ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವರದಿ: ಮುರಳೀಕೃಷ್ಣ/ಶ್ರೇಯಸ್
ಮಂಗಳೂರು: ಕಡಲತಡಿಯಲ್ಲೀಗ ಯುವಕಲರವ.ಮಂಗಳೂರಿಗೆ ಮಂಗಳೂರೇ ಸಿಂಗರಿಸಿ ನಿಂತಿದೆ. ಯುವ ದಂಡು ಮಂಗಳೂರನ್ನಾವರಿಸಿದೆ. ಮಂಗಳೂರಿಗೆ ಆಗಮಿಸಿದ ಹೊರ ರಾಜ್ಯದವರು ತಮ್ಮ ಅಭಿಪ್ರಾಯ ,ವ್ಯವಸ್ಥೆಗಳ ಬಗ್ಗೆ "ಈ ಕನಸಿನೊಂದಿಗೆ" ಅನುಭವ ಹಂಚಿಕೊಂಡರು.ಈ ಅದ್ಧೂರಿ ಉದ್ಘಾಟನೆಗೂ ಮೊದಲು ಹಲವರು ಇಲ್ಲಿಯ ವ್ಯವಸ್ಥೆಯ ಬಗ್ಗೆ ಖುಷಿಪಟ್ಟರು,ಕೆಲವರು ಸ್ವಲ್ಪ ಅಸಹನೆ ವ್ಯಕ್ತಪಡಿಸಿದರು.ಚತ್ತೀಸ್ ಘಡದಿಂದ ಬಂದ ದೇವೇಂದ್ರಪ್ರಸಾದ್

ಮೊದಲ ಬಾರಿ ಕನರ್ಾಟಕಕ್ಕೆ ಬಂದಿರುತ್ತೇನೆ. ಇಲ್ಲಿನ ಸವಲತ್ತುಗಳ ಬಗ್ಗೆ ಎರಡು ಮಾತಿಲ್ಲ.ಉಪಹಾರಗಳಲ್ಲಿ ಸಸ್ಯಾಹಾರ ಹಾಗೂ ಮಾಂಸ ಮೆಲ್ಲುವ ಅವಕಾಶ ದೊರಕಿತು.ಇದು ವಿಶೇಶವೆಂದೆನಿಸಿತು.ಎಲ್ಲಾ ವ್ಯವಸ್ಥೆಗಳೂ ಅಚ್ಚುಕಟ್ಟಾಗಿದೆ.ವ್ಯವಸ್ತೆಯಂತೆ ಇಲ್ಲಿನ ಜನ ಕೂಡ ತುಂಬಾ ಸಹಕಾರ ಮನೋಭಾವನೆಯಿಂದ ಕೂಡಿದ್ದಾರೆ.

ಪಂಜಾಬ್ ನಿಂದ ಹಾರ್ಲೆನ್ ಹಾಗೂ ಗುರುನಾಮ್ ಸಿಂಗ್:ಬಥಂಡ ವಿಶ್ವವಿದ್ಯಾಲಯ.

ಬಂದು ಒಂದು ದಿನವಾಗದಿದ್ದರೂ ಸಿಟಿ ಸೆಂಟರ್ ಹಾಗೂ ಪಣಂಬೂರ್ ಬೀಚ್ ನೋಡಿದೆವು.ಅದ್ಭುತ ಅನುಭವವಾಗಿತ್ತು .ಹಸಿರಿನಿಂದ ಕೂಡಿದ ಈ ಸಮತೋಲನ ವಾತಾವರಣ ತುಂಬಾ ಹಿಡಿಸಿತು.ಯುವಜನೋತ್ಸವದಿಂದ ನಾವು ವಿವಿಧತೆಯಲ್ಲಿ ಏಕತೆಯನ್ನು ಕಾಣಬಹುದು.ಈ ಬಾರಿ ನಮ್ಮಲ್ಲಿ ವಿಶೇಷತೆಯೆಂದರೆ ಗಟ್ಕಾ ಮತ್ತು ಮಲ್ವಾಯಿ ಗಿಟ್ಟ ಜನಪದ ನೃತ್ಯವನ್ನು ಮಾಮೂಲಾಗಿ ಹುಡುಗಿಯರು ಮಾಡುತ್ತಾರೆ ಆದರೆ ಇಲ್ಲಿ ಅದನ್ನು ಹುಡುಗರು ಮಾಡಲಿದ್ದಾರೆ.ಇದು ಈ ಬಾರಿಯ ವಿಶೇಶ.


