ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
2:31 PM

ಭ್ರಮೆ

Posted by ekanasu

ಸಾಹಿತ್ಯ
'ಅವಳು ಮೊದಲಿನಿಂದ ಹಾಗೆ ಸ್ವಲ್ಪ ಮಾತು ಕಡಿಮೇನೆ ' ಅಮ್ಮ ಮನೆಗೆ ನೋಡಲು ಬಂದ ಹುಡುಗನ ಕಡೆಯವರಿಗೆ ವರದಿ ನೀಡಿದ್ದಳು. ಹುಡುಗನ ಕಡೆಯವರು ಬೇರೆನಾದರು ಅಂದರೆ ಇವಳು ಎಲ್ಲಿ ತಪ್ಪಿ ಹೋಗುತ್ತಾಳೋ ಎಂಬ ಆತಂಕದಿಂದ ನಮಗೂ ಅಂತವರೇ ಬೇಕು ನೋಡಿ ಈಗಿನ ಕಾಲದ ಹುಡುಗೀರು ಎಲ್ಲಿ ಈ ತರದವರು ಸಿಗುತ್ತಾರೆ ಭಯಂಕರ ಜೋರಿರುತ್ತಾರೆ ಮಾತೆತ್ತಿದರೆ ಉತ್ತರ ರೆಡಿ ಇಂತವರನ್ನೇ ನಾವು ಹುಡುಕುತ್ತಿದ್ವಿ ನಮ್ಮ ಕಡೆಯಿಂದೆನು ತೊಂದರೆ ಇಲ್ಲ ನಿಮ್ಮ ಉತ್ತರ ಆದಷ್ಟು ಬೇಗ ತಿಳಿಸಿಬಿಡಿ ಎಂದು ತಟ್ಟೆ ತುಂಬಾ ಕೊಟ್ಟ ಸಿಹಿ ತಿಂದು ಜಾಗ ಕಾಲಿಮಾಡಿದ್ದರು.


ಅವರು ಅತ್ತ ಹೋಗುತ್ತಿದಂತೆ ಇತ್ತ ಸುಮಾ ಅಪ್ಪ ಅಮ್ಮ ಇಬ್ಬರನ್ನು ತರಾಟೆಗೆ ತೆಗೆದುಕೊಂಡಳು ' ಹಳ್ಳಿ ಮನೆಯಲ್ಲಿ ಹೋಗಿ ಕುಳಿತು ಮಾಡುವುದೆಂತ ' ನನಗೆ ಈ ಹುಡುಗ ಬೇಡ ಅಂದ್ರೆ ಬೇಡ ಅಷ್ಟೇ , ಇದರ ಮೇಲೆ ನೀವು ಒತ್ತಾಯ ಮಾಡಿದರೆ ನಾನು ಕೆರೇನೋ ಬಾವಿನೋ ನೋಡಿಕೊಳ್ತೀನಿ . ಅಪ್ಪ ಅಮ್ಮ ನಿಗೂ ಮಗಳು ಒಳ್ಳೆ ಮನೆ ಸೇರಲಿ ಎಂಬ ಆಸೆ ಪೇಟೆ ಹುಡುಗರಿಗೆ ಕೊಟ್ಟರೆ ಹೇಗೆ ನೋಡಿಕೊಳ್ಳುತ್ತಾರೋ ಎಂಬ ಆತಂಕ ಕಮಲಮ್ಮನಿಗೆ ಒಳಗೊಳಗೇ ಮಗಳು ಕೈತಪ್ಪಿ ಹೋದರೆ ಎಂಬ ಆತಂಕ ಸುಮಾ ಇಲ್ಲದ ಸಮಯ ನೋಡಿ 'ಅವಳ ಇಷ್ಟದಂತೆ ಮಾಡಿಬಿಡೋಣ ಬಿಡಿ ಇನ್ನು ಹಳ್ಳಿ ಇರೋ ಹುಡುಗರ ಜಾತಕ ತಗೋಬೇಡಿ ನಗರದ ಕಡೆ ಒಳ್ಳೆ ಕೆಲಸದಲ್ಲಿರೋ ಸಾಫ್ಟ್ವೇರ್ ಇಂಜಿನಿಯರ್ ಆದ್ರೆ ಅವ್ಳು ಒಪ್ತಾಳೆ ಅಂತವರಿಗೆ ಜಾತಕ ಕೊಟ್ಟು ನೋಡಿ ' ಎಂದು ಶ್ರೀನಿವಾಸ ರಾಯರಲ್ಲಿ ಹೇಳಿದಳು . ನೀ ಹೇಳೋದು ಸರಿನೆ ಇದೆ ನೋಡು ನಾನು ನಾಲ್ಕು ಕಡೆ ವಿಚಾರಿಸಿ ನೋಡ್ತೀನಿ ಅಂದು ಹೊರಹೊರಟರು .

