ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಡಿ.ವಿ.ಸದಾನಂದ ಗೌಡ ಅವರಿಂದ ಅಧಿಕಾರಿಗಳೊಂದಿಗೆ ಚರ್ಚೆ17ನೇ ರಾಷ್ಟ್ರೀಯ ಯುವಜನೋತ್ಸವದ ಕುರಿತಂತೆ ಮಂಗಳೂರು ಸರ್ಕ್ಯೂಟ್ ಹೌಸ್ ನಲ್ಲಿ ಅಧಿಕಾರಗಳೊಂದಿಗೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸಮಾಲೋಚನೆ ಕೈಗೊಂಡರು.ಜನರ ಸಹಭಾಗಿತ್ವದೊಂದಿಗೆ "ನೆನಪುಳಿಯುವ"ರಾಷ್ಟ್ರೀಯ ಯುವಜನೋತ್ಸವವಾಗಿ 17ನೇ ರಾಷ್ಟ್ರೀಯ ಯುವಜನೋತ್ಸವ ಮೂಡಿಬರಬೇಕೆಂದು ಆಶಿಸಿದರು.ಯುವಜನೋತ್ಸವಕ್ಕೆ ಕ್ಷಣ ಗಣನೆ ಪ್ರಾರಂಭವಾಗಿದೆ. ಉಳಿದಿರುವ ಸಮಯವನ್ನು ಸದ್ವಿನಿಯೋಗ ಮಾಡಿಕೊಂಡು ಅತ್ಯಂತ ಶಿಸ್ತುಬದ್ಧ ಹಾಗೂ ಅಷ್ಟೇ ವ್ಯವಸ್ಥಿತಿ ರೀತಿಯಲ್ಲಿ ಯುವಜನೋತ್ಸವ ಸಂಘಟನೆಮಾಡಬೇಕೆಂದು ಮುಖ್ಯಮಂತ್ರಿ ಆದೇಶಿಸಿದರು. ಮಂಗಳೂರು ನಗರ ಯುವಜನೋತ್ಸವಕ್ಕಾಗಿ ಸಿಂಗರಿಸಿಕೊಳ್ಳುವಂತೆ ಹಾಗೂ ಶುಚಿತ್ವದಿಂದ ಕೂಡಿರುವಂತೆ ಇರಬೇಕೆಂದು ತಿಳಿಸಿದರು.
ಯುವಜನೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಮಂಗಳೂರಿನ ಮಂಗಳಾ ಕ್ರೀಡಾಂಗಣ ಸಿದ್ಧಗೊಳ್ಳುತ್ತಿದೆ.


0 comments:

Post a Comment