ ಕೊಟ್ಟಬಿಡು ಎಂದು ಹೇಳಿದ ನಾನು ಅವನ ಮಾತಿಗೆ ಆಯ್ತು ಎಂದು ತಲೆಯಾಡಿಸಿದೆ ಅವನು ಹೇಳಿದಂತೆ "ಟಿಸಿ"ಕೈಯಲ್ಲಿ ಐವತ್ತುರುಪಾಯಿ ತುರಕಿದ ಕೂಡಲೆ "ಟಿಸಿ" ನಗು ನಗುತ್ತಾ ನನ್ನನ್ನೂ ಬೀಳ್ಕೋಟ್ಟ ನನ್ನವ್ಯವಸ್ಥೆಯನ್ನು ನೋಡಿದ ಕೆಲವರು ನಗಲು ಶುರುಮಾಡಿದರು


ತೋಟೇಂದ್ರ.ಎಸ್.ಮಾಕಲ್.
ಪತ್ರಿಕೋದ್ಯಮ ವಿಭಾಗ.
ಗುಲ್ಬರ್ಗ.ವಿ.ವಿ.ಗುಲ್ಬರ್ಗ

2 comments:

Anonymous said...

thappu madiddiri... ticket illade prayanisiddu thappu... allade tc kailli 50rs kottadu dodda thappu antha nimge ansilva...

pushpabishek said...

sandarba nammanna tappu madisutte.alwa?

Post a Comment