ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ನೃತ್ಯ ಎಂದರೆ ಸಾಕು ಮಂಗಳೂರಿಗರ ಮನ ಕುಣಿಯತೊಡಗಿದೆ. ದೇಶದ ಮೂಲೆ-ಮೂಲೆಗಳ ಸಂಪ್ರದಾಯ ಮಂಗಳೂರಿಗರ ಮನೆಬಾಗಿಲಿಗೆ ಬಂದಿದೆ. ಒಂದೇ ರಂಗ ಮಂಚದಲ್ಲಿ ನೂರಾರು ಬಗೆಯ ನೃತ್ಯ ಸಂಪ್ರದಾಯಗಳು ಕಾಣುವ ಅವಕಾಶ ಸಿಕ್ಕಿದ್ದು ಬಾಗ್ಯವೇ ಸರಿ. ಇಂತಹ ಒಂದು ಅವಕಾಶ ರಾಷ್ಟ್ರೀಯ ಯುವಜನೋತ್ಸವ ಮಾಡಿಕೊಟ್ಟಿದೆ. ಭರತನಾಟ್ಯಂ, ಒಡಿಸ್ಸಿ, ಕೂಚುಪುಡಿ,ಮಣಿಪುರಿ ಹೀಗೇ ವಿವಿದ ಬಗೆಯ ನೃತ್ಯಗಳ ಸಂಗಮ ಇಲ್ಲಿನ ಗೋಕರ್ಣನಾಥೇಶ್ವರ ಸಭಾಂಗಣದಲ್ಲಿ ನಡೆಯುತ್ತಿದೆ.

ಇಂದೂ ಕೂಡ ಇಲ್ಲಿನ ಗೋಕರ್ಣನಾಥೇಶ್ವರ ಸಭಾಂಗಣದಲ್ಲಿ ಕೂಚುಪುಡಿ ನಥತ್ಯ ಸ್ಪರ್ದೆ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ತೀರ್ಪು ಗಾರರಾದ ಗುರು ಎಸ್.ಪಿ..ಭಾರತಿ,ರಂಜನಾ ಶಂಕರ್, ಡಾ.ಸರಸ್ವತಿ ನಡೆಸಿದರು. ದೀಪ ಬೆಳಗುವುದರೊಂದಿಗೆ ಸಾಂಪ್ರದಾಯಿಕವಾಗಿ ಶುರುವಾದ ಈ ಕಾರ್ಯಕ್ರಮ ನೃತ್ಯ ಸಂಗಮಕ್ಕೆ ಎಡೆ ಮಾಡಿಕೊಟ್ಟಿತು. ಆಂದ್ರ ಪ್ರದೇಶ, ಮದ್ಯಪ್ರದೇಶ, ಕರ್ನಾಟಕ, ಹರಿಯಾಣ, ಮಣಿಪುರಿ ಹೀಗೆ 10 ರಾಜ್ಯಗಳ ಸರ್ದಿಗಳು ಈ ಸ್ಪರ್ದೆಯಲ್ಲಿ ಭಾಗವಹಿಸಿದ್ದರು.

ಆಂದ್ರ ಮೂಲದ ಈ ಶಾಸ್ತ್ರೀಯ ನೃತ್ಯ ಪ್ರಕಾರ ಬಹಳ ವಿಶಿಷ್ಟವಾದುದಾಗಿದೆ. ಕೂಚುಪುಡಿ ಎಂಬುದು ಆಂದ್ರದ ಒಂದು ಊರಿನ ಹೆಸರಾಗಿದ್ದು ಅಲ್ಲಿನ ಬ್ರಾಹ್ಮಣ ಮನೆತನದವರು ಬೆಳೆಸಿದ ನೃತ್ಯಪ್ರಕಾರವಾಗಿದೆ. ಇದು ಕೃಷ್ಣನ ಆರಾದನೆಯ ಮೂಲಕ ಆರಂಭವಾಗಿ ಈಗ ಇದರ ವ್ಯಾಪ್ತಿ ಇನ್ನಷ್ಟು ವಿಸ್ತಾರವಾಗಿದೆ. ಈ ನೃತ್ಯಕ್ಕೆ ಶುದ್ಧ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಬಳಸುವುದಾಗಿದ್ದು,ಸಂಗೀತಕ್ಕೆ ತಂಬೂರಿ ಮೃದಂಗ ವೀಣೆ ಬಲು ಮುಖ್ಯವಾಗಿರುತ್ತದೆ.

