ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮಂಗಳೂರು: ಯುವಜನೋತ್ಸವದಲ್ಲಿ ಎಲ್ಲ ಸ್ಟಾಲ್ಗಳಲ್ಲೂ ಮಾರಾಟ ವಸ್ತುಗಳಿಂದ, ಗಾಹಕರಿಂದ ಮುಗಿಬಿದ್ದರೆ ,ಆ ಒಂದು ಸ್ಟಾಲ್ ಮಾತ್ರ ಅಲ್ಲಿರುವ ಎಲ್ಲಕಿಂತ ಭಿನ್ನವಾಗಿ ಗೊಚರಿಸುತ್ತಿದ್ದವು .ಕಾರಣ ಅದು ಗ್ರಾಹಕರನ್ನು ಒಲೈಸುವ ಮಾರಾಟ ಕೇಂದ್ರವಾಗಿರದೆ, ಭಾರತದ ವಿಶಾಲ ನೌಕಾಪಡೆಯ ಸಂಪೂರ್ಣ ಶಕ್ತಿಯ ವಿವರ ನೀಡುವ ಮಾಹಿತಿ ಕೇಂದ್ರವಾಗಿತ್ತು.


ಭಾರತೀಯ ಕರಾವಳಿ ರಕ್ಷಣಾ ಪಡೆಯ ಈ ಸ್ಟಾಲ್ನಲ್ಲಿ ಮುಖ್ಯವಾಗಿ ಪುರಾತನ ಕಾಲದ ಯುದ್ದ ನೌಕೆಯಿಂದ ಹಿಡಿದು ,ಆಧುನೀಕತೆ ಸುಧಾರಿತ ಯುದ್ದ ನೌಕೆಗಳ ಪರಿಚಯಿಸುವ ಹಿನ್ನಲೆಯಲ್ಲಿ ಸಣ್ಣ ಸಣ್ಣ ಹಡಗುಗಳ ಮಾದರಿಗಳು, ಪೋಟೋಗಳನ್ನು ಇರಿಸಲಾಗಿದೆ .ಅಷ್ಟು ಮಾತ್ರವಲ್ಲದೆ ಜೀವರಕ್ಷಣೆ ಪ್ರಾತ್ಯಕ್ಷಿಕೆಯ ವ್ಯವಸ್ಥೆಯೂ ಇವೆ.ಹಡಗು ಪ್ರಕೋಪಕ್ಕೆ ತುತ್ತಾದಾಗ ಪರಿಸ್ಥಿತಿ ನಿರ್ವಹಣೆಗೆ ತೆಗೆದು ಕೊಳ್ಳುವ ಪರಿಕರಗಳು, ಹಡಗುಗಳಲ್ಲಿನ ತೈಲ ಸೋರಿಕೆಯಿಂದ ಉಂಟಾಗುವ ಸಮುದ್ರದಲ್ಲಿನ ಜಲಮಾಲಿನ್ಯದ ಪರಿಹಾರಕ್ಕೆ ಬಳಸುವ ಸಾಧನಗಳ ಪರಿಚಯ ಈ ಸ್ಟಾಲ್ ನಿಂದ ಸಾಧ್ಯ.

ಒಟ್ಟಿನಲ್ಲಿ ಕರಾವಳಿ ರಕ್ಷಣಾ ಪಡೆಯ ಪೂರ್ಣ ವಿವರವನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಅಲ್ಲದೆ ಈ ಬಗ್ಗೆ ಮಾಹಿತಿಯನ್ನು ನೀಡಲೆಂದೆ ಕರಾವಳಿ ರಕ್ಷಣಾ ಪಡೆಯ ಅಧಿಕಾರಿಗಳು ಇಲ್ಲಿದ್ದಾರೆ.

0 comments:

Post a Comment