ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ವರದಿ: ರಾಹುಲ್ ಬಿ. ಚಿತ್ರ: ಹರ್ಷ ಪದ್ಯಾಣ
ಮಂಗಳೂರು: ಕೇರಳದಿಂದ 99ಜನ ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸಲು ಆಸೆಗಳನ್ನು ಹೊತ್ತುಕೊಂಡು ಬಂದಿದ್ದಾರೆ.ಅಂದಾಜು 20 ಜನ ಸಾಂಸ್ಕೃತಿಕ ಕಾರ್ಯಕ್ರಮ ನೀಡಲೋಸ್ಕರ ಕೇರಳದಿಂದ ಆಗಮಿಸಿದ್ದಾರೆ.


ಇವರು ಕಳರಿ ಹಾಗೂ ನಾಡಂಪಾಟ್ ಕಾರ್ಯಕ್ರಮಗಳನ್ನು ನೀಡಲು ಇಲ್ಲಿಗೆ ಆಗಮಿಸಿದ್ದಾರೆ.ಎಲ್ಲಾ ಸ್ಪರ್ಧೆಗಳಲ್ಲೂ ಅತ್ಯಂತ ವಿಶ್ವಾಸ ಹಾಗೂ ಉತ್ಸುಕತೆಯಿಂದ ಭಾಗವಹಿಸಲಾಗುವುದು ಎಂದು ಈ ಕನಸಿನೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.ಜಾನಪದ ನೃತ್ಯದಲ್ಲಿ 2004 ರಲ್ಲಿ ತೃತೀಯ ಸ್ಥಾನ ಗಳಿಸಿರುತ್ತಾರೆ.2004 ಹಾಗೂ 2005ರಲ್ಲಿ ಕ್ರಮವಾಗಿ ಹೈದರಾಬಾದ್ ಮತ್ತು ಬಿಹಾರದಲ್ಲಿ ನಡೆದ ಯುವಜನೋತ್ಸವದಲ್ಲಿ ಜಾನಪದ ಹಾಡಿನಲ್ಲಿ ಪ್ರಥಮ ಸ್ಥಾನ ಗಳಿಸಿರುವ ಕೇರಳ ತಂಡ ಈ ಬಾರಿ ಪ್ರಶಸ್ತಿಗೆಲ್ಲುವ ವಿಶ್ವಾಸ ಹೊಂದಿದೆ.

ಇವರ ಜಾನಪದ ನೃತ್ಯವು ಕುರುಚ್ಯ ಸಮುದಾಯದ ಬಗೆಗಿನದಾಗಿದೆ.ಇವರು ಪ್ರಾಚೀನ ಸಂಗೀತ ಉಪಕರಣಗಳನ್ನು ಮಾತ್ರ ಉಪಯೋಗಿಸಲಿದ್ದಾರೆ ಹಾಗೂ ಉಪಯೋಗಿಸುತ್ತಾರೆ.ಇವರು ಕೊಲ್ಲಂ ಕಾರ್ಪೋರೇಶನ್ ನ ಪ್ರತಿನಿಧಿಗಳಾಗಿದ್ದಾರೆ.ಕೊನೆಯ ವರ್ಷಕ್ಕಿಂತ ವಿಭಿನ್ನವಾಗಿ ಈ ಬಾರಿ ಹಳ್ಳಿಯ ಕಲೆ,ಸಂಸ್ಕೃತಿಗಳ ಬಗೆಗೆ ಇವರು ಹೆಚ್ಚಿನ ಪ್ರಾಧಾನ್ಯತೆ ಕೊಟ್ಟು ಪ್ರದರ್ಶಿಸಲಿದ್ದಾರೆ.ಗಡಿನಾಡ ಕಾಸರಗೋಡಿನ ಯುವಕಲಾವಿದರು ನಾಟಕ ಪ್ರದರ್ಶನ ನೀಡಲಿದ್ದು 12ಜನರ ತಂಡ ಭಾಗವಹಿಸುತ್ತದೆ.ಕೋಝಿಕ್ಕೋಡಿನ ಪ್ರೇಮನ್ ನಿರ್ದೇಶದಲ್ಲಿ ಈ ನಾಟಕ ಮೂಡಿಬರಲಿದ್ದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದೆ. ಎಲ್ಲಾ ಪ್ರಕಾರಗಳಲ್ಲೂ ಉತ್ತಮ ಪ್ರದರ್ಶನ ನೀಡಲಾಗುವುದು ಎಂಬ ವಿಶ್ವಾಸ ಟೀಂ ಮೇನೇಜರ್ ಪಿ.ಪಿ.ವಿನೋದನ್ ಕಣ್ಣೂರ್ ಅವರದ್ದು.

0 comments:

Post a Comment