ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವರ್ಣರಂಜಿತ ಮುಕ್ತಾಯ ಕಂಡ ರಾಷ್ಟ್ರೀಯ ಯುವಜನೋತ್ಸವ

ಮಂಗಳೂರು: ಕಳೆದ ಐದು ದಿನಗಳಿಂದ ಮಂಗಳೂರಿನಲ್ಲಿ ನಡೆಯುತ್ತಿರುವ 17ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ "ಅಂತಿಮ ತೆರೆ" ಬಿದ್ದಿದೆ. ತನ್ಮೂಲಕ ರಾಷ್ಟ್ರೀಯ ಯುವಜನೋತ್ಸವ ಸಮಾಪನಗೊಂಡಿದೆ. ಮಂಗಳೂರಿನ ವಿವಿಧೆಡೆಗಳಲ್ಲಿ ನಿರಂತರ ಸ್ಪರ್ಧೆ, ಕಾರ್ಯಕ್ರಮ...ಐದು ದಿನಗಳ ಕಾಲ ಸಾಂಸ್ಕೃತಿಕ ಉತ್ಸವದ ಸವಿ ಸವಿಯುವ ಭಾಗ್ಯ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡದ ಕಲಾಸಕ್ತರದ್ದಾಗಿತ್ತು.
ನಭೂತೋ ಎಂಬಂತೆ ಕಳೆದ ಐದು ದಿನಗಳ ಕಾಲ ನಡೆದ ಸಮ್ಮೇಳನದ ಗುಂಗಿನಲ್ಲೇ ಇದ್ದ ಮಂದಿ ಸಮಾರೋಪದ ನಂತರದ ಮನೋರಂಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾರದ ಹೆಜ್ಜೆಗಳೊಂದಿಗೆ ತೆರಳಿದರು. ಮಂಗಳೂರಿನ ಮಂಗಳಾ ಕ್ರೀಡಾಂಗಣದ ಹಲವು ಪ್ರಮುಖ ಕಾರ್ಯಕ್ರಮಗಳ ಪಟ್ಟಿಗೆ 17ನೇ ರಾಷ್ಟ್ರೀಯ ಯುವಜನೋತ್ಸವವೂ ತನ್ಮೂಲಕ ಸೇರ್ಪಡೆಗೊಂಡಂತಾಯಿತು.ಸಭಾಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎನ್.ಎಸ್.ಚೆನ್ನಪ್ಪ ಗೌಡ ವಂದಿಸಿದರು.

0 comments:

Post a Comment