ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಯುವಾ
2012ರಲ್ಲಿ ಭೂಕಂಪಗಳು ಸಂಭವಿಸುತ್ತವೆ, ಜ್ವಾಲಮುಖಿಗಳು ಸ್ಪೋಟಿಸುತ್ತವೆ, ದೈತ್ಯಾಕಾರದ ಸುನಾಮಿಗಳು ಜಗತ್ತಿನ ಭೂ ಭಾಗಕ್ಕೆ ಅಪ್ಪಳಿಸುತ್ತವೆ, ಗಂಡಾತರ ವಾಗುತ್ತದೆ, ಜಗತ್ತಿನ ತಾಪಮಾನ ಏರು-ಪೇರು ಆಗುತ್ತದೆ, ಬೆಂಕಿಯ ಮಳೆ ಸುರಿಯುತ್ತದೆ, ಭೂಮಿ ಬರಡಾಗುತ್ತದೆ, ಪ್ರಳಯವಾಗುತ್ತದೆ.. ಅಬ್ಬಬ್ಬ ಎಂಥ ಸುಂದರ ಕಲ್ಪನೆ, ಬಹುಶಃ ಇತ್ತೀಚಿನ 2012ರ ಸಿನಿಮಾಗಿಂತಲೂ ರೋಚಕ.ಈ ಕಥೆಗೆ ಆಧಾರಗಳಿವೆ. ಮೆಕ್ಸಿಕೋದಲ್ಲಿ ಸುಮಾರು 400 ವರ್ಷಗಳ ಹಿಂದೆ ಅಂತ್ಯವಾದ 'ಮಾಯನ್' ಜನಾಂಗದ ಕ್ಯಾಲೆಂಡರ್ನಲ್ಲಿ ಇದು ಉಲ್ಲೇಖವಾಗಿದೆ. ಬೈಬಲ್ ನಲ್ಲಿಯೂ ಇದನ್ನು ಹೇಳಲಾಗಿದೆ ಹಾಗೂ ನಾಸಾದ ವಿಜ್ಞಾನಿಗಳೂ ಇದನ್ನೇ ಹೇಳಿದ್ದಾರೆ. ಇತ್ತೀಚಿನ ವೈಜ್ಞಾನಿಕ ಮಾಹಿತಿಗಳು ಇಂತಹ ಸಾಧ್ಯತೆಗಳ ಬಗ್ಗೆ ವಿವರ ನೀಡಿವೆ.

ನಮ್ಮ ದೇಶದ ಜ್ಯೋತಿಷಿಗಳು ಹಾಗೂ ಜಗತ್ತಿನ ಹಲವಾರು ಜ್ಯೋತಿಷಿಗಳು ಇದರ ಕುರಿತು ಪುರಾವೆಗಳನ್ನು ನೀಡಿದ್ದರೆ. ಭೂಮಿಯ ಹೃದಯ ಬಡಿತವನ್ನು ಮಾಪನ ಮಾಡುವ ಸಾಧನೆಗಳೇ ಭೂಮಿಯ ಅಂತರಾಳದಲ್ಲಿ ಆಗುತ್ತಿರುವ ಏರಿಳಿತಗಳ ಬಗ್ಗೆ ಖಚಿತ ಅಂಕಿ ಅಂಶಗಳನ್ನು ನೀಡಿವೆ. ನಮ್ಮ ಭೂಮಿ ಹಿಂದೊಮ್ಮೆ ಖಂಡಾಂತರ ಚಲನೆಗೆ ಒಳಪಟ್ಟು ಈಗಿನ ಭೂ ಭಾಗಗಳಾಗಿರುವುದರಿಂದ, 2012ರಲ್ಲೇ ಪುನಃ ಖಂಡಾಂತರವಾಗುದನ್ನು ಖಾತ್ರಿಯಿಂದ ಹೇಳಬಹುದು ಎನ್ನಲಾಗಿದೆ. ಇವೆಲ್ಲವುಗಳೊಂದಿಗೆ ವಾಯುಮಾಲಿನ್ಯ, ಜಗತ್ತಿನ ತಾಪ ಏರಿಕೆ, ಅಣು ಪರೀಕ್ಷೆ, ಭೂಮಿಯೊಳಗೆ ಏರುಪೇರುಗಳಾಗಿ ಮಾನವ ಕುಲ ವಿನಾಶದ ಅಡಿಗೆ ತಲುಪುವುದು ಖಂಡಿತ ಎನ್ನುತ್ತಿದ್ದರೆ.

ಇನ್ನೂ ಕೆಲವೇ ದಿನಗಳಲ್ಲಿ ಜಗತ್ತಿನ ಅವನತಿಯ ಗಳಿಗೆಯನ್ನು ನೋಡುವಂತಹ ದೌರ್ಭಾಗ್ಯ ನಮ್ಮದಾಗಿರುತ್ತದೆ!

