ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ದಕ್ಷಿಣ ಕನ್ನಡ ಜಿಲ್ಲೆ ಸಭ್ಯರ ಜಿಲ್ಲೆ ಎಂಬ ಹಣೆಪಟ್ಟಿ ಪಡೆದುಕೊಂಡಿದೆಯಾದರೂ ಇಲ್ಲಿನ ನಿಸರ್ಗ ಸೌಂದರ್ಯ, ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಬಂದ ವಿಹಾರಿಗಳಿಂದಾಗಿ ಈ ಪ್ರದೇಶವಿಂದು ತನ್ನ ಸಭ್ಯತೆಯನ್ನು ಕಳೆದುಕೊಳ್ಳುತ್ತಿದೆಯೇನೋ ಎಂಬ ಸಂದೇಹ ದಟ್ಟವಾಗುತ್ತಿವೆ. ನಗರದ ಕೇಂದ್ರ ಸ್ಥಾನ ಮಂಗಳೂರಿನಿಂದ ಹತ್ತು ಹದಿನೈದು ಕಿಲೋಮೀಟರ್ ದೂರದಲ್ಲಿರುವ "ಪಿಲಿಕುಳ" ಇಡೀ ಜಿಲ್ಲೆಯಲ್ಲಿರುವ ಅತ್ಯಂತ ಸುಂದರವಾದ ಒಂದು ಪ್ರೇಕ್ಷಣೀಯ ತಾಣವೂ ಹೌದು.ಅಷ್ಟೇ ಅಲ್ಲದೆ ನಿಸರ್ಗ ಧಾಮವೂ ಹೌದು. ಆದರೆ ಅಲ್ಲಿ "ಮೋಜು ಮಸ್ತಿಗಳು" ಸಾಮಾನ್ಯವಾಗುತ್ತಿವೆಯೇ...? ಪ್ರೇಕ್ಷಕರ ನೆಲೆಯಲ್ಲಿ ಬಂದವರು "ಮೋಜು ಮಾಡುತ್ತಿದ್ದಾರೆಯೇ"? ಎಂಬ ಪ್ರಶ್ನೆ ಸಭ್ಯ ಸಂದರ್ಶಕರನ್ನು ಕಾಡದಿರದು...ಹೌದು...ಮೋಜಿನ ಮಂದ ಬೆಳಕಿನಲ್ಲಿ ಪಿಲಿಕುಳದ "ನಿಸರ್ಗ ಸೌಂದರ್ಯ" ಅನಾವರಣವಾಗುತ್ತಿದೆ...ಪಿಲಿಕುಲ’ ಅ೦ದರೆ ತುಳುವಿನಲ್ಲಿ ಹುಲಿಗಳು ಆಟವಾಡುತ್ತಿದ್ದ ಕೊಳ. ಈ ನಿಸರ್ಗಧಾಮವು ಮೂಡುಶೆಡ್ಡೆ ಗ್ರಾಮದಿ೦ದ ೩ ಕಿ ಮೀ ಹಾಗು ಮ೦ಗಳೂರು ನಗರದಿ೦ದ ೧೮ ಕಿ.ಮೀ ದೂರದಲ್ಲಿದೆ. ೩೫೦ ಎಕರೆ ವಿಸ್ತೀರ್ಣದಲ್ಲಿರುವ ಈ ಧಾಮದಲ್ಲಿ ಮೃಗಾಲಯ, ಸಸ್ಯ ತೋಟ, ಮಾನಸ ವಾಟರ್ ಪಾರ್ಕ್ ಪ್ರಮುಖ ಆಕರ್ಷಣೆಗಳಾಗಿವೆ.ಮ೦ಗಳೂರಿನಿ೦ದ ಮೂಡಬಿದರೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೧೩ ರಲ್ಲಿ ಈ ತಾಣವಿದೆ.

ಇಲ್ಲಿ ಮೃಗಾಲಯವಿದೆ. ಸಿಂಹ, ಕರಡಿ ಧಾಮಗಳಿಗೆ ಹೋಗುವ ಹಾದಿ ಮಧ್ಯೆ ಇರುವ ಕಲ್ಲು ಬೆಂಚು, ಕುರುಚಲು ಗಿಡಗಳಿಂದಾವೃತವಾದ ಪ್ರದೇಶಗಳು ಟೀನೇಜ್ ಯುವಕ ಯುವತಿಯರಿಗೆ ಬಲು ಖುಷಿಕೊಡುವ ಜಾಗವಾಗಿವೆ. ಇಲ್ಲಿ ಯುವಕ ಯುವತಿಯರ ಮೋಜು ರಾಜಾರೋಷವಾಗಿ ನಡೆಯುತ್ತಿವೆ. ಇದರಿಂದಾಗಿ ಈ ಪ್ರದೇಶಗಳ ವೀಕ್ಷಣೆಗೆ ಆಗಮಿಸುವ ಸಭ್ಯರಿಗೆ ಇರಿಸು ಮುರುಸಾಗುವುದರಲ್ಲಿ ಸಂದೇಹವಿಲ್ಲ.


ಪಿಲಿಕುಳ ನಿಸರ್ಗಧಾಮದ ಕಲ್ಲು ಬೆಂಚುಗಳಂತೂ ಪ್ರತಿದಿನವೂ ಕಾಲೇಜು ಯುವಕ ಯುವತಿಯರಿಗೇ ಮೀಸಲೋ ಎಂಬಂತೆ ಭಾಸವಾಗುತ್ತಿವೆ. ಅ ರೀತಿಯಲ್ಲಿ ಯುವಕ ಯುವತಿಯರು ಬೆಂಚಿಗಂಟಿಕೊಂಡು ಕೂತಿರುತ್ತಾರೆ.
ಅಂತೂ ನಿಸರ್ಗಧಾಮ ವೀಕ್ಷಿಸಲು ಬಂದವರಿಗೆ ಒಂದಷ್ಟು ಹೊತ್ತು ಆರಾಮವಾಗಿ ಕೂರೋಣವೆಂದರೆ ಹದಿಹರೆಯದ ಯುವಕ ಯುವತಿಯರ ಮೋಜಿನ ಅನಾವರಣವಾಗುವುದರಲ್ಲಿ ಸಂದೇಹವಿಲ್ಲ.

1 comments:

Anonymous said...

endri edu e tara healada

Post a Comment