ಮಹಾರಾಷ್ಟ್ರ:

87 ಜನ ನಮ್ಮ ತಂಡದಲ್ಲಿದ್ದೇವೆ.ನಾವು ಮೊಟ್ಟ ಮೊದಲ ಬಾರಿಗೆ ಕರ್ನಾಟಕಕ್ಕೆ ಬಂದಿದ್ದೇವೆ.ನಮಗೆ ಇಲ್ಲಿನ ಜನರ ಆತಿಥ್ಯ ತುಂಬಾ ಮನಮುಟ್ಟುವಂತಿದೆ.87 ಜನರಲ್ಲಿ ನಾವು 57 ಜನ ಸ್ಪರ್ಧಾಳುಗಳು.30 ಜನರು ಕಾರ್ಯಕ್ರಮ ನೀಡಲಿದ್ದಾರೆ.ನಾವು ಇಲ್ಲಿ ಜನಪದ ನೃತ್ಯ ,ಹಾಡು,ಏಕಾಂಕ ನಾಟಕವನ್ನು ಪ್ರದರ್ಶಿಸಲಿದ್ದೇವೆ.ಬೆಳಗ್ಗೆ 8 ಗಂಟೆಗೆ ನಾವು ತಲುಪಿದೆವು.ನಮ್ಮ ಬ್ಯಾಗ್ ಎತ್ತಲು ಕೂಡಾ ಸ್ವಯಂಸೇವಕರಿದ್ದರು.ವ್ಯವಸ್ಥೆ ಅದ್ಭುತವಾಗಿತ್ತು.ಆದರೆ ಉಳಿದುಕೊಳ್ಳುವ ಸ್ಥಳ ತುಂಬಾ ದೂರವಿದ್ದು ನಮ್ಮ ಧೃತಿಗೆಡಿಸಿದೆ.ಇದೊಂದು ವಿಷಯದಲ್ಲಿ ಮನಸ್ಸು ಸ್ವಲ್ಪ ಬೇಜಾರಾಗಿದೆ.

ಒರಿಸ್ಸಾದ ತಂಡದ ಮುಖ್ಯಸ್ಥ ಮನೋಜ್ ಕುಮಾರ್ ನಾಯ್ಡು:

ನಮ್ಮಲ್ಲಿಂದ 24 ಜನ ಸ್ಪರ್ಧಾಳುಗಳು ಬಂದಿರುತ್ತೇವೆ.ಮೊದಲು 4 ಯುವಜನೋತ್ಸವದಲ್ಲಿ ಭಾಗವಹಿಸಿದ್ದೇವೆ ಆದರೆ ಇಂತಹ ಅದ್ಧೂರಿ ಸ್ವಾಗತ ನಮಗೆ ಇದೇ ಮೊದಲ ಬಾರಿ ದೊರಕಿದೆ.ಯುವಜನತೆಯನ್ನು ಒಂದು ಮಾಡುವ ಕಾರ್ಯ ಎಂಬ ವಿಷಯವನ್ನು ನಾವು ನಮ್ಮ ಪರ್ಫಾರ್ಮೆನ್ಸ್ ಸಂದರ್ಭ ಅಳವಡಿಸಿಕೊಳ್ಳುತ್ತೇವೆ. ನೋಂದಣಿ ಮಾಡುವಾಗ ದೊರಕಿದ ಕಿಟ್ ಲ್ಲಿ ಮೈಸೂರ್ ಸ್ಯಾಂಡಲ್ ಸೋಪ್,ಬೆಡ್ ಶೀಟ್ ಫೇಸ್ ಕ್ರೀಮ್,ಪೌಡರ್ ಹಾಗೂ ಟ್ರಾವೆಲ್ ಬ್ಯಾಗ್ ಇತ್ತು. ನೋಡಿ ನಮಗೆ ತುಂಬಾ ಆಶ್ಚರ್ಯವಾಯಿತು..!

0 comments:

Post a Comment