ಸುಮಾರು ಒಂದು ತಿಂಗಳ ಹುಡುಕಾಟದಲ್ಲಿ ಐದಾರು ಕಡೆಯಿಂದ ಜಾತಕ ಹೊಂದಾಣಿಕೆ ಆಗುವ ಉತ್ತರ ಬಂದಿತ್ತು .ಎಲ್ಲರಿಗಿಂತ ಉತ್ತಮ ಎನಿಸುನ ಒಂದು ಹುಡುಗನನ್ನು ಆರಿಸಿ ಮನೆಗೆ ಬಂದು ಹುಡುಗಿ ನೋಡಿ ಹೋಗುವಂತೆ ತಿಳಿಸಿದ್ದು ಆಯಿತು . ಸುಮಳಿಗೂ ಒಳಗೊಳಗೇ ಸಂತೋಷ ಅಂತು ತಾನಂದುಕೊಂಡಂತೆ ತಾನು ಪೇಟೆ ಸೇರುವ ದಿನ ದೂರವಿರಲಿಕ್ಕಿಲ್ಲ್ಲ ಎಂದು .

ಸುಮಾ ನೋಡಲು ಸುಂದರ ವಾಗ್ಗಿಯೇ ಇದ್ದದ್ದರಿಂದ ಹುಡುಗ ಶ್ರೀಧರ ಒಪ್ಪಿಗೆ ನೀಡಿಯೂ ಆಯಿತು . ಇನ್ನೊಂದು ತಿಂಗಳಲ್ಲಿ ಮದುವೆ ಅದ್ಧೂರಿಯಿಂದ ಮುಗಿದು ಕಮಲಮ್ಮ ಮತ್ತು ಶ್ರೀನಿವಾಸರಾಯ ರಿಗೆ ಮನಸ್ಸಿಗೆ ನೆಮ್ಮದಿ ಅಂತು ಸುಮಳನ್ನು ಅವಳಿಚ್ಚೆಯಂತೆ ಪೇಟೆ ಹುಡುಗನಿಗೆ ಕೊಟ್ಟು ಮದುವೆ ಮಾಡಿದ್ದಾಯಿತು ಎಂದು .

ಹೊಸ ಮನೆ ಹೊಸ ಜಾಗ ನಗರದ ಜೀವನ ಕನಸಿನಂತೆ ಸುಂದರ ಸುಮಾ ಮನಸ್ಸಿನಲ್ಲೇ ಸಂಭ್ರಮಿಸಿದ್ದಳು . ಶ್ರೀಧರ ಮನೆ ಸೇರುತ್ತಿದ್ದಂತೆ ಫ್ರೆಂಡ್ಸ್ ಆಫೀಸ್ ಎಂದು ಹೊರಹೊರಟ. ಸುಮಾಳಿಗೆ ಏನು ಅನಿಸಲಿಲ್ಲ . ದಿನಕಳೆದಂತೆ ಶ್ರೀಧರನ ದಿನಚರಿ ಇದೆ ಎಂಬುದು ಆಕೆಗೂ ತಿಳಿಯಿತು ಕೇಳಿದರೆ 'ಸಿಗರೆಟ್ ಕುಡಿತ ಇವೆಲ್ಲ ಇಲ್ಲಿ ಎಲ್ಲರೂ ಮಾಡುತ್ತಾರೆ ನೀನು ಹಳ್ಳಿ ಹುಡುಗಿ ನಿನಗಿದೆಲ್ಲ ತಿಳಿಯಲ್ಲ ಇದು ಈಗಿನ ಟ್ರೆಂಡ್'ಎಂದ . ದಿನಕಳೆದಂತೆ ಶ್ರೀಧರ ೨-೩ ದಿನಗಳವರೆಗೆ ಮನೆಗೆ ಬರದಿರುವುದೇ ಖಾಯಂ ಆಯಿತು.ನಗರದ ಜೀವನ ಸುಂದರ ಪೇಟೆ ಹುಡುಗನೇ ಬೇಕು ಎಂದು ತಾನೇ ಆರಿಸಿಕೊಂಡು ತನ್ನ ಜೀವನ ತಾನೇ ಹಾಳು ಮಾಡಿಕೊಂಡ ಸುಮಾಳಿಗೆ ತನ್ನ ನೋವನ್ನು ಯಾರೊಂದಿಗೂ ಹಂಚಿಕೊಳ್ಳುವ ಅವಕಾಶವು ಇಲ್ಲದಂತಾಗಿತ್ತು .ಪೇಟೆ ಜೀವನ ಅದ್ಭುತ ಎಂಬ ಭ್ರಮೆ ಸುಳ್ಳಾಗಿತ್ತು


ಅರ್ಪಿತಾ ಹರ್ಷ .

2 comments:

Anonymous said...

nimma kate chennagide.Prakash.B.Jalahalli

Shri said...

Nice one... it's indeed the current situation in city life. Just mechanical life, Bhavanaatmaka Jeevana kevala mareechikeyashte.....

Post a Comment