ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ವಿಶೇಷವಾಗಿ ಮಹಿಳಾ ಧೂಮಪಾನಿಗಳ ಸಂಖ್ಯೆ `ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ'ಗಳಲ್ಲಿ ಮಾತ್ರ ಹೆಚ್ಚುತ್ತಿದೆ ಎಂದು ಆಧುನಿಕ ಸಂಶೋಧನೆ ಹೇಳಿದೆ. ಈ ನಿಟ್ಟಿನಲ್ಲಿ ಮಾರುಕಟ್ಟೆಗಳು ತಂಬಾಕು ಉತ್ಪನ್ನಗಳ ಮಾರಾಟಕ್ಕಾಗಿ ಮಹಿಳೆಯರ ಕಡೆಗೆ ವಿಶೇಷವಾಗಿ ಗಮನಹರಿಸಿವೆ. ಇದಕ್ಕಾಗಿ ವಿಶೇಷ ಜಾಹಿರಾತು, ಇತ್ತೀಚಿನ ಪೀಳಿಗೆಗಳ ಚಿತ್ತ ತನ್ನತ್ತ ಸೆಳೆದುಕೊಳ್ಳಲು ಅವಶ್ಯವಾಗಿರುವ ಎಲ್ಲಾ ಹೈಟೆಕ್ ಹೆಜ್ಜೆಗಳನ್ನು ತಂಬಾಕು ಕಂಪೆನಿಗಳು ತೆಗೆದುಕೊಳ್ಳಲಾಗುತ್ತಿದೆ.ದಂ ಮಾರೆ ದಂ...ಮದಿರೆವಾಸಿ ಮಾನನಿಯರು

ಆಗ ತಾನೆ ಕಚೇರಿ ಕಾರುಬಾರು ಮುಗಿಸಿ ಬೆಂಗಳೂರಿನ ಪ್ರತಿಷ್ಟಿತ ರೆಸಿಡೆನ್ಸಿ ರಸ್ತೆಯಿಂದ ಮನೆಗೆ ಹೋಗುತ್ತಿದ್ದೆ. ಐ ಥಿಂಕ್ ಅದು ರಾತ್ರಿ 2 ಗಂಟೆ ಸಮಯ. ದಿನದಲ್ಲಿ ರೋಡ್ ಕ್ರಾಸ್ ಮಾಡೋದಕ್ಕೆ ಕನಿಷ್ಠ ಪಕ್ಷ 15-20 ನಿಮಿಷ ಧಾರಾಳವಾಗಿ ಬೇಕೆಬೇಕು. ಆದರೆ, ಆ ಹೊತ್ತಲ್ಲಿ ಬರೀ ಬೀದಿನಾಯಿಗಳ ಕೂಗಾಟ ಹಾಗೂ ಸ್ಟ್ರೀಟ್ ಲ್ಯಾಂಪ್ ಬಿಟ್ರೆ ಬೇರೆ ಏನೂ ಇಲ್ಲ. ಅಂಥ ನೀರವ ಮೌನದ ಮಧ್ಯೆ ಇಬ್ಬರು 24-25 ವಯೋಮಾನದ ಆಸುಪಾಸಿನ ಯುವತಿಯರು ಯಾವುದೇ ಭಯವಿಲ್ಲದೆ ಹೋಗುತ್ತಿದ್ದರು. ಅವರನ್ನು ನೋಡಿದ್ದೇ ಅಚ್ಚರಿಯೇನೋ ಆಯ್ತು. ಜತೆಗೆ ಪುಂಖಾನುಪುಂಖವಾಗಿ ಪ್ರಶ್ನೆಗಳು ಏಳುತ್ತಿದ್ದವು.

