ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಭಕ್ತಿ ಸಿಂಚನ
ಅರಮನೆಯಲ್ಲೊಮ್ಮೆ ಶಿಬಿ ಸಿಂಹಾಸನದಲ್ಲಿ ಕುಳಿತಿದ್ದಾಗ ಪಾರಿವಾಳವೊಂದು ಆತನ ತೊಡೆಯನ್ನಾಶ್ರಯಿಸಿ ರಕ್ಷಣೆಯನ್ನು ಬೇಡಿತು. ಎದುರಿನಲ್ಲಿ ಆ ಪಾರಿವಾಳವನ್ನು ಅಟ್ಟಿಸಿಕೊಂಡು ಬಂದ ಗಿಡುಗವು ರಾಜನನ್ನು ಕುರಿತು ಇದು ನನ್ನ ಆಹಾರ. ಇದನ್ನು ಬಿಟ್ಟು ಕೊಡು. ಆಹಾರವಿಲ್ಲದೆ ನಾನು ಸತ್ತರೆ ನಿನಗೆ ಯಾವ ಧರ್ಮಫಲ
ಪ್ರಾಪ್ತವಾಗುವುದು? ಎಂದು ತನ್ನ ಬೇಟೆಯ ಹಕ್ಕೊತ್ತಾಯವನ್ನು ಮಂಡಿಸಿತು.

ಚಕ್ರವರ್ತಿಗೆ ಉಭಯ ಸಂಕಟ. ಪಾರಿವಾಳವನ್ನು ಕೊಟ್ಟರೆ ಅದರ ಪ್ರಾಣಕ್ಕೇ ಸಂಚಕಾರ. ಕೊಡದಿದ್ದರೆ
ಗಿಡುಗನಿಗೆ ತನ್ನಿಂದ ಅನ್ಯಾಯ. ಕೊನೆಗೆ ಪಾರಿವಾಳಕ್ಕೆ ಪ್ರತಿಯಾಗಿ ತನ್ನ ದೇಹದ ಮಾಂಸವನ್ನೇ ದಾನ ಮಾಡುವ
ಕರಾರನ್ನು ಮುಂದಿಡುತ್ತಾನೆ ಶಿಬಿ. ಮಾಂಸ ಅಳೆಯಲು ತಕ್ಕಡಿ ಸಿದ್ಧವಾಗುತ್ತದೆ. ಚಕ್ರವರ್ತಿಯ ದೇಹವನ್ನು ಕತ್ತರಿಸಲು
ಯಾರು ತಾನೇ ಮುಂದಾಗುತ್ತಾರೆ? ಕೊನೆಗೆ ತಕ್ಕಡಿಯ ಒಂದು ಪಾರ್ಶ್ವದಲ್ಲಿ ಪಾರಿವಾಳವನ್ನಿಟ್ಟು ಮತ್ತೊಂದೆಡೆ
ತಾನೇ ಸ್ವತಃ ತನ್ನ ದೇಹದ ಮಾಂಸವನ್ನು ಕತ್ತರಿಸಿ ಇಡಲಾರಂಭಿಸುತ್ತಾನೆ ಶಿಬಿ.

ಕೈ ಕಾಲುಗಳೆಲ್ಲವನ್ನೂ ಕತ್ತರಿಸಿಟ್ಟರೂ ಪಾರಿವಾಳದ ತೂಕಕ್ಕೆ ಸಮನಾಗುವುದಿಲ್ಲ. ಮಾತಿಗೆ ಬದ್ಧನಾದ ಆತ ಅಂತಿಮವಾಗಿ ಇಡೀ ದೇಹವನ್ನೇ ಗಿಡುಗನಿಗೆ ಸಮರ್ಪಿಸಿಬಿಡುತ್ತಾನೆ.

ಎಂಥ ಆದರ್ಶ! ಅದೆಂಥ ಸಮರ್ಪಣೆ. ಮನುಕುಲಕ್ಕಾಗಿ ಶತಶತಮಾನಗಳಿಂದ ತನ್ನೆಲ್ಲವನ್ನೂ
ಧಾರೆಯೆರೆಯುತ್ತಿರುವ ಗೋಮಾತೆಗೆ ಇಂದು ನಾವೂ ಸಹ ಶಿಬಿಯಂತೆ ಸಂಪೂರ್ಣ ಸಮರ್ಪಣೆಗೆ ಮುಂದಾಗಬೇಕಿದೆ.
ಅಂಥ ಮಹಾಸಮರ್ಪಣೆಯ ಕಾಲಘಟ್ಟವಿದು.

