ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:16 PM

ಮಂಜಿನ ಹನಿ

Posted by ekanasu

ಸಾಹಿತ್ಯ
ಮಂಜಿನ ಹನಿಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ಹಾಗೆ ನನಗೆ ಬಹಳ ವರ್ಷಗಳಿಂದ ಮಂಜಿನ ಮಳೆ ಬೀಳುವುದನ್ನು ನೋಡಬೇಕು ಅದರಲ್ಲಿ ಆಟ ಆಡಬೇಕು ಎಂಬ ಆಸೆ ಇತ್ತು . ಅಂತು ಇಂತೂ ನನ್ನ ಆಸೆ ಈಡೇರಿಸುವ ಆಸೆ ಭಗವಂತನಿಗೂ ಆಯಿತೋ ಎಂಬಂತೆ ಲಂಡನ್ ಗೆ ಬಂದಾಗ ಈ ವರ್ಷ ಭಾರಿ ಮಂಜಿನ ಮಳೆ ಆಗುವ ವಾತಾವರಣ ವಿದೆ ಎಂದು ಓದಿ ಆ ದಿನ ಬರಲು ಹೆಚ್ಚು ದಿನವಿಲ್ಲ ಎಂದು ಸಂತೋಷಗೊಂಡು ಹರ್ಷವನ್ನು ಎಲ್ಲರಲ್ಲಿ ಹಂಚಿಕೊಂಡಿದ್ದು ಆಯಿತು.


ಇನ್ನೇನು ನವೆಂಬರ್ ಪ್ರಾರಂಭ ಆದಂತೆ ಎಲ್ಲಿಲ್ಲದ ಚಳಿ . ಡಿಸೆಂಬರ್ ತಿಂಗಳಿನಲ್ಲಿ ಆಗುವ ಮಂಜಿನ ಉದುರುವಿಕೆಯನ್ನು ಸವಿಯುವ ದಿನಕ್ಕಾಗಿ ಎಡಬಿಡದೆ ಕಾಯುತ್ತಿರುವುದು ನೋಡಿ ಆ ಡಿಸೆಂಬರ್ ಬಂದೆ ಬಿಟ್ಟಿತು. ಪ್ರತಿದಿನ ಚಳಿ ಯ ಪ್ರಮಾಣ ಎಷ್ಟಿದೆ ಎಂದು ನೋಡಿ ಸಂತೋಷ ಪಡುತ್ತಾ ಇಂದು ಸಂಜೆ ಸ್ನೋ ಫಾಲ್ ಆಗಬಹುದು ಎಂಬ ನಿರೀಕ್ಷೆಯಲ್ಲಿ ದಿನ ಕಳೆಯ ತೊಡಗಿದೆ.

ಪ್ರತಿ ದಿನವು ಹೀಗೆ ನಿರೀಕ್ಷೆಯಲ್ಲಿದ್ದಂತೆ ಒಂದು ದಿನ ಬೆಳಗಿನ ಮುಂಜಾನೆಯಲ್ಲಿ ಕಿಟಕಿಯ ಬಳಿ ನಿಂತು ನೋಡಿದರೆ ಹತ್ತಿಯ ಹೂವು ಗಳು ಆಕಾಶದಿಂದ ಹಾರಿ ಭೂಮಿ ತಲುಪುತ್ತಿದೆಯೇನೋ ಎಂಬಂತೆ ಕಾಣುತ್ತಿತ್ತು. ಆ ಮಂಜಿನ ಉಂಡೆಗಳು ಕೆಳ ಬೀಳುವುದನ್ನು ನೋಡುವ ಸಂತೋಷವೇ ವರ್ಣಿಸಲಸಾಧ್ಯ . ಇದು ಇನ್ನು ಪ್ರಾರಂಭ ರಸ್ತೆಯೆಲ್ಲ ಮಂಜಿನಿಂದ ಮುಚ್ಚಿ ಕೊಂಡಿರುವುದನ್ನು ನೋಡಲು ಇನ್ನು ಸೊಗಸು ಆ ಸಂತೋಷವನ್ನು ಅನುಭವಿಸಬೇಕು ಎಂದು ಎಂದಿಗಿಂತ ತುಸು ಹುಮ್ಮಸ್ಸಿನಿಂದ ಕೆಲಸಗಳನ್ನು ಬೇಗ ಮುಗಿಸಿ ಕ್ಯಾಮೆರಾ ದಲ್ಲಿ ಸೆರೆಹಿಡಿಯುವ ಬಯಕೆಯೊಂದಿಗೆ ಕಿಟಕಿಯ ಬಳಿ ಬಂದು ನಿಂತೆ.

ಅಷ್ಟರಲ್ಲಾಗಲೇ ನನ್ನಾಸೆಗೆ ನೀರೆರಚುವಂತೆ ಹತ್ತಿಯ ಹೂವಿನಂತೆ ಬೀಳುತ್ತಿದ್ದ ಮಂಜು ಮಾಯವಾಗಿತ್ತು .ನನ್ನಾಸೆಗೆ ಪ್ರೋತ್ಸಾಹ ಕೊಡಲೆಂಬಂತೆ ನನ್ನವರು ಡಿಸೆಂಬರ್ ಮುಗಿಯುವುದರೊಳಗೆ ಮತ್ತೆ ಮಂಜು ಬೀಳುತ್ತದೆ ಎಂಬ ಸಣ್ಣ ಭರವಸೆ ನೀಡಿದರು . ಅಷ್ಟೇ ಸಾಕು ಎಂಬಂತೆ ಪ್ರತಿದಿನ ಬೀಳಬಹುದಾದ ಮಂಜಿಗೆ ಬೆಳಗಿನ ಜಾವ ಕಿಟಕಿಯಿಂದ ಇಣುಕಿ ನೋಡುತ್ತಾ ಡಿಸೆಂಬರ್ ಕಳೆದು ಹೋದಾಗ ಮನದಲ್ಲೊಂದು ನಿರಾಶೆ .

ಅಂದಿನಿಂದ ಕಾಯುತ್ತಿದ್ದ ಡಿಸೆಂಬರ್ ನ ಮಂಜಿನ ಮಳೆ ಬೀಳದುದ್ದರ ಬಗ್ಗೆ ಯಾರಲ್ಲಿ ಕೋಪ ತೋರಬೇಕೆಂಬುದು ತಿಳಿಯದೆ ಮತ್ತೆ ಸಣ್ಣದೊಂದು ಆಸೆಯೊಂದಿಗೆ ಹೊಸವರ್ಷದಲ್ಲಿ ಮಂಜು ಬಿಳಬಹುದೋ ಎಂಬ ಆಸೆಯೊಂದಿಗೆ ಕಾಯಲು ಪ್ರಾರಂಭಿಸಿದೆ . ಈಗ ಬೆಳಗ್ಗೆ ಎಂದಿನಂತೆ ಕಿಟಕಿಯ ಹೊರ ನೋಡದೆ ವಾತಾವರಣದ ಬಗ್ಗೆ ಮಾಹಿತಿ ಇರುವ ವೆಬ್ ಸೈಟ್ ನೋಡುತ್ತಿರುವುದು ಅನಿವಾರ್ಯವಾಯಿತು

ಅರ್ಪಿತಾ ಹರ್ಷ

1 comments:

Anonymous said...

Tumba chennagi varnisiddiri nimma anubhavavanuu.. Heege bareyiri..

Post a Comment