ಆ ಹೊತ್ತಿಲ್ಲದ ಹೊತ್ತಲ್ಲಿ ಹುಡುಗಿಯರಿಬ್ಬರು ಅಂಡೆಪಿರ್ಕಿಗಳಂತೆ ಅಡ್ಡಾಡುತ್ತಿದದ್ದನ್ನು ನೋಡಿದ್ದೇ, "ಎಂದು ಯುವತಿಯರು ಮಧ್ಯೆ ರಾತ್ರಿಯಲ್ಲಿ ಯಾವ ಸಮಸ್ಯೆ ಇಲ್ಲದೆ ಸಲೀಸಾಗಿ ಓಡಾಡುವಂತಾಗುತ್ತಾರೋ; ಅಂದು ನಮ್ಮ ರಾಷ್ಟ್ರ ನಿಜವಾಗಿಯೂ ಸ್ವತಂತ್ರ್ಯ ಹೊಂದಿದೆ ಎಂದರ್ಥ" ಎಂಬ ರಾಷ್ಟ್ರಪಿತರ ಮಾತು ನೆನಪಾಯ್ತು.


ಸ್ಟ್ರೀಟ್ ಲ್ಯಾಂಪ್ನ ಬೆಳಕಲ್ಲಿ ಫುಟ್ಪಾತ್ ಮೇಲೆ ಟೀ ಕುಡಿಯಲು ನಿಂತುಕೊಂಡೆ. ಅಷ್ಟ್ಟರಲ್ಲೇ ಅವರೂ ಆ ಕಡೆಗೆ ಬಂದು ನಿಂತುಕೊಂಡರು. ಆಶ್ಚರ್ಯ ಅವರ ಕೈಯಲ್ಲಿ ರದ್ದಿಯಲ್ಲಿ ಸುತ್ತಿದ್ದ ಬಾಟಲ್ಗಳಿದ್ದವು. ಸಿಗಾರ್ ತೆಗೆದು ಸೇದಲಾರಂಭಿಸಿದರು. ಜತೆಗೆ ಕೈಯಲ್ಲಿದ್ದ ಬಾಟಲ್ಗಳನ್ನು ಓಪನ್ ಮಾಡಿ ಸಿನಿಮೀಯ ರೀತಿಯಲ್ಲಿ ನಿರರ್ಗಳವಾಗಿ ಬಾಟಲಿಬ್ರಹ್ಮನನ್ನು ಗಂಟಲಿಗಿಳಿಸಿ, ಸುರಾಧೀನರಾದರು.

ಆಗ ಯಾವ ರಾಷ್ಟ್ರಪಿತರ ಮಾತು ಕಿವಿಯಲ್ಲಿ ಪ್ರತಿಧ್ವನಿಸಿತ್ತೋ , ಈಗ ಅದರ ತದ್ವಿರುದ್ಧ ಆಲೋಚನೆ ಮೊಳೆಯಿತು. ಆಗ ಯಾಕೋ ಈ ಸ್ತ್ರೀಯರಿಗೆ ಸ್ವಲ್ಪ ಜಾಸ್ತಿನೇ ಸ್ವಾತಂತ್ರ್ಯ ಸಿಕ್ಕಿದೆ ಏನೋ ಎಂದೆನಿಸುತ್ತಿತ್ತು. ಹೋಗ್ಲಿ ಊರು ಉಸಾಬರಿ ನನಗ್ಯಾಕೆ ಎಂದು ಸುಮ್ಮನಾದೆ. ಕೈಯಲ್ಲಿದ್ದ ಟೀ ಹೀರಿ, ಮನೆ ಕಡೆ ಕಾಲು ಕಿತ್ತೆ . ಮನೆಗೇನೋ ರೀಚ್ ಆದೆ. ಆದ್ರೆ ಆ ದೃಶ್ಯ ಮಾತ್ರ ಮನಸೆಂಬ ಪ್ರಾಜೆಕ್ಟರ್ನಿಂದ ಸರಿಯುತ್ತಿಲ್ಲ. ಮತ್ತೆ-ಮತ್ತೆ ಆಗಂತುಕವಾಗಿ ಅದೇ ಆಲೋಚನೆ, ಛೇ ಇದೇನು ಎಂಥಾ ಪರಿಸ್ಥಿತಿ ಬಂತಲ್ಲ...

