ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
11:55 PM

ಗಜಲ್

Posted by ekanasu

ಸಾಹಿತ್ಯ

ಚಳಿಯನು ಕೊಂದವನೆ ಸಖ ಎಲ್ಲಿರುವೆ?
ಬಿಸಿಯನು ತಂದವನೆ ಸಖ ಎಲ್ಲಿರುವೆ?


ಕನಸಲಿ ಬಂದವನೆ ಕಣ್ಮನ ಸೆಳದವನೆ
ನಿದ್ದೆಯ ಸಿಹಿಯಾಗಿ ಕೊಂದವನೆ ಸಖ ಎಲ್ಲಿರುವೆ?

ಬಯಕೆಗಳ ಹೂವ ಹಾರದಿ ಬಿಗಿದವನೆ
ಕಾಮನ ಬಿಲ್ಲ ತೆರದಿ ಕಾಮನೆಯ ಮೂಡಿಸಿದವನೆ ಸಖ ಎಲ್ಲಿರುವೆ?
ತಂಗಾಳಿಯ ತೀಡಿ ಮನಕೆ ತಂಪೆರದವನೆ
ವಿರಹದ ಹಾಡಾಗಿ ಗುನು ಗುನುಗಿ ನಿಂದವನೆ ಸಖ ಎಲ್ಲಿರುವೆ?

ನನ್ನೀ ನಾಚಿಕೆಯ ನಿರಿಗೆ ಬಿಡಿಸಿ ಮರುಳು ಮಾಡಿ
ಮುಖದೆಲೆಯಲಿ ಇಬ್ಬನಿ ಹನಿ ಮೂಡಿಸಿ ಮರೆಯಾದವನೆ ಸಖ ಎಲ್ಲಿರುವೆ?...

ಪ್ರಕಾಶ.ಬಿ.ಜಾಲಹಳ್ಳಿ

2 comments:

Anonymous said...

gajal super. Mamata

Amaresh Nayak said...

very nice,
Amaresh Nayak

Post a Comment