ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಿನೆಮಾ
ನಾಗತೀ ಹಳ್ಳಿ ಚಂದ್ರಶೇಖರ್ ಕನ್ನಡ ಚಿತ್ರರಂಗದಲ್ಲಿ ಹತ್ತು ಹಲವು ಹೊಸತನವನ್ನು ತಂದಂತಹ ವ್ಯಕ್ತಿತ್ವ. ಹೊಸ ಹೊಸ ಪ್ರತಿಭೆಗಳನ್ನು ಚಿತ್ರ ರಂಗಕ್ಕೆ ಪರಿಚಯಿಸುವ ಮೂಲಕ ಹೊಸ ಕ್ರಾಂತಿಗೆ ಕಾರಣರಾಗಿದ್ದಾರೆ. ಇದೀಗ ಬ್ರೇಕಿಂಗ್ ನ್ಯೂಸ್ ಎಂಬ ಹೊಸ ಚಿತ್ರವೊಂದನ್ನು ನಿರ್ಮಿಸುತ್ತಿದ್ದಾರೆ.ಈ ಚಿತ್ರದ ಹಾಡೊಂದನ್ನು ಪಶ್ಚಿಮ ಘಟ್ಟದಲ್ಲಿ ಚಿತ್ರೀಕರಿಸಬೇಕೆಂಬ ಚಿಂತನೆಯನ್ನೂ ಹಾಕಿಕೊಂಡಿದ್ದಾರೆ. ಇದೀಗ ಮಾತಿಗೆ ಸಿಕ್ಕಿದ ನಾಗತೀ ಹಳ್ಳಿ " ಈ ಕನಸು.ಕಾಂ " ಜೊತೆ ಒಂದಷ್ಟು ಅನುಭವ ಹಂಚಿಕೊಂಡರು.ನನ್ನ ಹೊಸ ಚಿತ್ರ ಬ್ರೇಕಿಂಗ್ ನ್ಯೂಸ್ನ ಚಿತ್ರೀಕರಣ ತಕ್ಕಮಟ್ಟಿಗೆ ಆಗಿದೆ ಎಂದ ನಾಗತಿಹಳ್ಳಿ ಫೆಬ್ರವರಿ ಮಧ್ಯಭಾಗದ ಹೊತ್ತಿಗೆ ಸಂಪೂರ್ಣವಾಗುತ್ತದೆ. ಮಾರ್ಚ್ ಮೊದಲ ವಾರದಲ್ಲಿ ಬಿಡುಗಡೆ ಮಾಡಬೇಕು ಅಂತ ಇದ್ದೇವೆ. ಹಾಡುಗಳ ಚಿತ್ರಕರಣ ಬಾಕಿ ಇದೆ. ಶೇಕಡಾ 90 ರಷ್ಟು ಚಿತ್ರೀಕರಣ ಬೆಂಗಳೂರಿನ ಸುತ್ತ ಮುತ್ತವೇ ನಡೆದಿದೆ. 6 ಹಾಡುಗಳು ಚಿತ್ರದಲ್ಲಿ ಇವೆ. ಒಂದನ್ನು ಕರ್ನಾಟಕದ ಪಶ್ಚಿಮಘಟ್ಟಗಳಲ್ಲಿ ಚಿತ್ರಿಸಬೇಕು ಅಂತಾ ಇದ್ದೇವೆ. ಇನ್ನುಳಿದ ಹಾಡುಗಳ ಚಿತ್ರೀಕರಣ ಕುರಿತು ಚರ್ಚೆ ನಡೆಯುತ್ತಾ ಇದೆ.

ಚಿತ್ರೀಕರಣ ಸಂದರ್ಭದಲ್ಲಿ ಒಂದು ದಿನವೂ ಸಹ ಯಾವುದೇ ತೊದರೆಯೂ ಆಗಲಿಲ್ಲ. ನಾಯಕ ನಾಯಕಿ ಹಾಗೂ ಎಲ್ಲ ಕಲಾವಿದರೂ ತುಂಬಾ ಸಹಕರಿಸಿದ್ದಾರೆ. ವಿಶೇಷ ಏನು ಅಂದರೆ 25 ವರ್ಷಗಳ ನಂತರ ನಾನು ಮತ್ತು ಅನಂತನಾಗ್ ಒಟ್ಟಿಗೆ ಕೆಲಸ ಮಾಡದ್ತಾ ಇದ್ದೇವೆ. ನನ್ನ ಪ್ರಥಮ ಚಿತ್ರ ಉಂಡುಹೋದ ಕೊಂಡುಹೋದ ದ ನಾಯಕರಾಗಿದ್ದರು.

