ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:24 PM

ಗಜಲ್

Posted by ekanasu

ಸಾಹಿತ್ಯ
ನನ್ನ ಬಾಳ ಬಾಂದಳಕೆ ಚಂದ್ರಿಕೆಯಾಗುವವಳೆ ಸಖಿ ಎಲ್ಲಿರುವೆ?
ಮನಸ ಬಾಂದಳಕೆ ಚುಕ್ಕೆಗಳಾಗುವವಳೆ ಸಖಿ ಎಲ್ಲಿರುವೆ?
ನನ್ನ ಗುಡಿಸಲ ದೀಪವ ಹಚ್ಚುತಿಲ್ಲ ನೀನಿಲ್ಲದೆ
ಪ್ರೀತಿ ರೂಪವನೆ ದೀಪ ಮಾಡಿರುವೆನು ನನ್ನವಳೆ ಸಖಿ ಎಲ್ಲಿರುವೆ?


ನಿನ್ನ ನೆನೆವ ನೆನಪುಗಳಿವು ಚಂದ್ರನಿಲ್ಲದ ಹುಣ್ಣಿಮೆಯಂತೆ
ನಿನ್ನ ಹುಡುಕುವ ನೋಟವದು ಕೆಂಪು ಹೂಗಳು ಸಖಿ ಎಲ್ಲಿರುವೆ?

ನಿನ್ನ ತವಕದಿ ಗಾಣದ ಎತ್ತಿನ ತರ ಸುತ್ತಿವೆ ಕಣ್ಣುಗಳು
ಸುತ್ತಿದ ಕಣ್ಣುಗಳಲೂ ಸ್ವಪ್ನವಾಗಿ ಕಾಡುವವಳೆ ಸಖಿ ಎಲ್ಲಿರುವೆ?

ಸುಮಧುರ ಸ್ವಪ್ನಗಳ ಸುಲಿದೊಗೆದು ಸುಧೆಯ ನನಸಾಗು
ಸಪ್ತಪದಿಯಲಿ ಒಲವ ಬಿಗಿದು ಜೊತೆಯಾಗು ನನ್ನವಳೆ
ಸಖಿ ಎಲ್ಲಿರುವೆ?

ಪ್ರಕಾಶ.ಬಿ.ಜಾಲಹಳ್ಳಿ

0 comments:

Post a Comment