ಇದು ಶುದ್ಧ ಶಾಸ್ತ್ರೀಯ ನೃತ್ಯವಾಗಿದ್ದು ಕೃಷ್ಣನ ಆರಾದನೆ, ಆತನ ಬಾಲ್ಯ, ರಾದೆ-ಗೋಪಿಕೆಯರ ವಿರಹವನ್ನು ಸುವಿವರವಾಗಿ ವಿವರಿಸು ಕರ್ನಾಟಿಕ್ ಸಂಗೀತಕ್ಕೆ ಹೆಜ್ಜೆಗಳ ಮೇಳವನ್ನು ನೀಡುತ್ತದೆ. ಹಿಂದೆ ಕೇವಲ ಕೆಲವೊಂದು ವರ್ಗಕ್ಕೆ ಮೀಸಲಾಗಿದ್ದ ಈ ನೃತ್ಯ ಇಂದು ದೇಶದ ಎಲ್ಲೆಡೆ ಹರಡಿ ವಿಶ್ವ ಮಾನ್ಯತೆ ಪಡೆದು ಯುವಜನೋತ್ಸವಕ್ಕೂ ಲಗ್ಗೆ ಇಟ್ಟಿದೆ.

ಪ.ಬಂಗಾಳದ ಸ್ಪರ್ದೆಯಿಂದ ಶುರುವಾದ ನೃತ್ಯ ಕೊನೆಯ ಸ್ಪರ್ದೆಯವರೆಗೂ ನೋಡುಗರ ಕಣ್ಮನವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು. ಆದಿತಾಳದಲ್ಲಿ ಮೂಡಿಬಂದ ಯದುವಂಶ ಬುನಾಂಬುದಿ ಸಂಗೀತಕ್ಕೆ ಪಶ್ಚಿಮ ಬಂಗಾಳದ ಗೆಜ್ಜೆಗಳು ಕುಣಿಯಲಾರಂಭಿಸಿದಾಗ ಪ್ರೇಕ್ಷಕರು ಮೂಖರಾದರು..
ನಂತರದ ನೃತ್ಯಗಳಿಗೆ ತಾನೇನು ಸಾಟಿ ಇಲ್ಲ ಎಂಬಂತೆ ಬಂದ ಮದ್ಯ ಪ್ರದೇಶದ ನೃತ್ಯಗಾತಿ ರಾಜ್ಶ್ರೀ ರಾಜ್ ಹೆಜ್ಜೆ ಹಾಕಿದ್ದು ದೇವಿಸ್ತುತಿಗೆ. ಮಹಿಷಾಸುರನ ರಾಕ್ಷಸೀಯ ಕೃತ್ಯಗಳು ಮೂರೂ ಲೋಕದಲ್ಲಿ ಹೆಚ್ಚಾದಾಗ ದೇವಿ ಮರ್ಧಿನಿಯಾಗಿ ಬಂದು ಲೋಕ ಸಂರಕ್ಷಣೆ ಮಾಡುವುದು ಇದರ ಕತೆಯಾಗಿದೆ. ಶಣ್ಮುಕ ಪ್ರಿಯರಾಗ,ಆದಿ ತಾಳಗಳಲ್ಲಿ ಮೂಡಿಬಂದ ಹಾಡಿಗೆ ಸುಂದರವಾಗಿ ಹೆಜ್ಜೆ ಹಾಕಿದ ರಾಜ್ಶ್ರೀ ಪ್ರೇಕ್ಷಕರನ್ನು ಮಂತ್ರ ಮುಗ್ದರನ್ನಾಗಿ ಮಾಡಿದರು. ಅಂತೂ ಕರಾವಳಿ ರಂಗಮಂಚದಲ್ಲಿ ಮೂಡಿಬಂದ ನೃತ್ಯ ವೈವಿದ್ಯ ಜನಮನಸೂರೆಗೊಂಡಿತು.

-ರಾಧಿಕಾ.ಕೆ.ವಿಟ್ಲ

0 comments:

Post a Comment