ಅದು ಆದ ನಂತರ ಬಹಳ ದಿನಗಳ ಬಳಿಕ ನನ್ನ ಸೆಟ್ಗೆ ಅವರು ಬಂದಿದ್ದಾರೆ. ಈಗ ಅವರಿಗೆ 63 ವರ್ಷ ಈಗಲೂ ಕೂಡಾ ಅವರು ಅದೇ ಸೂಕ್ಷ್ಮತೆಗಳನ್ನು ಉಳಿಸಿಕೊಂಡಿದ್ದಾರೆ. ಅದರಿಂದ ನನಗೆ ಅವರ ಮೇಲೆ ತುಂಬಾ ಗೌರವ ಇದೆ. ಇದಲ್ಲದೇ ಸಾಧುಕೋಕಿಲ, ಮಂಡ್ಯ ರಮೇಶ್, ಸಿಹಿಕಹಿ ಚಂದ್ರು, ಕಾಸರಗೋಡು ಚಿನ್ನ, ರಂಗಾಯಣ ರಘು, ನಾಗರಾಜಮೂರ್ತಿ ಹೀಗೆ ಅನೇಕ ಕಲಾವಿದರು ಈ ಚಿತ್ರದಲ್ಲಿ ಇದ್ದಾರೆ. ಇಂದಿನ ಲ್ಯಾಂಡ್ ಮಾಫಿಯಾ, ಡಿನೋಟಿಫಿಕೇಷನ್, ಲೋಕಾಯುಕ್ತರು ಇದನ್ನೆಲ್ಲ ತಂದಿದ್ದೇನೆ. ಚಿತ್ರದಲ್ಲಿ ಒಂದು ಹೆಬ್ಬಾವು ಚೆನ್ನಾಗಿ ಅಭಿನಯ ಮಾಡಿದೆ. ಪೋಷಕ ನಟನ ಪಾತ್ರದಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ಅದನ್ನು ನಾವು ಲೈಸನ್ಸ್ ಪಡೆದು ಅಭಿನಯ ಮಾಡಿಸಿದ್ದೇವೆ. ತುಂಬಾ ವಿಡಂಭನಾತ್ಮಕವಾಗಿದೆ, ಚಿತ್ರ ಗೆದ್ದೇ ಗೆಲ್ಲುತ್ತೇ ಎಂಬ ಆತ್ಮ ವಿಶ್ವಾಸ ನನ್ನಲ್ಲಿ ಇದೆ ಎಂದರು.

ಬದಲಾವಣೆಯ ಗಾಳಿ
ಕನ್ನಡ ಚಿತ್ರರಂಗ ಮಾತ್ರವಲ್ಲದೇ ಎಲ್ಲಾ ಚಿತ್ರರಂಗಗಳಲ್ಲಿಯೂ ಕೂಡಾ ಇಂದು ಬದಲಾವವಣೆಗಳನ್ನು ಕಾಣುತ್ತಾ ಇದ್ದೇವೆ. ಬದಲಾವಣೆ ತಪ್ಪು ಅಂತ ಹೇಳುತ್ತಾ ಇಲ್ಲ. ಆದರೆ ಯಾವ ತರಹದ ಬದವಾವಣೆಗಳು ಬೇಕು ಎಂಬುದರ ಕುರಿತು ಇಂದಿನ ನಿರ್ದೇಶಕರು ನಿರ್ಮಾಪಕರು ಅರಿಯಬೇಕಾಗಿದೆ. ಕಪ್ಪು - ಬಿಳುಪಿನ ಚಿತ್ರಗಳಲ್ಲಿರುವ ಸಾಹಿತ್ಯಕ್ಕೂ ಇಂದಿನ ಸಾಹಿತ್ಯಕ್ಕೂ ಅಜಗಜಾಂತರ ವ್ಯತ್ಯಾಸವನ್ನು ಕಾಣಬಹುದಾಗಿದೆ. ಚಿತ್ರಗಳಲ್ಲಿ ನಟಿಸುವ ನಾಯಕಿಯರು ಕಳನಾಯಕಿಯರ ಡೈಲಾಗ್ಗಳನ್ನು ಹೇಳಿ ಚಿತ್ರಗಳ ಪಾತ್ರಕ್ಕೆ ಒಂದು ರೀತಿಯಲ್ಲಿ ಧಕ್ಕೆ ತರುತ್ತಿದ್ದಾರೆ.

ಇಂದು ಗದ್ಯಗಳು ಪದ್ಯಗಳಾಗುತ್ತಿವೆ!!!