ಮಹಿಳೆ ದಾರಿದೀಪ:
ಕನ್ನಡದಲ್ಲಿ ಒಂದು ಪ್ರತಿಷ್ಠಿತ ಗಾದೆ ಇದೆ. ಅದರ ತಾತ್ಪರ್ಯ ಇಷ್ಟೆ; ರಕ್ಷಿಸಿ, ಉಳಿಸಿ ಬೆಳೆಸಬೇಕಾದವರೇ ಭಕ್ಷಕರಾದರೆ ಸಮಾಜದ ಸ್ವಾಸ್ಥ್ಯವನ್ನು ಕಾಯುವುದು ಕನಸಿನ ಮಾತೇ ಸರಿ. ಗಾದೆಯ ಪುನರ್ಮನನದ ಮೂಲ ಉದ್ದೇಶ, ನಮ್ಮ ಹಿಂದೂಸ್ಥಾನದಲ್ಲಿ ಹಿಂದಿನಿಂದಲೂ ಮಹಿಳೆಯರಿಗೆ ಉನ್ನತ ಸ್ಥಾನ ನೀಡಲಾಗಿದೆ. ಸ್ತ್ರೀ ಮಾತೆ, ಮಮತೆಯ ಪ್ರತೀಕ, ಕುಟುಂಬವನ್ನು ಸರಿದಾರಿಗೆ ತರಬಲ್ಲವಳು ಹೀಗೆ ಹತ್ತು ಹಲವಾರು ರೀತಿಯಲ್ಲಿ ಹೊಗಳಿ ಉಪ್ಪರಿಗೆ ಮೇಲೆ ಕೂಡಿಸಲಾಗಿದೆ.

ಅಷ್ಟೇ ಯಾಕೆ ಈಗಲೂ ಶಿಕ್ಷಣದ ವಿಚಾರಕ್ಕೆ ಬಂದಾಗ ಮಹಿಳೆಯೊಬ್ಬಳು ಕಲಿತರೇ ಇಡೀ ಕುಟುಂಬವೇ ಕಲಿತಂತೆ ಎಂಬ ಅತಿಶಯೋಕ್ತಿಗಳು ಅವಳ ಸುತ್ತ ಗಿರಕಿ ಹೊಡಿಯುತ್ತಲೇ ಇವೆ. ಇತಿಹಾಸದ ಪುಟಗಳನ್ನು ಕಲಕಿದಾಗ ಹೊರಬೀಳುವ ಸತ್ಯಾಂಶ ಕೂಡ ಇದೇ ಆಗಿದೆ. ಅನೇಕ ಮಹಾನ್ ಪುರುಷರ ಹೆಸರುಗಳು ಸುವರ್ಣ ಅಕ್ಷರಗಳಲ್ಲಿ ಬರೆಯಲ್ಪಡಬೇಕಾದರೆ ಅಲ್ಲಿ ಮಹಿಳೆ ಪಾತ್ರ ಅನನ್ಯ.

ಅದು ತಾಯಿಯ ರೂಪದಲ್ಲಾಗಿರಬಹುದು ಅಥವಾ ಹೆಂಡತಿ ಮತ್ತ್ಯಾವುದೋ ಇನ್ಯಾವುದೋ ರೀತಿಯಲ್ಲಿ ಅವಳು ಸಾಧಿಸಲಾರದ್ದನ್ನು ಸಾಧಿಸಿದ್ದಾಳೆ. ಅದಕ್ಕಾಗಿಯೇ ಅಬ್ದುಲ್ ಕಲಾಂ ತಮ್ಮ `ಅಗ್ನಿಯ ರೆಕ್ಕಗಳು' ಪುಸ್ತಕದ ಪ್ರಿಫೇಸ್ನಲ್ಲೇ ಪದಗಳ ವರ್ಣವೆಗೆ ಸಿಗದ ತಾಯಿಯ ಕುರಿತು ಬಣ್ಣಿಸಿದ್ದಾರೆ.
ಅದಕ್ಕಾಗಿಯೇ ಹೆಣ್ಣು ಒಲಿದರೇ ನಾರಿ, ಮುನಿದರೆ ಮಾರಿ ಎಂದೂ ಹೇಳಲಾಗುತ್ತದೆ. ಇದಕ್ಕೆ ಹಲವು ನಿದರ್ಶನಗಳೂ ಇವೆ.