ಅದಿರಲಿ. ಜೀವನದಲ್ಲಿ ಯಾರಿಂದಲೇ, ಎನನ್ನೇ ಪಡೆದರೂ ಅದಕ್ಕೆ ಪ್ರತಿಯಾಗಿ ಏನನ್ನಾದರೂ ಮರಳಿ
ಕೊಡಲೇ ಬೇಕು. ಇದು ಮಾನವ ಗುಣ. ಗೋಮಾತೆ ಕೇವಲ ಒಂದನ್ನಲ್ಲ, ಸರ್ವಸ್ವವನ್ನೂ ಕೊಟ್ಟಿದೆ. ಇದು ನಮ್ಮ
ತಲೆಮಾರಿಗಷ್ಟೇ ಸೀಮಿತವಾಗುಳಿದಿಲ್ಲ.

ಆಕೆಯದು ಸಾರ್ವಕಾಲಿಕ ವಾತ್ಸಲ್ಯಸ್ರೋತ. ಇದಕ್ಕೆ ಪ್ರತಿಯಾಗಿ ಆ ಮಹಾಮಾತೆಗೆ
ನಾವೇನು ಕೊಡಲು ಸಾಧ್ಯ? ಸ್ವಯಂ ಸಮರ್ಪಣೆಯೊಂದೇ ನಮಗಿರುವ ಮಾರ್ಗ.ಗೋ ಭಕ್ತರೇ !
ಗೋಮಾತೆಗೆ ನಾವು ನಮ್ಮ ಸರ್ವಸ್ವವನ್ನೂ ಕೊಡುವ ಕಾಲ ಬಂದಿದೆ.

ದುರಂತವೆಂದರೆ ನಮಗೆಲ್ಲ ಕೊಟ್ಟವಳ ಎಲ್ಲವನ್ನೂ ದೋಚುತ್ತಿದ್ದೇವೆ. ಕನಿಷ್ಠ ಕೃತಜ್ಞತೆಯೂ ವ್ಯಕ್ತವಾಗುತ್ತಿಲ್ಲ. ಇಂಥ ಸಂದರ್ಭದಲ್ಲೂ ಧ್ವನಿಯೆತ್ತದೇ ಕುಳಿತರೆ ಅದು ಖಂಡಿತಾ ಅಪಚಾರ. ಈ ಹಿನ್ನಲೆಯಲ್ಲಿಯೇ ಮಾತೆಗೊಂದು ಕೃತಜ್ಞತಾಪೂರ್ವಕ ಕೈಂಕರ್ಯ ಸಲ್ಲಿಸಲು ಮುಂದಾಗಿದ್ದೇವೆೆ.
ನಮ್ಮೊಂದಿಗೆ ಆ ಮಹಾಮಾತೆಯ ಹಾಲುಂಡ ಇಡೀ ಮಾನವಕುಲವೇ ಕೈಜೋಡಿಸಬೇಕಿದೆ.

ತುಂಬ ಕನಸುಗಳನ್ನು ಹೊತ್ತು ಗೋಸಂರಕ್ಷಣೆಯ ಆಂದೋಲನಕ್ಕಡಿ ಇಡಲಾಗಿದೆ. ಅದು ಪೂರ್ಣಗೊಳ್ಳಲು
ನಮ್ಮ ಕನಸು ಸಾಕಾರಗೊಳ್ಳಲು ಎಲ್ಲರ ಸಮರ್ಪಣೆ ಅಗತ್ಯ.
ಸುಖಕ್ಕೊಂದು ರೂಪವೇ ಗೋವು. ಅಂಥ ಸುಖಸ್ವರೂಪಿಣಿಗೇ ಇಂದು ಸಂಕಷ್ಟ ಬಂದೊದಗುತ್ತಿದೆ. ಇದನ್ನು
ನಿವಾರಿಸಲು ನಮ್ಮನ್ನು ನಾವು ಸಮರ್ಪಿಸಿಕೊಳ್ಳೋಣ. ಭೂಮಂಡಲವನ್ನೇ ಸುಖದ ಸ್ವರ್ಗವಾಗಿ ಪರಿವರ್ತಿಸೋಣ.
ನೀವೆಲ್ಲರೂ ಅಂಥ ಸುಖದ ಭಾಗವಾಗಿ ಬನ್ನಿ.
|| ವಂದೇ ಗೋಮಾತರಮ್ ||

0 comments:

Post a Comment