ಇನ್ನು ಚಿತ್ರದ ಹಾಡುಗಳತ್ತ ಗಮನ ಹರಿಸಿದರೆ ಇಂದು ಪಾಠದಂತಿರುವ ಸಾಹಿತ್ಯವನ್ನು ಸಂಗೀತವನ್ನಾಗಿಸಿ ಹಾಡಲಾಗುತ್ತಿದೆ. ಇದು ಅಷ್ಟು ಸರಿ ಕಾಣುತ್ತಾ ಇಲ್ಲ. ಪದ್ಯ ಪದ್ಯವೇ ಪಾಠ ಪಾಠವೇ. ಸಂಗೀತಕ್ಕೆ ತನ್ನದೇ ಆದ ಸ್ಥಾನಮಾನವಿದೆ ಹಾಗೆಯೇ ಅದರ ಸಾಹಿತ್ಯಕ್ಕೂ ಕೂಡ. ಹಾಗಾಗಿ ಒಳ್ಳೆಯ ಚಿತ್ರಗೀತೆಗಳು ಇಂದು ಅಗತ್ಯ .

ವಾಣಿಜ್ಯ ಚಿತ್ರಗಳಲ್ಲಿಯೂ ಕೂಡಾ ಕಲೆಯನ್ನು ಕಾಣುವವನು ನಾನು.ಕಲಾತ್ಮಕ ಚಿತ್ರಗಳ ಕುರಿತು ಮಾತನಾಡುತ್ತಾ, ಅವರವರ ಅಭಿರುಚಿಗೆ ತಕ್ಕಂತೆ ಇಂದು ಕಲಾತ್ಮಕ ಚಿತ್ರಗಳು ತೆರೆಯ ಮೇಲೆ ಕಾಣುತ್ತಿವೆ. ನಾನು ಮೊದಲಿನಿಂದಲೂ ವಾಣಿಜ್ಯಿಕೃತ ಚಿತ್ರಗಳಲ್ಲಿ ಕಲೆಯನ್ನು ಕಾಣುತ್ತಿದ್ದೇನೆ. ಕಲಾ ಚಿತ್ರಗಳನ್ನೂ ಸಹ ಇಂದು ವಾಣಿಜ್ಯೀಕರಣದ ದೃಷ್ಠಿಯಿಂದ ಮಾಡಲಾಗುತ್ತಿದೆ. ಹಾಗಾಗಿ ಪ್ರೇಕ್ಷಕರು ಇಂದು ಕಮರ್ಷಿಯಲ್ ಚಿತ್ರಗಳಲ್ಲಿಯೇ ಕಲೆಯನ್ನು ಕಾಣಬೇಕಿದೆ. ಇದಕ್ಕೇ ನನ್ನ ಚಿತ್ರ ಅಮೇರಿಕಾ ಅಮೇರಿಕಾ ಸಾಕ್ಷಿ ಅಂತ ಹೇಳ ಬಹುದು ಎಂದರು.


ಚಿತ್ರರಂಗದ ಮೇಷ್ಟ್ರು
ರೀಮೇಕ್ಗಳನ್ನ ಮಾಡಲ್ಲ. ಸ್ವತಂತ್ರ ಕಥೆಗಳನ್ನು ಇಟ್ಟುಕೊಂಡು ಮಾಡಬೇಕು ಅನ್ನೋದು ನನ್ನ ಉದ್ದೇಶ. ಅನೇಕ ಕಿರಿಯ ಆಸಕ್ತರಿಗೆ ಚಿತ್ರಕಥೆಗಳ ಶಿಬಿರಗಳನ್ನು ಮಾಡ್ತಾ ಇರುತ್ತೇನೆ. ಹೊಸದಾಗಿ ಚಿತ್ರರಂಗಕ್ಕೆ ಬರಬೇಕು ಎನ್ನುವವರಿಗೆ ಪ್ರತೀ ವರ್ಷ ನಮ್ಮ ಊರು ನಾಗತಿಹಳ್ಳಿಯಲ್ಲಿಯೇ ಕಾರ್ಯಗಾರಗಳನ್ನು ಮಾಡುತ್ತೇನೆ. ಹೆಸರಾಂತ ನಿರ್ದೇಶಕರು, ತಂತ್ರಜ್ಞರು ಬಂದು ಕ್ಲಾಸ್ ಮಾಡುತ್ತಾರೆ. ವಿದ್ಯಾರ್ಥಿಗಳನ್ನು ತರಬೇತಿ ಮಾಡುತ್ತೇವೆ. ನಮ್ಮ ಸಂಸ್ಥೆಯಿಂದ ಅನೇಕರು ಚಿತ್ರರಂಗಕ್ಕೆ ಬರಲಿ ಎನ್ನುವುದು ನನ್ನ ಆಸೆ ಎಂದರು.


ದರ್ಶನ್ ಬಿ.ಎಂ
ಪತ್ರಿಕೋದ್ಯಮ ವಿದ್ಯಾರ್ಥಿ
ಆಳ್ವಾಸ್ ಕಾಲೇಜು
ಮೂಡುಬಿದಿರೆ.

1 comments:

Anonymous said...

Much Waiting for ur Film sir.. thank u for giving info about Breaking News... thnks to Ekanasu...

Manu Shanbhog...

Post a Comment