ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಕಡಲತಡಿ ಮಂಗಳೂರು ನವ ವಧುವಿನಂತೆ ಸಿದ್ದ

ವರದಿ: ದರ್ಶನ್ ಬಿ.ಎಂ ಚಿತ್ರ: ಹರ್ಷ ಪದ್ಯಾಣ

ಮಂಗಳೂರು : ಕಡಲತಡಿ ಮಂಗಳೂರಿನಲ್ಲಿ ಜ.12 ರಿಂದ 5 ದಿನಗಳ ಕಾಲ ನಡೆಯಲಿರುವ 17 ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ನಗರ ಸಿದ್ದವಾಗಿದೆ. ಬೀದಿ ಬೀದಿಗಳು ದೀಪಾಲಂಕೃತಗಳಿಂದ ಕಂಗೊಳಿಸುತ್ತಿವೆ. ದೇಶದ ಮೂಲೆ ಮೂಲೆಗಳಿಂದ ಯುವಜನರು ಈ ಯುವಜನೋತ್ಸವಕ್ಕೆ ಆಗಮಿಸುತ್ತಿದ್ದಾರೆ. ಇದಕ್ಕೆ ಜಿಲ್ಲಾಡಳಿತ ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ. ಟಿ.ಎಂ.ಎ ಪೈ ಹಾಲ್ನಲ್ಲಿ ಅತೀ ಗಣ್ಯರಿಗೆ ಹಾಗೂ ಸ್ಪರ್ಧಾರ್ಥಿಗಳಿಗೆ ಊಟದ ವ್ಯವಸ್ಥೆ ಉತ್ತಮ ರೀತಿಯಲ್ಲಿ ಜ.10 ರಿಂದಲೇ ಕಲ್ಪಿಸಲಾಗಿದೆ.
ಊಟಕ್ಕೆ ಪ್ರತಿ ದಿನ ದಕ್ಷಿಣ ಭಾರತೀಯ ಶೈಲಿಯ ಒಂದು ಮಾಂಸಾಹಾರಿ, 2 ಸಸ್ಯಹಾರಿ ಚಪಾತಿ ಮುಂತಾದ ಪದಾರ್ಥಗಳನ್ನು ಬಹಳ ಅತ್ಯುತ್ತಮವಾದ ರೀತಿಯಲ್ಲಿ ಕಲ್ಪಿಸಲಾಗಿದೆ. ದೆಹಲಿಯವರಿಗೆ ಊಟದ ಉಸ್ತವಾರಿಯನ್ನು ನೀಡಲಾಗಿದೆ. ವಿಶೇಷ ಏನೆಂದರೆ ಊಟಕ್ಕೆ ಬಾರ್ಕೋಡ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.


ಯುವಜನೋತ್ಸವಕ್ಕೆ ಪೊಲೀಸ್ ಇಲಾಖೆಯಿಂದ 1000 ಜನ ಪೊಲೀಸರನ್ನು ನೇಮಿಸಲಾಗಿದೆ. ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ ಹಾಗೂ ದ.ಕ ಜಿಲ್ಲೆಗಳಿಂದ ಆರಕ್ಷಕರನ್ನು ಕರೆಸಲಾಗಿದೆ. ಉತ್ತಮ ರೀತಿಯಲ್ಲಿ ಸುರಕ್ಷತೆ ವ್ಯವಸ್ಥೆಯೂ ಸಹ ಇಲ್ಲಿ ಕಲ್ಪಿಸಲಾಗಿದೆ.
ಗುತ್ತಿನ ಮನೆಯ ರೀತಿಯಲ್ಲಿ ವೇದಿಕೆಯನ್ನು ನಿರ್ಮಿಸಲಾಗಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ಅವರಿಗೆ ವೇದಿಕೆ ನಿರ್ಮಾಣದ ಜವಾಬ್ದಾರಿಯನ್ನು ನೀಡಲಾಗಿದ್ದು, ವೇದಿಕೆ ಸಿದ್ದಗೊಂಡಿದೆ.

ವಿಶೇಷ ಆಕರ್ಷಣೆ ಎಂದರೆ ಕರಾವಳಿ ಉತ್ಸವ ಗ್ರೌಂಡ್ನಲ್ಲಿ ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 10ರವರೆಗೆ ಆಹಾರೋತ್ಸವವನ್ನು ಏರ್ಷಡಿಸಲಾಗಿದೆ. ಯುವಕರಿಗಾಗಿಯೇ ಯುವ ಕೃತಿ ಪುಸ್ತಕ ಮೇಳವನ್ನು ಆಯೋಜಿಸಲಾಗಿದೆ. ನೆಹರು ಮೈದಾನ ಹಾಗೂ ಜೆಪ್ಪಿನ ಮೊಗರುವಿನಲ್ಲಿ ಸಾಹಸಮಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕದಿ ಪಾರ್ಕ್ನಲ್ಲಿ ಯುವ ಕಲಾವಿದರಿಗೆ ಕಾರ್ಯಗಾರವನನ್ನು ಜ.13 ರಿಂದ 15ರವರೆಗೆ ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ಏರ್ಪಡಿಸಲಾಗಿದೆ. ಪಿಲಿಕುಲ ನಿಸರ್ಗಧಾಮದಲ್ಲಿ ಕಂಬಳ ಹಾಗೂ ಪುಪ್ಷೋತ್ಸವನ್ನು ಕಲಿಸಲಾಗಿದೆ. ಅನೇಕ ವಿಶೇಷತೆಗಳನ್ನು ಈ ಬಾರಿಯ ಯುವಜನೋತ್ಸವದಲ್ಲಿ ಕಾಣಬಹುದಾಗಿದೆ.

0 comments:

Post a Comment