ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ವರದಿ: ಚೇತನಾ ವಸಿಷ್ಠ , ಚಿತ್ರ: ಇರ್ಷಾದ್ ಎಂ.ವೇಣೂರು

ಯುವಜನೋತ್ಸವದಂಗವಾಗಿ ಉದ್ಘಾಟನಾ ದಿನದಂದು ಬಾನಂಗಳದಲ್ಲಿ ಸಾಹಸ ಪ್ರದರ್ಶನ ನಡೆಯಿತು. ವೈವಿಧ್ಯಮಯ ವೈಮಾನಿಕ ಹಾರಾಟ ನೋಡುಗರನ್ನು ಮೋಡಿಮಾಡಿತು. ಬಾನಂಗಳದಲ್ಲಿ ಬೆಲೂನ್ ಗಳ ಹಾರಾಟ ಮನರಂಜಿಸಿತು.ಉದ್ಘಾಟನಾ ಸಮಾರಂಭದ ವೈಭವಕ್ಕೆ ಈ ಕಸರತ್ತುಗಳು ಸಾಕ್ಷಿಯಾದವು.ಹಲವು ವರ್ಣಗಳಿಂದ ಮಿನು-ಮಿನುಗುತ್ತಿದ್ದ ಗೂಡುದೀಪಗಳು..., ಕೇಸರಿ, ಬಿಳಿ, ಹಸಿರು ಬಣ್ಣದ ಬಲೂನ್ಗಳು, ಮೈದಾನಕ್ಕೆ ಕಳಸವಿಟ್ಟಂತೆ ದೊಡ್ಡ ವೇದಿಕೆ.. ವಿವಿಧ ಬಣ್ಣಗಳಿಂದ ಕಂಗೊಳಿಸುತ್ತಿದ್ದ ಸಭಾಂಗಣ.. ಎಲ್ಲೆಡೆ ಕ್ಯಾಮೆರಾಗಳು, ಭರಭರನೆ ಓಡಾಡುತಿದ್ದ, ಬಿಳಿ ಅಂಗಿಯ ಸ್ವಯಂ-ಸೇವಕರು... ಇದು ಯಾವುದೇ ಸಿನಿಮಾದ ದೃಶ್ಯವಾಗಲೀ, ನಾಟಕದ ನೋಟವಾಗಲೀ ಅಲ್ಲ. ಈಗ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 17ನೇ ರಾಷ್ರ್ಟೀಯ ಯುವಜನೋತ್ಸವದ ಒಂದು ಝಲಕ್...ಆ ದಿನ ಸಂಜೆ ಮಂಗಳೂರು ಎಂದಿನಂತಿರಲಿಲ್ಲ. ಆ ಸ್ಟೇಡಿಯಂನಲ್ಲಿ ಅಲ್ಲದೆ ಇಡೀ ನಗರಿಯಲ್ಲಿ ಹಬ್ಬದ ವಾತಾವರಣವಿತ್ತು. ಜಮ್ಮು- ಕಾಶ್ಮೀರದಿಂದ ಹಿಡಿದು ತಮಿಳುನಾಡಿನವರೆಗೆ ವಿವಿಧ ರಾಜ್ಯಗಳಿಂದ ಬಂದ ತಮ್ಮ ದೇಶದ ಬಂಧುಗಳನ್ನು ಸ್ವಾಗತಿಸುವ ಸಂಭ್ರಮದಲ್ಲಿ ನಾಗರೀಕರಿದ್ದರು. ಹಾಗೆಯೇ ತಾವು ಬೇರೆಲ್ಲೋ ದೂರದೂರಿಗೆ ಹೋಗಿದ್ದೇವೆಂಬ ಆತಂಕವಿಲ್ಲದಂತೆ ಆ ಬಂಧುಗಳು ನಮ್ಮಲ್ಲೊಬ್ಬರಾಗಿದ್ದರು. ವೇದಿಕೆಯೆದುರು ಅನಾವರಣಗೊಂಡಿದ್ದ ಎಲ್ಲರ ಪ್ರತಿಭೆಗಳು ಪ್ರೇಕ್ಷಕರ ಮನಸಾರೆಗೊಂಡವು.ಈ ಬಾರಿಯ ಯುವಜನೋತ್ಸವದ ಪ್ರತೀಕವಾದ 'ಯಕ್ಷಿ' ಆನೆಯ ಬಲೂನ್ ತಾನೂ ಎಲ್ಲರೊಂದಿಗೆ ಆನಂದದಿಂದ ಬೆರೆಯುತ್ತಿದ್ದೇನೆಂಬಂತೆ ನಸು-ನಗುತ್ತಿತ್ತು. ಅಷ್ಟರಲ್ಲಿ ಆಗಸದಲ್ಲಿ ಹಾರಿ ಬಂದ 3 ಗ್ಲೈಡರ್ಗಳು ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾದವು. ಅದರೊಂದಿಗೆ ಸಾಗಿದ ಹೆಲಿಕಾಪ್ಟರ್ ಪ್ರೇಕ್ಷಕರನ್ನು ತಣಿಸಲು ಪುಷ್ಪ ಮಳೆಗೈದಿತು.
0 comments:

Post a Comment