ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ನೃತ್ಯ ದೈವದತ್ತ ಕಲೆ. ಒಬ್ಬ ನೃತ್ಯಕಾರ ರೂಪುಗೊಳ್ಳಬೇಕಾದರೆ ಅಲ್ಲಿ ಶಿಲ್ಪಿಯ ಪರಿಶ್ರಮ ಬೇಕು, ಕಲ್ಲಿನ ಸಹನೆ ಬೇಕು. ಇದು ನಿರೂಪಗೊಂಡಿದ್ದು ಮಂಗಳೂರಿನಲ್ಲಿ. ಇಲ್ಲಿಯ ಗೋಕರ್ಣನಾಥೇಶ್ವರ ಸಭಾಂಗಣದಲ್ಲಿ 17ನೆಯ ರಾಷ್ಟ್ರೀಯ ಯುವಜನೋತ್ಸವದ ವತಿಯಿಂದ ಏರ್ಪಡಿಸಲಾದ ಭರತನಾಟ್ಯಮ್ ನೃತ್ಯ ಸ್ಪರ್ಧೆ ಜನಮನಸೂರೆಗೊಂಡಿತು.

ಈ ಸ್ಪರ್ಧೆಯಲ್ಲಿ ಪ್ರತೀ ಸ್ಪರ್ಧಿಗೂ ನೀಡಲಾದ 15 ನಿಮಿಷಗಳಲ್ಲಿ ತಮ್ಮ ಪ್ರತಿಬೆಯನ್ನು ಪ್ರದರ್ಶಿಸಬೇಕಾಗಿತ್ತು. ಇದನ್ನು ಲೆಕ್ಕಿಸದ ಸ್ಪರ್ಧಿ ನಿಗದಿತ ಸಮಯವನ್ನು ಬಳಸಿಕೊಂಡು ಹಿರಿಯ ನೃತ್ಯಕಾರರೇ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದುದು ವಿಶೇಷ.

ಸ್ಪರ್ಧೆಯಲ್ಲಿ 28 ರಾಜ್ಯಗಳಿಂದ ಬಂದಂತಹ ವಿವಿದ ಸ್ಪರ್ಧಿಗಳು ಪಾಲ್ಗೊಂಡಿದ್ದರು. ತೀರ್ಪುಗಾರರಾಗಿ ಜೆ.ಶ್ವೇತಾ, ಎಸ್.ಪಿ. ಭಾರತಿ, ಶ್ರೀಮತಿ ರಂಗನಾಥನ್ ಆಗಮಿಸಿದ್ದರು. ಹರಿಯಾಣಾದ ಸ್ಪರ್ಧೆಯಿಂದ ಶುರುವಾದ ಸ್ಪರ್ಧೆ ಒಬ್ಬರ ನಂತರ ಇನ್ನೊಬ್ಬರಂತೆ ನಾನಾ?ನೀನಾ? ಎಂದು ಸ್ಪರ್ದಿಸಲಾರಂಭಿಸಿದರು. ಒಬ್ಬರಿಗಿಂತ ಒಬ್ಬ್ರು ಮಿಗಿಲಾಗಿ ನೃತ್ಯ ಪ್ರದರ್ಶನ ನೀಡಿದುದು ವಿಶೇಷ.

ಆದಿ ತಾಳ. ರೂಪಕ ತಾಳ, ಕಲ್ಯಾಣ ರಾಗಗಳು ನೃತ್ಯ ರಸಿಕರ ಮನ ಕುಣಿಸಿದುದರಲ್ಲಿ ಸಂಶಯವಿಲ್ಲ. ಅರ್ದನಾರೀಶ್ವರನ್ನು ವರ್ಣದಲ್ಲಿ ನಿರೂಪಿಸುತ್ತಾ ಮೂಡಿಬಂದ ಹರಿಯಾಣಾದ ತನ್ವಿಗುಪ್ತಾರ ನೃತ್ಯಕ್ಕೆ ಸೆಡ್ಡು ಹೊಡೆದಿದ್ದು ಕರ್ನಾಟಕದ ಅನಿಲ್.ಬಿ..ಅಯ್ಯರ್. ಚಿದಾನಂದ ತಾಂಡವೇಶ್ವರನ ಕಂಡೆ ಎನ್ನುತ್ತಾ ಬಂದ ಅನಿಲ್ ಅಯ್ಯರ್ ಪ್ರೇಕ್ಷಕರಿಗೆ ನಟರಾಜನ ಪ್ರತ್ಯಕ್ಷ ದರ್ಶನ ಮಾಡಿಸಿದುದು ತಮ್ಮ ನೃತ್ಯದಲ್ಲಿ.
ನೃತ್ಯ ಎಂಬುದು ಬರಿ ಕಲೆಯಲ್ಲ ಅದು ಯೋಗ ವಿದ್ಯೆ ಎಂಬುದನ್ನು ಮನಗಂಡಿದ್ದ ಇಲ್ಲಿಯೇ. ನಂತರ ಬಂದ ಆಂದ್ರಾ ಯುವತಿ ರಮ್ಯ ಕೌಮುದಿ, ಮರೆಯಲಾಗದ ಝಲಕ್ ಉಳಿಸಿದ ಗುಜರಾತಿ ಯುವತಿ ಜಿನಾಲ್ ಹದ್ರಿ ಭರತನಾಟ್ಯದ ರಸದೌತಣ ಉಣಿಸಿದರು. ಸಾಂಸ್ಕೃತಿಕ ವೈಭವಕ್ಕೆ ತಿಲಕವಿಟ್ಟಂತೆ ವಿಷದವಾಗಿತ್ತು ಈ ಸ್ಪರ್ದಾ ಕಾರ್ಯಕ್ರಮ.

ರಾಧಿಕಾ.ಕೆ.ವಿಟ್ಲ

1 comments:

BIDIRE said...

ಚೆನ್ನಾಗಿದೆ ಲೇಖನ...ಫೋಟೊ ಇದ್ರೆ ಮತ್ತಷ್ಟು ಚೆನ್ನಾಗಿ ಇರುತಿತ್ತು...

yashodhara.v.bangera

Post a Comment