ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ


ಮಂಗಳೂರು: 17ನೇ ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ "ನೇತ್ರಾವತಿ _ ಫಲ್ಗುಣಿ" ಜೋಡುಕರೆ ಕಂಬಳ ಮಂಗಳೂರಿನ ಹೊರವಲಯದಲ್ಲಿರುವ ಪಿಲಿಕುಳ ನಿಸರ್ಗಧಾಮದ ಗುತ್ತು ಮನೆಯ ಮುಂಭಾಗದಲ್ಲಿರುವ ಬಾಕಿಮಾರು ಗದ್ದೆಯಲ್ಲಿ ನಿರ್ಮಿಸಿದ ಜೋಡುಕೆರೆಯಲ್ಲಿ ಆರಂಭಗೊಂಡಿತು.ಸರಕಾರದ ಆಶ್ರಯದಲ್ಲಿ ನಡೆಯುತ್ತಿರುವ ಈ ಕಂಬಳದಲ್ಲೂ ಹಿಂಸಾಚಾರ ಮುಂದುವರಿದಿತ್ತು.

ಕಂಬಳದ ಕೋಣಗಳ ಮೈ ಚರ್ಮ ಒಡೆಯುವಂತೆ ಹೊಡೆತ ನೀಡಲಾಗುತ್ತಿತ್ತು. ಕಂಬಳದ ಕರೆಯಲ್ಲಿ ಕೆಸರು ನೀರಿನೊಂದಿಗೆ ರಕ್ತ ಚಿಮ್ಮುತ್ತಿತ್ತು. ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವ, ಶಾಸಕರ ಸಮ್ಮುಖದಲ್ಲೇ ನಡೆಯುತ್ತಿದ್ದು ಈ ಕೃತ್ಯವನ್ನು ಅವರೆಲ್ಲ ವೀಕ್ಷಿಸುತ್ತಿದ್ದರು. ಒಂದೆಡೆ ಪ್ರಾಣಿಗಳ ಮೇಲೆ ನಿರಂತರ ದೌರ್ಜನ್ಯ. ಸಾಂಪ್ರದಾಯಿಕ ಕ್ರೀಡೆ ಉಳಿಯ ಬೇಕು , ಬೆಳೆಯ ಬೇಕು ಹೌದು. ಆದರೆ ಕ್ರೌರ್ಯ ನಡೆಯುವುದು ಸರಿಯಲ್ಲ. ಪ್ರಾಣಿಗಳ ವಿಚಾರದಲ್ಲಿ ಧ್ವನಿ ಎತ್ತುವ ಪ್ರಾಣಿದಯಾ ಸಂಘಗಳು ಮಾತ್ರ ಇವೆಲ್ಲದರ ಬಗ್ಗೆ ಮೌನ ತಾಳಿರುವುದು ಸೋಜಿಗ!


0 comments:

Post a Comment