ಆದರೆ, ಇಂದು ಇಂಥ ಮಹಿಳೆ ಯಾವ ಸ್ಟೇಟಸ್ ಗೆ ಬಂದಿಳಿದಿದ್ದಾಳೆ ಎಂದರೆ, ಬೀದಿ ಪಕ್ಕದಲ್ಲಿ ಬಿಯರ್ ಬಾಟಲ್ ಹಿಡಿದು, `ದಂ' ಹೊಡಿಯುತ್ತಾ ಮಹಿಳಾ ಸಹಜ ಎಲ್ಲ ಗುಣಗಳನ್ನು ಗಾಳಿಗೆ ತೂರಿ, ಮಾನವನ್ನು ಮೂರು ಕಾಸಿಗೆ ಹರಾಜು ಮಾಡುತ್ತಿದ್ದಾಳೆ.
ಅದೇನೆ ಇರ್ಲಿ ಹಿಂದಿನ ಅಂಕಿಅಂಶಗಳ ಕಡೆ ಮೆಲುಕು ಹಾಕುವುದಾರೆ, 2008ರಲ್ಲಿ ಶೇ. 18.3 ಮಹಿಳೆಯರು ಧೂಮಪಾನ ಸೇವಿಸುತ್ತಿದ್ದರು. ಅದೇ ರೀತಿ ಅರ್ಜೆಂಟಿನಾದಲ್ಲಿ ಶೇ.22.6 ಹಾಗೂ ಉರುಗ್ವೆಯಲ್ಲಿ ಶೇ. 25.1ರಷ್ಟು ಮಹಿಳೆಯರು ಸ್ಮೋಕ್ಗೆ ಮೊರೆಹೋಗಿದ್ದಾರೆ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ. ಹೀಗೆ ಮತ್ತೊಂದು ಹೆಜ್ಜೆ ಮುಂದುವರೆದರೆ, 2025ರ ವೇಳೆಗೆ ಮಹಿಳಾ ಧೂಮಪಾನಿಗಳ ಸಂಖ್ಯೆಯಲ್ಲಿ ಶೇ. 20ರಷ್ಟು ಹೆಚ್ಚಳವಾಗಲಿದೆ ಎಂದು ಒಂದು ಸಂಶೋಧನೆ ಹೇಳುತ್ತದೆ.

ಅದೆಲ್ಲಾ ಬೇರೆ ವಿಚಾರ. ಆದರೆ, ನೈತಿಕತೆಯ ಗರಡಿಗೆ ಬಂದಲ್ಲಿ ಮಹಿಳೆ ಮಾದಕವಸ್ತುಗಳಿಗೆ ಮೊರೆಹೋಗುವಂತಿಲ್ಲ. ಅವಳಿಗೆ ಮನೆ ಹಾಗೂ ಕುಟುಂಬವೇ ಅವಳ ಜಗತ್ತು. ಒಂದುವೇಳೆ ಹಾಗೇನಾದರೂ ಒಳಗಾದ್ದಲ್ಲಿ, ಅವಳನ್ನು ಸಮಾಜ ನೋಡುವ ದೃಷ್ಟಿಯೇ ಬೇರೆ.
ಇಷ್ಟೊಂದು ಬೌಂಡೆಜಸ್ಗಳಿದ್ದರೂ, ಭಾರತದಂಥ ಪವಿತ್ರ ಭೂಮಿಯಲ್ಲಿ ಇಂದು ಕಾಲ್ಸೆಂಟರ್ಗಳ ಕಾರು`ಬಾರು' ಬಲುಜೋರಾಗಿ ನಡೆದಿದೆ. ಇಲ್ಲಿ ಕಾರ್ಯ ನಿರ್ವಹಿಸುವ ಯುವತಿಯರು ರಾತ್ರಿ ಇಡೀ ಕೆಲಸಮಾಡಿ ಮಾನಸಿಕ ನೆಮ್ಮದಿಗಾಗಿ ದುಶ್ಚಟಗಳ ಮೊರೆಹೋಗುತ್ತಿದ್ದಾರೆ.

