ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಭಕ್ತಿ ಸಿಂಚನ
ಹಣವೊಂದು ಮಹಾ ವಿಚಿತ್ರ ವಸ್ತು..! ಅದು ಹೆಚ್ಚಾದರೂ ಸುಖವಲ್ಲ..!! ಕಡಿಮೆಯಾದರಂತೂ ಹೇಗೂ ಇಲ್ಲ..! ಕಡಿಮೆಯಾದರೆ ಹಾಹಾಕಾರ...ಹೆಚ್ಚಾದರೆ ಅಹಂಕಾರ.!!! ಸುಖವಿರುವುದು ಸಮತೋಲನದಲ್ಲಿ..!ಹಣ ಕಡಿಮೆಯಾಗದಿರಲು ಚೆನ್ನಾಗಿ ದುಡಿಯಬೇಕು..! ಹಣ ಹೆಚ್ಚಾಗದಿರಲು ಕೈಬಿಚ್ಚಿ ದಾನ ಮಾಡಬೇಕು ..!


ದುಡಿದದ್ದರಿಂದ ಹೊಟ್ಟೆ ತುಂಬಿತು, ದಾನ ಮಾಡಿದ್ದರಿಂದ ಹೃದಯವೂ ತುಂಬಿತು..! ನಮ್ಮ ಬದುಕಿಗೆ ಎಷ್ಟು ಹಣದ ಅಗತ್ಯವಿದೆಯೋ, ಅಷ್ಟು ಮಾತ್ರವೇ ನಮ್ಮದು..! ಮಿಕ್ಕಿದ್ದು ನಮ್ಮ ಬಳಿ ಇದ್ದರೂ ಪ್ರಯೋಜನವೇನೂ ಇಲ್ಲ..!ಅನ್ನದ ರಾಶಿಯೇ ಇದ್ದರೂ ಹೊಟ್ಟೆಗೆ ಹಿಡಿಯುವಷ್ಟೇ ತಾನೇ ಉಣ್ಣಲು ಸಾಧ್ಯ..! ಚಿನ್ನದ ರಾಶಿಯೇ ಇದ್ದರೂ ಮೈಯಿರುವಷ್ಟು ತಾನೆ ತೊಡಲು ಸಾಧ್ಯ !! ಅಂದರೆ ಹೆಚ್ಚಾದ ಹಣಕ್ಕಿರುವ ಒಂದು ಪ್ರಯೋಜನವನ್ನು ಅಲ್ಲಗಳೆಯಲಾಗದು... ಅದೆಂದರೆ "ಉಳಿತಾಯ "!!!

ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು.

0 comments:

Post a Comment