ಅದು ಇದೇ ಡಿಸೆಂಬರ್ 21, 2012! ಭಾರತದಲ್ಲಿ ಅತ್ಯಂತ ವ್ಯವಸ್ಥಿತವಾಗಿರುವ ಧಾರ್ಮಿಕ ಹಾಗೂ ಜ್ಯೋತಿಷಿ ಶಾಸ್ತ್ರದ ಪ್ರಕಾರ ನಾವಿನ್ನೂ ಕಲಿಯುಗದ ಆರಂಭದಲ್ಲಿದ್ದೇವೆ. ಆದ್ದರಿಂದ ಭಾರತೀಯ ಪೌರಾಣಿಕ ಹಾಗೂ ಆಧ್ಯಾತ್ಮಿಕ ಸತ್ಯಗಳ ಪ್ರಕಾರ ಪ್ರಳಯ ಇನ್ನೂ ಬಹುದೂರದ ವಿಚಾರ. ಪ್ರಪಂಚ ವಿನಾಶದ ವಿಷಯ ಪ್ರಸ್ತಾಪ ಸಧ್ಯಕ್ಕೆ ಅನುಗುಣವಾಗುವಂತೆ ಎಲ್ಲೂ ಕಂಡು ಬರುವುದಿಲ್ಲ. ಶಾಸ್ತ್ರಗಳಲ್ಲಿ ಭಾರತವನ್ನು ದೈವ ನಿರ್ಮಿತ ರಾಷ್ಟ್ರವೆಂದು ಬಿಂಬಿಸಲಾಗಿದೆ. ದೈವವೇ ಸ್ಥಾಪಿಸಿದ ರಾಷ್ಟ್ರವನ್ನು ದೈವವೇ ಕಾಪಾಡುತ್ತದೆ ಎಂದರು ತಪ್ಪಾಗಲಾರದು. ಹಾಗಾದರೆ ಇಡೀ ಪ್ರಪಂಚ ನಾಶವಾದರೂ ಭಾರತ ಉಳಿಯುವ ಸಾಧ್ಯತೆ ಇದೆಯೇನೋ? ಆದ್ದರಿಂದ ಭಾರತ ಸುರಕ್ಷಿತ ಎನ್ನುವ ತಾತ್ಕಾಲಿಕ ಧೈರ್ಯವನ್ನು ಮನಸ್ಸಿನಲ್ಲಿಟುಕೊಂಡು 2012ರನ್ನು ಸ್ವಾಗತಿಸೋಣ..

ಇನ್ನೂ ಕೆಲವು ಮಾಹಿತಿಗಳ ಪ್ರಕಾರ ಮಾಯನ್ ಕ್ಯಾಲೆಂಡರ್ಗೂ ಮತ್ತು ನಮ್ಮ ಕ್ಯಾಲೆಂಡರ್ಗಳಿಗೂ ನೂರಾರು ವರ್ಷಗಳ ವ್ಯತ್ಯಾಸ ಇರುವ ಸಾಧ್ಯತೆ. ಮಾಯನ್ನರು ಹೇಳಿದ ವರ್ಷ ನಮ್ಮ ಕ್ಯಾಲೆಂಡರ್ನ 2012 ಇಸವಿ ಆಗಿರಬಹುದು, 2112, 2212 ಕೂಡ ಆಗಿರಬಹುದು. ಮಾಯನ್ನರ ಬಗ್ಗೆ ತೆಲೆಕೆಡಿಸಿಕೊಳ್ಳವುದನ್ನು ಬಿಟ್ಟು. ಹಳೆಯ ವರ್ಷದ ಆಸೆ, ಕನಸುಗಳು ನನಸಾಗಲಿಲ್ಲ ಎಂಬ ನೋವಿನ ಮುಂದೆ ಹೊಸ ವರ್ಷ ಬಂದು ನಿಂತಿದೆ. ಈಡೇರಲಿಲ್ಲ ಎಂಬ ಕನಸಿಗೆ ಮತ್ತೆ ಜೀವ ಬಂದಿದೆ. ಜೀವನದಲ್ಲಿ ಬರೀ ಆಸೆ, ಕನಸಿಗೆ ಬಣ್ಣ ಬಳಿದು ಚಿತ್ತಾರ ಮೂಡಿಸುವ ಜತ ಜತಗೆ ಅವುಗಳಿಗೆ ರೂಪ ನೀಡಲು ತುಸ್ಸು ಯತ್ನಿಸಿದರೆ ನನಸಾಗುವುದು ಖಂಡಿತ.

ರಂಗಪ್ಪ ಉಪ್ಪಾರ್
ಪತ್ರಿಕೋದ್ಯಮ ವಿಭಾಗ
ಗುಲ್ಬರ್ಗಾ ವಿಶ್ವವಿದ್ಯಾಲಯ
ಗುಲ್ಬರ್ಗಾ

2 comments:

Mallikarjun D Apachand said...

very nice article yaar.. keep it up..

Amaresh Nayak said...

Rangappa,
Your Article is Super, your wiritting is well, you have been writting Article Continiously.
you become a best writter any other person.
keep it up, once again congrats.
Thank you E-Kanasu
Amaresh Nayak
Raichur.

Post a Comment