ಆದರೆ ಇಲ್ಲಿ ಮೈಂಡ್ ರಿಲ್ಯಾಕ್ಸೇಷನ್ ಒಂದೇ ಕಾರಣವಲ್ಲ . ಇದರ ಜತೆಗೆ ಹಲವು ಇನ್ನೂ ಹತ್ತುಹಲವಾರು ವಿಷಯಗಳು ತಳುಕುಹಾಕಿಕೊಂಡಿವೆ. ಅದರಲ್ಲಿ ಮಾಡರ್ನ್ ಎಂಬ `ಮತ್ತು' ಕೂಡ ಒಂದು. ವಿಷಯ ಏನೇ ಇರಲಿ ವಿನಾಶದ ಅಂಚಿನಲ್ಲಿರುವುದು ನಾವೇ ತಾನೇ?
ಒಟ್ಟಲ್ಲಿ ವಿದೇಶಿ ಸಂಸ್ಕೃತಿಯ ಆಗಮನದಿಂದ ನಾವು ಇಲ್ಲಿಯವರೆಗೂ ಉಳಿಸಿ ಬೆಳೆಸಿಕೊಂಡು ಬಂದಿರುವ ಸಂಸ್ಕೃತಿ ಹೊಳೆಯಲ್ಲಿ ಹಣಸೆ ಹಣ್ಣು ತೊಳೆದಂತೆ ಎಂಬಂತಾಗಿದೆ.

ಇದರ ರಕ್ಷಣೆಗಾಗಿ ಮಹಿಳೆಯರೇ ಮನಸು ಮಾಡಬೇಕಷ್ಟೆ, ಬೆಂಗಳೂರಂಥ ಮೆಟ್ರೋ ಪಾಲಿಟಿಯನ್ ಸಿಟಿಗಳಲ್ಲಿ ಸ್ಮೋಕ್ ಮಾಡದಿರುವುದೆಂದರೆ, ಅವರು ಒಂಥರಾ ಸಂಸ್ಕೃತಿಕರಣವಾಗದ ಗುಗ್ಗುಗಳೆಂದೇ ಅರ್ಥ. ಈ ಕಾರಣಕ್ಕಾದರೂ ಆಧುನಿಕ ಮಾನನಿಯರು ಬಗ್ಗಿ ಮದಿರೆಯ ಪಾಲಾಗುತ್ತಾಳೆ. ಮುಂದಾಗುವುದೆಲ್ಲಾ ನಿಮಗೂ ಗೊತ್ತೇ ಇದೆ.

ಈಗ ನಿರ್ಧಾರ ನಮ್ದು. ನೀವೆ ಹೇಳಿ ಇಂಥ ಯುವತಿಯರಿಂದ ಏನನ್ನಾದರೂ ಆಪೇಕ್ಷಿಸಲು ಸಾಧ್ಯವೇ? ಅವರು ಮುಂದೆ ತಮ್ಮ ಮಕ್ಕಳಿಗೆ ಸಂಸ್ಕೃತಿ ಯ ಮಾಹಿತಿ ನೀಡಿ ಅವರನ್ನು ಸತ್ಪ್ರಜೆಗಳಾಗಿ ಸಮಾಜಕ್ಕೆ ನೀಡಬಲ್ಲರೇ?

- ಆತೀಶ್ ಬಿ.ಕೆ.

0 comments:

Post a Comment